ದಕ್ಷಿಣೇಶ್ವರವನ್ನು ತಲುಪುವುದು ಹೇಗೆ

ರೈಲಿನ ಮೂಲಕ

ಹೌರಾ ಮತ್ತು ಸಿಯಾಲ್ಢಾ ಕೊಲ್ಕತ್ತಾದ ಎರಡು ಪ್ರಮುಖ ರೈಲು ನಿಲ್ದಾಣಗಳು.

ಹೌರಾ ನಿಲ್ದಾಣವು ದೆಹಲಿ (1450 ಕಿಮೀ), ಮುಂಬೈ (1970 ಕಿಮೀ), ಚೆನ್ನೈ (1660 ಕಿಮೀ) ಇತ್ಯಾದಿ ಸೇರಿದಂತೆ ಇತರ ಪ್ರಮುಖ ನಗರಗಳಿಗೆ ಉತ್ತಮ ಸಂಪರ್ಕ ಹೊಂದಿದೆ. ದಕ್ಷಿಣೇಶ್ವರವು ಹೌರಾದಿಂದ 15-20 ಕಿಮೀ ದೂರದಲ್ಲಿದೆ. ಅತ್ಯಂತ ಅನುಕೂಲಕರವಾದ ಮಾರ್ಗವೆಂದರೆ ಹೌರಾ ನಿಲ್ದಾಣದ ಹೊರಗಿನಿಂದ ಪ್ರೀ ಪೇಯ್ಡ್ ಟ್ಯಾಕ್ಸಿಯಲ್ಲಿ, ತಲುಪಬೇಕಾದ ಸ್ಥಳ, ದಕ್ಷಿಣೇಶ್ವರದಲ್ಲಿರುವ ಶಾರದಾ ಮಠವೆಂದು ಹೇಳುವುದು (ಸುಮಾರು ರೂ 200/-) ವೈಎಸ್‌ಎಸ್ ಆಶ್ರಮವು ಶಾರದಾ ಮಠದಿಂದ ಸುಮಾರು 200 ಮೀಟರ್ ದೂರದಲ್ಲಿದೆ.

ಉತ್ತರಾಪಾರಕ್ಕೆ ಸ್ಥಳೀಯ ರೈಲಲ್ಲಿ ಬಂದು ದೋಣಿಯ ಮೂಲಕ ಹೂಗ್ಲಿ ನದಿಯನ್ನು ದಾಟುವುದು ಅಗ್ಗದ ಪರ್ಯಾಯ ಮಾರ್ಗವಾಗಿದೆ. ಆಶ್ರಮವು ಘಾಟ್‌ನಿಂದ ಸುಮಾರು 10 ನಿಮಿಷಗಳ ನಡಿಗೆಯಷ್ಟು ದೂರದಲ್ಲಿದೆ.

ಉತ್ತರ ಮತ್ತು ಈಶಾನ್ಯದ ಕೆಲವು ರೈಲುಗಳಿಗೆ ಮತ್ತು ಉಪನಗರಗಳ ಸ್ಥಳೀಯ ರೈಲುಗಳಿಗೆ ಸಿಯಾಲ್ಢಾ ಕೊನೆಯ ನಿಲ್ದಾಣವಾಗಿದೆ. ದಕ್ಷಿಣೇಶ್ವರವು ಸಿಯಾಲ್ಢಾ-ಡಂಕುನಿ ಮಾರ್ಗದಲ್ಲಿ ಸುಮಾರು 14 ಕಿ.ಮೀ. ದೂರದಲ್ಲಿದೆ. ಆಶ್ರಮವು ದಕ್ಷಿಣೇಶ್ವರ ರೈಲು ನಿಲ್ದಾಣದಿಂದ ಸುಮಾರು 1 ಕಿ.ಮೀ ದೂರದಲ್ಲಿದೆ. ಸೈಕಲ್ ರಿಕ್ಷಾಗಳು/ತ್ರಿಚಕ್ರ ವಾಹನಗಳು ಸಾಕಷ್ಟು ಸಿಗುತ್ತವೆ.

ಹತ್ತಿರದ ಮೆಟ್ರೋ ಸ್ಟೇಷನ್ ಎಂದರೆ ಶ್ಯಾಮ್‌ಬಝಾರ್.

ವಿಮಾನದ ಮೂಲಕ

ಡಮ್‌ಡಮ್‌ನಲ್ಲಿರುವ ನೇತಾಜಿ ಸುಭಾಷ್ ಚಂದ್ರ ಬೋಸ್ ವಿಮಾನ ನಿಲ್ದಾಣವು ಕೋಲ್ಕತ್ತಾವನ್ನು ಭಾರತ ಮತ್ತು ವಿದೇಶದ ಹಲವಾರು ನಗರಗಳಿಗೆ ಸಂಪರ್ಕಿಸುತ್ತದೆ. ದಕ್ಷಿಣೇಶ್ವರವು ಸುಮಾರು 15 ಕಿ.ಮೀ ದೂರದಲ್ಲಿದೆ. ಪ್ರೀ ಪೇಯ್ಡ್ ಟ್ಯಾಕ್ಸಿಗಳು ಸುಮಾರು ರೂ. 200/- ಕ್ಕೆ ಲಭ್ಯವಿರುತ್ತವೆ. ದಯವಿಟ್ಟು ದಕ್ಷಿಣೇಶ್ವರದ ಅರಿಯಾದಹದಲ್ಲಿರುವ ಶಾರದ ಮಠದ ಬಳಿ ಇರುವ ಯೋಗದಾ ಎಂದು ಕೇಳಿ.

ಇದನ್ನು ಹಂಚಿಕೊಳ್ಳಿ