ನೀವು ಏನನ್ನು ಅರಸುತ್ತಿದ್ದೀರೋ ಅದು ಈಗಾಗಲೇ ನಿಮ್ಮೊಳಗಿದೆ
ದೈನಂದಿನ ಜೀವನದ ಒತ್ತಡ ಮತ್ತು ತರಾತುರಿಯಿಂದ ಸುಲಭವಾಗಿ ಭಾವೋದ್ವೇಗಕ್ಕೆ ಒಳಗಾಗುತ್ತೇವೆ ಹಾಗೂ ಇತರರು ಮತ್ತು ಸಮಾಜವು ನಮ್ಮ ಮೇಲೆ ಹೇರುವ ನಿರೀಕ್ಷೆಗಳಿಂದ ವಿಚಲಿತರಾಗುತ್ತೇವೆ. ಆದರೆ ನಿಮ್ಮ ಸರ್ವೋತ್ಕೃಷ್ಟ ಶಾಂತಿ, ಸುರಕ್ಷೆ ಹಾಗೂ ಸಂತೋಷಕ್ಕೆ ಬೇಕಾಗಿರುವುದೆಲ್ಲವೋ ಈಗಾಗಲೇ ನಿಮ್ಮೊಳಗಿದೆ.
ಈ ಅಜ್ಞಾತ ಮೂಲಸೆಲೆಯನ್ನು ತಟ್ಟುವುದಕ್ಕೆ ನೀವು ಮಾಡಬೇಕಾದದ್ದೇನೆಂದರೆ, ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ ಬೋಧಿಸುವ ಯೋಗದ ವೈಜ್ಞಾನಿಕ ಹಾಗೂ ಸಾರ್ವತ್ರಿಕ ಮಾರ್ಗದ ಧ್ಯಾನದ ಅಭ್ಯಾಸವನ್ನು ಪ್ರತಿ ದಿನ ಮಾಡುವ ಅಭ್ಯಾಸವನ್ನು ಬೆಳೆಸಿಕೊಳ್ಳುವುದು.
ನಿಮ್ಮ ಅತ್ಯಂತ ಗಂಭೀರವಾದ ಪ್ರಶ್ನೆಗಳಿಗೆ ತೃಪ್ತಿದಾಯಕ ಉತ್ತರಗಳನ್ನು ಪಡೆದುಕೊಳ್ಳಬಹುದು ಮತ್ತು ಕೊನೆಗಾಣದ ಆನಂದವನ್ನು ಬೆಳೆಸಿಕೊಳ್ಳಬಹುದು
ನಿಜವಾದ ಸಂತೃಪ್ತಿ, ಜೀವನದ ಬಗ್ಗೆ ಇರುವ ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆದುಕೊಳ್ಳುವುದು ಮತ್ತು ಕೊನೆಗಾಣದ ಆನಂದ, ಇವು ನಿಮ್ಮ ಕೈಗೆಟಕುವ ದೂರದಲ್ಲಿವೆ-ಮತ್ತು ಆಧ್ಯಾತ್ಮಿಕ ಮಾರ್ಗದಲ್ಲಿ ನೀವು ಹಂತ-ಹಂತವಾಗಿ ಏರಿದಂತೆ ಅವು ನಿಮ್ಮ ಪ್ರತಿದಿನದ ಅನುಭವವಾಗುವುದು.
ಧ್ಯಾನವು ಜನಮನ್ನಣೆಯ ನೂತನ ಆಯಾಮವನ್ನು ತಲುಪಿದೆ. ವೈಜ್ಞಾನಿಕ ಅಧ್ಯಯನಗಳು ಅನೇಕ ಶಾರೀರಿಕ ಹಾಗೂ ಮಾನಸಿಕ ಆರೋಗ್ಯದ ಪ್ರಯೋಜನಗಳನ್ನು ಹಾಗೂ ಒಂದು ದೈನಂದಿನ ಅಭ್ಯಾಸವು ಹೇಗೆ ನಿಮ್ಮ ಜೀವನವನ್ನು ಧನಾತ್ಮಕವಾಗಿ ಪ್ರಭಾವಿತಗೊಳಿಸಬಹುದು ಎಂಬುದನ್ನು ದೃಢಪಡಿಸಿವೆ. ಆದರೆ ಧ್ಯಾನದ ಮೂಲದಲ್ಲಿ ಅದಕ್ಕಿಂತ ಹೆಚ್ಚಿನದಿದೆ.
ಧ್ಯಾನವು ನಿಮ್ಮ ಪರಮಾನಂದ-ಪ್ರಜ್ಞೆಯ ಪ್ರವೇಶದ್ವಾರವಾಗಿದೆ
ಧ್ಯಾನವನ್ನು ವೈಜ್ಞಾನಿಕವಾಗಿ ಅಭ್ಯಾಸ ಮಾಡಿದಾಗ, ನೀವು ನಿಮ್ಮ ಮನಸ್ಸು, ಉಸಿರು ಮತ್ತು ಹೃದಯವನ್ನು ಶಾಂತಗೊಳಿಸಬಹುದು ಮತ್ತು ನಿಮ್ಮ ಚೈತನ್ಯವನ್ನು ಒಳಗೆ ತೆಗೆದುಕೊಳ್ಳಬಹುದು, ಅಲ್ಲಿ ನೀವು ಪರಮಾನದೊಂದಿಗಿನ ನಿಮ್ಮ ಆತ್ಮದ ಐಕ್ಯತೆಯನ್ನು ಗ್ರಹಿಸಬಹುದು.
ಈ ಆತ್ಮ-ಗ್ರಹಿಕೆ ಮರ್ತ್ಯ ಮಿತಿಗಳ ಭಾವನೆಯನ್ನು ಕರಗಿಸುತ್ತದೆ ಮತ್ತು ಮಹತ್ತರ ಆನಂದವನ್ನು ಮಾತ್ರವಲ್ಲ, ಜೊತೆಗೆ ನೀವು ಎಂದೂ ಕಲ್ಪಿಸಿಕೊಂಡಿರದಂತಹ ಮಹತ್ತರ ಶಾಂತಿ, ಜ್ಞಾನ ಹಾಗೂ ಪ್ರೀತಿಯನ್ನು ನೀಡುತ್ತದೆ. ಇದೇ ಪುರಾತನ ಕಾಲದಿಂದಲೂ ಯೋಗಿಗಳು ಸಿದ್ಧಿಸಿಕೊಂಡ ಅಸ್ತಿತ್ವದ ಸ್ಥಿತಿ ಮತ್ತು ಇದು ನಮಗೆಲ್ಲರಿಗೂ ಈಗ ಲಭ್ಯವಿದೆ.
ನೀವು ನಿಮ್ಮ ವೈಯಕ್ತಿಕ ಸಮಸ್ಯೆಗಳನ್ನು ಅಥವಾ ಜೀವನದ ರಹಸ್ಯವನ್ನು ಅರಿಯಬೇಕೆಂಬ ಮಾನವನ ಸಾರ್ವತ್ರಿಕ ಸಮಸ್ಯೆಯನ್ನು ಬಗೆಹರಿಸಲು ಕಟ್ಟಾಸೆಯುಳ್ಳವರಲ್ಲೊಬ್ಬರಾಗಿದ್ದರೆ, ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾದ (ಸೆಲ್ಫ್-ರಿಯಲೈಝೇಷನ್ ಫೆಲೋಷಿಪ್‌ನ) ಬೋಧನೆಗಳನ್ನು ಕಲಿತು ಅನುಸರಿಸಿ. ಭಾರತದ ಈ ಆಧ್ಯಾತ್ಮಿಕ ಬೋಧನೆಗಳು ಅನಾದಿ ಕಾಲದಿಂದ ಭಾರತದ ದೇದೀಪ್ಯಮಾನರಾದ ಜ್ಞಾನಿಗಳು ಮತ್ತು ಋಷಿಗಳು ಕೊಟ್ಟ ಕೊಡುಗೆ. ಇದರಲ್ಲಿ ನಿಮಗೆ ನಿಮ್ಮ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಗುತ್ತದೆ.
— ಪರಮಹಂಸ ಯೋಗಾನಂದ
ವೈಎಸ್ಎಸ್ ಪಾಠಗಳು ನಿಮ್ಮನ್ನು ಉನ್ನತಿಗೇರಿಸುವ ಮತ್ತು ನಿಜ ಜೀವನವನ್ನು ಎಲ್ಲ ಆಯಾಮಗಳಲ್ಲೂ ಬದಲಾಯಿಸುವ ಪವಿತ್ರ ಜ್ಞಾನದ ಸಂವಹನ: ಮಹಾತವಾರ್ ಬಾಬಾಜಿ, ಲಾಹಿರಿ ಮಹಾಶಯ, ಸ್ವಾಮಿ ಶ್ರೀ ಯುಕ್ತೇಶ್ವರ್ ಮತ್ತು ಪರಮಹಂಸ ಯೋಗಾನಂದರಂತಹ ಮಹಾನ್ ಯೋಗ ಪುರುಷರ ಹೆಸರಾಂತ ಪರಂಪರೆಯ ಮೂಲಕ ನೀಡಲಾದ ಧ್ಯಾನ ತಂತ್ರಗಳ ಮತ್ತು ಆಧ್ಯಾತ್ಮಿಕ ಸಾರಸರ್ವಸ್ವವನ್ನೊಳಗೊಂಡ ಒಂದು ಗೃಹಾಧ್ಯಯನದ ಸರಣಿ — ಮತ್ತು ನಿಮಗೆ ಲಭ್ಯವಿದೆ.
ನಿಮ್ಮ ಆಧ್ಯಾತ್ಮಿಕ ಮಾರ್ಗದಲ್ಲಿ ನೀವು ಎಷ್ಟು ದೂರ ಹೋಗಬಯಸುತ್ತೀರೋ ಅಲ್ಲಿಯವರೆಗೆ ನಾನು ನಿಮಗೆ ಮಾರ್ಗದರ್ಶನ ಮಾಡಬಲ್ಲೆ; ಮತ್ತು ಪಾಠಗಳಲ್ಲಿರುವ ತಂತ್ರಗಳನ್ನು ನೀವು ಅಭ್ಯಾಸ ಮಾಡಿದಲ್ಲಿ ನಿಮ್ಮ ಪ್ರಗತಿಯಲ್ಲಿ ನೀವು ಎಂದಿಗೂ ನಿಷ್ಕ್ರಿಯತೆಯನ್ನು ಕಾಣುವುದಿಲ್ಲ.
— ಪರಮಹಂಸ ಯೋಗಾನಂದ
ಕ್ರಿಯಾ ಯೋಗ ಧ್ಯಾನದ ಪುರಾತನ ತಂತ್ರಗಳನ್ನು ನೀವು ಕಲಿಯುವಿರಿ
ಪಾಠಗಳನ್ನು ಪರಮಹಂಸ ಯೋಗಾನಂದರು ಪ್ರಾರಂಭಿಸಿದರು. ಅವರ ಬೋಧನೆಗಳ ಮೂಲದಲ್ಲಿ ಧ್ಯಾನ ತಂತ್ರಗಳ ಒಂದು ಶಕ್ತಿಯುತ ಕಾರ್ಯವಿಧಾನವಿದೆ: ಧ್ಯಾನದ ಕ್ರಿಯಾ ಯೋಗ ವಿಜ್ಞಾನ. ಅವರ ಯೋಗಿಯ ಆತ್ಮಕಥೆ ಹಾಗು ಅವರ ಇತರ ಪುಸ್ತಕಗಳ ಮೂಲಕ ಲಕ್ಷಾಂತರ ಜನರಿಗೆ ಪರಿಚಿತವಾದ ಆತ್ಮದ ಈ ಪುರಾತನ ವಿಜ್ಞಾನವು ಮೇಲ್‌ಸ್ತರದ ಆಧ್ಯಾತ್ಮಿಕ ಪ್ರಜ್ಞೆ ಮತ್ತು ದಿವ್ಯಾನುಭವದ ಆಂತರಿಕ ಆನಂದವನ್ನು ಜಾಗೃತಗೊಳಿಸುವ ಶಕ್ತಿಯುತ ವಿಧಾನಗಳನ್ನು ನೀಡುತ್ತದೆ.
