ಯೋಗದಾ ಸತ್ಸಂಗ ಶಾಖಾ ಆಶ್ರಮ — ನೊಯ್ಡಾ

ಉತ್ತರ ಪ್ರದೇಶ್‌

ಯೋಗದಾ ಸತ್ಸಂಗ ಶಾಖಾ ಆಶ್ರಮ – ನೊಯ್ಡಾವನ್ನು ಪ್ರಥಮ ಹಂತದ ನಿರ್ಮಾಣವಾದ ನಂತರ ಜನವರಿ 2010ರಲ್ಲಿ ಉದ್ಘಾಟಿಸಲಾಯಿತು. ದೆಹಲಿ-ಉತ್ತರ ಪ್ರದೇಶ ರಾಜ್ಯದ ಗಡಿ ಪ್ರದೇಶದಿಂದ ಕೇವಲ 4 ಕಿ.ಮೀ. ದೂರದಲ್ಲಿ 5 ಎಕರೆ ಜಾಗದಲ್ಲಿ ಈ ಆಶ್ರಮವನ್ನು ನಿರ್ಮಿಸಲಾಗಿದೆ. ಆಡಳಿತ ಕಛೇರಿಯಿರುವ ಒಂದು ವಿಭಾಗ ಹಾಗೂ ಆಶ್ರಯಧಾಮಗಳಿರುವ ಎರಡು ಕಟ್ಟಡಗಳ ವಿಭಾಗಗಳನ್ನು ಆಶ್ರಮವು ಹೊಂದಿದೆ. ಆಡಳಿತ ವಿಭಾಗವು ಒಂದು ಸಂಪೂರ್ಣ ನೆಲಮಾಳಿಗೆಯಿರುವ 3 ಅಂತಸ್ತುಗಳ ಕಟ್ಟಡವನ್ನು ಹೊಂದಿದೆ. ಇದು ಧ್ಯಾನ ಮಂದಿರ, ಸ್ವಾಗತ ಕೇಂದ್ರ, ಪುಸ್ತಕಗಳು/ಗ್ರಂಥಾಲಯ, ಸಮಾಲೋಚನಾ ಕೊಠಡಿಗಳು, ಅಡುಗೆ ಕೋಣೆ/ಭೋಜನಾಲಯ, ಕಛೇರಿಗಳನ್ನು ಒಳಗೊಂಡಿದೆ. ರಾಷ್ಟ್ರದ ರಾಜಧಾನಿಯ ಪ್ರದೇಶದ ಮೂಲಕ ಪ್ರವಾಸ ಕೈಗೊಳ್ಳುವ ಸನ್ಯಾಸಿಗಳು ಮತ್ತು ಭಕ್ತರು ಮುಂಚಿತವಾಗಿ ಕಾಯ್ದಿರಿಸಿದಲ್ಲಿ ಗರಿಷ್ಠ 3 ದಿನಗಳವರೆಗೆ ತಂಗಲು ಕೊಠಡಿಗಳ ಲಭ್ಯತೆಯಿದೆ.

ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕವಾದ ಆಶ್ರಯಧಾಮಗಳಿವೆ, ಮತ್ತು ಪ್ರತಿ ಆಶ್ರಯಧಾಮದಲ್ಲಿ 30 ಕೊಠಡಿಗಳಿವೆ. ವ್ಯಕ್ತಿಗಳು ಗಮನ ಕೇಂದ್ರೀಕರಿಸಲು ಅನುಕೂಲವಾಗುವಂತೆ ಈ ಕೊಠಡಿಗಳನ್ನು ನಿರ್ಮಾಣ ಮಾಡಲಾಗಿದೆ ಮತ್ತು ಇಲ್ಲಿ ಆಧ್ಯಾತ್ಮಿಕ ಧ್ಯಾನ ಶಿಬಿರಗಳನ್ನು ಆಯೋಜಿಸಲಾಗುತ್ತದೆ. ವೈಯಕ್ತಿಕ ಧ್ಯಾನವನ್ನು ಕೈಗೊಳ್ಳಲು ಭಕ್ತರು ಇಲ್ಲಿ 3 ರಿಂದ 5 ದಿವಸಗಳವರೆಗೆ ಉಳಿದುಕೊಂಡು ಮೌನ ಧ್ಯಾನ, ಅಧ್ಯಯನ ಮತ್ತು ಸಾಧನೆಗಳನ್ನು ಮಾಡಲು ಮತ್ತು ಆಶ್ರಮದ ಸನ್ಯಾಸಿಗಳ ಜೊತೆ ಸಮಾಲೋಚನಾ ಭೇಟಿಗೆ ಆಹ್ವಾನ ನೀಡಲಾಗುತ್ತದೆ. ಇದರ ಜೊತೆ, ವಾರಾಂತ್ಯದಲ್ಲಿ ಸನ್ಯಾಸಿಗಳಿಂದ ನಿಯಮಿತವಾಗಿ ಆಧ್ಯಾತ್ಮಿಕ ಶಿಬಿರಗಳನ್ನು ನಡೆಸಲಾಗುತ್ತದೆ. ಈ ಶಿಬಿರಗಳು ಸಾಮಾನ್ಯವಾಗಿ 3 ರಿಂದ 5 ದಿನಗಳ ಅವಧಿಯವಾಗಿರುತ್ತವೆ. ನಮ್ಮ ದಿವ್ಯ ಗುರುಗಳ ಬೋಧನೆಗಳು, ಬದುಕುವುದು-ಹೇಗೆ ಕುರಿತ ತತ್ವಗಳು, ಮತ್ತು ಏಕಾಗ್ರತೆ ಮತ್ತು ಧ್ಯಾನದ ತಂತ್ರಗಳ ಕುರಿತಾದ ನಿರ್ದಿಷ್ಟ ವಿಷಯಗಳನ್ನು ಈ ಶಿಬಿರಗಳು ಹೊಂದಿರುತ್ತವೆ. ಈ ಎರಡು ಸಂದರ್ಭಗಳಲ್ಲಿ ಮುಂಗಡ ಕಾಯ್ದಿರಿಸುವುದು ಅವಶ್ಯಕವಾಗಿದೆ.

ಆಶ್ರಮದಲ್ಲಿ ಚಿಕ್ಕ ಮತ್ತು ದೊಡ್ಡ ಪ್ರಮಾಣದ ಸಂಗಮಗಳನ್ನು ಆಯೋಜಿಸಲಾಗುತ್ತದೆ.

