ರಸ್ತೆಯ ಮೂಲಕ
ದ್ವಾರಾಹಟ್ ಉತ್ತರ ಭಾರತದ ವಿವಿಧ ನಗರಗಳೊಂದಿಗೆ ಸಂಪರ್ಕ ಹೊಂದಿದೆ. (ದೆಹಲಿಯಿಂದ ಸುಮಾರು 400 ಕಿಮೀ, ಲಕ್ನೋದಿಂದ 475 ಕಿಮೀ, ಡೆಹ್ರಾಡೂನ್‌ನಿಂದ 450 ಕಿಮೀ, ಹರಿದ್ವಾರದಿಂದ 375 ಕಿಮೀ, ಮತ್ತು ರಾಣಿಖೇತ್‌ನಿಂದ 38 ಕಿಮೀ).
ರೈಲಿನ ಮೂಲಕ
ಅತ್ಯಂತ ಹತ್ತಿರದ ರೈಲು ನಿಲ್ದಾಣವೆಂದರೆ ಕಾಟ್‌ಗೋದಾಮ್. ಇದು ದೆಹಲಿ, ಕೋಲ್ಕೋತಾ, ಲಕ್ನೋ, ಜಮ್ಮು ಮತ್ತು ಡೆಹ್ರಾಡೂನ್‌ನಿಂದ ಉತ್ತಮವಾದ ರೈಲು ಸಂಪರ್ಕ ಹೊಂದಿದೆ. ಇಲ್ಲಿಂದ ಖಾಸಗಿ ಟ್ಯಾಕ್ಸಿ ಅಥವಾ ಶೇರ್ ಟ್ಯಾಕ್ಸಿ ಅಥವಾ ಬಸ್ ಮೂಲಕ ಹೋಗಬಹುದು. ಆಶ್ರಮವು ಸುಮಾರು 120 ಕಿ.ಮೀ. ದೂರದಲ್ಲಿದೆ.
(ಮಾರ್ಗ: ಕಾಟ್‌ಗೋದಾಮ್ – ಭೀಮತಾಲ್ – ಭೊವ್ವಾಲಿ – ಗರಂಪಾನಿ – ಖೈರ್ನಾ – ರಾಣಿಖೇತ್ – ದ್ವಾರಾಹಟ್)