ಇಂದಿನ ಜಗತ್ತಿನಲ್ಲಿ ಪ್ರಕ್ಷುಬ್ಧತೆ ಮತ್ತು ಅನಿಶ್ಚಿತತೆಯನ್ನು ಎದುರಿಸುತ್ತಿರುವ ಅನೇಕ ಜನರು ತಮಗಾಗಿ ಮತ್ತು ತಮ್ಮ ಕುಟುಂಬದವರಿಗಾಗಿ ಅರಿವು ಮತ್ತು ಮಾರ್ಗದರ್ಶನಕ್ಕಾಗಿ ಹುಡುಕಾಡುತ್ತಿದ್ದಾರೆ.
ಪರಮಹಂಸ ಯೋಗಾನಂದರ ವಿವೇಚನಾಯುಕ್ತ ಬೋಧನೆಗಳಲ್ಲಿ, ನಾವು ನಮ್ಮ ಯಾವುದೇ ಬಿಕ್ಕಟ್ಟುಗಳಿಂದ ಪಾರಾಗಲು ಮಾರ್ಗದರ್ಶನ ಹಾಗೂ ಬೆಂಬಲವನ್ನು ಕಾಣುತ್ತೇವೆ. ಈ ಕೆಳಗೆ ಕೊಟ್ಟಿರುವ ಲಿಂಕ್‌ಗಳಲ್ಲಿ ಪರಮಹಂಸಜಿಯವರ ಮತ್ತು ಅವರ ಶಿಷ್ಯರುಗಳ ಸ್ಪೂರ್ತಿ ಹಾಗೂ ಪ್ರೋತ್ಸಾಹದಾಯಕ ನುಡಿಗಳಿವೆ. ನೀವು ಇವುಗಳಿಂದ ಭಗವಂತನ ಅನಂತ ಪ್ರೇಮ ಹಾಗೂ ಸುರಕ್ಷಾ ಭಾವದಲ್ಲಿನ ವಿಶ್ವಾಸವನ್ನು ಪುನಃಶ್ಚೇತನಗೊಳಿಸಿಕೊಳ್ಳುವಿರೆಂದು ಮತ್ತು ನೀವು ಆ ಭಗವಂತನ ಅಮರ ಮಕ್ಕಳಾಗಿ ಶಕ್ತಿ, ತಿಳುವಳಿಕೆ ಹಾಗೂ ಸರ್ವರಿಗಾಗಿರುವ ಕರುಣೆಯಿಂದ ಈ ಭೂಮಿಯ ಮೇಲೆ ಜೀವನ ನಡೆಸುವ ಸಾಮರ್ಥ್ಯದಲ್ಲಿನ ವಿಶ್ವಾಸವನ್ನು ಪುನಃಶ್ಚೇತನಗೊಳಿಸಿಕೊಳ್ಳುವಿರೆಂದು ನಮಗೆ ಭರವಸೆಯಿದೆ.
