ಎಸ್‌ಆರ್‌ಎಫ್‌/ವೈಎಸ್‌ಎಸ್‌ ಆಪ್‌ — ಪದೇ ಪದೇ ಕೇಳುವ ಪ್ರಶ್ನೆಗಳು (ಎಫ್‌ಎಕ್ಯೂ)

YSS-SRF-App-Responsive-Devices-July29-2022 (1)

ಎಸ್‌ಆರ್‌ಎಫ್‌/ವೈಎಸ್‌ಎಸ್‌ ಆಪ್‌ ಪ್ರತಿಯೊಬ್ಬರಿಗಾಗಿ — ಪರಮಹಂಸ ಯೋಗಾನಂದರ ಬೋಧನೆಗಳಿಗೆ ನೀವು ಹೊಚ್ಚ ಹೊಸಬರರಾಗಿರಲಿ ಅಥವಾ ಈಗಾಗಲೇ ನಿಮ್ಮನ್ನು ನೀವು ಈ ಮಹಾನ್‌ ಗುರುಗಳ ಜ್ಞಾನದಲ್ಲಿ ದಶಕಗಳಿಂದ ತಲ್ಲೀನರಾಗಿದ್ದರೂ ಸಹ. ಧ್ಯಾನ, ಕ್ರಿಯಾ ಯೋಗದ ವಿಜ್ಞಾನ, ಮತ್ತು ಒಂದು ಆಧ್ಯಾತ್ಮಿಕ ಸಮತೋಲಿತ ಬದುಕನ್ನು ಬದುಕಲು ಕ್ರಿಯಾತ್ಮಕ ಮಾರ್ಗಗಳನ್ನು ಕಲಿಯಲು ಬಯಸುವ ಯಾರಿಗಾದರೂ ಸಹ.

ವೈಎಸ್‌ಎಸ್‌ ಸರ್ವಾನ್ವಯ ಎಫ್‌ಎಕ್ಯೂಗಾಗಿ ನೀವು ನೋಡುತ್ತಿರುವಿರೇನು?

ಕೆಳಗಿನ ಎಫ್‌ಎಕ್ಯೂ ನಿರ್ದಿಷ್ಟವಾಗಿ ವೈಎಸ್‌ಎಸ್‌ ಆಪ್‌ಗೆ ಸಂಬಂಧಪಟ್ಟಿದೆ, ವೈಎಸ್‌ಎಸ್‌ ಸರ್ವಾನ್ವಯ ಎಫ್‌ಎಕ್ಯೂಗಾಗಿ ನೀವು ನೋಡುತ್ತಿದ್ದಲ್ಲಿ, ದಯವಿಟ್ಟು ಇಲ್ಲಿ ಒತ್ತಿ.

ಆಪ್‌ನ ವಿಶಿಷ್ಟ ಅಂಶಗಳ ಪಕ್ಷಿನೋಟ ಮತ್ತು ಸಹಾಯಕ ಸಾಧನಗಳು

ಎಸ್‌ಆರ್‌ಎಫ್‌/ವೈಎಸ್‌ಎಸ್‌ ಆಫ್‌ನ ವಿಶಿಷ್ಟ ಅಂಶಗಳಾವುವು?

ಎಸ್‌ಆರ್‌ಎಫ್‌/ವೈಎಸ್‌ಎಸ್‌ ಆಪ್ ವೈಎಸ್‌ಎಸ್‌ ಪಾಠಗಳ ವಿದ್ಯಾರ್ಥಿಗಳಿಗೆ ಡಿವೋಟಿ ಪೋರ್ಟಲ್‌ನಲ್ಲಿ ಅವರಿಗೆ ಸಂಬಂಧಿಸಿದ ರುಜುವಾತುಗೊಳೊಂದಿಗೆ ಲಾಗಿನ್‌ ಆಗಿ ಅವರು ಚಂದಾದಾರರಾಗಿರುವ ಭಾಷೆಯಲ್ಲಿ ಅವರ ಪಾಠಗಳನ್ನು ಓದಬಹುದು. ಎಲ್ಲ ಬಳಕೆದಾರರೂ, ಪಾಠಗಳ ವಿದ್ಯಾರ್ಥಿಯಾಗಿರಲಿ ಇಲ್ಲದಿರಲಿ, ಇತರ ಡಿಜಿಟಲ್‌ ಸಂಪನ್ಮೂಲಗಳಾದ ಆನ್‌ಲೈನ್‌ ಧ್ಯಾನಗಳು, ಮಾರ್ಗದರ್ಶಿತ ಧ್ಯಾನಗಳು, ಮತ್ತು ವೈಎಸ್‌ಎಸ್‌ ಸಮಾಚಾರಗಳು ಮತ್ತು ಬ್ಲಾಗ್‌ ಪೋಸ್ಟ್‌ಗಳನ್ನು ಓದಬಹುದು.

ಪಾಠಗಳ ಡಿಜಿಟಲ್‌ ಆವೃತ್ತಿಯನ್ನು ಒಂದು ಹೆಚ್ಚಿನ ಸಂಪನ್ಮೂಲವಾಗಿ ನೀಡಲಾಗುತ್ತಿದೆಯೇ ಹೊರತು ಮುದ್ರಿತ ಪಾಠಗಳ ಬದಲಾಗಲ್ಲ. ಮುದ್ರಿತ ಆವೃತ್ತಿಯ ಜೊತೆಗೆ ಪಾಠಗಳ ಡಿಜಿಟಲ್‌ ಆವೃತ್ತಿಯನ್ನು ಯುಕ್ತಾಯುಕ್ತ ಪರಿಜ್ಞಾನದೊಂದಿಗೆ ಅದರ ಜೊತೆಯಲ್ಲಿ ಬಳಸಿದಾಗ, ವಿದ್ಯಾರ್ಥಿಗೆ ಹಲವಾರು ಪ್ರಯೋಜನಗಳನ್ನು ನೀಡುತ್ತದೆ. ನಿಮಗೆ ಓದಲು, ಅರಗಿಸಿಕೊಳ್ಳಲು, ಮತ್ತು ವೈಎಸ್‌ಎಸ್‌ ಪಾಠಗಳಲ್ಲಿ ಅಂತರ್ನಿಹಿತವಾಗಿರುವಂಥ ಸತ್ಯಗಳು ಮತ್ತು ದಿವ್ಯ ಪ್ರಜ್ಞೆಯಿಂದ ಆಧ್ಯಾತ್ಮಿಕವಾಗಿ ಪರಿವರ್ತನೆಗೊಳ್ಳಲು ಅನುವು ಮಾಡಿಕೊಡುವಂಥ ಉತ್ತಮ ಮಾರ್ಗವನ್ನು ಕಂಡುಕೊಳ್ಳಲು ನಿಮ್ಮ ವಿವೇಚನೆಯನ್ನು ಬಳಸಿ ಎಂದು ನಾವು ನಿಮ್ಮನ್ನು ಪ್ರೋತ್ಸಾಹಿಸುತ್ತೇವೆ.

