ಶಿಬಿರಗಳು

ದೈನಂದಿನ ವ್ಯಸ್ತತೆಯಿಂದ ಹಿಂದೆ ಸರಿದು, ಮೌನದಲ್ಲಿ ನಿಮ್ಮನ್ನು ನೀವು ಪುನಶ್ಚೇತನಗೊಳಿಸಿಕೊಳ್ಳಿ ಮತ್ತು ದಿವ್ಯತೆಯ ಜಾಗೃತಿಯನ್ನು ಆಳಗೊಳಿಸಿಕೊಳ್ಳಿ.

ಪರೀಕ್ಷೆ 3

ದೇವರೊಂದಿಗೆ ಕಳೆದ ಏಕಾಂತತೆಯ ಸಮಯವು ನಿಮ್ಮ ಮನಸ್ಸು, ದೇಹ ಮತ್ತು ಆತ್ಮದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದು ನಿಮಗೆ ಅಚ್ಚರಿಯನ್ನೇ ಉಂಟುಮಾಡಬಹುದು… ಮೌನದ ದ್ವಾರಗಳ ಮೂಲಕ ಜ್ಞಾನ ಮತ್ತು ಶಾಂತಿಯ ಉಪಶಮನಕಾರಿ ಸೂರ್ಯನ ಬೆಳಕು ನಿನ್ನ ಮೇಲೆ ಪ್ರಕಾಶಿಸಲಿದೆ.

— ಶ್ರೀ ಶ್ರೀ ಪರಮಹಂಸ ಯೋಗಾನಂದ

ಯೋಗದಾ ಸತ್ಸಂಗ ಸೊಸೈಟಿಯ “ಹೌ-ಟು-ಲಿವ್” ಶಿಬಿರ ಕಾರ್ಯಕ್ರಮಗಳು ಆಧ್ಯಾತ್ಮಿಕ ಪುನರುಜ್ಜೀವನ ಇಚ್ಛಿಸುವ ಮತ್ತು ದಿನನಿತ್ಯದ ಜೀವನದ ಒತ್ತಡಗಳಿಂದ – ಕೇವಲ ಕೆಲವು ದಿನಗಳಿಗಾದರೂ – ದೂರವಿದ್ದು ದಿವ್ಯತೆಯ ಜಾಗೃತಿಯನ್ನು ಆಳಗೊಳಿಸಲು ಬಯಸುವ ಎಲ್ಲರಿಗೂ ತೆರೆದಿವೆ. ಈ ಕಾರ್ಯಕ್ರಮಗಳು, ಪರಮಹಂಸ ಯೋಗಾನಂದರವರ ಮಾತಿನಲ್ಲಿ ಹೇಳುವುದಾದರೆ, “ಅನಂತ ಶಕ್ತಿಯಿಂದ ಪುನಶ್ಚೇತನಗೊಳ್ಳಲು ಮಾತ್ರ ಮೀಸಲಾಗಿರುವ ಮೌನದ ಶಕ್ತಿಕೇಂದ್ರ”ವನ್ನು ಒದಗಿಸುತ್ತವೆ.

ನಿಷ್ಠಾವಂತ ಸಾಧಕರಿಗೆ ನಿತ್ಯಜೀವನದ ಬಿಡುವಿಲ್ಲದ ಚಟುವಟಿಕೆಗಳಿಂದ ತಮ್ಮ ಮನಸ್ಸನ್ನು ಹಿಂದಕ್ಕೆ ಎಳೆದು ಆಂತರಿಕ ಮೌನದಲ್ಲಿ ಕೇಂದ್ರೀಕರಿಸುವ ಅದ್ಭುತ ಅವಕಾಶ ದೊರೆಯುತ್ತದೆ ಮತ್ತು ಈ ಮೂಲಕ ಅವರು ದೇವರ ಶಾಂತಿ ಮತ್ತು ಆನಂದ ಎಂಬ ಅಮೃತವನ್ನು ಪಾನ ಮಾಡುವಂತಾಗುತ್ತದೆ. ಅವರು ವಿಶ್ರಾಂತಿಯನ್ನು ಪಡೆಯಲು, ಆಧ್ಯಾತ್ಮಿಕ ಪ್ರೇರಣೆ ಮತ್ತು ಪುನರುಜ್ಜೀವನವನ್ನು ಅನುಭವಿಸಲು ಶಿಬಿರಕ್ಕೆ ಬರಬಹುದು. ಅಥವಾ, ಆಳವಾದ ಧ್ಯಾನ, ಆತ್ಮಚಿಂತನೆ, ಆಂತರ್ಯ ಜ್ಞಾನದಿಂದ ಮಾತ್ರ ಉತ್ತರಿಸಬಹುದಾದ ಪ್ರಶ್ನೆಗಳಿಗೆ ಉತ್ತರಗಳನ್ನು ಮತ್ತು ಜೀವನದ ಗಾಢ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳಲು ಬರಬಹುದು.

