ಯೋಗದಾ ಸತ್ಸಂಗ ಶಾಖಾ ಆಶ್ರಮ – ದ್ವಾರಾಹಟ್

ಯೋಗದಾ ಸತ್ಸಂಗ ಶಾಖಾ ಆಶ್ರಮ ದ್ವಾರಾಹಟ್

ಉತ್ತರಾಖಂಡ ರಾಜ್ಯದ ಕುಮಾವೋ ಪ್ರದೇಶದ ಅಲ್ಮೋರಾ ಜಿಲ್ಲೆಯಲ್ಲಿರುವ ದ್ವಾರಾಹಟ್ ಒಂದು ಪುಟ್ಟ ನಗರ. ಅದು ಸರಾಸರಿ 5000 ಅಡಿಗಳ ( 1500ಮೀಟರ್) ಎತ್ತರದಲ್ಲಿದೆ. ಹವಾಮಾನವು ವರ್ಷಪೂರ್ತಿ ತಣ್ಣಗೆ ಇರುತ್ತದೆ ಮತ್ತು ಚಳಿಗಾಲದ ತಿಂಗಳಿನಲ್ಲಿ (ನವೆಂಬರ್-ಫೆಬ್ರವರಿ), ಎಲ್ಲಕ್ಕಿಂತ ಹೆಚ್ಚಾಗಿ ಶೀತದ ವಾತಾವರಣ ಇರುತ್ತದೆ.
ವೈಎಸ್ಎಸ್ ಆಶ್ರಮವು ದ್ವಾರಾಹಟ್ ಪಟ್ಟಣದಿಂದ ಸುಮಾರು 1.5 ಕಿಲೋಮೀಟರ್ ದೂರದಲ್ಲಿದೆ. ಮತ್ತು ಎಲ್ಲಾ ಕಡೆಗಳಿಂದಲೂ ಪೈನ್ ಕಾಡಿನಿಂದ ಸುತ್ತುವರೆಯಲ್ಪಟ್ಟಿದೆ. ಪಟ್ಟಣದಿಂದ ಆಶ್ರಮಕ್ಕೆ ಹೋಗುವ ದಾರಿಯಲ್ಲಿ ಬಲಗಡೆ ಸರ್ಕಾರಿ ಅತಿಥಿ ಗೃಹವಿದೆ. ಅಲ್ಲಿಯೇ ಶ್ರೀ ದಯಾ ಮಾತಾಜಿಯವರು 1963-64 ರಲ್ಲಿ ಗುಹೆಗೆ ಭೇಟಿ ನೀಡುವಾಗ ತಂಗಿದ್ದರು. ಆಗಿನ್ನೂ ವೈಎಸ್ಎಸ್ ಆಶ್ರಮವನ್ನು ನಿರ್ಮಿಸಿರಲಿಲ್ಲ.

ವೈಎಸ್‌ಎಸ್‌ಗೆ ಹೊಸಬರೇ? ವೈಎಸ್‌ಎಸ್ ಪಾಠಗಳು ಹೇಗೆ ನಿಮ್ಮ ಜೀವನವನ್ನು ಪರಿವರ್ತಿಸುತ್ತವೆ ಮತ್ತು ಸಮತೋಲನವನ್ನು ತರುತ್ತವೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ.

ಮಹಾವತಾರ ಬಾಬಾಜಿಯವರ ಗುಹೆ

ಗುಹೆಯ ಐತಿಹಾಸಿಕ ಮಹತ್ವವನ್ನು ಅರ್ಥ ಮಾಡಿಕೊಳ್ಳಲು ಭಕ್ತರು ಯೋಗಿಯ ಆತ್ಮಕಥೆಯಲ್ಲಿನ ಅಧ್ಯಾಯ- 34, “ಹಿಮಾಲಯದಲ್ಲಿ ಅರಮನೆಯ ಸೃಷ್ಟಿ” ಮತ್ತು ಶ್ರೀ ದಯಾಮಾತಾರವರ ಓನ್ಲಿ ಲವ್‌ ಪುಸ್ತಕದ “ಎ ಬ್ಲೆಸಿಂಗ್‌ ಫ್ರಮ್‌ ಮಹಾವತಾರ ಬಾಬಾಜಿ” ಇವುಗಳನ್ನು ಓದಬೇಕೆಂದು ಸೂಚಿಸುತ್ತೇವೆ.

