ಯೋಗದಾ ಸತ್ಸಂಗ ಶಾಖಾ ಆಶ್ರಮ — ಚೆನ್ನೈ

…ಕಾಲ ಕಾಲಕ್ಕೆ ಭಕ್ತಾದಿಗಳು ಅಲ್ಲಿಗೆ ಹೋಗಿ ತಮ್ಮನ್ನು ತಾವು ಆರಾಮವಾಗಿರಿಸಿಕೊಳ್ಳುವಂತಹ ಮತ್ತು ನವ ಚೈತನ್ಯವನ್ನು ತುಂಬಿಕೊಳ್ಳುವಂತಹ ಒಂದು ಆಧ್ಯಾತ್ಮಿಕ ಶಾಂತಿಯ ಓಯಸಿಸ್‌ ಆಗಲಿ

— ಶ್ರೀ ಶ್ರೀ ದಯಾ ಮಾತಾ

ವೈಎಸ್‌ಎಸ್‌/ಎಸ್‌ಆರ್‌ಎಫ್‌ನ ಸಂಘಮಾತಾ ಹಾಗೂ ಮೂರನೆಯ ಅಧ್ಯಕ್ಷರಾಗಿದ್ದ ಶ್ರೀ ಶ್ರೀ ದಯಾ ಮಾತಾರವರು 2010ರಲ್ಲಿ ಚೆನ್ನೈನ ಏಕಾಂತಧಾಮವನ್ನು ಲೋಕಾರ್ಪಣೆ ಮಾಡುವ ಸಂದರ್ಭದಲ್ಲಿ ಆಶೀವರ್ದಿಸಿ ಹೇಳಿದ ಈ ದೈವ ನಿಯಾಮಕದ ನುಡಿಗಳು, ಯೋಗದಾ ಸತ್ಸಂಗ ಶಾಖಾ ಆಶ್ರಮ, ಚೆನ್ನೈನ ವಿಕಾಸವನ್ನು ತಿಳಿಸಿ ಹೇಳುತ್ತವೆ.

ಆಶ್ರಮವು ಪ್ರೀತಿಯಿಂದ ಮಾಡಿದ ಕೆಲಸದ ಪರಾಕಾಷ್ಠೆ–ಭಗವಂತ ಹಾಗೂ ಗುರುಗಳಿಗೆ ಸಲ್ಲಿಸಿದ ದಣಿವರಿಯದ ಸೇವೆಯ ಚೇತನಕ್ಕೊಂದು ಮಧುರ ಸಾಕ್ಷ್ಯ. ಕಾನನದಲ್ಲಿ ಒಂದು ಪುಟ್ಟ ಧ್ಯಾನದ ಗುಡಿಸಲಾಗಿ ಆರಂಭವಾದದ್ದು, ನಗರ ಜೀವನದ ನೂಕುನುಗ್ಗಲು ಗಲಿಬಿಲಿಗಳ ಮಧ್ಯೆ ಭಕ್ತಾದಿಗಳು ನವಚೈತನ್ಯವನ್ನು ಅರಸುವ ಒಂದು ಆಧ್ಯಾತ್ಮಿಕ ಓಯಸಿಸ್‌ ಆಗಿ ನಿರಂತರವಾಗಿ ಬೆಳೆದಿದೆ.

