ಕ್ರಿಸ್ಮಸ್‌ ಧ್ಯಾನದ ಮೂಲ ಪುಟ — ಕ್ರಿಸ್ತ ಪ್ರಜ್ಞೆಯನ್ನು ಸ್ವೀಕರಿಸಲು ಸಿದ್ಧರಾಗಿ!

ನಾನು ನಿಮಗೆಲ್ಲಾ ಈ ವಿಶೇಷ ಆಶೀರ್ವಾದವನ್ನು ನೀಡುತ್ತಿದ್ದೇನೆ, ಕ್ರಿಸ್ಮಸ್‌ ಸಮಯದಲ್ಲಿ ನೀವು ಗಾಢವಾಗಿ ಧ್ಯಾನ ಮಾಡಿದರೆ, ನೀವು ಕ್ರಿಸ್ತನ ಉಪಸ್ಥಿತಿಯನ್ನು ಮನಗಾಣುತ್ತೀರಿ.

— ಪರಮಹಂಸ ಯೋಗಾನಂದ

ವಿಶ್ವದಾದ್ಯಂತದ ಯೋಗದಾ ಸತ್ಸಂಗ/ಸೆಲ್ಫ್‌-ರಿಯಲೈಝೇಷನ್‌ ಫೆಲೋಷಿಪ್‌ನ ಭಕ್ತಾದಿಗಳು ಮತ್ತು ಸ್ನೇಹಿತರಿಗೆ ವರ್ಷಾಂತ್ಯದ ರಜಾ ದಿನಗಳಲ್ಲಿ ತುಂಬಾ ಸ್ವಾರಸ್ಯಕರವಾದವುಗಳಲ್ಲಿ ಒಂದೆಂದರೆ ಇಡೀ ದಿನದ ಕ್ರಿಸ್ಮಸ್‌ ಧ್ಯಾನ. 1931ರಲ್ಲಿ ಪರಮಹಂಸ ಯೋಗಾನಂದರು ಉದ್ಘಾಟಿಸಿದ ಮತ್ತು ಹಲವಾರು ವರ್ಷಗಳ ಕಾಲ ವೈಯಕ್ತಿಕವಾಗಿ ನಡೆಸಿಕೊಡುತ್ತಿದ್ದ ಒಂದು ಪರಂಪರೆ.

ಪ್ರತಿ ವರ್ಷ ಡಿಸೆಂಬರ್‌ ಮಧ್ಯದಲ್ಲಿ ವೈಎಸ್‌ಎಸ್‌/ಎಸ್‌ಆರ್‌ಎಫ್‌ ಆಶ್ರಮಗಳು, ಕೇಂದ್ರಗಳು ಮತ್ತು ಮಂಡಳಿಗಳು 8 ಘಂಟೆಗಳ ಕಾಲದ ಧ್ಯಾನವನ್ನು ಆಯೋಜಿಸುತ್ತಾರೆ

  • ಭಗವಂತನ ಅವತಾರವಾಗಿ ಯೇಸು ಕ್ರಿಸ್ತನ ಜನನವನ್ನು ಗೌರವಿಸುವ ಸಲುವಾಗಿ, ಹಾಗೂ
  • ಯೇಸು ಹಾಗೂ ಮುಕ್ತರಾದ ಇತರ ಮಹಾನ್‌ ಪುರುಷರಲ್ಲಿ ಸಂಪೂರ್ಣವಾಗಿ ಅಭಿವ್ಯಕ್ತಗೊಂಡಿದ್ದ ಅದೇ ಸರ್ವವ್ಯಾಪಿ ಕ್ರಿಸ್ತ ಪ್ರಜ್ಞೆಯ (ಕೂಟಸ್ಥ ಚೈತನ್ಯ ಅಥವಾ ಕೃಷ್ಣ ಪ್ರಜ್ಞೆ) ನಮ್ಮೊಳಗಿನ ಅನುಭವಕ್ಕೆ ಆಳವಾಗಿ ಧುಮುಕಲು.