ಒಬ್ಬ ಭಕ್ತನು ತಾನಾಗಿ ಮೌನ ಮತ್ತು ಆತ್ಮಚಿಂತನೆಗೆ ಮುಕ್ತವಾದ ವೈಯಕ್ತಿಕ ಶಿಬಿರಕ್ಕೆ ಬರುವುದಾಗಿ ಆಯ್ಕಮಾಡಿಕೊಳ್ಳಬಹುದು, ಅಥವಾ ಪರಮಹಂಸ ಯೋಗಾನಂದರ ಹೌ-ಟು-ಲಿವ್ ಎಂಬ ದಿವ್ಯಜ್ಞಾನಾಧಾರಿತ ಪ್ರೇರಣಾದಾಯಕ ಅಧಿವೇಶನಗಳು ಹಾಗೂ ನಿತ್ಯ ಧ್ಯಾನಗಳಿಂದ ಕೂಡಿದ ಸಂಕೀರ್ಣ ಕಾರ್ಯಕ್ರಮವಿರುವ ಸಂಘಟಿತ ಧ್ಯಾನ ಶಿಬಿರದಲ್ಲಿ ಭಾಗವಹಿಸಬಹುದು. ಈ ಶಿಬಿರಗಳು ವೈಎಸ್ಎಸ್ ಆಶ್ರಮಗಳು ಹಾಗೂ ಭಾರತದಾದ್ಯಂತ ಇರುವ ವೈಎಸ್ಎಸ್ ಕೇಂದ್ರಗಳಲ್ಲಿ ವರ್ಷಪೂರ್ತಿ ಆಯೋಜಿಸಲ್ಪಟ್ಟಿರುತ್ತವೆ.

ವೈಎಸ್ಎಸ್ ಶಿಬಿರ ಕೇಂದ್ರಗಳು

ಯೋಗದ ಸತ್ಸಂಗ ಸಂಸ್ಥೆ ಭಾರತದಾದ್ಯಂತ ವಿವಿಧ ಕೇಂದ್ರಗಳನ್ನು ಹೊಂದಿದ್ದು, ಇವು ವಿಶೇಷವಾಗಿ ಶಿಬಿರಕ್ಕೆ ಮೀಸಲಾಗಿರುತ್ತವೆ. ಶಾಂತ, ನೈಸರ್ಗಿಕ ವಾತಾವರಣದಲ್ಲಿ, ನಗರ ಜೀವನದ ಗದ್ದಲದಿಂದ ದೂರದಲ್ಲಿರುವ ಈ ಕೇಂದ್ರಗಳು ತಪೋವನಾರ್ಥಿಗಳಿಗೆ ವಿಶ್ರಾಂತಿ ಪಡೆಯಲು, ತಮ್ಮ ಸಾಧನೆಗೆ ಆಳವಾಗಿ ತೊಡಗಲು ಮತ್ತು ತಮ್ಮ ನಿಜಸ್ವಭಾವದೊಂದಿಗೆ ಹತ್ತಿರವಾಗಲು ಆದರ್ಶಪೂರ್ಣ ಪರಿಸರವನ್ನು ಒದಗಿಸುತ್ತವೆ.

ಈ ಕೇಂದ್ರಗಳ ಜೊತೆಗೆ, ವಿವಿಧ ವೈಎಸ್ಎಸ್ ಆಶ್ರಮಗಳಲ್ಲಿ ಸಹ ಶಿಬಿರಗಳನ್ನು ಆಯೋಜಿಸಲಾಗುತ್ತದೆ. ಭಾರತದೆಲ್ಲೆಡೆ ಇರುವ ವಿವಿಧ ವೈಎಸ್ಎಸ್ ಆಶ್ರಮಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ಇಲ್ಲಿ ಒತ್ತಿ.