ಮೊದಲನೆಯ ಪಾಠದಿಂದಲೇ, ಧ್ಯಾನದ ಲಾಭಗಳನ್ನು ನೀವು ಮನಗಾಣಬಹುದಾದ ಖಚಿತ ವಿಧಾನಗಳನ್ನು ಕೂಡಲೇ ಪಡೆಯುತ್ತೀರಿ.
ಗಾಢವಾದ ಧ್ಯಾನಕ್ಕೆ ಒಂದು ದೃಢ ಅಸ್ತಿಭಾರವನ್ನು ಹಾಕುತ್ತಿರುವಂತೆ, ಪರಮಹಂಸ ಯೋಗಾನಂದರು ಬೋಧಿಸಿದ ಮೂರು ಶಕ್ತಿಯುತ ತಂತ್ರಗಳನ್ನು, ಕ್ರಿಯಾ ಯೋಗದ ಸಮಗ್ರ ಆಧ್ಯಾತ್ಮಿಕ ವಿಜ್ಞಾನದ ಅವಶ್ಯಕವಾದ ಮೊದಲ ಹೆಜ್ಜೆಗಳನ್ನು ಕಲಿಯುತ್ತೀರಿ:
ಪರಮಹಂಸ ಯೋಗಾನಂದರಿದ ಪ್ರಸ್ತುತಪಡಿಸಲಾದ ಚೈತನ್ಯದಾಯಕ ವ್ಯಾಯಮಗಳ ವಿಶಿಷ್ಟ ಸರಣಿ ಒಬ್ಬರಿಗೆ ಬ್ರಹ್ಮಾಂಡ ಮೂಲದಿಂದ ಶರೀರದೊಳಗೆ ಪ್ರಜ್ಞಾಪೂರ್ವಕವಾಗಿ ಚೈತನ್ಯವನ್ನು ಸೆಳೆದುಕೊಳ್ಳಲು ಸಾಧ್ಯವಾಗಿಸುತ್ತದೆ. ಪ್ರಾಣ-ಶಕ್ತಿ ನಿಯಂತ್ರಣದ ಈ ತಂತ್ರವು ಶರೀರವನ್ನು ಶುದ್ಧಗೊಳಿಸುತ್ತದೆ ಮತ್ತು ಸದೃಢಗೊಳಿಸುತ್ತದೆ ಮತ್ತು ಪ್ರಜ್ಞೆಯ ಮೇಲ್‌ಸ್ತರದ ಸ್ಥಿತಿಗಳನ್ನು ತಲುಪಲು ಚೈತನ್ಯವನ್ನು ನಿರ್ದೇಶಿಸುವುದನ್ನು ಸುಲಭವಾಗಿಸಿ ಧ್ಯಾನಕ್ಕೆ ಅಣಿಗೊಳಿಸುತ್ತದೆ. ನಿಯತ ಅಭ್ಯಾಸವು ಮಾನಸಿಕ ಹಾಗೂ ದೈಹಿಕ ಆರಾಮವನ್ನೂ ಉತ್ತೇಜಿಸುತ್ತದೆ ಮತ್ತು ಕ್ರಿಯಾತ್ಮಕ ಇಚ್ಛಾ ಶಕ್ತಿಯನ್ನು ವೃದ್ಧಿಪಡಿಸುತ್ತದೆ.
ಈ ಪುರಾತನ ಹಾಗೂ ಶಕ್ತಿಯುತ ತಂತ್ರವು ಮನಸ್ಸಿನ ಏಕಾಗ್ರತೆಯ ಸುಪ್ತ ಶಕ್ತಿಗಳನ್ನು ವೃದ್ಧಿಸಲು ಸಹಾಯ ಮಾಡುತ್ತದೆ. ನಿಯತ ಅಭ್ಯಾಸದ ಮೂಲಕ ಒಬ್ಬರ ಆಲೋಚನೆ ಮತ್ತು ಚೈತನ್ಯವನ್ನು ಬಾಹ್ಯ ಅಡೆತಡೆಗಳಿಂದ ಹಿಂದಕ್ಕೆ ಸೆಳೆದುಕೊಂಡು ಅವನ್ನು ಯಾವುದೇ ಸಾಧಿಸಬೇಕಾದ ಗುರಿ ಅಥವಾ ಪರಿಹರಿಸಬೇಕಾದ ಸಮಸ್ಯೆಯ ಕಡೆಗೆ ಕೇಂದ್ರೀಕರಿಸುವುದನ್ನು ಕಲಿಯುತ್ತಾರೆ. ಅಥವಾ ಯಶಸ್ವಿ ಅಭ್ಯಾಸದಿಂದ ಫಲಿಸುವ ಕೇಂದ್ರೀಕೃತ ಗಮನವನ್ನು ಒಬ್ಬರು ಆಂತರ್ಯದಲ್ಲಿನ ದಿವ್ಯ ಪ್ರಜ್ಞೆಯನ್ನು ಸಾಕ್ಷಾತ್ಕರಿಸಿಕೊಳ್ಳುವೆಡೆಗೆ ನಿರ್ದೇಶಿಸಬಹುದು.
ಹಿಂದಿನ ತಂತ್ರಗಳ ಅಭ್ಯಾಸದ ಮೂಲಕ, ವಿದ್ಯಾರ್ಥಿಯು ಶರೀರವನ್ನು ಆರಾಮವಾಗಿರಿಸಲು ಮತ್ತು ಮನಸ್ಸನ್ನು ಕೇಂದ್ರೀಕರಿಸಲು ಕಲಿತ ನಂತರ, ಈ ಉನ್ನತ ಧ್ಯಾನದ ತಂತ್ರವು, ಅರಿವನ್ನು ಶರೀರದ ಮಿತಿಗಳಿಂದಾಚೆಗೆ ಮತ್ತು ಮನಸ್ಸನ್ನು ಒಬ್ಬರ ಅನಂತ ಸಾಮರ್ಥ್ಯದ ಆನಂದಮಯ ಅರಿವಿನೆಡೆಗೆ ವಿಸ್ತರಿಸುತ್ತದೆ.
ಆಧ್ಯಾತ್ಮಿಕ ಪ್ರಜ್ಞೆಯ ಎಲ್ಲ ಶ್ರದ್ಧಾವಂತ ಅನ್ವೇಷಕರೂ — ಧಾರ್ಮಿಕ ಪಂಗಡದ ಬೇಧಭಾವವಿಲ್ಲದೆ — ಮೇಲಿನ ತಂತ್ರಗಳನ್ನು ವೈಎಸ್‌ಎಸ್ ಪಾಠಗಳ ಮೂಲ ಸರಣಿಯಲ್ಲಿ ಪಡೆದುಕೊಳ್ಳಬಹುದು. ಪಾಠಗಳ ಅಧ್ಯಯನದ ಮೊದಲ ಎಂಟು ತಿಂಗಳುಗಳ ಅವಧಿಯಲ್ಲಿ ಈ ಮೂರು ಮೂಲ ತಂತ್ರಗಳನ್ನು ಕಲಿತು ಅಭ್ಯಾಸ ಮಾಡಿದ ನಂತರ, ಆಸಕ್ತರು ಕ್ರಿಯಾ ಯೋಗ ದೀಕ್ಷೆಗೆ ಅರ್ಜಿ ಸಲ್ಲಿಸಬಹುದು. ದೀಕ್ಷೆಯು ಈ ಮಾರ್ಗದ ಒಂದು ಗಾಢವಾದ ಬದ್ಧತೆಗೆ ಒಳಪಡಿಸುತ್ತದೆ. ಮೂಲ ಪಾಠಗಳ ಅಧ್ಯಯನ ಮತ್ತು ಅಭ್ಯಾಸವು ನೀವು ಆ ಬದ್ಧತೆಗೆ ಸಿದ್ಧರಿರುವಿರೇ ಎಂಬುದನ್ನು ನಿರ್ಧರಿಸಲು ಸಾಧ್ಯವಾಗಿಸುತ್ತದೆ.
ಒಬ್ಬರು ಕ್ರಿಯಾ ಯೋಗವನ್ನು ಸ್ವೀಕರಿಸಲು ನಿರ್ಧರಿಸುತ್ತಾರೋ ಇಲ್ಲವೋ, ಪಾಠಗಳ ಮೂಲ ಸರಣಿಯಲ್ಲಿ ಕಲಿಸುವ ತಂತ್ರಗಳ ಪಾಲನೆಯಲ್ಲಿ ಶ್ರದ್ಧಾಯುಕ್ತರಾಗಿದ್ದಲ್ಲಿ ಅವರು ತಮಗಾಗಿ ಪ್ರತಿಫಲವನ್ನು ನೀಡುವ ಒಂದು ಆಳವಾದ ಧ್ಯಾನದ ಅಭ್ಯಾಸವನ್ನು ಬೆಳೆಸಿಕೊಳ್ಳಬಹುದು. ಮೇಲೆ ಪಟ್ಟಿಮಾಡಿರುವ ಮೂಲ ತಂತ್ರಗಳ ಮೂಲಕ ಅವರು ದಿವ್ಯ ಪ್ರಜ್ಞೆಯ ಅತ್ಯಂತ ಉನ್ನತ ಮಟ್ಟದ ಸ್ಥಿತಿಯನ್ನು ಸಿದ್ಧಿಸಿಕೊಳ್ಳಬಹುದು ಎಂಬ ಪರಮಹಂಸ ಯೋಗಾನಂದರ ವಾಗ್ದಾನವನ್ನು ತಮಗೆ ತಾವೇ ಖಚಿತ ಪಡಿಸಿಕೊಳ್ಳಬಹುದು — ಕ್ರಿಯಾ ಯೋಗವು ಅತಿ ಶೀಘ್ರವಾದ ಮತ್ತು ಬಹಳ ಪರಿಣಾಮಕಾರಿಯಾದ ವಿಧಾನವಾಗಿದ್ದರೂ ಕೂಡ.
ಈ ಪಾಠಗಳನ್ನು ಉಪಯೋಗಿಸುತ್ತ, ಮತ್ತು ನಿಯತವಾಗಿ ಧ್ಯಾನ ಮಾಡುತ್ತ, ನೀವು ಅಂತಹ ಸಂತೋಷನ್ನು ಅನುಭವಿಸುತ್ತೀರಿ, ನಿಮ್ಮ ಸಮಸ್ಯೆಗಳಿಗೆ ಅಂತಹ ಉತ್ತರಗಳನ್ನು ಪಡೆಯುತ್ತೀರಿ! ಕೇವಲ ನುಡಿಗಳಿಂದ ತೃಪ್ತರಾಗಬೇಡಿ. ಸತ್ಯದ ನಿಜವಾದ ಅನುಭವವನ್ನು ಹೊಂದಿ. ಆತ್ಮ-ಸಾಕ್ಷಾತ್ಕಾರವನ್ನು ಹೊಂದಿ!
