“ನನ್ನ ವಾಣಿಯ ಮೂಲಕ ದೇವರು ನುಡಿಯುತ್ತಿದ್ದಾನೆಂದು ನಾನು ಬಲ್ಲೆ. ಆತ್ಮ ಸಾಕ್ಷಾತ್ಕಾರದ ಧ್ವನಿ ಎಂದರೆ [ಯೋಗದಾ ಸತ್ಸಂಗ] ದೇವರ ಧ್ವನಿ. ಅದನ್ನು ಅನುಸರಿಸಿ. ದೇವರನ್ನು ಅರಿಯಲು ತವಕಿಸುವ ಮಹಾತ್ಮರು ಈ ಮಾರ್ಗವನ್ನು ಅನುಸರಿಸುತ್ತಾ, ಆತನ ಸಾನಿಧ್ಯದ ಅಮೃತವನ್ನು ಪಾನಮಾಡುತ್ತಿದ್ದಾರೆ. ಈ ಬೋಧನೆಗಳನ್ನು ಅಭ್ಯಾಸ ಮಾಡಿ, ಆಗ ನೀವೂ ಸಹ ಈ ಜೀವನ ಎಷ್ಟು ಸುಂದರವಾಗುತ್ತದೆ ಎಂದು ಕಾಣುವಿರಿ.”
— ಶ್ರೀ ಶ್ರೀ ಪರಮಹಂಸ ಯೋಗಾನಂದ
ಪ್ರೀತಿಯ ಪವಿತ್ರಾತ್ಮರೇ,
ಗುರುದೇವ ಶ್ರೀ ಶ್ರೀ ಪರಮಹಂಸ ಯೋಗಾನಂದರ ಆಶ್ರಮಗಳಿಂದ ನಿಮಗೆಲ್ಲರಿಗೂ ನಮ್ಮ ಪ್ರೀತಿಯ ಪ್ರಣಾಮಗಳು ಮತ್ತು ಶುಭಕಾಮನೆಗಳು.
ನಿಮ್ಮ ಪ್ರಾರ್ಥನೆಗಳು, ಸದ್ಭಾವನೆ ಮತ್ತು ಅಚಲ ಬೆಂಬಲದ ಮೂಲಕ ಈ ವರ್ಷ ಲಭ್ಯವಾಗಿರುವ ಅನೇಕ ಆಶೀರ್ವಾದಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ನಮಗೆ ಅತೀವ ಆನಂದವಾಗಿದೆ.
ಈ ವರ್ಷದ ಅನೇಕ ಮೈಲಿಗಲ್ಲುಗಳು ಹೀಗಿವೆ:
- ನಮ್ಮ ಪೂಜ್ಯ ಅಧ್ಯಕ್ಷರು ಹಾಗೂ ಆಧ್ಯಾತ್ಮಿಕ ಮುಖ್ಯಸ್ಥರಾದ ಶ್ರೀ ಶ್ರೀ ಸ್ವಾಮಿ ಚಿದಾನಂದ ಗಿರಿ ಅವರ ಭಾರತ ಮತ್ತು ನೇಪಾಳ ಭೇಟಿ
- ವೈಎಸ್ಎಸ್ ಚೆನ್ನೈ ಆಶ್ರಮಕ್ಕಾಗಿ ಮಹಾಯೋಜನೆಯ ಅಭಿವೃದ್ಧಿ
- ಈ ವರ್ಷದ ಕುಂಭಮೇಳದ ವೈಎಸ್ಎಸ್ ಶಿಬಿರದಲ್ಲಿ ಸಾವಿರಾರು ಜನರು ಆಧ್ಯಾತ್ಮಿಕ ಭಾರತದ ಶಾಶ್ವತ ಆನಂದಮಯ ಚೇತನವನ್ನು ಅನುಭವಿಸಿದರು
- ಆನ್‌ಲೈನ್ ಧ್ಯಾನ ಕೇಂದ್ರಗಳನ್ನು ಪ್ರಾದೇಶಿಕ ಭಾಷೆಗಳಿಗೆ ಇನ್ನಷ್ಟು ವಿಸ್ತರಣೆ ಮಾಡಲಾಯಿತು
- ವಿವಿಧ ಭಾರತೀಯ ಭಾಷೆಗಳಲ್ಲಿ ಹೊಸ ವೈಎಸ್ಎಸ್ ಪ್ರಕಟಣೆಗಳು
- ಪ್ರಥಮ ಯುವ ಸಾಧಕರ ಸಂಗಮ
- ಗುರೂಜಿಯವರ “ಹೇಗೆ ಬದುಕಬೇಕು” ಎಂಬ ಆದರ್ಶಗಳಿಗೆ ಅನುಗುಣವಾಗಿ ಮುಂದಿನ ಪೀಳಿಗೆಯನ್ನು ಪೋಷಿಸುವ ಯುವ ಕಾರ್ಯಕ್ರಮಗಳು
- ವಿವಿಧ ಧರ್ಮಾರ್ಥ ಉಪಕ್ರಮಗಳು; ಮತ್ತು ವಿಪತ್ತು ಪರಿಹಾರ
ಇವೆಲ್ಲವೂ ನಿಮ್ಮಂತಹ ಭಕ್ತರ ಪ್ರೀತಿ ಮತ್ತು ಉದಾರತೆಯಿಂದ ಮಾತ್ರ ಸಾಧ್ಯ. ಹೃತ್ಪೂರ್ವಕ ಕೃತಜ್ಞತೆಯೊಂದಿಗೆ, ಈ ಸಾಧನೆಗಳ ಆನಂದದಲ್ಲಿ ನಮ್ಮೊಂದಿಗೆ ಪಾಲ್ಗೊಳ್ಳಲು ಹಾಗೂ ಗುರೂಜಿಯವರ ಅತಿ ಶ್ರೇಷ್ಠ ಕ್ರಿಯಾ ಯೋಗ ಬೋಧನೆಗಳ ಮೂಲಕ ಸಮಸ್ತ ಮಾನವಕುಲವನ್ನು ಆಧ್ಯಾತ್ಮಿಕವಾಗಿ ಉದ್ಧರಿಸುವ ದಿವ್ಯ ಧ್ಯೇಯವನ್ನು ನಮ್ಮೊಂದಿಗೆ ಮುಂದುವರಿಸಲು ನಾವು ನಿಮ್ಮನ್ನು ಹ್ವಾನಿಸುತ್ತೇವೆ. ನಿಮ್ಮ ಕಾಣಿಕೆ — ಅದು ಆನ್‌ಲೈನ್ ಮೂಲಕವಾಗಿರಲಿ ಅಥವಾ ನಿಮ್ಮ ಹತ್ತಿರದ ವೈಎಸ್‌ಎಸ್ ಆಶ್ರಮ, ಕೇಂದ್ರ, ಅಥವಾ ಮಂಡಳಿಯಲ್ಲಿ ನೀಡಲಾಗಿರಲಿ — ಅಸಂಖ್ಯಾತ ಆತ್ಮಗಳಿಗೆ ದಿವ್ಯ ಪ್ರೇರಣೆ, ಭರವಸೆ ಮತ್ತು ಸಮಾಧಾನವನ್ನು ತಲುಪಿಸಲು ಸಹಾಯಕವಾಗುತ್ತದೆ.
ದೇವರು ಮತ್ತು ಗುರುಗಳ ಆಶೀರ್ವಾದಗಳು ನಿಮ್ಮನ್ನು ಹಾಗೂ ನಿಮ್ಮ ಪ್ರೀತಿಪಾತ್ರರನ್ನು ಸದಾ ಮಾರ್ಗದರ್ಶನ ಮಾಡಿ, ಬಲಪಡಿಸಲಿ.
ದಿವ್ಯ ಸ್ನೇಹದೊಂದಿಗೆ,
ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ
ಆಧ್ಯಾತ್ಮಿಕ ಕಾರ್ಯಕ್ರಮಗಳು ಮತ್ತು ಜನಸಂಪರ್ಕ
ಈ ವರ್ಷ ವೈಎಸ್ಎಸ್ ಸಂಸ್ಥೆಯು ಹಲವಾರು ಆಧ್ಯಾತ್ಮಿಕ ಕಾರ್ಯಕ್ರಮಗಳನ್ನು ಮತ್ತು ಸಮಾಜಮುಖಿ ಚಟುವಟಿಕೆಗಳನ್ನು ನಡೆಸಿತು:
- ನಮ್ಮ ಪೂಜ್ಯ ಅಧ್ಯಕ್ಷರು ಮತ್ತು ಆಧ್ಯಾತ್ಮಿಕ ಮುಖ್ಯಸ್ಥರಾದ ಶ್ರೀ ಶ್ರೀ ಸ್ವಾಮಿ ಚಿದಾನಂದ ಗಿರಿ ಅವರ ಬೆಂಗಳೂರು, ಚೆನ್ನೈ, ಅಹಮದಾಬಾದ್, ನೋಯ್ಡಾ, ಮತ್ತು ಕಠ್ಮಂಡು ಭೇಟಿಯು ಸಾವಿರಾರು ಭಕ್ತರನ್ನು ಪ್ರೇರೇಪಿಸಿತು ಮತ್ತು ಉದ್ಧರಿಸಿತು
- ವೈಎಸ್ಎಸ್ ಕುಂಭ ಮೇಳ ಶಿಬಿರವು 2,500ಕ್ಕೂ ಹೆಚ್ಚು ವೈಎಸ್ಎಸ್/ಎಸ್‌ಆರ್‌ಎಫ್ ಭಕ್ತರಿಗೆ ಆತಿಥ್ಯ ನೀಡಿ, ಪ್ರತಿದಿನ ಸಾಮೂಹಿಕ ಧ್ಯಾನಗಳು, ಕೀರ್ತನೆಗಳು ಮತ್ತು ಸತ್ಸಂಗಗಳನ್ನು ಆಯೋಜಿಸಿತು, ಹಾಗೂ ಒಂದು ಧರ್ಮಾರ್ಥ ವೈದ್ಯಕೀಯ ಚಿಕಿತ್ಸಾಲಯದ ಮೂಲಕ ಸಾವಿರಾರು ಯಾತ್ರಾರ್ಥಿಗಳಿಗೆ ಸೇವೆ ಸಲ್ಲಿಸಿತು
- ಸುಮಾರು 10,000 ಭಕ್ತರು, ವೈಎಸ್ಎಸ್ ಆಶ್ರಮಗಳಲ್ಲಿ ಹಾಗೂ ಭಾರತ ಮತ್ತು ನೇಪಾಳದ ಅನೇಕ ನಗರಗಳಲ್ಲಿ ನಡೆದ ಸನ್ಯಾಸಿ-ನೇತೃತ್ವದ ಸಾಧನಾ ಸಂಗಮಗಳು, ಸಾರ್ವಜನಿಕ ಪ್ರವಚನಗಳು ಮತ್ತು ಕ್ರಿಯಾ ದೀಕ್ಷೆಗಳಲ್ಲಿ ಭಾಗವಹಿಸಿದ್ದರು
- ಅಂತರರಾಷ್ಟ್ರೀಯ ಯೋಗ ದಿನದ ಕಾರ್ಯಕ್ರಮ ನೇರ ಕಾರ್ಯಕ್ರಮಗಳ ಮೂಲಕ ಸಾವಿರಾರು ಜನರನ್ನು ತಲುಪಿದವು ಮತ್ತು 70,000ಕ್ಕೂ ಹೆಚ್ಚು ಆನ್‌ಲೈನ್ ವೀಕ್ಷಣೆಗಳನ್ನು ಪಡೆದುಕೊಂಡವು
- ಭಾರತದಾದ್ಯಂತ ನಡೆದ 40 ಪುಸ್ತಕ ಮೇಳಗಳಲ್ಲಿ ನಮ್ಮ ಭಾಗವಹಿಸುವಿಕೆಯು ಅಸಂಖ್ಯಾತ ಅನ್ವೇಷಕರನ್ನು ಗುರುದೇವರ ಬೋಧನೆಗಳಿಗೆ ಪರಿಚಯಿಸಿತು








ಈ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಭಕ್ತರಿಂದ ಬಂದ ಕೆಲವು ಪತ್ರಗಳನ್ನು ಕೆಳಗೆ ಹಂಚಿಕೊಳ್ಳಲಾಗಿದೆ:
“ಸ್ವಾಮಿ ಚಿದಾನಂದಜಿಯವರ ಒಂದು ದಿನದ ಕಾರ್ಯಕ್ರಮವು ನನ್ನ ಜೀವನದಲ್ಲಿ ಪರಿವರ್ತನೆಯನ್ನು ತಂದ ಅನುಭವವಾಗಿತ್ತು… ಮೂರು ಗಂಟೆಗಳ ಧ್ಯಾನವು ಅತ್ಯಂತ ಗಹನ, ಶಾಂತಿಯುತ ಹಾಗೂ ಆಳವಾದ ಅನುಭವವಾಗಿ ಪರಿಣಮಿಸಿತು. ನನ್ನ ಸಂಶಯಗಳು ನಿಧಾನವಾಗಿ ಕರಗಿದಂತೆ ಭಾಸವಾಗಿ, ಅಪಾರವಾದ ನಿರಾಳತೆ ಮತ್ತು ಆಂತರಿಕ ವಿಶ್ವಾಸ ನನ್ನೊಳಗೆ ಮೂಡಿತು. ಅವರ ಭೇಟಿಯು ಕೇವಲ ಒಂದು ಕಾರ್ಯಕ್ರಮವಾಗಿರಲಿಲ್ಲ—ಅದು ಒಂದು ಜಾಗೃತಿಯೇ ಆಗಿತ್ತು. ಅವರ ವಚನಗಳು, ಅವರ ದಿವ್ಯ ಉಪಸ್ಥಿತಿ ಮತ್ತು ಸಮೂಹದ ಸಾಮೂಹಿಕ ಶಕ್ತಿಯು ಮನಸ್ಸಿನಲ್ಲಿ ಶಾಶ್ವತವಾದ ಅನುಭವವನ್ನು ಮೂಡಿಸಿತು.”
“ಗುರೂಜಿ ಮತ್ತು ವೈಎಸ್ಎಸ್ ಪ್ರತಿಪಾದಿಸುವ ಎಲ್ಲವೂ, ಅವುಗಳಲ್ಲಿ ಕೆಲವನ್ನು ಹೆಸರಿಸುವುದಾದರೆ — ಕರುಣೆ, ಶಿಸ್ತು, ಸೌಜನ್ಯ ಮತ್ತು ಪ್ರಶಾಂತತೆ — ಕಾರ್ಯಕ್ರಮದ ಮೂಲಕ ಪ್ರತಿಬಿಂಬಿತವಾಯಿತು. ನಾನು ಕಾರ್ಯಕ್ರಮಕ್ಕೆ ಬಂದಾಗ, ಸ್ವಾಮಿ ಚಿದಾನಂದಜಿಯವರನ್ನು ಖುದ್ದಾಗಿ ನೋಡುವ ಅವಕಾಶವನ್ನು ಹೊರತುಪಡಿಸಿ ಬೇರೇನನ್ನೂ ನಿರೀಕ್ಷಿಸಿರಲಿಲ್ಲ. ಆದರೆ, ನಾನು ಎಂದಿಗೂ ಊಹಿಸಿರದ ಅನೇಕ ಉತ್ತಮ ವಿಷಯಗಳೊಂದಿಗೆ ಹಿಂತಿರುಗಿದೆ.”
ಆಶ್ರಮ ಮತ್ತು ಕೇಂದ್ರಗಳ ಅಭಿವೃದ್ಧಿ
ದಕ್ಷಿಣ ಭಾರತದಲ್ಲಿ ಆಧ್ಯಾತ್ಮಿಕ ಧಾಮದ ನಿರ್ಮಾಣ:
2024ರ ಸೆಪ್ಟೆಂಬರ್‌ನಲ್ಲಿ, ನಮ್ಮ ಪೂಜ್ಯ ಅಧ್ಯಕ್ಷರಾದ ಸ್ವಾಮಿ ಚಿದಾನಂದಜಿ ಅವರು, ವೈಎಸ್‌ಎಸ್ ಚೆನ್ನೈ ಏಕಾಂತ ಕೇಂದ್ರವನ್ನು ಪೂರ್ಣ ಪ್ರಮಾಣದ ವೈಎಸ್‌ಎಸ್ ಆಶ್ರಮವಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಔಪಚಾರಿಕವಾಗಿ ಘೋಷಿಸಿದರು. ಈ ಆಶ್ರಮವು ಇಂದು ಮತ್ತು ಭವಿಷ್ಯದಲ್ಲಿ ಅನೇಕ ಸತ್ಯಾನ್ವೇಷಿಗಳನ್ನು ಭಗವತ್-ಸಂಯೋಗ, ಸತ್ಸಂಗ ಮತ್ತು ದೈವೀ ಪ್ರೇರಣೆಯತ್ತ ಆಕರ್ಷಿಸಲಿ ಎಂದು ನಾವು ಪ್ರಾರ್ಥಿಸುತ್ತೇವೆ.
ಈ ಪವಿತ್ರ ದೂರಗಾಮಿತ್ವವನ್ನು ನನಸಾಗಿಸಲು, ನುರಿತ ವಾಸ್ತುಶಿಲ್ಪಿಗಳು ಮತ್ತು ಎಂಜಿನಿಯರ್‌ಗಳ ಪರಿಣತಿಯೊಂದಿಗೆ ಒಂದು ಸಮಗ್ರ ಮಹಾಯೋಜನೆಯನ್ನು ಅಭಿವೃದ್ಧಿಪಡಿಸಲಾಗಿದೆ. ಭಕ್ತರು ಆಳವಾದ ಧ್ಯಾನ, ಅಧ್ಯಯನ ಮತ್ತು ಗುರುದೇವರ ಬೋಧನೆಗಳ ಚಿಂತನೆಯಲ್ಲಿ ಮಗ್ನರಾಗಲು ಒಂದು ಶಾಂತಿಯುತ, ಹಚ್ಚಹಸಿರಿನ, ಪ್ರಕೃತಿ ಸೌಂದರ್ಯದಿಂದ ಕೂಡಿದ ಆವರಣವನ್ನು — ಎಲ್ಲವನ್ನೂ ಪ್ರಕೃತಿ ಮಾತೆಯ ಮಡಿಲಿನಲ್ಲಿಯೇ — ನಿರ್ಮಿಸುವುದು ನಮ್ಮ ಗುರಿ.
ಈ ವರ್ಷ ಫೆಬ್ರವರಿಯಲ್ಲಿ ಅವರ ಭೇಟಿಯ ಸಂದರ್ಭದಲ್ಲಿ, ಸ್ವಾಮಿ ಚಿದಾನಂದಜಿ ಅವರು ಚೆನ್ನೈ ಆಶ್ರಮವನ್ನು ಸ್ವತಃ ಪರಿಶೀಲಿಸಿ, ಮಹಾಯೋಜನೆಯನ್ನು ಪರಾಮರ್ಶಿಸಿ, ಈ ಯೋಜನೆಗೆ ಆಶೀರ್ವದಿಸಿದರು.
ಅಡಿಪಾಯದ ಕಾಮಗಾರಿಗಳಿಗೆ ಮತ್ತು ಯೋಜನೆಯ ಪ್ರಥಮ ಹಂತಕ್ಕೆ ಒಟ್ಟು ₹65 ಕೋಟಿಗಳ ಆರ್ಥಿಕ ಅವಶ್ಯಕತೆ ಇದೆ. ಈ ದಿವ್ಯ ದೂರದೃಷ್ಟಿಯನ್ನು ಸಾಕಾರಗೊಳಿಸಲು ನಿಮ್ಮ ಬೆಂಬಲವನ್ನು ನಾವು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇವೆ.
ಉದ್ದೇಶಿಸಿ ಮಾತನಾಡಿದರು.
ತುನಿಯಲ್ಲಿ ನವ ಧ್ಯಾನ ಮಂದಿರ:
ನಮಗೆ ಈ ವಿಷಯವನ್ನು ಹಂಚಿಕೊಳ್ಳಲು ಅತೀವ ಸಂತೋಷವಾಗುತ್ತದೆ. ಯೋಗದಾ ಸತ್ಸಂಗ ಧ್ಯಾನ ಕೇಂದ್ರ — ತುನಿಯ (ಆಂಧ್ರಪ್ರದೇಶದ ಕಾಕಿನಾಡ ಜಿಲ್ಲೆಯಲ್ಲಿದೆ) ಭಕ್ತರು, ಅವಿಶ್ರಾಂತ ಸಮರ್ಪಣೆ ಮತ್ತು ಹೃತ್ಪೂರ್ವಕ ಉತ್ಸಾಹದೊಂದಿಗೆ, ಒಂದು ಸುಂದರವಾದ ನೂತನ ಧ್ಯಾನ ಮಂದಿರದ ನಿರ್ಮಾಣವನ್ನು ಪೂರ್ಣಗೊಳಿಸಿದ್ದಾರೆ. ಇದನ್ನು ಈ ವರ್ಷ ಜುಲೈ 25 ರಂದು ಉದ್ಘಾಟಿಸಲಾಯಿತು. ಈ ಪುಣ್ಯ ಕಾರ್ಯಕ್ರಮದಲ್ಲಿ 200ಕ್ಕೂ ಹೆಚ್ಚು ಭಕ್ತರು ಭಾಗವಹಿಸಿದ್ದರು.
ಯುವ ಕಾರ್ಯಕ್ರಮಗಳು ಮತ್ತು ಶಿಕ್ಷಣ
ಯುವ ಸಾಧಕ ಸಂಗಮ:
ಯೋಗದಾ ಸತ್ಸಂಗ ಸೊಸೈಟಿ ಯುವ ಸಾಧಕರಿಗಾಗಿ — ಅಂದರೆ, 23 ರಿಂದ 35 ವರ್ಷ ವಯಸ್ಸಿನ ಭಕ್ತರಿಗಾಗಿ — ತನ್ನ ಮೊದಲ ಸಾಧನಾ ಸಂಗಮವನ್ನು ಸೆಪ್ಟೆಂಬರ್ 10 ರಿಂದ 14, 2025 ರವರೆಗೆ ರಾಂಚಿ ಆಶ್ರಮದಲ್ಲಿ ಆಯೋಜಿಸಿತ್ತು. ಇದರಲ್ಲಿ 200ಕ್ಕೂ ಹೆಚ್ಚು ಸಾಧಕರು ಭಾಗವಹಿಸಿದ್ದರು. ಈ ವಿಶೇಷ ಸಮಾಗಮವು, ಯುವಜನರು ಜೀವನದಲ್ಲಿ ಸ್ಪಷ್ಟತೆ, ದೃಡತೆ ಮತ್ತು ಉದ್ದೇಶವನ್ನು ಬೆಳೆಸಿಕೊಳ್ಳಲು ಪರಮಹಂಸ ಯೋಗಾನಂದರ ಸಾರ್ವತ್ರಿಕ ಬೋಧನೆಗಳಲ್ಲಿ ಹೆಚ್ಚುಆಸಕ್ತಿ ವಹಿಸುತ್ತಿರುವುದನ್ನು ಪ್ರತಿಬಿಂಬಿಸಿತು.
ಚಿಂತನಶೀಲವಾಗಿ ವಿನ್ಯಾಸಗೊಳಿಸಿದ ಈ ಕಾರ್ಯಕ್ರಮವು ಮಾರ್ಗದರ್ಶಿತ ಧ್ಯಾನಗಳು, ವೈಎಸ್‌ಎಸ್ ಪಾಠಗಳ ಸಮೂಹ ಅಧ್ಯಯನ, ಸತ್ಸಂಗಗಳು, ಕಾರ್ಯಾಗಾರಗಳು, ಸೇವಾ ಅವಕಾಶಗಳು, ಮನರಂಜನೆ ಮತ್ತು ರಾತ್ರಿಯ ಆತ್ಮಾವಲೋಕನವನ್ನು ಒಳಗೊಂಡಿದ್ದು — ಪ್ರತಿ ಅಂಶವೂ ಗುರೂಜಿ ಅವರ ಬೋಧನೆಗಳಲ್ಲಿ ಬೇರೂರಿರುವ ಸಮತೋಲಿತ ಜೀವನಶೈಲಿಯನ್ನು ಪ್ರೇರೇಪಿಸಿತು. ಈ ಸಂಗಮವು ಯುವ ಭಕ್ತರಿಗೆ ಗುರೂಜಿಯವರ ಮಾರ್ಗದರ್ಶನದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಲು, ಶಾಶ್ವತ ಆಧ್ಯಾತ್ಮಿಕ ಸ್ನೇಹವನ್ನು ಬೆಳೆಸಿಕೊಳ್ಳಲು ಮತ್ತು ತಮ್ಮ ಆಂತರಿಕ ಜೀವನವನ್ನು ಬಲಪಡಿಸಿಕೊಳ್ಳಲು ಪ್ರಾಯೋಗಿಕ ಸಾಧನಗಳೊಂದಿಗೆ ಮನೆಗೆ ಮರಳಲು ಒಂದು ಸುವರ್ಣ ಅವಕಾಶವನ್ನು ಒದಗಿಸಿತು.



ರಾಂಚಿ, ನೋಯ್ಡಾ, ದ್ವಾರಾಹಟ್ ಮತ್ತು ಚೆನ್ನೈನಲ್ಲಿ ಮಕ್ಕಳಿಗಾಗಿ ಬೇಸಿಗೆ ಶಿಬಿರಗಳು:
ಈ ವರ್ಷ, ಬಾಲಕ ಮತ್ತು ಬಾಲಕಿಯರಿಗಾಗಿ ವಾರ್ಷಿಕ ಬೇಸಿಗೆ ಶಿಬಿರಗಳನ್ನು ನಮ್ಮ ರಾಂಚಿ, ನೊಯ್ಡಾ, ದ್ವಾರಾಹಟ್ ಮತ್ತು ಚೆನ್ನೈ ಆಶ್ರಮಗಳಲ್ಲಿ, ಪರಮಹಂಸ ಯೋಗಾನಂದರ ಸರಳ ಮತ್ತು ಸಮಗ್ರ ಜೀವನದ ಆದರ್ಶದಿಂದ ಪ್ರೇರಿತರಾಗಿ, ಆನಂದದಿಂದ ನಡೆಸಲಾಯಿತು. ಅನುಭವಿ ಭಕ್ತ-ಶಿಕ್ಷಕರ ಮಾರ್ಗದರ್ಶನದಲ್ಲಿ, ಮಕ್ಕಳು ಏಕಾಗ್ರತೆ, ಚಾರಿತ್ರ್ಯ ವಿಕಸನ, ಸಂಕಲ್ಪ ಶಕ್ತಿ ಮತ್ತು ಆತ್ಮಾವಲೋಕನದ ಬಗ್ಗೆ ಕಲಿಯಲು “ಹೇಗೆ ಬದುಕಬೇಕು” ತರಗತಿಗಳ ಸರಣಿಯಲ್ಲಿ ಭಾಗವಹಿಸಿದರು. ಅವರ ದೈನಂದಿನ ವೇಳಾಪಟ್ಟಿಯಲ್ಲಿ ಸಾಮೂಹಿಕ ಧ್ಯಾನಗಳು, ಶಕ್ತಿವರ್ಧಕ ವ್ಯಾಯಾಮಗಳು, ಯೋಗಾಸನಗಳು ಮತ್ತು ಚಿತ್ರಕಲೆ ಹಾಗೂ ಕರಕುಶಲಗಳಂತಹ ಸೃಜನಾತ್ಮಕ ಚಟುವಟಿಕೆಗಳು ಒಳಗೊಂಡಿದ್ದವು.
ಜಗನ್ನಾಥಪುರ, ರಾಂಚಿಯಲ್ಲಿರುವ ವೈಎಸ್‌ಎಸ್ ಶೈಕ್ಷಣಿಕ ಸಂಸ್ಥೆಗಳು:
ರಾಂಚಿಯಲ್ಲಿರುವ ವೈಎಸ್‌ಎಸ್ ಶೈಕ್ಷಣಿಕ ಸಂಸ್ಥೆಗಳ ವಿದ್ಯಾರ್ಥಿಗಳು ರಾಜ್ಯಮಟ್ಟದ ಅತ್ಯುತ್ತಮ ಶೈಕ್ಷಣಿಕ ಫಲಿತಾಂಶಗಳನ್ನು ಸಾಧಿಸಿದ್ದಾರೆ. ಈ ಸಾಧನೆಗಳು ನಮ್ಮ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಕಠಿಣ ಪರಿಶ್ರಮಕ್ಕೆ ಮಾತ್ರವಲ್ಲದೆ, ಯುವ ಮನಸ್ಸುಗಳು ಆಧ್ಯಾತ್ಮಿಕ ಮೌಲ್ಯಗಳಲ್ಲಿ ಬೇರೂರಿ, ಶ್ರೇಷ್ಠತೆಗಾಗಿ ಶ್ರಮಿಸಲು ಪ್ರೇರೇಪಿಸುವ ಗುರುದೇವರ ‘ಹೇಗೆ ಬದುಕಬೇಕುʼ ತತ್ತ್ವಗಳ ಉತ್ತೇಜಕ ಪ್ರಭಾವಕ್ಕೂ ಸಾಕ್ಷಿಯಾಗಿ ನಿಂತಿವೆ.
ಆನ್‌ಲೈನ್ ಮತ್ತು ಡಿಜಿಟಲ್ ವ್ಯಾಪ್ತಿ
ವೈಎಸ್‌ಎಸ್ ಜಾಲತಾಣ ಈಗ ಬೆಂಗಾಲಿ ಮತ್ತು ಕನ್ನಡದಲ್ಲಿ ಲಭ್ಯವಿದೆ:
ಆನ್‌ಲೈನ್ ಧ್ಯಾನ ಕೇಂದ್ರದ ವಿಸ್ತೃತ ಸೇವೆಗಳು:
ಭಾರತದಾದ್ಯಂತ ಭಕ್ತರಿಗೆ ಉತ್ತಮ ಸೇವೆ ಸಲ್ಲಿಸುವ ಸಲುವಾಗಿ, ಆನ್‌ಲೈನ್ ಧ್ಯಾನ ಕೇಂದ್ರವು ಇಂಗ್ಲಿಷ್, ಹಿಂದಿ, ಬಂಗಾಳಿ, ಕನ್ನಡ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಈಗಾಗಲೇ ಇರುವ ಧ್ಯಾನಗಳ ಜೊತೆಗೆ ಮಲಯಾಳಂನಲ್ಲಿ ಭಕ್ತರ ನೇತೃತ್ವದ ಧ್ಯಾನಗಳನ್ನು ಪರಿಚಯಿಸಿದೆ. ಹೆಚ್ಚುವರಿಯಾಗಿ, ಶುಕ್ರವಾರಗಳಲ್ಲಿ ನಡೆಯುತ್ತಿರುವ ಮೂಲ ಪಾಠಗಳ ಅಧ್ಯಯನ ಗುಂಪಿನ ಜೊತೆಗೆ, ಪೂರಕ ಪಾಠಗಳ ಕುರಿತಾದ ಹೊಸ ಪಾಠ ಅಧ್ಯಯನ ಗುಂಪನ್ನು ಈಗ ಪ್ರತಿ ಸೋಮವಾರ ಸಂಜೆ ನೀಡಲಾಗುತ್ತಿದೆ.
ಈ ಉಪಕ್ರಮಗಳು ವೈಎಸ್‌ಎಸ್ ಧ್ಯಾನ ಕೇಂದ್ರದಿಂದ ದೂರವಿರುವ ಅನೇಕ ಭಕ್ತರ ಮನೆಗಳಿಗೆ ಗುರುದೇವರ ಬೋಧನೆಗಳನ್ನು ತಲುಪಿಸಲು ಸಹಾಯ ಮಾಡುತ್ತಿವೆ — ಅವರಿಗೆ ಸಾಮೂಹಿಕ ಧ್ಯಾನ ಮತ್ತು ಆಧ್ಯಾತ್ಮಿಕ ಅಧ್ಯಯನದ ಆಶೀರ್ವಾದವನ್ನು ಒದಗಿಸುತ್ತಿವೆ.
ಹೊಸ ಪ್ರಕಟಣೆಗಳು ಮತ್ತು ಅನುವಾದಗಳು




- ವೈಎಸ್ಎಸ್ ಪ್ರಕಟಣೆಗಳ (ಮುದ್ರಿತ ಆವೃತ್ತಿ) ಹದಿನಾರು ಅವತರಣಿಕೆಗಳನ್ನು ವಿವಿಧ ಭಾರತೀಯ ಭಾಷೆಗಳಲ್ಲಿ ಬಿಡುಗಡೆ ಮಾಡಲಾಯಿತು.