ಶಿಬಿರಗಳ ಕ್ಯಾಲೆಂಡರ್

ಜುಲೈ – ಸೆಪ್ಟೆಂಬರ್ 2025

ఈ సంవత్సరం తృతీయ త్రైమాసికంలో వై.ఎస్.ఎస్. ఆశ్రమాలు మరియు ఏకాంత ధ్యాన వాస కేంద్రాల వద్ద జరిగబోయే ఏకాంత ధ్యాన వాసాల గురించి ప్రకటించడం మాకెంతో ఆహ్లాదాన్ని కలిగిస్తోంది. ಉಳಿದ ತಿಂಗಳ ಶಿಬಿರಗಳ ಮಾಹಿತಿಯನ್ನು ಶೀಘ್ರದಲ್ಲೇ ಪ್ರಕಟಿಸಲಾಗುತ್ತದೆ.


ಜೂನ್

ಜುಲೈ

ಆಗಸ್ಟ್

ಸೆಪ್ಟೆಂಬರ್

ವೈಎಸ್ಎಸ್ ನೋಯ್ಡಾ ಆಶ್ರಮ

ಜುಲೈ 18-20*

ಸೆಪ್ಟೆಂಬರ್ 12-14*

ವೈಎಸ್ಎಸ್ ದ್ವಾರಾಹಟ್ಆಶ್ರಮ

ಸೆಪ್ಟೆಂಬರ್ 28-30*

ಇಗತ್‌ಪುರಿ

ಜೂನ್ 14-15

ಜುಲೈ 9-11

ಜುಲೈ 25-27

ಆಗಸ್ಟ್ 14-17

ಸೆಪ್ಟೆಂಬರ್ 26-28

ಶಿಮ್ಲಾ

ಜೂನ್ 6-8

ಜೂನ್ 20-22

ಆಗಸ್ಟ್ 15-17

ಸೆಪ್ಟೆಂಬರ್ 5-7

ಸೆಪ್ಟೆಂಬರ್ 19-21

ಪುಣೆ

ಜೂನ್ 28-29

ಜುಲೈ 26-27

ಆಗಸ್ಟ್ 30-31

ಸೆಪ್ಟೆಂಬರ್ 27-28

ಕೊಯಮತ್ತೂರು

ಜುಲೈ 18-20*

ಸೆಪ್ಟೆಂಬರ್ 27-28

ರಾಜಮಂಡ್ರಿ

ಜುಲೈ 18-20*

ಜುಲೈ 12-14*

ದಯವಿಟ್ಟು ಗಮನಿಸಿ:

  • * ಗುರುತಿನಿಂದ ಸೂಚಿಸಲಾದ ಶಿಬಿರವು ವೈಎಸ್ಎಸ್ ಸಂನ್ಯಾಸಿಗಳ ನೇತೃತ್ವದಲ್ಲಿ ನಡೆಸಲ್ಪಡುವುದು. ಉಳಿದ ಶಿಬಿರಗಳ ನೇತೃತ್ವ ಭಕ್ತರಿಂದ ವಹಿಸಲ್ಪಡುತ್ತದೆ.
  • ನಿರ್ದಿಷ್ಟ ಶಿಬಿರ ಕಾರ್ಯಕ್ರಮದ ಬಗ್ಗೆ ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ಸಂಬಂಧಿತ ಆಶ್ರಮ/ ಶಿಬಿರ ಸ್ಥಳವನ್ನು ಸಂಪರ್ಕಿಸಿ.