— ಪರಮಹಂಸ ಯೋಗಾನಂದ
ತಂತ್ರಗಳ ಜೊತೆಗೆ ಪಾಠಗಳು ಆಧ್ಯಾತ್ಮಿಕ ಬಾಳ್ವೆಗಾಗಿ ಸ್ಫೂರ್ತಿ ಮತ್ತು ಕಾರ್ಯೋಪಯೋಗಿ ಮಾರ್ಗದರ್ಶನದ ಒಂದು ಖಜಾನೆಯನ್ನೇ ನೀಡುತ್ತದೆ — ಬದಲಾವಣೆಯ ಈ ಜಗತ್ತಿನಲ್ಲಿ ನಿರಂತರ ಸವಾಲುಗಳು ಮತ್ತು ಅವಕಾಶಗಳ ನಡುವೆ ಹೇಗೆ ಆನಂದಮಯವಾಗಿ ಮತ್ತು ಯಶಸ್ವಿಯಾಗಿ ಬಾಳುವುದು. ಆ ಸ್ಫೂರ್ತಿಯನ್ನು ಹೇಗೆ ನಿಮ್ಮ ದೈನಂದಿನ ಆಧ್ಯಾತ್ಮಿಕ ಅಭ್ಯಾಸವಾಗಿ ಪರಿವರ್ತನೆ ಮಾಡಿಕೊಳ್ಳಬಹುದು ಎಂಬುದನ್ನು ನೀವು ಕಲಿಯುತ್ತೀರಿ.
ಕೆಲವು ಪಾಠಗಳ ವಿಷಯಗಳ ನಮೂನೆಗಳು
ಈಗಲೇ ಪರಮಹಂಸ ಯೋಗಾನಂದರ ಪರಿಚಯಾತ್ಮಕ ಪಾಠವನ್ನು ಓದಿ
ಪರಮಹಂಸ ಯೋಗಾನಂದರ ಬೋಧನೆಗಳ ಮೂಲಕ ಆತ್ಮದ ಶಾಂತಿ, ಆನಂದ ಮತ್ತು ಜ್ಞಾನದ ಬದುಕನ್ನು-ಪರಿವರ್ತಿಸುವ ಶೋಧನೆಯ ನಿಮ್ಮ ಪಯಣವನ್ನು ನಮ್ಮೊಡನೆ ಆರಂಭಿಸಲು ನಾವು ನಿಮ್ಮನ್ನು ಸ್ವಾಗತಿಸುತ್ತಿದ್ದೇವೆ
ಮೂರು ಸರಳ ಹಂತಗಳಲ್ಲಿ ವೈಎಸ್‌ಎಸ್ ಪಾಠಗಳಿಗೆ ಅರ್ಜಿ ಸಲ್ಲಿಸಿ:
ಹಂತ 1: ಒಂದು ಖಾತೆಯನ್ನು ತೆರೆಯಿರಿ.
ಹಂತ 2: ಅರ್ಜಿಯನ್ನು ಭರ್ತಿ ಮಾಡಿ.
ಹಂತ 3: ಪ್ರತಿಜ್ಞೆಯಲ್ಲಿ ಡಿಜಿಟಲಿ ಹಸ್ತಾಕ್ಷರ ಮಾಡಿ ಆನ್‌ಲೈನ್‌ನಲ್ಲಿ ಸಲ್ಲಿಸಿ.
ವೈಎಸ್ಎಸ್ ಪಾಠಗಳನ್ನು (ಮೂಲ ಸರಣಿ) 18 ಗಹನವಾದ ಪಾಠಗಳನ್ನಾಗಿ ವಿಂಗಡಿಸಲಾಗಿದೆ (ಪ್ರತಿಯೊಂದೂ ಸರಿ ಸುಮಾರು 24-40 ಪುಟಗಳು), ಇವುಗಳನ್ನು 9 ತಿಂಗಳುಗಳ ವರೆಗೆ ಪ್ರತಿ ಎರಡು ವಾರಕ್ಕೊಮ್ಮೆ ವಿದ್ಯಾರ್ಥಿಗಳು ಪಡೆಯುತ್ತಾರೆ. ಕ್ರಿಯಾ ಯೋಗಕ್ಕೆ ಅಣಿಗೊಳಿಸುವ ಎಲ್ಲ ಪ್ರಾಥಮಿಕ ಧ್ಯಾನದ ತಂತ್ರಗಳನ್ನು ಈ ಅವಧಿಯ ಅಂತ್ಯದೊಳಗೆ ಮೇಲ್ ಮಾಡಲಾಗುತ್ತದೆ.
ವೈಎಸ್‌ಎಸ್ ಪಾಠಗಳ ಮೂಲ ಸರಣಿಯ ಚಂದಾ ಶುಲ್ಕ (ಕೊರಿಯರ್/ವಿಶೇಷ ಪೋಸ್ಟ್ ಮೂಲಕ ಕಳುಹಿಸಲಾಗುವುದು) ₹1,600 ಆಗಿದ್ದು, ಇದು ಮುದ್ರಣ, ಪ್ಯಾಕಿಂಗ್ ಮತ್ತು ವಿತರಣಾ ವೆಚ್ಚವನ್ನು ಒಳಗೊಂಡಿದೆ. ಪೂರ್ಣ ಮೊತ್ತವನ್ನು ಪಾವತಿಸಲು ನಿಮಗೆ ಕಷ್ಟವಾಗುತ್ತಿದ್ದರೆ, ದಯವಿಟ್ಟು (0651) 6655 555 ಗೆ ಕರೆ ಮಾಡಿ ಅಥವಾ [email protected] ಗೆ ಇಮೇಲ್ ಮಾಡಿ (ಸೋಮವಾರದಿಂದ ಶನಿವಾರದವರೆಗೆ, ಬೆಳಿಗ್ಗೆ 9:00 ರಿಂದ ಸಂಜೆ 4:30 ರವರೆಗೆ).
ಮೇಲಿನ ಬೆಲೆಗಳು ಭಾರತಕ್ಕೆ ಮಾತ್ರ ಅನ್ವಯಿಸುತ್ತದೆ. ಬಾಂಗ್ಲಾದೇಶ, ಭೂತಾನ್, ಮಾಲ್ಡೀವ್ಸ್, ಮತ್ತು ಶ್ರೀ ಲಂಕಾ ದೇಶಗಳಿಗೆ ಚಂದಾ ದರ ₹7,500. ನೇಪಾಳದ ಪಾಠಗಳ ವಿದ್ಯಾರ್ಥಿಗಳು ಚಂದಾ ಮಾಹಿತಿಗೆ ಕೋಪುಂಡೋಲ್ ನಲ್ಲಿರುವ ನಮ್ಮ ಧ್ಯಾನ ಕೇಂದ್ರವನ್ನು ಸಂಪರ್ಕಿಸಬೇಕೆಂದು ಕೋರುತ್ತೇವೆ. ನೀವು ಇತರ ಯಾವುದೇ ದೇಶದಲ್ಲಿ ವಾಸಿಸುತ್ತಿದ್ದರೆ, ಅಥವಾ ಪಾಠಮಾಲೆಯನ್ನು ಪೂರ್ಣಗೊಳಿಸುವ ಮೊದಲೇ ಆ ದೇಶಗಳಿಗೆ ಮರಳುತ್ತಿರುವುದಾದರೆ, ನಾವು ನಿಮ್ಮನ್ನು ಸೆಲ್ಫ್-ರಿಯಲೈಝೇಶನ್ ಫೆಲೋಶಿಪ್‌ಗೆ ದಾಖಲಾಗಲು ಪ್ರೋತ್ಸಾಹಿಸುತ್ತೇವೆ.
ಈ ಬೆಲೆಯಲ್ಲಿ ನಿಮ್ಮ ಮೂಲ ಪಾಠಗಳ ಸರಣಿಯ ಚಂದಾ ಅವಧಿಯಲ್ಲಿ ವೈಎಸ್‌ಎಸ್ ಆಪ್‌ನಲ್ಲಿ ಪಾಠಗಳ ಡಿಜಿಟಲ್ ಆವೃತ್ತಿ ಮತ್ತು ಪಾಠಗಳ ಎಲ್ಲ ಸಹಾಯಕ ವಿಷಯಗಳಿಗೆ ಉಚಿತ ಪ್ರವೇಶವೂ ಸೇರಿದೆ.
ವಿಶೇಷ ಸೂಚನೆ: ಪಾಠಗಳ ಹೊಸ ಆವೃತ್ತಿಯನ್ನು ನಾವು ಸಾಧ್ಯವಾದಷ್ಟು ಕಡಿಮೆ ಬೆಲೆಗೆ ಪರಿಚಯಿಸುತ್ತಿದ್ದೇವೆ, ಪಾಠಗಳನ್ನು ಪಡೆಯಲು ಸಾಧ್ಯವಾಗದಿದ್ದವರಿಗೂ ಲಭ್ಯವಾಗುವಂತೆ ಮಾಡಲಿಕ್ಕಾಗಿ. ಪರಮಹಂಸ ಯೋಗಾನಂದರ ಕಾರ್ಯವನ್ನು ಎಲ್ಲಾ ದೇಶಗಳ ಜನರಿಗೆ ಹರಡಲು ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾದ ಅನೇಕ ಭಕ್ತಾದಿಗಳಿಂದ ನಾವು ನಿರೀಕ್ಷಿಸುವ ಉದಾರ ಬೆಂಬಲದಿಂದಾಗಿ ನಾವು ಇಷ್ಟು ಕಡಿಮೆ ಬೆಲೆಯಲ್ಲಿ ನೀಡಲು ಸಾಧ್ಯವಾಗುತ್ತಿದೆ.
ನಿಮಗೆ ಸಾಧ್ಯವಾದಲ್ಲಿ, ನೀವು ಚಂದಾದಾರರಾಗುವಾಗ ದೇಣಿಗೆಯನ್ನು ಕೊಡಲು ನೀವು ನಿರ್ಧರಿಸಿದರೆ, ಅದಕ್ಕೆ ನಾವು ಆಭಾರಿಯಾಗಿರುತ್ತೇವೆ. ಇದು ನಮ್ಮ ಸಾಮಾನ್ಯ ಕಾರ್ಯನಿರ್ವಹಣೆಯ ಖರ್ಚುವೆಚ್ಚಗಳನ್ನು ಭರಿಸಲು ಮತ್ತು ಪರಮಹಂಸ ಯೋಗಾನಂದರ ಬೋಧನೆಗಳನ್ನು ಎಲ್ಲ ನಿಷ್ಠಾವಂತ ಅನ್ವೇಷಕರಿಗೂ ತಲುಪಿಸಲು ಸಹಾಯ ಮಾಡುತ್ತದೆ.
ಮೊದಲ ಪಾಠ ಬರುವುದಕ್ಕೆ ದಯಮಾಡಿ 2 ರಿಂದ 4 ವಾರಗಳ ಅವಕಾಶ ನೀಡಿ.
“ಹೊಸ ಪಾಠಗಳಿಗೆ ನಿಮಗೆ ಧನ್ಯವಾದಗಳು, ಅವು ಬಹಳ ಸಹಾಯಕವಾಗಿವೆ, ನಾನು ಈಗ ಬೋಧನೆಗಳನ್ನು ಮತ್ತು ನಮ್ಮ ಮಹಾನ್ ಗುರುಗಳ ಆಶೀರ್ವಾದಗಳನ್ನು ಉತ್ತಮ ರೀತಿಯಲ್ಲಿ ತಿಳಿದುಕೊಳ್ಳುತ್ತಿದ್ದೇನೆ.”
