ಅತ್ಯಂತ ಸಂತೋಷದಿಂದ, ನಾವು ನಿಮಗೆ ವಿವಿಧ ಕಾರ್ಯಕ್ರಮಗಳ ಕುರಿತು ತಿಳಿಸುತ್ತಿದ್ದೇವೆ: 2025 ನೇ ವರ್ಷದಲ್ಲಿ, ಸಂಗಮಗಳು, ಧ್ಯಾನ ಶಿಬಿರಗಳು ಮತ್ತು ವೈಎಸ್ಎಸ್ ಸಂನ್ಯಾಸಿಗಳ ಪ್ರವಾಸ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಸಂಪೂರ್ಣ ವೇಳಾಪಟ್ಟಿಯನ್ನು ಇಲ್ಲಿ ವೀಕ್ಷಿಸಿ.
ಪ್ರತಿ ವರ್ಷ ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾದ ಸಂನ್ಯಾಸಿಗಳು ಪರಮಹಂಸ ಯೋಗಾನಂದರ ಆತ್ಮ-ವಿಮೋಚನಾ ಬೋಧನೆಗಳಿಗೆ ನಿರಂತರವಾಗಿ ಬೆಳೆಯುತ್ತಿರುವ ಬೇಡಿಕೆಯನ್ನು ಪೂರೈಸುವುದಕ್ಕಾಗಿ ದೇಶಾದ್ಯಂತ ನಗರಗಳಿಗೆ ಭೇಟಿ ನೀಡುತ್ತಾರೆ. ಅವರು ವಾರಾಂತ್ಯದ ಧ್ಯಾನ ಶಿಬಿರಗಳು ಮತ್ತು ಸ್ಫೂರ್ತಿದಾಯಕ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಾರೆ. ಇದರಲ್ಲಿ ಪರಮಹಂಸಜಿಯವರ “ಬದುಕುವುದು-ಹೇಗೆ” ಬೋಧನೆಗಳು, ವೈಎಸ್ಎಸ್ ಯೋಗ ತಂತ್ರಗಳ ಪುನರಾವಲೋಕನ, ಸಮೂಹ ಧ್ಯಾನಗಳು, ದಿವ್ಯಗೀತೆಗಳ ಗಾಯನ, ಶ್ರವಣ-ದೃಶ್ಯ ಪ್ರಸ್ತುತಿಗಳು ಮತ್ತು ಕ್ರಿಯಾ ಯೋಗ ದೀಕ್ಷಾ ಸಮಾರಂಭಗಳು ಸೇರಿರುತ್ತವೆ.
ಉಪನ್ಯಾಸ ಪ್ರವಾಸಗಳು ಹೊಸಬರಿಗೆ ಪರಮಹಂಸ ಯೋಗಾನಂದರ ಬೋಧನೆಗಳ ಪರಿಚಯವನ್ನು ನೀಡುತ್ತವೆ ಮತ್ತು ಪಾಠಗಳ ವಿದ್ಯಾರ್ಥಿಗಳಿಗೆ ವೈಎಸ್‌ಎಸ್ ಧ್ಯಾನ ತಂತ್ರಗಳಲ್ಲಿ ಆಳವಾದ ಮಾರ್ಗದರ್ಶನವನ್ನು ನೀಡುತ್ತವೆ. ಸದಸ್ಯರಿಗೆ ಆಯೋಜಿತವಾದ ಕಾರ್ಯಕ್ರಮಗಳು ಮತ್ತು ಪ್ರಾದೇಶಿಕ ಧ್ಯಾನ ಶಿಬಿರಗಳು, ವೈಎಸ್‌ಎಸ್ ಧ್ಯಾನ ತಂತ್ರಗಳ ಬಗೆಗಿನ ತರಗತಿಗಳನ್ನು ಒಳಗೊಂಡಿರುತ್ತವೆ ಹಾಗೂ ಸಮೂಹ ಧ್ಯಾನ ಮತ್ತು ಸತ್ಸಂಗಕ್ಕೆ ಅವಕಾಶಗಳನ್ನು ಒದಗಿಸುತ್ತವೆ. ಕಾರ್ಯಕ್ರಮಗಳು ಪರಮಹಂಸ ಯೋಗಾನಂದರ ಬೋಧನೆಗಳ ಇತರ ಪ್ರಮುಖ ಅಂಶಗಳನ್ನೂ ಒಳಗೊಂಡಿರುತ್ತವೆ, ಅವುಗಳೆಂದರೆ:
- ದೈನಂದಿನ ಜೀವನದಲ್ಲಿ ಧ್ಯಾನದ ಮಹತ್ವ
- ಹೆಚ್ಚಿನ ಸಾಮರಸ್ಯದ ಜೀವನವನ್ನು ಹೇಗೆ ನಡೆಸುವುದು
- ಆಂತರಿಕ ಅಗತ್ಯಗಳನ್ನು ಹೊರಗಿನ ಬೇಡಿಕೆಗಳೊಂದಿಗೆ ಸಮತೋಲನಗೊಳಿಸಲು ಕಲಿಯುವುದು