ವಿಶೇಷ ಮುಖ್ಯಾಂಶಗಳು

  • ನೋಯಿಡಾ ಆಶ್ರಮದಲ್ಲಿ ಸನ್ಯಾಸಿಗಳಿಂದ ನಡೆಸಲ್ಪಡುವ ಶಿಬಿರಗಳು: ಈ ಅವಧಿಯಲ್ಲಿ ವೈಎಸ್ಎಸ್ ಸನ್ಯಾಸಿಗಳು ಶಿಬಿರಗಳನ್ನು ನಡೆಸಲಿದ್ದಾರೆ.
  • ನೇರ-ಪ್ರಸಾರಗೊಳ್ಳಲಿರುವ ಶಿಬಿರಗಳು: ನೋಯಿಡಾ ಆಶ್ರಮ ಶಿಬಿರ ಕಾರ್ಯಕ್ರಮಗಳನ್ನು ಹೆಚ್ಚು ಜನರಿಗೆ ತಲುಪಿಸುವುದಕ್ಕಾಗಿ, ಅವುಗಳನ್ನು ಕೊಯಂಬತ್ತೂರು, ಇಗತ್ಪುರಿ, ಶಿಮ್ಲಾ, ಪುಣೆ ಮತ್ತು ರಾಜಮಂಡ್ರಿಯ ಆಯ್ದ ಶಿಬಿರ ಕೇಂದ್ರಗಳಿಗೆ ನೇರ-ಪ್ರಸಾರ ಮಾಡಲಾಗುವುದು, ಇದರಿಂದ ಭಕ್ತರು ತಮ್ಮ ಮನೆಗಳಿಗೆ ಸಮೀಪದಲ್ಲೇ ಸನ್ಯಾಸಿಗಳ ಉನ್ನತ ಮಾರ್ಗದರ್ಶನವನ್ನು ಅನುಭವಿಸಬಹುದು.
  • ಭಕ್ತರಿಂದ ನಡೆಸಲ್ಪಡುವ ಶಿಬಿರಗಳು: ಕೆಲವು ಶಿಬಿರ ಕಾರ್ಯಕ್ರಮಗಳನ್ನು ಮೇಲಿನ ಕೇಂದ್ರಗಳಲ್ಲಿ, ಜೊತೆಗೆ ಶಿಮ್ಲಾದಲ್ಲಿ, ಕೂಡ ಅನುಭವಿ ಭಕ್ತರು ನಡೆಸಲಿದ್ದಾರೆ, ಇದು ಆಧ್ಯಾತ್ಮಿಕ ಬೆಳವಣಿಗೆಗೆ ಹೆಚ್ಚಿನ ಅವಕಾಶಗಳನ್ನು ನೀಡುತ್ತದೆ.
ನೋಂದಣಿ

ವೈಎಸ್ಎಸ್ ಮತ್ತು ಎಸ್ ಆರ್ ಎಫ್ ಪಾಠಗಳ ವಿದ್ಯಾರ್ಥಿಗಳು ಈ ಯೋಜಿತ ಶಿಬಿರಗಳಲ್ಲಿ ಭಾಗವಹಿಸಲು ಅಥವಾ ತಮಗೆ ಸೂಕ್ತವಾದ ಸಮಯದಲ್ಲಿ ವೈಯಕ್ತಿಕ ಶಿಬಿರವನ್ನು ಯೋಜನೆ ಮಾಡಲು ಸ್ವಾಗತಿಸಲಾಗುತ್ತದೆ. ಈ ಶಿಬಿರ ಕಾರ್ಯಕ್ರಮಗಳಲ್ಲಿ ಯಾವುದರಲ್ಲಾದರೂ ನೀವು ಭಾಗವಹಿಸಲು ಬಯಸಿದರೆ, ದಯವಿಟ್ಟು ಕನಿಷ್ಠ ಒಂದು ತಿಂಗಳ ಮುಂಚಿತವಾಗಿ ಕೆಳಗಿನ ವಿವರಗಳನ್ನು ಹಂಚಿಕೊಳ್ಳುವ ಮೂಲಕ ಸಂಬಂಧಿತ ಆಶ್ರಮ/ ಶಿಬಿರ ಸ್ಥಳಕ್ಕೆ ತಿಳಿಸಿ:

  • ಪೂರ್ಣ ಹೆಸರು
  • ವಯಸ್ಸು
  • ವಿಳಾಸ
  • ಇಮೇಲ್ ಐಡಿ
  • ಸಂಪರ್ಕ ಫೋನ್
  • ವೈಎಸ್ಎಸ್ ಪಾಠಗಳ ನೋಂದಣಿ ಸಂಖ್ಯೆ (ಅಥವಾ ಎಸ್ ಆರ್ ಎಫ್ ಸದಸ್ಯತ್ವ ಸಂಖ್ಯೆ)
  • ನಿಮ್ಮ ನಿರ್ಧರಿತ ಬರುವಿಕೆಯ ಮತ್ತು ಹಿಂತಿರುಗುವಿಕೆಯ ದಿನಾಂಕಗಳು

ದಯವಿಟ್ಟು ಗಮನಿಸಿ:

  • ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕವಾಗಿ ವಸತಿ ಸೌಕರ್ಯವನ್ನು ಒದಗಿಸಲಾಗುವುದು. ಆದಾಗ್ಯೂ, 65 ವರ್ಷಕ್ಕಿಂತ ಮೇಲ್ಪಟ್ಟ ವಿವಾಹಿತ ದಂಪತಿಗಳ ವಿಷಯದಲ್ಲಿ ಕೆಲವು ವಿನಾಯಿತಿಗಳು ಇರಬಹುದು. ಕುಟುಂಬದ ಸದಸ್ಯರು ದಯವಿಟ್ಟು ಇದಕ್ಕೆ ತಕ್ಕಂತೆ ಯೋಜನೆ ಮಾಡಿ ಮತ್ತು ಸಾಮಾನುಗಳನ್ನು ಪ್ಯಾಕ್ ಮಾಡಿ.
  • 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಅವಕಾಶವಿಲ್ಲ.
  • ನಿಮ್ಮ ಶಿಬಿರದ ಪ್ರಯಾಣ ಮತ್ತು ವಾಸ್ತವ್ಯಕ್ಕೆ ಸಂಬಂಧಿಸಿದ ಹವಾಮಾನ, ವಸತಿ ಅಥವಾ ಇತರ ಮಾಹಿತಿಗಳ ಬಗ್ಗೆ ಹೆಚ್ಚಿನ ಮಾಹಿತಿ ಬೇಕಿದ್ದರೆ, ದಯವಿಟ್ಟು ಸಂಬಂಧಿಸಿದ ಆಶ್ರಮ/ ಶಿಬಿರದ ಕೇಂದ್ರವನ್ನು ನೇರವಾಗಿ ಸಂಪರ್ಕಿಸಿ.

ನಿಮ್ಮ ಬೆಂಬಲ ಅತ್ಯಗತ್ಯ

ಈ ಶಿಬಿರಗಳಿಗೆ ಯಾವುದೇ ನಿಗದಿತ ಶುಲ್ಕವಿಲ್ಲ. ಗುರುದೇವರ ಶಿಬಿರಗಳು — ನೀವು ಆರ್ಥಿಕ ಸಹಾಯ ಮಾಡುವ ಸಾಮರ್ಥ್ಯ ಹೊಂದಿದ್ದೀರಾ ಅಥವಾ ಇಲ್ಲವೋ ಎಂಬುದರ ಹೊರತಾಗಿ ಎಲ್ಲರಿಗೂ ಮುಕ್ತವಾಗಿವೆ. ಈ ಶಿಬಿರದ ಸೌಲಭ್ಯಗಳಾದ ಭೋಜನ, ವಸತಿ, ನಿರ್ವಹಣೆ ಮತ್ತು ಇತರೆ ವೆಚ್ಚಗಳು ನಿಮ್ಮ ದಾನಗಳಿಂದ ನಿರ್ವಹಿಸಲ್ಪಡುತ್ತಿರುವುದರಿಂದ, ಹೆಚ್ಚಿನ ಹಣಕಾಸು ಸಹಾಯ ನೀಡುವ ಮೂಲಕ ನಮಗೆ ವೆಚ್ಚಗಳನ್ನು ಸಮರ್ಥವಾಗಿ ನಿಭಾಯಿಸಲು ಮತ್ತು ಪ್ರಾಮಾಣಿಕ ಆತ್ಮಸಾಧಕರಿಗೆ ಗುರುದೇವರ ಆತಿಥ್ಯವನ್ನು ವಿಸ್ತರಿಸಲು ಸಾಧ್ಯವಾಗುವಂತೆ ಮಾಡುವ ಎಲ್ಲಾ ಭಕ್ತರಿಗೆ ನಾವು ಕೃತಜ್ಞರಾಗಿದ್ದೇವೆ.

ಆನ್‌ಲೈನ್‌ ಮೂಲಕ ದೇಣಿಗೆಯನ್ನು ನೀಡಲು ಮೊದಲು ‘ಕೇಂದ್ರ ನಿಧಿ’ ಆಯ್ಕೆಮಾಡಿ, ನಂತರ ‘ಕೇಂದ್ರದ ಹೆಸರು’ ಎಂಬ ಪಟ್ಟಿಯಿಂದ ಶಿಬಿರದ ಸ್ಥಳದ ಹೆಸರನ್ನು ಆಯ್ಕೆಮಾಡಿ. ಅಲ್ಲದೆ, ನೀವು ಚೆಕ್‌ ಮೂಲಕವೂ ಶಿಬಿರದ ಸ್ಥಳಕ್ಕೆ ದೇಣಿಗೆಯನ್ನು ಕಳುಹಿಸಬಹುದಾಗಿದೆ.

