ಹೊಸ ಸಂದರ್ಶಕರಿಗೆ ಮಾಹಿತಿ

ಮುಖ್ಯ ಕಟ್ಟಡ, ರಾಂಚಿ.

ಶ್ರೀ ಶ್ರೀ ಪರಮಹಂಸ ಯೋಗಾನಂದಜಿಯವರು ಸ್ಥಾಪಿಸಿದ ಲಾಭರಹಿತ ಆಧ್ಯಾತ್ಮಿಕ ಸಂಸ್ಥೆಯಾದ ಯೋಗದಾ ಸತ್ಸಂಗ ಸೊಸೈಟಿ ಆಫ್‌ ಇಂಡಿಯಾ (ವೈಎಸ್‌ಎಸ್‌)ಗೆ ಸ್ವಾಗತ. ನಿಮ್ಮ ಆಧ್ಯಾತ್ಮಿಕ ಸಿದ್ಧಿಯ ಅನ್ವೇಷಣೆಯಲ್ಲಿ ನಿಮಗೆ ಸಹಾಯ ಮಾಡುವುದು ನಮಗೆ ಆನಂದವನ್ನು ನೀಡುತ್ತದೆ.

ನೀವು ಪರಮಹಂಸ ಯೋಗಾನಂದರ ಬೋಧನೆಗಳಿಗೆ ಹೊಸಬರಾಗಿದ್ದರೆ, ನಿಮ್ಮ ಅನ್ವೇಷಣೆಯನ್ನು ಪ್ರಾರಂಭಿಸಲು ಇಲ್ಲಿ ಕೆಲವು ಸಲಹೆ-ಸೂಚನೆಗಳನ್ನು ಕೊಡಲಾಗಿದೆ:

ಯೋಗ ಹಾಗೂ ಇದರ ಪರಿಕಲ್ಪನೆಗಳಿಗೆ ಹೊಸಬರೇ? ಯೋಗ ಸಂಪ್ರದಾಯದ ಪರಿಕಲ್ಪನೆಗಳು ಹಾಗೂ ಪರಿಭಾಷೆಯ ಅಪರಿಚಿತರು ನಮ್ಮ ಆನ್‌ಲೈನ್‌ ಶಬ್ದಾರ್ಥ ಸಂಗ್ರಹದಲ್ಲಿ ನಮ್ಮ ಜಾಲತಾಣದಲ್ಲಿ ಬಳಸಲಾದ ಶಬ್ದಗಳ ಬಗ್ಗೆ ಸಂಕ್ಷಿಪ್ತ ಸಹಾಯಕ ವಿವರಣೆಗಳನ್ನು ನೋಡಬಹುದು.

ಧ್ಯಾನ ಮಾಡಲು ಕಲಿಯಿರಿ

ಯೋಗದಾ ಸತ್ಸಂಗ ಪಾಠಗಳು

ಯೋಗದಾ ಸತ್ಸಂಗ ಪಾಠಗಳು ಸಮಗ್ರ ಗೃಹಾಧ್ಯಯನದ ಸರಣಿಯಾಗಿದ್ದು ಯೋಗಾನಂದರು ವಿವರಿಸಿರುವ ಕ್ರಿಯಾಯೋಗದ ವೈಜ್ಞಾನಿಕ ಧ್ಯಾನ ತಂತ್ರಗಳ ವಿಸ್ತೃತ ವಿವರಣೆಯನ್ನು ನೀಡುತ್ತವೆ — ಅಷ್ಟೇ ಅಲ್ಲದೆ, ಸಮತೋಲಿತ ಆಧ್ಯಾತ್ಮಿಕ ಜೀವನ ಕಲೆಯ ಬಗ್ಗೆ ಅವರ ಆಳವಾದ ಮಾರ್ಗದರ್ಶನವನ್ನು ಕೂಡ.

ಆರಂಭಿಕರ ಧ್ಯಾನದ ಸೂಚನೆಗಳು

ಈಗ ನೀವು ಧ್ಯಾನ ಮಾಡಲು ಬಯಸಿದರೆ, ಆಯ್ಕೆ ಮಾಡಬಹುದಾದ ಸಂಗ್ರಹವಿರುವ ನಮ್ಮ ಧ್ಯಾನ ಮಾಡಲು ಕಲಿಯಿರಿ ಪುಟಕ್ಕೆ ಭೇಟಿ ನೀಡಿ.

