
ಪ್ರೀತಿ ಪಾತ್ರರೇ,
ಪರಮಹಂಸ ಯೋಗಾನಂದರ ಆಶ್ರಮದಿಂದ ನಿಮಗೆ ಸಂತೋಷಭರಿತ ಕ್ರಿಸ್ಮಸ್ ಶುಭಾಶಯಗಳು! ಆಧ್ಯಾತ್ಮಿಕ ಭರವಸೆಯ ಈ ಪವಿತ್ರ ಸುಸಮಯವನ್ನು ನಾವು ಪ್ರವೇಶಿಸುತ್ತಿರುವಾಗ, ಅನಂತ ಕ್ರಿಸ್ತ ಪ್ರಜ್ಞೆಯಿಂದ ಹೆಚ್ಚು ಶಕ್ತಿಯುತವಾಗಿ ಸಾಂತ್ವನ ನೀಡುವ ಒಂದು ಸ್ವರ್ಗೀಯ ಶಾಂತಿಯು ಹೊರಹೊಮ್ಮುತ್ತದೆ—ಸೃಷ್ಟಿಯಲ್ಲಿನ ಭಗವಂತನ ಪ್ರೇಮಪೂರ್ಣ ಮತ್ತು ಸರ್ವವ್ಯಾಪಿ ಅರಿವು. ನಮ್ಮನ್ನು ನಾವು ಗ್ರಹಣಶೀಲರನ್ನಾಗಿ ಮಾಡಿಕೊಂಡಲ್ಲಿ, ಆ ಉನ್ನತಗೊಳಿಸುವ ಶಾಂತಿಪೂರ್ಣ ಕಂಪನಗಳು ನಮ್ಮ ನೈಜ ಆತ್ಮದ ಪ್ರಕೃತಿಯ ಒಂದು ವಾಸ್ತವಿಕ ಅನುಭವವನ್ನು ಅನುಗ್ರಹಿಸುವ ಮೂಲಕ ನಮ್ಮನ್ನು ಗಹನವಾಗಿ ಪರಿವರ್ತಿಸುವ ಶಕ್ತಿಯನ್ನು ಹೊಂದಿರುತ್ತವೆ. ಆ ಜಾಗೃತಗೊಳಿಸುವಂತಹ ಆತ್ಮದ ಅರಿವನ್ನೇ ಕ್ರಿಸ್ಮಸ್ ಸಮಯದಲ್ಲಿ ಉಡುಗೊರೆಯಾಗಿ ಪಡೆಯಲಿ ಎಂದು ನಾನು ಪ್ರಾರ್ಥಿಸುತ್ತೇನೆ—ದಿವ್ಯ ಪ್ರಿಯ ಭಗವಂತನಿಂದ ನಿತ್ಯ ಪೋಷಣೆಯಿಂದ ಸುತ್ತಲ್ಪಟ್ಟ, ಅವನಿಂದ ಬರೆಯಲ್ಪಟ್ಟ ನಿಮ್ಮ ಹೆಸರಿರುವ ಮತ್ತು ಅವನ ಸಂಪೂರ್ಣ ಪ್ರೀತಿಯಿಂದ ನಿಮ್ಮ ಕೈಗಳಲ್ಲಿ ಇರಿಸಲಾಗಿರುವಂಥದ್ದು.
