-
- ವೈಎಸ್‌ಎಸ್ ರಾಂಚಿ ಆಶ್ರಮದಲ್ಲಿ ಗುರು ಪೂರ್ಣಿಮೆಯ ಆಚರಣೆಯು ಸಮೂಹ ಧ್ಯಾನದೊಂದಿಗೆ ಆರಂಭವಾಗುತ್ತದೆ. ನಂತರ ಸ್ವಾಮಿ ಶ್ರದ್ದಾನಂದರಿಂದ ಸ್ಪೂರ್ತಿದಾಯಕ ಸತ್ಸಂಗವಿರುತ್ತದೆ.
-
- ಯೋಗದಾ ಸತ್ಸಂಗ ಶಾಖಾ ಆಶ್ರಮ, ದ್ವಾರಾಹಟ್‌ನಲ್ಲಿ ಸ್ವಾಮಿ ಧೈರ್ಯಾನಂದರವರು ವಿಶೇಷವಾಗಿ ಆಯೋಜಿಸಲಾದ ಧ್ಯಾನಕ್ಕೂ ಮೊದಲು ಆರತಿಯನ್ನು ನೆರವೇರಿಸಿದರು.
-
- ಸ್ವಾಮಿ ವಾಸುದೇವಾನಂದರು, ವೈಎಸ್‌ಎಸ್ ದ್ವಾರಾಹಟ್ ಆಶ್ರಮದವರು ನಡೆಸುತ್ತಿರುವ ಶಾಲೆಯ ಬಾಲಕೃಷ್ಣಾಲಯದ ಮಕ್ಕಳು ಗುರುಪೂರ್ಣಿಮೆಯ ಅಂಗವಾಗಿ ನಡೆಸಿಕೊಟ್ಟ ವಿಶೇಷ ಕಾರ್ಯಕ್ರಮವನ್ನು ಉದ್ಘಾಟಿಸುತ್ತಿರುವುದು.
-
- ವೈಎಸ್‌ಎಸ್ ಸನ್ಯಾಸಿ ಹಾಗೂ ಸಹಾಯಕರು ಆಚರಣೆಯ ಭಾಗವಾಗಿ ನಾರಾಯಣ ಸೇವೆಯಲ್ಲಿ ಭಾಗವಹಿಸಿ ಸುಮಾರು 1400 ಭಕ್ತಾದಿಗಳಿಗೆ ಪ್ರಸಾದ ವಿತರಣೆ ಮಾಡಿದರು.
-
- ಈ ವಿಶೇಷ ದಿನದಂದು ಭಕ್ತಾದಿಗಳು ಪ್ರಭಾತ್ ಫೇರಿಯಲ್ಲಿ ಬಾಗವಹಿಸಿ ಗುರುನಾಮ ಸಂಕೀರ್ತನೆಯನ್ನು ಮಾಡುತ್ತಾ ಆಶ್ರಮದ ಆವರಣವನ್ನು ಪ್ರದಕ್ಷಣೆ ಮಾಡಿದರು.
-
- ಪಶ್ಚಿಮ ಬಂಗಾಳದ ಸಿರಾಂಪುರದ ವೈಎಸ್‌ಎಸ್ ಕೇಂದ್ರದಲ್ಲಿ ಗುರುಪೂರ್ಣಿಮೆಯ ಆಚರಣೆಯಲ್ಲಿ ವಿಶೇಷ ಧ್ಯಾನವನ್ನು ನಡೆಸಲಾಯಿತು.
-
- ವೈಎಸ್‌ಎಸ್ ಚೆನ್ನೈ ಧ್ಯಾನ ಶಿಬಿರದಲ್ಲಿ ಸ್ವಾಮಿ ಶುದ್ದಾನಂದರವರು ಗುರು ಪೂರ್ಣಿಮೆಯ ಆಚರಣೆಯ ಪ್ರಯುಕ್ತ ಯೋಗದಾ ಬೋಧನೆಗಳ ಬಗ್ಗೆ ಪ್ರವಚನ ನೀಡಿದರು.
-
- ಗುರುಪೂರ್ಣಿಮೆಯ ಆಚರಣೆಯನ್ನು ಅರಸೀಕೆರೆ, ಕರ್ನಾಟಕವೂ ಸೇರಿದಂತೆ ಭಾರತದ ಎಲ್ಲಾ ವೈಎಸ್‌ಎಸ್ ಕೇಂದ್ರಗಳಲ್ಲಿ ಆಚರಿಸಲಾಯಿತು…