ಯೋಗದಾ ಸತ್ಸಂಗ ಸೊಸೈಟಿ ಆಫ್‌ ಇಂಡಿಯಾದ ಯಾವುದಾದರೂ ಒಂದು ಆಶ್ರಮ, ಧ್ಯಾನ ಶಿಬಿರ ಅಥವಾ ಕೇಂದ್ರಕ್ಕೆ ಭೇಟಿ ನೀಡಿ

ಯೋಗದಾ ಸತ್ಸಂಗ ಸೊಸೈಟಿ ಆಫ್‌ ಇಂಡಿಯಾವು ಭಾರತದಾದ್ಯಂತ 180ಕ್ಕೂ ಹೆಚ್ಚು ಆಶ್ರಮಗಳನ್ನುಧ್ಯಾನ ಶಿಬಿರಗಳನ್ನು ಹಾಗೂ ಧ್ಯಾನ ಕೇಂದ್ರಗಳನ್ನು ಹೊಂದಿದೆ — ಆಸಕ್ತಿಯಿರುವ ಎಲ್ಲ ಅನ್ವೇಷಕರಿಗೂ ಒಂದುಗೂಡುವ ಅವಕಾಶವನ್ನು ನೀಡಿ, ಸಮೂಹ ಧ್ಯಾನದ ಶಕ್ತಿಯನ್ನು ಅನುಭವಿಸಲು, ಕೇಂದ್ರಿತ ಧ್ಯಾನ ಶಿಬಿರದ ಕಾರ್ಯಕ್ರಮಗಳಲ್ಲಿ, ಸ್ಫೂರ್ತಿದಾಯಕ ಸತ್ಸಂಗಗಳಲ್ಲಿ ಪಾಲ್ಗೊಳ್ಳಲು, ಮತ್ತು ಆಧ್ಯಾತ್ಮಿಕ ಸೌಹಾರ್ದತೆಯನ್ನು ಹಂಚಿಕೊಳ್ಳಲು. ಚಟುವಟಿಕೆಗಳು ಹೀಗಿವೆ:

ಧ್ಯಾನ ಮಾಡುತ್ತಿರುವ ಹೆಣ್ಣು ಮಗು.

ಯೋಗದಾ ಸತ್ಸಂಗ ಸೊಸೈಟಿ ಆಫ್‌ ಇಂಡಿಯಾದ ಶರದ್‌ ಸಂಗಮ

ಪ್ರತೀ ವರ್ಷ ನಾವು ಒಂದು ವಾರದ ಆಧ್ಯಾತ್ಮಿಕ ನವೀಕರಣ, ಸಹಭಾಗಿತ್ವ, ಹಾಗೂ ಶ್ರೀ ಪರಮಹಂಸ ಯೋಗಾನಂದರ ಬೋಧನೆಗಳ ಆಳವಾದ ಆಧ್ಯಯನದ ಜೊತೆಗೆ ಈ ಕೆಳಗಿನವುಗಳನ್ನೂ ನೀಡುತ್ತೇವೆ:

ಗುಂಪಿನಲ್ಲಿ ಧ್ಯಾನ ಮಾಡುತ್ತಿರುವ ವೈಎಸ್ಎಸ್ ಭಕ್ತರು

ಧ್ಯಾನ ಶಿಬಿರಗಳು

ಆಧ್ಯಾತ್ಮಿಕ ನವೀಕರಣದ ಅವಧಿಗಾಗಿ ಬರಲು ಬಯಸುವ ವೈಎಸ್‌ಎಸ್‌ ಸದಸ್ಯರು ಹಾಗೂ ಸ್ನೇಹಿತರಿಗೆ ಧ್ಯಾನ ಶಿಬಿರಗಳು ಇಡೀ ವರ್ಷ ತೆರೆದಿರುತ್ತವೆ. (ಶರದ್‌ ಸಂಗಮ್‌ನ ಅವಧಿಯನ್ನು ಬಿಟ್ಟು). ಇಡೀ ವರ್ಷ ಸಮಯ ಸಮಯಕ್ಕೆ ಪರಮಹಂಸ ಯೋಗಾನಂದರ ಬೋಧನೆಗಳ ಬಗ್ಗೆ ಸನ್ಯಾಸಿಗಳು ವಿಶೇಷ ಧ್ಯಾನ ಶಿಬಿರಗಳನ್ನು ಕೂಡ ನಡೆಸಿಕೊಡುತ್ತಾರೆ. ಈ ಶಿಬಿರಗಳನ್ನು ಯಾರು ಈಗಾಗಲೇ ಬೋಧನೆಗಳ ಬಗ್ಗೆ ಪರಿಚಿತರಾಗಿರುವರೋ ಅವರಿಗಾಗಿ ಎಂದು ವಿನ್ಯಾಸಗೊಳಿಸಲಾಗಿದ್ದರೂ, ಆಸಕ್ತಿ ಇರುವ ಯಾರೇ ಆದರೂ ಸ್ವಾಗತ ಕಕ್ಷೆಗೆ (Reception) ಭೇಟಿ ನೀಡಿ ವಿಚಾರಿಸಬಹುದು.

ಪರಮಹಂಸ ಯೋಗಾನಂದರ ನುಡಿಗಳಲ್ಲಿ, ವೈಎಸ್‌ಎಸ್‌ ಏಕಾಂತ ಶಿಬಿರಗಳು, “ಮೌನದ ಒಂದು ಡೈನಮೊ, ಅಲ್ಲಿಗೆ (ನೀವು) ಅನಂತನಿಂದ ಪುನರಾವೇಶಗೊಳ್ಳುವ ಅನನ್ಯ ಉದ್ದೇಶಕ್ಕಾಗಿ ಬರಬಹುದು.” ನಮ್ಮ ಧ್ಯಾನ ಶಿಬಿರಗಳ ಮುಖ್ಯಾಂಶಗಳೆಂದರೆ:

ಯೋಗೋದ ಸತ್ಸಂಗ ಸೊಸೈಟಿ ಆಫ್ ಇಂಡಿಯಾದ ನೋಯ್ಡಾ ಆಶ್ರಮ

ಓದುವುದಕ್ಕೆ ಸಲಹೆ-ಸೂಚನೆಗಳು

ಪರಮಹಂಸ ಯೋಗಾನಂದರ ಬೋಧನೆಗಳ ಅನ್ವೇಷಣೆಗೆ ಈ ಕೆಳಗಿನ ಪುಸ್ತಕಗಳನ್ನು ಓದಲು ಆರಂಭಿಸುವುದು ಒಂದು ಒಳ್ಳೆಯ ಅಭ್ಯಾಸ ಎಂದು ನಾವು ನಿಮಗೆ ಸೂಚಿಸುತ್ತಿದ್ದೇವೆ.

ಶ್ರೀ ಶ್ರೀ ಪರಮಹಂಸ ಯೋಗಾನಂದರಿಂದ ರಚಿತವಾದ ಯೋಗಿಯ ಆತ್ಮಕಥೆ

ಅತ್ಯಧಿಕವಾಗಿ ಮಾರಾಟವಾಗುತ್ತಿರುವ ಈ ಆಧ್ಯಾತ್ಮಿಕ ಮೇರುಕೃತಿಯು ಯೋಗಾನಂದರ ಜೀವನ ಹಾಗೂ ಬೋಧನೆಗಳ ಅತ್ಯುತ್ತಮವಾದ ಪರಿಚಯವನ್ನು ನೀಡುತ್ತದೆ. ಆಕರ್ಷಕ ಹಾಗೂ ಮನೋರಂಜಕವಾದ ಕಥೆಯು, ಅಸ್ತಿತ್ವದ ಉದ್ದೇಶ, ಯೋಗ, ಉನ್ನತ ಪ್ರಜ್ಞೆ, ಧರ್ಮ, ಭಗವಂತ ಹಾಗೂ ಪ್ರತಿದಿನ ಆಧ್ಯಾತ್ಮಿಕ ಬದುಕಿನ ಸವಾಲುಗಳ ಬಗ್ಗೆಯ ಪ್ರಶ್ನೆಗಳಿಗೆ ಉತ್ತರಗಳನ್ನು ನೀಡುತ್ತದೆ. ಎಲ್ಲ ಧರ್ಮಗಳ ಹಾಗೂ ನಿಜವಾಗಿಯೂ ಜೀವನ ಎಂದರೇನು ಎಂದು ಸಮಗ್ರವಾಗಿ ತಿಳಿಯ ಬಯಸುವವರೆಲ್ಲರಿಗೂ ಬೇಕಾದ ಪುಸ್ತಕ.