– ಎಸ್. ಜೆ., ದಿಲ್ಲಿ
ಕ್ರಿಯಾ ಯೋಗ ಸಾಧಾರಣ ಉಸಿರಾಟದ ಅಭ್ಯಾಸವಲ್ಲ: ಇದು ಗೊತ್ತಿರುವ ಪ್ರಾಣಾಯಾಮ ತಂತ್ರಗಳಲ್ಲೇ ಅತ್ಯುನ್ನತವಾದುದು, ಇದರಿಂದ ನೀವು ಶರೀರದಲ್ಲಿ ಪ್ರಜ್ಞಾಪೂರ್ವಕವಾಗಿ ಪ್ರಾಣ ಶಕ್ತಿಯನ್ನು ನಿಯಂತ್ರಿಸಬಹುದು ಮತ್ತು ಬ್ರಹ್ಮಾಂಡ ಪ್ರಜ್ಞೆಯನ್ನು ಸಿದ್ಧಿಸಿಕೊಳ್ಳಬಹುದು.
— ಪರಮಹಂಸ ಯೋಗಾನಂದ
ಕ್ರಿಯಾ ಯೋಗ ದೀಕ್ಷೆಯನ್ನು ನಾನು ಯಾವಾಗ ಪಡೆಯಬಹುದು?
ಕ್ರಿಯಾ ಯೋಗದ ಉನ್ನತ ತಂತ್ರವನ್ನು ಅಭ್ಯಾಸ ಮಾಡುವ ಮೊದಲು, ಪಾಠಗಳಲ್ಲಿ ಪರಮಹಂಸ ಯೋಗಾನಂದರ ವೈಯಕ್ತಿಕ ಸೂಚನೆಗಳನ್ನು ಪಡೆದ ಮೊದಲ ಎಂಟು ತಿಂಗಳ ಅವಧಿಯಲ್ಲಿ ಮೂರು ಮೂಲ ತಂತ್ರಗಳ (ಚೈತನ್ಯದಾಯಕ, ಏಕಾಗ್ರತೆ, ಮತ್ತು ಧ್ಯಾನ) ಕಲಿಕೆ ಮತ್ತು ಅಭ್ಯಾಸದ ನಂತರ, ಯಾರಿಗೆ ಇಚ್ಛೆಯಿದೆಯೋ ಅವರು ಕ್ರಿಯಾ ಯೋಗದ ದೀಕ್ಷೆಗೆ ಅರ್ಜಿ ಸಲ್ಲಿಸಬಹುದು.
ವೈಎಸ್‌ಎಸ್ ಪಾಠಗಳು ಕ್ರಿಯಾ ಯೋಗ ಬೋಧನೆಯ ಪವಿತ್ರ ಮಾರ್ಗಸೂಚಿಗಳನ್ನು ಪಾಲಿಸುತ್ತವೆ.
ಯೋಗಿಯ ಆತ್ಮಕಥೆಯಲ್ಲಿ ಪರಮಹಂಸಜಿ, ಎಲ್ಲ ಮಾನವ ಸಂಕುಲಕ್ಕೆ ಕ್ರಿಯಾ ಯೋಗವನ್ನು ಮಹಾವತಾರ್ ಬಾಬಾಜಿ 1861ರಲ್ಲಿ ಹೇಗೆ ಪುನರಾಚರಣೆಗೆ ತಂದರು ಎಂಬ ಕಥೆಯನ್ನು ಹೇಳುತ್ತಾರೆ. ಬಾಬಾಜಿಯವರು ತಮ್ಮ ಶಿಷ್ಯ ಲಾಹಿರಿ ಮಹಾಶಯರಿಗೆ ಈ ಪುರಾತನ ವಿಜ್ಞಾನವನ್ನು ಕಲಿಸಿದರು, ಮತ್ತು ಇತರರಿಗೆ ಮುಕ್ತವಾಗಿ ಅದನ್ನು ಕಲಿಸುವದರಲ್ಲಿಯ (ಈ ಹಿಂದೆ ಹಲವಾರು ಶತಮಾನಗಳವರೆಗೆ ಮಾಡದಿದ್ದರಿಂದ) ಅವರ ಪಾತ್ರದ ಬಗ್ಗೆ ಅವರಿಗೆ ತಿಳಿಸಿದರು. ಮೊದಲಿಗೆ ಕ್ರಿಯಾ ಯೋಗ ದೀಕ್ಷೆಗೆ ಬಾಬಾಜಿ ಅತ್ಯಂತ ಉನ್ನತ ಮಾನದಂಡವನ್ನು ಇರಿಸಿದ್ದರು. ಆಗ ಲಾಹಿರಿ ಮಹಾಶಯರು ಶಿಷ್ಯತ್ವದ ಈ ಪಾರಂಪರಿಕ ಕಟ್ಟುನಿಟ್ಟಿನ ಅವಶ್ಯಕತೆಗಳನ್ನು ಸಡಿಲಗೊಳಿಸಬೇಕೆಂದು ಬಾಬಾಜಿಯವರನ್ನು ಕೋರಿದರು. “ಹಾಗೇ ಆಗಲಿ. ದೈವೇಚ್ಛೆಯೇ ನಿನ್ನ ಮೂಲಕ ನುಡಿದಿದೆ. ನೆರವಿಗಾಗಿ ಯಾರು ನಿನ್ನ ಬಳಿ ಬಂದು ನಮ್ರತೆಯಿಂದ ಬೇಡುತ್ತಾರೋ ಅಂಥವರೆಲ್ಲರಿಗೂ ಕ್ರಿಯಾಯೋಗವನ್ನುಪದೇಶಿಸು,” ಎಂದರು ದಯಾರ್ದಹೃದಯಿಗಳಾದ ಬಾಬಾಜಿ.
1949ರಲ್ಲಿ ಎಸ್‌ಆರ್‌ಎಫ್ ಮದರ್ ಸೆಂಟರ್‌ನಲ್ಲಿ ಶಿಷ್ಯರಿಗೆ ಹೇಳುತ್ತಾ ಪರಮಹಂಸಜಿ ಇದರ ಬಗ್ಗೆ ಹೆಚ್ಚಿನ ವಿವರಣೆಯನ್ನು ಕೊಟ್ಟರು: “ಕ್ರಿಯಾಯೋಗದಿಂದ ಜನಸಾಮಾನ್ಯರೂ ಪ್ರಯೋಜನ ಪಡೆಯಬೇಕೆಂಬ ಕಾರಣದಿಂದ ಸರ್ವಸಂಗ ಪರಿತ್ಯಾಗ ಮತ್ತು ಸಂನ್ಯಾಸದಂತಹ ಪ್ರಾಚೀನ ಕಾಲದ ನಿರ್ಬಂಧಗಳನ್ನು ಬಾಬಾಜಿ ತೆಗೆದುಹಾಕಿದ್ದರೂ ಲಾಹಿರಿ ಮಹಾಶಯರಾಗಲಿ ಅವರ ಆಧ್ಯಾತ್ಮಿಕ ಮಾರ್ಗದ ಎಲ್ಲ ಶಿಷ್ಯ ಪರಂಪರೆಯವರಾಗಲಿ (ವೈಎಸ್ಎಸ್/ಎಸ್ಆರ್‌ಎಫ್ ಗುರುಗಳು) ಉಪದೇಶವನ್ನು ಬಯಸಿ ಬಂದವರಿಗೆ, ಕ್ರಿಯಾಯೋಗ ಸಾಧನೆಯ ಪೂರ್ವ ಸಿದ್ಧತೆಯ ರೂಪದಲ್ಲಿ ಅವರಿಗೆ ಕೆಲವು ಕಾಲದ ಪ್ರಾರಂಭಿಕ ಆಧ್ಯಾತ್ಮಿಕ ಶಿಕ್ಷಣವನ್ನು ಕಡ್ಡಾಯವಾಗಿ ಕೊಡಬೇಕೆಂದು ಅವರು ವಿಧಿಸಿದರು.”
ಪಶ್ಚಿಮದಲ್ಲಿನ ತಮ್ಮ ಗುರಿಯ ಪ್ರಾರಂಭದ ವರ್ಷಗಳಿಂದಲೇ ಪರಮಹಂಸಜಿ, ಶ್ರದ್ಧಾವಂತ ವಿದ್ಯಾರ್ಥಿಗಳನ್ನು ಕ್ರಿಯಾ ಯೋಗದ ದೀಕ್ಷೆಗೆ ಸಿದ್ಧಮಾಡಲು ಬಾಬಾಜಿ ಅವರು ಗೊತ್ತುಪಡಿಸಿದ್ದ ಅವಶ್ಯತೆಗಳಿಗನುಗುಣವಾಗಿ ಯೋಗ ತತ್ತ್ವಗಳು ಮತ್ತು ತಂತ್ರಗಳಿಗಾಗಿ ಒಂದು ವ್ಯವಸ್ಥಿತ ಸೂಚನಾ ವಿಧಾನವನ್ನು ಅಭಿವೃದ್ಧಿಗೊಳಿಸಲು ಆರಂಭಿಸಿದರು. ಪ್ರಾರಂಭದಲ್ಲಿ ಈ ವಿಧಾನವನ್ನು ಪರಮಹಂಸಜಿ ಅವರೇ ತೆಗೆದುಕೊಳ್ಳುತ್ತಿದ್ದ ತರಗತಿಗಳಲ್ಲಿ ಮಾತ್ರ ಕಲಿಸಲಾಗುತ್ತಿತ್ತು, ಮತ್ತು ಇದರಲ್ಲಿ ಕ್ರಿಯಾ ಯೋಗದ ಸಂಪೂರ್ಣ ಪರಿಣಾಮಕಾರಿತ್ವಕ್ಕಾಗಿ ಅತ್ಯವಶ್ಯಕ ಎಂದು ಅವರು ಭಾವಿಸಿದ ಮೂರು ಪ್ರಾಥಮಿಕ ತಂತ್ರಗಳ ಅಭ್ಯಾಸವು ಸೇರಿತ್ತು: ಚೈತನ್ಯದಾಯಕ ತಂತ್ರ, ಏಕಾಗ್ರತೆಯ ಹಾಂಗ್-ಸಾ ತಂತ್ರ, ಮತ್ತು ಧ್ಯಾನದ ಓಂ ತಂತ್ರ.
1934ರಿಂದೀಚೆಗೆ ಯೋಗದಾ ಸತ್ಸಂಗದ ಪಾಠಗಳಲ್ಲಿ ಮೇಲಿನ ಎಲ್ಲ ಮೂರು ತಂತ್ರಗಳ ವಿಸ್ತೃತ ಸೂಚನೆಗಳನ್ನು ಕೊಡಲಾಗುತ್ತಿದೆ. ಭಗವಂತನೆಡೆಯ ದಾರಿಯೇ ತಮ್ಮ ವೈಯಕ್ತಿಕ ಗುರಿ ಎಂದು ಕ್ರಿಯಾ ಯೋಗದ ವಿಜ್ಞಾನದೆಡೆಗೆ ಸೆಳೆಯಲ್ಪಟ್ಟ ವೈಎಸ್‌ಎಸ್ ಪಾಠಗಳ ವಿದ್ಯಾರ್ಥಿಗಳಿಗೆ, ಪರಮಹಂಸಜಿ ಕ್ರಿಯಾ ಯೋಗ ತಂತ್ರದ ಅಭ್ಯಾಸಕ್ಕಾಗಿ ದೀಕ್ಷೆಯನ್ನು ನೀಡಿದರು. ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾದ ಮೂಲಕ ನೀಡಲಾಗುತ್ತಿರುವ ಈ ಪವಿತ್ರ ದೀಕ್ಷೆ, ವಿದ್ಯಾರ್ಥಿ ಮತ್ತು ಪರಮಹಂಸ ಯೋಗಾನಂದರ ನಡುವೆ ಗುರು-ಶಿಷ್ಯ ಸಂಬಂಧವನ್ನು ಹುಟ್ಟುಹಾಕುತ್ತದೆ.