ಆಪ್‌ನ ಕೆಲವು ಮುಖ್ಯ ಅಂಶಗಳೆಂದರೆ:

  • ಪಾಠಗಳನ್ನು ನಮ್ಮ ಹೊಸ ಇರೀಡರ್‌ನಲ್ಲಿ ಓದಿ, ಇದು ಹಲವಾರು ಸುಧಾರಣೆಗಳನ್ನು ಹೊಂದಿದೆ: ಟೆಕ್ಸ್ಟ್‌-ಟು-ಸ್ಪೀಚ್‌ ಸೌಲಭ್ಯ, ಅಗಲ ಮಾಡಿ ಓದುವುದು, ವಿವಿಧ ಬಣ್ಣಗಳಿಂದ ಇಷ್ಟಪಟ್ಟ ಭಾಗವನ್ನು ಗುರುತಿಸುವುದು, ಶಬ್ದಗಳಿಂದ ಹುಡುಕುವುದು, ಫ್ಲಾಷ್‌ಕಾರ್ಡ್‌ ನಿರ್ಮಾಣ, ಮತ್ತು ಇನ್ನೂ ಹೆಚ್ಚು!
  • ನಿಮ್ಮ ನಿರ್ದಿಷ್ಟ ಅವಶ್ಯಕತೆ ಮತ್ತು ಆಸಕ್ತಿಗಳಿಗನುಗುಣವಾಗಿ ಹುಡುಕುವ ಮಾರ್ಗದರ್ಶನವನ್ನು ಪಡೆಯಲು ಪೂರಕ ಪಾಠಗಳನ್ನು ಓದಲು ವಿಷಯಾವಾರು ಓದಿ.
  • ನಮ್ಮ study.yssofindia.org ಡೆಸ್ಕ್‌ಟಾಪ್‌ ಬ್ರೌಸರ್‌ ರೀಡರ್‌ ಅನ್ನು ಉಪಯೋಗಿಸಿ, ಇದು ಸ್ವಯಂಚಾಲಿತವಾಗಿ ನಿಮ್ಮ ಓದುವ ಸ್ಥಳ, ಬುಕ್‌ಮಾರ್ಕ್‌ಗಳು, ಮತ್ತು ಮೊಬೈಲ್‌ ಆಪ್‌ನ ಇಷ್ಟಪಟ್ಟ ಭಾಗಗಳನ್ನು ಗುರುತಿಸುವಿಕೆಯೊಂದಿಗೆ ಹೊಂದಿಕೊಳ್ಳುತ್ತದೆ.
  • ವೈಎಸ್‌ಎಸ್‌ನ ಇತ್ತೀಚಿನ ಸಮಾಚಾರಗಳು ಮತ್ತು ಬ್ಲಾಗ್‌ ಪ್ರಕಟಣೆಗಳೊಂದಿಗೆ ಸಮನ್ವಯಗೊಳ್ಳಿ.
  • ಪ್ರತಿ ದಿನದ ಆನ್‌ಲೈನ್‌ ಧ್ಯಾನಗಳಲ್ಲಿ ಆಫ್‌ನ ಮೂಲಕ ನೇರವಾಗಿ ಭಾಗವಹಿಸಿ.
  • ವಿವಿಧ ವಿಷಯಗಳ ಮೇಲಿನ ಮಾರ್ಗದರ್ಶಿತ ಧ್ಯಾನಗಳನ್ನು ಅನುಭವಿಸಿ, ಈಗ ನಿಮ್ಮ ವೇಳೆಗೆ ಹೊಂದುವಂತಹ ವಿವಿಧ ಅವಧಿಗಳಲ್ಲಿ ನೀಡಲಾಗುತ್ತಿದೆ.

ಯಾವ ರೀತಿಯ ಸಾಧನಗಳನ್ನು ಬೆಂಬಲಿಸಲಾಗುತ್ತಿದೆ?

ಪ್ರಸ್ತುತದಲ್ಲಿ ಆಫ್‌ ಅನ್ನು ಆಂಡ್ರಾಯ್ಡ್‌ ಮತ್ತು ಐಓಎಸ್‌ ಪ್ಲಾಟ್‌ಫಾರಂ ಮೇಲೆ ಮಾತ್ರ ನೀಡಲಾಗುತ್ತಿದೆ, ಮತ್ತು ಪಾಠಗಳು ಡೆಸ್ಕ್‌ಟಾಪ್‌ ಬ್ರೌಸರ್‌ಗಳ ಮೇಲೂ ಲಭ್ಯವಿವೆ.

