ಯೋಗದಾ ಸತ್ಸಂಗ ಮ್ಯಾಗಜಿನ್‌ (ನಿಯತಕಾಲಿಕೆ)

ಯೋಗದಾ ಸತ್ಸಂಗದ ಆನ್‌ಲೈನ್‌ ನಿವಾಸಕ್ಕೆ ಸ್ವಾಗತ — ಶರೀರ, ಮನಸ್ಸು ಮತ್ತು ಆತ್ಮದ ಉಪಶಮನಕ್ಕಾಗಿ ಮೀಸಲಾಗಿರುವ ಒಂದು ನಿಯತಕಾಲಿಕೆ — ಜಗತ್ತಿನಲ್ಲಿ ದೀರ್ಘಕಾಲದಿಂದ ಹೊರಬರುತ್ತಿರುವ ಯೋಗದ ನಿಯತಕಾಲಿಕೆಗಳಲ್ಲೊಂದು. ಆಧ್ಯಾತ್ಮಿಕ ಮೇರುಕೃತಿ ಯೋಗಿಯ ಆತ್ಮಕಥೆಯ ಲೇಖಕರಾದ ಪರಮಹಂಸ ಯೋಗಾನಂದರಿಂದ ಆರಂಭಿಸಲಾದ, ಯೋಗದಾ ಸತ್ಸಂಗ ನಿಯತಕಾಲಿಕೆಯು ಮೇಲ್‌ಸ್ತರದ ಅರಿವನ್ನು ಹೊಂದಲು ಬಯಸುವವರಿಗೆ ಯೋಗದ ಕಾಲಾತೀತವಾದ ಸಾರ್ವತ್ರಿಕ ಸತ್ಯಗಳನ್ನು, ಆತ್ಮವನ್ನು ಚೈತನ್ಯದೊಂದಿಗೆ ಸಂಯೋಗಗೊಳಿಸುವ ಭಾರತದ ಪುರಾತನ ವಿಜ್ಞಾನವನ್ನು ಮತ್ತು ಸಮರಸ ಹಾಗೂ ಆರೋಗ್ಯಕರ ಬದುಕನ್ನು ಬಾಳುವುದನ್ನು ಪ್ರಸ್ತುತಪಡಿಸುತ್ತ ಬಂದಿದೆ.

2021ರಲ್ಲಿ, ಯೋಗದಾ ಸತ್ಸಂಗ ನಿಯತಕಾಲಿಕೆಯು ಮುದ್ರಿತ ಹಾಗೂ ಆನ್‌ಲೈನ್‌ಗಳ ಸಂಯೋಗವಾಯಿತು. ನಿಯತಕಾಲಿಕೆಯ ಈ ಹೊಸ ಮಿಶ್ರಿತ ಸ್ವರೂಪವು ಆನ್‌ಲೈನ್‌ ಘಟಕಾಂಶಗಳು ಮತ್ತು ಒಂದು ವಾರ್ಷಿಕ ವಿಶೇಷ ಮುದ್ರಿತ ಆವೃತ್ತಿ ಮತ್ತು ಡಿಜಿಟಲ್‌ ಆವೃತ್ತಿಯ ಸಂಪದ್ಭರಿತ ಗುಂಪಾಗಿದೆ — ಮತ್ತು ಯೋಗದಾ ಸತ್ಸಂಗ ಸೊಸೈಟಿ ಆಫ್‌ ಇಂಡಿಯಾ ಈಗ ನೀಡುತ್ತಿರುವ ವಿಫುಲವಾದ ಮಲ್ಟಿಮೀಡಿಯಾ ಸ್ಫೂರ್ತಿದಾಯಕ ಮತ್ತು ಬೋಧಪ್ರದ ವಿಷಯವಸ್ತುಗಳ ಪಕ್ಕದಲ್ಲಿ ತನ್ನ ಸ್ಥಾನವನ್ನು ಪಡೆದುಕೊಳ್ಳುತ್ತದೆ.

ನಿಯತಕಾಲಿಕೆಯ ಬೆಳವಣಿಗೆಯ ಈ ಮುಂದಿನ ಹಂತದ ಜೊತೆಗೆ, ಯೋಗದಾ ಸತ್ಸಂಗ ನಿಯತಕಾಲಿಕೆಯು ಸಾವಿರಾರು ಜನರಿಗೆ ಅವರ ಬದುಕನ್ನು ಬದಲಾಯಿಸಿಕೊಂಡು, ಶರೀರ, ಮನಸ್ಸು ಮತ್ತು ಆತ್ಮಗಳಲ್ಲಿ ಅವರ ಅತ್ಯುನ್ನತವಾದ ಸಾಮರ್ಥ್ಯವನ್ನು ಸಿದ್ಧಿಸಿಕೊಳ್ಳಲು ಪರಮಹಂಸ ಯೋಗಾನಂದರು ನೀಡಿರುವ ಯೋಗದ ಕಾಲ-ಪರೀಕ್ಷಿತ ತಂತ್ರಗಳನ್ನು ಮತ್ತು “ಹೇಗೆ ಬದುಕುವುದು” ಸರಣಿಯ ಕ್ರಿಯಾಶೀಲ ದೈವೀಸ್ಫೂರ್ತಿಯನ್ನು ತಮ್ಮ ಬದುಕಿನಲ್ಲಿ ಆಚರಣೆಗೆ ತರಬಹುದು ಎಂದು ತಿಳಿಯಲು ಸಹಾಯ ಮಾಡುತ್ತದೆ.