- ಯೋಗಿಯ ಆತ್ಮಕಥೆಯ ಬಂಗಾಳಿ, ನೇಪಾಳಿ ಮತ್ತು ಒಡಿಯಾ ಭಾಷೆಗಳ ಅನುವಾದಗಳನ್ನೂ ಸೇರಿ ಏಳು ಹೊಸ ಇ-ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು.
- ವೈಎಸ್ಎಸ್ ಸಂಸ್ಥೆಯು ನೇಪಾಳಿ ಮತ್ತು ಮಲಯಾಳಂ ಭಾಷೆಗಳಲ್ಲಿ ಯೋಗಿಯ ಆತ್ಮಕಥೆ ಕೃತಿಯ ಎರಡು ಹೊಸ ದ್ವನಿ ಪುಸ್ತಕಗಳನ್ನು ಸಹ ಬಿಡುಗಡೆ ಮಾಡಿದೆ.
ದತ್ತಿ ಮತ್ತು ಮಾನವೀಯ ಚಟುವಟಿಕೆಗಳು
ಉತ್ತರಾಖಂಡದಲ್ಲಿ ಪರಿಹಾರ ಕಾರ್ಯ:
ಉತ್ತರಾಖಂಡದಲ್ಲಿ ಸಂಭವಿಸಿದ ಮೇಘಸ್ಫೋಟಗಳು, ಪ್ರವಾಹಗಳು ಮತ್ತು ಭೂಕುಸಿತಗಳಿಗೆ ಪ್ರತಿಸ್ಪಂದಿಸಿ, ಭಾರತದ ಯೋಗದಾ ಸತ್ಸಂಗ ಸೊಸೈಟಿಯು ರಾಜ್ಯ ಸರ್ಕಾರಕ್ಕೆ ಆರ್ಥಿಕ ನೆರವು ನೀಡಿತು. ಸೆಪ್ಟೆಂಬರ್‌ನಲ್ಲಿ, ವೈಎಸ್‌ಎಸ್ ಸನ್ಯಾಸಿಗಳಾದ ಸ್ವಾಮಿ ಈಶ್ವರಾನಂದ ಮತ್ತು ಸ್ವಾಮಿ ಧೈರ್ಯಾನಂದ ಅವರು ಡೆಹ್ರಾಡೂನ್‌ನಲ್ಲಿ ಉತ್ತರಾಖಂಡದ ಮುಖ್ಯಮಂತ್ರಿ ಶ್ರೀ ಪುಷ್ಕರ್ ಸಿಂಗ್ ಧಾಮಿ ಅವರನ್ನು ಭೇಟಿಯಾಗಿ, ಪರಿಹಾರ ಕಾರ್ಯಾಚರಣೆಗಳಿಗೆ ಬೆಂಬಲ ನೀಡಲು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ₹25 ಲಕ್ಷದ ಚೆಕ್ ಅನ್ನು ಹಸ್ತಾಂತರಿಸಿದರು.



ವೈದ್ಯಕೀಯ ಸೇವಾ ಉಪಕ್ರಮಗಳು:
ವೈಎಸ್‌ಎಸ್ ಚೆನ್ನೈ ಆಶ್ರಮದಿಂದ ಕೇವಲ 1.5 ಕಿ.ಮೀ ದೂರದಲ್ಲಿ ಒಂದು ಧರ್ಮಾರ್ಥ ಚಿಕಿತ್ಸಾಲಯವನ್ನು ಈ ವರ್ಷ ಜೂನ್‌ನಲ್ಲಿ ಉದ್ಘಾಟಿಸಲಾಯಿತು. ವಾರದಲ್ಲಿ ಐದು ದಿನಗಳು ಕಾರ್ಯ ನಿರ್ವಹಿಸುವ ಇದು, ಉಚಿತ ಸಮಾಲೋಚನೆ ಮತ್ತು ಔಷಧಿಗಳನ್ನು ನೀಡುತ್ತದೆ. ಈಗಾಗಲೇ 1,000ಕ್ಕೂ ಹೆಚ್ಚು ರೋಗಿಗಳಿಗೆ ವೈದ್ಯಕೀಯ ಆರೈಕೆಯನ್ನು ಒದಗಿಸಿದೆ.
ವೈಎಸ್‌ಎಸ್ ದ್ವಾರಾಹಟ್ ಆಶ್ರಮವು ಮೂರು ವೈದ್ಯಕೀಯ ಶಿಬಿರಗಳನ್ನು ಆಯೋಜಿಸಿ, ಹಿಂದುಳಿದ ಸಮುದಾಯಗಳಿಗೆ ಬಹು ಅಗತ್ಯವಿರುವ ಆರೋಗ್ಯ ಸೇವೆಯನ್ನು ಒದಗಿಸಿದೆ. ಈ ಶಿಬಿರಗಳಿಂದ 2,000ಕ್ಕೂ ಹೆಚ್ಚು ಜನರು ಪ್ರಯೋಜನ ಪಡೆದಿದ್ದಾರೆ.
ವಾರ್ಷಿಕ ವಿದ್ಯಾರ್ಥಿವೇತನಗಳು:
ವೈಎಸ್‌ಎಸ್ ದುರ್ಬಲ ಹಿನ್ನೆಲೆಯುಳ್ಳ ಅರ್ಹ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನಗಳನ್ನು ನೀಡುವ ಮೂಲಕ ಸೇವೆ ಸಲ್ಲಿಸುವುದನ್ನು ಮುಂದುವರೆಸಿದೆ. ಕಳೆದ ವರ್ಷ, ₹75 ಲಕ್ಷ ಮೌಲ್ಯದ ವಿದ್ಯಾರ್ಥಿವೇತನಗಳನ್ನು ವಿತರಿಸಲಾಯಿತು.
