ಜಾಗತಿಕ ಪ್ರಾರ್ಥನಾ ಸಮೂಹ

Paramahansa Yogananda's words on prayers.

ಶ್ರೀ ಶ್ರೀ ದಯಾ ಮಾತಾ ಅವರಿಂದ ಆಹ್ವಾನ:

Daya Mata — third president of YSS/SRF.ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ/ಸೆಲ್ಫ್-ರಿಯಲೈಝೇಷನ್ ಫೆಲೋಷಿಪ್ ಜಾಗತಿಕ ಪ್ರಾರ್ಥನಾ ಸಮೂಹದ ಈ ಪರಿಚಯದೊಂದಿಗೆ, ಪ್ರಾರ್ಥನೆಯ ಕ್ರಿಯಾತ್ಮಕ ಶಕ್ತಿಯ ಮೂಲಕ ಇತರರಿಗೆ ಸೇವೆ ಸಲ್ಲಿಸಲು ನಮ್ಮೊಂದಿಗೆ ಸೇರಿಕೊಳ್ಳಲು ನಾನು ನಿಮ್ಮನ್ನು ಆಹ್ವಾನಿಸಲು ಬಯಸುತ್ತೇನೆ.

ದಿನನಿತ್ಯವೂ ಕೆಲವು ಹೊಸ ಕಾಯಿಲೆ ಅಥವಾ ವಿಪತ್ತಿನ ಬಗ್ಗೆ ದಿನಪತ್ರಿಕೆಗಳಲ್ಲಿ ಓದುವುದು – ಅಥವಾ ಜಗತ್ತನ್ನು ಯುದ್ಧಕ್ಕೆ ಹತ್ತಿರ ತರುವ ಮತ್ತೊಂದು ಅಂತರರಾಷ್ಟ್ರೀಯ ಬಿಕ್ಕಟ್ಟು – ಹೀಗೆ ಅನೇಕ ಜನರು ತಮ್ಮ ಮತ್ತು ತಮ್ಮ ಆತ್ಮೀಯರ ಜೀವನದ ಬಗ್ಗೆ ಆಳವಾದ ಅಭದ್ರತೆಯ ಭಾವನೆಯನ್ನು ಅನುಭವಿಸುತ್ತಾರೆ. “ಈ ಜಗತ್ತಿನಲ್ಲಿ ನಾನು ಅವಲಂಬಿಸಬಹುದಾದ ಯಾವುದಾದರೂ ಒಳ್ಳೆಯದು ಇದೆಯೇ? ನನಗೆ ಮತ್ತು ಸಕಲ ಮಾನವ ಜನಾಂಗಕ್ಕೆ ನಾನು ಬಯಸುವ ಶಾಂತಿ ಮತ್ತು ಭದ್ರತೆಗೆ ಈ ಬೆದರಿಕೆಗಳನ್ನು ಎದುರಿಸಲು ನಾನು ಏನಾದರೂ ಮಾಡಬಹುದೇ? ” ಎಂದು ನಾವು ಅನೇಕರು ಆಶ್ಚರ್ಯಪಡುವ ಹಂತವನ್ನು ತಲುಪಿದ್ದೇವೆ.

ನಮ್ಮ ಅಗತ್ಯಗಳ ಸ್ವರೂಪಕ್ಕನುಗುಣವಾಗಿ ಹೇಗೆ ಮತ್ತು ಯಾವಾಗ ಪ್ರಾರ್ಥಿಸಬೇಕು ಎಂಬುದನ್ನು ನಿಖರವಾಗಿ ತಿಳಿದುಕೊಳ್ಳುವುದು ಅಪೇಕ್ಷಿತ ಫಲಿತಾಂಶಗಳನ್ನು ತರುತ್ತದೆ. ಸರಿಯಾದ ವಿಧಾನವನ್ನು ಅನ್ವಯಿಸಿದಾಗ, ಅದು ಭಗವಂತನ ಸಮರ್ಪಕ ನಿಯಮಗಳ ಚಾಲನೆಯನ್ನುಂಟು ಮಾಡುತ್ತದೆ; ಈ ನಿಯಮಗಳ ಕಾರ್ಯನಿರ್ವಹಣೆಯು ವೈಜ್ಞಾನಿಕವಾಗಿ ಫಲಿತಾಂಶಗಳನ್ನು ನೀಡುತ್ತದೆ.

ನಾವೆಲ್ಲರೂ ಇಂತಹ ಪ್ರಶ್ನೆಗಳಿಗೆ ಆಳವಾಗಿ ಪ್ರತಿಕ್ರಿಯಿಸುತ್ತೇವೆ – ಮತ್ತು ನಮ್ಮ ಹೃದಯವನ್ನು ಬಳಲಿಸುವ ಈ ಸಮಸ್ಯೆಗಳಿಗೆ ಉತ್ತರವಿದೆ. ವ್ಯಕ್ತಿಗಳು ದೈಹಿಕ ಮತ್ತು ಭಾವನಾತ್ಮಕ ಅಸಾಮರಸ್ಯದಿಂದ ಬಳಲುತ್ತಿರುವುದಕ್ಕೆ ಮತ್ತು ರಾಷ್ಟ್ರಗಳು ಸಾಮಾಜಿಕ ಮತ್ತು ಅಂತರಾಷ್ಟ್ರೀಯ ಕಲಹಗಳನ್ನು ಏಕೆ ಅನುಭವಿಸುತ್ತವೆ ಎನ್ನುವುದಕ್ಕೆ ಒಂದು ಕಾರಣವಿದೆ – ಏಕೆಂದರೆ ಅವರು ತಮ್ಮ ಸ್ವಂತ ತಪ್ಪು ಆಲೋಚನೆಗಳು ಮತ್ತು ಕ್ರಿಯೆಗಳಿಂದಾಗಿ ದೈವೀ ಶಕ್ತಿ ಮತ್ತು ಆಶೀರ್ವಾದದ ಆ ಮೂಲದಿಂದ ತಮ್ಮನ್ನು ತಾವು ಕಡಿದುಕೊಂಡಿದ್ದಾರೆ.

