-
- ಮುಂಜಾನೆಯು ಒಂದು ಯೋಗದ ಅವಧಿಯಿಂದ ಆರಂಭವಾಗುತ್ತದೆ. ಅದರಲ್ಲಿ ಮಕ್ಕಳು ಸರಳ ಆಸನಗಳನ್ನು ಮಾಡುವುದು ಹೇಗೆ ಎಂಬುದನ್ನು ಕಲಿಯುತ್ತಾರೆ.
-
- ದಿನದಲ್ಲಿ “ದಿವ್ಯಗೀತೆಗಳನ್ನು ಹಾಡುವ ಪ್ರಾಥಮಿಕ ತರಗತಿ”ಯಲ್ಲಿ ಹಾರ್ಮೋನಿಯಂ ಹೇಗೆ ನುಡಿಸುವುದು, ಮತ್ತು ಯೋಗಾನಂದಜಿ ಅವರ ಕೆಲವು ದಿವ್ಯ ಗೀತೆಗಳನ್ನು ಹೇಗೆ ಹಾಡುವುದು ಎಂಬ ಕೌಶಲ್ಯಗಳನ್ನು ಹೇಳಿಕೊಡುವ ಕಾರ್ಯಾಗಾರವು ಸೇರಿದೆ.
-
- “ಉಡುಗೆಯನ್ನು ವಿನ್ಯಾಸಗೊಳಿಸುವ ಮತ್ತು ಕಸೂತಿ ಕೆಲಸ” ದಲ್ಲಿ, ಭಾಗವಹಿಸುತ್ತಿರುವವರನ್ನು ಬಟ್ಟೆಗಳ ವಿಧಗಳು, ಬಣ್ಣಗಳು, ಇತ್ಯಾದಿಗಳಿಗೆ ಪರಿಚಯಿಸಲಾಗುತ್ತದೆ ಮತ್ತು ಹಳೆಯ ಬಟ್ಟೆಗಳನ್ನು ಹೇಗೆ ಮತ್ತೆ ಉಪಯೋಗಿಸುವುದು ಎಂದು ಕಲಿಸಲಾಗುತ್ತದೆ.
-
- “ಡಿಜಿಟಲ್ ಸಾಧನಗಳನ್ನು ಉಪಯೋಗಿಸಿದಾಗ ಸಿಗುವ ಪ್ರಯೋಜನಗಳು ಮತ್ತು ತೆಗೆದುಕೊಳ್ಳಬೇಕಾದ ಎಚ್ಚರಿಕೆಗಳ” ಬಗ್ಗೆಯ ಅವಧಿಯಲ್ಲಿ ಅವುಗಳನ್ನು ಅರ್ಥಪೂರ್ಣವಾಗಿ ಬಳಸುವುದರಿಂದ ಗರಿಷ್ಠ ಪ್ರಯೋಜನವನ್ನು ಹೇಗೆ ಪಡೆದುಕೊಳ್ಳಬಹುದು ಎಂಬುದರ ಬಗ್ಗೆ ಮಕ್ಕಳು ಅರಿವನ್ನು ಪಡೆಯುತ್ತಾರೆ.
-
- “ನಿಮ್ಮನ್ನು ನೀವು ಹೇಗೆ ನೋಡಿಕೊಳ್ಳಬೇಕು” ಎಂಬ ಬಗ್ಗೆ ಒಬ್ಬ ತರಬೇತಿ ಪಡೆದ ಪರಿಣತರು ತರಗತಿಯನ್ನು ತೆಗೆದುಕೊಳ್ಳುತ್ತಿದ್ದಾರೆ.
-
- “ಛಾಯಾಗ್ರಹಣದ ಪ್ರಾಥಮಿಕಗಳು” ಬಗ್ಗೆಯ ಒಂದು ತರಗತಿಯಲ್ಲಿ ಉಪನ್ಯಾಸಕರು ಹೇಳುವುದನ್ನು ಬಾಲಕಿಯರು ಆಸಕ್ತಿಯಿಂದ ಕೇಳುತ್ತಿದ್ದಾರೆ.
-
- “ನಾನು ಪ್ರತಿಭಾವಂತೆ” ಎಂಬ ಶೀರ್ಷಿಕೆಯುಳ್ಳ ಒಂದು ಕಲಾ ತರಗತಿಯಲ್ಲಿ ಮಕ್ಕಳು ಹೇಗೆ ಮನಮೋಹಕ ಕಾಗದದ ಚೀಲಗಳನ್ನು ಮಾಡುವುದು ಎಂಬುದನ್ನು ಕಲಿಯುತ್ತಿದ್ದಾರೆ.
-
- ಶಾರೀರಿಕ ಮತ್ತು ಮಾನಸಿಕ ಸ್ವಾಸ್ಥ್ಯವನ್ನು ಹೊಂದಲು ಮಕ್ಕಳು ಟೇಕ್‌ವೊಂಡೋ ಮತ್ತು ವಿಭಿನ್ನ ಆಟಗಳಲ್ಲಿ ಭಾಗವಹಿಸುತ್ತಿದ್ದಾರೆ…