ಶ್ರೀ ಶ್ರೀ ಪರಮಹಂಸ ಯೋಗಾನಂದರಿಂದ ರಚಿತವಾದ ಬೆಳಕಿರುವೆಡೆ

ಪರಮಹಂಸ ಯೋಗಾನಂದರ ಬರಹಗಳು ಮತ್ತು ಉಪನ್ಯಾಸಗಳಿಂದ ಸಂಗ್ರಹಿಸಲಾದ ಈ ಆಧ್ಯಾತ್ಮಿಕ ಕೈಪಿಡಿಯು, ಮಾನವ ಸಂಬಂಧಗಳನ್ನು ಪರಿಪೂರ್ಣಗೊಳಿಸುವುದು; ಸೋಲನ್ನು ಗೆಲುವಾಗಿ ಪರಿವರ್ತಿಸುವುದು; ಭಗವಂತನೊಡನೆ ಒಂದು ವೈಯಕ್ತಿಕ ಸಂಬಂಧವನ್ನು ಬೆಳೆಸಿಕೊಳ್ಳುವುದು; ಸಾವನ್ನು ಅರಿಯುವುದು; ಒತ್ತಡ, ಚಿಂತೆ ಮತ್ತು ಭಯವನ್ನು ಮೀರುವುದು; ಪ್ರಾರ್ಥನೆಯನ್ನು ಪರಿಣಾಮಕಾರಿಯಾಗಿಸುವುದು; ಮತ್ತು ಬದುಕಿನ ನಿರ್ಧಾರಗಳನ್ನು ತೆಗೆದುಕೊಳ್ಳಲು ಜ್ಞಾನ ಮತ್ತು ಶಕ್ತಿಯನ್ನು ಕಂಡುಕೊಳ್ಳುವುದು ಇಂತಹ ಹಲವಾರು ಆಸಕ್ತಿದಾಯಕ ವಿಷಯಗಳ ಬಗ್ಗೆ ಸಂಪೂರ್ಣ ಮಾರ್ಗದರ್ಶನ ಹಾಗೂ ಆಧ್ಯಾತ್ಮಿಕ ದೃಷ್ಟಿಕೋನವನ್ನು ನೀಡುತ್ತದೆ.

ಶ್ರೀ ಶ್ರೀ ಪರಮಹಂಸ ಯೋಗಾನಂದರ ಉಪನ್ಯಾಸಗಳು ಹಾಗೂ ಲೇಖನಗಳ ಮೂರು ಸಂಕಲನಗಳು

ಮನುಷ್ಯನ ಎಟರ್ನಲ್ ಕ್ವೆಸ್ಟ್ ಕೃತಿಗಳು ಪರಮಹಂಸ ಯೋಗಾನಂದ

ಶ್ರೀ ಶ್ರೀ ಪರಮಹಂಸ ಯೋಗಾನಂದರಿಂದ ರಚಿತವಾದ ಮ್ಯಾನ್ಸ್‌ ಎಟರ್ನಲ್‌ ಕ್ವೆಸ್ಟ್‌

ಪರಮಹಂಸಜಿ ಅವರ ಉಪನ್ಯಾಸಗಳು ಹಾಗೂ ಲೇಖನಗಳ ಸಂಗ್ರಹದ ಈ ಮೊದಲನೆ ಸಂಪುಟವು ಧ್ಯಾನ, ಮರಣಾನಂತರದ ಜೀವನ, ಸೃಷ್ಟಿಯ ಸ್ವರೂಪ, ಆರೋಗ್ಯ ಮತ್ತು ಉಪಶಮನ, ಮತ್ತು ಮಾನವನ ಮನಸ್ಸಿನ ಅಸೀಮ ಶಕ್ತಿಗಳಿಗೆ ಸಂಬಂಧಿಸಿದ ಅಷ್ಟಾಗಿ-ತಿಳಿಯದ ಮತ್ತು ವಿರಳವಾಗಿ ವಿವರಿಸಲಾದ ಅಂಶಗಳನ್ನು ಅನ್ವೇಷಿಸುತ್ತದೆ.