ಗುರು-ಶಿಷ್ಯ ಸಂಬಂಧವನ್ನು, “ಬಹಳ ವೈಯಕ್ತಿಕ ಹಾಗೂ ಖಾಸಗಿ ಆಧ್ಯಾತ್ಮಿಕ ಸಂಬಂಧ…ಶಿಷ್ಯನಿಗೆ ಸಂಬಂಧಿಸಿದಂತೆ ನಿಷ್ಠಾವಂತ ಆಧ್ಯಾತ್ಮಿಕ ಪ್ರಯತ್ನ ಮತ್ತು ಗುರುಗಳು ದಯಪಾಲಿಸಿದ ದಿವ್ಯಾನುಗ್ರಹದ ಒಂದು ಸಮ್ಮಿಲನ,” ಎಂದು ಪರಮಹಂಸ ಯೋಗಾನಂದರು ವಿವರಿಸಿದ್ದಾರೆ.
ಭಗವಂತನಲ್ಲಿರುವ ನಿನ್ನ ಆನಂದದ ಹೊರತು ನಾನು ಬೇರೆ ಏನನ್ನೂ ಕೇಳುವುದಿಲ್ಲ. ಮತ್ತು ಭಗವಂತನ ಅರಿವು ಮತ್ತು ಆನಂದದ ಹೊರತು ಬೇರೇನನ್ನೂ ನೀನು ನನ್ನಿಂದ ಕೇಳಬೇಡ.
— ಪರಮಹಂಸ ಯೋಗಾನಂದ
ಯೋಗದಾ ಸತ್ಸಂಗ ಬೋಧನೆಗಳ ಪ್ರಾಥಮಿಕ ಕೇಂದ್ರ ಬಿಂದು, ಅನವಶ್ಯಕ ಸಿದ್ಧಾಂತಗಳಿಲ್ಲದ ತಂತ್ರ. ಪಾಠಗಳಲ್ಲಿ ವಿವರಿಸಿರುವ ಸತ್ಯಗಳು ಸಾರ್ವತ್ರಿಕವಾಗಿ ಕಾರ್ಯತಃ ಮಾಡಬಲ್ಲಂಥವು. ಅವುಗಳ ಸ್ಪಷ್ಟ ಹಾಗು ಸರಳ ನಿರೂಪಣೆ, ಅತ್ಯಂತ ಸಂಕೀರ್ಣವಾದ ಸತ್ಯಗಳನ್ನು ಕೂಡ ಯುವಕರು ಮತ್ತು ವಯಸ್ಕರು ಒಂದೇ ತೆರನಾಗಿ ತಮ್ಮ ದಿನನಿತ್ಯದ ಜೀವನದಲ್ಲಿ ಅನಾಯಾಸವಾಗಿ ಅರಿಯಬಹುದಂಥದ್ದಾಗಿದೆ ಮತ್ತು ಸುಲಭವಾಗಿ ಅಳವಡಿಸಿಕೊಳ್ಳಬಲ್ಲಂಥದ್ದಾಗಿದೆ. ಅತ್ಯಂತ ಕಾರ್ಯನಿರತನಾದ ವ್ಯಕ್ತಿ ಕೂಡ ಈ ಆದರ್ಶಗಳನ್ನು ಪಾಲಿಸಬಹುದು ಮತ್ತು ಆಚರಣೆಗೆ ತರಬಹುದು, ಏಕೆಂದರೆ, ತಂತ್ರಗಳ ಅಭ್ಯಾಸಕ್ಕೆ ಹೆಚ್ಚು ಕಡಿಮೆ ಪ್ರತಿ ದಿನ ಕೇವಲ ಸ್ವಲ್ಪ ಸಮಯ ಮಾತ್ರ ಬೇಕಾಗುತ್ತದೆ.
— ಪರಮಹಂಸ ಯೋಗಾನಂದ
ಮೂರು ಸರಳ ಹಂತಗಳಲ್ಲಿ ವೈಎಸ್‌ಎಸ್ ಪಾಠಗಳಿಗೆ ಅರ್ಜಿ ಸಲ್ಲಿಸಿ:
ಹಂತ 1: ಒಂದು ಖಾತೆಯನ್ನು ತೆರೆಯಿರಿ.
ಹಂತ 2: ಅರ್ಜಿಯನ್ನು ಭರ್ತಿ ಮಾಡಿ.
ಹಂತ 3: ಪ್ರತಿಜ್ಞೆಯನ್ನು ಡಿಜಿಟಲಿ ಹಸ್ತಾಕ್ಷರ ಮಾಡಿ ಆನ್‌ಲೈನ್‌ನಲ್ಲಿ ಸಲ್ಲಿಸಿ.
ಭಾರತದಿಂದ ಹೊರಗೆ ಹಾಗು ನೆರೆಹೊರೆಯ ದೇಶಗಳವರ ಗಮನಕ್ಕೆ:
ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ ಪರಮಹಂಸ ಯೋಗಾನಂದರ ಬೋಧನೆಗಳನ್ನು ಭಾರತ, ಬಾಂಗ್ಲಾದೇಶ, ಭೂತಾನ್, ಮಾಲ್ಡೀವ್ಸ್, ನೇಪಾಳ ಮತ್ತು ಶ್ರೀ ಲಂಕಾದಲ್ಲಿ ಪ್ರಸಾರ ಮಾಡುತ್ತಿದೆ. ಈ ದೇಶಗಳನ್ನು ಬಿಟ್ಟು ನೀವು ಬೇರೆ ದೇಶದಲ್ಲಿ ವಾಸಿಸುತ್ತಿದ್ದರೆ, ದಯವಿಟ್ಟು ಈ ಪಾಠಗಳಿಗೆ ಸೆಲ್ಫ್-ರಿಯಲೈಝೇಷನ್ ಫೆಲೋಷಿಪ್ (ಎಸ್‌ಆರ್‌ಎಫ್) ಮೂಲಕ ಅರ್ಜಿ ಸಲ್ಲಿಸಿ. ಎಸ್‌ಆರ್‌ಎಫ್ ನಮ್ಮ ಸೋದರ ಸಂಸ್ಥೆ, ತಮ್ಮ ಬೋಧನೆಗಳನ್ನು ಪ್ರಪಂಚದ ಇತರ ಎಲ್ಲ ಭಾಗಗಳಲ್ಲೂ ಪ್ರಸಾರ ಮಾಡಲು ಪರಮಹಂಸಜಿ ಇದನ್ನು 1920ರಲ್ಲಿ ಸ್ಥಾಪಿಸಿದರು. ವೈಎಸ್‌ಎಸ್ ಪಾಠಗಳು ಮತ್ತು ಎಸ್‌ಆರ್‌ಎಫ್ ಪಾಠಗಳ ವಿಷಯ ವಸ್ತುಗಳು ಒಂದೇ ಆಗಿವೆ.
ವೈಎಸ್ಎಸ್ ಪಾಠಗಳನ್ನು (ಮೂಲ ಸರಣಿ) 18 ಗಹನವಾದ ಪಾಠಗಳನ್ನಾಗಿ ವಿಂಗಡಿಸಲಾಗಿದೆ (ಪ್ರತಿಯೊಂದೂ ಸರಿ ಸುಮಾರು 24-40 ಪುಟಗಳು), ಇವುಗಳನ್ನು 9 ತಿಂಗಳುಗಳ ವರೆಗೆ ಪ್ರತಿ ಎರಡು ವಾರಕ್ಕೊಮ್ಮೆ ವಿದ್ಯಾರ್ಥಿಗಳು ಪಡೆಯುತ್ತಾರೆ. ಕ್ರಿಯಾ ಯೋಗದ ಪೂರ್ವಭಾವಿ ಎಲ್ಲ ಪ್ರಾಥಮಿಕ ಧ್ಯಾನದ ತಂತ್ರಗಳನ್ನು ಈ ಅವಧಿಯ ಅಂತ್ಯದೊಳಗೆ ಮೇಲ್ ಮಾಡಲಾಗುತ್ತದೆ.
ವೈಎಸ್‌ಎಸ್ ಪಾಠಗಳ ಮೂಲ ಸರಣಿಯ ಚಂದಾ ಶುಲ್ಕ (ಕೊರಿಯರ್/ವಿಶೇಷ ಪೋಸ್ಟ್ ಮೂಲಕ ಕಳುಹಿಸಲಾಗುವುದು) ₹1,600 ಆಗಿದ್ದು, ಇದು ಮುದ್ರಣ, ಪ್ಯಾಕಿಂಗ್ ಮತ್ತು ವಿತರಣಾ ವೆಚ್ಚವನ್ನು ಒಳಗೊಂಡಿದೆ. ಪೂರ್ಣ ಮೊತ್ತವನ್ನು ಪಾವತಿಸಲು ನಿಮಗೆ ಕಷ್ಟವಾಗುತ್ತಿದ್ದರೆ, ದಯವಿಟ್ಟು (0651) 6655 555 ಗೆ ಕರೆ ಮಾಡಿ ಅಥವಾ [email protected] ಗೆ ಇಮೇಲ್ ಮಾಡಿ (ಸೋಮವಾರದಿಂದ ಶನಿವಾರದವರೆಗೆ, ಬೆಳಿಗ್ಗೆ 9:00 ರಿಂದ ಸಂಜೆ 4:30 ರವರೆಗೆ).
ಮೇಲಿನ ಬೆಲೆಗಳು ಭಾರತಕ್ಕೆ ಮಾತ್ರ ಅನ್ವಯಿಸುತ್ತದೆ. ಬಾಂಗ್ಲಾದೇಶ, ಭೂತಾನ್, ಮಾಲ್ಡೀವ್ಸ್ ಮತ್ತು ಶ್ರೀ ಲಂಕಾದ ಚಂದಾ ದರ INR 7,500 ನೇಪಾಳದ ಪಾಠಗಳ ವಿದ್ಯಾರ್ಥಿಗಳು ಚಂದಾ ಮಾಹಿತಿಗೆ ಕೋಪುಂಡೋಲ್ ನಲ್ಲಿರುವ ನಮ್ಮ ಧ್ಯಾನ ಕೇಂದ್ರವನ್ನು ಸಂಪರ್ಕಿಸಬೇಕೆಂದು ಕೋರುತ್ತೇವೆ.ನೀವು ಇತರ ಯಾವುದೇ ದೇಶದಲ್ಲಿ ವಾಸಿಸುತ್ತಿದ್ದರೆ, ಅಥವಾ ಪಾಠಮಾಲೆಯನ್ನು ಪೂರ್ಣಗೊಳಿಸುವ ಮೊದಲೇ ಆ ದೇಶಗಳಿಗೆ ಮರಳುತ್ತಿರುವುದಾದರೆ, ನಾವು ನಿಮ್ಮನ್ನು ಸೆಲ್ಫ್-ರಿಯಲೈಝೇಶನ್ ಫೆಲೋಶಿಪ್‌ಗೆ ದಾಖಲಾಗಲು ಪ್ರೋತ್ಸಾಹಿಸುತ್ತೇವೆ.
ಈ ಬೆಲೆಯಲ್ಲಿ ನಿಮ್ಮ ಮೂಲ ಪಾಠಗಳ ಸರಣಿಯ ಚಂದಾ ಅವಧಿಯಲ್ಲಿ ವೈಎಸ್‌ಎಸ್ ಆಪ್‌ನಲ್ಲಿ ಪಾಠಗಳ ಡಿಜಿಟಲ್ ಆವೃತ್ತಿ ಮತ್ತು ಪಾಠಗಳ ಎಲ್ಲ ಸಹಾಯಕ ವಿಷಯಗಳಿಗೆ ಉಚಿತ ಪ್ರವೇಶವೂ ಸೇರಿದೆ.
