ಮಾರ್ಗದರ್ಶಿತ ಧ್ಯಾನ ಕಾರ್ಯಕ್ರಮದೊಂದಿಗೆ ವೈ ಎಸ್‌ ಎಸ್‌ ಧ್ಯಾನ ತಂತ್ರಗಳ ಪುನರಾವಲೋಕನವನ್ನು ವೈ ಎಸ್‌ ಎಸ್‌ ಸನ್ಯಾಸಿಯವರಿಂದ ನಡೆಸಿಕೊಡಲಾಗುತ್ತದೆ, ಕನ್ನಡದಲ್ಲಿ ; ಶನಿವಾರ, ಏಪ್ರಿಲ್‌ 03, 2021 ಸಂಜೆ 6 ರಿಂದ 8 ರವರೆಗೆ (ಭಾರತೀಯ ಕಾಲಮಾನ)

ಎರಡು ಗಂಟೆಗಳ ಆನ್‌ ಲೈನ್‌ ಕಾರ್ಯಕ್ರಮವು ವೈಎಸ್‌ಎಸ್‌/ ಎಸ್‌ಆರ್‌ಎಫ್‌ ಪಾಠಗಳ ವಿದ್ಯಾರ್ಥಿಗಳಿಗೆ ಮಾತ್ರ ಲಭ್ಯವಿರುತ್ತದೆ. ಮತ್ತು ಅದು ಏಕಾಗ್ರತೆಯ ಹಾಂಗ್‌ ಸಾ ತಂತ್ರ, ಧ್ಯಾನದ ಓಂ ತಂತ್ರ ಮತ್ತು ವೈಎಸ್‌ಎಸ್‌ ಸನ್ಯಾಸಿ ಇವರಿಂದ ಒಂದು ಮಾರ್ಗದರ್ಶಿತ ಧ್ಯಾನವನ್ನು ಒಳಗೊಂಡಿರುತ್ತದೆ.

ಈ ಕಾರ್ಯಕ್ರಮಕ್ಕೆ ನೊಂದಾಯಿಸಿಕೊಳ್ಳಿ

ಮುಖ್ಯವಾದುದು: ಧ್ಯಾನ ತಂತ್ರಗಳ ಪುನರಾವಲೋಕನಕ್ಕಾಗಿ ಪ್ರವೇಶ ಪಡೆಯಲು ದಯಮಾಡಿ
ಇಲ್ಲಿ ಕ್ಲಿಕ್‌ ಮಾಡಿ ಮತ್ತು ನಿಮ್ಮ ಭಕ್ತರ ಪೋರ್ಟಲ್‌ ಇಮೇಲ್‌ ವಿಳಾಸ ಮತ್ತು ಪಾಸ್‌ವರ್ಡನೊಂದಿಗೆ ಲಾಗ್ ಇನ್‌ ಆಗಿ.

ಹಾಂಗ್. ಸಾ ತಂತ್ರದ ಪುನರಾವಲೋಕನ

ಈ ಸನಾತನ ಶಕ್ತಿಯುತ ಹಾಂಗ್‌ ಸಾ ತಂತ್ರ ಮನಸ್ಸಿನ ಏಕಾಗ್ರತೆಯ ಸುಪ್ತ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಸಹಾಯ ಮಾಡುತ್ತದೆ. ಇದರ ನಿಯಮಿತ ಅಭ್ಯಾಸದಿಂದ ಹೊರಗಿನ ಚಿತ್ತ ಚಾಂಚಲ್ಯಗಳಿಂದ ವಿವೇಚನೆ ಮತ್ತು ಶಕ್ತಿಗಳನ್ನು ಹಿಂಪಡೆಯುವುದನ್ನು ಕಲಿಯುತ್ತಾನೆ. ಅದರಿಂದ ಯಾವುದಾದರೂ ಗುರಿಯನ್ನು ಸಾಧಿಸುವುದರ ಮೇಲೆ ಅಥವಾ ಸಮಸ್ಯೆಗಳನ್ನು ನಿವಾರಿಸಿಕೊಳ್ಳಲು ಕೇಂದ್ರೀಕರಿಸಿಕೊಳ್ಳಬಹುದಾಗಿದೆ. ಅಥವಾ ಏಕಾಗ್ರಗೊಂಡ ಗಮನವನ್ನು ನಿಯಮಿತ ಅಭ್ಯಾಸದ ಫಲವಾದ ಅಂತರ್ಯದ ದಿವ್ಯ ಪ್ರಜ್ಞೆಯನ್ನು ಅರಿಯಲು ನಿರ್ದೇಶಿಸಬಹುದು.

ಓಂ ತಂತ್ರದ ಪುನರಾವಲೋಕನ

ಒಮ್ಮೆ ಹಾಂಗ್. ಸಾ ತಂತ್ರದ ಅಭ್ಯಾಸದಿಂದ ವಿದ್ಯಾರ್ಥಿಯು ದೇಹವನ್ನು ಸಡಿಲಿಸಿ ಮನಸ್ಸನ್ನು ಏಕಾಗ್ರಗೊಳಿಸಲು ಕಲಿತ ನಂತರ, ಈ ಉನ್ನತ ಧ್ಯಾನದ ಓಂ ತಂತ್ರವು ತನ್ನ ದೇಹ ಮತ್ತು ಮನಸ್ಸಿಗೆ ಅತೀತವಾಗಿ ಅರಿವನ್ನು ವಿಸ್ತರಿಸಿ ತನ್ನದೇ ಆದ ಆನಂದಮಯ ಅನಂತ ಶಕ್ತಿಯನ್ನು ಅರಿಯುವಂತೆ ಮಾಡುತ್ತದೆ.

ಈ ಆಧ್ಯಾತ್ಮದ ಕಾರ್ಯಕ್ರಮದಲ್ಲಿ ನೀವು ಪಾಲ್ಗೊಳ್ಳುವ ಅವಕಾಶವನ್ನು ಉಪಯೋಗಿಸಿಕೊಳ್ಳಲು ನಾವು ಹುರಿದುಂಬಿಸುತ್ತೇವೆ. ಮತ್ತು ಸಹ ಭಕ್ತರೊಡನೆ ಸಮೂಹ ಧ್ಯಾನದಲ್ಲಿ ಸೇರಿಕೊಂಡು ಗುರುದೇವರ ಉಪದೇಶಗಳನ್ನು ಪುನರಾವಲೋಕನ ಮಾಡಬಹುದಾಗಿದೆ. ಈ ವಿಶೇಷ ಕಾರ್ಯಕ್ರವು ವೈ ಎಸ್‌ ಎಸ್‌/ ಎಸ್‌ ಆರ್‌ ಎಫ್‌ ಪಾಠಗಳ ವಿದ್ಯಾರ್ಥಿಗಳಿಗೆ ಮಾತ್ರ ಲಭ್ಯವಿರುತ್ತದೆ. ಮತ್ತು ಇದನ್ನು ಕನ್ನಡದಲ್ಲಿ ನಿರ್ವಹಿಸಲಾಗುತ್ತದೆ.

ಕಾರ್ಯಕ್ರಮಕ್ಕೆ ಸಿದ್ಧತೆ

ಈ ತಂತ್ರಗಳ ಪುನರಾವಲೋಕನ ತರಗತಿಗಳಿಗೆ ಮೊದಲೇ ಧ್ಯಾನ ತಂತ್ರದ ಯೋಗದಾ ಸತ್ಸಂಗ ಪಾಠಗಳನ್ನು ಪರಾಮರ್ಶಿಸಿಕೊಳ್ಳಲು ನಾವು ಸಲಹೆ ನೀಡುತ್ತೇವೆ.

ನಿಮ್ಮ ಟಿ ಆರ್ಮ್‌ ರೆಸ್ಟ ಮತ್ತು ಆಸನಗಳನ್ನು ಸಿದ್ಧ ಪಡಿಸಿಕೊಳ್ಳುವುದು ಈ ತರಗತಿಗಳಿಗೆ ಸಹಾಯಕವೆಂಬುದನ್ನು ನೀವು ಕಂಡುಕೊಳ್ಳುವಿರಿ.
ವೈ ಎಸ್‌ ಎಸ್‌/ ಎಸ್‌ ಆರ್‌ ಎಫ್‌ ಪಾಠಗಳ ವಿದ್ಯಾರ್ಥಿಗಳು ಸಮಯಕ್ಕೆ ಮುಂಚಿತವಾಗಿಯೇ “ಸಂಗಮ್” ಪೊರ್ಟಲ್‌ ಗೆ ಲಾಗ ಇನ್‌ ಆಗಬೇಕು ಮತ್ತು ಧ್ಯಾನ ತಂತ್ರ ಪುನರಾವಲೋಕನ ಕಾರ್ಯಕ್ರಮದ ಪುಟದಲ್ಲಿ ಪ್ರವೇಶ ಪಡೆಯಲು ಸಾಧ್ಯವಾಗಿರುವುದನ್ನು ಮತ್ತೆ ಮತ್ತೆ ಖಚಿತ ಪಡಿಸಿಕೊಳ್ಳಿ.
ದಯಮಾಡಿ ಗಮನಿಸಿ. ಈ ಪಾಠಗಳು ನಿಯಮಿತ ಸಮಯದಲ್ಲಿ ಮಾತ್ರ ದೊರೆಯುತ್ತವೆ ಮತ್ತು ಪುನರ್‌ ವೀಕ್ಷಣೆಗೆ ಲಭ್ಯವಿರುವುದಿಲ್ಲ

ತಾಂತ್ರಿಕ ಸಹಾಯಕತೆ

ಸಹಾಯ ಬೇಕೇ?

ವೈಎಸ್‌ಎಸ್‌ ಭಕ್ತರು ನಮ್ಮನ್ನು ಸಂಪರ್ಕಿಸಿ (0651) 6655 555 ಅಥವಾ ಪ್ರಶ್ನೆಗಳನ್ನು ಇಲ್ಲಿ ಸಲ್ಲಿಸಿ.

ಎಸ್‌ಆರ್‌ಎಫ್‌ ಭಕ್ತರು ತಮ್ಮ ತಾಂತ್ರಿಕ ಸಹಾಯಕ್ಕಾಗಿ ಪ್ರಶ್ನೆಗಳನ್ನು SRF Online Meditation Center ಗೆ ಸಲ್ಲಿಸಿ ಅಥವಾ ಕರೆ ಮಾಡಿ +1 (760) 417-6080 (ದಯಮಾಡಿ ಗಮನಿಸಿ ಬಹುದೂರ ಶುಲ್ಕಗಳು ಅನ್ವಯಿಸುತ್ತವೆ.)