ಡಿವೈನ್ ರೋಮ್ಯಾನ್ಸ್ ಅಭ್ಯಾಸಗಳು, ಸ್ಮರಣೆ, ​​ಕರ್ಮ ಮತ್ತು ಪುನರ್ಜನ್ಮದಂತಹ ವಿಷಯಗಳೊಂದಿಗೆ ವ್ಯವಹರಿಸುತ್ತದೆ.

ಶ್ರೀ ಶ್ರೀ ಪರಮಹಂಸ ಯೋಗಾನಂದರಿಂದ ರಚಿತವಾದ ದಿ ಡಿವೈನ್‌ ರೋಮಾನ್ಸ್‌

ಉಪನ್ಯಾಸಗಳು ಹಾಗೂ ಲೇಖನಗಳ ಈ ಎರಡನೆಯ ಸಂಪುಟದಲ್ಲಿ, ನಮ್ಮ ದಿವ್ಯ ಪ್ರಕೃತಿಯನ್ನು ಜಾಗೃತಗೊಳಿಸುವುದರಿಂದ ದೈಹಿಕ, ಮನೋವೈಜ್ಞಾನಿಕ, ಭಾವನಾತ್ಮಕ ಹಾಗೂ ಆಧ್ಯಾತ್ಮಿಕ ಯೋಗಕ್ಷೇಮವನ್ನು ಕುರಿತು ದಿನ ನಿತ್ಯದ ಸವಾಲುಗಳನ್ನು ಹೇಗೆ ಎದುರಿಸುವುದು ಎಂಬುದನ್ನು ಯೋಗಾನಂದರು ತೋರಿಸುತ್ತಾರೆ. ಅವರು ನಮ್ಮ ಆತ್ಮೀಯ ಸಂಬಂಧಗಳ ಆಳವಾದ ಆಧ್ಯಾತ್ಮಿಕ ಮೂಲಗಳನ್ನು ಬಹಿರಂಗ ಪಡಿಸುತ್ತಾರೆ ಮತ್ತು ಈ ಸಂಬಂಧಗಳನ್ನು ಒಗ್ಗೂಡಿಸುವ ಕಾಣದ, ಪ್ರೇಮದ ಸರ್ವಾಂತರ್ಯಾಮಿ ತಂತುವು ಹೇಗೆ ನಮ್ಮನ್ನು ಎಲ್ಲ ಪ್ರೇಮವು ಹೊರಹೊಮ್ಮುವ ಮೂಲದೆಡೆಗೆ ಹಿಂದಕ್ಕೆ ಸೆಳೆಯುತ್ತದೆ ಎಂಬುದನ್ನು ವಿವರಿಸುತ್ತಾರೆ. ಪುಸ್ತಕದಲ್ಲಿರುವ ಇತರ ವಿಷಯಗಳು: ಅಭ್ಯಾಸಗಳು, ಜ್ಞಾಪಕಶಕ್ತಿ, ಕರ್ಮ ಮತ್ತು ಪುನರ್ಜನ್ಮ, ಯೋಗ ಮತ್ತು ಧ್ಯಾನ, ಮತ್ತು ತಮಗೆ, ತಮ್ಮ ಕುಟುಂಬಕ್ಕೆ, ತಮ್ಮ ಸಮುದಾಯಕ್ಕೆ ಹಾಗೂ ಜಗತ್ತಿಗೆ ಹೇಗೆ ಹೆಚ್ಚಿನ ಸಾಮರಸ್ಯವನ್ನು ತರುವುದು.

