ನೀವು ಧ್ಯಾನ ಮಾಡುವುದನ್ನು ಬಿಟ್ಟು ಉಳಿದೆಲ್ಲವನ್ನೂ ಮಾಡಲು ಶಕ್ತರಾಗಿದ್ದರೂ ಸಹ, ಆಲೋಚನೆಗಳು ಮೌನವಾಗಿರುವಾಗ ಮತ್ತು ನಿಮ್ಮ ಮನಸ್ಸು ಭಗವಂತನ ಶಾಂತಿಗೆ ಶೃತಿಗೂಡಿದಾಗ ಕಂಡುಬರುವ ಆನಂದಕ್ಕೆ ಸರಿಸಮನಾದುದನ್ನು ನೀವು ಎಲ್ಲಿಯೂ ಕಾಣುವುದಿಲ್ಲ.
— ಪರಮಹಂಸ ಯೋಗಾನಂದ, ಯೋಗದಾ ಸತ್ಸಂಗ ಪಾಠಮಾಲಿಕೆ
ಧ್ಯಾನ ಮಂದಿರ, ಧ್ಯಾನದ ಸಭಾಂಗಣವು ರಾಂಚಿ ಆಶ್ರಮದಲ್ಲಿ 300 ಭಕ್ತರಿಗೆ ಅವಕಾಶ ಕಲ್ಪಿಸುತ್ತದೆ, ಇದು ಪ್ರಪಂಚದ ‘ಕಾರ್ಯನಿರತತೆ’ಯಿಂದ ಪಾರಾಗಲು ಮತ್ತು ಧ್ಯಾನದ ಶಾಂತಿಯನ್ನು ಆನಂದಿಸಲು ಬಯಸುವ, ಯೋಗದಾ ಸತ್ಸಂಗ ಭಕ್ತರಿಗೆ ಮತ್ತು ಸಂದರ್ಶಕರಿಗೆ ಆಧ್ಯಾತ್ಮಿಕ ಸ್ವರ್ಗವಾಗಿದೆ. ವೈಎಸ್ಎಸ್ ಸನ್ಯಾಸಿಗಳು ಇಲ್ಲಿ ನಿಯಮಿತವಾದ ಬೆಳಿಗ್ಗೆ ಮತ್ತು ಸಂಜೆ ಧ್ಯಾನಗಳನ್ನು ನಡೆಸುತ್ತಾರೆ. ಭಾನುವಾರದಂದು, ಸನ್ಯಾಸಿಗಳು ಪರಮಹಂಸ ಯೋಗಾನಂದರ ಬೋಧನೆಗಳ ಆಧಾರದ ಮೇಲೆ ಆಧ್ಯಾತ್ಮಿಕ ಪ್ರವಚನಗಳನ್ನು ನೀಡುತ್ತಾರೆ.
ಈ ಧ್ಯಾನ ಮಂದಿರದ ನಿರ್ಮಾಣವು 2004 ರಲ್ಲಿ ಪ್ರಾರಂಭವಾಯಿತು ಮತ್ತು 2007 ರಲ್ಲಿ ಪೂರ್ಣಗೊಂಡಿತು. ಸ್ವಾಮಿ ವಿಶ್ವಾನಂದ ಅವರು ಜನವರಿ 31, 2007 ರಂದು ಇದನ್ನು ಉದ್ಘಾಟಿಸಿದರು. ಪ್ರಸ್ತುತ ವೈಎಸ್ಎಸ್/ಎಸ್ಆರ್‌ಎಫ್‌ನ ಅಧ್ಯಕ್ಷರು ಮತ್ತು ಆಧ್ಯಾತ್ಮಿಕ ಮುಖ್ಯಸ್ಥರಾದ ಶ್ರೀ ಶ್ರೀ ಸ್ವಾಮಿ ಚಿದಾನಂದ ಗಿರಿ ಅವರು ಈ ಸ್ಮರಣೀಯ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಧ್ಯಾನ ಮಂದಿರವು ಚೌಕಾಕಾರದ ಸಭಾಂಗಣವನ್ನು ಹೊಂದಿದ್ದು, ಸುತ್ತಲೂ ಜಗುಲಿ ಇದ್ದು, ನಾಲ್ಕು ಬದಿಗಳಲ್ಲಿ ಮೆಟ್ಟಿಲುಗಳಿವೆ. ಭರತ್‌ಪುರ ಮರಳುಗಲ್ಲಿನಿಂದ ನಿರ್ಮಿಸಿದ ಈ ಸುಂದರವಾದ ರಚನೆಯು ಭವ್ಯವಾಗಿದ್ದು, ಕಲಾತ್ಮಕವಾಗಿ ಸಮತೋಲಿತವಾಗಿದೆ. ಅಲ್ಲದೇ ಬಾಹ್ಯ ಅಡಚಣೆಗಳಿಂದ ದೂರಸರಿದು ಏಕಾಂತವಾಗಿದೆ.
ಇತಿಹಾಸ