ಮೌನದ ಆಂತರಿಕ ಮಂದಿರವನ್ನು ನಿರ್ಮಿಸಲು ನಮ್ಮನ್ನು ಪ್ರೇರೇಪಿಸುತ್ತಾ, ನಮ್ಮ ಪ್ರೀತಿಯ ಗುರುದೇವರು ಹೇಳಿದ್ದಾರೆ: “ನಿಮ್ಮ ಮನಸ್ಸಿನ ಬಾಗಿಲುಗಳ ಹಿಂದಿನ ಮೌನದಲ್ಲಿ ಎಂತಹ ಸಂತೋಷವು ಆವಿಷ್ಕಾರಕ್ಕಾಗಿ ಕಾಯುತ್ತಿದೆ ಎಂಬುದನ್ನು ಯಾವುದೇ ಮಾನವ ನುಡಿಗಳಲ್ಲಿ ಹೇಳಲು ಸಾಧ್ಯವಿಲ್ಲ. ಆದರೆ ನೀವು ಧ್ಯಾನ ಮಾಡಿ ಆ ವಾತಾವರಣವನ್ನು ಸೃಷ್ಟಿಸಿಕೊಳ್ಳಬೇಕು. ಆಳವಾಗಿ ಧ್ಯಾನಿಸುವವರು ಅದ್ಭುತವಾದ ಆಂತರಿಕ ಶಾಂತತೆಯನ್ನು ಅನುಭವಿಸುತ್ತಾರೆ.” ಈ ಕಾರ್ಯಕ್ರಮಗಳು, ಪ್ರಾಮಾಣಿಕ ಸಾಧಕರು ದೈನಂದಿನ ಜೀವನದ ನಿರಂತರ ಚಟುವಟಿಕೆಯಿಂದ ತಮ್ಮ ಗಮನವನ್ನು ಹಿಂತೆಗೆದುಕೊಳ್ಳಲು ಮತ್ತು ಅದನ್ನು ಆಂತರಿಕ ಮೌನದ ಮೇಲೆ ಕೇಂದ್ರೀಕರಿಸಲು ಮತ್ತು ಆ ಮೂಲಕ ಭಗವಂತನ ಶಾಂತಿ ಮತ್ತು ಆನಂದದ ಅಮೃತವನ್ನು ಸೇವಿಸಲು ಅದ್ಭುತ ಅವಕಾಶವನ್ನು ಒದಗಿಸುತ್ತವೆ.
ಸಂನ್ಯಾಸಿಗಳ ಪ್ರವಾಸಗಳು ಮತ್ತು ಧ್ಯಾನ ಶಿಬಿರಗಳು, ಜನೆವರಿ – ಡಿಸೆಂಬರ್ 2025
ಜನೆವರಿ — ಡಿಸೆಂಬರ್ 2025 ರ ಅವಧಿಯಲ್ಲಿ ಸಂನ್ಯಾಸಿಗಳ ಪ್ರವಾಸಗಳ ವಿವರಗಳನ್ನು ವೀಕ್ಷಿಸಲು ದಯವಿಟ್ಟು ಇಲ್ಲಿ ಒತ್ತಿ.
ರಾಜ್ಯ | ದಿನಾಂಕ | ಸ್ಥಳ | ಕಾರ್ಯಕ್ರಮದ ಮಾದರಿ |
|---|---|---|---|
ಆಂಧ್ರ ಪ್ರದೇಶ್ | ನವೆಂಬರ್ 26 | ಒಂದು-ದಿನದ ಕಾರ್ಯಕ್ರಮ | |
ಗುಜರಾತ್ | ನವೆಂಬರ್ 28-30 | ಕ್ರಿಯಾ ಯೋಗ ದೀಕ್ಷೆಯೂ ಸೇರಿದೆ | |
ಮಧ್ಯ ಪ್ರದೇಶ್ | ನವೆಂಬರ್ 21-23 | ಕ್ರಿಯಾ ಯೋಗ ದೀಕ್ಷೆಯೂ ಸೇರಿದೆ | |
ಮಹಾರಾಷ್ಟ್ರ | ನವೆಂಬರ್ 20 | ಒಂದು-ದಿನದ ಕಾರ್ಯಕ್ರಮ | |
ನವೆಂಬರ್ 23 | ಒಂದು-ದಿನದ ಕಾರ್ಯಕ್ರಮ | ||
ಒಡಿಶಾ | ನವೆಂಬರ್ 21-23 | ಧ್ಯಾನ ಶಿಬಿರ (ರಿಟ್ರೀಟ್) (ಒಡಿಯಾ) | |
ನವೆಂಬರ್ 28-30 | ಧ್ಯಾನ ಶಿಬಿರ (ರಿಟ್ರೀಟ್) (ಇಂಗ್ಲಿಷ್) | ||
ಉತ್ತರ ಪ್ರದೇಶ್ | ನವೆಂಬರ್ 13 | ಒಂದು-ದಿನದ ಕಾರ್ಯಕ್ರಮ | |
ನವೆಂಬರ್ 16 | ಒಂದು-ದಿನದ ಕಾರ್ಯಕ್ರಮ | ||
ಉತ್ತರಾಖಂಡ | ನವೆಂಬರ್ 14-16 | ಧ್ಯಾನ ಶಿಬಿರ (ರಿಟ್ರೀಟ್) (ಇಂಗ್ಲಿಷ್) |

