ಚೆನ್ನೈನಿಂದ ಒಂದು ಘಂಟೆಗಳ ಕಾಲದ ಮೋಟಾರ್‌ ಪ್ರಯಾಣದ ದೂರದಲ್ಲಿರುವ ಶ್ರೀಪೆರುಂಬುದೂರ್‌ ಬಳಿಯಿರುವ ಮಣ್ಣೂರ್‌ ಗ್ರಾಮದಲ್ಲಿ ಸ್ಥಿತವಾಗಿರುವ ಆಶ್ರಮದ ಜಾಗವನ್ನು 1973ರಲ್ಲಿ ವೈಎಸ್‌ಎಸ್‌ನ ದೀರ್ಘಕಾಲದ ಭಕ್ತರಾದ ಶ್ರೀ ಗಾಯ್‌ತೊಂಡೆ ಖರೀದಿಸಿ ಕೊನೆಗೆ 1998ರಲ್ಲಿ ವೈಎಸ್‌ಎಸ್‌ಗೆ ದಾನ ಮಾಡಿದರು. ಡಿಸೆಂಬರ್‌ 31, 2006 ರಂದು ಸ್ವಾಮಿ ಶಾಂತಾನಂದರು ಮುಖ್ಯ ಕಟ್ಟಡದ ಶಂಕುಸ್ಥಾಪನೆ ಮಾಡಿದರು. ಜುಲೈ 25, 2010ರಂದು ಸ್ವಾಮಿ ಶುದ್ಧಾನಂದರು ಏಕಾಂತಧಾಮವನ್ನು ಲೋಕಾರ್ಪಣೆ ಮಾಡಿ ಅದರ ಮೊಟ್ಟ ಮೊದಲ ಸಂನ್ಯಾಸಿಗಳ ಕಾರ್ಯಕ್ರಮವನ್ನು ನೆರವೇರಿಸಿಕೊಟ್ಟರು. ಕಾರ್ಯಕ್ರಮದಲ್ಲಿ 1,000ಕ್ಕೂ ಹೆಚ್ಚು ಭಕ್ತಾದಿಗಳು ಭಾಗಿಯಾಗಿದ್ದರು.

ಭಕ್ತಾದಿಗಳು ತಮ್ಮ ಸಾಧನೆ, ಅಧ್ಯಯನದ ನವಚೈತನ್ಯ ಪಡೆಯುವುದಕ್ಕೆ ಮತ್ತು ಪರಮಹಂಸ ಯೋಗಾನಂದರ ರಾಜ ಯೋಗ ಬೋಧನೆಗಳನ್ನು ಮನಗಾಣುವುದಕ್ಕೆ ಚೆನ್ನೈನ ಯೋಗದಾ ಸತ್ಸಂಗ ಶಾಖಾ ಆಶ್ರಮವು ಪವಿತ್ರ ಸ್ಥಳಗಳಿಂದ ಆವೃತವಾಗಿದೆ. ಭಾನುವಾರದ ಸತ್ಸಂಗ ಹಾಗೂ ಪ್ರತಿ ದಿನದ ಧ್ಯಾನದ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರ ಜೊತೆಗೆ ಭಕ್ತಾದಿಗಳು ಪರಮಹಂಸ ಯೋಗಾನಂದರು ನೀಡಿರುವ ಧ್ಯಾನ ತಂತ್ರಗಳಿಗೆ ಸಂಬಂಧಪಟ್ಟಂತೆ ವೈಎಸ್‌ಎಸ್‌ ಸನ್ಯಾಸಿಗಳಿಂದ ಆಧ್ಯಾತ್ಮಿಕ ಸಲಹೆಯನ್ನು ಮತ್ತು ಮಾರ್ಗದರ್ಶನವನ್ನು ಕೇಳುವುದಕ್ಕೆ ಅವರನ್ನು ಸ್ವಾಗತಿಸುತ್ತೇವೆ.

ವೈಎಸ್‌ಎಸ್‌ ಚೆನ್ನೈ ಏಕಾಂತಧಾಮವನ್ನು ವೈಎಸ್‌ಎಸ್‌ ಆಶ್ರಮವನ್ನಾಗಿ ಮೇಲ್ದರ್ಜೆಗೆ ಏರಿಸಲಾಯಿತು.

ಸಾಧನಾ ಸಂಗಮನ ಮುಕ್ತಾಯದ ಕಾರ್ಯಕ್ರಮದಲ್ಲಿ ನಡೆದ ನೇರ-ಪ್ರಸಾರದ ಸತ್ಸಂಗದ ಸಮಯದಲ್ಲಿ ಯೋಗದಾ ಸತ್ಸಂಗ ಸೊಸೈಟಿ ಆಫ್‌ ಇಂಡಿಯಾ/ಸೆಲ್ಫ್‌-ರಿಯಲೈಝೇಷನ್‌ ಫೆಲೋಷಿಪ್‌ನ ಅಧ್ಯಕ್ಷರು ಹಾಗೂ ಆಧ್ಯಾತ್ಮಿಕ ಮುಖ್ಯಸ್ಥರಾದ ಸ್ವಾಮಿ ಚಿದಾನಂದ ಗಿರಿಯವರು ವೈಎಸ್‌ಎಸ್‌ ಚೆನ್ನೈ ಏಕಾಂತಧಾಮವನ್ನು ಇನ್ನು ಮುಂದೆ ವೈಎಸ್‌ಎಸ್‌ ಆಶ್ರಮವೆಂದು ಕರೆಯಲಾಗುತ್ತದೆ ಮತ್ತು ಮುಂದಿನ ವರ್ಷಗಳಲ್ಲಿ ಅದನ್ನು ಒಂದು ಸಮೃದ್ಧ ಆಶ್ರಮವನ್ನಾಗಿ ಅಭಿವೃದ್ಧಿಪಡಿಸಲಾಗುತ್ತದೆ ಎಂದು ವಿಧ್ಯುಕ್ತವಾಗಿ ಘೋಷಿಸಿದರು ಎಂದು ನಿಮ್ಮೊಡನೆ ಹಂಚಿಕೊಳ್ಳಲು ನಮಗೆ ಬಹಳ ಹರ್ಷವಾಗುತ್ತಿದೆ.

ವೈಎಸ್‌ಎಸ್‌/ಎಸ್‌ಆರ್‌ಎಫ್‌ನ ಅಧ್ಯಕ್ಷರು ಹಾಗೂ ಆಧ್ಯಾತ್ಮಿಕ ಮುಖ್ಯಸ್ಥರಾದ ಸ್ವಾಮಿ ಚಿದಾನಂದ ಗಿರಿಯವರು ವೈಎಸ್‌ಎಸ್‌ ಚೆನ್ನೈ ಏಕಾಂತಧಾಮವನ್ನು ವೈಎಸ್‌ಎಸ್‌ ಆಶ್ರಮವೆಂದು ಘೋಷಿಸಿದರು.

para-ornament
ವೈಎಸ್‌ಎಸ್‌ಗೆ ಹೊಸಬರೇ? ವೈಎಸ್‌ಎಸ್‌ ಪಾಠಮಾಲಿಕೆಗಳು ಹೇಗೆ ನಿಮ್ಮನ್ನು ಬದಲಾಯಿಸಿ ನಿಮ್ಮ ಬದುಕಿಗೆ ಒಂದು ಸಂತುಲನೆಯನ್ನು ತರುತ್ತವೆ ಎಂಬುದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆಯಿರಿ.

ಧ್ಯಾನ ಮಂದಿರ ಮತ್ತು ಧ್ಯಾನದ ಮೈದಾನಗಳು

ಧ್ಯಾನ ಮಂದಿರ

ಧ್ಯಾನ ಮಂದಿರವು ವೈಎಸ್‌ಎಸ್‌ ಗುರುಗಳ ಪರಂಪರೆಯ ಒಂದು ಪೂಜಾಪೀಠವನ್ನು ಹೊಂದಿದೆ, ಆಶ್ರಮದ ಪರಿಸರದಲ್ಲಿ ಒಂದು ಚಿರಸ್ಮರಣೀಯ ಉಪಸ್ಥಿತಿ. 65 ಮಂದಿ ಕುಳಿತುಕೊಳ್ಳಬಹುದಾದ ಈ ಕೋಣೆಯನ್ನು ಪ್ರತಿದಿನದ ಬೆಳಿಗ್ಗೆ ಮತ್ತು ಸಂಜೆ ಹಾಗೂ ವಿಶೇಷ ಸ್ಮರಣಾರ್ಥ ಧ್ಯಾನಗಳಿಗೆ ಉಪಯೋಗಿಸಲಾಗುತ್ತದೆ.

ಅಷ್ಟೇ ಅಲ್ಲದೆ, ಸಾಧನಾ ಸಂಗಮಗಳಲ್ಲಿ, ಮಕ್ಕಳ ಶಿಬಿರಗಳಲ್ಲಿ ಮತ್ತು ನಡೆಸಲಾಗುವ ಏಕಾಂತಧ್ಯಾನದ ಶಿಬಿರಗಳಲ್ಲಿ ಇದು ವಿವಿಧ ಚಟುವಟಿಕೆಗಳು, ತರಗತಿಗಳು ಮತ್ತು ಸತ್ಸಂಗಗಳ ಕೇಂದ್ರವಾಗಿದೆ.