ಬಾಬಾಜಿಯವರ ಗುಹೆಯ ಈ ಪ್ರದೇಶದಲ್ಲಿ, ಬಾಬಾಜಿಯವರು 1861ರಲ್ಲಿ ಲಾಹಿರಿ ಮಹಾಶಯರವರಿಗೆ ದೀಕ್ಷೆ ನೀಡಿದರು ಹಾಗೂ ಇದು ಈ ದ್ವಾಪರ ಯುಗದಲ್ಲಿ ಕ್ರಿಯಾಯೋಗದ ಜನ್ಮಸ್ಥಳವಾಗಿದೆ. ಜಗತ್ತಿನ ಎಲ್ಲಾ ಕ್ರಿಯಾಬಾನರು ಈ ಘಟನೆಗೆ ತಮ್ಮ ಪರಂಪರೆಯನ್ನು ನಿರೂಪಿಸಬಹುದು. (2011 – ಕ್ರಿಯಾಯೋಗದ 150ನೆಯ ವಾರ್ಷಿಕೋತ್ಸವ)

ಗುಹೆಯು ಪಾಂಡುಖೋಲಿ ಪರ್ವತದ ಮೇಲೆ, ಕುಕುಚಿನ ಎಂಬ ಕುಗ್ರಾಮ (ದ್ವಾರಾಹಟ್‌ನಿಂದ 25 ಕಿ.ಮೀ) ದಿಂದಾಚೆಗಿದೆ.

ಗುಹೆಗೆ ಹೋಗುವ ಪರ್ವತದ ಮಾರ್ಗವನ್ನು ನವೀಕರಿಸಲಾಗಿದೆ. ಗುಹೆಗೆ ಹತ್ತಿಕೊಂಡು ಹೋಗಲು ಸಾಮಾನ್ಯ ವ್ಯಕ್ತಿಗೆ ಸುಮಾರು ಒಂದು ಗಂಟೆ ಬೇಕಾಗಬಹುದು. ಮಳೆಗಾಲದಲ್ಲಿ, ಮಾರ್ಗದಲ್ಲಿ ಕೆಲವು ಝರಿಗಳು ಇದ್ದು, ಯೋಗಿಯ ಆತ್ಮಕಥೆಯಲ್ಲಿ ಬರುವ ಗೋಗಾಶ್ ನದಿಯನ್ನು ಸೇರಿಕೊಳ್ಳುತ್ತವೆ.

ಆಶ್ರಮದಿಂದ ಗುಹೆಗೆ ಹೋಗಿ ಬರಲು ಸುಮಾರು 6 ರಿಂದ 8 ಗಂಟೆಗಳು ಬೇಕಾಗುತ್ತವೆ.

ಹೆಚ್ಚಿನ ವಿವರಗಳಿಗಾಗಿ ದಯಮಾಡಿ ದ್ವಾರಾಹಟ್ ಆಶ್ರಮವನ್ನು ಸಂಪರ್ಕಿಸಿ.

ಮಹಾವತಾರ ಬಾಬಾಜಿಯವರ ಗುಹೆ

ಕಾರ್ಯಕ್ರಮಗಳು ಮತ್ತು ಚಟುವಟಿಕೆಗಳು

ಪ್ರತಿ ವರ್ಷವೂ ಆಶ್ರಮವು ಎರಡು ಆರೋಗ್ಯ ಶಿಬಿರಗಳನ್ನು (ಏಪ್ರಿಲ್ ಮತ್ತು ನವೆಂಬರ್‌ನಲ್ಲಿ), ಮಾರ್ಚ್‌ನಲ್ಲಿ ಒಂದು ಆಧ್ಯಾತ್ಮಿಕ ಶಿಬಿರವನ್ನು, ಸೆಪ್ಟೆಂಬರ್ 26ರಿಂದ 30ರವರೆಗೆ ಕ್ರಿಯಾಯೋಗ ದೀಕ್ಷೆಯನ್ನು ಒಳಗೊಂಡ ಒಂದು ಸಾಧನ ಸಂಗಮವನ್ನು, ಜುಲೈ 25ರಂದು ಬಾಬಾಜಿಯವರ ಗುಹೆಯವರೆಗೆ, ಮಹಾವತಾರ ಬಾಬಾಜಿಯವರ ಸ್ಮೃತಿ ದಿವಸದ ಮೆರವಣಿಗೆಯನ್ನು ಮತ್ತು ಜನವರಿ 5ರಂದು ಗುರೂಜಿಯವರ ಜನ್ಮದಿನೋತ್ಸವದ ಅಂಗವಾಗಿ ಬೆಳಿಗ್ಗೆ ಪಟ್ಟಣದವರೆಗೆ ವೈಎಸ್ಎಸ್ ದ್ವಾರಾಹಟ್‌ ಶಾಲೆಯ ವಿದ್ಯಾರ್ಥಿಗಳು ಮತ್ತು ಭಕ್ತರಿಂದ ಮೆರವಣಿಗೆಯನ್ನು ಸಂಜೆಯ ವೇಳೆ ಸ್ಥಳೀಯ ಜನರಿಂದ ಭಜನೆ ಮತ್ತು ರಾತ್ರಿ ಸ್ಮರಣಾರ್ಥ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು.

ವೈದ್ಯರು ಮತ್ತು ವೈಎಸ್ಎಸ್ ಸ್ವಯಂಸೇವಕರು ವೈದ್ಯಕೀಯ ಶಿಬಿರಗಳಲ್ಲಿ ಭಾಗವಹಿಸಲು ಸ್ವಾಗತಿಸುತ್ತೇವೆ. ಆಸಕ್ತಿಯುಳ್ಳ ಭಕ್ತರು ದ್ವಾರಾಹಟ್ ಆಶ್ರಮದ ಪ್ರಭಾರ ಸ್ವಾಮೀಜಿಯವರನ್ನು ದೂರವಾಣಿ ಮೂಲಕ ಅಥವಾ ಇ-ಮೇಲ್ ಮೂಲಕ ಸಂಪರ್ಕಿಸಬಹುದು.

ನಿಮ್ಮ ಭೇಟಿಯನ್ನು ಯೋಜಿಸಿಕೊಳ್ಳಿ

ವೈಎಸ್‌ಎಸ್‌ ಮತ್ತು ಎಸ್‌ಆರ್‌ಎಫ್‌ ಪಾಠಗಳ ವಿದ್ಯಾರ್ಥಿಗಳು ಐದು ದಿನಗಳವರೆಗೆ ಆಶ್ರಮದಲ್ಲಿ ಉಳಿಯಲು ಸ್ವಾಗತ. ರೀಚಾರ್ಜ್ ಮಾಡಿಕೊಳ್ಳಲು ಮತ್ತು ಪುನಶ್ಚೇತನಕ್ಕಾಗಿ ವೈಯಕ್ತಿಕ ಧ್ಯಾನ ಶಿಬಿರವನ್ನು ಕೈಗೊಳ್ಳಲು ಅಥವಾ ಆಶ್ರಮವು ನಡೆಸಿಕೊಡುವ ಯಾವುದಾದರೂ ಒಂದು ಧ್ಯಾನ ಶಿಬಿರದಲ್ಲಿ ನಮ್ಮೊಂದಿಗೆ ಸೇರಿಕೊಳ್ಳಲು ನಾವು ಭಕ್ತರನ್ನು ಪ್ರೋತ್ಸಾಹಿಸುತ್ತೇವೆ. ಈ ಧ್ಯಾನ ಶಿಬಿರಗಳ ಸಮಯದಲ್ಲಿ, ವೈಎಸ್‌ಎಸ್‌ ಸನ್ಯಾಸಿಗಳು ದಿನಕ್ಕೆ ಎರಡು ಬಾರಿ ನಡೆಸಿಕೊಡುವ ಸಮೂಹ ಧ್ಯಾನಗಳಲ್ಲಿ ನೀವು ಭಾಗವಹಿಸಬಹುದು ಮತ್ತು ಯೋಗದಾ ಸತ್ಸಂಗ ಬೋಧನೆಗಳ ಅಧ್ಯಯನ ಮತ್ತು ಅಭ್ಯಾಸದಲ್ಲಿ ಆಧ್ಯಾತ್ಮಿಕ ಸಲಹೆ ಮತ್ತು ಮಾರ್ಗದರ್ಶನವನ್ನು ಪಡೆಯಬಹುದು.

ಆಶ್ರಮದಲ್ಲಿ ಸ್ಥಳ ಕಾದಿರಿಸಲು ದಯವಿಟ್ಟು ಕೆಳಗಿನ ಬಟನ್ ಮೇಲೆ ಒತ್ತಿ.

ನಮ್ಮನ್ನು ಸಂಪರ್ಕಿಸಿ

ಯೋಗದಾ ಸತ್ಸಂಗ ಶಾಖಾ ಆಶ್ರಮ – ದ್ವಾರಾಹಟ್
Dwarahat - 263653
Almora
Uttarakhand

ಇದನ್ನು ಹಂಚಿಕೊಳ್ಳಿ