ವಿಶೇಷ ಸೂಚನೆ: ಪಾಠಗಳ ಹೊಸ ಆವೃತ್ತಿಯನ್ನು ನಾವು ಸಾಧ್ಯವಾದಷ್ಟು ಕಡಿಮೆ ಬೆಲೆಗೆ ಪರಿಚಯಿಸುತ್ತಿದ್ದೇವೆ, ಪಾಠಗಳನ್ನು ಪಡೆಯಲು ಸಾಧ್ಯವಾಗದಿದ್ದವರಿಗೂ ಲಭ್ಯವಾಗುವಂತೆ ಮಾಡಲಿಕ್ಕಾಗಿ. ಪರಮಹಂಸ ಯೋಗಾನಂದರ ಕಾರ್ಯವನ್ನು ಎಲ್ಲಾ ದೇಶಗಳ ಜನರಿಗೆ ಹರಡಲು ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾದ ಅನೇಕ ಭಕ್ತಾದಿಗಳಿಂದ ನಾವು ನಿರೀಕ್ಷಿಸುವ ಉದಾರ ಬೆಂಬಲದಿಂದಾಗಿ ನಾವು ಇಷ್ಟು ಕಡಿಮೆ ಬೆಲೆಯಲ್ಲಿ ನೀಡಲು ಸಾಧ್ಯವಾಗುತ್ತಿದೆ.
ನಿಮಗೆ ಸಾಧ್ಯವಾದಲ್ಲಿ, ನೀವು ಚಂದಾದಾರರಾಗುವಾಗ ದೇಣಿಗೆಯನ್ನು ಕೊಡಲು ನೀವು ನಿರ್ಧರಿಸಿದರೆ, ಅದಕ್ಕೆ ನಾವು ಆಭಾರಿಯಾಗಿರುತ್ತೇವೆ. ಇದು ನಮ್ಮ ಸಾಮಾನ್ಯ ಕಾರ್ಯನಿರ್ವಹಣೆಯ ಖರ್ಚುವೆಚ್ಚಗಳನ್ನು ಭರಿಸಲು ಮತ್ತು ಪರಮಹಂಸ ಯೋಗಾನಂದರ ಬೋಧನೆಗಳನ್ನು ಎಲ್ಲ ನಿಷ್ಠಾವಂತ ಅನ್ವೇಷಕರಿಗೂ ತಲುಪಿಸಲು ಸಹಾಯ ಮಾಡುತ್ತದೆ.
ಮೊದಲ ಪಾಠ ಬರುವುದಕ್ಕೆ ದಯಮಾಡಿ 2 ರಿಂದ 4 ವಾರಗಳ ಅವಕಾಶ ನೀಡಿ.
“ಹೊಸ ಪಾಠಗಳಿಗೆ ನಿಮಗೆ ಧನ್ಯವಾದಗಳು, ಅವು ಬಹಳ ಸಹಾಯಕವಾಗಿವೆ, ನಾನು ಈಗ ಬೋಧನೆಗಳನ್ನು ಮತ್ತು ನಮ್ಮ ಮಹಾನ್ ಗುರುಗಳ ಆಶೀರ್ವಾದಗಳನ್ನು ಉತ್ತಮ ರೀತಿಯಲ್ಲಿ ತಿಳಿದುಕೊಳ್ಳುತ್ತಿದ್ದೇನೆ.”
– ಎಸ್. ಜೆ., ದಿಲ್ಲಿ
ಆಧ್ಯಾತ್ಮಿಕ ಮೇರುಕೃತಿ ಯೋಗಿಯ ಆತ್ಮಕಥೆಯ ಲೇಖಕರಾದ ಪರಮಹಂಸ ಯೋಗಾನಂದರ ಬೋಧನೆಗಳ ಮೂಲಕ ಒಂದು ಬದುಕು-ಪರಿವರ್ತಿಸುವ, ಆತ್ಮವನ್ನು ಜಾಗೃತಗೊಳಿಸುವ ಶಾಂತಿ, ಆನಂದ ಮತ್ತು ಜ್ಞಾನವನ್ನು ಅನುಭವಿಸಿ.
ಎಸ್‌ಆರ್‌ಎಫ್/ವೈಎಸ್‌ಎಸ್ ಆಪ್ ಪ್ರತಿಯೊಬ್ಬರಿಗಾಗಿ ಇದೆ — ನೀವು ಪರಮಹಂಸ ಯೋಗಾನಂದರ ಬೋಧನೆಗಳಿಗೆ ಹೊಚ್ಚ ಹೊಸಬರಾಗಿರಲಿ ಅಥವಾ ದಶಕಗಳಿಂದ ನಿಮ್ಮನ್ನು ನೀವು ಈ ಮಹಾನ್ ಗುರುಗಳ ಜ್ಞಾನದಲ್ಲಿ ತಲ್ಲೀನಗೊಳಿಸಿಕೊಂಡಿರಲಿ. ಧ್ಯಾನ, ಕ್ರಿಯಾ ಯೋಗ ವಿಜ್ಞಾನ, ಮತ್ತು ಒಂದು ಆಧ್ಯಾತ್ಮಿಕ ಸಮತೋಲಿತ ಬದುಕನ್ನು ಬಾಳುವ ಕಾರ್ಯೋಪಯೋಗಿ ಮಾರ್ಗಗಳನ್ನು ಕಲಿಯಲು ಬಯಸುವ ಯಾರಿಗಾದರೂ ಕೂಡ.
ನಿರೂಪಣೆಗಳು:
ವೈಎಸ್ಎಸ್/ಎಸ್‌ಆರ್‌ಎಫ್ ಕ್ರಿಯಾ ಯೋಗ ಬೋಧನಗೆಳನ್ನು ನಿಮ್ಮ ದಿನನಿತ್ಯದ ಬದುಕಿನಲ್ಲಿ ಅಳವಡಿಸಿಕೊಳ್ಳಲು ಈ ಆಪ್‌ನಲ್ಲಿ ನಿಮ್ಮ ಪಾಠಗಳ ಡಿಜಿಟಲ್ ಆವೃತ್ತಿಗಳೊಂದಿಗೆ ವೈವಿಧ್ಯಮಯ ಸಮೃದ್ಧ ಮಲ್ಟಿಮೀಡಿಯಾ ವಸ್ತುಗಳೂ ಸೇರಿವೆ.
ಸೇರಿದಂತೆ:
ನೀವು ವೈಎಸ್‌ಎಸ್/ಎಸ್‌ಆರ್‌ಎಫ್‌ನ ಪಾಠಗಳ ವಿದ್ಯಾರ್ಥಿಯಾಗಿದ್ದಲ್ಲಿ, ಆಪ್‌ನಲ್ಲಿ ಪಾಠಗಳನ್ನು ನೋಡಲು ದಯವಿಟ್ಟು ಸರಿಯೆಂದು ಪರಿಶೀಲಿಸಿದ ನಿಮ್ಮ ಖಾತೆಯ ಮಾಹಿತಿಯನ್ನು ಉಪಯೋಗಿಸಿ.
ವೈಎಸ್ಎಸ್ ಪಾಠಗಳ ವಿದ್ಯಾರ್ಥಿಗಳು ಡೆಸ್ಕ್‌ಟಾಪ್ ಆಪ್ ಮೇಲೂ ಕೂಡ ವೈಎಸ್‌ಎಸ್ ಪಾಠಗಳನ್ನು ಮತ್ತು ಸಹಾಯಕ ವಿಷಯಗಳನ್ನು ನೋಡಬಹುದು:
ಈ ಹೊಸ ಅದ್ಭುತ ಆಪ್ ಅಭಿವೃದ್ಧಿ ಪಡಿಸಿದ್ದಕ್ಕಾಗಿ ನಿಮಗೆ ತುಂಬ ತುಂಬ ಧನ್ಯವಾದಗಳು. ಇದರಲ್ಲಿರುವ ಅನೇಕ ಕಾರ್ಯಚಟುವಟಿಕೆಗಳ ಬಗ್ಗೆ ನಾನು ಬಹಳ ಉತ್ಸಾಹಿತನಾಗಿದ್ದೇನೆ. ಪಾಠಗಳನ್ನು ಓದಲು, ಮುಖ್ಯವಾದ ವಿಷಯಗಳನ್ನು ಗುರುತುಮಾಡಿಕೊಳ್ಳಲು ಮತ್ತು ಫ್ಲ್ಯಾಷ್ ಕಾರ್ಡ್ ಸೃಷ್ಟಿಸಲು ಎಷ್ಟು ಸುಂದರವಾಗಿದೆ. ಮತ್ತು ಈ ಹೊಸ ಆಪ್ನಿಂದಾಗಿ, ಈಗ ಭಗವಂತ ನನ್ನ ದೈನಂದಿನ ಬದುಕಿನಲ್ಲೂ ಕೂಡ ಬಹಳ ಬಹಳ ಅಸ್ತಿತ್ವದಲ್ಲಿದ್ದಾನೆ ಎಂದು ನಾನು ಭಾವಿಸುತ್ತೇನೆ. ಬಿಡುವಿನ ಸ್ವಲ್ಪ ಸಮಯದಲ್ಲೇ ನಾನು ಶೀಘ್ರವಾಗಿ ನನ್ನ ಫ್ಲ್ಯಾಷ್ ಕಾರ್ಡ್ ನೋಡಬಹುದು ಮತ್ತು ನನ್ನ ಜೀವನದಲ್ಲಿ ಯಾವುದು ಅಗತ್ಯವಾದದ್ದು ಅಥವಾ ಆ ಕ್ಷಣದಲ್ಲಿ ನಾನು ಯಾವುದರ ಮೇಲೆ ಕೇಂದ್ರೀಕರಿಸಬೇಕು ಎಂಬುದನ್ನು ನೆನಪಿಗೆ ತಂದುಕೊಳ್ಳಬಹುದು. ಅನುಗ್ರಹದ ಈ ನಿಧಿಗೆ ನನ್ನ ಅನಂತಾನಂತ ಅಭಿನಂದನೆಗಳು!
ಬಹಳ ಆನಂದದಿಂದ ಇಂದು ನಾನು ಈ ಇಮೇಲ್ ಕಳಿಸುತ್ತಿದ್ದೇನೆ. ಕಣ್ಣು ಕಾಣದ ಜನರಿಗೂ ಕೂಡ ಹೊಸ ಎಸ್ಆರ್ಎಫ್ ಆಪ್ ಈಗ ಲಭ್ಯವಿದೆ ಎಂಬುದನ್ನು ನಾನು ನಿಮಗೆ ತಿಳಿಸಲಿಚ್ಛಿಸುತ್ತೇನೆ. ಇದು ಸಂಪೂರ್ಣವಾಗಿ ಅದ್ಭುತವಾದದ್ದು, ಮತ್ತು ಈ ಕೊಡುಗೆಯ ಪ್ರಮಾಣದಿಂದ ನನಗೆ ಈಗಲೂ ಮಾತೇ ಹೊರಡದಂತಾಗಿದೆ ಎಂದು ನಾನು ಒಪ್ಪಿಕೊಳ್ಳಲೇಬೇಕು. ಇತ್ತೀಚಿನ ಬೆಳವಣಿಗೆಗಳಿಂದಾಗಿ ಒಂದು “ಡಾಕ್ಯುಮೆಂಟ್ ರೀಡರ್” ಬದಲಿಗೆ “ಸ್ಕ್ರೀನ್ ರೀಡರ್”ನ ಅವಶ್ಯಕತೆ ಇರುವಂತಹ ನಮ್ಮಂತಹವರಿಗೆ ಆಪ್ ಸುಲಭವಾಗಿ ಸಿಗುವಂತಾಗಿದೆ. ಈ ಆಪ್ನ ಮೂಲಕ ನೀಡಲಾಗುತ್ತಿರುವ ಧ್ಯಾನಗಳು ಮತ್ತು ಇತರ ಎಸ್ಅರ್ಎಫ್/ವೈಎಸ್ಎಸ್ ಕಾರ್ಯಕ್ರಮಗಳು ದೃಷ್ಟಿಮಾಂದ್ಯರಿಗೂ ಸಿಗುವಂತಾಗಿದೆ. ಎಂದಿನಂತೆ, ನಾವು ಕೇಳಿಕೊಳ್ಳಬಹುದು ಎಂದು ಅಂದುಕೊಂಡಿದ್ದಕ್ಕಿಂತಲೂ ಹೆಚ್ಚಿನದನ್ನು ನಮ್ಮ ಗುರುಗಳು ನಮಗೆ ಹೃದಯ ವೈಶಾಲ್ಯದಿಂದ ಉದಾರವಾಗಿ ನೀಡಿದ್ದಾರೆ.
