
ಜಗದಲ್ಲಿನ ಶಾಂತಿ ಹಾಗೂ ಇತರರ ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಕ್ಲೇಷಗಳ ಉಪಶಮನಕ್ಕಾಗಿ ಪರಮಹಂಸ ಯೋಗಾನಂದರು ತಮ್ಮ ಪ್ರಾರ್ಥನೆಗಳ ಮೂಲಕ ಜನಸಮುದಾಯಕ್ಕೆ ಒಂದು ಮಹಾನ್ ಕೊಡುಗೆಯನ್ನು ನೀಡಿದ್ದಾರೆ. ಪ್ರತಿ ಮುಂಜಾನೆ ಆಳವಾದ ಧ್ಯಾನದಲ್ಲಿ ಯಾರು ಸಹಾಯವನ್ನು ಕೋರಿದ್ದಾರೋ ಅವರಿಗೆ ಭಗವಂತನ ಆಶೀರ್ವಾದಗಳನ್ನು ಕೋರಿ ಒಂದು ಸರಳವಾದ ಆದರೆ ಅತ್ಯಂತ ಪರಿಣಾಮಕಾರಿಯಾದ ತಂತ್ರದ ಮೂಲಕ ಪ್ರಾರ್ಥಿಸಿ ಅವರೆಲ್ಲರಿಗೂ ಉಪಶಮನಕಾರಿ ಶಕ್ತಿಯನ್ನು ಕಳುಹಿಸಿದ್ದಾರೆ. ದಿನ ಕಳೆದ ಹಾಗೆ, ಪ್ರಾರ್ಥನೆಯ ಮೂಲಕ ಜಗತ್ತಿಗೆ ಸೇವೆ ಸಲ್ಲಿಸಲು ಪರಮಹಂಸಜಿ ಎಲ್ಲ ಸನ್ಯಾಸಿಗಳು ಹಾಗೂ ಸನ್ಯಾಸಿನಿಯರು ಈ ದಿಶೆಯಲ್ಲಿ ತಮ್ಮೊಡನೆ ಪಾಲ್ಗೊಳ್ಳಲು ಹೇಳಿದರು. ಹೀಗೆ ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾದ ಪ್ರಾರ್ಥನೆಯ ಸಮಿತಿಯ ಉಗಮವಾಯಿತು.
ಪರಮಹಂಸ ಯೋಗಾನಂದರ ಆಧ್ಯಾತ್ಮಿಕ ಉತ್ತರಾಧಿಕಾರಿಗಳ ಮುಂದಾಳತ್ವದಲ್ಲಿ ಈ ಪ್ರಾರ್ಥನಾ ಸಮಿತಿಯು ಹಲವಾರು ವರ್ಷಗಳಿಂದ ಎಡೆಬಿಡದೆ ಈ ಕಾರ್ಯವನ್ನು ನಡೆಸಿಕೊಂಡು ಬಂದಿದೆ. ಸಮಿತಿಯು ಪ್ರತಿದಿನ ಮುಂಜಾನೆ ಹಾಗೂ ಸಾಂಜೆ ಗಾಢವಾಗಿ ಧ್ಯಾನ ಮಾಡುತ್ತಾ ಮತ್ತು ಪರಮಹಂಸ ಯೋಗಾನಂದರು ಬೋಧಿಸಿದ ಈ ಉಪಶಮನಕಾರಿ ತಂತ್ರವನ್ನು ಅಭ್ಯಾಸ ಮಾಡುತ್ತಾ ಇತರರಿಗಾಗಿ ಪ್ರಾರ್ಥಿಸುತ್ತದೆ. ದೇಹ, ಮನಸ್ಸು ಹಾಗೂ ಆತ್ಮದ ಉಪಶಮನಕ್ಕೆ ಪ್ರಾರ್ಥನಾ ಸಮಿತಿಯು ಭಗವಂತನ ಅಸೀಮ ಶಕ್ತಿಯನ್ನು ಪರಿಣಾಮಕಾರಿಯಾಗಿ ಇತರರಿಗೆ ನಿರ್ದೇಶಿಸುತ್ತದೆ. ತಮಗಾಗಿ ಪ್ರಾರ್ಥನೆ ಮಾಡಿ ಎಂದು ಸಹಾಯ ಕೋರಿ ಅದರಿಂದ ಪರಿಹಾರವನ್ನು ಪಡೆದವರಿಂದ ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾಕ್ಕೆ ಬಂದ ಅಸಂಖ್ಯಾತ ಪತ್ರಗಳು ಇದನ್ನು ರುಜುವಾತುಪಡಿಸುತ್ತದೆ.