  • ಆಂಡಾಯ್ಡ್‌ ಆಪ್‌ನ ಅವಶ್ಯಕತೆ:
    • ಆಂಡ್ರಾಯ್ಡ್‌ ಆವೃತ್ತಿ 6.0 ಮತ್ತು ಮೇಲಿನದು
    • ಸಾಧನದ ಮೇಲೆ ಪ್ರತಿಷ್ಠಾಪಿಸಿದ ಗೂಗಲ್‌ ಪ್ಲೇ ಸ್ಟೋರ್‌ ಮತ್ತು ಗೂಗಲ್‌ ಪ್ಲೇ ಸೇವೆಗಳು

  • ಐಓಎಸ್‌ ಆಪ್‌ನ ಅಗತ್ಯತೆಗಳು:
    • ಐಓಎಸ್‌ ಆವೃತ್ತಿ ಞ 13.0 ಮತ್ತು ಮೇಲಿನದು
    • ಐಫೋನ್‌: ಐಫೋನ್‌ 6ಎಸ್‌ ಮತ್ತು ಇತ್ತೀಚಿನದು
    • ಐಪ್ಯಾಡ್‌: ಎಲ್ಲ ಗಾತ್ರದವು

  • ಡೆಸ್ಕ್‌ಟಾಪ್‌ ಬ್ರೌಸರ್‌ನ ಅಗತ್ಯತೆಗಳು:
    • ಎಲ್ಲ ಪ್ರಧಾನ ಬ್ರೌಸರ್‌ಗಳು: ಕ್ರೋಮ್‌, ಸಫಾರಿ, ಫೈರ್‌ಫಾಕ್ಷ್‌, ಮೈಕ್ರೋಸಾಫ್ಟ್‌ ಎಡ್ಜ್‌

ಪ್ರಸ್ತುತ ಸಮಯದಲ್ಲಿ ಈ ಕೆಳಗಿನ ಸಾಧನಗಳಿಗೆ ಬೆಂಬಲವಿಲ್ಲ:

  • ಅಮೇಜಾನ್‌ ಫೈರ್‌ ಟ್ಯಾಬ್ಲೆಟ್ಸ್‌
  • ಆಂಡ್ರಾಯ್ಡ್‌ ಇನ್ಸ್‌ಟೆಂಟ್‌ ಆಪ್ಸ್‌
  • ಗೂಗ್ಲ್‌ ಕ್ರೋಮ್‌ಬುಕ್‌ ಆಪ್ಸ್‌

ನನ್ನ ಕಂಪ್ಯೂಟರ್‌ ಅಥವಾ ವಿಂಡೋಸ್‌ ಸಾಧನದ ಮೇಲೆ ನಾನು ಪಾಠಗಳನ್ನು ಓದಬಹುದೆ?

ಓದಬಹುದು! ವಿದ್ಯಾರ್ಥಿಗಳು ತಮ್ಮ ಡಿವೋಟೀ ಪೋರ್ಟಲ್‌ ವಿವರಗಳನ್ನು ನೀಡಿ ಲಾಗಿನ್‌ ಆಗಿ study.yssofindia.org ನಲ್ಲಿ ಅವರ ಪಾಠಗಳನ್ನು ಓದಬಹುದು.

ಯಾವ ಯಾವ ಭಾಷೆಗಳನ್ನು ಬೆಂಬಲಿಸುತ್ತದೆ?

ಆಪ್‌ನ ಭಾಷೆ: ಎಸ್‌ಆರ್‌ಎಫ್‌/ವೈಎಸ್‌ಎಸ್‌ ಆಫ್‌ ಸದ್ಯಕ್ಕೆ ಇಂಗ್ಲಿಷ್‌, ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಲಭ್ಯವಿದೆ. ಯೂಸರ್‌ ಇಂಟರ್‌ಫೇಸ್‌ ಮತ್ತು ಎಲ್ಲ ಪಠ್ಯೇತರ ವಿಷಯಗಳನ್ನು ನಿಮ್ಮ ಭಾಷೆಯಲ್ಲಿ ಓದಲು ‘ಫಾರ್‌ ಮಿ’ಯಲ್ಲಿ ಇರುವ ‘ಆಪ್‌ ಲಾಂಗ್ವೇಜ್‌’ ಆಯ್ಕೆ ಮಾಡಿ. ಪಠ್ಯೇತರ ವಿಷಯಗಳಲ್ಲಿ ಹೊಸ ಪೋಸ್ಟ್‌ಗಳು, ಭಾಷೆಗೆ ಸಂಬಂಧಿಸಿದ ಆನ್‌ಲೈನ್‌ ಧ್ಯಾನದ ಸಮಯಗಳು, ಮಾರ್ಗದರ್ಶಿತ ಧ್ಯಾನಗಳು, ವಾರದ ಸತ್ಸಂಗಗಳು, ಗೀತಾ ಪ್ರವಚನಗಳು, ಸಂಗಂಗಳು ಮತ್ತು ಕಾನ್ವೋಕೇಷನ್‌ಗಳ ಸತ್ಸಂಗಗಳು ಸೇರಿವೆ.

ಪಾಠಗಳ ಭಾಷೆ: ಸದ್ಯಕ್ಕೆ ವೈಎಸ್‌ಎಸ್‌ ಪಾಠಗಳನ್ನು ಆಫ್‌ನಲ್ಲಿ ಇಂಗ್ಲಿಷ್‌, ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಲ್ಲಿ ನೀಡಲಾಗುತ್ತಿದೆ. ಯಾವುದೇ ಭಾಷೆಯಲ್ಲಿ ನೋಡಲು, ಒಬ್ಬರು ಮೊದಲು ಪಾಠಗಳ ವಿದ್ಯಾರ್ಥಿಯಾಗಿ ದಾಖಲಾಗಿರಬೇಕು (ದಯಮಾಡಿ ಹೆಚ್ಚಿನದನ್ನು ತಿಳಿಯಲು ಇಲ್ಲಿ ಒತ್ತಿ). ಆಪ್‌ನಲ್ಲಿ ‘ಫಾರ್‌ ಮಿ’ ವಿಭಾಗಕ್ಕೆ ಹೋಗಿ ಪಾಠಗಳ ಭಾಷೆ ಯನ್ನು ಆಯ್ಕೆ ಮಾಡಿಕೊಂಡು ‘ಪಾಠಗಳ ಭಾಷೆಯನ್ನು’ ಆಯ್ದುಕೊಳ್ಳಬಹುದು.

para-ornament

ಪಾಠಗಳ ಚಂದಾ, ಲಾಗಿಂಗ್‌ ಇನ್‌, ಮತ್ತು ಅತಿಥಿ ಮಾರ್ಗ

ಆಪ್‌ನಲ್ಲಿ ನಾನು ನನ್ನ ಪಾಠಗಳನ್ನು ನೋಡಲಾಗುತ್ತಿಲ್ಲ, ಏಕೆ?

  • ಲಾಗಿನ್‌ ಆಗಲು ಮತ್ತು ವಿಷಯಗಳನ್ನು ನೋಡಲು ನೀವು ಆನ್‌ಲೈನ್‌ನಲ್ಲಿ ಇದ್ದೀರ ಎಂಬುದನ್ನು ಖಚಿತ ಪಡಿಸಿಕೊಳ್ಳಿ.
  • ನೀವು ನೋಡ ಬಯಸುವ ನಿರ್ದಿಷ್ಟ ಸರಣಿಗೆ ನೀವು ದಾಖಲಾತಿ ಮಾಡಿಕೊಂಡಿದ್ದೀರಾ ಎಂಬುದನ್ನು ಖಚಿತ ಪಡಿಸಿಕೊಳ್ಳಿ. ಮೂಲ ಸರಣಿ ಮತ್ತು ಪೂರಕ ಸರಣಿ ಪ್ರತ್ಯೇಕ ದಾಖಲಾತಿಗಳಾಗಿವೆ.
  • ಆಫ್‌ ಪಾಠಗಳ ಹೊಸ ಆವೃತ್ತಿಯನ್ನು ನೋಡುವುದಕ್ಕೆ ಮಾತ್ರ ಅವಕಾಶವನ್ನು ನೀಡುತ್ತದೆ. ನೀವು ಪಾಠಗಳ ಹೊಸ ಆವೃತ್ತಿಗೆ ಚಂದಾದಾರರಾಗಿಲ್ಲದಿದ್ದಲ್ಲಿ, ದಯವಿಟ್ಟು ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಒತ್ತಿ.
  • ನೀವು ನಿಮ್ಮ ಪಾಸ್‌ವರ್ಡ್‌ ಅನ್ನು ಮರೆತಿದ್ದಲ್ಲಿ, ಲಾಗಿನ್‌ ಸ್ಕ್ರೀನ್‌ ಮೇಲೆ ಇರುವ ‘ಫರ್‌ಗಾಟ್‌ ಪಾಸ್‌ವರ್ಡ್‌?’ ಒತ್ತಿ.
  • ಇನ್ನೂ ನಿಮಗೆ ಸಮಸ್ಯೆ ಇದ್ದಲ್ಲಿ, ನಮ್ಮ ಸಹಾಯಕ ಕಕ್ಷೆಯನ್ನು ಸಂಪರ್ಕಿಸಲು ಆಪ್‌ನ ‘ಫಾರ್‌ ಮಿ’ ಪುಟದಲ್ಲಿರುವ ‘ಸಪೋರ್ಟ್‌’ ಗುಂಡಿಯನ್ನು ಉಪಯೋಗಿಸಿ. ಇದು ನಾವು ನಿಮಗೆ ಉತ್ತಮವಾಗಿ ಸಹಾಯ ಮಾಡಲು ಸಾಧ್ಯವಾಗಿಸುತ್ತದೆ. ನೀವು ಆಪ್‌ ಅನ್ನು ಇನ್ಸ್ಟಾಲ್‌ ಮಾಡಿಕೊಳ್ಳಲು ಆಗದಿದ್ದಲ್ಲಿ, ದಯಮಾಡಿ [email protected] ಇಮೇಲ್‌ ಮಾಡಿ ಮತ್ತು ನಿಮ್ಮ ಸಮಸ್ಯೆಯನ್ನು ವಿವರವಾಗಿ ತಿಳಿಸಿ. ನಿಮ್ಮ ಖಾತೆಗೆ ಸಂಭಂದಿಸಿದ ನಿಮ್ಮ ಹೆಸರು ಮತ್ತು ಇಮೇಲ್‌ ವಿಳಾಸವನ್ನು ಇದರಲ್ಲಿ ಸೇರಿಸುವುದನ್ನು ದಯವಿಟ್ಟು ಮರೆಯಬೇಡಿ.

ನಾನು ಆಪ್‌ನಲ್ಲಿ ಪಾಠಗಳನ್ನು ಯಾವಾಗ ಓದಬಹುದು?

ಒಂದು ನಿರ್ದಿಷ್ಟ ಪಾಠ ಆಪ್‌ನಲ್ಲಿ ಇಲ್ಲದೇ ಇದ್ದಲ್ಲಿ, ಅದು ಲಭ್ಯವಾಗುವ ದಿನಾಂಕವನ್ನು ಸೂಚಿಸಲಾಗುತ್ತದೆ.

ನಾನು ಇಂಗ್ಲಿಷ್‌, ಮತ್ತು ಹಿಂದಿ (ಅಥವಾ ತಮಿಳು/ತೆಲುಗು) ಪಾಠಗಳಿಗೆ ಚಂದಾದಾರನಾಗಿದ್ದೇನೆ, ಅದರೆ ನಾನು ಕೇವಲ ಇಂಗ್ಲಿಷ್‌ಪಾಠಗಳನ್ನು ನೋಡಲು ಮಾತ್ರ ಸಾಧ್ಯವಾಗುತ್ತಿದೆ. ನನ್ನ ಹಿಂದಿ, (ಅಥವಾ ತಮಿಳು/ತೆಲುಗು) ಪಾಠಗಳನ್ನು ಹೇಗೆ ನೋಡುವುದು?

ಪಾಠಗಳ ಭಾಷೆ ವಿಭಾಗವನ್ನು ನೋಡಿ.

