ವೈಎಸ್ಎಸ್/ಎಸ್ಆರ್‌ಎಫ್‌ನ ಅಧ್ಯಕ್ಷರಾದ ಶ್ರೀ ಶ್ರೀ ಸ್ವಾಮಿ ಚಿದಾನಂದ ಗಿರಿ ಅವರೊಂದಿಗೆ ನೇರಪ್ರಸಾರದ ಕಾರ್ಯಕ್ರಮ
ಗುರುವಾರ, ಜುಲೈ 1, ಬೆಳಿಗ್ಗೆ 7:00 ಗಂಟೆಗೆ (ಭಾರತೀಯ ಕಾಲಮಾನದಂತೆ)
ಗುರುವಾರ ಜುಲೈ 1, ಬೆಳಿಗ್ಗೆ 7:00 ಗಂಟೆಗೆ (ಭಾರತೀಯ ಕಾಲಮಾನದಂತೆ) ಲಾಸ್ ಏಂಜಲೀಸ್‌ನಲ್ಲಿರುವ ಎಸ್‌ಆರ್‌ಎಫ್ ಇಂಟರ್‌ನ್ಯಾಶನಲ್ ಹೆಡ್‌ಕ್ವಾರ್ಟರ್ಸ್‌ನಿಂದ ನೇರಪ್ರಸಾರ ಮಾಡಲಿರುವ ಒಂದು ಕಾರ್ಯಕ್ರಮದಲ್ಲಿ ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ/ಸೆಲ್ಫ್-ರಿಯಲೈಸೇಶನ್ ಫೆಲೋಶಿಪ್‌ನ ಅಧ್ಯಕ್ಷರು ಮತ್ತು ಆಧ್ಯಾತ್ಮಿಕ ಮುಖ್ಯಸ್ಥರಾದ ಸ್ವಾಮಿ ಚಿದಾನಂದ ಗಿರಿ ಅವರು ವಿಶೇಷ ಉಪನ್ಯಾಸವನ್ನು ನೀಡಲಿದ್ದು, ವೈಎಸ್‌ಎಸ್/ಎಸ್‌ಆರ್‌ಎಫ್ ಸ್ವಯಂ ಸೇವಕ ಶಿಷ್ಯರ ಬಳಗವನ್ನು ಉದ್ಘಾಟಿಸಲಿದ್ದಾರೆ.
ಪರಮಹಂಸ ಯೋಗಾನಂದರು ನಿಗದಿಪಡಿಸಿದ ಸಾಧನೆಯ ಮೂಲಕ ತಮ್ಮ ಜೀವನವನ್ನು ರೂಪಿಸಿಕೊಳ್ಳುವ ವೈಎಸ್‌ಎಸ್ ಮತ್ತು ಎಸ್‌ಆರ್‌ಎಫ್ ಕ್ರಿಯಾ ಯೋಗಿಗಳಿಂದ ಸ್ವಯಂ ಸೇವಕ ಶಿಷ್ಯರ ಬಳಗವನ್ನು ರಚಿಸಲಾಗಿದೆ ಮತ್ತು ಮಾನವೀಯತೆಯ ಉನ್ನತಿಗಾಗಿ ಗುರುಗಳ ಕೆಲಸವನ್ನು ಮುನ್ನಡೆಸಲು ತಮ್ಮ ಸಮಯ ಮತ್ತು ಸಂಪನ್ಮೂಲಗಳನ್ನು ಮುಕ್ತವಾಗಿ ನೀಡುತ್ತಾರೆ. ಪರಮಹಂಸ ಯೋಗಾನಂದರ ಧ್ಯೇಯವಾದ ಭಾರತದ ಪ್ರಾಚೀನ ವಿಜ್ಞಾನ ಕ್ರಿಯಾ ಯೋಗ ಮತ್ತು ಅವರ “ಬದುಕುವುದು-ಹೇಗೆ” ಬೋಧನೆಗಳನ್ನು ಪ್ರಪಂಚದಾದ್ಯಂತ ಹರಡುವುದರಲ್ಲಿ ಸ್ವಯಂ ಸೇವಕ ಶಿಷ್ಯರ ಬಳಗದ ಉದಯವು ಒಂದು ಪ್ರಮುಖ ಮೈಲಿಗಲ್ಲು.
ಈ ಉದ್ಘಾಟನಾ ಕಾರ್ಯಕ್ರಮದ ವೀಡಿಯೊ ನೇರಪ್ರಸಾರದ ನಂತರವೂ ಈ ಪುಟದಲ್ಲಿ ಲಭ್ಯವಿರುತ್ತದೆ (ಇದು ವೈಎಸ್‌ಎಸ್/ಎಸ್‌ಆರ್‌ಎಫ್ ಯುಟ್ಯೂಬ್ ಚಾನಲ್‌ನಲ್ಲಿ ಲಭ್ಯವಿರುವುದಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ).
ಸ್ವಯಂ ಸೇವಕ ಶಿಷ್ಯರ ಬಳಗದಲ್ಲಿ (ವಾಲಂಟರಿ ಲೀಗ್ ಆಫ್ ಡಿಸೈಪಲ್ಸ್) ದಾಖಲಾತಿ ಈಗ ಲಭ್ಯವಿದೆ
ಒಂದು ವಿಶೇಷ ಸ್ವಯಂ ಸೇವಕ ಶಿಷ್ಯರ ಬಳಗದ ವಾಲಂಟರಿ ಲೀಗ್ ಆಫ್ ಡಿಸಿಪಲ್ಸ್ (VLD) ವೆಬ್‌ಸೈಟ್ ಅನ್ನು ಈಗ ಪ್ರಾರಂಭಿಸಲಾಗಿದೆ.
ನೀವು ಪರಮಹಂಸ ಯೋಗಾನಂದರ ಬೋಧನೆಗಳ ಕ್ರಿಯಾಬಾನ್ ಶಿಷ್ಯರಾಗಿದ್ದರೆ, ಈ ಸಮಯದಲ್ಲಿ ಸ್ವಯಂ ಸೇವಕ ಶಿಷ್ಯರ ಬಳಗಕ್ಕೆ ಸೇರಲು, ಅರ್ಜಿ ಸಲ್ಲಿಸಲು ನಾವು ನಿಮ್ಮನ್ನು ಆಹ್ವಾನಿಸುತ್ತೇವೆ.
ದಯವಿಟ್ಟು ವಿಎಲ್‌ಡಿ ವೆಬ್‌ಸೈಟ್ (ಜಾಲತಾಣ) ಗೆ ಭೇಟಿ ನೀಡಿ ಮತ್ತು (ನಿಮ್ಮ ಡಿವೋಟಿ ಪೋರ್ಟಲ್ ಐಡಿಯೊಂದಿಗೆ) ಸೈನ್ ಇನ್ ಮಾಡಿ:
- ವಿಎಲ್‌ಡಿಯ ಉದ್ದೇಶ, ಇತಿಹಾಸ ಮತ್ತು ಚಟುವಟಿಕೆಗಳ ಕುರಿತು ಇನ್ನಷ್ಟು ತಿಳಿಯಿರಿ.
- ವೈಎಸ್‌ಎಸ್/ಎಸ್‌ಆರ್‌ಎಫ್ ಶಿಷ್ಯತ್ವದ ಹಾದಿಯಲ್ಲಿ ಸ್ಪೂರ್ತಿದಾಯಕ ಮತ್ತು ಉಪಯುಕ್ತ ಮಾರ್ಗದರ್ಶಿಯಾದ ಸಮಗ್ರ ವಿಎಲ್‌ಡಿಯ ಕೈಪಿಡಿಯನ್ನು ಓದಿ.
- ವಿಎಲ್‌ಡಿನಲ್ಲಿ ಸದಸ್ಯತ್ವಕ್ಕಾಗಿ ಅರ್ಜಿಯನ್ನು ಪೂರ್ಣಗೊಳಿಸಿ.