ಶಿಬಿರದ ಚಟುವಟಿಕೆಗಳು

ಶಿಬಿರದ ಸಮಯದಲ್ಲಿ ನೀಮ್ಮ ಪಾತ್ರವೇನೆಂದರೆ, ವಿಶ್ರಾಂತಿ ಪಡೆಯುವುದು ಮತ್ತು ಭಗವಂತನ ಸರ್ವವ್ಯಾಪಿಯಾದ ಆಶೀರ್ವಾದಗಳನ್ನು ಸ್ವೀಕರಿಸಲು ಗ್ರಹನಶೀಲರಾಗಿ. ಶುದ್ಧ ಗಾಳಿಯಲ್ಲಿ ಕಾಲ ಕಳೆಯುವುದು, ವ್ಯಾಯಾಮ ಮಾಡುವುದು ಮತ್ತು ವಿಶ್ರಾಂತಿ ಪಡೆಯುವುದರಿಂದ ದೈಹಿಕವಾಗಿ ವಿಶ್ರಮಿಸಿ. ದಿನನಿತ್ಯದ ಚಿಂತೆಗಳು ಮತ್ತು ಒತ್ತಡಗಳನ್ನು ಬದಿಗಿಟ್ಟು ಮನಸ್ಸನ್ನು ಶಾಂತಗೊಳಿಸಿ. ಬಾಹ್ಯ ಚಟುವಟಿಕೆಗಳನ್ನು ತಾತ್ಕಾಲಿಕವಾಗಿ ತ್ಯಜಿಸಿ, ದೇವರನ್ನು ಗ್ರಹಿಸುವಂತವರಾಗಿ. ದೇವರು ನಿಮ್ಮ ಮನಸ್ಸಿನ ಶ್ರೇಷ್ಠ ಚಿಂತನೆ ಆಗಲಿ ಮತ್ತು ನಿಮ್ಮ ಹೃದಯದ ಆಳವಾದ ಆಸೆ ಆಗಲಿ. ನಿಮ್ಮ ಒಳಗಿನ ಅವನ ಉಪಸ್ಥಿತಿಯ ಬಗ್ಗೆ ಹೆಚ್ಚುತ್ತಿರುವ ಅರಿವು ಉಳಿದ ಎಲ್ಲಾ ಕೆಲಸಗಳನ್ನು ಮಾಡುತ್ತದೆ. ನಿರಂತರ ಚಟುವಟಿಕೆಯಿಂದ ಹಿಂದೆ ಸರಿದು ದೇವರ ಬಗ್ಗೆ ಆಳವಾದ ಜಾಗೃತಿಯನ್ನು ಬೆಳೆಸುವ ಶಿಬಿರದ ಅನುಭವವು, ಅವನಿಗೆ ನಿಮ್ಮ ಶಕ್ತಿಯನ್ನು ಪುನರುಜ್ಜೀವನಗೊಳಿಸಲು ಮತ್ತು ನಿಮಗೆ ಶಾಶ್ವತ ಶಾಂತಿ ಮತ್ತು ಆನಂದವನ್ನು ನೀಡಲು ಅನುವುಮಾಡಿಕೊಡುತ್ತದೆ.

ಶಿಬಿರದ ಸುಂದರ ಪರಿಸರದಲ್ಲಿ ದೇವರ ಉಪಸ್ಥಿತಿಯನ್ನು ಅನುಭವಿಸುತ್ತಾ ವಿಶ್ರಾಂತಿ ಪಡೆಯಲು ಸಾಕಷ್ಟು ಮುಕ್ತ ಸಮಯವು ಇರುತ್ತದೆ. ಭಕ್ತರು ತಾಜಾ ಹವೆಯಲ್ಲಿ ನಡಿಗೆ ಅಥವಾ ವ್ಯಾಯಾಮದ ಮೂಲಕ ದೈಹಿಕ ವಿಶ್ರಾಂತಿಯನ್ನು ಪಡೆಯಬಹುದು. ಬೆಳಗಿನ ಹಾಗೂ ಸಂಜೆಯ ಸಮೂಹ ಧ್ಯಾನಗಳ ಜೊತೆಗೆ, ಭಕ್ತರು ವೈಯಕ್ತಿಕ ಧ್ಯಾನಕ್ಕೂ ಸಮಯವನ್ನು ಮೀಸಲಿಡಬಹುದು.