ಈ ಧ್ಯಾನದ ವಿವರಗಳನ್ನು ತಿಳಿದುಕೊಳ್ಳಲು ದಯವಿಟ್ಟು ನಿಮಗೆ ಹತ್ತಿರದಲ್ಲಿರುವ ವೈಎಸ್‌ಎಸ್‌ ವಿಭಾಗವನ್ನು ಸಂಪರ್ಕಿಸಿ.

ಈ ವಾಸ್ತವವಾದ ಉತ್ಕರ್ಷ ಹಾಗೂ ಶಕ್ತಿದಾಯಕ ಅನುಭವಕ್ಕೆ ನಮ್ಮೊಡನೆ ಭಾಗಿಯಾಗಿ ಎಂದು ನಾವು ದೀರ್ಘ ಕಾಲದ ಭಕ್ತಾದಿಗಳು ಹಾಗೂ ವೈಎಸ್‌ಎಸ್‌/ಎಸ್‌ಆರ್‌ಎಫ್‌ನ ಬೋಧನೆಗಳಿಗೆ ಹೊಸಬರಾದ ಇಬ್ಬರಿಗೂ ಪ್ರೇರಿಸುತ್ತೇವೆ.

ರಜಾದಿನಗಳ ಸಾಮುದಾಯಿಕ ಉತ್ಸವಾಚರಣೆಗಳ ಮುನ್ನ, ಪರಮಹಂಸರು ಹೆಸರಿಸಿದ, ಈ “ಆಧ್ಯಾತ್ಮಿಕ ಕ್ರಿಸ್ಮಸ್” ನಿಂದ ಹೆಚ್ಚಿನ ಪ್ರಯೋಜನವನ್ನು ಪಡೆದುಕೊಳ್ಳಲು ಇಡೀ ದಿನದ ಧ್ಯಾನಕ್ಕೆ ತಯಾರಿ ಮಾಡಿಕೊಳ್ಳುವುದು ಒಳ್ಳೆಯದು.

ವರ್ಷದ ಈ ಸಮಯದಲ್ಲಿ ನಿಮಗೆ ಲಭ್ಯವಿರುವ ಮಹತ್ತರ ಅನುಗ್ರಹಗಳಿಗೆ ಗ್ರಹಣಶೀಲರಾಗುವುದಕ್ಕೆ ನಿಮ್ಮ ಪ್ರಜ್ಞೆಯನ್ನು ಶ್ರುತಿಗೂಡಿಸಿಕೊಳ್ಳಲು ಈಗಲೇ ಹೇಗೆ ಆರಂಭಿಸಬೇಕು ಎಂಬುದರ ಬಗ್ಗೆ ಪ್ರಯೋಜನಕಾರಿ ಉಪಾಯಗಳನ್ನು ನೀವು ಈ ಪುಟದಲ್ಲಿ ಕಾಣುತ್ತೀರಿ:

  • ಪರಮಹಂಸ ಯೋಗಾನಂದರಿಂದ ಒಂದು ಕ್ರಿಸ್ಮಸ್‌ ಸಂದೇಶ
  • ಎಸ್‌ಆರ್‌ಎಫ್‌ ಅಧ್ಯಕ್ಷರುಗಳಿಂದ ಸ್ಫೂರ್ತಿ (ಬರಹ, ಆಡಿಯೋ ಮತ್ತು ವೀಡಿಯೋ)
  • ನಿಮ್ಮ ಧ್ಯಾನಗಳನ್ನು ಆಳವಾಗಿಸುವ ಮಾರ್ಗಗಳು (ಆಡಿಯೋ)
  • ಕ್ರಿಸ್ಮಸ್‌ ಸ್ಮರಣಾರ್ಥ ಧ್ಯಾನದಲ್ಲಿ ಭಾಗಿಯಾಗಿ — ವೈಎಸ್‌ಎಸ್‌ ಆನ್‌ಲೈನ್‌ ಧ್ಯಾನ ಕೇಂದ್ರ
ಲೈಟ್‌ಹೌಸ್‌-ಆಸ್ತಿ