ವೈಎಸ್‌ಎಸ್‌ಗೆ ಹೊಸಬರೇ? ವೈಎಸ್‌ಎಸ್ ಪಾಠಗಳು ಹೇಗೆ ನಿಮ್ಮ ಜೀವನವನ್ನು ಪರಿವರ್ತಿಸುತ್ತವೆ ಮತ್ತು ಸಮತೋಲನವನ್ನು ತರುತ್ತವೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ.

ಸಾಪ್ತಾಹಿಕ ಕಾರ್ಯಕ್ರಮಗಳು

ಸಮೂಹ ಧ್ಯಾನ

ನಾವು ಸಾರ್ವಜನಿಕರಿಗೆ ಮುಕ್ತವಾಗಿರುವ ನಿಯಮಿತ ಧ್ಯಾನ ಹಾಗೂ ಸತ್ಸಂಗಗಳನ್ನು ನೀಡುತ್ತೇವೆ. ಈ ಅವಧಿಗಳಲ್ಲಿ ಮೌನ ಧ್ಯಾನ, ಭಕ್ತಿಗೀತೆಗಳ ಪಠಣ ಮತ್ತು ಸ್ಪೂರ್ತಿದಾಯಕ ಓದುವಿಕೆ ಸೇರಿವೆ.

ಭಾನುವಾರ
ಬೆಳಿಗ್ಗೆ 10:00 – ಬೆಳಿಗ್ಗೆ 11:30
ಭಾನುವಾರ ಸತ್ಸಂಗ (ಸಂಕ್ಷಿಪ್ತ ಧ್ಯಾನವನ್ನು ಒಳಗೊಂಡಿದೆ)
ಸಂಜೆ 4:45 – ರಾತ್ರಿ 8:00
ಸಂಜೆಯ ಧ್ಯಾನ
ಗುರುವಾರ
ಬೆಳಿಗ್ಗೆ 7:00 – ಬೆಳಿಗ್ಗೆ 8:00
ಬೆಳಗಿನ ಧ್ಯಾನ
ಸಂಜೆ 4:45 – ರಾತ್ರಿ 8:00
ಸಂಜೆಯ ಧ್ಯಾನ
ಇತರೆ ದಿನಗಳು
ಬೆಳಿಗ್ಗೆ 7:00 – ಬೆಳಿಗ್ಗೆ 8:00
ಬೆಳಗಿನ ಧ್ಯಾನ
ಸಂಜೆ 5:30 – ಸಂಜೆ 7:00
ಸಂಜೆಯ ಧ್ಯಾನ
ಮಕ್ಕಳ ಸತ್ಸಂಗ

ಈ ಅವಧಿಗಳಲ್ಲಿ 6 ರಿಂದ 12 ವರ್ಷ ವಯಸ್ಸಿನ ಮಕ್ಕಳು ವೈಎಸ್‌ಎಸ್‌ನ ಬೋಧನೆಗಳು ಹಾಗೂ ಜೀವನಶೈಲಿ ಕುರಿತು ಕಥೆ ಹೇಳುವುದು, ಸಂಕ್ಷಿಪ್ತ ಮಾರ್ಗದರ್ಶಿ ಧ್ಯಾನಗಳು ಮತ್ತು ಜೀವನ ವಿಧಾನದ ಬಗ್ಗೆ ಕಲಿಯುತ್ತಾರೆ. ಇನ್ನಷ್ಟು ತಿಳಿಯಿರಿ.

ಭಾನುವಾರ
ಬೆಳಿಗ್ಗೆ 10:00 – ಬೆಳಿಗ್ಗೆ 11:30

ಮುಂಬರುವ ವಿಶೇಷ ಕಾರ್ಯಕ್ರಮಗಳು ಮತ್ತು ದೀರ್ಘಾವಧಿಯ ಧ್ಯಾನಗಳು

ತಿಂಗಳ ದೀರ್ಘಾವಧಿ ಧ್ಯಾನ
ಅಕ್ಟೋಬರ್ 25, 2026, ಭಾನುವಾರ
ಬೆಳಿಗ್ಗೆ 10:00 – ಸಂಜೆ 4:00
ಸಮೂಹ ಧ್ಯಾನ
ಸಾಧನಾ ಸಂಗಮ್‌ (ಇಂಗ್ಲಿಷ್)

ಹೆಚ್ಚಿನದನ್ನು ತಿಳಿಯಿರಿ

ನವೆಂಬರ್ 18, 2026, ಬುಧವಾರ – ನವೆಂಬರ್ 22, 2026, ಭಾನುವಾರ
ತಿಂಗಳ ದೀರ್ಘಾವಧಿ ಧ್ಯಾನ
ನವೆಂಬರ್ 29, 2026, ಭಾನುವಾರ
ಬೆಳಿಗ್ಗೆ 10:00 – ಸಂಜೆ 4:00
ಸಮೂಹ ಧ್ಯಾನ

ಸಮಾಚಾರ ಮತ್ತು ಫೋಟೋ ಗ್ಯಾಲರಿ

ನಿಮ್ಮ ಭೇಟಿಯನ್ನು ಯೋಜಿಸಿಕೊಳ್ಳಿ

ವೈಎಸ್‌ಎಸ್‌ ಮತ್ತು ಎಸ್‌ಆರ್‌ಎಫ್‌ ಪಾಠಗಳ ವಿದ್ಯಾರ್ಥಿಗಳು ಐದು ದಿನಗಳವರೆಗೆ ಆಶ್ರಮದಲ್ಲಿ ಉಳಿಯಲು ಸ್ವಾಗತ. ರೀಚಾರ್ಜ್ ಮಾಡಿಕೊಳ್ಳಲು ಮತ್ತು ಪುನಶ್ಚೇತನಕ್ಕಾಗಿ ವೈಯಕ್ತಿಕ ಧ್ಯಾನ ಶಿಬಿರವನ್ನು ಕೈಗೊಳ್ಳಲು ಅಥವಾ ಆಶ್ರಮವು ನಡೆಸಿಕೊಡುವ ಯಾವುದಾದರೂ ಒಂದು ಧ್ಯಾನ ಶಿಬಿರದಲ್ಲಿ ನಮ್ಮೊಂದಿಗೆ ಸೇರಿಕೊಳ್ಳಲು ನಾವು ಭಕ್ತರನ್ನು ಪ್ರೋತ್ಸಾಹಿಸುತ್ತೇವೆ. ಈ ಧ್ಯಾನ ಶಿಬಿರಗಳ ಸಮಯದಲ್ಲಿ, ವೈಎಸ್‌ಎಸ್‌ ಸನ್ಯಾಸಿಗಳು ದಿನಕ್ಕೆ ಎರಡು ಬಾರಿ ನಡೆಸಿಕೊಡುವ ಸಮೂಹ ಧ್ಯಾನಗಳಲ್ಲಿ ನೀವು ಭಾಗವಹಿಸಬಹುದು ಮತ್ತು ಯೋಗದಾ ಸತ್ಸಂಗ ಬೋಧನೆಗಳ ಅಧ್ಯಯನ ಮತ್ತು ಅಭ್ಯಾಸದಲ್ಲಿ ಆಧ್ಯಾತ್ಮಿಕ ಸಲಹೆ ಮತ್ತು ಮಾರ್ಗದರ್ಶನವನ್ನು ಪಡೆಯಬಹುದು.

ಆಶ್ರಮದಲ್ಲಿ ಸ್ಥಳ ಕಾದಿರಿಸಲು ದಯವಿಟ್ಟು ಕೆಳಗಿನ ಬಟನ್ ಮೇಲೆ ಒತ್ತಿ.

ನಮ್ಮನ್ನು ಸಂಪರ್ಕಿಸಿ

ಯೋಗದಾ ಸತ್ಸಂಗ ಶಾಖಾ ಆಶ್ರಮ – ನೊಯ್ಡಾ
Paramahansa Yogananda Marg
B-4, Sector 62
Noida - 201307
Gautam Buddha Nagar
Uttar Pradesh

ತಲುಪುವುದು ಹೇಗೆ

ವೈಎಸ್ಎಸ್ ನೊಯ್ಡಾ ಆಶ್ರಮವು ನೊಯ್ಡಾ ಸೆಕ್ಟರ್ 62ರಲ್ಲಿ ಇರುವುದರಿಂದ, ವಿಮಾನ, ರೈಲು ಮತ್ತು ರಸ್ತೆ ಸಾರಿಗೆಯ ಮೂಲಕ ದೇಶದ ವಿವಿಧ ಭಾಗಗಳಿಂದ ಹಾಗೂ ದೆಹಲಿ-ಎನ್‌ಸಿಆರ್‌ನೊಳಗೆ ಕಾರ್ಯನಿರ್ವಹಿಸುವ ಸಮಗ್ರ ಮೆಟ್ರೋ ಜಾಲದ ಮೂಲಕ ಅತ್ಯುತ್ತಮ ಸಂಪರ್ಕವನ್ನು ಹೊಂದಿದೆ.

ವಿಮಾನದ ಮೂಲಕ

ದೆಹಲಿ-ಎನ್‌ಸಿಆರ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ಸೇವೆ ಸಲ್ಲಿಸುವ ಮೂರು ವಿಮಾನ ನಿಲ್ದಾಣಗಳಿಂದ ವೈಎಸ್ಎಸ್ ನೊಯ್ಡಾ ಆಶ್ರಮವನ್ನು ತಲುಪಬಹುದು. ಮೂರೂ ವಿಮಾನ ನಿಲ್ದಾಣಗಳಿಂದ ಮುಂಗಡ ಪಾವತಿ ಮಾಡಿದ ಬಾಡಿಗೆ ಕಾರುಗಳು ಮತ್ತು ಓಲಾ ಹಾಗೂ ಉಬರ್‌ನಂತಹ ಆಪ್-ಆಧಾರಿತ ಕ್ಯಾಬ್ ಸೇವೆಗಳು ಲಭ್ಯವಿವೆ.

ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ (DEL), ಹೊಸ ದೆಹಲಿ:
ಸುಮಾರು 32 ಕಿ.ಮೀ ದೂರದಲ್ಲಿರುವ ಇದು ಆಶ್ರಮದ ಹತ್ತಿರವಿರುವ ಪ್ರಮುಖ ಅಂತರರಾಷ್ಟ್ರೀಯ ಮತ್ತು ದೇಶೀಯ ವಿಮಾನ ನಿಲ್ದಾಣವಾಗಿದೆ. ಇದು ಭಾರತದ ಪ್ರಮುಖ ನಗರಗಳು ಮತ್ತು ವಿಶ್ವಾದ್ಯಂತದ ಗಮ್ಯಸ್ಥಾನಗಳಿಗೆ ವ್ಯಾಪಕವಾದ ಸಂಪರ್ಕವನ್ನು ಹೊಂದಿದೆ. ಇಲ್ಲಿಂದ ರಸ್ತೆ ಮೂಲಕ ಆಶ್ರಮಕ್ಕೆ ಪ್ರಯಾಣಿಸಲು ಸಾಮಾನ್ಯವಾಗಿ ಸುಮಾರು 1 ಗಂಟೆ ಸಮಯ ತೆಗೆದುಕೊಳ್ಳುತ್ತದೆ.

ನೊಯ್ಡಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ (DXN), ಜೇವರ್, ಉತ್ತರ ಪ್ರದೇಶ:
ಆಶ್ರಮದಿಂದ ಸುಮಾರು 70 ಕಿ.ಮೀ ದೂರದಲ್ಲಿರುವ ಈ ಹೊಸದಾದ ವಿಮಾನ ನಿಲ್ದಾಣವು ಪ್ರಸ್ತುತ ದೇಶೀಯ ಮಾರ್ಗಗಳಿಗೆ ಮಾತ್ರ ಸೇವೆ ಸಲ್ಲಿಸುತ್ತದೆ. ಇದರ ಜಾಲವು ಬೆಂಗಳೂರು, ಹೈದರಾಬಾದ್, ಜೈಪುರ, ಲಕ್ನೋ, ಮುಂಬೈ, ಶ್ರೀನಗರ ಮತ್ತು ಅಮೃತಸರ ಮುಂತಾದ ನಗರಗಳನ್ನು ಒಳಗೊಂಡಿದೆ. ಹೆಚ್ಚುವರಿ ಮಾರ್ಗಗಳನ್ನು ಕ್ರಮೇಣ ಪರಿಚಯಿಸಲಾಗುತ್ತಿದೆ. ಈ ವಿಮಾನ ನಿಲ್ದಾಣದಿಂದ ಯಮುನಾ ಎಕ್ಸ್‌ಪ್ರೆಸ್‌ವೇ ಮೂಲಕ ಸಾಗುವ ಮಾರ್ಗವು ನೊಯ್ಡಾಕ್ಕೆ ನೇರ ರಸ್ತೆ ಸಂಪರ್ಕವನ್ನು ಒದಗಿಸುತ್ತದೆ. ಸಂಚಾರ ದಟ್ಟಣೆಯನ್ನು ಅವಲಂಬಿಸಿ, ಆಶ್ರಮವನ್ನು ತಲುಪಲು ಸುಮಾರು 1.5–2 ಗಂಟೆಗಳು ಬೇಕಾಗುತ್ತವೆ.

ಹಿಂದೋನ್ ವಿಮಾನ ನಿಲ್ದಾಣ (HDO), ಗಾಜಿಯಾಬಾದ್, ಉತ್ತರ ಪ್ರದೇಶ:
ಆಶ್ರಮದಿಂದ ಸುಮಾರು 16 ಕಿ.ಮೀ ದೂರದಲ್ಲಿರುವ ಹಿಂದೋನ್ ವಿಮಾನ ನಿಲ್ದಾಣವು ದೇಶೀಯ ವಿಮಾನ ನಿಲ್ದಾಣವಾಗಿದ್ದು, ಭಾರತದ ಕೆಲವು ನಗರಗಳಿಂದ ಆಗಮಿಸುವ ಸಂದರ್ಶಕರಿಗೆ ಮೇಲಿನ ವಿಮಾನ ನಿಲ್ದಾಣಗಳಿಗೆ ಅನುಕೂಲಕರ ಪರ್ಯಾಯವಾಗಿದೆ. ಅಹಮದಾಬಾದ್, ಬೆಂಗಳೂರು, ಚೆನ್ನೈ, ಗೋವಾ, ಇಂದೋರ್, ಕೋಲ್ಕತ್ತಾ, ಮುಂಬೈ, ಪಾಟ್ನಾ ಮತ್ತು ವಾರಣಾಸಿ ಸೇರಿದಂತೆ ಸಣ್ಣ ಪ್ರಾದೇಶಿಕ ಪಟ್ಟಣಗಳಿಗೂ ಇಲ್ಲಿಂದ ವಿಮಾನ ಸಂಪರ್ಕವಿದೆ. ಇಲ್ಲಿಂದ ಆಶ್ರಮಕ್ಕೆ ರಸ್ತೆ ಮೂಲಕ ತಲುಪಲು ಸುಮಾರು 30–35 ನಿಮಿಷಗಳು ಬೇಕಾಗುತ್ತವೆ.

ಮಾರ್ಗಗಳು ಮತ್ತು ಸಮಯಗಳು ಬದಲಾಗಬಹುದಾದ್ದರಿಂದ, ನಿಮ್ಮ ಪ್ರಯಾಣವನ್ನು ಯೋಜಿಸುವ ಮೊದಲು ಇತ್ತೀಚಿನ ವಿಮಾನ ವೇಳಾಪಟ್ಟಿಗಳು ಮತ್ತು ವಿಮಾನ ನಿಲ್ದಾಣದ ಮಾಹಿತಿಯನ್ನು ಪರಿಶೀಲಿಸಿ.

ರೈಲಿನ ಮೂಲಕ

ನೊಯ್ಡಾದಲ್ಲಿರುವ ವೈಎಸ್ಎಸ್ ಆಶ್ರಮವನ್ನು ತಲುಪಲು, ಸಂದರ್ಶಕರು ದೇಶದ ವಿವಿಧ ಭಾಗಗಳಿಂದ ದೆಹಲಿ-ಎನ್‌ಸಿಆರ್‌ನಲ್ಲಿರುವ ಈ ಕೆಳಗಿನ ರೈಲು ನಿಲ್ದಾಣಗಳಲ್ಲಿ ಒಂದಕ್ಕೆ ರೈಲಿನಲ್ಲಿ ಪ್ರಯಾಣಿಸಬಹುದು. ಈ ನಿಲ್ದಾಣಗಳಿಗೆ ಹಲವಾರು ದೂರದ ಎಕ್ಸ್‌ಪ್ರೆಸ್ ಮತ್ತು ಅತಿವೇಗದ ರೈಲುಗಳು ಸಂಚರಿಸುತ್ತವೆ. ಈ ಯಾವುದೇ ನಿಲ್ದಾಣದಿಂದ ಸಂದರ್ಶಕರು ಬಾಡಿಗೆ ಕಾರು, ಆಪ್-ಆಧಾರಿತ ಕ್ಯಾಬ್ ಅಥವಾ ಆಟೋ-ರಿಕ್ಷಾದ ಮೂಲಕ ಆಶ್ರಮಕ್ಕೆ ತಲುಪಬಹುದು. ದೆಹಲಿ ಮೆಟ್ರೋ ಮೂಲಕ ಪ್ರಯಾಣಿಸುವ ಮಾಹಿತಿಗಾಗಿ, ದಯವಿಟ್ಟು ಕೆಳಗಿನ ‘ಮೆಟ್ರೋ ಮೂಲಕ’ ವಿಭಾಗವನ್ನು ನೋಡಿ.

ಹೊಸ ದೆಹಲಿ ರೈಲು ನಿಲ್ದಾಣ (NDLS):
ಹೊಸ ದೆಹಲಿಯು ಉತ್ತರ, ಪಶ್ಚಿಮ, ಮಧ್ಯ, ಪೂರ್ವ ಮತ್ತು ದಕ್ಷಿಣ ಭಾರತದಾದ್ಯಂತ ವ್ಯಾಪಕ ರೈಲು ಸಂಪರ್ಕವನ್ನು ಹೊಂದಿರುವ ಪ್ರಮುಖ ರೈಲ್ವೆ ಕೇಂದ್ರವಾಗಿದೆ. ಮುಂಬೈ, ಅಹಮದಾಬಾದ್, ಕೋಲ್ಕತ್ತಾ, ರಾಂಚಿ, ಭುವನೇಶ್ವರ, ದಿಬ್ರುಗಢ ಮತ್ತು ಜಮ್ಮುವಿನಂತಹ ನಗರಗಳಿಂದ ಬರುವ ರಾಜಧಾನಿ ಮತ್ತು ದುರಂತೋ ಎಕ್ಸ್‌ಪ್ರೆಸ್ ರೈಲುಗಳು ಸೇರಿದಂತೆ, ಜೈಪುರ, ಲಕ್ನೋ, ಕಾನ್ಪುರ, ಪಾಟ್ನಾ, ಭೋಪಾಲ್, ಚೆನ್ನೈ, ಹೈದರಾಬಾದ್ ಮತ್ತು ಇತರ ಪ್ರಮುಖ ನಗರಗಳನ್ನು ಸಂಪರ್ಕಿಸುವ ಅನೇಕ ಪ್ರಮುಖ ರೈಲುಗಳು ಇಲ್ಲಿ ಸಂಚರಿಸುತ್ತವೆ. ಆಶ್ರಮವು ನಿಲ್ದಾಣದಿಂದ ಸುಮಾರು 20 ಕಿ.ಮೀ ದೂರದಲ್ಲಿದ್ದು, ರಸ್ತೆ ಮೂಲಕ ತಲುಪಲು 40–45 ನಿಮಿಷಗಳು ಬೇಕಾಗುತ್ತವೆ.

ಹಳೆಯ ದೆಹಲಿ ರೈಲು ನಿಲ್ದಾಣ (DLI):
ದೆಹಲಿ ಜಂಕ್ಷನ್ ಎಂದೂ ಕರೆಯಲ್ಪಡುವ ಇದು ಭಾರತದ ಉತ್ತರ, ಪಶ್ಚಿಮ ಮತ್ತು ಪೂರ್ವ ಭಾಗಗಳಿಗೆ ವ್ಯಾಪಕವಾದ ಸಂಪರ್ಕವನ್ನು ಹೊಂದಿದೆ. ಪ್ರಮುಖ ಸಂಪರ್ಕ ಸೇವೆಗಳು ಈ ನಿಲ್ದಾಣವನ್ನು ಅಮೃತಸರ, ಜಮ್ಮು, ಜೈಪುರ, ಅಜ್ಮೀರ್, ಹರಿದ್ವಾರ, ಋಷಿಕೇಶ, ಲಕ್ನೋ, ಗೋರಖ್‌ಪುರ ಮತ್ತು ಉತ್ತರ ಪ್ರದೇಶ, ರಾಜಸ್ಥಾನ, ಪಂಜಾಬ್, ಉತ್ತರಾಖಂಡ ಮತ್ತು ಬಿಹಾರದ ಇತರ ನಗರಗಳೊಂದಿಗೆ ಸಂಪರ್ಕಿಸುತ್ತವೆ. ಆಶ್ರಮವು ನಿಲ್ದಾಣದಿಂದ ಸುಮಾರು 22 ಕಿ.ಮೀ ದೂರದಲ್ಲಿದೆ ಮತ್ತು ರಸ್ತೆ ಮೂಲಕ ಪ್ರಯಾಣಿಸಲು ಸುಮಾರು 40–45 ನಿಮಿಷಗಳು ಹಿಡಿಯುತ್ತದೆ.

ಹಜರತ್ ನಿಜಾಮುದ್ದೀನ್ ರೈಲು ನಿಲ್ದಾಣ (NZM):
ಆಶ್ರಮದಿಂದ ಸುಮಾರು 18 ಕಿ.ಮೀ ದೂರದಲ್ಲಿರುವ ಹಜರತ್ ನಿಜಾಮುದ್ದೀನ್, ಉತ್ತರ, ಪಶ್ಚಿಮ, ಮಧ್ಯ, ದಕ್ಷಿಣ ಮತ್ತು ಪೂರ್ವ ಭಾರತದ ಹಲವು ಭಾಗಗಳಿಗೆ ನೇರ ರೈಲು ಸಂಪರ್ಕವನ್ನು ಹೊಂದಿರುವ ಪ್ರಮುಖ ರೈಲು ನಿಲ್ದಾಣವಾಗಿದೆ. ಪ್ರಮುಖ ರೈಲುಗಳಲ್ಲಿ ಮುಂಬೈ ಮತ್ತು ಆಗಸ್ಟ್ ಕ್ರಾಂತಿ ರಾಜಧಾನಿ ಎಕ್ಸ್‌ಪ್ರೆಸ್, ಬೆಂಗಳೂರು, ಚೆನ್ನೈ, ಸಿಕಂದರಾಬಾದ್ ಮತ್ತು ತಿರುವನಂತಪುರಂ ರಾಜಧಾನಿ ಎಕ್ಸ್‌ಪ್ರೆಸ್ ರೈಲುಗಳು ಸೇರಿವೆ. ಅಲ್ಲದೆ, ಮುಂಬೈ, ಬೆಂಗಳೂರು, ಹೈದರಾಬಾದ್, ಅಹಮದಾಬಾದ್, ಗೋವಾ ಮತ್ತು ಕೊಚ್ಚಿ ಮುಂತಾದ ನಗರಗಳನ್ನು ಸಂಪರ್ಕಿಸುವ ದುರಂತೋ ಮತ್ತು ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್ ರೈಲುಗಳೂ ಇಲ್ಲಿಂದ ಸಂಚರಿಸುತ್ತವೆ. ಆಶ್ರಮಕ್ಕೆ ರಸ್ತೆ ಮೂಲಕ ತಲುಪಲು ಸಾಮಾನ್ಯವಾಗಿ ಸುಮಾರು 35–40 ನಿಮಿಷಗಳು ಬೇಕಾಗುತ್ತವೆ.

ಗಾಜಿಯಾಬಾದ್ ರೈಲು ನಿಲ್ದಾಣ (GZB):
ಆಶ್ರಮದಿಂದ ಸುಮಾರು 10 ಕಿ.ಮೀ ದೂರದಲ್ಲಿರುವ ಗಾಜಿಯಾಬಾದ್ ದೆಹಲಿ-ಎನ್‌ಸಿಆರ್‌ಗೆ ಸೇವೆ ಸಲ್ಲಿಸುವ ಪ್ರಮುಖ ರೈಲ್ವೆ ಜಂಕ್ಷನ್ ಆಗಿದ್ದು, ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಂದ ಬರುವ ಪ್ರಯಾಣಿಕರಿಗೆ ವಿಶೇಷವಾಗಿ ಅನುಕೂಲಕರವಾಗಿದೆ. ಲಕ್ನೋ, ಕಾನ್ಪುರ, ಪ್ರಯಾಗ್‌ರಾಜ್, ವಾರಣಾಸಿ, ಗೋರಖ್‌ಪುರ, ಮೊರಾದಾಬಾದ್, ಬರೇಲಿ, ಅಲಿಘರ್ ಮತ್ತು ಉತ್ತರ ಹಾಗೂ ಪೂರ್ವ ಭಾರತದ ಇತರ ಪ್ರಮುಖ ಕೇಂದ್ರಗಳಿಗೆ ನೇರ ಹಾಗೂ ಮಾರ್ಗಮಧ್ಯೆ ಸಂಚರಿಸುವ ರೈಲುಗಳು ಇಲ್ಲಿಂದ ಸಂಪರ್ಕ ಕಲ್ಪಿಸುತ್ತವೆ. ಇಲ್ಲಿಂದ ರಸ್ತೆ ಮೂಲಕ ಆಶ್ರಮಕ್ಕೆ ತಲುಪಲು ಸಾಮಾನ್ಯವಾಗಿ 25–30 ನಿಮಿಷಗಳು ಬೇಕಾಗುತ್ತವೆ.

ಆನಂದ್ ವಿಹಾರ್ ಟರ್ಮಿನಲ್ (ANVT):
ಆನಂದ್ ವಿಹಾರ್ ದೆಹಲಿಯಲ್ಲಿರುವ ಮತ್ತೊಂದು ಪ್ರಮುಖ ದೂರದ ರೈಲ್ವೆ ಟರ್ಮಿನಲ್ ಆಗಿದೆ. ಇದು ಪಾಟ್ನಾ, ವಾರಣಾಸಿ, ಗೋರಖ್‌ಪುರ, ಲಕ್ನೋ, ಕಾನ್ಪುರ, ದರ್ಬಂಗಾ ಮತ್ತು ಕೋಲ್ಕತ್ತಾ ಸೇರಿದಂತೆ ಪ್ರಮುಖ ನಗರಗಳನ್ನು ಸಂಪರ್ಕಿಸುವ ಎಕ್ಸ್‌ಪ್ರೆಸ್ ಮತ್ತು ಅತಿವೇಗದ ರೈಲುಗಳ ಸಂಪರ್ಕ ಸೇವೆಯಾಗಿದೆ. ಆಶ್ರಮವು ಟರ್ಮಿನಲ್‌ನಿಂದ ಸುಮಾರು 9 ಕಿ.ಮೀ ದೂರದಲ್ಲಿದೆ ಮತ್ತು ರಸ್ತೆ ಮೂಲಕ ತಲುಪಲು 25–30 ನಿಮಿಷಗಳು ಹಿಡಿಯುತ್ತದೆ.

ರೈಲು ಮಾರ್ಗಗಳು, ಸಮಯಗಳು ಮತ್ತು ನಿಲ್ದಾಣಗಳಲ್ಲಿ ರೈಲು ನಿಲುಗಡೆಗಳು ಬದಲಾಗಬಹುದು. ನಿಮ್ಮ ಪ್ರಯಾಣವನ್ನು ಯೋಜಿಸುವ ಮೊದಲು ಭಾರತೀಯ ರೈಲ್ವೆಯ ಜಾಲತಾಣದಲ್ಲಿ ಇತ್ತೀಚಿನ ವೇಳಾಪಟ್ಟಿ ಮತ್ತು ಲಭ್ಯತೆಯನ್ನು ದಯವಿಟ್ಟು ಪರಿಶೀಲಿಸಿ.

ರಸ್ತೆಯ ಮೂಲಕ

ನೊಯ್ಡಾ ಮತ್ತು ಐಎಸ್‌ಬಿಟಿ ಆನಂದ್ ವಿಹಾರ್ ಹಾಗೂ ಕಾಶ್ಮೀರಿ ಗೇಟ್ ಸೇರಿದಂತೆ ಹತ್ತಿರದ ಬಸ್ ನಿಲ್ದಾಣಗಳಿಗೆ ಅಂತರನಗರ ಬಸ್‌ಗಳು ಸಂಚರಿಸುತ್ತವೆ. ಈ ಸ್ಥಳಗಳಿಂದ ಆಶ್ರಮಕ್ಕೆ ಮುಂದಿನ ಪ್ರಯಾಣಕ್ಕಾಗಿ ಬಾಡಿಗೆ ಕಾರುಗಳು ಮತ್ತು ಆಟೋ-ರಿಕ್ಷಾಗಳು ಲಭ್ಯವಿರುತ್ತವೆ.

ಕಾರು ಅಥವಾ ಬಾಡಿಗೆ ಕಾರಿನಲ್ಲಿ ಪ್ರಯಾಣಿಸುವ ಸಂದರ್ಶಕರು ನಮ್ಮ ಗೂಗಲ್ ನಕ್ಷೆಗಳ ಕೊಂಡಿಯನ್ನು ಅನುಸರಿಸಿ ನೊಯ್ಡಾ ಆಶ್ರಮವನ್ನು ತಲುಪಬಹುದು.

ದೆಹಲಿಯಿಂದ ರಸ್ತೆ ಮಾರ್ಗ/ನಿರ್ದೇಶನಗಳು:

  • ದೆಹಲಿಯಿಂದ, ದೆಹಲಿ-ಮೀರತ್ ಎಕ್ಸ್‌ಪ್ರೆಸ್‌ವೇ (NE-3) ಅನ್ನು ತೆಗೆದುಕೊಳ್ಳಿ.
  • ಎಡಭಾಗದಲ್ಲಿರುವ ಅಕ್ಷರಧಾಮ ದೇವಸ್ಥಾನವನ್ನು ದಾಟಿ, ಸುಮಾರು 8.5 ಕಿ.ಮೀ. ನೇರವಾಗಿ ಮುಂದುವರಿಯಿರಿ.
  • ಸೆಕ್ಟರ್ 62/ನೊಯ್ಡಾ ಕಡೆಗೆ ಹೋಗುವ ನಿರ್ಗಮನ ಮಾರ್ಗವನ್ನು ತೆಗೆದುಕೊಳ್ಳಿ.
  • ಸೆಕ್ಟರ್ 62 ಪೊಲೀಸ್ ಠಾಣೆಯ ಬಳಿಯಿರುವ ಛೇದಕವನ್ನು ತಲುಪಿ, ಬಲಕ್ಕೆ ತಿರುಗಿ.
  • ಪರಮಹಂಸ ಯೋಗಾನಂದ ಮಾರ್ಗಕ್ಕಾಗಿ 3ನೇ ಎಡ ತಿರುವು ತೆಗೆದುಕೊಳ್ಳಿ.
  • ಪರಮಹಂಸ ಯೋಗಾನಂದ ಮಾರ್ಗದಲ್ಲಿ, 1ನೇ ಬಲ ತಿರುವು ತೆಗೆದುಕೊಳ್ಳಿ.
  • ತಿರುವಿನ ನಂತರ, ನಿಮ್ಮ ಎಡಭಾಗದಲ್ಲಿರುವ ಮೊದಲನೇ ಕಟ್ಟಡವು ವೈಎಸ್‌ಎಸ್ ನೊಯ್ಡಾ ಆಶ್ರಮವಾಗಿರುತ್ತದೆ.

ಹತ್ತಿರದ ಹೆಗ್ಗುರುತುಗಳು:

  • ಒಕಾಯಾ ಕಟ್ಟಡದ ಬಳಿ
  • ಐಐಎಂ ಲಕ್ನೋ, ನೊಯ್ಡಾ ಕ್ಯಾಂಪಸ್ ಎದುರು
  • ಫೋರ್ಟಿಸ್ ಆಸ್ಪತ್ರೆ, ನೊಯ್ಡಾದಿಂದ ಸುಮಾರು 2–3 ಕಿ.ಮೀ ದೂರದಲ್ಲಿದೆ
ಮೆಟ್ರೋದ ಮೂಲಕ

ಆಶ್ರಮಕ್ಕೆ ಹತ್ತಿರವಿರುವ ಮೆಟ್ರೋ ನಿಲ್ದಾಣವೆಂದರೆ ದೆಹಲಿ ಮೆಟ್ರೋದ ನೀಲಿ ಮಾರ್ಗದಲ್ಲಿರುವ ನೊಯ್ಡಾ ಸೆಕ್ಟರ್ 62 ಮೆಟ್ರೋ ನಿಲ್ದಾಣ. ಆಶ್ರಮವು ನಿಲ್ದಾಣದಿಂದ ಸುಮಾರು 2.2 ಕಿ.ಮೀ ದೂರದಲ್ಲಿದೆ ಮತ್ತು ಬಾಡಿಗೆ ಕಾರು ಅಥವಾ ಆಟೋ-ರಿಕ್ಷಾದ ಮೂಲಕ ತಲುಪಲು ಸುಮಾರು 10 ನಿಮಿಷಗಳು ಬೇಕಾಗುತ್ತವೆ. ವಿಮಾನ ನಿಲ್ದಾಣ, ರೈಲು ನಿಲ್ದಾಣ, ಬಸ್ ನಿಲ್ದಾಣ ಅಥವಾ ದೆಹಲಿ-ಎನ್‌ಸಿಆರ್‌ನೊಳಗಿನ ಇತರ ಸ್ಥಳಗಳಿಂದ ಆಶ್ರಮಕ್ಕೆ ಪ್ರಯಾಣಿಸುವ ಸಂದರ್ಶಕರಿಗೆ ಮೆಟ್ರೋ ಸಾಮಾನ್ಯವಾಗಿ ಹೆಚ್ಚು ಮಿತವ್ಯಯದ ಆಯ್ಕೆಯಾಗಿದೆ.

ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ (70–80 ನಿಮಿಷಗಳು):
ಟರ್ಮಿನಲ್ 1 ಮತ್ತು ಟರ್ಮಿನಲ್ 3 ಎರಡರಿಂದಲೂ ಮೆಟ್ರೋ ಸೇವೆಗಳು ಲಭ್ಯವಿವೆ.

  • ಟರ್ಮಿನಲ್ 1 – IGI ವಿಮಾನ ನಿಲ್ದಾಣದಿಂದ, ಬೊಟಾನಿಕಲ್ ಗಾರ್ಡನ್‌ಗೆ ಮೆಜೆಂಟಾ ಮಾರ್ಗದಲ್ಲಿ ಪ್ರಯಾಣಿಸಿ. ಅಲ್ಲಿ ನೀಲಿ ಮಾರ್ಗಕ್ಕೆ (ನೊಯ್ಡಾ ಎಲೆಕ್ಟ್ರಾನಿಕ್ ಸಿಟಿ ಕಡೆಗೆ) ಬದಲಾಯಿಸಿ ಮತ್ತು ನೊಯ್ಡಾ ಸೆಕ್ಟರ್ 62 ಮೆಟ್ರೋ ನಿಲ್ದಾಣದಲ್ಲಿ ಇಳಿಯಿರಿ.
  • ಟರ್ಮಿನಲ್ 3 – IGI ವಿಮಾನ ನಿಲ್ದಾಣದಿಂದ, ಹೊಸ ದೆಹಲಿ ನಿಲ್ದಾಣಕ್ಕೆ ಕಿತ್ತಳೆ ಮಾರ್ಗ (ವಿಮಾನ ನಿಲ್ದಾಣ ಎಕ್ಸ್‌ಪ್ರೆಸ್)ದಲ್ಲಿ ಪ್ರಯಾಣಿಸಿ. ಅಲ್ಲಿ ಹಳದಿ ಮಾರ್ಗಕ್ಕೆ (ಮಿಲೇನಿಯಮ್ ಸಿಟಿ ಸೆಂಟರ್ ಗುರುಗ್ರಾಮ ಕಡೆಗೆ) ಬದಲಾಯಿಸಿ ಮತ್ತು ರಾಜೀವ್ ಚೌಕ್‌ನಲ್ಲಿ ಇಳಿಯಿರಿ. ಅಲ್ಲಿ ನೀಲಿ ಮಾರ್ಗಕ್ಕೆ (ನೊಯ್ಡಾ ಎಲೆಕ್ಟ್ರಾನಿಕ್ ಸಿಟಿ ಕಡೆಗೆ) ಬದಲಾಯಿಸಿ ಮತ್ತು ನೊಯ್ಡಾ ಸೆಕ್ಟರ್ 62 ನಿಲ್ದಾಣದಲ್ಲಿ ಇಳಿಯಿರಿ.

ಹೊಸ ದೆಹಲಿ ರೈಲು ನಿಲ್ದಾಣದಿಂದ (50–60 ನಿಮಿಷಗಳು):
ಹೊಸ ದೆಹಲಿ ಮೆಟ್ರೋ ನಿಲ್ದಾಣದಿಂದ, ಹಳದಿ ಮಾರ್ಗದಲ್ಲಿ (ಮಿಲೇನಿಯಮ್ ಸಿಟಿ ಸೆಂಟರ್ ಗುರುಗ್ರಾಮ ಕಡೆಗೆ) ಪ್ರಯಾಣಿಸಿ ಮತ್ತು ರಾಜೀವ್ ಚೌಕ್‌ನಲ್ಲಿ ಇಳಿಯಿರಿ. ಅಲ್ಲಿ ನೀಲಿ ಮಾರ್ಗಕ್ಕೆ (ನೊಯ್ಡಾ ಎಲೆಕ್ಟ್ರಾನಿಕ್ ಸಿಟಿ ಕಡೆಗೆ) ಬದಲಾಯಿಸಿ ಮತ್ತು ನೊಯ್ಡಾ ಸೆಕ್ಟರ್ 62 ನಿಲ್ದಾಣದಲ್ಲಿ ಇಳಿಯಿರಿ.

ಹಳೆಯ ದೆಹಲಿ ರೈಲು ನಿಲ್ದಾಣದಿಂದ (50–60 ನಿಮಿಷಗಳು):
ಚಾಂದನಿ ಚೌಕ್ ಮೆಟ್ರೋ ನಿಲ್ದಾಣದಲ್ಲಿ ಹಳದಿ ಮಾರ್ಗದಲ್ಲಿ (ಮಿಲೇನಿಯಮ್ ಸಿಟಿ ಸೆಂಟರ್ ಗುರುಗ್ರಾಮ ಕಡೆಗೆ) ಹತ್ತಿ, ರಾಜೀವ್ ಚೌಕ್‌ನಲ್ಲಿ ಇಳಿಯಿರಿ. ಅಲ್ಲಿ ನೀಲಿ ಮಾರ್ಗಕ್ಕೆ (ನೊಯ್ಡಾ ಎಲೆಕ್ಟ್ರಾನಿಕ್ ಸಿಟಿ ಕಡೆಗೆ) ಬದಲಾಯಿಸಿ ಮತ್ತು ನೊಯ್ಡಾ ಸೆಕ್ಟರ್ 62 ನಿಲ್ದಾಣದಲ್ಲಿ ಇಳಿಯಿರಿ.

ಆನಂದ್ ವಿಹಾರ್ ಟರ್ಮಿನಲ್‌ನಿಂದ (45–55 ನಿಮಿಷಗಳು):
ಆನಂದ್ ವಿಹಾರ್ ಐಎಸ್‌ಬಿಟಿ ಮೆಟ್ರೋ ನಿಲ್ದಾಣದಿಂದ, ಗುಲಾಬಿ ಮಾರ್ಗದಲ್ಲಿ (ಐ.ಪಿ. ಎಕ್ಸ್‌ಟೆನ್ಷನ್ ಕಡೆಗೆ) ಪ್ರಯಾಣಿಸಿ ಮತ್ತು ಮಯೂರ್ ವಿಹಾರ್ ಹಂತ – I ನಲ್ಲಿ ಇಳಿಯಿರಿ. ಅಲ್ಲಿ ನೀಲಿ ಮಾರ್ಗಕ್ಕೆ (ನೊಯ್ಡಾ ಎಲೆಕ್ಟ್ರಾನಿಕ್ ಸಿಟಿ ಕಡೆಗೆ) ಬದಲಾಯಿಸಿ ಮತ್ತು ನೊಯ್ಡಾ ಸೆಕ್ಟರ್ 62 ನಿಲ್ದಾಣದಲ್ಲಿ ಇಳಿಯಿರಿ.

ಐಎಸ್‌ಬಿಟಿ ಕಾಶ್ಮೀರಿ ಗೇಟ್‌ನಿಂದ (60–70 ನಿಮಿಷಗಳು):
ಐಎಸ್‌ಬಿಟಿ ಕಾಶ್ಮೀರಿ ಗೇಟ್ ಮೆಟ್ರೋ ನಿಲ್ದಾಣದಿಂದ, ನೇರಳೆ ಮಾರ್ಗದಲ್ಲಿ (ರಾಜಾ ನಹರ್ ಸಿಂಗ್ ಕಡೆಗೆ) ಪ್ರಯಾಣಿಸಿ ಮತ್ತು ಮಂಡಿ ಹೌಸ್‌ನಲ್ಲಿ ಇಳಿಯಿರಿ. ಅಲ್ಲಿ ನೀಲಿ ಮಾರ್ಗಕ್ಕೆ (ನೊಯ್ಡಾ ಎಲೆಕ್ಟ್ರಾನಿಕ್ ಸಿಟಿ ಕಡೆಗೆ) ಬದಲಾಯಿಸಿ ಮತ್ತು ನೊಯ್ಡಾ ಸೆಕ್ಟರ್ 62 ನಿಲ್ದಾಣದಲ್ಲಿ ಇಳಿಯಿರಿ.

ಮೆಟ್ರೋ ಮಾರ್ಗಗಳು, ಮಾರ್ಗ ಬದಲಾವಣೆ ಸ್ಥಳಗಳು ಮತ್ತು ಪ್ರಯಾಣದ ಸಮಯಗಳು ಬದಲಾಗಬಹುದು. ಪ್ರಯಾಣಿಸುವ ಮೊದಲು ದೆಹಲಿ ಮೆಟ್ರೋದ ಇತ್ತೀಚಿನ ಮಾರ್ಗ ಮತ್ತು ಸೇವಾ ಮಾಹಿತಿಯನ್ನು ದಯವಿಟ್ಟು ಪರಿಶೀಲಿಸಿ.

ಇದನ್ನು ಹಂಚಿಕೊಳ್ಳಿ