ಪ್ರಯಾಗ್‌ರಾಜ್‌ನಲ್ಲಿ (ಅಲಹಾಬಾದ್)‌ ಕುಂಭಮೇಳ — 2025

ಈ ಕಾರ್ಯಕ್ರಮದ ನೋಂದಣಿ ಈಗ ಮುಕ್ತಾಯವಾಗಿದೆ.

ಕಾರ್ಯಕ್ರಮವನ್ನು ಕುರಿತು

ಭಾರತದಲ್ಲಿ ಅನಾದಿಕಾಲದಿಂದ ನಡೆಸುತ್ತಾ ಬಂದಿರುವ ಧಾರ್ಮಿಕ ಜಾತ್ರೆಗಳು ಕುಂಭ ಮೇಳಗಳೆಂದು ಹೆಸರುವಾಸಿಯಾಗಿವೆ; ಅವು ಜನಸ್ತೋಮದೆದುರು ನಿರಂತರವಾಗಿ ಆಧ್ಯಾತ್ಮಿಕ ಧ್ಯೇಯಗಳನ್ನು ಉಳಿಸಿಕೊಂಡು ಬಂದಿವೆ.

— ಪರಮಹಂಸ ಯೋಗಾನಂದ

ನಮ್ಮ ಪ್ರೀತಿಯ ಗುರುದೇವರ ಈ ಮಾತುಗಳಿಂದ ಪ್ರೇರಿತವಾದ ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ (ವೈಎಸ್‌ಎಸ್), ಕುಂಭ ಮೇಳಗಳ ಸಮಯದಲ್ಲಿ ಶಿಬಿರಗಳನ್ನು ಆಯೋಜಿಸುತ್ತ ಬಂದಿದೆ. ಅಂತೆಯೇ, ಮುಂದಿನ ವರ್ಷದ ಆರಂಭದಲ್ಲಿ ಪ್ರಯಾಗ್‌ರಾಜ್ (ಅಲಹಾಬಾದ್) ನಲ್ಲಿ ನಡೆಯಲಿರುವ ಕುಂಭದಲ್ಲಿ ವೈಎಸ್ಎಸ್ ಶಿಬಿರವನ್ನು ಸ್ಥಾಪಿಸಲು ನಾವು ಯೋಜಿಸುತ್ತಿದ್ದೇವೆ. ಈ ಶಿಬಿರದಲ್ಲಿ ಪಾಲ್ಗೊಳ್ಳಲು ವೈಎಸ್‌ಎಸ್‌/ಎಸ್‌ಆರ್‌ಎಫ್‌ ಭಕ್ತರಿಗೆ ಸ್ವಾಗತ.

ಶಿಬಿರವು ಜನವರಿ 10 ರಿಂದ ಫೆಬ್ರವರಿ 15, 2025 ರವರೆಗೆ ಕುಂಭ ಮೇಳದ ಮೈದಾನದಲ್ಲಿ ಕಾರ್ಯಾಚರಣೆಯಲ್ಲಿರುತ್ತದೆ. ಈ ಅವಧಿಯು ಪೌಷ್ ಪೂರ್ಣಿಮಾ (ಸೋಮವಾರ, ಜನವರಿ 13), ಮಕರ ಸಂಕ್ರಾಂತಿ (ಮಂಗಳವಾರ, ಜನವರಿ 14), ಮೌನಿ ಅಮವಾಸ್ಯೆ (ಬುಧವಾರ, ಜನವರಿ 29), ವಸಂತ ಪಂಚಮಿ (ಸೋಮವಾರ, ಫೆಬ್ರವರಿ 3), ಮತ್ತು ಮಾಘ ಪೂರ್ಣಿಮಾ (ಬುಧವಾರ, ಫೆಬ್ರವರಿ 12) ಇವುಗಳನ್ನು ಒಳಗೊಂಡಿರುತ್ತದೆ.