ಧ್ಯಾನದ ಮೈದಾನಗಳು

ಚೆನ್ನೈ ಆಶ್ರಮದಲ್ಲಿ ಮೊಟ್ಟ ಮೊದಲಿಗೆ ನಿರ್ಮಿತವಾದದ್ದು ಧ್ಯಾನದ ಗುಡಿಸಲು. ಮಣ್ಣೂರ್‌ ಸರೋವರಕ್ಕೆದುರಾಗಿರುವ ಈ ಸಾಧಾರಣ ಗುಡಿಸಲು, ಧ್ಯಾನಕ್ಕೆ ಒಂದು ಪವಿತ್ರ ಸ್ಥಳವಾಗಿದೆ.

ಭಕ್ತಾದಿಗಳು ಪ್ರಕೃತಿಯೊಂದಿಗೆ ಬೆರೆಯಲು ಮತ್ತು ಅದರ ಮಧ್ಯದಲ್ಲಿ ಗಾಢವಾದ ಧ್ಯಾನದಲ್ಲಿ ತೊಡಗಲು ಈ ಸ್ಥಳದಲ್ಲಿ ವಿವಿಧ ಜಾಗಗಳಿವೆ. ಅವುಗಳಲ್ಲಿ ಒಂದು ಉದ್ಯಾನವನದ ಪೂಜಾಪೀಠ, ಒಂದು ಗಜೆಬೋ, ಒಂದು ತಾವರೆಯ ಕೊಳ ಮತ್ತು ಸರೋವರವನ್ನು ಎದುರು ನೋಡುತ್ತಿರುವ ಒಂದು ಧ್ಯಾನದ ಗೋಪುರಗಳು ಸೇರಿವೆ.

ಆಶ್ರಮದ ಭೂಮಿಯು ಬಗೆಬಗೆಯ ಸಮೃದ್ಧ ತೆಂಗು ಮತ್ತು ಮಾವಿನ ಮರಗಳು, ಹಲವಾರು ಬಗೆಯ ಹೂ ಗಿಡಗಳು ಮತ್ತು ತರಕಾರಿಯ ತೋಟಗಳಿಗೆ ನೆಲೆಯಾಗಿದೆ. ಹಲವಾರು ಸ್ಥಳಗಳಲ್ಲಿ ಆರಾಮವಾಗಿ ಕೂರಲು ಬೆಂಚುಗಳಿರುವ ಈ ಪರಿಸರವು ಭಕ್ತಾದಿಗಳಿಗೆ ಪ್ರಕೃತಿಯಲ್ಲಿರುವ ದಿವ್ಯತೆಯೊಂದಿಗೆ ಬೆರೆಯಲು ಮತ್ತು ಶರೀರ, ಮನಸ್ಸು ಮತ್ತು ಚೈತನ್ಯವನ್ನು ಹಾಯಾಗಿರಿಸಲು ಅನುವು ಮಾಡಿಕೊಡುತ್ತದೆ.

