ಪ್ರಾರ್ಥನಾ ಮಂಡಳಿಗೆ ಬಂದ ಪತ್ರಗಳಿಂದ ಆಯ್ದ ಭಾಗಗಳು
"ನಿಮ್ಮ ಪ್ರೀತಿಯ ಪ್ರಾರ್ಥನೆಗಳು ಪವಾಡ ಸದೃಶವಾಗಿ ಸಹಾಯ ಮಾಡಿವೆ… ನನ್ನ ಅರೋಗ್ಯ ತ್ವರಿತವಾಗಿ ಸುಧಾರಿಸತೊಡಗಿತು ಮತ್ತು ಭಗವಂತನ ಪ್ರೀತಿಯ ಗುಣಾಕಾರೀ ಉಪಸ್ಥಿತಿಯು ನನ್ನನ್ನು ಆವರಿಸಿ ಆತನೆಡೆಗಿನ ನನ್ನ ನಂಬಿಕೆಯು ಅಪರಿಮಿತವಾಗಿ ವೃದ್ಧಿಸಿತು."
— ಡಿ. ಬಿ., ಟೋಪನ್ಗ, ಕ್ಯಾಲಿಫೋರ್ನಿಯಾ
"ನಾನು ಪ್ರಾರ್ಥನಾ ಮಂಡಳಿಯಿಂದ ಎಷ್ಟು ಆಳವಾಗಿ ಕದಲಿದ್ದೇನೆ ಮತ್ತು ಎಷ್ಟು ಕೃತಜ್ಞನಾಗಿದ್ದೇನೆ ಎಂದು ಹೇಳಬಯಸುತ್ತೇನೆ. ಪ್ರತೀ ಸಂದರ್ಭದಲ್ಲೂ ನೀವು ಯಾರಿಗಾಗಿ ಪ್ರಾರ್ಥಿಸುತ್ತೀರೋ ಆ ವ್ಯಕ್ತಿಯ ಜೀವನದಲ್ಲಿ ಫಲಕಾರೀ ಬದಲಾವಣೆಗಳನ್ನು ನಾನು ಗಮನಿಸಿದ್ದೇನೆ. ಮೊದಲಿಗೆ ಇದನ್ನು ನೋಡಿ ನಾನು ಆಶ್ಚರ್ಯಚಕಿತನಾಗಿದ್ದೆ; ಈಗ ದೇವರು ಮತ್ತು ಪ್ರಾರ್ಥನೆಯಲ್ಲಿ ನನ್ನ ನಂಬಿಕೆ ಇನ್ನೂ ಗಾಢವಾಗಿದೆ. ಪ್ರಾಮಾಣಿಕವಾಗಿ ಮತ್ತು ಗಾಢವಾಗಿ ಪ್ರಾರ್ಥಿಸುವ ಪ್ರತಿಯೊಬ್ಬರಿಗೂ ದೇವರು ಸಹಾಯ ಮಾಡುತ್ತಾನೆ ಎಂದು ನನಗೆ ತಿಳಿದಿದೆ."
— ಆರ್. ಎಚ್., ಪಿಟ್ಸ್ಬರ್ಗ್, ಪೆನ್ಸಿಲ್ವೇನಿಯಾ
"ನಮ್ಮ ಸ್ಥಳೀಯ ಎಸ್ ಆರ್ ಎಫ್ ತಂಡದ ಭಕ್ತನೊಬ್ಬನ ತಂದೆ ಇತ್ತೀಚಿಗೆ ತೀವ್ರವಾಗಿ ಅಸ್ವಸ್ಥರಾಗಿದ್ದರು. ಮತ್ತು ಅವರಿಗೆ ಚಿಕಿತ್ಸೆ ನೀಡಿದ ವೈದ್ಯರಲ್ಲಿ ನಾನೂ ಒಬ್ಬ. ನಾವು ಗುಣಕಾರಿ ತಂತ್ರದ ಪ್ರಾರ್ಥನಾ ವಿಧಿಯನ್ನು ನಡೆಸಿದ ನಂತರವೇ ಅವರ ಆರೋಗ್ಯವು ಅದ್ಭುತವಾಗಿ ಸುಧಾರಿಸಿತು. ನಮ್ಮ ಸಾಂಪ್ರದಾಯಿಕ ಸಂಪನ್ಮೂಲಗಳನ್ನೂ ಮೀರಿದ ಈ ಪ್ರಾರ್ಥನಾ ವಿಧಿಯ ಉತ್ತಮ ಪರಿಣಾಮ, ಅದರ ಪ್ರಭಾವ ಮತ್ತು ಶಕ್ತಿಯನ್ನು ಗಮನಿಸಿದೆ."