ಕುಂಭ ಮೇಳದಲ್ಲಿ ಶಿಬಿರದ ಅವಧಿಯುದ್ದಕ್ಕೂ ಭಕ್ತರ ವಾಸ್ತವ್ಯವನ್ನು ಶ್ರೀಮಂತಗೊಳಿಸಲು ವೈಎಸ್ಎಸ್ ಸನ್ಯಾಸಿಗಳು ವಿವಿಧ ಆಧ್ಯಾತ್ಮಿಕ ಕಾರ್ಯಕ್ರಮಗಳನ್ನು ನಡೆಸಿಕೊಡಲಿದ್ದಾರೆ. ಈ ಕಾರ್ಯಕ್ರಮಗಳಲ್ಲಿ ದೈನಂದಿನ ಬೆಳಿಗ್ಗೆ ಮತ್ತು ಸಂಜೆಯ ಸಮೂಹ ಧ್ಯಾನಗಳು, ಕೀರ್ತನೆಗಳು (ಭಕ್ತಿಯ ಗಾಯನ) ಮತ್ತು ಸತ್ಸಂಗಗಳು ಇರುತ್ತವೆ.

ಪೂರ್ಣ ಪ್ರಕಟಣೆಯನ್ನು ಓದಲು ಇಲ್ಲಿ ಒತ್ತಿ.

ಕಾರ್ಯಕ್ರಮದ ವಿವರಗಳು

ನೋಂದಣಿ

ಈ ಕಾರ್ಯಕ್ರಮದ ನೋಂದಣಿ ಈಗ ಮುಕ್ತಾಯವಾಗಿದೆ.

ದಯವಿಟ್ಟು ಗಮನಿಸಿ:

  • ನೋಂದಾಯಿತ ಭಕ್ತರಿಗೆ ಮಾತ್ರ ಶಿಬಿರದಲ್ಲಿ ತಂಗಲು ಅವಕಾಶವಿರುತ್ತದೆ.
  • ದಯವಿಟ್ಟು ನಿಮಗೆ ನಿಗದಿತವಾದ ದಿನಾಂಕಗಳಂದು ಆಗಮಿಸಿ ಮತ್ತು ನಿರ್ಗಮಿಸಿ.
  • ನಿಮ್ಮ ನೋಂದಣಿಯನ್ನು ದೃಢೀಕರಿಸಿದ್ದರೆ ಮತ್ತು ಕೆಲವು ಕಾರಣಗಳಿಂದ ನಿಮಗೆ ಬರಲು ಸಾಧ್ಯವಾಗದಿದ್ದರೆ, ದಯವಿಟ್ಟು ಸಾಧ್ಯವಾದಷ್ಟು ಬೇಗ ನಮಗೆ ತಿಳಿಸಿ. ರದ್ದತಿಗಳನ್ನು ಮರುಪಾವತಿಸಲಾಗುವುದಿಲ್ಲ ಅಥವಾ ವರ್ಗಾಯಿಸಲಾಗುವುದಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.
ವಸತಿ ಮತ್ತು ಊಟ

ಗರಿಷ್ಠ ಸಂಖ್ಯೆಯ ಭಕ್ತರು ತಮ್ಮ ಸ್ನಾನ ಮತ್ತು ಇತರ ಆಚರಣೆಗಳನ್ನು ಪೂರೈಸಿಕೊಳ್ಳುವಾಗ ಸೀಮಿತ ಸೌಲಭ್ಯಗಳನ್ನು ಬಳಸಿಕೊಳ್ಳಲು ಸಾದ್ಯವಾಗಲೆಂಬ ಕಾರಣಕ್ಕಾಗಿ ನೋಂದಾಯಿಸಿದವರಿಗೆ, ವೈಎಸ್‌ಎಸ್ ಕ್ಯಾಂಪ್‌ನಲ್ಲಿನ ವಾಸ್ತವ್ಯವು ಆಗಮನ ಮತ್ತು ನಿರ್ಗಮನದ ದಿನಗಳು ಸೇರಿದಂತೆ, ನಾಲ್ಕು ಹಗಲು ಮತ್ತು ಮೂರು ರಾತ್ರಿಗಳಿಗೆ ಸೀಮಿತವಾಗಿರುತ್ತದೆ.