ಶಿಬಿರದ ಸಫಲತೆಗೆ ಮಾರ್ಗಸೂಚಿಗಳು

ಫಲಪ್ರದವಾದ ಶಿಬಿರದ ಜವಾಬ್ದಾರಿ ಮುಖ್ಯವಾಗಿ ಪ್ರತಿ ವ್ಯಕ್ತಿಯ ಮೇಲಿದೆ. ನೀವು ನಿಮ್ಮ ಆತ್ಮವನ್ನು ಪುನರುಜ್ಜೀವನಗೊಳಿಸಲು ಬಂದಿರುವಿರೋ ಅಥವಾ ಒಳಗಿನಿಂದ ಕಾಡುವ ಪ್ರಶ್ನೆಗಳು ಮತ್ತು ಸಮಸ್ಯೆಗಳಿಗೆ ಪರಿಹಾರ ಹುಡುಕಲು ಬಂದಿರುವಿರೋ ಎಂಬುದರ ಯಶಸ್ಸು ಕೊನೆಗೆ ದೇವರೊಂದಿಗೆ ಇರುವ ನಿಮ್ಮ ವೈಯಕ್ತಿಕ ಸಂಬಂಧದ ಮೇಲೆ ಅವಲಂಬಿತವಾಗಿರುತ್ತದೆ — ಜೀವ, ಜ್ಞಾನ, ಆರೋಗ್ಯ ಮತ್ತು ಸಂತೋಷದ ಮೂಲವಾದ ದೈವಿಕ ಶಕ್ತಿ. ನೀವು ಎಷ್ಟು ಮಟ್ಟಿಗೆ ಆತನ ಶಾಶ್ವತ ಉಪಸ್ಥಿತಿಯ ಅರಿವನ್ನು ಬೆಳೆಸುತ್ತೀರೋ, ಅಷ್ಟು ಹೆಚ್ಚು ಪ್ರೇರಣೆ, ಭರವಸೆ, ಮತ್ತು ಜೀವನದ ಎಲ್ಲ ಸಮಸ್ಯೆಗಳಿಗೆ ಪರಿಹಾರವನ್ನು ಪಡೆಯುವ ದಿಕ್ಕಿನಲ್ಲಿ ಮಾರ್ಗದರ್ಶನವನ್ನು ಪಡೆಯುತ್ತೀರಿ.

ಈ ಕೆಳಗಿನ ಅಂಶಗಳನ್ನು ಪಾಲಿಸುವುದರಿಂದ ಆ ಅರಿವನ್ನು ಬೆಳೆಸಿಕೊಳ್ಳಲು ನಿಮಗೆ ತುಂಬಾ ಸಹಾಯವಾಗುತ್ತದೆ:

  • ನೀವು ವಾಸ್ತವ್ಯದ ಅವಧಿಯಲ್ಲಿ ಪೂರ್ಣ ಶಿಬಿರ ಕಾರ್ಯಕ್ರಮದಲ್ಲಿ ಭಾಗವಹಿಸಿ (ಸಾಧ್ಯವಾದಷ್ಟು) ಮತ್ತು ಇತರ ಯಾವುದೇ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳದಿರಿ.
  • ಶಿಬಿರದ ಸಮಯದಲ್ಲಿ ನಿಮ್ಮ ಆಂತರಿಕ ವಾತಾವರಣವನ್ನು ರೂಪಿಸಿಕೊಳ್ಳಲು ಮತ್ತು ದೇವರು ಮತ್ತು ಗುರುಗಳ ಜೊತೆಗೆ ಆಳವಾಗಿ ಶ್ರುತಿಗೊಳ್ಳಲು ಮೌನವನ್ನು ಪಾಲಿಸಿ.
  • ಸಮೂಹ ಚಟುವಟಿಕೆಗಳು ನಿಮ್ಮನ್ನು ಇತರ ಸಹ ಮನಸ್ಕ ಆತ್ಮಗಳ ಸಂಪರ್ಕಕ್ಕೆ ತರುವುದರಿಂದ ನಿಮ್ಮ ಉತ್ತಮ ಪ್ರಯತ್ನಗಳು ಮತ್ತು ಆಶಯಗಳು ಇನ್ನಷ್ಟು ಬಲಗೊಳ್ಳುತ್ತವೆ, ಆದ್ದರಿಂದ ಇದರಲ್ಲಿ ನಿಮ್ಮ ಪಾಲ್ಗೊಳ್ಳುವಿಕೆಯನ್ನು ಖಚಿತಪಡಿಸಿಕೊಳ್ಳಿ.
  • ದೇವರ ಸನ್ನಿಧಿಯನ್ನು ಅಭ್ಯಾಸ ಮಾಡಿರಿ. ಪ್ರತಿಯೊಂದು ಕ್ಷಣದಲ್ಲೂ, ಪ್ರತಿಯೊಂದು ಅನುಭವದಲ್ಲೂ ದೇವರು ನಿಮ್ಮ ಪಕ್ಕದಲ್ಲೇ ಇದ್ದಾರೆ ಎಂಬ ಭಾವನೆಯನ್ನು ಅನುಭವಿಸುವುದನ್ನು ಕಲಿಯಿರಿ.
  • ನೀವು ನಿಮ್ಮೊಡನೆ ತರಬಹುದಾದ ಸುದ್ದಿ ಪತ್ರಿಕೆಗಳು ಅಥವಾ ನಿಯತಕಾಲಿಕಗಳಂತಹ ಲೌಕಿಕ ಸಾಹಿತ್ಯವನ್ನು ವಿಶ್ರಾಂತಿ ಅವಧಿಯಲ್ಲಿ ಓದುವುದನ್ನು ತ್ಯಜಿಸಿ.
  • ಶಿಬಿರದ ಆವರಣದಲ್ಲಿಯೇ ಇರಲು ಪ್ರಯತ್ನಿಸಿ, ಏಕೆಂದರೆ ಪ್ರತ್ಯೇಕವಾದ ಮತ್ತು ಶಾಂತವಾದ ಆ ಪರಿಸರದಲ್ಲಿ ನಿಮ್ಮ ಮುಕ್ತ ಸಮಯವನ್ನು ಮೌನದಲ್ಲಿ ಕಳೆಯುವುದು ಮತ್ತು ದೇವರ ಚಿಂತನೆ ಮಾಡುವುದು ಸುಲಭವಾಗುತ್ತದೆ.
  • ನೀವು ಮೊಬೈಲ್ ಫೋನ್ ತೆಗೆದುಕೊಂಡು ಬಂದಿದ್ದರೆ, ದಯವಿಟ್ಟು ಅದರ ಬಳಕೆಯನ್ನು ತಪ್ಪಿಸಿ. ತುರ್ತು ಪರಿಸ್ಥಿತಿಗಳನ್ನು ಹೊರತುಪಡಿಸಿ ಕರೆಗಳನ್ನು ಮಾಡಬೇಡಿ ಅಥವಾ ಸ್ವೀಕರಿಸಬೇಡಿ.
  • ಅಂತಿಮವಾಗಿ ಆದರೆ ಅತ್ಯಂತ ಮಹತ್ವಪೂರ್ಣವಾಗಿ, ನಿಮ್ಮ ಶಿಬಿರದ ಅವಧಿಯಲ್ಲಿ ನೀವು ಆಳವಾಗಿ ಧ್ಯಾನ ಮಾಡುವಂತೆ ನಾವು ನಿಮಗೆ ವಿನಂತಿಸುತ್ತೇವೆ. ಧ್ಯಾನವೇ ದೇವರೊಂದಿಗೆ ಇರುವ ನಿಮ್ಮ ಸಂಬಂಧದ ಮೂಲಾಧಾರವಾಗಿದೆ.
para-ornament

ಹೊಸ ಸಂದರ್ಶಕರು

ನೀವು ವೈಎಸ್ಎಸ್ ಮತ್ತು ಪರಮಹಂಸ ಯೋಗಾನಂದರ ಬೋಧನೆಗಳಿಗೆ ಹೊಸಬರಾಗಿದ್ದರೆ, ಕೆಳಗಿನ ಲಿಂಕ್‌ಗಳನ್ನು ಅನ್ವೇಷಿಸಲು ಇಚ್ಛಿಸಬಹುದು:

ಇದನ್ನು ಹಂಚಿಕೊಳ್ಳಿ