ಯೋಗದಾ ಸತ್ಸಂಗ ನಿಯತಕಾಲಿಕೆಯ 2024ರ ವಾರ್ಷಿಕ ಆವೃತ್ತಿಯ ಮುನ್ನೋಟ

ಹಿಂದಿನ ವಿಷಯವಸ್ತುಗಳ ಡಿಜಿಟಲ್‌ ಸಂಗ್ರಹ

ಯೋಗದಾ ಸತ್ಸಂಗ ನಿಯತಕಾಲಿಕೆಯ ಚಂದಾದಾರರು ಪ್ರಸ್ತುತ ಆವೃತ್ತಿಯನ್ನು ಹೊಸ ಆನ್‌ಲೈನ್‌ ಗ್ರಂಥಾಲಯದಲ್ಲಿ ಓದಬಹುದು.

ಮುಂಬರುವ ತಿಂಗಳುಗಳಲ್ಲಿ, ಅವರು ನಿಯತಕಾಲಿಕೆಯ ಹಿಂದಿನ ಹಲವಾರು ವರ್ಷಗಳ ಆವೃತ್ತಿಗಳಿಂದ ಆಯ್ದ ಸ್ಫೂರ್ತಿದಾಯಕ ವಿಷಯಗಳನ್ನು ವಿಶೇಷ ಆನ್‌ಲೈನ್‌ ಗ್ರಂಥಾಲಯದಲ್ಲಿ ನೋಡಲು ಸಾಧ್ಯವಾಗುತ್ತದೆ. ಈ ಅಸಾಧಾರಣ ಜ್ಞಾನದ-ಮೂಲವು ಪರಮಹಂಸ ಯೋಗಾನಂದ, ಶ್ರೀ ದಯಾ ಮಾತಾ ಮತ್ತು ಇತರ ಪ್ರಿಯ ಲೇಖಕರಿಂದ ಹೊರಬಂದ ವಿಷಯಗಳು ಮತ್ತು ಯಾರ ನುಡಿಗಳನ್ನು ಹಿಂದಿನ ಯೋಗದಾ ಸತ್ಸಂಗ ನಿಯತಕಾಲಿಕೆಯ ಚಂದಾದಾರರು ಉತ್ಸಾಹದಿಂದ ಹೀರಿಕೊಂಡಿದ್ದರೋ ಅಂತಹ ವಿಷಯಗಳ ನೂರಾರು ಪುಟಗಳನ್ನು ಹೊಂದಿರುತ್ತದೆ — ಅಷ್ಟೇ ಅಲ್ಲದೆ ಅಪರೂಪದ ಛಾಯಾಚಿತ್ರಗಳು ಮತ್ತು ವೈಎಸ್‌ಎಸ್‌ ಸುದ್ದಿ ಸಮಾಚಾರಗಳು (ಈಗ ವೈಎಸ್‌ಎಸ್‌ ಇತಿಹಾಸ!) ಇರುತ್ತವೆ.

“ನಾನು ನಿಮ್ಮೆಲ್ಲರೊಡನೆ ಮಾತನಾಡುತ್ತೇನೆ…”