ಭಾರತದ ಸದಸ್ಯರು ಹಾಗೂ ಎಲ್ಲೆಡೆ ಇರುವ ಸ್ನೇಹಿತರು ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾದ ಪ್ರಾರ್ಥನೆಗಳನ್ನು ಸಹಾನುಭೂತಿಯ ಹೃದಯಗಳ ಒಂದು ಆಧ್ಯಾತ್ಮಿಕ ಸಮೂಹವನ್ನು ಸೃಷ್ಟಿಸಿ ಪ್ರಾರ್ಥನಾ ಸಮೂಹದ ಉಪಶಮನಾಕರಿ ಕಾರ್ಯವನ್ನು ಬೆಳೆಸಬೇಕು ಎಂಬ ತಮ್ಮ ಇಚ್ಛೆಯನ್ನು ಪರಮಹಂಸ ಯೋಗಾನಂದರು ಆಗಾಗ್ಗೆ ವ್ಯಕ್ತಪಡಿಸುತ್ತಿದ್ದರು–ಜಾಗತಿಕ ಪ್ರಾರ್ಥನಾ ಸಮೂಹ.
ಜಾಗತಿಕ ಪ್ರಾರ್ಥನಾ ಸಮೂಹದ ಸ್ಥಾಪನೆಯಾದಗಿನಿಂದಲೂ, ಜಗದಾದ್ಯಂತ ಭಾಗಿಯಾದವರು ಮಾಡುವ ಪ್ರಾರ್ಥನೆಗಳು ಜಗತ್ತನ್ನು ಸಾಮರಸ್ಯ, ಸದ್ಭಾವನೆ ಹಾಗೂ ಶಾಂತಿಯಿಂದ ಆವರಿಸುತ್ತ, ದಿವ್ಯ ಶಕ್ತಿಯ ಒಂದು ವರ್ಧಿಸುತ್ತಿರುವ ಅಲೆಯನ್ನು ಸೃಷ್ಟಿಸಲು ಸಹಾಯ ಮಾಡುತ್ತಿವೆ.
ಈ ಉಪಶಮನಕಾರಿ ಅಲೆಯನ್ನು ನಿಮ್ಮ ಪ್ರಾರ್ಥನೆಗಳ ಚೈತನ್ಯ ಶಕ್ತಿಯಿಂದ ಶಕ್ತಿಯುತವಾಗಲು ನೀವು ಸಹಾಯ ಮಾಡುತ್ತೀರೆಂದು ನಾವು ಭಾವಿಸುತ್ತೇವೆ. ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾದ ಆಶ್ರಮಗಳು, ಕೇಂದ್ರಗಳು ಹಾಗೂ ಧ್ಯಾನ ಸಮೂಹಗಳಲ್ಲಿ ಪ್ರತಿ ವಾರ ಪ್ರಾರ್ಥನೆಯನ್ನು ಸಲ್ಲಿಸಲಾಗುತ್ತದೆ. ನಿಮಗೆ ಈ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಸಾಧ್ಯವಾಗದಿದ್ದಲ್ಲಿ, ಅಥವಾ ನೀವು ಇನ್ನೊಂದು ಆಧ್ಯಾತ್ಮಿಕ ಬೋಧನೆಯ ಅನುಯಾಯಿಗಳಾಗಿದ್ದಲ್ಲಿ, ಪ್ರತಿ ವಾರ ನಿಮ್ಮ ಮನೆಯಲ್ಲಿ ಒಂದು ವೈಯಕ್ತಿಕ ಪ್ರಾರ್ಥನೆಯನ್ನು ಸಲ್ಲಿಸಬಹುದು. ಈಗಾಗಲೇ ತಿಳಿಸಿರುವಂತೆ, ಯಾವುದೇ ಧಾರ್ಮಿಕ ಪಂಥಕ್ಕೆ ಸೇರಿದವರೇ ಆಗಿರಲಿ ಅಥವಾ ಯಾವುದೇ ಇತರ ಆಧ್ಯಾತ್ಮಿಕ ಬೋಧನೆಯ ಅನುಯಾಯಿಗಳೇ ಆಗಿರಲಿ, ಇಲ್ಲಿ ತಿಳಿಸಿರುವ ಪ್ರಾರ್ಥನೆ ಹಾಗೂ ಉಪಶಮನದ ಮೂಲ ತತ್ತ್ವಗಳು ಎಲ್ಲರಿಗೂ ಅನ್ವಯಿಸುತ್ತದೆ.