ಬಹುಷಃ ಹಿಂದೆಂದಿಗಿಂತಲೂ ಇಂದು, ನಾವು ಆ ಋಣಾತ್ಮಕತೆಯನ್ನು ಎದುರಿಸುವುದು ಅತ್ಯಗತ್ಯವಾಗಿದೆ. ಈ ಪೃಥ್ವಿಯ ಮೇಲೆ ಅಹಿತಕರ ಅಸ್ತಿತ್ವಕ್ಕಿಂತ ಹೆಚ್ಚಿನದನ್ನು ನಾವು ಬಯಸುವುದಾದರೆ, ನಾವು ದೈವೀ ಮೂಲದೊಂದಿಗಿನ ನಮ್ಮ ಸಂಪರ್ಕವನ್ನು ನವೀಕರಿಸಬೇಕಾಗುತ್ತದೆ. ಅದೇ ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ/ಸೆಲ್ಫ್-ರಿಯಲೈಝೇಷನ್ ಫೆಲೋಷಿಪ್ ಜಾಗತಿಕ ಪ್ರಾರ್ಥನಾ ಸಮೂಹದ ಉದ್ದೇಶವಾಗಿದೆ. ಅದಕ್ಕಾಗಿಯೇ ಇಲ್ಲಿ ಪ್ರಸ್ತುತಪಡಿಸಲಾದ ಸಂದೇಶವನ್ನು ಆಳವಾಗಿ ಪರಿಗಣಿಸುವಂತೆ ನಾನು ನಿಮ್ಮನ್ನು ಒತ್ತಾಯಿಸುತ್ತೇನೆ. ಎಲ್ಲಾ ಜನಾಂಗಗಳು ಮತ್ತು ಧರ್ಮಗಳ – ಪ್ರತಿಯೊಬ್ಬ ಪುರುಷ, ಮಹಿಳೆ ಮತ್ತು ಮಗು, ತಮಗಾಗಿ ಮತ್ತು ತಮ್ಮ ಆತ್ಮೀಯರ ಉಪಶಮನಕ್ಕಾಗಿ ಮತ್ತು ಭದ್ರತೆಗಾಗಿ ಹೇಗೆ ಪರಿಣಾಮಕಾರಿಯಾಗಿ ಕೆಲಸ ಮಾಡಬಹುದು ಎಂಬುದನ್ನು ಇದು ವಿವರಿಸುತ್ತದೆ. ಮತ್ತು ಪ್ರಾರ್ಥನೆಯ ಶಕ್ತಿಯನ್ನು – ನಮ್ಮಲ್ಲಿ ಪ್ರತಿಯೊಬ್ಬರಲ್ಲಿರುವ ಭಗವಂತನ ಅಪರಿಮಿತ ಶಕ್ತಿಯನ್ನು – ಕೇಂದ್ರೀಕರಿಸುವ ನಿಮ್ಮ ವೈಯಕ್ತಿಕ ಪ್ರಯತ್ನಗಳು ಪ್ರಪಂಚದ ತೊಂದರೆಗೊಳಗಾದ ರಾಷ್ಟ್ರಗಳ ನಡುವೆ ಹೆಚ್ಚಿನ ಸಾಮರಸ್ಯವನ್ನು ತರುತ್ತವೆ.

ಈ ಜಾಗತಿಕ ಪ್ರಾರ್ಥನಾ ಸಮೂಹವನ್ನು ನೀವು ಸೇರಿಕೊಳ್ಳುತ್ತೀರಿ ಎಂದು ನಾವು ಆಶಿಸುತ್ತೇವೆ, ಅದು ಎಲ್ಲೆಡೆ ಪುರುಷರು ಮತ್ತು ಮಹಿಳೆಯರು ತಮ್ಮೊಳಗಿನ ದೈವೀ ಶಕ್ತಿಯ ಹೆಚ್ಚಿನ ಸಾಕ್ಷಾತ್ಕಾರಕ್ಕೆ ಜಾಗೃತರಾಗಲು ಮತ್ತು ಹೊರಗಿನ ಸಕಲ ಜನರಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ವ್ಯಕ್ತಪಡಿಸಲು ಅನುವು ಮಾಡಿಕೊಡಲಿ.

— ಶ್ರೀ ಶ್ರೀ ದಯಾ ಮಾತಾ

ಮೂರನೇ ಅಧ್ಯಕ್ಷರು, ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ/ಸೆಲ್ಫ್-ರಿಯಲೈಝೇಷನ್ ಫೆಲೋಷಿಪ್

Devotees at YSS performing healing prayers in Worldwide Prayer Circle.

ಇದನ್ನು ಹಂಚಿಕೊಳ್ಳಿ