ಭಾರತದಿಂದ ಪಶ್ಚಿಮಕ್ಕೆ ಬಂದು 1920ರಲ್ಲಿ ಸೆಲ್ಫ್‌-ರಿಯಲೈಝೇಷನ್‌ ಫೆಲೋಷಿಪ್‌ ಅನ್ನು ಸ್ಥಾಪಿಸಿದ ಮೇಲೆ, ಕೂಡಲೇ ಅವರ ಗುರು ಪರಂಪರೆಯು ಆಧುನಿಕ ಜಗತ್ತಿಗೆ ಪುನಃಪರಿಚಯಿಸಿದ ಮತ್ತು ಪ್ರಚುರಗೊಳಿಸಿದ ಆತ್ಮ-ಸಾಕ್ಷಾತ್ಕಾರದ ಪುರಾತನ ವಿಜ್ಞಾನವಾದ ಕ್ರಿಯಾ ಯೋಗದ ಬೋಧನೆಗಳ ಮೇಲೆ ತರಗತಿಗಳನ್ನು ತೆಗೆದುಕೊಳ್ಳಲು ಅಮೆರಿಕದ ಉದ್ದಗಲ ನಗರಗಳಿಗೆ ಪ್ರಯಾಣ ಮಾಡಲು ಆರಂಭಿಸಿದರು. “ಈ ನಿಯತಕಾಲಿಕೆಯ ಅಂಕಣಗಳ ಮೂಲಕ ನಿಮ್ಮೆಲ್ಲರೊಡನೆ ನಾನು ಮಾತನಾಡುತ್ತೇನೆ” ಎಂದು ಹೇಳುತ್ತಾ, ದೂರ ದೂರದ ನಗರಗಳಲ್ಲಿದ್ದ ತಮ್ಮ ತರಗತಿಗಳ ಸಾವಿರಾರು ವಿದ್ಯಾರ್ಥಿಗಳೊಡನೆ ನಿಯತ ಸಂಪರ್ಕವನ್ನು ಹೊಂದಲು ಯೋಗಾನಂದಜಿ 1925ರಲ್ಲಿ ತಮ್ಮ ನಿಯತಕಾಲಿಕೆಯನ್ನು ಪ್ರಕಟಪಡಿಸಲು ಆರಂಭಿಸಿದರು.

ಇಂದಿಗೂ ಯೋಗದಾ ಸತ್ಸಂಗ ನಿಯತಕಾಲಿಕೆಯು ಓದುಗರಿಗೆ ಪರಮಹಂಸ ಯೋಗಾನಂದ ಮತ್ತು ಅವರ ಆಧ್ಯಾತ್ಮಿಕ ಉತ್ತರಾಧಿಕಾರಿಗಳ ಮತ್ತು ಇತರ ಆಪ್ತ ಶಿಷ್ಯರ, ಹಿಂದೆ ಪ್ರಕಟವಾಗದಿದ್ದ ಧ್ಯಾನದ ಯೋಗ ವಿಜ್ಞಾನ ಹಾಗೂ ಆಧ್ಯಾತ್ಮಿಕ ಜೀವನದ ಸಮತೋಲಿತ ಕಲೆಯ ಮೇಲಿನ ಉಪನ್ಯಾಸಗಳು ಮತ್ತು ಬರಹಗಳನ್ನು ನೀಡುತ್ತಿದೆ.

ಪುರಾತನ ಜ್ಞಾನ ಮತ್ತು ಆಧುನಿಕ ಚಿಂತನೆಯ ಒಂದು ಅನನ್ಯ ಮಿಶ್ರಣ

ಶಿರೋನಾಮೆಯಲ್ಲೇ ಹೇಳಿದಂತೆ, ಯೋಗದಾ ಸತ್ಸಂಗವು “ಶರೀರ, ಮನಸ್ಸು ಮತ್ತು ಆತ್ಮದ ಉಪಶಮನಕ್ಕೆ ಮೀಸಲಾದ ನಿಯತಕಾಲಿಕೆಯಾಗಿದೆ — ಉಚಿತ ಆಹಾರ, ಯುಕ್ತ ಜೀವನದಿಂದ ಶರೀರವನ್ನು ಅನಾರೋಗ್ಯಗಳಿಂದ ಉಪಶಮನಗೊಳಿಸುವುದು ಮತ್ತು ಭಗವಂತನ ಸರ್ವಶಕ್ತ ಬ್ರಹ್ಮಾಂಡ ಚೈತನ್ಯದಿಂದ ಶರೀರವನ್ನು ಪುನಶ್ಚೇತನಗೊಳಿಸುವುದು; ಏಕಾಗ್ರತೆ, ಸೃಜನಶೀಲ ಆಲೋಚನೆ ಮತ್ತು ಉಲ್ಲಾಸದಿಂದ ಮನಸ್ಸಿನಿಂದ ಅಸಾಮರಸ್ಯ ಮತ್ತು ಅಸಮರ್ಥತೆಯನ್ನು ತೆಗೆದು ಹಾಕುವುದು; ಮತ್ತು ನಿತ್ಯ-ಪರಿಪೂರ್ಣ ಆತ್ಮವನ್ನು ಧ್ಯಾನದ ಮೂಲಕ ಆಧ್ಯಾತ್ಮಿಕ ಅಜ್ಞಾನದ ಬಂಧನಗಳಿಂದ ಮುಕ್ತ ಮಾಡುವುದು.”

