ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ (ವೈಎಸ್‌ಎಸ್) ದ ಆಧ್ಯಾತ್ಮಿಕ ಮತ್ತು ಲೋಕೋಪಕಾರಿ ಕೆಲಸವನ್ನು ಬೆಂಬಲಿಸಲು ಸಹಾಯ ಮಾಡುವ ಕಾಳಜಿಯಿರುವ ಎಲ್ಲರಿಗೂ ನಾವು ಆಳವಾಗಿ ಕೃತಜ್ಞರಾಗಿರುತ್ತೇವೆ.
ಸೊಸೈಟಿಗೆ ಕೊಡುವ ದೇಣಿಗೆಗಳು, ಪರಮಹಂಸ ಯೋಗಾನಂದರ ಬೋಧನೆಗಳ ಪ್ರಸಾರವನ್ನು ಮುದ್ರಿತ ವೈಎಸ್‌ಎಸ್ ಪಾಠಗಳು, ಪುಸ್ತಕಗಳು ಮತ್ತು ಇತರ ಪ್ರಕಟಣೆಗಳು, ಆಡಿಯೊ-ವಿಡಿಯೋ ರೆಕಾರ್ಡಿಂಗ್‌ಗಳು, ಉಪನ್ಯಾಸ ಪ್ರವಾಸಗಳು, ಧ್ಯಾನ ಶಿಬಿರದ ಕಾರ್ಯಕ್ರಮಗಳು ಹಾಗೂ ವೈಯಕ್ತಿಕ ಸಮಾಲೋಚನೆಗಳಿಗೆ ನೆರವಾಗುತ್ತವೆ. ಕೊಡುಗೆಗಳು ಆಶ್ರಮದ ಸೌಲಭ್ಯಗಳ ನಿರ್ವಹಣೆಗೂ ಒದಗಿಬರುತ್ತವೆ ಮತ್ತು ಭಾರತದ ಅನೇಕ ಭಾಗಗಳಲ್ಲಿ ವೈಎಸ್‌ಎಸ್‌ನ ವಿವಿಧ ದತ್ತಿ, ಶೈಕ್ಷಣಿಕ ಮತ್ತು ವೈದ್ಯಕೀಯ ಚಟುವಟಿಕೆಗಳಲ್ಲಿ ನೆರವಿಗೆ ಬರುತ್ತವೆ.
ಆನ್‌ಲೈನ್
ದೇಣಿಗೆಗಳು ಮತ್ತು ಕೊಡುಗೆಗಳನ್ನು ಭಾರತೀಯ ಪ್ರಜೆಗಳಿಂದಲೂ ಹಾಗೂ ವಿದೇಶೀಯರಿಂದಲೂ ಆನ್‌ಲೈನ್‌ನಲ್ಲಿ ಸ್ವೀಕರಿಸಲಾಗುತ್ತದೆ.
ಮೇಲ್
ದೇಣಿಗೆಯ ಸೂಚನಾ ಪತ್ರವನ್ನು (ಅಡ್ವೈಸ್) ಡೌನ್‌ಲೋಡ್ ಮಾಡಲು ಭಾರತೀಯ ಪ್ರಜೆಗಳಿಗೆ ಇಲ್ಲಿ ಕ್ಲಿಕ್ ಮಾಡಲು ವಿನಂತಿಸಲಾಗಿದೆ; ದಯವಿಟ್ಟು ಸೂಚನಾ ಪತ್ರವನ್ನು ಭರ್ತಿ ಮಾಡಿ ಮತ್ತು ಅದನ್ನು ಕೆಳಗಿನ ವಿಳಾಸಕ್ಕೆ ಅಂಚೆ ಮೂಲಕ ಕಳುಹಿಸಿ:
ಪರಮಹಂಸ ಯೋಗಾನಂದ ಪಥ
ರಾಂಚಿ 834001, ಜಾರ್ಖಂಡ್.
ದೇಣಿಗೆಗಳನ್ನು ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ ಪರವಾಗಿ ರಾಂಚಿಯಲ್ಲಿ ಪಾವತಿಸಬಹುದಾದ ಯಾವುದೇ ಬ್ಯಾಂಕ್‌ನ ಅಕೌಂಟ್ ಪೇಯಿ ಚೆಕ್ ಮೂಲಕ ಅಥವಾ ಬ್ಯಾಂಕ್ ಡ್ರಾಫ್ಟ್ ಮೂಲಕ ನೀಡಬಹುದು.
