“ ...ಮೊದಲಿನಿಂದಲೂ ನಿಮ್ಮೊಳಗೆ ಏನೋ ಒಂದು ಶಕ್ತಿ ಇತ್ತು ಆದರೆ ಅದು ನಿಮಗೆ ತಿಳಿದಿರಲಿಲ್ಲ ಎಂದು ನೀವು ಅರಿತುಕೊಳ್ಳುವಿರಿ.”

— ಪರಮಹಂಸ ಯೋಗಾನಂದ

yss-logo-kannada

“ ...ಮೊದಲಿನಿಂದಲೂ ನಿಮ್ಮೊಳಗೆ ಏನೋ ಒಂದು ಶಕ್ತಿ ಇತ್ತು ಆದರೆ ಅದು ನಿಮಗೆ ತಿಳಿದಿರಲಿಲ್ಲ ಎಂದು ನೀವು ಅರಿತುಕೊಳ್ಳುವಿರಿ. ”

— ಪರಮಹಂಸ ಯೋಗಾನಂದ

ಪರಮಹಂಸ ಯೋಗಾನಂದ

ಆಧ್ಯಾತ್ಮಿಕ ಮೇರುಕೃತಿ ಯೋಗಿಯ ಆತ್ಮಕಥೆಯ ಲೇಖಕರಾದ ಯೋಗಾನಂದಜಿ ಅವರನ್ನು ವಿಶ್ವದ ಶ್ರೇಷ್ಠ ಆಧ್ಯಾತ್ಮಿಕ ಗುರುಗಳಲ್ಲಿ ಒಬ್ಬರೆಂದು ಗುರುತಿಸಲಾಗುತ್ತದೆ. ಅವರ ಕ್ರಿಯಾ ಯೋಗ ಧ್ಯಾನ ತಂತ್ರಗಳು ಮತ್ತು “ಬದುಕುವುದು-ಹೇಗೆ” ಬೋಧನೆಗಳು ಲಕ್ಷಾಂತರ ಜನರ ಜೀವನವನ್ನು ಉದ್ಧರಿಸಿವೆ.

ಸಾಧನ ಸಂಗಮಗಳು 2025

ಅಕ್ಟೋಬರ್‌ನಿಂದ ಡಿಸೆಂಬರ್ 2025 ರವರೆಗೆ ನಡೆಯಲಿರುವ ಸಾಧನಾ ಸಂಗಮಗಳಲ್ಲಿ ಭಾಗವಹಿಸಲು, ವೈಎಸ್ಎಸ್/ ಎಸ್‌ಆರ್‌ಎಫ್‌ ನ ಸಮಸ್ತ ಭಕ್ತರನ್ನು ನಾವು ಹಾರ್ದಿಕವಾಗಿ ಸ್ವಾಗತಿಸುತ್ತೇವೆ. ಈ ಕಾರ್ಯಕ್ರಮಗಳಿಗೆ ನೋಂದಣಿ ಈಗ ಪ್ರಾರಂಭವಾಗಿದೆ!

ಕಾರ್ಯಕ್ರಮಗಳು

ವೈಎಸ್ಎಸ್ ಸನ್ಯಾಸಿಗಳು ನಡೆಸಿಕೊಡುವ ಆನ್‌ಲೈನ್ ಮತ್ತು ವೈಯಕ್ತಿಕ ಧ್ಯಾನಗಳು, ಧ್ಯಾನ ಶಿಬಿರಗಳು ಮತ್ತು ಕಾರ್ಯಕ್ರಮಗಳಲ್ಲಿ ಭಾಗವಹಿಸಲು ನಾವು ನಿಮ್ಮನ್ನು ಆಹ್ವಾನಿಸುತ್ತೇವೆ.

ಯೋಗದಾ ಸತ್ಸಂಗ ಪತ್ರಿಕೆ — 2025 ವಾರ್ಷಿಕ ಸಂಚಿಕೆ

ಪರಮಹಂಸ ಯೋಗಾನಂದರು, ಈಗಿನ ಮತ್ತು ಹಿಂದಿನ ವೈಎಸ್ಎಸ್ / ಎಸ್‌ಆರ್‌ಎಫ್‌ ಅಧ್ಯಕ್ಷರು, ಹಾಗೂ ಹಿರಿಯ ಸನ್ಯಾಸಿಗಳು ಮತ್ತು ಇತರ ಗಣ್ಯ ಲೇಖಕರಿಂದ ಅಪಾರ ಸ್ಫೂರ್ತಿಯನ್ನು ಒಳಗೊಂಡಿರುವ ಯೋಗದಾ ಸತ್ಸಂಗ ಪತ್ರಿಕೆಯ 2025ರ ವಾರ್ಷಿಕ ವರ್ಷಾಂತ್ಯ ಸಂಚಿಕೆಯು ಈಗ ಲಭ್ಯವಿದೆ!