ಸ್ವಯಂ ಸಾಕ್ಷಾತ್ಕಾರಕ್ಕೆ ಪ್ರಯಾಣ: ವಿಷಯಗಳು ಸೇರಿವೆ: ಶಾಶ್ವತ ಯೌವನವನ್ನು ಹೇಗೆ ವ್ಯಕ್ತಪಡಿಸುವುದು; ಯಶಸ್ಸಿನ ಮೂಲದೊಂದಿಗೆ ಹೊಂದಾಣಿಕೆಯನ್ನು ಪಡೆದುಕೊಳ್ಳುವುದು; ವ್ಯಾಪಾರ ಮತ್ತು ಆಧ್ಯಾತ್ಮಿಕ ಜೀವನವನ್ನು ಸಮತೋಲನಗೊಳಿಸುವುದು; ನರವನ್ನು ನಿವಾರಿಸುವುದು ಇತ್ಯಾದಿ.

ಶ್ರೀ ಶ್ರೀ ಪರಮಹಂಸ ಯೋಗಾನಂದರಿಂದ ರಚಿತವಾದ ಜರ್ನಿ ಟು ಸೆಲ್ಫ್‌-ರಿಯಲೈಝೇಷನ್‌

ಉಪನ್ಯಾಸಗಳು ಹಾಗೂ ಲೇಖನಗಳ ಈ ಮೂರನೇ ಸಂಪುಟವು ಯಾರು ತಮ್ಮನ್ನು ತಾವು ಹೆಚ್ಚು ತಿಳಿದುಕೊಳ್ಳಲು ಹಾಗೂ ಅವರ ಜೀವನದ ನೈಜ ಉದ್ದೇಶವನ್ನು ತಿಳಿಯಲು ಬಯಸುತ್ತಿದ್ದಾರೋ ಅವರಿಗೆ ಸಲಹೆಯನ್ನು ನೀಡುತ್ತದೆ. ಮಾನವನ ಅನುಭವಗಳ ಅಸಂಖ್ಯಾತ ಜಟಿಲತೆಗಳಿಗೆ ಯೋಗಾನಂದರು ಒಂದು ಸಾರ್ವತ್ರಿಕ ಹಾಗೂ ದೂರ-ದೃಷ್ಟಿಯುಳ್ಳ ದೃಷ್ಟಿಕೋನವನ್ನು ನೀಡುತ್ತಾರೆ — ಅಪಾಯಗಳು ಹಾಗೂ ಅಡೆತಡೆಗಳನ್ನೂ ಜೀವನದ ಸಾಹಸಕಾರ್ಯದ ಒಂದು ಉದ್ದೇಶಪೂರ್ವಕ ಭಾಗವೆಂಬಂತೆ ಕಾಣುವುದು ಹೇಗೆ ಎಂಬುದನ್ನು ನಮಗೆ ತೋರಿಸಿ ಕೊಡುತ್ತಾರೆ. ಇತರ ವಿಷಯಗಳೆಂದರೆ: ಶಾಶ್ವತ ತಾರುಣ್ಯವನ್ನು ಹೇಗೆ ವ್ಯಕ್ತಪಡಿಸುವುದು; ಯಶಸ್ಸಿನ ಆಕರದೊಂದಿಗೆ (ಭಗವಂತನೊಂದಿಗೆ) ಶ್ರುತಿಗೂಡಿಕೊಳ್ಳುವುದು; ಕರ್ತವ್ಯ ಮತ್ತು ಆಧ್ಯಾತ್ಮಿಕ ಜೀವನವನ್ನು ಸಮತೋಲನಗೊಳಿಸುವುದು; ನರೋದ್ರೇಕವನ್ನು ಜಯಿಸುವುದು; ಇತರರೊಂದಿಗೆ ಬೆರೆಯುವ ಕಲೆ; ಮತ್ತು ದೈನಂದಿನ ಜೀವನದಲ್ಲಿ ದೇವರನ್ನು ವಾಸ್ತವಿಕಗೊಳಿಸುವುದು.

ಶ್ರೀ ಶ್ರೀ ಪರಮಹಂಸ ಯೋಗಾನಂದರ ಇತರ ಕೃತಿಗಳು

ಆಂತರಿಕ ಶಾಂತಿ: ಶಾಂತವಾಗಿ ಸಕ್ರಿಯ ಮತ್ತು ಸಕ್ರಿಯವಾಗಿ ಶಾಂತವಾಗಿರುವುದು ಹೇಗೆ.

ಶ್ರೀ ಶ್ರೀ ಪರಮಹಂಸ ಯೋಗಾನಂದರಿಂದ ರಚಿತವಾದ ಇನ್ನರ್‌ ಪೀಸ್‌: ಹೌ ಟು ಬಿ ಕಾಮ್ಲಿ ಆಕ್ಟಿವ್‌ ಅಂಡ್‌ ಆಕ್ಟಿವ್ಲಿ ಕಾಮ್

ಯೋಗಾನಂದರ ಬರಹಗಳ ಈ ಸ್ಫೂರ್ತಿದಾಯಕ ಆಯ್ದ ಸಂಗ್ರಹವು ಜಾಗತಿಕ ಪರಿಸ್ಥಿತಿಗಳ ಹೊರತಾಗಿಯೂ ಒಬ್ಬರು ಶಾಂತಿ, ಸಂತೋಷ ಹಾಗೂ ಸಮಚಿತ್ತದಿಂದಿರುವುದಕ್ಕೆ ಸಹಾಯ ಮಾಡಲು ಪ್ರಾಯೋಗಿಕ ವಿಧಾನಗಳನ್ನು ನೀಡುತ್ತದೆ. ತಳಮಳ ಮತ್ತು ಒತ್ತಡವನ್ನು ಸಂತೋಷ ಮತ್ತು ಶಾಂತಿಯಾಗಿ ಪರಿವರ್ತಿಸುವುದಕ್ಕೆ ಓದುಗರನ್ನು ಶಕ್ತರನ್ನಾಗಿಸುವ, ಈ ಸಣ್ಣ ಹೊತ್ತಿಗೆಯು ತ್ವರಿತ ಗತಿಯಲ್ಲಿ ಓಡುತ್ತಿರುವ ನಮ್ಮ ಜಗತ್ತಿಗೆ ಒಂದು ತೀಕ್ಷ್ಣವಾದ ವಿಷಹಾರಿ ಮದ್ದನ್ನು ನೀಡುತ್ತದೆ.

ಯಶಸ್ಸಿನ ನಿಯಮ: ವಿಷಯಗಳು ಸೇರಿವೆ: ಸೃಜನಶೀಲತೆ ಮತ್ತು ಉಪಕ್ರಮ, ಸಕಾರಾತ್ಮಕ ಚಿಂತನೆ, ಕ್ರಿಯಾತ್ಮಕ ಇಚ್ಛೆ, ಸ್ವಯಂ ವಿಶ್ಲೇಷಣೆ, ಧ್ಯಾನದ ಶಕ್ತಿ ಇತ್ಯಾದಿ.

ಶ್ರೀ ಶ್ರೀ ಪರಮಹಂಸ ಯೋಗಾನಂದರಿಂದ ರಚಿತವಾದ ಯಶಸ್ಸಿನ ನಿಯಮ

ಈ ಮಹಾನ್‌ ಕಿರುಹೊತ್ತಿಗೆಯು ಯಶಸ್ಸಿನ ಆಕರದೊಂದಿಗೆ ಹೇಗೆ ಸಂಬಂಧವನ್ನೇರ್ಪಡಿಸಿಕೊಳ್ಳುವುದು, ಯುಕ್ತ ಗುರಿಗಳನ್ನು ಆರಿಸಿಕೊಳ್ಳುವುದು, ಅಡೆತಡೆಗಳು ಹಾಗೂ ಭಯಗಳನ್ನು ಜಯಿಸುವುದು, ಮತ್ತು ನಮ್ಮ ಬದುಕಿನಲ್ಲಿ ಯಶಸ್ಸನ್ನು ತರುವ ದೈವೀ ನಿಯಮಗಳನ್ನು ಆಹ್ವಾನಿಸುವುದು ಎಂಬುದೆಲ್ಲದರ ಬಗ್ಗೆ ವಿವರಿಸುತ್ತದೆ. ಇದರಲ್ಲಿ ಸೃಜನಶೀಲತೆ ಮತ್ತು ಉಪಮಕ್ರಮ ಶಕ್ತಿ, ಧನಾತ್ಮಕ ಚಿಂತನೆ, ಕ್ರಿಯಾಶೀಲ ಸಂಕಲ್ಪಶಕ್ತಿ, ಸ್ವ-ವಿಶ್ಲೇಷಣೆ, ಧ್ಯಾನದ ಶಕ್ತಿ ಹಾಗೂ ಇನ್ನೂ ಅನೇಕ ವಿಷಯಗಳು ಸೇರಿವೆ.

