ನೀವು ದಿನದಿಂದ ದಿನಕ್ಕೆ ಧ್ಯಾನ ಮಾಡುವುದನ್ನು ಕಲಿಯುತ್ತಿರುವಂತೆ, ಒಂದು ಹೊಸ ಜಾಗೃತಿ ಮೂಡುತ್ತದೆ; ಭಗವಂತನೊಂದಿಗಿನ ಒಂದು ಹೊಸ ಸಕ್ರಿಯ ಬಾಂಧವ್ಯವು ನಿಮ್ಮೊಳಗೆ ಪ್ರೇರಿತವಾಗುತ್ತದೆ.
— ಶ್ರೀ ಶ್ರೀ ಪರಮಹಂಸ ಯೋಗಾನಂದ
2025ರ ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗೆ ನಡೆಯಲಿರುವ ಸಾಧನಾ ಸಂಗಮಗಳಲ್ಲಿ ಭಾಗವಹಿಸಲು ಎಲ್ಲ ವೈಎಸ್ಎಸ್/ ಎಸ್ಆರ್‌ಎಫ್ ನ ಭಕ್ತಾದಿಗಳನ್ನು ನಾವು ಸ್ವಾಗತಿಸುತ್ತೇವೆ.
ಈ ಸಂಗಮಗಳು ಈ ಎಲ್ಲಾ ಸ್ಥಳಗಳಲ್ಲಿ ಅಥವಾ ಅವುಗಳಲ್ಲಿ ಕೆಲವು ಸ್ಥಳಗಳಲ್ಲಿ ಏಕಕಾಲದಲ್ಲಿ ನಡೆಯಲಿವೆ: ವೈಎಸ್ಎಸ್ ರಾಂಚಿ ಆಶ್ರಮ; ವೈಎಸ್ಎಸ್ ನೊಯ್ಡಾ ಆಶ್ರಮ; ವೈಎಸ್ಎಸ್ ದಕ್ಷಿಣೇಶ್ವರ ಆಶ್ರಮ; ವೈಎಸ್ಎಸ್ ಚೆನ್ನೈ ಆಶ್ರಮ; ಪರಮಹಂಸ ಯೋಗಾನಂದ ಸಾಧನಾಲಯ, ಇಗತ್ಪುರಿ. ಭಕ್ತರು ಈ ಸಂಗಮಗಳಲ್ಲಿ ತಮಗೆ ಅನುಕೂಲಕರವಾದ ಯಾವುದಾದರೂ ಒಂದು ಸ್ಥಳದಲ್ಲಿ ಭಾಗವಹಿಸಲು ಆಯ್ಕೆ ಮಾಡಬಹುದು.
ಹಿಂದೆ ನಡೆಸಲಾಗುತ್ತಿದ್ದ ವಾರ್ಷಿಕ ಶರದ್ ಸಂಗಮಗಳಂತೆಯೇ, ಈ ಕಾರ್ಯಕ್ರಮಗಳು ವೈಎಸ್ಎಸ್ ಭಕ್ತರಿಗೆ ಆಧ್ಯಾತ್ಮಿಕವಾಗಿ ತಮ್ಮನ್ನು ಪುನರುಜ್ಜೀವನಗೊಳಿಸಿಕೊಳ್ಳಲು, ಗುರುದೇವರ ಬೋಧನೆಗಳ ಬಗ್ಗೆ ಆಳವಾದ ತಿಳುವಳಿಕೆಯನ್ನು ಹೊಂದಲು ಮತ್ತು ತಮ್ಮ ಧ್ಯಾನ ತಂತ್ರಗಳ ಅಭ್ಯಾಸವನ್ನು ಉತ್ತಮಗೊಳಿಸಿಕೊಳ್ಳಲು ಅವಕಾಶವನ್ನು ಒದಗಿಸುತ್ತವೆ. ಲಭ್ಯವಿರುವ ಸೌಲಭ್ಯಗಳ ಆಧಾರದ ಮೇಲೆ ಪ್ರತಿ ಸ್ಥಳದಲ್ಲಿ ಭಾಗವಹಿಸುವವರ ಸಂಖ್ಯೆಯು ಸೀಮಿತವಾಗಿರುವುದರಿಂದ, ಪ್ರತಿಯೊಬ್ಬ ಭಕ್ತನು ತನ್ನ ಆಧ್ಯಾತ್ಮಿಕ ಪಯಣದಲ್ಲಿ ಹೆಚ್ಚು ವ್ಯಕ್ತಿ-ವಿಶಿಷ್ಟವಾದ ಮತ್ತು ಆಳವಾದ ಬೆಂಬಲವನ್ನು ಅನುಭವಿಸಬಹುದು. ಒಟ್ಟಾರೆಯಾಗಿ, ಸಾಧನಾ ಸಂಗಮಗಳು ಭಾಗವಹಿಸುವ ಎಲ್ಲರಿಗೂ ಮರೆಯಲಾಗದ ಆಧ್ಯಾತ್ಮಿಕ ಅನುಭವವನ್ನು ನೀಡುತ್ತವೆ. ತಲ್ಲೀನಗೊಳಿಸುವ ಅನುಭವವನ್ನು ಒದಗಿಸುವ ಸಲುವಾಗಿ, ನಾವು 2025 ರಲ್ಲಿ ಪ್ರತಿ ಸಂಗಮದ ಅವಧಿಯನ್ನು 4 ದಿನಗಳಿಂದ 5 ದಿನಗಳವರೆಗೆ ಹೆಚ್ಚಿಸುತ್ತಿದ್ದೇವೆ.