“ಧ್ಯಾನವು ಕ್ರಿಸ್ತ ಪ್ರಜ್ಞೆಯ ದ್ವಾರವನ್ನು ತೆರೆಯುತ್ತದೆ. ನಾವು ದೃಢ ನಿರ್ಧಾರವುಳ್ಳವರಾಗಿರಬೇಕು ಮತ್ತು ಬಲು ಸೂಕ್ಷ್ಮವಾಗಿ ಎಚ್ಚರದಿಂದಿರಬೇಕು ಮತ್ತು ನಮ್ಮ ಪ್ರತಿಯೊಬ್ಬರ ತೊಟ್ಟಿಲಿನಲ್ಲೂ ಪವಡಿಸಿರುವ ಕ್ರಿಸ್ತ ಪ್ರಜ್ಞೆಯ ಕಿಡಿಯಿಂದ ಭಗವಂತನ ಪ್ರೇಮ ಮತ್ತು ಬೆಳಕು ನಮ್ಮೊಳಗೆ ವಿಸ್ತರಿಸಲು ಬಿಡಬೇಕು,” ಎಂದು ಪರಮಹಂಸಜಿ ಹೇಳಿದ್ದಾರೆ. ಭಗವಂತನ ಮೇಲಿನ ಸಂಪೂರ್ಣ ನಿಷ್ಠೆಯಿಂದ, ತನ್ನ ಬಾಹ್ಯ ಕಾರ್ಯಾಚರಣೆಯ ಅನೇಕ ಬೇಡಿಕೆಗಳನ್ನು ಬದಿಗಿಟ್ಟು, ಭಗವಂತನೊಂದಿಗೆ ಆಳವಾದ ಧ್ಯಾನದ ಸಂಸರ್ಗದಲ್ಲಿ ತನ್ನನ್ನು ತಾನು ಸಂಪೂರ್ಣವಾಗಿ ತೊಡಗಿಸಿಕೊಳ್ಳಲು ಯೇಸುವು ಅವಕಾಶಗಳನ್ನು ಸೃಷ್ಟಿಸಿಕೊಳ್ಳುತ್ತಾನೆ. ಸೃಷ್ಟಿಯ ನಾಟಕದಲ್ಲಿ ನಮ್ಮ ಹೊರಗಿನ ಪಾತ್ರವೇನೇ ಇರಲಿ, ನಾವು ಕೂಡ ಆಂತರ್ಯದಲ್ಲಿ ಹೋಗಲು ನಿಯತವಾಗಿ ಐಹಿಕತೆಯನ್ನು ಕಿತ್ತೊಗೆಯುವಂತಹ ಅತ್ಯಂತ ಮಹತ್ವವಾದದ್ದಕ್ಕೆ ನಮ್ಮನ್ನು ನಾವು ಬದ್ಧಗೊಳಿಸಿಕೊಳ್ಳೋಣ, ನಮ್ಮ ಗುರುಗಳು ನಮಗೆ ನೀಡಿರುವ ಧ್ಯಾನದ ಪವಿತ್ರ ವಿಧಾನಗಳ ಅಭ್ಯಾಸದಿಂದ ಭಗವಂತನಿಗಾಗಿ ಒಂದು ಉತ್ಕಟವಾದ ಹಂಬಲವನ್ನು ನಮ್ಮೊಳಗೆ ವ್ಯಾಪನೆಗೊಳಿಸುತ್ತಾ.
ಯೇಸು ಮತ್ತು ಮಹಾವತಾರ್ ಬಾಬಾಜಿ ಅವರ ಆಣತಿಯಂತೆ ಪುರಾತನ ಕ್ರಿಯಾ ಯೋಗ ವಿಜ್ಞಾನವನ್ನು ಈ ಯುಗಕ್ಕೆ ಒಂದು ಅತ್ಯಮೂಲ್ಯ ನಿಧಿಯಂತೆ ಕಳಿಸಲಾಯಿತು. ಅದರ ತಂತ್ರಗಳ ಮತ್ತು ಬದುಕುವ ರೀತಿಯಿಂದ ಮತ್ತು ಭಗವಂತನ ಮಕ್ಕಳಾಗಿ ಭಗವಂತನಿಗೆ ನಮ್ಮ ಭಕ್ತಿಯನ್ನು ಸೂಸುವ ಮೂಲಕ, ನಾವು ಯೇಸು ಕ್ರಿಸ್ತ ಮತ್ತು ಮಹಾನ್ ಪುರುಷರ ಪ್ರವರ್ತನಗೊಳಿಸುವ ಸ್ಫೂರ್ತಿಯನ್ನು ನಮ್ಮದೇ ಶಕ್ತಿ, ಆನಂದ, ಪರಿಜ್ಞಾನ ಮತ್ತು ಪ್ರೇಮದ ಸಾಕ್ಷಾತ್ಕಾರಗಳಾಗಿ ಪರಿವರ್ತಿಸಿಕೊಳ್ಳಬಹುದು. ಹೀಗೆ ಮಾಡುವುದರಿಂದ, ಅವರ ಬದುಕಿನಲ್ಲಿ ಅಭಿವ್ಯಕ್ತಿಯಾಗಿದ್ದ ಕ್ರಿಸ್ತ ಪ್ರಜ್ಞೆಯು ಹೆಚ್ಚು ಹೆಚ್ಚಾಗಿ ನಮ್ಮಲ್ಲಿ ಉದಿಸುತ್ತದೆ.