ನಾನು ಆಪ್ ಸೂಚನೆ ನೋಡಿದೆ ಮತ್ತು ಪರಿಷ್ಕರಣೆ ಭಾರಿ ಪ್ರಮಾಣದ ಪ್ರಗತಿ ಎಂದು ನಾನು ಹೇಳಲೇಬೇಕು. ಹಿಂದಿನದರಲ್ಲಿ ಇರಬೇಕಿತ್ತೆಂದು ನಾನು ಬಯಸಿದ ಎಲ್ಲವೂ ಇದರಲ್ಲಿವೆ — ವಿಷಯವನ್ನು ಅಗಲಿಸಿ ನೋಡುವುದು, ಓದಿಗಾಗಿ ಪ್ರಮುಖ ಭಾಗಗಳನ್ನು ನೋಡಲು ಸಹಾಯ (ನನ್ನ ಮಿತಿಮೀರಿದ ಅಪೇಕ್ಷೆಗಳಿಗಿಂತಲೂ ಅತ್ಯುತ್ತಮ), ಬರಹದಿಂದ ಮಾತಿಗೆ, ಮತ್ತು ಎಲ್ಲ ಲಿಂಕ್ಗಳೂ ಸುಲಭವಾಗಿ ಸಿಗುವಂತೆ ಎಲ್ಲಿ ಬೇಕೋ ಅಲ್ಲಿವೆ, ನಿಜಕ್ಕೂ ಸುಂದರ. ನಾನು ಈಗಾಗಲೇ ಎಂದಿಗಿಂತ ಹೆಚ್ಚು ಓದಿನ ಸಮಯವನ್ನು ಕಳೆದಿದ್ದೇನೆ. ವಿಶೇಷವಾಗಿ, ಈಗ ನಾನು ಬಣ್ಣ ಹಚ್ಚಿ ವರ್ಗೀಕರಿಸಿ ಮತ್ತು ಬೇಕಾದ್ದನ್ನು ಮಾತ್ರ ನೋಡುವ ನನ್ನ ಗುರುತಿಸಿರುವ ಪ್ರಮುಖ ಭಾಗಗಳನ್ನು ಮೇಲಿಂದ ಕೆಳಗೆ ನೋಡುತ್ತಾ. ಇದು ದೃಢೀಕರಣಗಳ ನನ್ನ ವಿಶಿಷ್ಟ ಭಾಗಗಳಿಗೆ ಒಂದು ಬಣ್ಣವನ್ನು ಹಾಕಲು ಆಸ್ಪದ ಕೊಡುತ್ತದೆ, ಮತ್ತು ಅವನ್ನು ಒಂದು ನಿರಂತರ ಅಡೆತಡೆಯಿಲ್ಲದ ಪಟ್ಟಿಯನ್ನಾಗಿ ನೋಡಲು! ಇದೇ ಒಂದು ನಿಧಿ! ನಾನು ವರ್ಷಾವಧಿಗಳಿಂದ ಮಾಡಿದ ಆಪ್ಗಳ ಪರಿಷ್ಕರಣೆಯ ಬಗ್ಗೆ ಯೋಚಿಸುತ್ತಿರುತ್ತೇನೆ, ಆದರೆ ಎಸ್ಆರ್ಎಫ್, ಒಂದೇ ಅತ್ಯಂತ ಪ್ರಭಾವಶಾಲಿಯಾದ ಪರಿಷ್ಕರಣೆಯನ್ನು ತಂದಿದೆ. ನಿಮಗೆ ಧನ್ಯವಾದಗಳು!
ಈಗ ನನ್ನ ಪಾಠಗಳನ್ನು ಕಂಪ್ಯೂಟರ್ ಮೇಲೆ ಓದಲು ಸಾಧ್ಯವಾಗಿಸಿದ್ದಕ್ಕೆ ನಾನು ಬಹಳ ಆಭಾರಿಯಾಗಿದ್ದೇನೆ. ಪ್ರತಿಯೊಂದನ್ನೂ ಎಷ್ಟು ಸುಂದರವಾಗಿ ಪ್ರಸ್ತುತಪಡಿಸಲಾಗಿದೆ, ಈ ತಂತ್ರಜ್ಞಾನದಿಂದ ಬರುತ್ತಿರುವ ಎಲ್ಲ ಆಶೀರ್ವಾದಗಳಿಗೆ ಹೊಂದಿಕೊಳ್ಳುವುದೇ ನನಗೆ ಬಹಳ ಕಷ್ಟವಾಗಿದೆ!
ಈಗಾಗಲೇ ಪರಿಚಿತವಿರುವ ಎಸ್ಆರ್ಎಫ್/ವೈಎಸ್‌ಎಸ್ ಆಪ್ ತೆರೆಯುತ್ತೇನೆ. ನನಗೊಂದು ಸೂಚನೆ ಸಿಗುತ್ತದೆ: ಹೊಸ ಪರಿಷ್ಕರಣೆ ಲಭ್ಯವಿದೆ. ಆಪ್ ಸ್ಟೋರ್ನಲ್ಲಿ “ವಾಟ್ ಈಸ್ ನ್ಯೂ – ಏನು ಹೊಸದು” ವಿಭಾಗವನ್ನು ನಾನು ಓದಲು ಅರಂಭಿಸುತ್ತೇನೆ ಮತ್ತು ಈ ಹೊಸ ಪರಿಷ್ಕರಣೆಯಿಂದ ನನ್ನ ಮನಸ್ಸು ಹುಚ್ಚೇಳುತ್ತದೆ (3.0.0 ಆವೃತ್ತಿ). ಎಷ್ಟೊಂದು ಹೊಸ ವೈಶಿಷ್ಟ್ಯಗಳು!
ಆಪ್ನ ಈ ಹೊಚ್ಚ ಹೊಸ ಆವೃತ್ತಿಯನ್ನು ನಾನು ನಿಜವಾಗಿಯೂ ಇಷ್ಟಪಡುತ್ತೇನೆ – ಧ್ಯಾನವನ್ನು ಅಭ್ಯಾಸ ಮಾಡಲು, ಸಹ-ಭಕ್ತರೊಂದಿಗೆ ಕಲಿಯಲು ಮತ್ತು ಸಂಪರ್ಕ ಸಾಧಿಸಲು ಹಾಗೂ ಎಸ್ಆರ್ಎಫ್ನಿಂದ ಇತ್ತೀಚಿನ ಸಮಾಚಾರವನ್ನು ಪಡೆದುಕೊಳ್ಳಲು ಎಷ್ಟೊಂದು ಹೆಚ್ಚು ವೈಶಿಷ್ಟ್ಯಗಳಿವೆ.
ಈ ಆಪ್ನ ಪರಿಷ್ಕೃತ ಆವೃತ್ತಿ ನಿಜವಾಗಿಯೂ ಅದ್ಭುತವಾಗಿದೆ. ಎಲ್ಲ ವಿಷಯಗಳನ್ನೂ ಒಂದೇ ಪುಟದಲ್ಲಿ ತಂದಿರುವುದು ನಿಜವಾಗಿಯೂ ಅತ್ಯುತ್ಕೃಷ್ಟವಾಗಿದೆ. ಅತ್ಯದ್ಭುತವಾಗಿದೆ.
ಪರಿಷ್ಕರಿಸಿದ ಆಪ್ ಬಹಳ ಪ್ರಿಯವಾಗಿದೆ, ವಿಶೇಷವಾಗಿ ಟಿಟಿಎಸ್ [ಬರಹದಿಂದ ಮಾತಿಗೆ]!
ಆಪ್‌ಗೆ ಸಂಬಂಧಿಸಿದ ಪದೇ ಪದೇ ಕೇಳುವ ಕೆಲವು ಪ್ರಶ್ನೆಗಳನ್ನು ಓದಲು ಕೆಳಗೆ ಕೊಟ್ಟಿರುವ ಲಿಂಕ್ ಮೇಲೆ ಒತ್ತಿ.
ಮೇಲಿನ ಪದೇ ಪದೇ ಕೇಳುವ ಪ್ರಶ್ನೆಗಳು (ಏಫ್‌ಎಕ್ಯೂ) ನಿರ್ದಿಷ್ಟವಾಗಿ ಎಸ್‌ಆರ್‌ಎಫ್/ವೈಎಸ್‌ಎಸ್ ಆಪ್‌ಗೆ ಸಂಬಂಧಪಟ್ಟಿವೆ, ನೀವು ವೈಎಸ್‌ಎಸ್ ಮತ್ತು ಈ ಬೋಧನೆಗಳ ಬಗ್ಗೆ ಏಫ್‌ಎಕ್ಯೂ ನೋಡಬೇಕೆಂದಿದ್ದರೆ ದಯವಿಟ್ಟು ನಮ್ಮ ಏಫ್‌ಎಕ್ಯೂ ಪುಟಕ್ಕೆ ಭೇಟಿ ನೀಡಿ.
ವೈಎಸ್‌ಎಸ್ ಕನ್ನಡ ಪಾಠಗಳಿಗೆ ಯಾರು ಅರ್ಜಿ ಸಲ್ಲಿಸಬಹುದು?
ಹೊಸ ಅರ್ಜಿದಾರರು ಹಾಗೂ ಪ್ರಸ್ತುತ ಪಾಠಗಳ ವಿದ್ಯಾರ್ಥಿಗಳು, ಅವರು ಯಾವ ದೇಶದಲ್ಲೇ ವಾಸಿಸುತ್ತಿರಲಿ, ಕನ್ನಡ ಪಾಠಗಳಿಗೆ ಅರ್ಜಿ ಸಲ್ಲಿಸಬಹುದು.
ವೈಎಸ್‌ಎಸ್ ಕನ್ನಡ ಪಾಠಮಾಲೆಗೆ ಚಂದಾ ಶುಲ್ಕ ಎಷ್ಟಿದೆ?
ಕನ್ನಡ ಪಾಠಗಳ ಮೂಲ ಪಾಠಮಾಲೆಯು ಈ ಕೆಳಗಿನ ದರಗಳಲ್ಲಿ ಲಭ್ಯವಿದೆ:
ಭಾರತದ ನಿವಾಸಿಗಳಿಗೆ:
ಭಾರತದ ಹೊರಗಿನ ನಿವಾಸಿಗಳಿಗೆ:
ಚಂದಾದಾರರು ಪಾಠಗಳ ಡಿಜಿಟಲ್ ಆವೃತ್ತಿಯನ್ನು, ಪಾಠಗಳಲ್ಲಿನ ಎಲ್ಲಾ ಪೂರಕ ಸಾಮಗ್ರಿಗಳನ್ನೂ ಒಳಗೊಂಡಂತೆ, ಆ್ಯಪ್ ನಲ್ಲಿ ಉಚಿತವಾಗಿ ಪಡೆಯಬಹುದು.