ವೈಎಸ್ಎಸ್ ಮತ್ತು ಎಸ್‌ಆರ್‌ಎಫ್ ಭಕ್ತರಿಗೆ ಈ ಸಂಗಮಗಳ ನೋಂದಣಿ ಪ್ರಕ್ರಿಯೆ ಪ್ರಾರಂಭವಾಗಿದೆ.
ನೋಂದಣಿಯು ಮೊದಲು ಬಂದವರಿಗೆ ಮೊದಲ ಆದ್ಯತೆಯ ಆಧಾರದ ಮೇಲೆ ಇರುತ್ತದೆ. ಒಬ್ಬ ಭಕ್ತಾದಿಯು ಕೇವಲ ಒಂದು ಸಂಗಮದಲ್ಲಿ ಮಾತ್ರ ಭಾಗವಹಿಸಲು ಅವಕಾಶವಿದೆ.
ಕೇವಲ ನಿಮ್ಮ ಆಧ್ಯಾತ್ಮಿಕ ಉತ್ಸಾಹವನ್ನು ಪುನಃಪ್ರೇರಿಸುವುದಷ್ಟೇ ಅಲ್ಲದೆ ಇತರ ಶ್ರದ್ಧಾವಂತ ಅನ್ವೇಷಕರ ಸಂಗದಲ್ಲಿ ಧ್ಯಾನ ಮಾಡುವುದು ಹಾಗೂ ಅವರೊಂದಿಗಿರುವ ಆನಂದದ ವಿಶಿಷ್ಟ ಅನುಭವವನ್ನು ಹೊಂದುವ ಅವಕಾಶವನ್ನು ನಿಮ್ಮದಾಗಿಸಿಕೊಳ್ಳಿ ಎಂದು ನಾವು ನಿಮಗೆ ಪ್ರೋತ್ಸಾಹಿಸುತ್ತೇವೆ.
ದಯವಿಟ್ಟು ಗಮನಿಸಿ:
- ಸಂಗಮಗಳಿಗೆ ಕೇವಲ ವೈಎಸ್‌ಎಸ್/ಎಸ್‌ಆರ್‌ಎಫ್ ಭಕ್ತಾದಿಗಳಿಗೆ ಮಾತ್ರ ಪ್ರವೇಶ.
- 12 ವರ್ಷಗಳಿಗಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಅವಕಾಶವಿಲ್ಲ.
- ಎಸ್‌ಆರ್‌ಎಫ್ ಭಕ್ತಾದಿಗಳು ಈ ಸಂಗಮಗಳಲ್ಲಿ ಭಾಗವಹಿಸಲು ಸ್ವಾಗತವಿದ್ದರೂ ಅವರು ಹತ್ತಿರವಿರುವ ಹೋಟೆಲ್‌ಗಳಲ್ಲಿ ಸ್ಥಳಾವಕಾಶವನ್ನು ಮಾಡಿಕೊಳ್ಳಬೇಕು. ಲಭ್ಯವಿರುವ ಅಂತಹ ಹೋಟೆಲ್‌ಗಳ ವಿವರಗಳು ಇಲ್ಲಿದೆ.
- ವೇಳಾಪಟ್ಟಿಯ ಕಾರ್ಯಕ್ರಮಗಳು ಬಿಡುವಿಲ್ಲದೇ ಒತ್ತೊತ್ತಾಗಿರುವುದರಿಂದ, ಸೂಕ್ಷ್ಮ ಆರೋಗ್ಯವಿರುವ ಹಾಗೂ ವಿಶೇಷ ಅಗತ್ಯಗಳಿರುವ ಭಕ್ತಾದಿಗಳು ಅರ್ಜಿಯನ್ನು ಸಲ್ಲಿಸಬಾರದೆಂದು ಸಲಹೆ ನೀಡುತ್ತೇವೆ.





ಸಾಧನಾ ಸಂಗಮಗಳ ವೇಳಾಪಟ್ಟಿ
(ಅಕ್ಟೋಬರ್-ಡಿಸೆಂಬರ್ 2025)
ದಯವಿಟ್ಟು ಗಮನಿಸಿ: ಈ ಸಂಗಮಗಳಲ್ಲಿ ತಂತ್ರಾಧ್ಯಯನ ತರಗತಿಗಳು ನಡೆಯುವ ಭಾಷೆಗಳನ್ನು ಕೆಳಗಿನ ಕೋಷ್ಟಕದಲ್ಲಿ ಪ್ರತಿ ಕಾರ್ಯಕ್ರಮಕ್ಕೂ ಉಲ್ಲೇಖಿಸಲಾಗಿದೆ; ಆದರೆ, ಆಧ್ಯಾತ್ಮಿಕ ಪ್ರವಚನಗಳು ಸ್ಥಳಕ್ಕೆ ಅನುಗುಣವಾಗಿ ಇಂಗ್ಲಿಷ್, ಹಿಂದಿ, ಬಂಗಾಳಿ, ತೆಲುಗು ಅಥವಾ ತಮಿಳು ಭಾಷೆಗಳಲ್ಲಿ ಇರಬಹುದು.