ಆಶ್ರಮದಲ್ಲಿರುವ ಸೌಕರ್ಯಗಳ ಮಧ್ಯಂತರ ಉನ್ನತೀಕರಣಗಳು

ವೈಎಸ್‌ಎಸ್‌ ಭಕ್ತಾದಿಗಳಿಗೆ ದಿನ ನಿತ್ಯದ ಧ್ಯಾನಗಳಿಗಾಗಿ, ಆಧ್ಯಾತ್ಮಿಕ ಸಲಹೆಗಾಗಿ, ಸತ್ಸಂಗಗಳನ್ನು ನಡೆಸಿಕೊಡುವುದಕ್ಕಾಗಿ, ಸಾಧನಾ ಸಂಗಮಗಳಿಗಾಗಿ, ಏಕಾಂತ ಶಿಬಿರಗಳನ್ನು ಏರ್ಪಡಿಸುವುದಕ್ಕಾಗಿ ಮತ್ತು ಸ್ಮರಣಾರ್ಥ ಸೇವೆಗಳನ್ನು ನಡೆಸುವುದಕ್ಕಾಗಿ ವೈಎಸ್‌ಎಸ್‌ ಸನ್ಯಾಸಿಗಳು ಚೆನ್ನೈ ಏಕಾಂತಧಾಮದಲ್ಲಿ ಸದಾ ನೆಲೆಸಿರಲು ಯೋಗದಾ ಸತ್ಸಂಗ ಸೊಸೈಟಿ ಆಫ್‌ ಇಂಡಿಯಾ/ಸೆಲ್ಫ್‌-ರಿಯಲೈಝೇಷನ್‌ ಫೆಲೋಷಿಪ್‌ನ ಅಧ್ಯಕ್ಷರು ಹಾಗೂ ಆಧ್ಯಾತ್ಮಿಕ ಮುಖ್ಯಸ್ಥರಾದ ಸ್ವಾಮಿ ಚಿದಾನಂದಜಿಯವರು ಫೆಬ್ರವರಿ 2024ರಲ್ಲಿ ಅನುಮೋದನೆ ನೀಡಿದರು. ಅಂದಿನಿಂದ, ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕೆಂಬ ಆಸಕ್ತಿಯಿರುವ ಭಕ್ತಾದಿಗಳ ಸಂಖೆಯಲ್ಲಿ ಸಾಕಷ್ಟು ವೃದ್ಧಿಯಾಗಿದೆ ಮತ್ತು ಈ ಬೇಡಿಕೆಯು ಮುಂದಿನ ದಿನಗಳಲ್ಲಿ, ಆಧ್ಯಾತ್ಮಿಕ ನವಚೈತನ್ಯ ಹಾಗೂ ಮಾರ್ಗದರ್ಶನಕ್ಕಾಗಿ ಬರುವ ಭಕ್ತಾದಿಗಳ ಸಂಖ್ಯೆಯಲ್ಲಿ ಇನ್ನೂ ವೃದ್ಧಿಯಾಗುತ್ತದೆ ಎಂದು ನಿರೀಕ್ಷಿಸಲಾಗಿದೆ.

ಈಗಿರುವ ಸೌಕರ್ಯಗಳು – ಮೊದಲಿಗೆ ಒಂದು ಏಕಾಂತಧಾಮಕ್ಕಾಗಿ ಉದ್ದೇಶಿತವಾದದ್ದು – ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಸಾಕಾಗುತ್ತಿಲ್ಲ. ಈಗಿರುವ ವಸತಿ ಸೌಕರ್ಯ, ಅಡುಗೆ ಮನೆ, ಊಟದ ಸ್ಥಳಗಳು, ಕಾರ್ಯಾಲಯ ಹಾಗೂ ಇತರ ಸೌಕರ್ಯಗಳನ್ನು ಆಶ್ರಮದ ವಿಸ್ತೃತ ಪಾತ್ರವನ್ನು ನಿರ್ವಹಿಸಲು ದೊಡ್ಡ ಪ್ರಮಾಣದಲ್ಲಿ ಏರಿಸಬೇಕಾಗುತ್ತದೆ.

ವಾರದ ಕಾರ್ಯಕ್ರಮಗಳು

ಸಮೂಹ ಧ್ಯಾನಗಳು

ಜನಸಾಮಾನ್ಯರು ಭಾಗವಹಿಸಬಹುದಾದ ನಿತ್ಯ ಧ್ಯಾನ ಮತ್ತು ಸತ್ಸಂಗಗಳನ್ನು ಆಶ್ರಮವು ಏರ್ಪಡಿಸುತ್ತದೆ. ಈ ಅವಧಿಗಳಲ್ಲಿ ಮೌನ ಧ್ಯಾನದ ಅವಧಿಗಳು, ಭಕ್ತಿಪೂರ್ಣ ಗಾಯನ ಮತ್ತು ಸ್ಫೂರ್ತಿದಾಯಕ ಓದುವಿಕೆಗಳು ಇರುತ್ತವೆ.