ದಯವಿಟ್ಟು ಗಮನಿಸಿ:

  • ಶಿಬಿರದಲ್ಲಿ ಸೌಲಭ್ಯಗಳು ಸೀಮಿತವಾಗಿರುವುದರಿಂದ, ಯಾರ ವಾಸ್ತವ್ಯವನ್ನು ವೈಎಸ್‌ಎಸ್‌ನಿಂದ ದೃಢಪಡಿಸಲಾಗಿರುವುದೋ ಅವರಿಗೆ ಮಾತ್ರ ಶಿಬಿರದಲ್ಲಿ ಉಳಿದುಕೊಳ್ಳಲು ಅನುಮತಿ ನೀಡಲಾಗುತ್ತದೆ. ಅಂತಹ ದೃಢೀಕರಣವನ್ನು ಹೊಂದಿರದ ಸ್ನೇಹಿತರು ಮತ್ತು ಕುಟುಂಬ ಸದಸ್ಯರನ್ನು ನಿಮ್ಮೊಂದಿಗೆ ಕರೆತರದಂತೆ ನಿಮ್ಮಲ್ಲಿ ವಿನಂತಿಸಿಕೊಳ್ಳಲಾಗಿದೆ.
  • ಪುರುಷರಿಗೆ ಮತ್ತು ಮಹಿಳೆಯರಿಗೆ ಪ್ರತ್ಯೇಕ ಟೆಂಟ್‌ಗಳಲ್ಲಿ ವಸತಿ ಸೌಕರ್ಯವನ್ನು ಒದಗಿಸಲಾಗುವುದು, ಆದ್ದರಿಂದ ಕುಟುಂಬಗಳು ಅದಕ್ಕನುಗುಣವಾಗಿ ಪ್ಯಾಕ್‌ ಮಾಡಿಕೊಳ್ಳಬೇಕಾಗಿ ವಿನಂತಿ.

ವಸತಿ ಸೌಲಭ್ಯ

ಶಿಬಿರದಲ್ಲಿ ವಸತಿಗಾಗಿ, ಮರಳಿನ ಮೇಲೆ ಹಾಕಲಾದ ಟೆಂಟ್‌ಗಳಿರುತ್ತವೆ, ಅಲ್ಲಿ ನೆಲವನ್ನು ಒಣಹುಲ್ಲಿನಿಂದ ಮುಚ್ಚಿ, ಅದರ ಮೇಲೆ ಟಾರ್ಪಾಲಿನ್‌ ಹಾಕಲಾಗಿರುತ್ತದೆ.

  • ಹಾಸಿಗೆ, ದಿಂಬು ಮತ್ತು ಹೊದಿಕೆಗಳನ್ನು ಒದಗಿಸಲಾಗುವುದು, ಆದರೆ ದಯವಿಟ್ಟು ನಿಮ್ಮ ಸ್ವಂತ ಬೆಡ್‌ಶೀಟ್‌ಗಳು, ದಿಂಬಿನ ಕವರ್‌ಗಳು ಮತ್ತು ಮಲಗುವ ಚೀಲಗಳನ್ನು (sleeping bags) ತನ್ನಿ.
  • ಜನವರಿ ಮತ್ತು ಫೆಬ್ರವರಿಯಲ್ಲಿ ಹವಾಮಾನವು ತುಂಬಾ ತಂಪಾಗಿರುತ್ತದೆ, ಆದ್ದರಿಂದ ಕ್ವಿಲ್ಟ್, ಸ್ಲೀಪಿಂಗ್ ಬ್ಯಾಗ್, ಸ್ವೆಟರ್, ಕ್ಯಾಪ್ ಮತ್ತು ಸಾಕ್ಸ್‌ಗಳಂತಹ ಚಳಿಗಾಲದ ಬಟ್ಟೆಗಳನ್ನು ತರಲು ಮರೆಯದಿರಿ.
    • ಹಗಲಿನಲ್ಲಿ: 15°C–22°C (59°F–72°F)
    • ರಾತ್ರಿಯಲ್ಲಿ: 6°C–12°C (43°F–54°F)
  • ಈ ತಿಂಗಳುಗಳಲ್ಲಿ ಯಾವಾಗಲಾದರೊಮ್ಮೆ ಮಳೆ ಬರುವ ಸಾಧ್ಯತೆ ಇರುವುದರಿಂದ ರೈನ್‌ಕೋಟ್‌ ಅಥವಾ ಛತ್ರಿ, ಸೊಳ್ಳೆ ನಿವಾರಕ ಕ್ರೀಮ್, ಟಾರ್ಚ್, ಆಸನ ಮತ್ತು ವೈಯಕ್ತಿಕ ಬಳಕೆಯ ಇತರ ವಸ್ತುಗಳನ್ನು ನೀವು ತರಲು ಬಯಸಬಹುದು.