ಯೋಗದಾ ಸತ್ಸಂಗ ನಿಯತಕಾಲಿಕೆಯು ಈ ಕೆಳಗಿನ ವಿಷಯಗಳೂ ಒಳಗೊಂಡಂತೆ ಅನೇಕ ವಿಷಯಗಳ ಬಗ್ಗೆ ಅತ್ಯಾಕರ್ಷಕ ಹಾಗೂ ಬೋಧಪ್ರದ ಲೇಖನಗಳ ಪುರಾತನ ಜ್ಞಾನ ಮತ್ತು ಆಧುನಿಕ ಚಿಂತನೆಯ ಒಂದು ಅನನ್ಯ ಮಿಶ್ರಣವನ್ನು ಪ್ರಸ್ತುತಪಡಿಸುತ್ತದೆ:

  • ಒಂದು ಆನಂದಮಯ ಜೀವನ ಮತ್ತು ಶಾಂತಿಪೂರ್ಣ ಜಗತ್ತಿಗೆ ಧ್ಯಾನದ ಪ್ರಮುಖ ಪಾತ್ರ
  • ಎಲ್ಲ ವಯೋಮಾನದ ಜನರಿಗೆ ಅವಶ್ಯಕವಾಗಿರುವ “ಬದುಕುವುದು-ಹೇಗೆ” ತತ್ತ್ವಗಳು
  • ಬಾಹ್ಯ ಸಂಕೀರ್ಣತೆ ಮತ್ತು ಗೊಂದಲಗಳ ಹೊರತಾಗಿಯೂ ಸಂತುಲನ ಹಾಗೂ ಸರಳತೆಯನ್ನು ಮನಗಾಣುವುದು
  • ಬದುಕು, ಸಾವು ಮತ್ತು ಪುನರ್ಜನ್ಮದ ಸ್ವರೂಪ
  • ಜಾಗತಿಕ ಘಟನೆಗಳು ಮತ್ತು ಜಾಗತಿಕ ನಾಗರಿಕತೆಯ ಒಂದು ಆಧ್ಯಾತ್ಮಿಕ ದೃಷ್ಟಿಕೋನ
  • ಮಾನಸಿಕ ಶಕ್ತಿ, ಪ್ರಶಾಂತತೆ ಮತ್ತು ಸಮೃದ್ಧ ಶಾರೀರಿಕ ಹಾಗೂ ಮಾನಸಿಕ ಸ್ವಾಸ್ಥ್ಯವನ್ನು ಬೆಳೆಸಿಕೊಳ್ಳುವುದು
  • ಭಗವಂತನೊಂದಿಗೆ ಒಂದು ವೈಯಕ್ತಿಕ ಸಂಬಂಧ ಮತ್ತು ಇತರರೊಂದಿಗೆ ಮತ್ತು ತನ್ನೊಂದಿಗೆ ಆರೋಗ್ಯಕರ ಸಂಬಂಧವನ್ನು ಬೆಳೆಸಿಕೊಳ್ಳುವುದು
  • ಆಧುನಿಕ ವಿಜ್ಞಾನ ಮತ್ತು ಭಾರತದ ಪುರಾತನ ತತ್ತ್ವಚಿಂತನೆಗಳ ಮಿಲನ

ನಿಯತಕಾಲಿಕೆಯಲ್ಲಿನ ಲೇಖನಗಳ ಕೆಲವು ಮಾದರಿಗಳನ್ನು ಆನಂದಿಸಿ

ಯೋಗದಾ ಸತ್ಸಂಗ ನಿಯತಕಾಲಿಕೆಯ ಒಂದು ಸಂಚಿಕೆಯ ನಮೂನೆಯನ್ನು ಓದಿ

ಏಪ್ರಿಲ್‌-ಜೂನ್‌ 2020 ಸಂಚಿಕೆ

ನಿಯತಕಾಲಿಕೆಯಲ್ಲಿನ ಇತ್ತೀಚಿಗಿನ ಕೆಲವು ಲೇಖನಗಳನ್ನು ಓದಿ

“ಆರ್‌ ವಿ ರಿಯಲಿ ಎಂಟರಿಂಗ್‌ ಎ ಬೆಟರ್‌ ಏಜ್‌?” ಸ್ವಾಮಿ ಆನಂದಮೊಯಿ ಗಿರಿ ಅವರಿಂದ

“ಕರೇಜ್‌ ಟು ಫೇಸ್‌ ಅವರ್‌ ಫಿಯರ್ಸ್‌” ಶ್ರೀ ಶ್ರೀ ದಯಾ ಮಾತಾರಿಂದ

“ಯೋಗ ಅಂಡ್‌ ದಿ ಎಮೋಷನ್ಸ್‌: ಎಮೋಷನಲ್‌ ಮೆಚ್ಯುರಿಟಿ ಫಾರ್‌ ಹೆಲ್ತ್‌, ಹ್ಯಾಪಿನೆಸ್‌, ಅಂಡ್‌ ಸೆಲ್ಫ್‌-ರಿಯಲೈಝೇಷನ್‌” ಶ್ರೀ ಶ್ರೀ ಪರಮಹಂಸ ಯೋಗಾನಂದರಿಂದ

