17ನೇ ಡಿಸೆಂಬರ್, 2010ರಂದು ನಮ್ಮ ಪ್ರಿಯ ಶ್ರೀ ದಯಾ ಮಾತಾರವರ, ಪಾರ್ಥಿವ ಶರೀರವನ್ನು ಗ್ಲೆಂಡೇಲ್‌ನ ಫಾರೆಸ್ಟ್ ಲಾನ್ ಮೆಮೋರಿಯಲ್-ಪಾರ್ಕ್‌ನಲ್ಲಿ, ಒಂದು ನೆಲಮಾಳಿಗೆಯಲ್ಲಿ ಸಮಾಧಿ ಮಾಡಲಾಯಿತು.
ನೆಲಮಾಳಿಗೆಯಲ್ಲಿ ನಡೆದ ಈ ವಿಶೇಷ ಸಂದರ್ಭದ ಸಾಂಪ್ರದಾಯಿಕ ಅನುಷ್ಠಾನದ ಒಂದು ಅಲ್ಪಾವಧಿಯ ಆದರೆ ಪವಿತ್ರ ಧಾರ್ಮಿಕ ಕ್ರಿಯೆಯಲ್ಲಿ, ವೈಎಸ್‌ಎಸ್ ಮತ್ತು ಎಸ್‌ಆರ್‌ಎಫ್‌ನ ನಿರ್ದೇಶಕರ ಮಂಡಳಿಯ ಸದಸ್ಯರು ಹಾಗೂ ಇತರ ಹಿರಿಯ ಸನ್ಯಾಸಿಗಳು ಮತ್ತು ಸನ್ಯಾಸಿನಿಯರು ಪಾಲ್ಗೊಂಡಿದ್ದರು.
ದಯಾ ಮಾತಾರವರ ಸಮಾಧಿಯ ನೆಲಮಾಳಿಗೆಯು, ನಮ್ಮ ಗುರುಗಳಾದ ಪರಮಹಂಸ ಯೋಗಾನಂದರ ಸಮಾಧಿ ಸ್ಥಳದ ಬಹಳ ಹತ್ತಿರದಲ್ಲೇ ಇದೆ. ಎಸ್‌ಆರ್‌ಎಫ್‌ನ ಸಂದರ್ಶಕರ ಡೈರಕ್ಟರಿಯ 28-29ನೇ ಪುಟಗಳಲ್ಲಿರುವ ಮಾರ್ಗಸೂಚಿ ಹಾಗೂ ನಕ್ಷೆಯನ್ನು ನೋಡಿಕೊಂಡು ಸಂದರ್ಶಕರು ಈ ಸ್ಥಳವನ್ನು ಸುಲಭವಾಗಿ ಕಂಡುಹಿಡಿಯಬಹುದು.
ಇದಕ್ಕೆ ಹೋಗುವ ಮಾರ್ಗಸೂಚಿಯು ಹೀಗಿದೆ:
ಪರಮಹಂಸ ಯೋಗಾನಂದರ ಸಮಾಧಿಗೆ ಹೋಗುವ ಹಾಗೇ ಹೋಗಿ: ಪವಿತ್ರ ಜಗತಿಯನ್ನು ಪ್ರವೇಶಿಸಿದ ಮೇಲೆ, ಕವೆನೆಂಟ್ ಕಾರಿಡಾರ್‌ನಲ್ಲಿ ಮುಂದೆ ಸಾಗಿ. ರೆವರೆನ್ಸ್ ಕಾರಿಡಾರ್‌ನ ಎರಡನೇ ಹಜಾರದಲ್ಲಿ ಬಲಕ್ಕೆ ತಿರುಗಿ. ಇದರ ಕೊನೆಯಲ್ಲಿ ಸೇಂಟ್ ಜಾರ್ಜ್‌ನ ಒಂದು ಪುತ್ಥಳಿಯಿದೆ. ಹಜಾರದ ಹಾದಿಯಲ್ಲಿ ನಡೆಯುವಾಗ ಮೊದಲು ಬಲಕ್ಕೆ ತಿರುಗಿ ನಂತರ ಎಡಕ್ಕೆ. ಮಡೋನಾ ಕಾರಿಡಾರ್‌ನಲ್ಲಿ ಮುಂದುವರೆದು ಗೋಲ್ಡನ್ ಸ್ಲಂಬರ್ ಸಾಂಕ್ಚ್ಯುಯರಿಯಿಂದ ಮುಂದೆ ಹೋದಾಗ ನಿಮಗೆ ಪರಮಹಂಸ ಯೋಗಾನಂದಜಿಯವರ ಸಮಾಧಿಯಿರುವ ನೆಲಮಾಳಿಗೆ ಸಿಗುತ್ತದೆ. ಆ ಹಜಾರದ ಕೊನೆಯವರೆಗೂ ಹೋಗಿ. ಶ್ರೀ ದಯಾ ಮಾತಾರವರ ಸಮಾಧಿಯಿರುವ ನೆಲಮಾಳಿಗೆ ನಿಮಗೆ ಎಡಕ್ಕೆ ಸಿಗುತ್ತದೆ (ಪರಮಹಂಸ ಯೋಗಾನಂದರ ಸಮಾಧಿಯಿರುವ ನೆಲಮಾಳಿಗೆಯ ಲತಾಕುಂಜವಿರುವ ಹಜಾರದ ಪಾರ್ಶ್ವದಲ್ಲಿಯೇ)-ಆಚೆಗೆ ಹೋಗುವ ದ್ವಾರಕ್ಕೆ ಸ್ವಲ್ಪ ಮುಂಚೆ. ಇದು ಕೆಳಗಿನಿಂದ ನಾಲ್ಕನೇ ನೆಲಮನೆಯಾಗಿದೆ ಹಾಗೂ ಅದನ್ನು ಗುರುತಿಸಲು ತಾಜಾ ಹೂವಿನ ಗುಚ್ಛಗಳಿವೆ.
(ದಯವಿಟ್ಟು ಗಮನಿಸಿ: ಫಾರೆಸ್ಟ್ ಲಾನ್‌ನ ಸಿಬ್ಬಂಧಿಗಳು ಇನ್ನೊಂದು ಪ್ರವೇಶ ದ್ವಾರದ ಮೂಲಕ ಭವ್ಯ ಸಮಾಧಿಯನ್ನು ಪ್ರವೇಶಿಸಲು ಭಕ್ತಾದಿಗಳಿಗೆ ಸೂಚಿಸಬಹುದು; ಹಾಗಿದ್ದಲ್ಲಿ ಅವರ ಸೂಚನೆಗಳನ್ನು ಪಾಲಿಸಿ.)
ದಯಾ ಮಾತಾಜಿಯವರ ನೆಲಮಾಳಿಗೆಯ ಎದುರಿಗೆ ಹಜಾರದ ಕೊನೆಯಲ್ಲಿರುವ ಒಂದು ಬೆಂಚಿನ ಮೇಲೆ, ಒಬ್ಬ ಅನಾಮಧೇಯ ದಾನಿಯು ಪ್ರೀತಿಯಿಂದ ಇರಿಸಿರುವ ನಮ್ಮ ಗುರುಗಳ ಒಂದು ಉಲ್ಲೇಖವಿದೆ. ಭಕ್ತಾದಿಗಳು ಇದನ್ನು ಗಮನಿಸಬಹುದು.
ಜೈ ಗುರು, ಜೈ ಮಾ!
