ಹತ್ತಿರದ ಹೋಟೆಲ್‌ಗಳು

ಕುಂಭ ಮೇಳದ ಸಮಯದಲ್ಲಿ ವಸತಿ ಅಥವಾ ಆಹಾರಕ್ಕಾಗಿ ವಿಶೇಷ ಅಗತ್ಯವಿರುವ ಭಕ್ತರು ದಯವಿಟ್ಟು ತಮ್ಮದೇ ಆದ ವ್ಯವಸ್ಥೆಯನ್ನು ಮಾಡಿಕೊಳ್ಳಬಹುದು. ಹತ್ತಿರದ ಹೋಟೆಲ್‌ಗಳ ಪಟ್ಟಿಯನ್ನು ಕೆಳಗೆ ನೀಡಲಾಗಿದೆ. ದಯವಿಟ್ಟು ಹೋಟೆಲ್‌ನಲ್ಲಿ ನಿಮ್ಮ ಕಾಯ್ದಿರಿಸುವಿಕೆಗಳನ್ನು ನೇರವಾಗಿ ಮಾಡಿಕೊಳ್ಳಿ.

ಊಟ

ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ಭಕ್ತಾದಿಗಳಿಗೆ ಸರಳ ಊಟದ ವ್ಯವಸ್ಥೆ ಮಾಡಲಾಗುವುದು.

ತಲುಪುವುದು ಹೇಗೆ

ಪ್ರಯಾಗರಾಜ್ ಅನ್ನು ತಲುಪುವುದು:

  • ವಿಮಾನದ ಮೂಲಕ: ಪ್ರಯಾಗರಾಜ್ ಬಮ್ರೌಲಿ ವಿಮಾನ ನಿಲ್ದಾಣ (IXD) ಶಿಬಿರದಿಂದ ಸುಮಾರು 20 ಕಿ.ಮೀ.
  • ರೈಲಿನ ಮೂಲಕ: ಮುಖ್ಯ ರೈಲು ನಿಲ್ದಾಣ, ಪ್ರಯಾಗ್‌ರಾಜ್ ಜಂಕ್ಷನ್ (PRYJ), ಕ್ಯಾಂಪ್‌ನಿಂದ 10 ಕಿಮೀ ದೂರದಲ್ಲಿದೆ. ಅತ್ಯಂತ ಹತ್ತಿರದ ಪ್ರಯಾಗ್‌ರಾಜ್ ಸಂಗಮ್ ನಿಲ್ದಾಣವು ಸುಮಾರು 2 ಕಿಮೀ ದೂರದಲ್ಲಿದೆ. ನೀವು ಯಾವುದೇ ನಿಲ್ದಾಣದಲ್ಲಿ ಇಳಿಯಬಹುದು ಮತ್ತು ಶಿಬಿರಕ್ಕೆ ಸಾರಿಗೆ ವ್ಯವಸ್ಥೆ ಮಾಡಿಕೊಳ್ಳಬಹುದು.