ಮಕ್ಕಳ ಸತ್ಸಂಗ

ಒಂದು ಭಾನುವಾರ ಬಿಟ್ಟು ಇನ್ನೊಂದು ಭಾನುವಾರದಂತೆ ಮಕ್ಕಳ ಸತ್ಸಂಗವನ್ನು ನಡೆಸಲಾಗುತ್ತದೆ. ಇದರಲ್ಲಿ 5ರಿಂದ 12ವರ್ಷ ವಯಸ್ಸಿನ ಮಕ್ಕಳು ವೈಎಸ್‌ಎಸ್‌ ಬೋಧನೆಗಳು ಹಾಗೂ ಬದುಕಿಗೆ ಆಧಾರವಾದ ತತ್ವಗಳ ಬಗ್ಗೆ ಆಕರ್ಷಕ ಚಟುವಟಿಕೆಗಳಾದ ಕಥೆ ಹೇಳುವುದು, ಅಲ್ಪಾವಧಿಯ ಮಾರ್ಗದರ್ಶಿತ ಧ್ಯಾನಗಳು ಮತ್ತು ಇತರ ಪರಸ್ಪರ ಕಲಿಕೆಯ ವಿಧಾನಗಳ ಮೂಲಕ ಕಲಿಯುತ್ತಾರೆ. ಹೆಚ್ಚಿಗೆ ತಿಳಿಯಿರಿ

ವೈಎಸ್‌ಎಸ್‌ ಸಾಧನಾ ಸಂಗಮಗಳು

YSS-Sadhana-Sangam-Chennai-Ashram-2024-Group-Photo-Sannyasis-and-devotees

ಯೋಗದಾ ಸತ್ಸಂಗದ ಬೋಧನೆಗಳ ಶಿಷ್ಯರಿಗೆ, ಪರಮಹಂಸ ಯೋಗಾನಂದರ ಬೋಧನೆಗಳಲ್ಲಿ ತಮ್ಮನ್ನು ತಾವು ತಲ್ಲೀನವಾಗಿಸಿಕೊಳ್ಳಲು ವೈಎಸ್‌ಎಸ್‌ ಧ್ಯಾನದ ತಂತ್ರಗಳು, ಸಮೂಹ ಧ್ಯಾನಗಳು, ಕೀರ್ತನೆಯ ಅವಧಿಗಳು ಮತ್ತು ಸನ್ಯಾಸಿಗಳು ನೀಡುವ ಸ್ಫೂರ್ತಿದಾಯಕ ಪ್ರವಚನಗಳಲ್ಲಿ ತೊಡಗಿಕೊಳ್ಳಲು ಒಂದು ಅದ್ವಿತೀಯ ಅವಕಾಶವನ್ನು ನೀಡುವ ನಾಲ್ಕು ದಿನದ ಕಾರ್ಯಕ್ರಮ.

ಜನವರಿ-ಡಿಸೆಂಬರ್‌, 2024 • ವಿವಿಧ ಕಾರ್ಯಕ್ರಮಗಳು • ಐದು ಸ್ಥಳಗಳು

ಹೊಸ ಮಾಹಿತಿಗಳು ಮತ್ತು ಕಾರ್ಯಕ್ರಮದ ಪ್ರಕಟಣೆಗಳನ್ನು ಪಡೆಯಲು ವೈಎಸ್‌ಎಸ್‌ ಇನ್ಯೂಸ್‌ಗೆ ನೋಂದಾಯಿಸಿಕೊಳ್ಳಿ

ಮುಂಬರುವ ವಿಶೇಷ ಕಾರ್ಯಕ್ರಮಗಳು ಮತ್ತು ದೀರ್ಘಾವಧಿಯ ಧ್ಯಾನಗಳು

ಜನ್ಮಾಷ್ಠಮಿ
ಜನ್ಮಾಷ್ಠಮಿಯ ದೀರ್ಘಾವಧಿ ಧ್ಯಾನ
ಶ್ರೀ ಶ್ರೀ ಲಾಹಿರಿ ಮಹಾಶಯರ ಮಹಾಸಮಾಧಿ ದಿವಸ

ಸಮಾಚಾರ ಮತ್ತು ಫೋಟೋ ಗ್ಯಾಲರಿ

ನಿಮ್ಮ ಭೇಟಿಗೆ ಮುಂಚೆಯೇ ಏರ್ಪಾಡು ಮಾಡಿಕೊಳ್ಳಿ

ಹಗಲಿನಲ್ಲಿ ಆಶ್ರಮಕ್ಕೆ ಭೇಟಿ ಕೊಡಲು ನೀವು ಬಯಸುವಿರಾ?