ಪರಮಹಂಸ ಯೋಗಾನಂದರಿಂದ ಒಂದು ಕ್ರಿಸ್ಮಸ್‌ ಸಂದೇಶ

ಇಲ್ಲಿ ಪ್ತಸ್ತುತ ಪಡಿಸಿರುವುದು, ಯೇಸುವಿನ ಮೂಲ ಬೋಧನೆಗಳ ಮೇಲಿನ ಪರಮಹಂಸಜೀಯವರ ದಿವ್ಯಜ್ಞಾನ ನೀಡುವ ವ್ಯಾಖ್ಯಾನವಾದ, “ದಿ ಸೆಕಂಡ್‌ ಕಮಿಂಗ್‌ ಆಫ್‌ ಕ್ರೈಸ್ಟ್‌: ದಿ ರಿಸರೆಕ್ಷನ್‌ ಆಫ್‌ ದಿ ಕ್ರೈಸ್ಟ್‌ ವಿತಿನ್‌ ಯು”ನ ಪರಿಶಿಷ್ಟ ಭಾಗದಲ್ಲಿ ಪ್ರಕಟಿತವಾದ ಪರಮಹಂಸ ಯೋಗಾನಂದರ ಕ್ರಿಸ್ಮಸ್‌ ಸಂದೇಶಗಳಲ್ಲೊಂದು. ಚಿಕ್ಕದಾದರೂ ಬಹಳ ಶಕ್ತಿಯುತವಾದ ಈ ಸಂದೇಶದಲ್ಲಿ, ಅವರು ಈ ಋತುವಿನಲ್ಲಿ — ಮತ್ತು ಎಲ್ಲ ಸಮಯದಲ್ಲೂ — ಯೇಸುವಿನ ಎಲ್ಲರ ಮೇಲಿನ ಪ್ರೇಮ ಮತ್ತು ದಿವ್ಯ ಕ್ರಿಸ್ತ ಪ್ರಜ್ಞೆಯಲ್ಲಿ ಆಂತರಿಕವಾಗಿ ಒಂದಾದ ಉದಾಹರಣೆಯನ್ನು ತೆಗೆದುಕೊಂಡು ನಮ್ಮ ಬದುಕಿನ ಪ್ರತಿಯೊಂದು ಅಂಶವನ್ನೂ ಆಧ್ಯಾತ್ಮೀಕರಿಸಿಕೊಳ್ಳಬೇಕು ಎಂದು ನಮಗೆ ಪ್ರೇರೇಪಿಸುತ್ತಾರೆ.

ಒಬ್ಬ ನೈಜ ಕ್ರಿಸ್ತರಾಗಿ

“ತೊಟ್ಟಿಲಲ್ಲಿ ಮತ್ತೊಮ್ಮೆ ಮಲಗಿರುವ ಅನಂತ ಹಸುಳೆ ಕ್ರಿಸ್ತನನ್ನು ಅವಲೋಕಿಸಲು ದಿನ ನಿತ್ಯದ ಧ್ಯಾನದಿಂದ ನಿಮ್ಮ ಪ್ರಜ್ಞೆಯ ತೊಟ್ಟಿಲನ್ನು ಸಿದ್ಧಪಡಿಸಿಕೊಳ್ಳಿ, ಇದೇ ನಿಮಗೆ ನನ್ನ ಕ್ರಿಸ್ಮಸ್‌ ಗೀತೆ. ಈ ಪವಿತ್ರ ಋತುವಿನಲ್ಲಿ, ಪ್ರತಿ ದಿನವೂ ದಿವ್ಯ ಸಂಸರ್ಗದ ನೈಜ ಕ್ರಿಸ್ಮಸ್‌ ಸುಸಮಯವಾಗುವವರೆಗೂ ಗಾಢವಾಗಿ ಮತ್ತು ದೀರ್ಘವಾಗಿ ಪ್ರಾರ್ಥಿಸಿ.