para-ornament

ವಿಭಿನ್ನ ವೈಶಿಷ್ಟ್ಯಗಳನ್ನು ತಿಳಿದುಕೊಳ್ಳುವುದು ಮತ್ತು ತೊಂದರೆಗಳನ್ನು ಸರಿಪಡಿಸಿಕೊಳ್ಳುವುದು

ಪಾಠಗಳ ಇರೀಡರ್‌

ಬುಕ್‌ಮಾರ್ಕ್ಸ್‌ ಮತ್ತು ಹೈಲೈಟ್ಸ್‌

ಪಾಠಗಳ ಪಠ್ಯದಲ್ಲಿ 4 ವಿವಿಧ ಬಣ್ಣಗಳಲ್ಲಿ ಹೈಲೈಟ್‌ ಮಾಡಲು ಒಂದು ಅಥವಾ ಅದಕ್ಕಿಂತ ಹೆಚ್ಚಿನ ಶಬ್ದಗಳನ್ನು ಆಯ್ಕೆ ಮಾಡಿ. ಎರಡು ಶಬ್ದಕ್ಕಿಂತ ಹೆಚ್ಚಿಗೆ ಆಯ್ಕೆ ಮಾಡಿದ್ದಲ್ಲಿ, ನೀವು ಕಡೆಯದಾಗಿ ಉಪಯೋಗಿಸಿದ ಬಣ್ಣದಲ್ಲಿ ಆಯ್ಕೆಯನ್ನು ತಾನೇ ತಾನಾಗಿ ಹೈಲೈಟ್‌ ಮಾಡುತ್ತದೆ. ಇನ್‌-ರೀಡರ್‌ ಮೆನುನಲ್ಲಿ ಪ್ರಸ್ತುತ ಪಾಠದ ನೀವು ಮಾಡಿರುವ ಬುಕ್‌ಮಾರ್ಕ್ಸ್‌ ಮತ್ತು ಹೈಲೈಟ್‌ಗಳು ಪ್ರದರ್ಶಿತವಾಗುತ್ತವೆ (ಬಲಗಡೆ ಮೇಲಿರುವ ಮೆನು ಐಕಾನ್‌ ಅನ್ನು ಒತ್ತಿ). ಎಲ್ಲ ಪಾಠಗಳಿಂದ ನಿಮ್ಮ ಬುಕ್‌ಮಾರ್ಕ್ಸ್‌ ಮತ್ತು ಹೈಲೈಟ್‌ಗಳನ್ನು ನೋಡಲು, ‘ಫಾರ್‌ ಮಿ’ ವಿಭಾಕ್ಕೆ ಹೋಗಿ, ‘ಬುಕ್‌ಮಾರ್ಕ್ಸ್‌ ಅಂಡ್‌ ಹೈಲೈಟ್ಸ್‌’ ಆಯ್ಕೆ ಮಾಡಿ. ಎಲ್ಲ ಬುಕ್‌ಮಾರ್ಕ್‌ಗಳು ಮತ್ತು ಹೈಲೈಟ್‌ಗಳು ನಿಮ್ಮ ವಿವಿಧ ಸಾಧನಗಳ ಮೇಲೆ ಸಮ್ಮಿಳನವಾಗುತ್ತವೆ (ಸಿಂಕ್‌ ಆಗುತ್ತವೆ).

ಪಾಠಗಳ ಸಹಾಯಕ ವಸ್ತುವಿಷಯಗಳನ್ನು ಪಡೆಯುವುದು

ನಿರ್ದಿಷ್ಟ ಪಾಠವನ್ನು ಆಯ್ಕೆ ಮಾಡಿಕೊಂಡು ‘ಸಹಾಯಕ ವಸ್ತುವಿಷಯಗಳು’ ಬಟನ್‌ ಮೇಲೆ ಒತ್ತಿ. “ಪಕ್ಷಿನೋಟ,” “ಆತ್ಮ-ಸಾಕ್ಷಾತ್ಕಾರದ ಮೂಲಕ ಅತ್ಯುನ್ನತ ಸಾಧನೆಗಳು”, ಮತ್ತು “ಮುನ್ನುಡಿ”ಗಳಿಗೆ ಸಹಾಯಕ ವಿಷಯವಸ್ತುಗಳು ಇಲ್ಲ ಎಂಬುದನ್ನು ದಯಮಾಡಿ ಗುರುತುಮಾಡಿಕೊಳ್ಳಿ. ಪಾಠ 1ರಿಂದ ಮುಂದೆ ಸಹಾಯಕ ವಿಷಯವಸ್ತುಗಳು ಲಭ್ಯವಿವೆ.

ಪದದ ವೀಕ್ಷಣೆ (ವೈಎಸ್‌ಎಸ್‌ ಶಬ್ದಾರ್ಥ ಸಂಗ್ರಹ ಮತ್ತು ನಿಘಂಟಿನಿಂದ)

ಇರೀಡರ್‌ನಲ್ಲಿ ಒಂದು ಅಥವಾ ಅದಕ್ಕಿಂತ ಹೆಚ್ಚಿನ ಪದಗಳನ್ನು ಆಯ್ಕೆ ಮಾಡಿಕೊಂಡು ಕೆಳಭಾಗದ ಮೆನುನಲ್ಲಿರುವ ‘ಹೆಚ್ಚಿಗೆ ತಿಳಿಯಿರಿ’ ಒತ್ತಿ. ಇದು ವೈಎಸ್‌ಎಸ್‌ ಶಬ್ದಾರ್ಥ ಸಂಗ್ರಹ ಮತ್ತು ಸ್ಟ್ಯಾಂಡರ್ಡ್‌ ನಿಘಂಟಿನಿಂದ ಅರ್ಥವನ್ನು ತೋರಿಸಲು ಪ್ರಯತ್ನಿಸುತ್ತದೆ. ಹಲವಾರು ಪದಗಳನ್ನು ಆಯ್ಕೆ ಮಾಡಿದ್ದಲ್ಲಿ, ಆಯ್ಕೆಯಲ್ಲಿರುವ ಎಲ್ಲ ಶಬ್ದಾರ್ಥ ಸಂಗ್ರಹದಲ್ಲಿರುವ ಈ ಪದಗಳ ವಿವರಣೆಯನ್ನು ತೋರಿಸುತ್ತದೆ. ನಿಘಂಟಿನಲ್ಲಿರುವ ಅರ್ಥಕ್ಕಾಗಿ ಒಂದು ಬಾರಿಗೆ ಕೇವಲ ಒಂದು ಪದವನ್ನು ಆಯ್ಕೆ ಮಾಡಿ.