“ದಿ ಯೋಗ ಸಾಧನ ದಟ್‌ ಬ್ರಿಂಗ್ಸ್‌ ಗಾಡ್ಸ್‌ ಲವ್‌ ಅಂಡ್‌ ಬ್ಲಿಸ್‌” ಶ್ರೀ ಶ್ರೀ ಮೃಣಾಲಿನಿ ಮಾತಾರಿಂದ

“ಪರ್ಚೇಸಿಂಗ್‌ ಎಟರ್ನಿಟಿ: ಅಪ್ಲೈಯಿಂಗ್‌ ದಿ ಪವರ್‌ ಆಫ್‌ ಎಕನಾಮಿಕ್‌ ಪ್ರಿನ್ಸಿಪಲ್ಸ್‌ ಟು ಅಚೀವ್‌ ಅವರ್‌ ಸ್ಪಿರಿಚ್ಯುವಲ್‌ ಗೋಲ್ಸ್‌” ಸ್ವಾತಿ ಮುಖರ್ಜಿ ಅವರಿಂದ

“ಪ್ರಾಕ್ಟೀಸಿಂಗ್‌ ದಿ ಡಿವೈನ್‌ ಪ್ರೆಸೆನ್ಸ್‌” ಸ್ವಾಮಿ ಭಕ್ತಾನಂದ ಗಿರಿಯವರಿಂದ

ನಮ್ಮ ವೆಬ್‌ಸೈಟ್‌ನಿಂದ ಇನ್ನಷ್ಟು ಪ್ರೇರಣೆಗಳು

ಕಳೆದ ಎರಡು-ಮೂರು ದಶಕಗಳಲ್ಲಿ ನಮ್ಮ ಜಗತ್ತು ವಿಶ್ವಾದ್ಯಂತದ ಓದುಗರಿಗೆ ನೀಡುವ ಮಾಹಿತಿ ಹಾಗೂ ಸೂಚನೆಗಳ ಪ್ರಕಟಣೆ ಮತ್ತು ವಿತರಣೆಯಲ್ಲಿ ಒಂದು ದೊಡ್ಡ ಬದಲಾವಣೆಯನ್ನು ಕಂಡಿದೆ. ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾವು ಇದರಿಂದ ಅನೇಕ ರೀತಿಯಲ್ಲಿ ವಿಕಸನಗೊಂಡಿದೆ ಮತ್ತು ಪ್ರಯೋಜನವನ್ನು ಪಡೆದುಕೊಂಡಿದೆ, ವೈಎಸ್ಎಸ್ ವಿದ್ಯಾರ್ಥಿಗಳಿಗೆ ಮತ್ತು ವೈಎಸ್ಎಸ್ ಅನ್ನು ಮೊದಲ ಬಾರಿಗೆ ಕಂಡುಕೊಂಡವರಿಗೆ — ಪರಮಹಂಸ ಯೋಗಾನಂದರು ವೈಎಸ್‌ಎಸ್/ಎಸ್‌ಆರ್‌ಎಫ್‌ಗಾಗಿ ಕಲ್ಪಿಸಿಕೊಂಡಂತಹ ಜಾಗತಿಕ ಆಧ್ಯಾತ್ಮಿಕ ಸಾಮರಸ್ಯ ಮತ್ತು ಫೆಲೋಶಿಪ್ ಅನ್ನು ಹೆಚ್ಚಿನ ರೀತಿಯಲ್ಲಿ ಅನುಭವಿಸಲು ಸಹಾಯ ಮಾಡಲು ಆನ್‌ಲೈನ್‌ನಲ್ಲಿ ಮಲ್ಟಿಮೀಡಿಯಾ ಕೊಡುಗೆಗಳ ವ್ಯಾಪಕ ಶ್ರೇಣಿಯನ್ನು ಹೆಚ್ಚು ಹೆಚ್ಚಾಗಿ ಒದಗಿಸುತ್ತಿದೆ.

ಜೊತೆಗೆ, ಪರಮಹಂಸ ಯೋಗಾನಂದರ ಕ್ರಿಯಾ ಯೋಗ ಬೋಧನೆಗಳ ಪ್ರಸರಣದಲ್ಲಿ ಇತ್ತೀಚೆಗೆ ಒಂದು ಮೈಲಿಗಲ್ಲು ನಿರ್ಮಾಣವಾಗಿದೆ. 2019ರಲ್ಲಿ ಯೋಗದಾ ಸತ್ಸಂಗ ಸೊಸೈಟಿ ಆಫ್‌ ಇಂಡಿಯಾ ಯೋಗದಾ ಸತ್ಸಂಗ ಪಾಠಮಾಲಿಕೆಗಳ ಸಂಪೂರ್ಣ ಹಾಗೂ ವಿಸ್ತೃತ ಆವೃತ್ತಿಯನ್ನು ಹೊರತಂದಿತು. ಇದರಲ್ಲಿ ಭಕ್ತಾದಿಗಳಿಗಾಗಿ ಮೂವತ್ತಕ್ಕಿಂತ ಹೆಚ್ಚು ವರ್ಷಗಳಲ್ಲಿ ಪರಮಹಂಸಜಿಯವರು ಬರೆದ ಬರಹಗಳು, ನೀಡಿದ ಪ್ರವಚನಗಳು ಮತ್ತು ಸೂಚನೆಗಳಿಂದ ವಿಸ್ತೃತವಾಗಿ ತೆಗೆದುಕೊಂಡ, ಇದುವರೆಗೂ ಪ್ರಕಟವಾಗದ ಬೋಧನೆಗಳು ಮತ್ತು ತಂತ್ರಗಳ ಅತ್ಯಂತ ಆಳವಾದ ಪ್ರಸ್ತುತಿಯೂ ಸೇರಿದೆ.

