ಲಿಚಿ ವೇದಿ – ಯೋಗದಾ ಸತ್ಸಂಗ ಶಾಖಾ ಮಠ, ರಾಂಚಿ

ಲಿಚಿ ವೇದಿ (ಲಿಚಿ ಮರವನ್ನು ಹೀಗೆ ಪ್ರೀತಿಯಿಂದ ಕರೆಯಲಾಗುತ್ತದೆ)ಯು ನೂರು ವರ್ಷಗಳಿಗಿಂತಲೂ ಹಳೆಯದು, ಮತ್ತು ಪರಮಹಂಸ ಯೋಗಾನಂದಜಿ ಅವರ ಉಪಸ್ಥಿತಿಯಿಂದ ಪವಿತ್ರೀಕರಿಸಲ್ಪಟ್ಟ ಪವಿತ್ರ ಸ್ಥಳಗಳಲ್ಲೊಂದು. ಇಲ್ಲಿ, ಈ ದೊಡ್ಡ ಲಿಚಿ ಮರದ ನೆರಳಿನ ಚಾವಣಿಯ ಕೆಳಗೆ ಕೂತು, ಪರಮಹಂಸ ಯೋಗಾನಂದಜಿ ಆಗಾಗ್ಗೆ ಶಾಲೆಯ ಹುಡುಗರಿಗೆ ಹೊರ ಆವರಣದಲ್ಲಿ ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದರು.

ಈ ಸ್ಥಳವು ಯೋಗಾನಂದಜಿಯವರೊಡನೆ ನಿಕಟ ಸಂಪರ್ಕವನ್ನು ಹೊಂದಿರುವುದರಿಂದ, ರೆಂಬೆಗಳ ಕೆಳಗೆ ಪರಮಹಂಸಜಿಯವರ ಒಂದು ದೊಡ್ಡ ಛಾಯಾಚಿತ್ರವನ್ನು ಪ್ರತಿಷ್ಠಾಪಿಸಲಾಗಿದ್ದು, ಈ ಮರವು ವೈಎಸ್‌ಎಸ್‌/ಎಸ್‌ಆರ್‌ಎಫ್‌ ಭಕ್ತಾದಿಗಳಿಗೆ ಒಂದು ಪ್ರೀತಿಪಾತ್ರವಾದ ಯಾತ್ರಾಸ್ಥಳ ಹಾಗೂ ಧ್ಯಾನದ ಸ್ಥಳವಾಗಿದೆ.

ಪ್ರತಿ ವರ್ಷ ಏಪ್ರಿಲ್‌-ಮೇ ತಿಂಗಳುಗಳಲ್ಲಿ ಮರವು ಸಿಹಿಯಾದ ಲಿಚಿ ಹಣ್ಣುಗಳನ್ನು ನೀಡುತ್ತದೆ, ಅವನ್ನು ಭಕ್ತಾದಿಗಳಿಗೆ ಪ್ರಸಾದದ ರೂಪದಲ್ಲಿ ಹಂಚಲಾಗುತ್ತದೆ.