ಫ್ಲಾಷ್‌ಕಾರ್ಡ್‌ಗಳು (ಸೃಜನೆ ಮತ್ತು ಪರಿಶೀಲನೆ)

ಹೊಸ ವಿಚಾರಗಳನ್ನು ಕಲಿಯಲು ಫ್ಲಾಷ್‌ಕಾರ್ಡ್‌ಗಳ ಸೃಜನೆಯು ಈಗ ಒಂದು ಸಾಧನವಾಗಿ ಲಭ್ಯವಿದೆ. ಫ್ಲಾಷ್‌ಕಾರ್ಡನ್ನು ಸೃಜಿಸಲು ಇರೀಡರ್‌ನಿಂದ ವಾಕ್ಯದ ಒಂದು ಭಾಗವನ್ನು ಆರಿಸಿಕೊಳ್ಳಿ (ಅದು ವಾಕ್ಯದ ಭಾಗವನ್ನು ಎದ್ದು ಕಾಣುವಂತೆ ಮಾಡುತ್ತದೆ). ನಂತರ ಎದ್ದು ಕಾಣುವ ಭಾಗದ ಮೇಲೆ ಒತ್ತಿ ಮತ್ತು ಕೆಳಗೆ ಕಾಣುವ ‘ಕ್ರಿಯೇಟ್‌ ಫ್ಲಾಷ್‌ಕಾರ್ಡ್’ ಮೇಲೆ ಒತ್ತಿ. ಇದು ನಿಮ್ಮ ಫ್ಲಾಡ್‌ಕಾರ್ಡಿನ “ವಿವರಣೆಯನ್ನು” ಸೃಷ್ಟಿಸುತ್ತದೆ. ಹೊಸ ಫ್ಲಾಷ್‌ಕಾರ್ಡ್‌ ನ ಸೃಜನೆಯನ್ನು ಪೂರ್ಣಗೊಳಿಸಲು ಅದಕ್ಕೊಂದು ‘ಹೆಸರ’ನ್ನು ಮತ್ತು ಬಣ್ಣವನ್ನು ಕೊಡಿ. ನೀವು ಸೇವ್‌ ಮಾಡಿದ ಎಲ್ಲ ಫ್ಲಾಷ್‌ಕಾರ್ಡ್‌ಗಳು ಆಪ್‌ನ ‘ಫಾರ್‌ ಮಿ’ ವಿಭಾಗದಲ್ಲಿ ಕಾಣಸಿಗುತ್ತದೆ.

ಟೆಕ್ಸ್ಟ್‌-ಟು-ಸ್ಪೀಚ್‌ (ಟಿಟಿಎಸ್‌) ಕೆಲಸ ಮಾಡುತ್ತಿಲ್ಲ

ಟೆಕ್ಸ್ಟ್‌-ಟು-ಸ್ಪೀಚ್‌ (ಟಿಟಿಎಸ್‌) ಹೊಂದಿಕೆಯಾಗುವ ಸಾಧನಗಳನ್ನು ಮಾತ್ರ ಬೆಂಬಲಿಸುತ್ತದೆ. ಬೆಂಬಲವು ಭಾಷೆಗೆ ತಕ್ಕಂತೆ ಬದಲಾಗುತ್ತದೆ, ಉದಾಹರಣೆಗೆ: ತಮಿಳಿನಲ್ಲಿರುವ ಟಿಟಿಎಸ್‌ ಅನ್ನು ಐಓಎಸ್‌ ಬೆಂಬಲಿಸುವುದಿಲ್ಲ.

ಕೆಲವು ಆಂಡ್ರಾಯ್ಡ್‌ ಸಾಧನಗಳ ಮೇಲೆ (ಸ್ಯಾಮ್ಸಂಗ್‌ನಂತಹವು), ಮೊದಲ ಆಯ್ಕೆ (ಅಥವಾ ಆದ್ಯತೆ)ಯ ಸ್ಪೀಚ್‌ ಎಂಜಿನ್‌ ಅನ್ನು ‘ಸ್ಪೀಚ್‌ ಸರ್ವೀಸಸ್‌ ಬೈ ಗೂಗಲ್‌’ಗೆ ಅಳವಡಿಸಿರುವುದನ್ನು ಖಚಿತ ಪಡಿಸಿಕೊಳ್ಳಿ.

ಟಿಟಿಎಸ್‌ ಮಾತನಾಡುವ ಧ್ವನಿಯನ್ನು ಬದಲಾಯಿಸುವುದು

ಕೇಳಿಸಿಕೊಳ್ಳುವ ವಿಧಾನದಲ್ಲಿರುವಾಗ, ಆಡಿಯೋ ಪ್ಲೆಯರ್‌ ಸೂಚಿಯ ಎಡಭಾಗದ ಕೆಳಗಿನ ಮೂಲೆಯಲ್ಲಿರುವ ಸ್ಪೀಚ್‌ ಐಕಾನನ್ನು ಒತ್ತಿ. ಇದು ನಿಮ್ಮ ಸಾಧನದಲ್ಲಿರುವ ಎಲ್ಲ ಲಭ್ಯ ಧ್ವನಿಗಳನ್ನು ನಿಮಗೆ ತೋರಿಸುತ್ತದೆ.

ಮಾಡ್ಯೂಲ್‌ (ವಿಷಯಾನುಸಾರವಾಗಿ) ಅನ್ನು ಆಧರಿಸಿ ಪೂರಕ ಪಾಠಗಳನ್ನು ನೋಡುವುದು

ಮೂಲ ಪಾಠದ ಸರಣಿಯನ್ನು ಪೂರೈಸಿದ ವಿದ್ಯಾರ್ಥಿಗಳು (ಪಾಠಗಳು 1-18) ಪೂರಕ ಸರಣಿಗೆ ದಾಖಲಾಗಲು ಅರ್ಹರಾಗಿರುತ್ತಾರೆ. ‘ಪೂರಕ ಪಾಠಗಳು’ ಟ್ಯಾಬ್‌ ಆಯ್ಕೆ ಮಾಡಿಕೊಂಡು ಪೂರಕ ಪಾಠಗಳನ್ನು ವಿಷಯಾನುಸಾರವಾಗಿ ಓದಲು ‘ಮಾಡ್ಯೂಲ್ಸ್‌’ ಮೇಲೆ ಒತ್ತಿ. ಒಮ್ಮೆ ನೀವು ಪೂರಕ ಸರಣಿಯನ್ನು ಆರಂಭಿಸಿದ ಮೇಲೆ, ಹೊಸ ಪಾಠಗಳು ನಿಮಗೆ ಎರಡು ವಾರಕ್ಕೊಮ್ಮೆ ಸಿಗುತ್ತವೆ.