“ಆತ್ಮದ ಗುಣಗಳಾದ ಪ್ರೀತಿ, ಶಾಂತಿ ಕ್ಷಮೆ ಮತ್ತು ಆನಂದಗಳೆಂಬ ಆಧ್ಯಾತ್ಮಿಕ ಉಡುಗೊರೆಗಳನ್ನು ಪರಸ್ಪರರೊಡನೆ ಮತ್ತು ಎಲ್ಲ ನೈಜ ಆತ್ಮಗಳೊಂದಿಗೆ ಸಾರ್ವತ್ರಿಕ ಭ್ರಾತೃತ್ವದ ಭಾವನೆಯಲ್ಲಿ ಹಂಚಿಕೊಳ್ಳುತ್ತಾ ಭೌತಿಕ ಉಡುಗೊರೆಗಳಿಂದ ತುಂಬಿದ ಕ್ರಿಸ್ಮಸ್‌ ವೃಕ್ಷದ ಸುತ್ತ ಸಾಂಘಿಕ ಉತ್ಸವಾಚರಣೆಯನ್ನು ಆಧ್ಯಾತ್ಮೀಕರಿಸಿ.

“ಯುದ್ಧಗಳು ಮತ್ತು ವೈಮನಸ್ಯದ ಅಂಧಕಾರವನ್ನು ಹೊಡೆದೋಡಿಸಲು ವಿಶ್ವದ ಎಲ್ಲ ರಾಷ್ಟ್ರಗಳಿಗೆ ದೇಶಭಕ್ತಿಯ ಬೆಂಕಿಗೂಡಿನಲ್ಲಿ ಪ್ರೇಮದ ಒಂದು ಮಂತ್ರಮುಗ್ಧಗೊಳಿಸುವ ಬೆಳಕನ್ನು ಹೊತ್ತಿಸಿ. ಕ್ರಿಸ್ತನ ಒಬ್ಬ ನೈಜ ಮಗುವಾಗಿ, ಆಂತರ್ಯದೊಳಗೆ ಒಂದು ವಿಧ್ಯುಕ್ತ ಶಪಥವನ್ನು ಮಾಡಿ: ‘ನಾನು ನನ್ನ ಜನರನ್ನು ಪ್ರೀತಿಸುವಂತೆ, ಭಗವಂತನ ಎಲ್ಲ ಜನರನ್ನೂ ಪ್ರೀತಿಸುತ್ತೇನೆ.’

ಮನೆಯಲ್ಲಿ, ಚರ್ಚಿನಲ್ಲಿ-ಮಂದಿರದಲ್ಲಿ, ಸಮಾಜದಲ್ಲಿ, ರಾಜಕಾರಣದಲ್ಲಿ, ಅಂತರರಾಷ್ಟ್ರೀಯ ಸಾಮರಸ್ಯದಲ್ಲಿ ಕ್ರಿಸ್ತನ ಒಂದುಗೂಡಿಸುವ ಪ್ರಭಾವವನ್ನು ತೋರಿ; ಆಗ ಪ್ರಭು ಯೇಸುವು ನಿಮ್ಮೊಡನಿರುತ್ತಾನೆ. ನೀವೊಬ್ಬ ಕ್ರೈಸ್ತರಾಗುವಿರಿ — ಒಬ್ಬ ಕ್ರಿಸ್ತ — ಕ್ರಿಸ್ತನೊಂದಿಗೆ ಒಂದಾಗುವಿರಿ.”

ಲೈಟ್‌ಹೌಸ್‌-ಆಸ್ತಿ

ವೈಎಸ್‌ಎಸ್‌/ಎಸ್‌ಆರ್‌ಎಫ್‌ ಅಧ್ಯಕ್ಷರುಗಳಿಂದ ಪ್ರೇರಣೆ

ಕೆಳಗೆ, ಯೋಗದಾ ಸತ್ಸಂಗ ಸೊಸೈಟಿ ಆಫ್‌ ಇಂಡಿಯಾ/ಸೆಲ್ಫ್‌-ರಿಯಲೈಝೇಷನ್‌ ಫೆಲೋಷಿಪ್‌ನ ಐದನೇ ಹಾಗೂ ಪ್ರಸ್ತುತ ಅಧ್ಯಕ್ಷರಾದ ಸ್ವಾಮಿ ಚಿದಾನಂದ ಗಿರಿಯವರ 2020ನೇ ಕ್ರಿಸ್ಮಸ್‌ ಸತ್ಸಂಗದ ವೀಡಿಯೋದ ಆಯ್ದ ಭಾಗ ಮತ್ತು ನಂತರ ಅನುಕ್ರಮವಾಗಿ ವೈಎಸ್‌ಎಸ್‌/ಎಸ್‌ಆರ್‌ಎಫ್‌ನ ಎರಡನೇ, ಮೂರನೇ ಮತ್ತು ನಾಲ್ಕನೇ ಅಧ್ಯಕ್ಷರುಗಳಿಂದ ಸ್ಫೂರ್ತಿ ಮತ್ತು ಮಾರ್ಗದರ್ಶಿತ ಧ್ಯಾನದ ಆಯ್ದ ಭಾಗಗಳನ್ನು ಕೊಡಲಾಗಿದೆ.