ತಂತ್ರ ತರಗತಿಗಳ ಭಾಷೆ
ರಾಂಚಿ | ನೋಯ್ಡಾ | ದಕ್ಷಿಣೇಶ್ವರ್ | ಚೆನ್ನೈ | ಇಗತ್‌ಪುರಿ | ||
---|---|---|---|---|---|---|
ಅಕ್ಟೋಬರ್ 8-12 | ಇಂಗ್ಲಿಷ್ (ಕ್ರಿಯಾ ಯೋಗ ದೀಕ್ಷೆ) | ಇಂಗ್ಲಿಷ್ (ಕ್ರಿಯಾ ಯೋಗ ದೀಕ್ಷೆ) | ಬಂಗಾಳಿ | ತಮಿಳು | ಹಿಂದಿ/ಇಂಗ್ಲಿಷ್ | |
ನವೆಂಬರ್ 5-9 | ಇಂಗ್ಲಿಷ್ (ಕ್ರಿಯಾ ಯೋಗ ದೀಕ್ಷೆ) | ಸಂಗಮ ಇಲ್ಲ | ಇಂಗ್ಲಿಷ್ (ಕ್ರಿಯಾ ಯೋಗ ದೀಕ್ಷೆ) | ಸಂಗಮ ಇಲ್ಲ | ಹಿಂದಿ/ಇಂಗ್ಲಿಷ್ | |
ಡಿಸೆಂಬರ್ 3-7 | ಹಿಂದಿ (ಕ್ರಿಯಾ ಯೋಗ ದೀಕ್ಷೆ) | ಹಿಂದಿ (ಕ್ರಿಯಾ ಯೋಗ ದೀಕ್ಷೆ) | ಹಿಂದಿ | ಸಂಗಮ ಇಲ್ಲ | ಸಂಗಮ ಇಲ್ಲ |
ಸಂಭಾವ್ಯ ಕಾರ್ಯಕ್ರಮದ ಅವಧಿಗಳನ್ನು ಕೆಳಗೆ ನೀಡಲಾಗಿದೆ:
ಬುಧವಾರ
ಬೆಳಿಗ್ಗೆ 07:00 ರಿಂದ 08:30 ರ ವರೆಗೆ
ಚೈತನ್ಯದಾಯಕ ವ್ಯಾಯಾಮಗಳು ಮತ್ತು ಧ್ಯಾನ
ಬೆಳಿಗ್ಗೆ 10:00 ರಿಂದ 11:30 ರ ವರೆಗೆ
ಕೀರ್ತನೆ ಮತ್ತು ಉದ್ಘಾಟನಾ ಸತ್ಸಂಗ
ಮಧ್ಯಾಹ್ನ 02:30 ರಿಂದ 04:00 ರ ವರೆಗೆ
ಚೈತನ್ಯದಾಯಕ ವ್ಯಾಯಾಮಗಳ ಪುನರವಲೋಕನ
ಸಂಜೆ 05:30 ರಿಂದ ರಾತ್ರಿ 07:30 ರ ವರೆಗೆ
ಚೈತನ್ಯದಾಯಕ ವ್ಯಾಯಾಮಗಳು ಮತ್ತು ಧ್ಯಾನ
ರಾತ್ರಿ 08:15 ರಿಂದ ರಾತ್ರಿ 09:15 ರ ವರೆಗೆ
ವೀಡಿಯೋ ಪ್ರದರ್ಶನ
ಗುರುವಾರ
ಬೆಳಿಗ್ಗೆ 07:00 ರಿಂದ 08:30 ರ ವರೆಗೆ
ಚೈತನ್ಯದಾಯಕ ವ್ಯಾಯಾಮಗಳು ಮತ್ತು ಧ್ಯಾನ
ಬೆಳಿಗ್ಗೆ 09:30 ರಿಂದ 10:30 ರ ವರೆಗೆ
ಹಾಂಗ್-ಸಾ ತಂತ್ರದ ಪುನರಾವಲೋಕನ
ಬೆಳಿಗ್ಗೆ 11:00 ರಿಂದ ಮಧ್ಯಾಹ್ನ 12:00 ರ ವರೆಗೆ
ಆಧ್ಯಾತ್ಮಿಕ ಪ್ರವಚನ
ಮಧ್ಯಾಹ್ನ 03:00 ರಿಂದ 04:00 ರ ವರೆಗೆ
ಓಂ ತಂತ್ರದ ಪುನರಾವಲೋಕನ
ಸಂಜೆ 05:30 ರಿಂದ ರಾತ್ರಿ 08:30 ರ ವರೆಗೆ
ಚೈತನ್ಯದಾಯಕ ವ್ಯಾಯಾಮಗಳು ಮತ್ತು ಧ್ಯಾನ
ಶುಕ್ರವಾರ
ಬೆಳಿಗ್ಗೆ 07:00 ರಿಂದ 08:30 ರ ವರೆಗೆ
ಚೈತನ್ಯದಾಯಕ ವ್ಯಾಯಾಮಗಳು ಮತ್ತು ಧ್ಯಾನ
ಬೆಳಿಗ್ಗೆ 09:30 ರಿಂದ 10:30 ರ ವರೆಗೆ
ಆಧ್ಯಾತ್ಮಿಕ ಪ್ರವಚನ
ಬೆಳಿಗ್ಗೆ 11:00 ರಿಂದ 12:00 ರ ವರೆಗೆ
ಆಧ್ಯಾತ್ಮಿಕ ಪ್ರವಚನ / ಪ್ರಶ್ನೋತ್ತರ ಅವಧಿ
ಮಧ್ಯಾಹ್ನ 03:00 ರಿಂದ 04:00 ರ ವರೆಗೆ
ದಿವ್ಯ ಗೀತೆಗಳು
ಸಂಜೆ 05:30 ರಿಂದ ರಾತ್ರಿ 08:00 ರ ವರೆಗೆ