ಈ ಎಲ್ಲಾ ಕಾರ್ಯಕ್ರಮಗಳ ಮೂಲಕ, 1925 ರಲ್ಲಿ ಸೆಲ್ಫ್‌-ರಿಯಲೈಝೇಷನ್‌ (ಯೋಗದಾ ಸತ್ಸಂಗ) ನಿಯತಕಾಲಿಕೆಯ ಮೊದಲ ಸಂಚಿಕೆಯನ್ನು ಪ್ರಕಟಿಸುವುದರೊಂದಿಗೆ ನಿರಾಡಂಬರವಾಗಿ ಪ್ರಾರಂಭವಾದ ಸ್ಫೂರ್ತಿಯ ಹರಿವು ಶೀಘ್ರತರವಾಗಿ ವಿಸ್ತರಿಸಿದೆ, ಅದರಿಂದಾಗಿ, ಪರಮಹಂಸಜಿಯವರ ಬೋಧನೆಗಳಲ್ಲಿರುವ ಜ್ಞಾನವು ಅಭೂತಪೂರ್ವ ಪ್ರಮಾಣದಲ್ಲಿ ಅನ್ವೇಷಕರಿಗೆ ತಲುಪುವಂತಾಯಿತು, ಅದು ಅವರು ನಿಯತಕಾಲಿಕೆಯನ್ನು ಉದ್ಘಾಟಿಸಿದಾಗ ಸಾಧ್ಯವಾದುದಕ್ಕಿಂತ ಬಹಳ ಬಹಳ ಹೆಚ್ಚಾಗಿತ್ತು.

ನಮ್ಮ ವೆಬ್‌ಸೈಟ್‌ನಲ್ಲಿ ಈ ಮಾದರಿ ಕೊಡುಗೆಗಳ ಲಿಂಕ್‌ ನೋಡಲು ಮತ್ತು ಹೆಚ್ಚಿನ ಮಾಹಿತಿಗಾಗಿ ಸ್ಕ್ರೋಲ್‌ ಮಾಡಿ.

ಪ್ರತಿವಾರದ ಮಾರ್ಗದರ್ಶಿತ ಧ್ಯಾನದೊಂದಿಗೆ ಆನ್‌ಲೈನ್‌ ಸ್ಫೂರ್ತಿದಾಯಕ ಸತ್ಸಂಗಗಳು

ವೈಎಸ್‌ಎಸ್‌/ಎಸ್‌ಆರ್‌ಎಫ್‌, 2020 ರಲ್ಲಿ ಮಾರ್ಗದರ್ಶಿತ ಧ್ಯಾನಗಳೊಂದಿಗೆ ಸಾಪ್ತಾಹಿಕ ಆನ್‌ಲೈನ್ ಸ್ಫೂರ್ತಿದಾಯಕ ಪ್ರವಚನಗಳನ್ನೂ ನೀಡಲು ಪ್ರಾರಂಭಿಸಿತು, ಅದರಲ್ಲಿ ಈಗಿನ ವೈಎಸ್‌ಎಸ್‌/ಎಸ್‌ಆರ್‌ಎಫ್‌ನ ಸನ್ಯಾಸಿಗಳ ಪ್ರಸ್ತುತಿಯ ಜೊತೆಗೆ, ಹಿಂದಿನ ವರ್ಷಗಳಲ್ಲಿ ಪರಮಹಂಸಜಿಯವರ ಪ್ರೀತಿಯ ನಿಕಟ ಶಿಷ್ಯರಾದ ಶ್ರೀ ದಯಾ ಮಾತಾ, ಶ್ರೀ ಮೃಣಾಲಿನಿ ಮಾತಾ, ಸ್ವಾಮಿ ಆನಂದಮೊಯಿ ಗಿರಿ, ಮತ್ತು ಇತರರದೂ ಇರುತ್ತದೆ. ಈ ವಿಡಿಯೋಗಳನ್ನು ವೈಎಸ್‌ಎಸ್‌/ಎಸ್‌ಆರ್‌ಎಫ್‌ ಜಾಲತಾಣಗಳು ಮತ್ತು ಯು ಟ್ಯೂಬ್‌ ಚಾನೆಲ್‌ಗಳಲ್ಲಿ ಶಾಶ್ವತವಾಗಿ ಇರಿಸಲಾಗಿದೆ.