ಆನ್‌ಲೈನ್‌ ಧ್ಯಾನಗಳು

ಆನ್‌ಲೈನ್‌ ಧ್ಯಾನಗಳಿಗೆ ಪ್ರತ್ಯಕ್ಷವಾಗಿ ಸೇರುವುದು

ಆಪ್‌ನ ‘ಧ್ಯಾನ ಮಾಡಿ | ಆನ್‌ಲೈನ್‌’ ವಿಭಾಗದಲ್ಲಿ, ಮುಂಬರುವ ಧ್ಯಾನಗಳನ್ನು ಪಟ್ಟಿಮಾಡಲಾಗುತ್ತದೆ. ನಿರ್ಧಾರಿತ ಆರಂಭದ ಸಮಯವು ಬಂದಾಗ, ಜೂಮ್‌ ಅಥವಾ ಯುಟ್ಯೂಬ್‌ ಮುಖಾಂತರ ನೀವು ಧ್ಯಾನಕ್ಕೆ ಸೇರಿಕೊಳ್ಳಬಹುದು. ‘ಸೇರಿಕೊಳ್ಳಿ’ ಗುಂಡಿಯ ಮೇಲೆ ಒತ್ತಿದಾಗ ಸೂಕ್ತ ಆಪ್‌ ಅನ್ನು ಪ್ರಾರಂಭಿಸುತ್ತದೆ (ಆಪ್‌ ಅನ್ನು ಈ ಮುಂಚೆಯೇ ನಿಮ್ಮ ಸಾಧನದ ಮೇಲೆ ಅಳವಡಿಸಿಕೊಂಡಿರಬೇಕು).

ಆನ್‌ಲೈನ್‌ ಧ್ಯಾನದ ಪಟ್ಟಿಯನ್ನು ಫಿಲ್ಟರ್‌ ಮಾಡುವುದು

ನಮ್ಮ ಆನ್‌ಲೈನ್‌ ಧ್ಯಾನ ಕೇಂದ್ರವು ವಿಭಿನ್ನ ಕಾರ್ಯಕ್ರಮಗಳನ್ನು ಒದಗಿಸುತ್ತದೆ. ನೀವು ನಿರ್ದಿಷ್ಟ ರೀತಿಯದನ್ನು ಮಾತ್ರ ನೋಡಲು/ಸೇರಿಕೊಳ್ಳಲು ಇಚ್ಛಿಸಿದಲ್ಲಿ, ಮೇಲೆ ಬಲಭಾಗದಲ್ಲಿರುವ ‘ಫಿಲ್ಟರ್‌’ ಐಕಾನನ್ನು ಒತ್ತಿ ಕಾಣುತ್ತಿರುವ ವರ್ಗಗಳಲ್ಲಿ ನಿಮಗೆ ಇಚ್ಛೆಯಿರುವ ರೀತಿಯದನ್ನು ಆಯ್ದುಕೊಳ್ಳಿ. ನಿಮ್ಮ ಆಯ್ಕೆಯನ್ನು ಸೇವ್‌ ಮಾಡಿಕೊಳ್ಳಲು ‘ಅಪ್ಲೈ’ ಮೇಲೆ ಒತ್ತಿ.

ನಿರ್ದಿಷ್ಟ-ಭಾಷೆಯ ಆನ್‌ಲೈನ್‌ ಧ್ಯಾನದ ವೇಳಾಪಟ್ಟಿಯನ್ನು ನೋಡುವುದು

ನಿಮ್ಮ ಸಾಧನದ ಭಾಷೆಯನ್ನು ಅಪೇಕ್ಷಿತ ಭಾಷೆಗೆ ಅಳವಡಿಸಿದಾಗ ಆಪ್‌ ಹೆಚ್ಚಿನ ನಿರ್ದಿಷ್ಟ-ಭಾಷೆಯ ಕಾರ್ಯಕ್ರಮಗಳನ್ನು ತೋರಿಸುತ್ತದೆ. ಪ್ರಸ್ತುತದಲ್ಲಿ, ಇದು ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳನ್ನು ಮಾತ್ರ ಬೆಂಬಲಿಸುತ್ತದೆ.

ಮಾರ್ಗದರ್ಶಿತ ಧ್ಯಾನಗಳು

ಮಾರ್ಗದರ್ಶಿತ ಧ್ಯಾನಗಳನ್ನು ನೋಡುವುದು

ಆಪ್‌ನ ‘ಧ್ಯಾನ ಮಾಡಿ | ಮಾರ್ಗದರ್ಶಿತ’ ವಿಭಾಗದಲ್ಲಿ, ನೀವು ನಮ್ಮ ಸನ್ಯಾಸಿಗಳಿಂದ ಮಾರ್ಗದರ್ಶಿತವಾಗುವ ಧ್ಯಾನಗಳಲ್ಲಿ ಸೇರಿಕೊಳ್ಳಬಹುದು. ಮೊದಲು ಒಂದು ವಿಷಯನ್ನು ಆಯ್ಕೆ ಮಾಡಿಕೊಳ್ಳಿ, ನಂತರ ಆರಂಭಿಸುವ ಒಂದು ಅಪೇಕ್ಷಿತ ಅವಧಿ. ವೈಎಸ್‌ಎಸ್‌ ಧ್ಯಾನಪೀಠವನ್ನು ನೋಡಲು ನಿಮ್ಮ ಮೊಬೈಲ್‌ ಅನ್ನು ಲ್ಯಾಂಡ್‌ಸ್ಕೇಪ್‌ ಮೋಡ್‌ನಲ್ಲಿಡಿ.