ದೇಣಿಗೆಯ ಸೂಚನಾ ಪತ್ರವನ್ನು (ಅಡ್ವೈಸ್ ಅನ್ನು) ಡೌನ್‌ಲೋಡ್ ಮಾಡಲು ವಿದೇಶಿ ಪ್ರಜೆಗಳಿಗೆ ಇಲ್ಲಿ ಕ್ಲಿಕ್ ಮಾಡಲು ವಿನಂತಿಸಲಾಗಿದೆ; ದಯವಿಟ್ಟು ಸೂಚನಾ ಪತ್ರವನ್ನು ಭರ್ತಿ ಮಾಡಿ ಮತ್ತು ಅದನ್ನು ಕೆಳಗಿನ ವಿಳಾಸಕ್ಕೆ ಅಂಚೆ ಮೂಲಕ ಕಳುಹಿಸಿ:
21, ಯು.ಎನ್. ಮುಖರ್ಜಿ ರೋಡ್, ದಕ್ಷಿಣೇಶ್ವರ
ಕೊಲ್ಕತ್ತ 700 076, ಪಶ್ಚಿಮ ಬಂಗಾಳ, ಭಾರತ.
ದೇಣಿಗೆಗಳನ್ನು ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ ಪರವಾಗಿ ಕೊಲ್ಕತ್ತದಲ್ಲಿ ಪಾವತಿಸಬಹುದಾದ ಯಾವುದೇ ಬ್ಯಾಂಕ್‌ನ ಅಕೌಂಟ್ ಪೇಯಿ ಚೆಕ್ ಮೂಲಕ ಅಥವಾ ಬ್ಯಾಂಕ್ ಡ್ರಾಫ್ಟ್ ಮೂಲಕ ನೀಡಬಹುದು.
ಪ್ರಶ್ನೆಗಳು
ನಿಮಗೆ ಪ್ರಶ್ನೆಗಳಿದ್ದಲ್ಲಿ ನಮ್ಮನ್ನು ಸಂಪರ್ಕಿಸಿ. ಸಹಾಯ ಮಾಡಲು ನಾವು ಹರ್ಷಿಸುತ್ತೇವೆ!
ಆನ್‌ಲೈನ್ ದೇಣಿಗೆಗೆ ಸಂಬಂಧಿಸಿದಂತೆ ಪ್ರಮುಖ ಮಾಹಿತಿ:
- ನೀವು ಆನ್‌ಲೈನ್‌ನಲ್ಲಿ ದೇಣಿಗೆ ನೀಡಿದರೆ, ನಿಮಗೆ ಇಮೇಲ್ ಮೂಲಕ ರಸೀದಿ ದೊರೆಯುತ್ತದೆ. ಆದಾಯ ತೆರಿಗೆ ಕಾಯ್ದೆಯಡಿಯಲ್ಲಿ ತೆರಿಗೆಯಲ್ಲಿ ಕಡಿತವನ್ನು ಪಡೆಯಲು ಸಾಧ್ಯವಾಗುವ ಅಧಿಕೃತ ರಸೀದಿಯನ್ನು ರಾಂಚಿಯಿಂದ ಅಂಚೆ ಮೂಲಕ ಕಳುಹಿಸಲಾಗುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ.
- ಮೇಲೆ ಪಟ್ಟಿ ಮಾಡಲಾದ ದೇಣಿಗೆಗಳ ವಿಧಗಳನ್ನು ಮಾತ್ರ ನಾವು ಪರಿಶೀಲಿಸಲು ಸಾಧ್ಯ. ಇತರ ಎಲ್ಲ ವಹಿವಾಟುಗಳಿಗಾಗಿ ದಯವಿಟ್ಟು ನಮ್ಮನ್ನು ಸಂಪರ್ಕಿಸಿ.
ತುಂಬಾ ಧನ್ಯವಾದಗಳು. ನಿಮ್ಮ ಸಹಾಯದ ಅಗತ್ಯವಿದೆ, ಮತ್ತು ಅದಕ್ಕೆ ಬಹಳ ಕೃತಜ್ಞರಾಗಿರುತ್ತೇವೆ.
ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾವನ್ನು ಆದಾಯ ತೆರಿಗೆ ಕಾಯಿದೆ, 1961 ರ ನಿಬಂಧನೆಗಳ ಅಡಿಯಲ್ಲಿ ಚಾರಿಟಬಲ್ ಸೊಸೈಟಿ ಎಂದು ಗುರುತಿಸಲಾಗಿದೆ. ಸೊಸೈಟಿಗೆ (PAN: AAATY0283H) ಕೊಡುವ ದೇಣಿಗೆಗಳಿಗೆ ಆ ಕಾಯಿದೆಯನ್ವಯ ಸೆಕ್ಷನ್ 80-G ಅಡಿಯಲ್ಲಿ ಆದಾಯ ತೆರಿಗೆಯಲ್ಲಿ ಕಡಿತಮಾಡಲಾಗುತ್ತದೆ.