ವೈಎಸ್‌ಎಸ್‌/ಎಸ್‌ಆರ್‌ಎಫ್‌ ಅಧ್ಯಕ್ಷರಾದ ಶ್ರೀ ಶ್ರೀ ಸ್ವಾಮಿ ಚಿದಾನಂದ ಗಿರಿಯವರ ವೀಡಿಯೋ ಪ್ರವಚನಗಳು, ಧ್ಯಾನಗಳು ಮತ್ತು ಸಕಾಲಿಕ ಸಂದೇಶಗಳು

ಪರಮಹಂಸ ಯೋಗಾನಂದರ ಆಧ್ಯಾತ್ಮಿಕ ಉತ್ತರಾಧಿಕಾರಿಗಳಾದ ವೈಎಸ್‌ಎಸ್‌/ಎಸ್‌ಆರ್‌ಎಫ್‌ ಅಧ್ಯಕ್ಷರುಗಳ ಪ್ರವಚನಗಳು ಮತ್ತು ಇಂದಿನ ಸಂದೇಶಗಳು — ಯೋಗದಾ ಸತ್ಸಂಗ ನಿಯತಕಾಲಿಕೆಯ ಮುಖ್ಯ ಆಕರ್ಷಣೆಯಾಗಿವೆ. ನಮ್ಮ ಬ್ಲಾಗ್‌ ಮತ್ತು ನಮ್ಮ ನಿಯತಕಾಲಿಕೆಯ ವಾರ್ಷಿಕ ಸಂಚಿಕೆಯಲ್ಲಿ ಲಭ್ಯವಿರುವ, ವೈಎಸ್‌ಎಸ್‌/ಎಸ್‌ಆರ್‌ಎಫ್‌ ಅಧ್ಯಕ್ಷರಾದ ಸ್ವಾಮಿ ಚಿದಾನಂದ ಗಿರಿಯವರ ಒಳನೋಟ ಹಾಗೂ ಪ್ರೇರಣೆಯೊಂದಿಗೆ ಈ ಪರಂಪರೆ ಹಾಗೇ ಮುಂದುವರೆದಿದೆ. ಅದರ ಜೊತೆಗೆ, ಸ್ವಾಮಿ ಚಿದಾನಂದ ಗಿರಿಯವರು ನಡೆಸಿಕೊಡುವ ಮಾರ್ಗದರ್ಶಿತ ಧ್ಯಾನಗಳ ವೀಡಿಯೋ ಕೂಡ ಇವೆ.

ಯೋಗದಾ ಸತ್ಸಂಗದ ಸುದ್ದಿ ಸಮಾಚಾರಗಳು

ಹಲವಾರು ವರ್ಷಗಳುದ್ದಕ್ಕೂ ಯೋಗದಾ ಸತ್ಸಂಗ ನಿಯತಕಾಲಿಕೆಯನ್ನು ಓದುತ್ತಾ ಬಂದಿರುವ ಓದುಗರಿಗೆ, ನಿಯತಕಾಲಿಕೆಯ “ವೈಎಸ್‌ಎಸ್‌ ಸುದ್ದಿ ಸಮಾಚಾರಗಳ” ವಿಭಾಗವನ್ನು ವೀಕ್ಷಿಸುವುದು ಬಹಳ ಆಸಕ್ತಿಯ ವಿಷಯವಾಗಿದೆ. ನಮ್ಮ ಬ್ಲಾಗ್‌ನ ಸುದ್ದಿ ಸಮಾಚಾರದ ವಿಭಾಗದ ಮೂಲಕ ನೀವು ವೈಎಸ್‌ಎಸ್‌ ಬಗ್ಗೆ ಹಲವಾರು ಛಾಯಾಚಿತ್ರಗಳು ಮತ್ತು ವೀಡಿಯೋಗಳ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಬಹುದು. ಜೊತೆಗೆ ವಾರ್ಷಿಕ ಮುದ್ರಿತ ಸಂಚಿಕೆಗಳಲ್ಲಿ ವರ್ಷದ ಸ್ವಾರಸ್ಯಕರ ವಿಷಯಗಳನ್ನು ಪ್ರಕಟಿಸಲಾಗುತ್ತದೆ.