ಪರಮಹಂಸಜಿಯವರಿಂದ ಕಾರ್ಯರೂಪಕ್ಕೆ ತರಬಹುದಾದ ಸ್ಫೂರ್ತಿದಾಯಕ ನುಡಿಗಳು
ನಾವು ವಿವಿಧ ಜನಾಂಗ, ಪಂಗಡ, ವರ್ಣ, ವರ್ಗ ಹಾಗೂ ರಾಜಕೀಯ ಪೂರ್ವಾಗ್ರಹಗಳಿಂದ ಬೇರೆ ಬೇರೆಯಾದಂತೆ ತೋರಿದರೂ ಕೂಡ, ಒಬ್ಬನೇ ಭಗವಂತನ ಮಕ್ಕಳಾಗಿ, ನಮಗೆ ನಮ್ಮ ಆತ್ಮಗಳಲ್ಲಿ ಭ್ರಾತೃತ್ವ ಮತ್ತು ಈ ವಿಶ್ವವೇ ನಮ್ಮ ಕುಟುಂಬವೆಂಬ ಅನಿಸಿಕೆಯನ್ನು ಹೊಂದಲು ಸಾಧ್ಯವಿದೆ….ನಾವು ನಮ್ಮ ಹೃದಯಗಳಲ್ಲಿ ದ್ವೇಷ ಮತ್ತು ಸ್ವಾರ್ಥದಿಂದ ಬಿಡುಗಡೆ ಹೊಂದುವುದು ಹೇಗೆಂದು ಕಲಿಯಬಹುದು. ರಾಷ್ಟ್ರ-ರಾಷ್ಟ್ರಗಳ ನಡುವೆ ಸಾಮರಸ್ಯವು ಇರಲೆಂದೂ, ಅವರೆಲ್ಲರೂ ಕೈ ಕೈ ಹಿಡಿದು ಜೊತೆಗೂಡಿ ಒಟ್ಟಿಗೆ ಒಂದು ನವನಾಗರೀಕತೆಯತ್ತ ನಡೆಯಲೆಂದು ಪ್ರಾರ್ಥಿಸೋಣ.
— ಪರಮಹಂಸ ಯೋಗಾನಂದ
ಅಭ್ಯಾಸಕ್ಕಾಗಿ ಒಂದು ದೃಢೀಕರಣ: “ನಾನು ವಿರಮಿಸುತ್ತ, ನನ್ನೆಲ್ಲ ಮಾನಸಿಕ ಹೊರೆಗಳನ್ನು ಬದಿಗಿರಿಸಿ, ನನ್ನ ಮೂಲಕ ಭಗವಂತನು ತನ್ನ ಪರಿಪೂರ್ಣ ಪ್ರೇಮ, ಶಾಂತಿ ಮತ್ತು ಜ್ಞಾನವನ್ನು ವ್ಯಕ್ತಪಡಿಸಲು ಸಮ್ಮತಿ ನೀಡುತ್ತೇನೆ.”
ಭಯವನ್ನು ಜಯಿಸಲು ಒಂದು ಸರಳ ಅಭ್ಯಾಸ: “ಭಯವು ಹೃದಯದಿಂದ ಬರುತ್ತದೆ. ನಿಮಗೆ ಯಾವುದೋ ಒಂದು ರೋಗದ ಅಥವಾ ಅಪಘಾತದ ಭಯ ಆವರಿಸಿಕೊಂಡರೆ, ಆಳವಾಗಿ, ನಿಧಾನವಾಗಿ ಮತ್ತು ಲಯಬದ್ಧವಾಗಿ ಅನೇಕ ಬಾರಿ ಉಚ್ಛ್ವಾಸ, ನಿಶ್ವಾಸ ಮಾಡುತ್ತ, ಪ್ರತಿ ನಿಶ್ವಾಸದೊಂದಿಗೆ ದೇಹವನ್ನು ಸಡಿಲಿಸಿ. ಇದು ರಕ್ತಪರಿಚಲನೆ ಸಾಮಾನ್ಯ ಸ್ಥಿತಿಗೆ ಬರಲು ನೆರವಾಗುತ್ತದೆ. ನಿಮ್ಮ ಹೃದಯ ನಿಜವಾಗಿಯೂ ಶಾಂತವಾಗಿದ್ದರೆ ನಿಮಗೆ ಭಯದ ಅನುಭವವಾಗುವುದೇ ಇಲ್ಲ.”

ನಕಾರಾತ್ಮಕ ಭಾವನೆಗಳಿಂದ ಮುಕ್ತಿ ಪಡೆಯಲು ಒಂದು ತಂತ್ರ
ವೈಎಸ್‌ಎಸ್/ಎಸ್‌ಆರ್‌ಎಫ್ ಅಧ್ಯಕ್ಷರಾದ ಶ್ರೀ ಶ್ರೀ ಚಿದಾನಂದಗಿರಿಯವರ ಸಂದೇಶವನ್ನು ಓದಿ