
ದೇಶದಾದ್ಯಂತ ಇರುವ ನಮ್ಮ ಆಶ್ರಮಗಳು ಮತ್ತು ಧ್ಯಾನಕೇಂದ್ರಗಳಲ್ಲಿ ಪ್ರತಿವಾರವೂ ಸ್ಪೂರ್ತಿದಾಯಕ ಸತ್ಸಂಗಗಳನ್ನು ಏರ್ಪಡಿಸಲಾಗುತ್ತದೆ ಮತ್ತು ನಿಮಗೆ ಸತ್ಯಾನ್ವೇಷಕರ ಭೇಟಿಗೆ ಮತ್ತು ಆಧ್ಯಾತ್ಮಿಕ ಆಸಕ್ತರೊಂದಿಗೆ ಬೆರೆತು ಭಗವಂತನ ಆರಾಧನೆಗೆ ಒಂದು ಅವಕಾಶವನ್ನು ನೀಡಲಾಗುತ್ತದೆ. ಈ ಸತ್ಸಂಗಗಳು ಪರಮಹಂಸ ಯೋಗಾನಂದರ ಲೇಖನಗಳನ್ನು ವಾಚಿಸುವುದಲ್ಲದೆ, ಭಕ್ತಿಗೀತೆಗಳ ಗಾಯನ, ಧ್ಯಾನ ಮತ್ತು ಪ್ರಾರ್ಥನೆಗಳನ್ನು ಒಳಗೊಂಡಿದೆ. ನಮ್ಮ ಆಶ್ರಮಗಳಲ್ಲಿ ಯೋಗದಾ ಸತ್ಸಂಗದ ಸನ್ಯಾಸಿ ವೃಂದವು ನಿಯಮಿತವಾಗಿ ಸತ್ಸಂಗಗಳನ್ನು ನಡೆಸುತ್ತವೆ ಹಾಗೂ ವೈಎಸ್‌ಎಸ್ ಗೃಹಸ್ಥ ಭಕ್ತರು ಧ್ಯಾನಕೇಂದ್ರಗಳಲ್ಲಿ ಸ್ಪೂರ್ತಿದಾಯಕ ಸೇವೆಗಳನ್ನು ನಡೆಸಿಕೊಡುವರು.
ನಮ್ಮ ಎಲ್ಲಾ ಆಶ್ರಮಗಳಲ್ಲಿ ಹಾಗೂ ಅನೇಕ ಧ್ಯಾನಕೇಂದ್ರಗಳಲ್ಲಿ 7-12 ವರ್ಷ ವಯಸ್ಸಿನ ಮಕ್ಕಳಿಗಾಗಿ ʼಮಕ್ಕಳ ಸತ್ಸಂಗ ಶಿಬಿರʼಗಳನ್ನು ನಡೆಸಲಾಗುತ್ತದೆ. ಅಲ್ಲಿ ಪರಮಹಂಸ ಯೋಗಾನಂದರು ಪ್ರತಿಪಾದಿಸಿರುವ ಆಧ್ಯಾತ್ಮಿಕ ನಿಯಮಗಳನ್ನು ಅನುಸರಿಸಿ “ಬದುಕುವುದು-ಹೇಗೆ” ಎಂಬುವುದನ್ನು ಮಕ್ಕಳಿಗೆ ಪ್ರಸ್ತುತಪಡಿಸಲಾಗುತ್ತದೆ.
ಭಾನುವಾರದ ಸತ್ಸಂಗಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನಿಮ್ಮ ಸ್ಥಳೀಯ ಆಶ್ರಮಗಳು, ಧ್ಯಾನಕೇಂದ್ರಗಳು/ ಮಂಡಳಿಗಳನ್ನು ಸಂಪರ್ಕಿಸಿ.