ಭಗವಾನ್ ಕೃಷ್ಣ
ಭಗವಾನ್ ಕೃಷ್ಣನು ಪೂರ್ವದಲ್ಲಿನ ಯೋಗದ ದಿವ್ಯ ಮಾದರಿ. ಅವನನ್ನು ಭಾರತದಾದ್ಯಂತ ಅವತಾರ ಪುರುಷ ಎಂದು ಪೂಜ್ಯ ಭಾವನೆಯಿಂದ ನೋಡಲಾಗುತ್ತದೆ. ಭಗವಾನ್ ಕೃಷ್ಣನ ಮಹೋನ್ನತ ಬೋಧನೆಗಳಿಗೆ ಭಗವದ್ಗೀತೆ ಪವಿತ್ರ ನೆಲೆಯಾಗಿದೆ.
ಭಗವಾನ್ ಕೃಷ್ಣ
ಭಗವಾನ್ ಕೃಷ್ಣನು ಪೂರ್ವದಲ್ಲಿನ ಯೋಗದ ದಿವ್ಯ ಮಾದರಿ. ಅವನನ್ನು ಭಾರತದಾದ್ಯಂತ ಅವತಾರ ಪುರುಷ ಎಂದು ಪೂಜ್ಯ ಭಾವನೆಯಿಂದ ನೋಡಲಾಗುತ್ತದೆ. ಭಗವಾನ್ ಕೃಷ್ಣನ ಮಹೋನ್ನತ ಬೋಧನೆಗಳಿಗೆ ಭಗವದ್ಗೀತೆ ಪವಿತ್ರ ನೆಲೆಯಾಗಿದೆ.
ಏಸು ಕ್ರಿಸ್ತ
“ಭಗವಾನ್ ಕೃಷ್ಣನಿಂದ ಉಪದಿಷ್ಟವಾದ ಆದಿಮ ಯೋಗವೂ ಹಾಗೂ ಏಸುಕ್ರಿಸ್ತನಿಂದ ಉಪದಿಷ್ಟವಾದ ಆದಿಮ ಕ್ರೈಸ್ತಧರ್ಮವೂ ಪೂರ್ಣ ಹೊಂದಾಣಿಕೆ ಉಳ್ಳಂಥವು ಮತ್ತು ಮೂಲತಃ ಒಂದೇ ಎಂದು ತಿಳಿಸಿಕೊಡುವುದು; ಮತ್ತು ಈ ಸತ್ಯದ ತತ್ತ್ವಗಳು ಎಲ್ಲ ನಿಜಧರ್ಮಗಳಿಗೂ ಸರ್ವ ಸಾಮಾನ್ಯವಾದ ವಿಜ್ಞಾನಾಧಾರಿತ ಅಸ್ತಿಭಾರ” ಎಂದು ತೋರಿಸುವುದೇ ಪರಮಹಂಸ ಯೋಗಾನಂದರ ಧ್ಯೇಯೋದ್ದೇಶಗಳ ಅತ್ಯಗತ್ಯ ಗುರಿಗಳಲ್ಲಿ ಒಂದಾಗಿದೆ.
ಮಹಾವತಾರ ಬಾಬಾಜಿ
ಮಹಾವತಾರ ಬಾಬಾಜಿಯವರು ಕಳೆದುಹೋಗಿದ್ದ ಕ್ರಿಯಾ ಯೋಗದ ವೈಜ್ಞಾನಿಕ ಧ್ಯಾನ ತಂತ್ರವನ್ನು ಈ ಯುಗದಲ್ಲಿ ಪುನರುಜ್ಜೀವನಗೊಳಿಸಿದರು.
ಲಾಹಿರಿ ಮಹಾಶಯ
ಮಹಾವತಾರ ಬಾಬಾಜಿಯವರು ಲಾಹಿರಿ ಮಹಾಶಯರಿಗೆ (ಅವರ ಶಿಷ್ಯರಿಂದ ಅವರು ಯೋಗಾವತಾರ ಎಂದು ಜನಪ್ರಿಯರಾಗಿದ್ದರು), ಕ್ರಿಯಾ ಯೋಗ ವಿಜ್ಞಾನದ ದೀಕ್ಷೆ ನೀಡಿದರು ಮತ್ತು ಎಲ್ಲಾ ಪ್ರಾಮಾಣಿಕ ಅನ್ವೇಷಕರಿಗೆ ಪವಿತ್ರ ತಂತ್ರವನ್ನು ನೀಡುವಂತೆ ಸೂಚಿಸಿದರು.
ಸ್ವಾಮಿ ಶ್ರೀ ಯುಕ್ತೇಶ್ವರ್
ಶ್ರೀ ಯುಕ್ತೇಶ್ವರರು ಲಾಹಿರಿ ಮಹಾಶಯರ ಶಿಷ್ಯರಾಗಿದ್ದರು ಮತ್ತು ಒಬ್ಬ ಜ್ಞಾನಾವತಾರಿಯ ಆಧ್ಯಾತ್ಮಿಕ ಔನ್ನತ್ಯವನ್ನು ಸಾಧಿಸಿದ್ದರು.
ಪರಮಹಂಸ ಯೋಗಾನಂದ
ಕ್ರಿಯಾ ಯೋಗವನ್ನು ಪ್ರಪಂಚದಾದ್ಯಂತ ಪ್ರಸಾರ ಮಾಡುವ ಉದ್ದೇಶವನ್ನು ನೆರವೇರಿಸಲು, ಪರಮಹಂಸ ಯೋಗಾನಂದರು ಮಹಾವತಾರ ಬಾಬಾಜಿ, ಲಾಹಿರಿ ಮಹಾಶಯ ಮತ್ತು ಸ್ವಾಮಿ ಶ್ರೀ ಯುಕ್ತೇಶ್ವರರಿಂದ ವೈಯಕ್ತಿಕವಾಗಿ ಆಶೀರ್ವದಿಸಲ್ಪಟ್ಟಿದ್ದರು — ಇವರು, ಅವರ ಆಧ್ಯಾತ್ಮಿಕ ಪರಂಪರೆಯಲ್ಲಿನ ಮೂವರು ಪರಮ ಗುರುಗಳು.