ವಿಮಾನ ನಿಲ್ದಾಣಗಳಿಂದ
ದೇಶೀಯ ಹಾಗೂ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣಗಳು (ಎಜಿಐ ವಿಮಾನ ನಿಲ್ದಾಣ) 6-7 ಕಿಲೋಮೀಟರ್ ಅಂತರದಲ್ಲಿವೆ. ನಮ್ಮ ಆಶ್ರಮ 40 ಕಿ.ಮೀಗಿಂತ ಹೆಚ್ಚು ದೂರದಲ್ಲಿದೆ.
ಟ್ಯಾಕ್ಸಿ (ವಿಮಾನ ನಿಲ್ದಾಣದೊಳಗೆ ಮುಂಗಡ ಬುಕಿಂಗ್ ಮಾಡುವ) ನೇರವಾದ ದಾರಿ, ಆದರೆ ಆಶ್ರಮವನ್ನು ತಲುಪುವ ದುಬಾರಿ ಮಾರ್ಗವಾಗಿರುತ್ತದೆ. ಅಗ್ಗವಾದ ಬದಲು ದಾರಿ ಎಂದರೆ ಆಟೋರಿಕ್ಷಾ.
ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಏರ್ಪೋರ್ಟ್ ಎಕ್ಸ್‌ಪ್ರೆಸ್ ಮೆಟ್ರೋವನ್ನು ದ್ವಾರಕಾ ಸೆಕ್ಟರ್ 21ಕ್ಕೆ ತೆಗೆದುಕೊಳ್ಳಿ. ಅಲ್ಲಿ ಇಳಿದು ನೋಯ್ಡಾ ಸಿಟಿ ಸೆಂಟರ್, ಸೆಕ್ಟರ್ 32 ಗೆ ಮೆಟ್ರೋ ತೆಗೆದುಕೊಳ್ಳಿ. ನೋಯ್ಡಾ ಸಿಟಿ ಸೆಂಟರ್‌ನಿಂದ ಆಶ್ರಮಕ್ಕೆ ಆಟೋರಿಕ್ಷಾ ತೆಗೆದುಕೊಳ್ಳಿ (ದೂರ 7 ಕಿ.ಮೀ.).
ರೈಲ್ವೆ ನಿಲ್ದಾಣಗಳಿಂದ
ಡೆಲ್ಲಿ (ಹಳೆಯದು) ಮತ್ತು ಹೊಸ ದೆಹಲಿ ನಿಲ್ದಾಣಗಳಿಂದ ನೋಯ್ಡಾ ಸಿಟಿ ಸೆಂಟರ್‌ಗೆ ಮೆಟ್ರೋವನ್ನು, (ರಾಜೀವ್ ಚೌಕನಲ್ಲಿ ಬದಲಿಸಿ) ತೆಗೆದುಕೊಳ್ಳಿ. ಮತ್ತು ನಂತರ ಒಂದು ಆಟೋರಿಕ್ಷಾ/ಟ್ಯಾಕ್ಸಿ ಮೇಲೆ ತಿಳಿಸಿದಂತೆ ತೆಗೆದುಕೊಳ್ಳಿ. ಆಟೋರಿಕ್ಷಾ/ಟ್ಯಾಕ್ಸಿಯಲ್ಲಿ ನೇರವಾಗಿಯೂ ಸಹ ಹೋಗಬಹುದು.
ನಿಜಾಮುದ್ದೀನ್ ಮತ್ತು ರಜಿಯಾಬಾದ್ ರೈಲ್ವೆ ನಿಲ್ದಾಣಗಳಿಂದ ಮೆಟ್ರೋ ಇಲ್ಲದಿರುವುದರಿಂದ, ಆಟೋರಿಕ್ಷಾ ಅಥವಾ ಟ್ಯಾಕ್ಸಿ ತೆಗೆದುಕೊಳ್ಳಬೇಕಾಗುತ್ತದೆ.
ಅಂತರ್-ರಾಜ್ಯ ಬಸ್ ನಿಲ್ದಾಣಗಳಿಂದ
ಐಎಸ್‌ಬಿಟಿ, ಕಾಶ್ಮೀರಿ ಗೇಟ್‌ನಿಂದ ನೋಯ್ಡಾ ಸಿಟಿ ಸೆಂಟರ್(ರಾಜೀವ್ ಚೌಕದಲ್ಲಿಬದಲಾಯಿಸಿ)ಗೆ ಬಂದು ನಂತರ ಒಂದು ಆಟೋರಿಕ್ಷಾ/ಟ್ಯಾಕ್ಸಿಯಲ್ಲಿ ಆಶ್ರಮಕ್ಕೆ ಬರಬಹುದು. ಆಶ್ರಮಕ್ಕೆ ನೇರವಾಗಿ ಆಟೋರಿಕ್ಷಾ/ಟ್ಯಾಕ್ಸಿಯಲ್ಲಿಯೂ ಬರಬಹುದು.
ಐಎಸ್‌ಬಿಟಿ, ಆನಂದ ವಿಹಾರ್‌ನಿಂದ, ಮೆಟ್ರೋ ಇಲ್ಲದಿರುವುದರಿಂದ, ಆಟೋರಿಕ್ಷಾ/ಟ್ಯಾಕ್ಸಿಯಲ್ಲಿ ನೇರವಾಗಿ ಆಶ್ರಮಕ್ಕೆ ತಲುಪುವುದು ಸೂಕ್ತ.
ಖಾಸಗಿ ಕಾರು ಅಥವಾ ಟ್ಯಾಕ್ಸಿಯಲ್ಲಿ
ಇಲ್ಲಿ ಕೊಟ್ಟಿರುವ ಮಾರ್ಗ ನಕ್ಷೆ (ರೂಟ್ ಮ್ಯಾಪ್) ಅನ್ನು ಅನುಸರಿಸಿ, ಉದಾಹರಣೆಗೆ ದೆಹಲಿಯಿಂದ ಹೊರಟು, ಯಮುನಾ ನದಿಯನ್ನು, ನಿಜಾಮುದ್ದೀನ್ ಸೇತುವೆಯ ಮೂಲಕ ದಾಟಿ, ನೇರವಾಗಿ ಎನ್ ಹೆಚ್ 24ರಲ್ಲಿ ಹೋಗಿ, ಉತ್ತರ ಪ್ರದೇಶದ ಸರಹದ್ದನ್ನು ದಾಟಿ, ಬಲಕ್ಕೆ ತಿರುಗಿ, ಎರಡನೆಯ ಟ್ರಾಫಿಕ್ ಲೈಟ್ ನಲ್ಲಿ ಬಲಕ್ಕೆ ತಿರುಗಿ, ಮತ್ತು ನಂತರ ಮೂರನೆಯ ತಿರುವಿನಲ್ಲಿ ಎಡಕ್ಕೆ ತಿರುಗಿ, ನಂತರ ಮೊದಲ ಬಲ ತಿರುವಿನ ಮೂಲೆಯಲ್ಲಿಯೇ ಆಶ್ರಮವನ್ನು ತಲುಪುವಿರಿ.
