ಕುಂಭಮೇಳ ಮೈದಾನದಲ್ಲಿ ವೈಎಸ್ಎಸ್ ಶಿಬಿರವನ್ನು ಸ್ಥಾಪಿಸುವ ಮೊದಲು ಸ್ವಾಮಿ ಧೈರ್ಯಾನಂದ ಅವರು ಭೂಮಿ ಪೂಜೆಯಲ್ಲಿ ಭಾಗವಹಿಸಿದರು.
ವೈಎಸ್‌ಎಸ್ ಶಿಬಿರದ ಪ್ರವೇಶ ದ್ವಾರ
ಪ್ರವೇಶ ದ್ವಾರದ ಪಕ್ಕದಲ್ಲಿರುವ ವೈಎಸ್ಎಸ್ ಪುಸ್ತಕದ ಅಂಗಡಿಯ ಮುಂಭಾಗದ ನೋಟ.
ಸುಮಾರು 300 ಭಕ್ತರಿಗೆ ಮಂಚಗಳು ಮತ್ತು ಕಂಬಳಿಗಳೊಂದಿಗೆ ವಸತಿ ನಿಲಯ ಶೈಲಿಯ ವಸತಿಯನ್ನು ಒದಗಿಸಲಾಯಿತು.
ಸ್ವಾಮಿ ಈಶ್ವರಾನಂದ ಅವರು ವೈಎಸ್ಎಸ್ ಶಿಬಿರವನ್ನು ಉದ್ಘಾಟಿಸಿದರು…
ಮತ್ತು ವೈಎಸ್ಎಸ್ ಪುಸ್ತಕದ ಅಂಗಡಿ.
ಸ್ವಾಮಿ ಈಶ್ವರಾನಂದರು ಉದ್ಘಾಟನಾ ಸತ್ಸಂಗವನ್ನು ನೀಡಿದರು.
ಸನ್ಯಾಸಿಗಳು ಮತ್ತು ಭಕ್ತರು ಸ್ವಾಮೀಜಿಯವರ ಭಾಷಣವನ್ನು ಗಮನವಿಟ್ಟು ಕೇಳಿದರು.
ರಿಸೆಪ್ಷನ್ ಡೆಸ್ಕ್ ನಲ್ಲಿ ಭಕ್ತರು. ವೈಎಸ್ಎಸ್ ಆಯೋಜಿಸಿದ್ದ 35 ದಿನಗಳ ಶಿಬಿರದಲ್ಲಿ ವಿಶ್ವದಾದ್ಯಂತದಿಂದ 2,500 ಕ್ಕೂ ಹೆಚ್ಚು ವೈಎಸ್ಎಸ್/ಎಸ್ ಆರ್ ಎಫ್ ಭಕ್ತರು ಕುಂಭ ಮೇಳದಲ್ಲಿ ಭಾಗವಹಿಸಿದ್ದರು.
ಭಕ್ತರು ಗುಂಪು ಚೈತನ್ಯದಾಯಕ ವ್ಯಾಯಾಮಗಳಲ್ಲಿ ಭಾಗವಹಿಸುತ್ತಾರೆ.
ಶಿಬಿರದುದ್ದಕ್ಕೂ ರುಚಿಕರವಾದ ಊಟವನ್ನು ನೀಡಲಾಯಿತು.
35 ದಿನಗಳ ಈ ಸಂದರ್ಭದಲ್ಲಿ ಯಾತ್ರಾರ್ಥಿಗಳಿಗೆ ಭಂಡಾರವನ್ನು ನಿಯಮಿತವಾಗಿ ನೀಡಿ ಉಪಚರಿಸಲಾಯಿತು.
ಅಗತ್ಯವಿರುವ ಯಾತ್ರಾರ್ಥಿಗಳಿಗೆ ಸಹಾಯ ಮಾಡಲು ಉಚಿತ ಅಲೋಪತಿ ಮತ್ತು ಹೋಮಿಯೋಪತಿ ಔಷಧಾಲಯವನ್ನು ನಡೆಸಲಾಯಿತು.
35 ದಿನಗಳ ಕಾರ್ಯಕ್ರಮದುದ್ದಕ್ಕೂ ಪುಸ್ತಕದಂಗಡಿ ಅನೇಕ ಸತ್ಯಾನ್ವೇಷಕರನ್ನು ಆಕರ್ಷಿಸಿತು.
ಸ್ವಯಂಸೇವಕರ ಸಂತೋಷಭರಿತ ಮುಖಗಳು.
ಭಕ್ತರೊಂದಿಗೆ ವೈಎಸ್‌ಎಸ್ ಸಂನ್ಯಾಸಿಗಳ ಸಮೂಹ ಫೋಟೋ.
ಕುಂಭ ಮೇಳದ ಸಮಯದಲ್ಲಿ ಲಕ್ಷಾಂತರ ಯಾತ್ರಾರ್ಥಿಗಳು ಸಂಗಮದಲ್ಲಿ ಪವಿತ್ರ ಸ್ನಾನ ಮಾಡುತ್ತಾರೆ.
ರಾತ್ರಿಯ ಸಮಯದಲ್ಲಿ ಕುಂಭಮೇಳ ಮೈದಾನದ ವೈಮಾನಿಕ ನೋಟ.
ಸ್ವಾಮಿ ಧೈರ್ಯಾನಂದ ಅವರು ಸಮಾರೋಪ ಸತ್ಸಂಗವನ್ನು ನೀಡಿದರು.
ಸತ್ಸಂಗ ಮುಗಿದ ಬಳಿಕ ಬ್ರಹ್ಮಚಾರಿ ಹರಿಪ್ರಿಯಾನಂದ ಅವರು ಭಕ್ತರಿಗೆ ಪ್ರಸಾದ ವಿತರಿಸಿದರು.