ಮೆಟಾಫಿಸಿಕಲ್ ಧ್ಯಾನಗಳು: 300 ಕ್ಕೂ ಹೆಚ್ಚು ಧ್ಯಾನಗಳು, ಪ್ರಾರ್ಥನೆಗಳು, ದೃಢೀಕರಣಗಳು ಮತ್ತು ದೃಶ್ಯೀಕರಣಗಳು.

ಶ್ರೀ ಶ್ರೀ ಪರಮಹಂಸ ಯೋಗಾನಂದರಿಂದ ರಚಿತವಾದ ಮೆಟಾಫಿಸಿಕಲ್‌ ಮೆಡಿಟೇಷನ್ಸ್‌

ಈ ಜೇಬಿನಲ್ಲಿಟ್ಟುಕೊಳ್ಳಬಹುದಾಂಥ ಪುಸ್ತಕವು 300ಕ್ಕೂ ಹೆಚ್ಚು ಧ್ಯಾನಗಳು, ಪ್ರಾರ್ಥನೆಗಳು, ದೃಢೀಕರಣಗಳು ಹಾಗೂ ದೃಶ್ಯೀಕರಣಗಳನ್ನು, ಅಷ್ಟೇ ಅಲ್ಲದೆ ಹೇಗೆ ಧ್ಯಾನ ಮಾಡಬೇಕು ಎಂಬುದರ ಬಗ್ಗೆ ಪರಿಚಯಾತ್ಮಕ ಸೂಚನೆಗಳನ್ನು ನೀಡುತ್ತದೆ. ಆರಂಭಿಗರು ಮತ್ತು ಪರಿಣತ ಧ್ಯಾನಿಗಳಿಬ್ಬರಿಗೂ ಈ ಸಣ್ಣ ಸಂಪುಟವು ಆತ್ಮದ ಅಪರಿಮಿತ ಆನಂದ, ಶಾಂತಿ ಹಾಗೂ ಆಂತರಿಕ ಸ್ವಾತಂತ್ರವನ್ನು ಜಾಗೃತಗೊಳಿಸುವುದಕ್ಕೆ ಒಂದು ಸಹಾಯಾಕಾರಿ ಸಾಧನವಾಗಬಹುದು.

ಪರಮಹಂಸ ಯೋಗಾನಂದರ ಬೋಧನೆಗಳಲ್ಲಿ ನೀವು ಆಳವಾಗಿ ತೊಡಗಿಕೊಳ್ಳಬೇಕೆಂದರೆ ವೈಎಸ್‌ಎಸ್‌ ಬುಕ್‌ಸ್ಟೋರ್‌ ಗೆ ಭೇಟಿ ನೀಡಿ ದಯವಿಟ್ಟು ಪುಸ್ತಕಗಳ ಹಾಗೂ ಮುದ್ರಿಕೆಗಳ ಸಂಪೂರ್ಣ ಪಟ್ಟಿಯನ್ನು ನೋಡಿ.

ಯೋಗ ಪರಂಪರೆಯ ಪರಿಕಲ್ಪನೆಗಳು ಹಾಗೂ ಪರಿಭಾಷೆಗೆ ಅಪರಿಚಿತರಾಗಿರುವವರು ನಮ್ಮ ಆನ್‌ಲೈನ್‌ ಶಬ್ದಾರ್ಥ ಸಂಗ್ರಹದಲ್ಲಿ ನಾವು ಜಾಲತಾಣದಲ್ಲಿ ಉಪಯೋಗಿಸಿರುವ ಶಬ್ದಗಳ ಬಗ್ಗೆ ಸಂಕ್ಷಿಪ್ತ ಸಹಾಯಕ ವಿವರಣೆಗಳನ್ನು ನೋಡಬಹುದು.

ಇದನ್ನು ಹಂಚಿಕೊಳ್ಳಿ