ವೈಎಸ್‌ಎಸ್‌ ಆನ್‌ಲೈನ್‌ ಧ್ಯಾನ ಕೇಂದ್ರ

2021ರಲ್ಲಿ ಯೋಗದಾ ಸತ್ಸಂಗ ಸೊಸೈಟಿ ಆಫ್‌ ಇಂಡಿಯಾ, ವೈಎಸ್‌ಎಸ್‌ ಆನ್‌ಲೈನ್‌ ಧ್ಯಾನ ಕೇಂದ್ರವನ್ನು ಆರಂಭಿಸಿತು. ಇದು ವೈಎಸ್‌ಎಸ್‌/ಎಸ್‌ಆರ್‌ಎಫ್‌ನ ವಿದ್ಯಾರ್ಥಿಗಳಿಗೆ ಹಾಗೂ ಧ್ಯಾನಕ್ಕೆ ಹೊಸಬರಾದವರಿಗೆ ಪ್ರತಿದಿನದ ಸಮೂಹ ಧ್ಯಾನಗಳ ವೇಳಾಪಟ್ಟಿಯ ವಿಸ್ತೃತ ವಿವರವನ್ನು ನೀಡುತ್ತದೆ. ಬಹಳಷ್ಟನ್ನು ಇಂಗ್ಲಿಷ್‌, ಹಿಂದಿ ಮತ್ತು ಇತರ ಭಾರತೀಯ ಭಾಷೆಗಳಲ್ಲಿ ದೀರ್ಘಕಾಲದ ವೈಎಸ್‌ಎಸ್‌ ಭಕ್ತಾದಿಗಳಿಂದ ನಡೆಸಿಕೊಡಲಾಗುತ್ತದೆ. ಜೊತೆಗೆ, ಪ್ರತಿ ವಾರದ ಸಮೂಹ ಧ್ಯಾನಗಳನ್ನು ವೈಎಸ್‌ಎಸ್‌ ಸನ್ಯಾಸಿಗಳು ನಡೆಸಿಕೊಡುತ್ತಾರೆ.

ವೈಎಸ್‌ಎಸ್‌ ಪಾಠಗಳು

ಯೋಗದಾ ಸತ್ಸಂಗ ನಿಯತಕಾಲಿಕೆಯಿಂದ ಪ್ರೇರಣೆ ಪಡೆಯಲು, ಹಾಗೂ ಯೋಗಿಯ ಆತ್ಮಕಥೆಯಲ್ಲಿರುವ ಪ್ರಬುದ್ಧ ಸತ್ಯವನ್ನು ತಿಳಿಯಲು ಮತ್ತು ವೈಎಸ್‌ಎಸ್‌ನ “ಬದುಕುವುದು-ಹೇಗೆ”ಯ ತತ್ತ್ವಗಳನ್ನು ಮತ್ತು ಧ್ಯಾನದ ತಂತ್ರಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳ ಬಯಸುವವರಿಗಾಗಿ ಪರಮಹಂಸ ಯೋಗಾನಂದರು ಯೋಗದಾ ಸತ್ಸಂಗ ಪಾಠಗಳನ್ನು ರೂಪಿಸಿದ್ದಾರೆ, ಇವು, ಧ್ಯಾನದ ವಿಜ್ಞಾನ ಮತ್ತು ಸಮತೋಲಿತ ಆಧ್ಯಾತ್ಮಿಕ ಜೀವನದ ಬಗ್ಗೆ ಅವರ ವೈಯಕ್ತಿಕ ಮತ್ತು ಆಳವಾದ ಸೂಚನೆಗಳನ್ನು ಪ್ರಸ್ತುತಪಡಿಸುವ ಒಂದು ಸಮಗ್ರ ಗೃಹಾಧ್ಯಯನದ ಸರಣಿಯಾಗಿದೆ. ಕೆಳಗೆ ನೀಡಿರುವ ಲಿಂಕ್‌ ಅನ್ನು ಒತ್ತಿ ಈ ಆನಂದಪೂರ್ಣ ಬದಲಾವಣೆಯ ಪಯಣವನ್ನು ಪ್ರಾರಂಭಿಸುವ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆಯಿರಿ.

ಚಂದಾದಾರರಾಗಿ

ಡಿವೋಟೀ ಪೋರ್ಟಲ್‌ ಅಥವಾ ಆನ್‌ಲೈನ್‌ ಪುಸ್ತಕಮಳಿಗೆಯ ಮೂಲಕ ನೀವು ನಿಯತಕಾಲಿಕೆಯ 2024ರ ವಾರ್ಷಿಕ ಸಂಚಿಕೆಗೆ ಚಂದಾದಾರರಾಗಬಹುದು.

ಆನ್‌ಲೈನ್‌ ಪುಸ್ತಕ ಮಳಿಗೆಯ ಮೂಲಕವೂ ಕೂಡ ನೀವು ನಿಯತಕಾಲಿಕೆಯ 2024ರ ವಾರ್ಷಿಕ ಸಂಚಿಕೆಯನ್ನು ಕೊಂಡುಕೊಳ್ಳಬಹುದು.