ವಿಮಾನ ನಿಲ್ದಾಣ/ರೈಲು ನಿಲ್ದಾಣದಿಂದ ಸಾರಿಗೆ:

ನೀವು ನಿಮ್ಮ ಸ್ವಂತ ವ್ಯವಸ್ಥೆ ಮಾಡಿಕೊಳ್ಳಬಹುದು ಅಥವಾ ಸಹಾಯಕ್ಕಾಗಿ ಶ್ರೀ ಧರ್ಮೇಂದ್ರ ಜೈಸ್ವಾಲ್ ಅವರನ್ನು (+91) 93076 66851 ಅಥವಾ (+91) 95981 32021 ರಲ್ಲಿ ಸಂಪರ್ಕಿಸಬಹುದು. ನಿಗದಿತ ಪ್ರಯಾಣ ಶುಲ್ಕಗಳು ಅನ್ವಯಿಸುತ್ತವೆ ಮತ್ತು ಅದನ್ನು ಭಕ್ತರೇ ಭರಿಸಬೇಕಾಗುತ್ತದೆ.


ವಿಶೇಷ ಸ್ನಾನದ ದಿನಾಂಕಗಳ ಸಮಯದಲ್ಲಿ:

ಹೆಚ್ಚಿನ ಜನಸಂದಣಿಯಿಂದಾಗಿ, ವಾಹನ ಪ್ರವೇಶವನ್ನು ಸೀಮಿತಗೊಳಿಸಬಹುದು. ನೀವು ಶಿಬಿರಕ್ಕೆ ನಡೆಯಬೇಕಾಗಿ ಬಂದಲ್ಲಿ ದಯವಿಟ್ಟು ಹಗುರವಾಗಿ ಪ್ಯಾಕ್ ಮಾಡಿಕೊಳ್ಳಿ.

para-ornament

ಕುಂಭ ಮೇಳದಲ್ಲಿ ವೈಎಸ್ಎಸ್ ಕ್ಯಾಂಪ್‌ನ ವಿಳಾಸ

ಪ್ಲಾಟ್ ಸಂಖ್ಯೆ. 1092 ಮತ್ತು 1093
ಶಂಕರಾಚಾರ್ಯ ಮಾರ್ಗ, ಸೆಕ್ಟರ್ 19
ಕುಂಭಮೇಳ ಕ್ಷೇತ್ರ, ಪ್ರಯಾಗರಾಜ್

ಗೂಗಲ್‌ ಮ್ಯಾಪ್ಸ್ ಲಿಂಕ್: ಇಲ್ಲಿ ಕ್ಲಿಕ್ ಮಾಡಿ

ಯೋಗದಾ ಸತ್ಸಂಗ ಧ್ಯಾನ ಕೇಂದ್ರ, ಪ್ರಯಾಗ್‌ರಾಜ್

468/270, ನೈ ಬಸ್ತಿ ಸೊಹಬತಿಯಾ ಬಾಘ್,
ಪ್ರಯಾಗ್‌ರಾಜ್ (ಅಲಹಾಬಾದ್),
ಉತ್ತರ ಪ್ರದೇಶ – 211006

ಫೋನ್: 9454066330, 9415369314, 9936691302

ಇಮೇಲ್: [email protected]

para-ornament

ವಿಚಾರಣೆಗಾಗಿ ಸಂಪರ್ಕ ವಿವರಗಳು

ಯೋಗದಾ ಸತ್ಸಂಗ ಶಾಖಾ ಮಠ – ರಾಂಚಿ
ಪರಮಹಂಸ ಯೋಗಾನಂದ ಪಥ
ರಾಂಚಿ – 834001
ಜಾರ್ಖಂಡ್

ಫೋನ್: (0651) 6655 506
(ಸೋಮ-ಶನಿ, ಬೆಳಗ್ಗೆ 09:30 – ಸಂಜೆ 04:30)

ಇಮೇಲ್: [email protected]

ನೂತನ ಅತಿಥಿ

ಪರಮಹಂಸ ಯೋಗಾನಂದರ ಬಗ್ಗೆಯೂ ಅವರ ಉಪದೇಶಗಳ ಬಗ್ಗೆಯೂ ತಿಳಿಯಲು ಕೆಳಗಿನ ಲಿಂಕ್ ಗಳನ್ನು ನೋಡಿಕೊಳ್ಳಿ:

ಇದನ್ನು ಹಂಚಿಕೊಳ್ಳಿ