ಸಂಪೂರ್ಣ ಮನವಿಯನ್ನು ಓದಲು (ಇಂಗ್ಲೀಷ್ ನಲ್ಲಿ) ಈ ಕೆಳಗಿನ ಗುಂಡಿಯನ್ನು ಒತ್ತಿ.
ನಿಮ್ಮ ಬೆಂಬಲಕ್ಕೆ ನಮ್ಮ ಆಳವಾದ ಕೃತಜ್ಞತೆಗಳು
ಗುರುದೇವರ ಪವಿತ್ರ ಕಾರ್ಯವು ಬೆಳೆಯುತ್ತಾ ಹೋದಂತೆ, ಸತ್ಯ ಮತ್ತು ಆಂತರಿಕ ಶಾಂತಿಯನ್ನು ಅರಸುವ ಪ್ರಾಮಾಣಿಕ ಸಾಧಕರಿಗೆ ಸೇವೆ ಸಲ್ಲಿಸಲು ನಮ್ಮ ಮುಂದೆ ಹೊಸ ಅವಕಾಶಗಳು ತೆರೆದುಕೊಳ್ಳುತ್ತಿವೆ. ಈ ದಿವ್ಯ ಕಾರ್ಯವು ನಿಮ್ಮಂತಹ ಭಕ್ತರ ಅಚಲ ಪ್ರೀತಿ ಮತ್ತು ಉದಾರ ಬೆಂಬಲದ ಮೂಲಕ — ದೇವರ ಪ್ರೀತಿ ಮತ್ತು ಅರಿವಿಗಾಗಿ ಹಂಬಲಿಸುತ್ತಿರುವ ಅಸಂಖ್ಯಾತ ಆತ್ಮಗಳಿಗೆ ಗುರುದೇವರ ಕ್ರಿಯಾ ಯೋಗದ ಆತ್ಮೋದ್ಧಾರಕ ಸಂದೇಶವನ್ನು ತಲುಪಿಸಲು ಯಾರು ನೆರವಾಗುವರೋ ಅಂತಹವರ ಮೂಲಕ ಈ ಕಾರ್ಯವು ಜೀವಂತವಾಗಿದೆ.
ಈ ಪವಿತ್ರ ಕಾರ್ಯದಲ್ಲಿ ನಮ್ಮೊಂದಿಗೆ ಸೇರಿಕೊಳ್ಳಲು ನಾವು ನಿಮ್ಮನ್ನು ಹೃತ್ಪೂರ್ವಕವಾಗಿ ಆಹ್ವಾನಿಸುತ್ತೇವೆ. ನಿಮ್ಮ ಕಾಣಿಕೆ — donateyss.org ನಲ್ಲಿ ಆನ್‌ಲೈನ್ ದಾನದ ಮೂಲಕವಿರಲಿ ಅಥವಾ ನಿಮ್ಮ ಹತ್ತಿರದ ವೈಎಸ್‌ಎಸ್ ಆಶ್ರಮ, ಕೇಂದ್ರ ಅಥವಾ ಮಂಡಳಿಗೆ ಭೇಟಿ ನೀಡುವ ಮೂಲಕವಿರಲಿ — ಅಸಂಖ್ಯಾತ ಆತ್ಮಗಳಿಗೆ ದಿವ್ಯ ಪ್ರೇರಣೆ, ಭರವಸೆ ಮತ್ತು ಸಮಾಧಾನವನ್ನು ತರಲು ನಮಗೆ ಸಹಾಯ ಮಾಡುತ್ತದೆ.
ಈ ಪವಿತ್ರ ಕಾರ್ಯದ ಅಭಿವೃದ್ಧಿಗಾಗಿ ನಿಮ್ಮ ಪ್ರಾರ್ಥನೆಗಳು, ಮತ್ತು ಸಾಮೂಹಿಕ ಧ್ಯಾನಗಳಲ್ಲಿ, ಸೇವೆಯಲ್ಲಿ ಹಾಗೂ ಗುರುದೇವರ ಬೋಧನೆಗಳ ದಿನನಿತ್ಯದ ಆಚರಣೆಯಲ್ಲಿ ನಿಮ್ಮ ಉತ್ಸಾಹಭರಿತ ಭಾಗವಹಿಸುವಿಕೆಯು ನಮಗೆ ಹಾಗೂ ಭಗವಂತ ಮತ್ತು ಗುರುಗಳಿಗೆ ಅತ್ಯಂತ ಪ್ರೀತಿಪಾತ್ರವಾಗಿವೆ. ಬೆಂಬಲದ ಪ್ರತಿಯೊಂದು ಅಭಿವ್ಯಕ್ತಿ, ಅದು ಯಾವುದೇ ರೂಪದಲ್ಲಿದ್ದರೂ, ಜಗತ್ತಿನಲ್ಲಿ ನಮ್ಮ ಪ್ರೀತಿಯ ಗುರುಗಳ ಪ್ರೀತಿ ಮತ್ತು ಆನಂದವನ್ನು ಹರಡಲು ಒಂದು ಪವಿತ್ರ ವಾಹಿನಿಯಾಗಿ ಪರಿಣಮಿಸುತ್ತದೆ.


