ನಮ್ಮ ಗುರುಗಳು ಕೊಂಡಾಡಿದ ಕ್ರಿಸ್ಮಸ್‌ನ ಈ ನಿಜವಾದ ಸಂಭ್ರಮಾಚರಣೆಯು ನಮಗೆ ಎದುರಾಗುವ ಎಲ್ಲ ಸವಾಲುಗಳನ್ನು ಧೈರ್ಯದಿಂದ ಎದುರಿಸಲು ಮತ್ತು ಆಂತರಿಕವಾಗಿ ಜಯ ಸಾಧಿಸಲು ನಮಗೆ ಶಕ್ತಿಯನ್ನು ನೀಡುತ್ತದೆ. ಕ್ರಿಯಾ ಯೋಗದ ದಿವ್ಯ ಉಡುಗೊರೆಯಡಿಯಲ್ಲಿ ಆಶ್ರಯ ತೆಗೆದುಕೊಳ್ಳುವುದರಿಂದ, ಸಮಯ ಸರಿದಂತೆ ನಮಗಾಗಿ, ನಮ್ಮ ಪ್ರೀತಿಪಾತ್ರರಿಗಾಗಿ ಮತ್ತು ನಮ್ಮ ಪ್ರಪಂಚಕ್ಕಾಗಿ ದೈವಿಕ ಬೆಂಬಲದ ಪ್ರಜ್ಞೆಯನ್ನು ದೃಢವಾಗಿ ಹಿಡಿದಿಟ್ಟುಕೊಳ್ಳುವ ನಮ್ಮ ಸಾಮರ್ಥ್ಯವು ವೃದ್ಧಿಸುತ್ತದೆ; ಮತ್ತು ಕ್ರಮೇಣವಾಗಿ ನಾವು ಎಂದೂ ನಮ್ಮ ದಿವ್ಯ ದಾತನ ಸಂರಕ್ಷಣೆಯ ತೇಜೋಮಂಡಲದ ಆಚೆಗಿರಲಿಲ್ಲ ಎಂಬ ಒಂದು ಅಂತರ್ಬೋಧಿತ ಶಕ್ತಿಯ ನಿಶ್ಚಿತವಾದ ವಿಶ್ವಾಸವನ್ನು ಗಳಿಸುತ್ತೇವೆ. ನಿಮಗೆ ನನ್ನ ಪ್ರಾರ್ಥನೆಯೇನೆಂದರೆ, ನಿಮ್ಮ ಹೃದಯ ಮತ್ತು ಮನೆಯು ಈ ಕ್ರಿಸ್ಮಸ್‌ನಂದು ಮತ್ತು ಸದಾ, ಕ್ರಿಸ್ತಾನಂದದಿಂದ ತುಂಬಿರಲಿ–ಭಗವಂತ, ಯೇಸು ಕ್ರಿಸ್ತ ಮತ್ತು ಗುರುಗಳೆಲ್ಲರಿಂದ ನಿರಂತರವಾಗಿ ಹರಿಯುವ ನಿರುಪಾಧಿಕ ಪ್ರೇಮ ಮತ್ತು ನಿರಂತರ ಶಾಂತಿಯ ಉದ್ಧರಿಸುವ ಕಂಪನಗಳೊಂದಿಗೆ.
ನಿಮಗೆ ಮತ್ತು ನಿಮ್ಮ ಪ್ರೀತಿಪಾತ್ರರಿಗೆ ಒಂದು ಅಮೋಘ ಆನಂದಮಯ ಕ್ರಿಸ್ಮಸ್ ಅನ್ನು ಹಾರೈಸುತ್ತಾ,
ಸ್ವಾಮಿ ಚಿದಾನಂದ ಗಿರಿ