— ಡಾ. ಜಿ. ಆರ್., ಸಾಂಟಾ ಫೇ, ಅರ್ಜೆಂಟೈನಾ
"ಅನೇಕ ವರ್ಷಗಳಿಂದ ನಾನು ಇತರರರಿಗಾಗಿ ಪ್ರಾರ್ಥಿಸುವ ವಿಧಿಯ ಪರಿಣಾಮಕಾರಿತ್ವವನ್ನು ಅನುಮಾನಿಸಿದೆ. ಇದು ನಿಜವಾಗಿಯೂ ಕೆಲಸ ಮಾಡುತ್ತದೆ ಎಂಬುದಕ್ಕೆ ನಾನು ಯಾವುದೇ ಪುರಾವೆಗಳನ್ನೂ ನೋಡಿರಲಿಲ್ಲ. ಆದರೆ ಈಗ ನಾನು ಅನುಭವಿಸುತ್ತಿರುವ ಆತ್ಮದ ಔನ್ನತ್ಯವು ಖಂಡಿತವಾಗಿಯೂ ನನ್ನ ಪರವಾಗಿ ಪ್ರಾರ್ಥನಾ ಮಂಡಳಿಯು ಶ್ರದ್ಧೆಯಿಂದ ಮಾಡಿದ ಪ್ರಾರ್ಥನೆಯ ಫಲವಾಗಿದೆ. ಅಲುಗಿಸಲು ಸಾಧ್ಯವೇ ಇಲ್ಲದಂತಿದ್ದ ಅಡೆತಡೆಗಳು ನಿಧಾನವಾಗಿ ಪಕ್ಕಕ್ಕೆ ಸರಿಯುತ್ತಿವೆ."
— ಬಿ. ಆರ್., ಅಮ್ಹೆರ್ಸ್ಟ್, ಮ್ಯಾಸಚುಸೆಟ್ಸ್
"ಒಂದು ವರ್ಷದ ಹಿಂದೆ ನಾನು ಲ್ಯೂಕೆಮಿಯ ಮತ್ತು ಹೆಪಾಟೈಟಿಸ್ ನಿಂದ ಗಂಭೀರವಾಗಿ ಅನಾರೋಗ್ಯಕ್ಕೆ ಒಳಗಾಗಿದ್ದ ಒಬ್ಬ ಪುಟ್ಟ ಹುಡುಗಿಗಾಗಿ ನಿಮ್ಮ ಸಹಾಯವನ್ನು ಕೇಳಿದ್ದೆ. ಈಗ ಅವಳು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾಳೆ. ಅವಳ ಶರೀರದಲ್ಲಿ ಕ್ಯಾನ್ಸರ್ ಕೋಶಗಳ ಯಾವುದೇ ಲಕ್ಷಣಗಳಿಲ್ಲ. ಈ ಅಸಾಧಾರಣ ಗುಣಕಾರೀ ಶಕ್ತಿಯು ಅಸ್ಥವ್ಯಸ್ತವಾಗಿರುವ ಈ ಜಗತ್ತಿನಲ್ಲಿ ಮನುಷ್ಯನು ಒಬ್ಬಂಟಿಯಲ್ಲ ಎಂಬುದಕ್ಕೆ ಅಮೂಲ್ಯ ನಿದರ್ಶನವಾಗಿದೆ."
— ಇ. ಏನ್., ನಾಪೊಲಿ, ಇಟಲಿ