“ಯೋಗದಾ ಸತ್ಸಂಗ ಸೊಸೈಟಿ ಆಫ್‌ ಇಂಡಿಯಾವು ಆತ್ಮ ಸಾಕ್ಷಾತ್ಕಾರದ ಮೂಲಕ ಭಗವಂತನೊಡನೆ ಸಹ ಭಾಗಿತ್ವವನ್ನು ಹಾಗೂ ಎಲ್ಲಾ ಸತ್ಯಾನ್ವೇಷಕ - ಆತ್ಮಗಳೊಡನೆ ಸ್ನೇಹವನ್ನು ಸೂಚಿಸುತ್ತದೆ.”

— ಶ್ರೀ ಶ್ರೀ ಪರಮಹಂಸ ಯೋಗಾನಂದ

ಯೋಗದಾ ಸತ್ಸಂಗ ಸೊಸೈಟಿ ಆಫ್‌ ಇಂಡಿಯಾವು 200 ಕ್ಕೂ ಹೆಚ್ಚು ಧ್ಯಾನಕೇಂದ್ರಗಳು, ಆಶ್ರಮಗಳು, ಏಕಾಂತ ಧಾಮಗಳನ್ನು ಭಾರತದ ತುಂಬ ಹಾಗೂ ನೇಪಾಳದಲ್ಲಿ ಹೊಂದಿದೆ – ಎಲ್ಲಾ ಆಸಕ್ತ ಅನ್ವೇಷಕರು ಜೊತೆಗೂಡಿ ಬಂದು ಸಮೂಹ ಧ್ಯಾನದ ಶಕ್ತಿಯನ್ನೂ, ಕೇಂದ್ರೀಕೃತ ಏಕಾಂತವಾಸದ ಕಾರ್ಯಕ್ರಮಗಳನ್ನು, ಸ್ಫೂರ್ತಿದಾಯಕ ಸೇವೆಗಳನ್ನು, ಹಾಗೂ ಆಧ್ಯಾತ್ಮಿಕ ಸಹಭಾಗಿತ್ವವನ್ನು ಹಂಚಿಕೊಳ್ಳಲು ಅವಕಾಶ ಒದಗಿಸುತ್ತವೆ.

ವರ್ಷ ಪೂರ್ತಿ, ನಾವು ಅನೇಕ ವಿಶೇಷ ಘಟನಾವಳಿಗಳು ಹಾಗೂ ಸ್ಫೂರ್ತಿದಾಯಕ ಕಾರ್ಯಕ್ರಮಗಳನ್ನು, ಪರಮಹಂಸ ಯೋಗಾನಂದರ ಬದುಕುವುದು – ಹೇಗೆ ಎಂಬ ಬೋಧನೆಗಳ ಮೇಲೆ ಕೇಂದ್ರೀಕರಿಸಿದ ನಮ್ಮ ವಾರ್ಷಿಕ ಶರದ್‌ ಸಂಗಮವನ್ನು ಸೇರಿ; ದೇಶದಾದ್ಯಂತ ಧ್ಯಾನ ಕೇಂದ್ರಗಳಲ್ಲಿ ಹಾಗೂ ಸಮೂಹಗಳಲ್ಲಿ, ಸಮೀಪದ ತಾಣಗಳಲ್ಲಿ ವಾರಾಂತ್ಯದ ಏಕಾಂತವಾಸವನ್ನು; ಸರಣಿ ಉಪನ್ಯಾಸಗಳನ್ನು ಹಾಗೂ ಧ್ಯಾನದ ತರಗತಿಗಳನ್ನು (ಕ್ರಿಯಾಯೋಗ ದೀಕ್ಷೆಯನ್ನೂ) ಪ್ರತಿ ವರ್ಷವೂ ಅನೇಕ ನಗರಗಳಲ್ಲಿ ಹಮ್ಮಿಕೊಳ್ಳುತ್ತೇವೆ.

ಇದನ್ನು ಹಂಚಿಕೊಳ್ಳಿ