ದಯವಿಟ್ಟು ಗಮನಿಸಿ: ನಿಮಗೆ ಪೂರ್ಣ ಮೊತ್ತವನ್ನು ಪಾವತಿಸಲು ಕಷ್ಟವಾಗುತ್ತಿದ್ದರೆ, ದಯವಿಟ್ಟು [email protected] ಗೆ ಇಮೇಲ್ ಮಾಡಿ ಅಥವಾ ಸೋಮವಾರದಿಂದ ಶನಿವಾರದವರೆಗೆ, ಬೆಳಗ್ಗೆ 9:00 ರಿಂದ ಸಂಜೆ 4:30 ರವರೆಗೆ (ಭಾರತೀಯ ಕಾಲಮಾನ), (0651) 6655 555 ಕ್ಕೆ ಕರೆ ಮಾಡಿ.
ವೈಎಸ್‌ಎಸ್ ಕನ್ನಡ ಪಾಠಗಳಿಗೆ ನಾನು ಹೇಗೆ ಅರ್ಜಿ ಸಲ್ಲಿಸಬಹುದು?
ಭಕ್ತರು ಕೆಳಗೆ ನೀಡಲಾದ ಯಾವುದೇ ಒಂದು ವಿಧಾನವನ್ನು ಅನುಸರಿಸಿ ಅರ್ಜಿ ಸಲ್ಲಿಸಬಹುದು:
ಹೊಸ ಅರ್ಜಿದಾರರು (ಪ್ರಸ್ತುತ ವೈಎಸ್‌ಎಸ್ ಪಾಠಗಳ ಸದಸ್ಯರಲ್ಲದವರು)
ಪ್ರಸ್ತುತ ವೈಎಸ್‌ಎಸ್ ಪಾಠಗಳ ಸದಸ್ಯರು
ಪಾಠಗಳ ಡಿಜಿಟಲ್ ಆವೃತ್ತಿಯನ್ನು ಹೇಗೆ ಪ್ರವೇಶಿಸಬಹುದು?
ಪಾಠಗಳನ್ನು ಎಸ್‌ಆರ್‌ಎಫ್ / ವೈಎಸ್‌ಎಸ್ ಆ್ಯಪ್ ಮೂಲಕ ಆನ್‌ಲೈನ್‌ನಲ್ಲಿ ಓದಬಹುದು. ಭಕ್ತರ ಲಾಗಿನ್ ವಿವರಗಳೊಂದಿಗೆ, ಆನ್‌ಲೈನ್ ವೆಬ್ ಪೋರ್ಟಲ್ ಆದ study.yssofindia.org ಗೆ ಲಾಗ್ ಇನ್ ಮಾಡುವ ಮೂಲಕವೂ ಅವುಗಳನ್ನು ಪ್ರವೇಶಿಸಬಹುದು.
ನಾನು ಕ್ರಿಯಾ ಯೋಗಕ್ಕೆ ಅರ್ಜಿ ಸಲ್ಲಿಸಲು ಬಯಸುತ್ತೇನೆ. ಅದಕ್ಕಾಗಿ ನಾನು ಕನ್ನಡ ಪಾಠಗಳಿಗೆ ಚಂದಾದಾರನಾಗಬೇಕೇ?
ಕ್ರಿಯಾ ಯೋಗಕ್ಕೆ ಅರ್ಜಿ ಸಲ್ಲಿಸಲು ಇಚ್ಛಿಸುವವರು ವೈಎಸ್‌ಎಸ್ ಪಾಠಗಳ ಹೊಸ ಮೂಲಭೂತ ಸರಣಿಯನ್ನು (ಇಂಗ್ಲಿಷ್, ಕನ್ನಡ, ತೆಲುಗು ಅಥವಾ ತಮಿಳು ಭಾಷೆಗಳಲ್ಲಿ) ಅಧ್ಯಯನ ಮಾಡುವುದು ಕಡ್ಡಾಯವಾಗಿದೆ.
ನಾನು ಒಬ್ಬ ಕ್ರಿಯಾಯೋಗಿ. ನಾನು ಕನ್ನಡದಲ್ಲಿ ಕ್ರಿಯಾ ಪಾಠಗಳಿಗೆ ಚಂದಾದಾರನಾಗಬಹುದೇ?
ದಯವಿಟ್ಟು ಗಮನಿಸಿ, ವೈಎಸ್‌ಎಸ್ ಪಾಠಗಳ ಕನ್ನಡ ಮೂಲಭೂತ ಸರಣಿಗೆ ನೋಂದಣಿ ಪ್ರಾರಂಭವಾದ ನಂತರ, ಕನ್ನಡದಲ್ಲಿನ ಹೊಸ ಕ್ರಿಯಾ ಪಾಠಗಳು ಲಭ್ಯವಾಗಲು ಸುಮಾರು 9 ತಿಂಗಳುಗಳು ಬೇಕಾಗಬಹುದು.
ನೀವು ಈಗಾಗಲೇ ವೈಎಸ್ಎಸ್ ಕ್ರಿಯಾಯೋಗಿಯಾಗಿದ್ದರೆ, ಕನ್ನಡ ಭಾಷೆಯಲ್ಲಿನ ಹೊಸ ಮೂಲಭೂತ ಸರಣಿಯನ್ನು ಮೊದಲು ಅಧ್ಯಯನ ಮಾಡದೆಯೇ, ನೀವು ಹೊಸ ಕನ್ನಡ ಕ್ರಿಯಾ ಪಾಠಗಳನ್ನು ವಿನಂತಿಸಬಹುದು.
ಆದರೆ, ನೀವು ಇನ್ನೂ ಪಾಠಗಳ ಮೂಲಭೂತ ಸರಣಿಯನ್ನು ಅಧ್ಯಯನ ಮಾಡದಿದ್ದರೆ, ಮೂಲಭೂತ ಸರಣಿಗೆ ನೊಂದಾಯಿಸಿಕೊಳ್ಳಲು ನಾವು ಬಲವಾಗಿ ಶಿಫಾರಸು ಮಾಡುತ್ತೇವೆ, ಏಕೆಂದರೆ ಹೊಸ ಪಾಠಗಳು ಮಾನವ ಅಸ್ತಿತ್ವದ ವಿವಿಧ ಆಯಾಮಗಳ ಕುರಿತು – ಶಕ್ತಿ ಸಂಚಲನ ವ್ಯಾಯಾಮಗಳು, ಹಾಂಗ್-ಸಾ, ಮತ್ತು ಓಂ ತಂತ್ರಗಳನ್ನು ಒಳಗೊಂಡಂತೆ – ಹೆಚ್ಚು ಆಳವಾದ ಮಾರ್ಗದರ್ಶನವನ್ನು ನೀಡುತ್ತವೆ.
ನನಗೆ ಇಂಗ್ಲಿಷ್ ತಿಳಿದಿಲ್ಲ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ?
ಡಿವೋಟಿ ಪೋರ್ಟಲ್‌ನ ಮುಖಪುಟ ಮತ್ತು ಅರ್ಜಿ ನಮೂನೆ ಈಗ ಕನ್ನಡದಲ್ಲಿ ಲಭ್ಯವಿದೆ.
ಡಿವೋಟಿ ಪೋರ್ಟಲ್‌ನಲ್ಲಿ:
ದಯವಿಟ್ಟು ಗಮನಿಸಿ: ಡಿವೋಟಿ ಪೋರ್ಟಲ್‌ನ ಇಂಗ್ಲಿಷ್ ಆವೃತ್ತಿಯಲ್ಲಿಯೂ ಸಹ, ಕನ್ನಡ ಪಾಠಗಳ ಅರ್ಜಿ ನಮೂನೆ ಕನ್ನಡದಲ್ಲಿ ಲಭ್ಯವಿದೆ.
ವಿವಿಧ ಬಳಕೆದಾರರಿಗೆ ಸನ್ನಿವೇಶಗಳು
ಪ್ರಕರಣ 1: ವೈಎಸ್‌ಎಸ್ ಪಾಠಗಳ ವಿದ್ಯಾರ್ಥಿಯಲ್ಲದವರು – ಮೊದಲ ಬಾರಿಗೆ ಅರ್ಜಿ ಸಲ್ಲಿಸುವವರು
ಪ್ರಕರಣ 2: ವೈಎಸ್‌ಎಸ್ ಪಾಠಗಳ ವಿದ್ಯಾರ್ಥಿಯಲ್ಲದವರು – ಸಹವರ್ತಿ ಅರ್ಜಿ
ಪ್ರಕರಣ 3: Aಈಗಾಗಲೇ ವೈಎಸ್‌ಎಸ್ ಪಾಠಗಳ ವಿದ್ಯಾರ್ಥಿಯಾಗಿದ್ದು, ದೃಢೀಕರಿಸಿದ ವೈಎಸ್‌ಎಸ್ ಡಿವೋಟಿ ಪೋರ್ಟಲ್ ಖಾತೆಯನ್ನು ಹೊಂದಿಲ್ಲ
ಮೊದಲು, ನಿಮ್ಮ ಖಾತೆಯನ್ನು ದೃಢೀಕರಿಸಿ, ನಂತರ ಭಕ್ತರ ಪಾಠಗಳ ಚಂದಾದಾರಿಕೆಯ ಸ್ಥಿತಿಯನ್ನು ಅವಲಂಬಿಸಿ ಪ್ರಕರಣ 4 ರಲ್ಲಿನ ಸನ್ನಿವೇಶಗಳಲ್ಲಿ ಒಂದನ್ನು ಅನುಸರಿಸಿ.
ಪ್ರಕರಣ 4: ದೃಢೀಕರಿಸಿದ ಡಿವೋಟಿ ಪೋರ್ಟಲ್ ಖಾತೆಯನ್ನು ಹೊಂದಿರುವ ಪ್ರಸ್ತುತ ವೈಎಸ್‌ಎಸ್ ಪಾಠಗಳ ವಿದ್ಯಾರ್ಥಿ
ಪ್ರಕರಣ 5: ಪ್ರಸ್ತುತ ಎಸ್‌ಆರ್‌ಎಫ್ ಪಾಠಗಳ ವಿದ್ಯಾರ್ಥಿಯಾಗಿದ್ದು, ವೈಎಸ್‌ಎಸ್ ಕನ್ನಡ ಪಾಠಗಳಿಗೆ ಚಂದಾದಾರರಾಗಲು ಇಚ್ಛಿಸುವವರು
ಎಸ್‌ಆರ್‌ಎಫ್ ಭಕ್ತರು ಹೊಸ ವೈಎಸ್‌ಎಸ್ ಪಾಠಗಳ ವಿದ್ಯಾರ್ಥಿಯಾಗಿ ಅರ್ಜಿ ಸಲ್ಲಿಸಬಹುದು ಮತ್ತು ಕನ್ನಡ ಪಾಠಗಳಿಗೆ ಚಂದಾದಾರರಾಗಬಹುದು.
ಅರ್ಜಿ ನಮೂನೆಯನ್ನು ಭರ್ತಿ ಮಾಡಿದ ನಂತರ:
ಎಸ್ಆರ್ಎಫ್ ಪಾಠಗಳ ವಿದ್ಯಾರ್ಥಿಗಳಿಗೆ ಚಂದಾ ಶುಲ್ಕ: