ಮನಸ್ಸು ಮತ್ತು ದೇಹವನ್ನು ಗುಣಪಡಿಸುವಲ್ಲಿ ದೃಢೀಕರಣದ ಶಕ್ತಿಯನ್ನು ಮುಖ್ಯವಾಹಿನಿಯು ಕಂಡುಹಿಡಿಯುವ ದಶಕಗಳ ಮೊದಲೇ, ಪರಮಹಂಸ ಯೋಗಾನಂದರು ಅಮೆರಿಕ ಸಂಸ್ಥಾನದ ಎಲ್ಲ ಶ್ರೋತೃಗಳಿಗೆ, ಪ್ರತಿ ಮನುಷ್ಯನೊಳಗೆ ಅಡಗಿರುವ ಗಮನಾರ್ಹವಾದ ಗುಣಪಡಿಸುವ ಶಕ್ತಿಯನ್ನು ನೇರವಾಗಿ ತಲುಪುವುದು ಮತ್ತು ಬಳಸಿಕೊಳ್ಳುವುದು ಹೇಗೆ ಎಂಬುದನ್ನು ಕಲಿಸುತ್ತಿದ್ದರು.
1924 ರಲ್ಲಿ ತಮ್ಮ ಪುಸ್ತಕ ಸೈಂಟಿಫಿಕ್ ಹೀಲಿಂಗ್ ಅಫರ್ಮೇಷನ್ಸ್‌ನಲ್ಲಿ ಪ್ರಕಟಿಸಲಾದ ಪರಿವರ್ತನಕಾರಿ ದೃಢೀಕರಣಗಳನ್ನು ಪರಮಹಂಸಜಿ ಅವರು ಪ್ರಥಮ ಬಾರಿಗೆ ಸಂಯೋಜಿಸಿ ನೂರು ವರ್ಷಗಳೇ ಕಳೆದಿವೆ.
ಈ ವಿಡಿಯೊದಲ್ಲಿ ವೈಎಸ್‌ಎಸ್/ಎಸ್‌ಆರ್‌ಎಫ್ ಅಧ್ಯಕ್ಷರಾದ ಶ್ರೀ ಶ್ರೀ ಸ್ವಾಮಿ ಚಿದಾನಂದ ಗಿರಿ ಅವರು ಆ ಕೃತಿಯ ಹುಟ್ಟಿನ ಬಗ್ಗೆ ಒಂದು ಕಥೆಯನ್ನು ಹೇಳುತ್ತಾರೆ, ಇದನ್ನು ಪರಮಹಂಸ ಯೋಗಾನಂದರ ಅಟೋಬಯಾಗ್ರಫಿ ಆಫ್ ಎ ಯೋಗಿಗೆ ಹಾಗೂ ಅವರ ಇತರ ಕೃತಿಗಳಿಗೆ ತಾವು 1971 ರಲ್ಲಿ ಸ್ವರ್ಗಸ್ಥರಾಗುವವರೆಗೂ ಸಂಪಾದಕರಾಗಿ ಸೇವೆ ಸಲ್ಲಿಸಿದ, ಕ್ರಿಯಾ ಯೋಗದ ಪ್ರೌಢ ಶಿಷ್ಯೆ ತಾರಾ ಮಾತಾ ಹೇಳಿದ್ದರು. ನಂತರ ಸ್ವಾಮಿ ಚಿದಾನಂದಜಿ ಅವರು ಪರಮಹಂಸಜಿಯವರ ದೃಢೀಕರಣಗಳನ್ನು ನಮ್ಮ ಜೀವನದಲ್ಲಿ ವಿವಿಧ ರೂಪಗಳಲ್ಲಿ ಅಳವಡಿಸಿಕೊಳ್ಳುವುದರಿಂದ ಆಗುವ ಅತ್ಯಂತ ಶಕ್ತಿಶಾಲಿ ಪರಿಣಾಮವನ್ನು ವಿವರಿಸಿದರು, ನಂತರ ಅದನ್ನು ಅನುಭವಿಸಲು ಒಂದು ಮಾರ್ಗದರ್ಶಿತ ಧ್ಯಾನದ ನೇತೃತ್ವವನ್ನು ವಹಿಸಿದರು.

ಸ್ವಾಮಿ ಚಿದಾನಂದಜಿಯವರ ಭಾಷಣದ ಸಂದರ್ಭವು ಎಸ್‌ಆರ್‌ಎಫ್ ಬೇ ಏರಿಯಾ ಟೆಂಪಲ್‌ನ ಸಮರ್ಪಣಾ ಸಮಾರಂಭವಾಗಿದ್ದರೂ, ಭಕ್ತಿಯ ಗಾಯನಗಳು, ದೃಢೀಕರಣಗಳು ಮತ್ತು ಪ್ರಾರ್ಥನೆಗಳ ಬಳಕೆಯ ಬಗ್ಗೆ ನಾವೆಲ್ಲರೂ ಅವರ ಸ್ಫೂರ್ತಿದಾಯಕ ಒಳನೋಟಗಳನ್ನು ಬಳಸಿಕೊಳ್ಳಬಹುದು; ಮತ್ತು ಅವರು ನಡೆಸಿಕೊಡುವ ಮಾರ್ಗದರ್ಶಿತ ಧ್ಯಾನದ ಅವಧಿಯು, ಔನ್ನತ್ಯಕ್ಕೇರಿಸುವ ಅವುಗಳ ಪ್ರಯೋಜನವನ್ನು ತಕ್ಷಣವೇ ಅನುಭವಿಸಲು ನಮಗೆ ಸಹಾಯ ಮಾಡುತ್ತದೆ.
ಮೇ 20, 2023 ರಂದು ನಡೆದ ಎಸ್‌ಆರ್‌ಎಫ್ ಬೇ ಏರಿಯಾ ಟೆಂಪಲ್‌ನ ಸಮರ್ಪಣಾ ಸಮಾರಂಭದ ಸಂಪೂರ್ಣ ವೀಡಿಯೊ ಎಸ್‌ಆರ್‌ಎಫ್ ಬ್ಲಾಗ್‌ನಲ್ಲಿ ಲಭ್ಯವಿದೆ.
ಈ ವಿಡಿಯೊದಲ್ಲಿ ಸ್ವಾಮಿ ಚಿದಾನಂದಜಿ ಅವರು ಪರಮಹಂಸ ಯೋಗಾನಂದರ ಮೂರು ಕೃತಿಗಳ ಬಗ್ಗೆ ಹೇಳುತ್ತಾರೆ, ಅವು, ಆಧ್ಯಾತ್ಮಿಕರಿಸಲ್ಪಟ್ಟ ದೃಢೀಕರಣಗಳು, ಪ್ರಾರ್ಥನೆಗಳು ಮತ್ತು ಗೀತೆಗಳನ್ನು ಒದಗಿಸುತ್ತವೆ, ಹಾಗೂ ಪರಮಹಂಸಜಿ ಅವರು ಭಗವಂತನೊಂದಿಗೆ ಆಳವಾಗಿ ಸಂಸರ್ಗ ನಡೆಸುವಾಗ ಹೊಂದಿದ್ದ ಅದೇ ಅನುಭವವನ್ನು ನೀವೂ ಕೂಡ ನಿಮ್ಮೊಳಗೆ ಜಾಗೃತಗೊಳಿಸಲು ಅವುಗಳನ್ನು ಬಳಸಿಕೊಳ್ಳಬಹುದು.ಈ ಮೂರೂ ಪುಸ್ತಕಗಳು ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾದಲ್ಲಿ ಲಭ್ಯವಿರುತ್ತವೆ:
- ವಿಸ್ಪರ್ಸ್ ಫ್ರಮ್ ಇಟರ್ನಿಟಿ
- ಸೈಂಟಿಫಿಕ್ ಹೀಲಿಂಗ್ ಅಫರ್ಮೇಷನ್ಸ್ (ವೈಜ್ಞಾನಿಕ ಉಪಶಮನಕಾರಿ ದೃಢೀಕರಣಗಳು)
- ಕಾಸ್ಮಿಕ್ ಚಾಂಟ್ಸ್ (ದಿವ್ಯ ಗೀತೆಗಳು)