ಮಾರ್ಗದರ್ಶಿತ ಧ್ಯಾನಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳುವುದು

ಆಫ್‌ಲೈನ್‌ ಅಥವಾ ಬಾರಿ ಬಾರಿಯ ಉಪಯೋಗಕ್ಕಾಗಿ ಒಂದು ನಿರ್ದಿಷ್ಟ ಧ್ಯಾನವನ್ನು ನೀವು ಡೌನ್‌ಲೋಡ್‌ ಮಾಡಿಕೊಳ್ಳಲು ಬಯಸಿದಲ್ಲಿ, ನಿಮ್ಮ ಪ್ಲೆಯರ್‌ನ ಕೆಳಗೆ ಬಲಭಾಗದಲ್ಲಿರುವ ‘ಡೌನ್‌ಲೋಡ್‌’ ಐಕಾನ್‌ ಮೇಲೆ ಒತ್ತಿ. ಮುಂದೆ ನೀವು ಅದೇ ಧ್ಯಾನಕ್ಕೆ ಮತ್ತೆ ಹೋದಾಗ, ಡೌನ್‌ಲೋಡ್‌ ಮಾಡಿದ ಫೈಲ್‌ ಅನ್ನು ಉಪಯೋಗಿಸಲಾಗುತ್ತದೆ.

ಇತರ ಭಾಷೆಗಳಲ್ಲಿಯ ಮಾರ್ಗದರ್ಶಿತ ಧ್ಯಾನಗಳು

ಹಿಂದಿ, ತಮಿಳು ಮತ್ತು ತೆಲುಗುವಿನಲ್ಲಿಯೂ ಮಾರ್ಗದರ್ಶಿತ ಧ್ಯಾನಗಳು ಲಭ್ಯವಿವೆ. ಇದನ್ನು ನೋಡಲು ಮತ್ತು ಸಮಾಚಾರ ಮತ್ತು ನಿರ್ದಿಷ್ಟ-ಭಾಷೆಯ ಆನ್‌ಲೈನ್‌ ಧ್ಯಾನದ ವೇಳಾಪಟ್ಟಿಯಂತಹ ಇತರ ಎಲ್ಲ ಪಾಠಗಳಿಗೆ-ಸಂಬಂಧಿಸಿಲ್ಲದ ವಿಷಯಗಳನ್ನು ಪಡೆಯಲು, ದಯಮಾಡಿ ನಿಮ್ಮ ಆಫ್‌ನ ಭಾಷೆಯನ್ನು ಹಿಂದಿ, ತಮಿಳು ಮತ್ತು ತೆಲುಗು ಭಾಷೆಗೆ ಅಳವಡಿಸಿ.

para-ornament

ಇನ್ನೂ ಸಹಾಯ ಬೇಕೆ?

ನಿಮ್ಮ ಪ್ರಶ್ನೆಗೆ ಉತ್ತರವನ್ನು ಕಂಡುಕೊಳ್ಳಲಾಗುತ್ತಿಲ್ಲವೇ? ಸಹಾಯಕ್ಕಾಗಿ ನಮ್ಮನ್ನು ಸಂಪರ್ಕಿಸಿ.

ನಮ್ಮ ಅಂತರರಾಷ್ಟ್ರೀಯ ಸ್ವಯಂಸೇವಕ ಸಹಾಯಕರಿಂದ ಸಹಾಯವನ್ನು ಪಡೆದುಕೊಳ್ಳಿ:

ಆಪ್‌ನ ‘ಫಾರ್‌ ಮಿ’ ವಿಭಾಗದಲ್ಲಿ, ದಯಮಾಡಿ ‘ಸಪೋರ್ಟ್‌’ ಮೇಲೆ ಒತ್ತಿ. ನಮ್ಮ ಸಹಾಯಕ ವರ್ಗದೊಡನೆ ಸಹಾಯವನ್ನು ಪಡೆಯಲು ಕೇಳಿದ ಮಾಹಿತಿಯನ್ನು ನೀಡಿ. ಸಮಸ್ಯೆಯ ಬಗ್ಗೆ ನೀವು ಹೆಚ್ಚು ಮಾಹಿತಿಯನ್ನು ನೀಡಿದಷ್ಟೂ, ಶೀಘ್ರವಾಗಿ ಮತ್ತು ಪರಿಣಾಮಕಾರಿಯಾಗಿ ಪ್ರತಿಸ್ಪಂದಿಸಲು ನಮಗೆ ಸುಲಭವಾಗುತ್ತದೆ.

ಸಹಾಯದ ವಿಂಡೋವನ್ನು ನೋಡಲು ನಿಮ್ಮ ಆಪ್‌ನಲ್ಲಿ ಸಾಧ್ಯವಾಗದಿದ್ದಲ್ಲಿ, ದಯಮಾಡಿ ಸಮಸ್ಯೆಯನ್ನು ವಿವರವಾಗಿ ತಿಳಿಸಿ, ನಿಮ್ಮ ಸಾಧನದ ಮಾಹಿತಿ ಮತ್ತು ನಿಮ್ಮ ವಿದ್ಯಾರ್ಥಿ ಖಾತೆಗೆ ಸೇರಿದ ನಿಮ್ಮ ಇಮೇಲ್‌ ಹೆಸರನ್ನು ನಮೂದಿಸಿ [email protected] ಗೆ ಒಂದು ಇಮೇಲ್‌ ಕಳಿಸಿ.

para-ornament

ಎಸ್‌ಆರ್‌ಎಫ್‌/ವೈಎಸ್‌ಎಸ್‌ ಆಪ್‌ ಪಡೆದುಕೊಳ್ಳಿ

ಗೂಗಲ್‌ ಪ್ಲೇ ಅಥವಾ ಆಪಲ್‌ ಸ್ಟೋರ್‌ ನಿಂದ ಆಪ್‌ ಡೌನ್‌ಲೋಡ್‌ ಮಾಡಿಕೊಳ್ಳಿ:

ವೈಎಸ್‌ಎಸ್‌ ಪಾಠಗಳ ವಿದ್ಯಾರ್ಥಿಗಳು ವೈಎಸ್‌ಎಸ್‌ ಪಾಠಗಳನ್ನು ಮತ್ತು ಸಹಾಯಕ ವಸ್ತುವಿಷಯಗಳನ್ನು ಡೆಸ್ಕ್‌ಟಾಪ್‌ ಆಪ್‌ನಲ್ಲಿ ಕೂಡ ನೋಡಬಹುದು:

ಇದನ್ನು ಹಂಚಿಕೊಳ್ಳಿ