ಸಮೂಹ ಧ್ಯಾನದಲ್ಲಿ ಭಾಗಿಯಾಗಲು ಅಥವಾ ಆಶ್ರಮದ ಉದ್ಯಾನಗಳ ಪ್ರಶಾಂತತೆಯನ್ನು ಅನುಭವಿಸಲು ನಾವು ನಿಮ್ಮನ್ನು ಸ್ವಾಗತಿಸುತ್ತಿದ್ದೇವೆ. ಆಶ್ರಮಕ್ಕೆ ಭೇಟಿ ನೀಡಬೇಕೆಂದು ನಿಮಗೆ ಆಸಕ್ತಿಯಿದ್ದಲ್ಲಿ, ದಯಮಾಡಿ ಭೇಟಿಯ ವ್ಯವಸ್ಥೆಗಾಗಿ ನಮ್ಮ ಸ್ವಾಗತ ಕಕ್ಷೆಯನ್ನು ಸಂಪರ್ಕಿಸಿ.

ದಯವಿಟ್ಟು ಗಮನಿಸಿ: ಪ್ರತಿದಿನ ಬೆಳಿಗ್ಗೆ 9.00ರಿಂದ ಸಂಜೆ 4.30ರ ವರೆಗೆ ಆಶ್ರಮದ ಮೈದಾನಗಳು ಎಲ್ಲ ಸಂದರ್ಶಕರಿಗೆ ತೆರೆದಿರುತ್ತವೆ.

ಒಂದು ವೈಯಕ್ತಿಕ ಏಕಾಂತ ಧ್ಯಾನಕ್ಕೆ ಯೋಜನೆ ಮಾಡಿಕೊಳ್ಳಿ ಅಥವಾ ಆಶ್ರಮದಲ್ಲಿ ನಡೆಯುವ ಒಂದು ಏಕಾಂತ ಶಿಬಿರದಲ್ಲಿ ಭಾಗಿಯಾಗಿ.

ವೈಎಸ್‌ಎಸ್‌ ಮತ್ತು ಎಸ್‌ಆರ್‌ಎಫ್‌ ಪಾಠಮಾಲಿಕೆಯ ಶಿಷ್ಯರು ಆಶ್ರಮದಲ್ಲಿ ಐದು ದಿನಗಳವರೆಗೂ ಇರಬಹುದು. ಪುನರಾವೇಶಗೊಳ್ಳಲು ಮತ್ತು ಹೊಸ ಚೈತನ್ಯವನ್ನು ಪಡೆಯುವುದಕ್ಕಾಗಿ, ವೈಯಕ್ತಿಕ ಏಕಾಂತ ಧ್ಯಾನದ ಶಿಬಿರದಲ್ಲಿ ಭಾಗವಹಿಸಿ ಅಥವಾ ಆಯೋಜಿಸಲಾದ ಏಕಾಂತ ಧ್ಯಾನದ ಶಿಬಿರದಲ್ಲಿ ಪಾಲ್ಗೊಂಡು ನಮ್ಮೊಡನೆ ಭಾಗಿಯಾಗಿರೆಂದು ನಾವು ಭಕ್ತಾದಿಗಳನ್ನು ಪ್ರೋತ್ಸಾಹಿಸುತ್ತೇವೆ. ಈ ಶಿಬಿರಗಳ ಸಮಯದಲ್ಲಿ, ನೀವು ದಿನಕ್ಕೆ ಎರಡು ಬಾರಿ ವೈಎಸ್‌ಎಸ್ ಸನ್ಯಾಸಿಗಳು ನಡೆಸುವ ಸಮೂಹ ಧ್ಯಾನಗಳಲ್ಲಿ ಭಾಗವಹಿಸಬಹುದು ಮತ್ತು ಯೋಗದಾ ಸತ್ಸಂಗ ಬೋಧನೆಗಳ ಅಧ್ಯಯನ ಮತ್ತು ಅಭ್ಯಾಸದಲ್ಲಿ ಆಧ್ಯಾತ್ಮಿಕ ಸಲಹೆ ಮತ್ತು ಮಾರ್ಗದರ್ಶನವನ್ನು ಪಡೆಯಬಹುದು.

ನಮ್ಮನ್ನು ಸಂಪರ್ಕಿಸಿ

ಯೋಗದಾ ಸತ್ಸಂಗ ಶಾಖಾ ಆಶ್ರಮ – ಚೆನ್ನೈ
Mannur Village, P. O. Vallarpuram
Sriperumbudur - 602105
Kanchipuram
Tamil Nadu

ಇದನ್ನು ಹಂಚಿಕೊಳ್ಳಿ