ವೈಎಸ್ಎಸ್ ಅನ್ನು ಬೆಂಬಲಿಸಲು

ಸ್ಮೃತಿ ಮಂದಿರ

ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾದ ಆಧ್ಯಾತ್ಮಿಕ ಮತ್ತು ಮಾನವೀಯ ಕಾರ್ಯಗಳಿಗೆ ಬೆಂಬಲ ನೀಡುತ್ತಿರುವ ಅನೇಕ ಜವಾಬ್ದಾರಿಯುತ ವ್ಯಕ್ತಿಗಳಿಗೆ ನಾವು ತುಂಬಾ ಕೃತಜ್ಞರಾಗಿದ್ದೇವೆ.

ನಮ್ಮ ಎಲ್ಲಾ ಚಟುವಟಿಕೆಗಳ ಹಿಂದಿರುವ ಉದ್ದೇಶ ಒಂದೇ: ಪರಮಹಂಸ ಯೋಗಾನಂದರ ಆಧ್ಯಾತ್ಮಿಕತೆ ಮತ್ತು ಉಪದೇಶಗಳನ್ನು ಹಂಚಿಕೊಳ್ಳುವುದು. ಪರಮಹಂಸಜಿಯವರ ಆಧ್ಯಾತ್ಮಿಕ ಬೋಧನೆ ಮತ್ತು ಉನ್ನತೀಕರಣದ ಕಾರ್ಯವನ್ನು ಮುಂದುವರಿಸುವ ನಮ್ಮ ಸಾಮರ್ಥ್ಯಕ್ಕೆ ನಿಮ್ಮ ಬೆಂಬಲವು ಅತ್ಯಂತ ಮುಖ್ಯವಾಗಿದೆ. ನೀವು ನೀಡುವ ಕೊಡುಗೆಯು ನಮ್ಮ ಸದಸ್ಯರಿಗೆ ಮತ್ತು ಸಾರ್ವಜನಿಕರಿಗೆ ಅನೇಕ ಸೇವೆಗಳನ್ನು ಉಚಿತವಾಗಿ ಒದಗಿಸಲು ಸಹಾಯ ಮಾಡುತ್ತವೆ.

ನಿಮ್ಮ ದೊಡ್ಡ ಮತ್ತು ಸಣ್ಣ ಕೊಡುಗೆಗಳ ಮೂಲಕ ಮತ್ತು ನಿಮ್ಮ ಅತ್ಯಂತ ಸ್ವಾಗತಾರ್ಹ ಪ್ರಾರ್ಥನೆಗಳು ಮತ್ತು ಸಕಾರಾತ್ಮಕ ಆಲೋಚನೆಗಳ ಮೂಲಕ ನೀವು ಮಾಡುವ ಸಹಾಯವು ಆಧ್ಯಾತ್ಮಿಕವಾಗಿ ಹಸಿದಿರುವ ಆತ್ಮಗಳಿಗೆ ಅನೇಕ ವಿಧಗಳಲ್ಲಿ ಸೇವೆ ಸಲ್ಲಿಸಲು ನಮ್ಮನ್ನು ಶಕ್ತಗೊಳಿಸುತ್ತದೆ.

ಇದನ್ನು ಹಂಚಿಕೊಳ್ಳಿ