ಚೈತನ್ಯದಾಯಕ ವ್ಯಾಯಾಮಗಳು ಮತ್ತು ಧ್ಯಾನ
ಶನಿವಾರ
ಬೆಳಿಗ್ಗೆ 07:00 ರಿಂದ 08:30 ರ ವರೆಗೆ
ಚೈತನ್ಯದಾಯಕ ವ್ಯಾಯಾಮಗಳು ಮತ್ತು ಧ್ಯಾನ
ಬೆಳಿಗ್ಗೆ 10:00 ರಿಂದ 12:00 ರ ವರೆಗೆ
ಕ್ರಿಯಾ ಯೋಗದ ಪುನರಾವಲೋಕನ ಮತ್ತು ತಪಾಸಣೆ ಹಾಗೂ ಕ್ರಿಯಾಬಾನ್ ಅಲ್ಲದವರಿಗೆ ಸತ್ಸಂಗ
ಮಧ್ಯಾಹ್ನ 03:00 ರಿಂದ 04:00 ರ ವರೆಗೆ
ಆಧ್ಯಾತ್ಮಿಕ ಪ್ರವಚನ
ಸಂಜೆ 05:30 ರಿಂದ ಸಂಜೆ 07:30 ರ ವರೆಗೆ
ಚೈತನ್ಯದಾಯಕ ವ್ಯಾಯಾಮಗಳು ಮತ್ತು ಧ್ಯಾನ
ದಯವಿಟ್ಟು ಗಮನಿಸಿ: ಕ್ರಿಯಾ ಯೋಗ ದೀಕ್ಷೆಯನ್ನು ಒಳಗೊಂಡಿರುವ ಕಾರ್ಯಕ್ರಮದಲ್ಲಿ ಶನಿವಾರದಂದು ಬದಲಾಗಿರುವ ಸಮಯವನ್ನು ದಯವಿಟ್ಟು ಗಮನಿಸಿ:
ಬೆಳಿಗ್ಗೆ 08:30 ರಿಂದ 11:30 ರ ವರೆಗೆ
ಕ್ರಿಯಾ ಯೋಗ ದೀಕ್ಷೆ
ಬೆಳಿಗ್ಗೆ 10:00 ರಿಂದ 11:30 ರ ವರೆಗೆ
ಕ್ರಿಯಾಬಾನ್ ಅಲ್ಲದವರಿಗೆ ಸತ್ಸಂಗ
ಮಧ್ಯಾಹ್ನ 02:30 ರಿಂದ 04:00 ರ ವರೆಗೆ
ಕ್ರಿಯಾ ಯೋಗ ಪುನರವಲೋಕನ ಹಾಗೂ ತಪಾಸಣೆ
ಸಂಜೆ 05:30 ರಿಂದ ಸಂಜೆ 07:30 ರ ವರೆಗೆ
ಚೈತನ್ಯದಾಯಕ ವ್ಯಾಯಾಮಗಳು ಮತ್ತು ಧ್ಯಾನ
ಭಾನುವಾರ
ಬೆಳಿಗ್ಗೆ 07:00 ರಿಂದ 08:30 ರ ವರೆಗೆ
ಚೈತನ್ಯದಾಯಕ ವ್ಯಾಯಾಮಗಳು ಮತ್ತು ಧ್ಯಾನ
ಬೆಳಿಗ್ಗೆ 10:30 ರಿಂದ 11:00 ರ ವರೆಗೆ
ಕೀರ್ತನೆ ಮತ್ತು ಧ್ಯಾನ
ಬೆಳಿಗ್ಗೆ 11:00 ರಿಂದ ಮಧ್ಯಾಹ್ನ 12:00 ರ ವರೆಗೆ
ಮುಕ್ತಾಯದ ಸತ್ಸಂಗ
ಮಧ್ಯಾಹ್ನ 12:00 ರಿಂದ 12:15 ರ ವರೆಗೆ
ಮುಕ್ತಾಯದ ಚಿಂತನೆಗಳು ಮತ್ತು ಪ್ರಸಾದ
ಸಂಜೆ 04:00 ರಿಂದ 07:30 ರ ವರೆಗೆ
ಚೈತನ್ಯದಾಯಕ ವ್ಯಾಯಾಮಗಳು ಮತ್ತು ಧ್ಯಾನ

ಧ್ಯಾನ ತಂತ್ರದ ತರಗತಿಗಳು ಹಾಗೂ ಪ್ರವಚನಗಳು:
- ವೈಎಸ್‌ಎಸ್ ಧ್ಯಾನದ ತಂತ್ರಗಳನ್ನು — ಚೈತನ್ಯದಾಯಕ ವ್ಯಾಯಾಮಗಳು, ಹಾಂಗ್-ಸಾ ತಂತ್ರ ಹಾಗೂ ಓಂ ತಂತ್ರ — ವಿವರಿಸಿ ಮಾಡಿ ತೋರಿಸಲಾಗುತ್ತದೆ. ಮೇಲಿನ ಸಾಧನಾ ಸಂಗಂನ ವೇಳಾಪಟ್ಟಿಯಲ್ಲಿ ಸೂಚಿಸಿರುವಂತೆ ಈ ತರಗತಿಗಳನ್ನು ವಿವಿಧ ಭಾಷೆಗಳಲ್ಲಿ ನಡೆಸಲಾಗುತ್ತದೆ.
- ಗುರುದೇವರ ಬದುಕುವುದು-ಹೇಗೆ ಸಿದ್ಧಾಂತಗಳ ಬಗ್ಗೆಯ ಪ್ರವಚನಗಳು ಕೂಡ ವೇಳಾಪಟ್ಟಿಯಲ್ಲಿವೆ. ಈ ಪ್ರವಚನಗಳನ್ನು ಇಂಗ್ಲಿಷ್, ಹಿಂದಿ, ಬಂಗಾಳಿ, ತೆಲುಗು ಮತ್ತು ತಮಿಳು ಭಾಷೆಗಳಲ್ಲೂ ನಡೆಸಬಹುದು.
ಕಾರ್ಯಕ್ರಮ:
- ಪ್ರತಿ ಸ್ಥಳದಲ್ಲಿ ಕಾರ್ಯಕ್ರಮವು ಬುಧವಾರ ಬೆಳಿಗ್ಗೆ ಪ್ರಾರಂಭವಾಗಿ ಭಾನುವಾರ ಸಂಜೆ ಮುಕ್ತಾಯವಾಗುತ್ತದೆ.
- ಎಲ್ಲ ಭಕ್ತರಿಗೆ ಹೆಚ್ಚುವರಿಯಾಗಿ ಇನ್ನೂ ನಾಲ್ಕು ದಿನಗಳ ಕಾಲ ಉಳಿಯುವ ಆಯ್ಕೆ ಇರುತ್ತದೆ – ಅವರು ಕಾರ್ಯಕ್ರಮಕ್ಕಿಂತ ಎರಡು ದಿನಗಳ ಮುಂಚೆ (ಸೋಮವಾರ ಬೆಳಿಗ್ಗೆ) ಆಗಮಿಸಬಹುದು ಮತ್ತು ಕಾರ್ಯಕ್ರಮ ಮುಗಿದ ನಂತರ (ಮರುದಿನ, ಮಂಗಳವಾರ ರಾತ್ರಿ) ಎರಡು ದಿನಗಳವರೆಗೆ ಉಳಿಯಬಹುದು.
- ಗುರೂಜಿಯವರ ಆಶ್ರಮ/ಧ್ಯಾನದ ಶಿಬಿರಗಳಲ್ಲಿ ಒಟ್ಟು ಎಂಟು ದಿನಗಳನ್ನು ಕಳೆಯುವುದರಿಂದ, ಭಕ್ತಾದಿಗಳಿಗೆ ಸಾಕಷ್ಟು ವಿಶ್ರಾಂತಿ, ಆರಾಮ ಹಾಗೂ ಆಧ್ಯಾತ್ಮಿಕ ನವಚೈತನ್ಯ ಸಿಗುತ್ತದೆ. ಸಂದರ್ಭಕ್ಕೆ ತಕ್ಕಂತೆ ನೀವು ನಿಮ್ಮ ಆಗಮನ ಹಾಗೂ ನಿರ್ಗಮನವನ್ನು ಆಯೋಜಿಸಬಹುದು.
ಸ್ಥಳಾವಕಾಶ:
- ಮಹಿಳೆಯರಿಗೆ ಮತ್ತು ಪುರುಷರಿಗೆ ಪ್ರತ್ಯೇಕವಾಗಿ ಹಂಚಿಕೊಂಡಿರುವ/ಡಾರ್ಮಿಟರಿ-ರೀತಿಯ ವಸತಿಯನ್ನು ನೀಡಲಾಗುತ್ತದೆ. ಕುಟುಂಬದ ಸದಸ್ಯರು ಅದೇ ರೀತಿಯಲ್ಲಿ ಆಯೋಜನೆ ಮಾಡಿಕೊಂಡು ತಮ್ಮ ವಸ್ತುಗಳನ್ನು ತೆಗೆದುಕೊಂಡು ಬರಲು ಕೋರಲಾಗಿದೆ.
- ವಿಶೇಷ ಅಗತ್ಯವಿರುವ ಭಕ್ತಾದಿಗಳು ತಮ್ಮ ವಸತಿ ಹಾಗೂ ಊಟದ ವ್ಯವಸ್ಥೆಯನ್ನು ದಯವಿಟ್ಟು ಖುದ್ದಾಗಿ ಮಾಡಿಕೊಳ್ಳಬೇಕೆಂದು ವಿನಂತಿಸಿಕೊಳ್ಳುತ್ತೇವೆ. ಹತ್ತಿರದಲ್ಲಿರುವ ಹೋಟೆಲ್‌ಗಳ ವಿವರಗಳನ್ನು ಕೆಳಗೆ ನೀಡಲಾಗಿದೆ.
ಮೊದಲು ಬಂದವರಿಗೆ ಮೊದಲ ಆದ್ಯತೆಯ ಆಧಾರದ ಮೇಲೆ:
- ಐದೂ ಸ್ಥಳಗಳಲ್ಲಿ ಸೀಮಿತ ವಸತಿಗೆ ಅವಕಾಶ ಇರುವುದರಿಂದ, ನೋಂದಣಿಯನ್ನು ಮೊದಲು ಬಂದವರಿಗೆ ಮೊದಲ ಆದ್ಯತೆಯ ಆಧಾರದ ಮೇಲೆ ದೃಢಪಡಿಸಲಾಗುತ್ತದೆ.
- ದಯವಿಟ್ಟು ಗಮನಿಸಿ, ನಿಮ್ಮ ನೋಂದಣಿಯನ್ನು ದೃಢಪಡಿಸಿದ್ದರೂ ನೀವು ಭಾಗವಹಿಸಲಾಗದೇ ಇದ್ದಲ್ಲಿ, ನೋಂದಣಿ ಹಣವನ್ನು ಹಿಂದಿರುಗಿಸಲಾಗುವುದಿಲ್ಲ ಅಥವಾ ಬೇರೆ ಯಾವುದೇ ವ್ಯಕ್ತಿಗೆ ವರ್ಗಾಯಿಸಲಾಗುವುದಿಲ್ಲ.
ಹಣ ಸಂದಾಯ: ಪ್ರತಿ ವ್ಯಕ್ತಿಗೆ ನೋಂದಣಿ ಶುಲ್ಕ ರೂ. 2500/-. ಈ ಶುಲ್ಕವು ಭೋಜನದ ವೆಚ್ಚವನ್ನೂ ಒಳಗೊಂಡಿದೆ. ನಿಮಗೆ ನೋಂದಣಿ ಹಣವನ್ನು ಕಟ್ಟಲು ತೊಂದರೆಯಿದ್ದರೆ ನಮ್ಮನ್ನು ಸಂಪರ್ಕಿಸಿ.
ನೋಂದಣಿಯ ಮಾಹಿತಿ
2025 ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗಿನ ಸಂಗಮಗಳಿಗೆ ನೋಂದಣಿ ಪ್ರಾರಂಭವಾಗಿದೆ!
ನೋಂದಣಿ ಪ್ರಕ್ರಿಯೆಯ ಸಮಗ್ರ ವಿವರ ಈ ಕೆಳಗಿನಂತಿದೆ:
ಡಿವೋಟೀ ಪೋರ್ಟಲ್‌ನ ಮೂಲಕ ಆನ್‌ಲೈನ್ ನೋಂದಣಿ:
ತ್ವರಿತ ಮತ್ತು ಸುಲಭ ನೋಂದಣಿಗಾಗಿ, ದಯವಿಟ್ಟು ಕೆಳಗಿನ ಗುಂಡಿಯನ್ನು ಒತ್ತುವ ಮೂಲಕ ಆನ್‌ಲೈನ್‌ನಲ್ಲಿ ನೋಂದಾಯಿಸಿ:
ಸಹಾಯಕ ಕೇಂದ್ರವನ್ನು ಸಂಪರ್ಕಿಸಿ ನೋಂದಾಯಿಸಿಕೊಳ್ಳುವುದು:
ದಯವಿಟ್ಟು (0651 6655 555) ಗೆ ಕರೆಮಾಡಿ ಅಥವಾ ರಾಂಚಿ ಆಶ್ರಮದ ಸಹಾಯಕ ಕೇಂದ್ರಕ್ಕೆ ಇಮೇಲ್ ಮಾಡಿ ಮತ್ತು, ಕೆಳಗಿನ ವಿವರಗಳನ್ನು ನೀಡಿ:
- ನಿಮ್ಮ ಪೂರ್ಣ ಹೆಸರು
- ವಯಸ್ಸು
- ವಿಳಾಸ
- ಇಮೇಲ್ ಮತ್ತು ದೂರವಾಣಿ ಸಂಖ್ಯೆ
- ವೈಎಸ್‌ಎಸ್ ಪಾಠಗಳ ನೋಂದಣಿ ಸಂಖ್ಯೆ (ಅಥವಾ ಎಸ್‌ಆರ್‌ಎಫ್ ಸದಸ್ಯತ್ವದ ಸಂಖ್ಯೆ)
- ನೀವು ಬರುವ ಹಾಗೂ ಹೊರಡುವ ಸಂಭಾವ್ಯ ದಿನಾಂಕಗಳು.
ನಿಮ್ಮ ಮೊಬೈಲ್ ಅಥವಾ ಇಮೇಲ್ ವಿಳಾಸಕ್ಕೆ ಕಳಿಸಲಾಗುವ ಹಣ ಪಾವತಿಯ ಲಿಂಕ್ ಮೂಲಕ ನೀವು ಹಣವನ್ನು ಜಮಾ ಮಾಡಬಹುದು.
ಎಸ್‌ಆರ್‌ಎಫ್ ಭಕ್ತಾದಿಗಳ ನೋಂದಾವಣಿ:
- ಇಚ್ಛೆಯಿರುವ ಎಸ್‌ಆರ್‌ಎಫ್ ಭಕ್ತಾದಿಗಳು ವೈಎಸ್‌ಎಸ್ ಸಹಾಯಕ ಕೇಂದ್ರವನ್ನು ಇಮೇಲ್ ಮೂಲಕ ಸಂಪರ್ಕಿಸಿ ಮೇಲೆ ತಿಳಿಸಿರುವ ವಿವರಗಳನ್ನು ನೀಡಿ.
- ಎಸ್‌ಆರ್‌ಎಫ್ ಭಕ್ತಾದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಭೋಜನವನ್ನು ಸ್ವೀಕರಿಸಬಹುದಾದರೂ, ಅವರು ಯಾವುದಾದರೂ ಹತ್ತಿರದ ಹೋಟೆಲ್‌ನಲ್ಲಿ ವಸತಿ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕೆಂದು ಕೋರುತ್ತೇವೆ.
ದಯವಿಟ್ಟು ಗಮನಿಸಿ:
- ಒಬ್ಬ ಭಕ್ತಾದಿಯು ಕೇವಲ ಒಂದು ಸಂಗಮದಲ್ಲಿ ಮಾತ್ರ ಭಾಗವಹಿಸಲು ಅವಕಾಶವಿದೆ.
- ನೋಂದಣಿಯ ಕೋರಿಕೆಗಳು ಗರಿಷ್ಠ ಪ್ರಮಾಣವನ್ನು ತಲುಪಿದಲ್ಲಿ ಒಂದು ನಿರ್ದಿಷ್ಟ ಸ್ಥಳದ ನೋಂದಣಿಯು ಮೊದಲೇ ಸಮಾಪ್ತಿಯಾಗಬಹುದು.
- ನೋಂದಣಿ ಯಶಸ್ವಿಯಾದ ಮೇಲೆ, ನಿಮಗೆ ಇಮೇಲ್ ಅಥವಾ ವಾಟ್ಸ್‌ಅಪ್ ಅಥವಾ ಎಸ್‌ಎಮ್‌ಎಸ್ ಮೂಲಕ ದೃಢೀಕರಣ ದೊರೆಯುತ್ತದೆ. ನಿಮಗೆ ಅಂತಹ ಒಂದು ಸೂಚನೆ ಸಿಗದಿದದ್ದಲ್ಲಿ, ದಯವಿಟ್ಟು ವೈಎಸ್ಎಸ್ ರಾಂಚಿ ಸಹಾಯವಾಣಿ (0651 6655 555) ಗೆ ಕರೆ ಮಾಡಿ ಅಥವಾ ([email protected]) ಗೆ ಇಮೇಲ್ ಕಳಿಸಿ ಸಹಾಯ ಕೇಂದ್ರವನ್ನು ಸಂಪರ್ಕಿಸಿ.
- ಕೇವಲ ವೈಎಸ್‌ಎಸ್/ಎಸ್‌ಆರ್‌ಎಫ್ ಭಕ್ತಾದಿಗಳು ಮಾತ್ರ ಸಂಗಮನಲ್ಲಿ ಭಾಗವಹಿಸಬಹುದು.
- 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಪ್ರವೇಶವಿಲ್ಲ.
ಕ್ರಿಯಾ ಯೋಗ ದೀಕ್ಷೆಯನ್ನು ಪಡೆಯುತ್ತಿರುವ ಹೊಸ ಭಕ್ತಾದಿಗಳೊಂದಿಗೆ ಈ ಸಂಗಮಗಳಲ್ಲಿ ಭಾಗವಹಿಸುತ್ತಿರುವ ಎಲ್ಲ ಕ್ರಿಯಾಬಾನ್‌ಗಳೂ ಕ್ರಿಯಾ ಯೋಗ ದೀಕ್ಷಾ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶವನ್ನು ಹೊಂದಿರುತ್ತಾರೆ.
ಕ್ರಿಯಾ ಯೋಗವನ್ನು ಪಡೆಯಲು ಅರ್ಹತೆ
- ವೈಎಸ್‌ಎಸ್ ಪಾಠಗಳೊಂದಿಗೆ ಲಗತ್ತಿಸಿರುವ ಪ್ರಶ್ನಾವಳಿಗೆ ಸಮರ್ಪಕ ಉತ್ತರವನ್ನು ನೀಡುವುದರ ಮೇಲೆ ಕ್ರಿಯಾ ಯೋಗ ದೀಕ್ಷೆಯನ್ನು ಪಡೆಯುವುದು ನಿರ್ಭರಿತವಾಗುತ್ತದೆ.
- ನೀವು ಪ್ರಶ್ನಾವಳಿಯಲ್ಲಿ ಗಮನಿಸಿರುವಂತೆ, ಕ್ರಿಯಾ ಯೋಗವನ್ನು ಪಡೆಯಲ ಅರ್ಹರಾಗಲು, ಭಕ್ತರು ಮೊದಲ ಮೂರು ಪ್ರಾಥಮಿಕ ಯೋಗದಾ ತಂತ್ರಗಳನ್ನು ನಿಯತವಾಗಿ ಹಲವಾರು ತಿಂಗಳುಗಳ ವರೆಗೆ ಅಭ್ಯಾಸ ಮಾಡುತ್ತಿರಬೇಕು.
- ನೀವು ವೈಎಸ್ಎಸ್ ಗುರು ಪರಂಪರೆ ಹಾಗೂ ಯೋಗದಾ ಸತ್ಸಂಗ ಮಾರ್ಗವನ್ನು ಪೂಜ್ಯ ಭಾವನೆಯಿಂದ ನೋಡುತ್ತೀರಿ ಮತ್ತು ಅದಕ್ಕೆ ನಿಷ್ಠಾವಂತರಾಗಿರುತ್ತೀರಿ ಎಂಬ ಕ್ರಿಯಾ ಯೋಗ ಪ್ರತಿಜ್ಞೆಗೆ ಸಹಿ ಹಾಕಿ ಸಲ್ಲಿಸಬೇಕು.
ದಯವಿಟ್ಟು ಗಮನಿಸಿ: ನೀವು ಕ್ರಿಯಾ ಯೋಗ ದೀಕ್ಷೆಗೆ ಅರ್ಜಿ ಸಲ್ಲಿಸ ಬಯಸಿದಲ್ಲಿ ಮತ್ತು ಪ್ರಶ್ನಾವಳಿಗೆ ಇನ್ನೂ ಉತ್ತರಗಳನ್ನು ನೀಡದೇ ಇದ್ದಲ್ಲಿ, ಸನ್ಯಾಸಿಗಳ ಪರಿಶೀಲನೆಗಾಗಿ, ನೀವು ಕಾರ್ಯಕ್ರಮದಲ್ಲಿ ಭಾಗವಹಿಸುವ ಸ್ಥಳದಲ್ಲೇ ಅದನ್ನು ಸಲ್ಲಿಸಬಹುದು.
ಕ್ರಿಯಾ ಯೋಗ ದೀಕ್ಷಾ ಸಮರಾಂಭದಲ್ಲಿ ಭಾಗವಹಿಸುವಿಕೆ:
- ಯಾರೆಲ್ಲ ಸಮಾರಂಭದಲ್ಲಿ ಕ್ರಿಯಾ ಯೋಗ ದೀಕ್ಷೆಯನ್ನು ಪಡೆಯಲು ಇಚ್ಛಿಸುವರೋ, ಮತ್ತು ಕ್ರಿಯಾ ಯೋಗ ಪಾಠಗಳನ್ನು ಪಡೆದಿದ್ದರೂ ಸಮಾರಂಭದಲ್ಲಿ ಭಾಗವಹಿಸದೇ ಇದ್ದವರು; ಮತ್ತು ಸಮಾರಂಭದಲ್ಲಿ ಭಾಗವಹಿಸಲು ಇಚ್ಛಿಸುವ ಈಗಾಗಲೇ ದೀಕ್ಷೆಯನ್ನು ಪಡೆದ ಕ್ರಿಯಾಬಾನ್‌ಗಳೂ ಸಂಬಂಧಪಟ್ಟ ಸ್ಥಳದಲ್ಲಿ ಕನಿಷ್ಠ ಒಂದು ದಿನ ಮುಂಚೆಯೇ ನೋಂದಾಯಿಸಿಕೊಳ್ಳಬೇಕು ಮತ್ತು ಸಮಾರಂಭದಲ್ಲಿ ಭಾಗವಹಿಸಲು ಅವರಿಗೆ ನೀಡಿರುವ ಪ್ರವೇಶಪತ್ರವನ್ನು ತರಬೇಕು.
- ಕ್ರಿಯಾ ಯೋಗ ದೀಕ್ಷಾ ಸಮಾರಂಭದಲ್ಲಿ ಭಾಗವಹಿಸಲು ನೀವು ನೋಂದಾಯಿಸಿಕೊಳ್ಳುವಾಗ ಹಾಗೂ ಪುನರಾವಲೋಕನಕ್ಕೆ ಹೋಗುವಾಗ ನಿಮ್ಮ ಕ್ರಿಯಾಬಾನ್ ಗುರುತಿನ ಕಾರ್ಡನ್ನು ನಿಮ್ಮೊಡನೆ ತಂದು ತೋರಿಸಿ.
ಎಂದಿನಂತೆ, ನೋಂದಣಿ ಡೆಸ್ಕ್, ವಸತಿ ವಿತರಣೆ, ಆಡಿಯೋ-ವೀಡಿಯೋಗಳು, ಭೋಜನ ವ್ಯವಸ್ಥೆ, ನೈರ್ಮಲ್ಯ, ಬಂದವರನ್ನು ಕೂರಿಸುವುದು ಮತ್ತು ಇತರ ವಿಭಾಗಗಳಲ್ಲಿ ಭಕ್ತ-ಸ್ವಯಂಸೇವಕರ ಅವಶ್ಯಕತೆಯಿರುತ್ತದೆ. ಈ ಕೆಲವು ವಿಭಾಗಗಳಲ್ಲಿ, ಕಾರ್ಯಕ್ರಮ ಪ್ರಾರಂಭವಾಗುವ ಎರಡು ದಿನ ಮುಂಚೆಯೇ ಕೆಲವು ಸ್ವಯಂಸೇವಕರು ಬೇಕಾಗಿರುತ್ತಾರೆ. ನೀವು ಸ್ವಯಂಸೇವೆಯನ್ನು ನೀಡ ಬಯಸಿದಲ್ಲಿ, ಅದನ್ನು ನಿಮ್ಮ ನೋಂದಣಿ ಅರ್ಜಿಯಲ್ಲಿ ದಯವಿಟ್ಟು ನಮೂದಿಸಿ.
ನಿಮ್ಮ ದೇಣಿಗೆಯ ಅವಶ್ಯಕತೆಯಿದೆ
ಈ ಕಾರ್ಯಕ್ರಮಗಳನ್ನು ಏರ್ಪಡಿಸುವುದರಕ್ಕೆ ತಗಲುವ ವಿವಿಧ ಖರ್ಚುಗಳಿಗೆ ನಾವು ದೇಣಿಗೆಯನ್ನು ನೀಡಿರೆಂದು ಕೇಳಿಕೊಳ್ಳುತ್ತೇವೆ. ಅಲ್ಪ ಸಾಮರ್ಥ್ಯವಿರುವವರೂ ಭಾಗವಹಿಸಲಿ ಎಂಬ ಕಾರಣದಿಂದ ನೋಂದಣಿ ಶುಲ್ಕವನ್ನು ಕಡಿಮೆ ಇಡಲಾಗಿದೆ. ಈ ಅನುದಾನವನ್ನು ಸರಿದೂಗಿಸಲು, ತತ್ಪರಿಣಾಮವಾಗಿ ಗುರುದೇವರ ಆತಿಥ್ಯವನ್ನು ಎಲ್ಲ ನಿಷ್ಠಾವಂತ ಅನ್ವೇಷಕರಿಗೂ ನೀಡಲು ಯಾರು ಅಧಿಕ ಮೊತ್ತವನ್ನು ನೀಡುತ್ತಾರೋ ಅವರಿಗೆ ನಾವು ಆಭಾರಿಯಾಗಿದ್ದೇವೆ.
ನೋಂದಣಿ ಹಾಗೂ ವಿಚಾರಣೆಗಳ ಸಂಪರ್ಕದ ವಿವರಗಳು
ಯೋಗದಾ ಸತ್ಸಂಗ ಶಾಖಾ ಮಠ — ರಾಂಚಿ
ಪರಮಹಂಸ ಯೋಗಾನಂದ ಪಥ
ರಾಂಚಿ 834 001
ದೂರವಾಣಿ: (0651) 6655 555 (ಸೋಮವಾರದಿಂದ ಶನಿವಾರದ ವರೆಗೆ, ಬೆಳಿಗ್ಗೆ 9:30 ರಿಂದ ಸಂಜೆ 4:30 ರ ವರೆಗೆ)
ಇಮೇಲ್: [email protected]