ಪವಿತ್ರ ರಜಾದಿನಗಳ ಆಚರಣೆಯ ಸಂದೇಶ

ಸ್ವಾಮಿ ಚಿದಾನಂದ ಗಿರಿಯವರಿಂದ

ವೈಎಸ್‌ಎಸ್‌/ಎಸ್‌ಆರ್‌ಎಫ್‌ನ ಅಧ್ಯಕ್ಷರು ಹಾಗೂ ಆಧ್ಯಾತ್ಮಿಕ ಮುಖ್ಯಸ್ಥರಾದ ಸ್ವಾಮಿ ಚಿದಾನಂದ ಗಿರಿಯವರು, ಭಗವಂತನ ಆನುಗ್ರಹವು ವ್ಯಾಪಿಸಿರುವ ರಜಾದಿನಗಳ ಪರ್ವ ಮತ್ತು ಅದರ ಪರಿವರ್ತನೀಯ ಶಕ್ತಿಯನ್ನು ಸ್ವೀಕರಿಸಲು ಹೇಗೆ ನಮ್ಮನ್ನು ನಾವು ಸಿದ್ಧಪಡಿಸಿಕೊಳ್ಳಬಹುದು ಎಂಬುದರ ಬಗ್ಗೆ ಒಂದು ವಿಶೇಷ ಸಂದೇಶವನ್ನು ಹಂಚಿಕೊಂಡಿದ್ದಾರೆ. ಅವರು ಹೊಸ ಒಡಂಬಡಿಕೆಯಿಂದ ಯೇಸುವಿನ ಜನನದ ಬಗ್ಗೆ ಒಂದು ಉದ್ಧೃತ ಭಾಗವನ್ನು ಓದಿ, ಧ್ಯಾನವನ್ನು ಅಭ್ಯಾಸ ಮಾಡುವವರಿಗೆ ಕಥೆಯ ಆಳವಾದ ಮತ್ತು ಸಾರ್ವತ್ರಿಕ ಅರ್ಥವನ್ನು ವಿವರಿಸಲು ಪರಮಹಂಸಜಿಯವರ ಜ್ಞಾನವನ್ನು ಹಂಚಿಕೊಳ್ಳುತ್ತಾರೆ.

ಈ ಪರ್ವದ ಆಂತರಿಕ ಆಧ್ಯಾತ್ಮಿಕ ಸೌಂದರ್ಯ

ಶ್ರೀ ರಾಜರ್ಷಿ ಜನಕಾನಂದರವರಿಂದ

ಪರಮಹಂಸ ಯೋಗಾನಂದರ ಪ್ರಪ್ರಥಮ ಆಧ್ಯಾತ್ಮಿಕ ಉತ್ತರಾಧಿಕಾರಿಯಾದ ರಾಜರ್ಷಿ ಜನಕಾನಂದರು, 1952ರಿಂದ 1955ರಲ್ಲಿ ಅವರು ಸ್ವರ್ಗಸ್ಥರಾಗುವವರೆಗೂ ವೈಎಸ್‌ಎಸ್‌/ಎಸ್‌ಆರ್‌ಎಫ್‌ನ ಎರಡನೇ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಈ ಕೆಳಗಿನದು 1952ರಲ್ಲಿ ರಾಜರ್ಷಿಯವರು ವೈಎಸ್‌ಎಸ್‌/ಎಸ್‌ಆರ್‌ಎಫ್‌ನ ಎಲ್ಲ ಸದಸ್ಯರಿಗೂ ನೀಡಿದ ಕ್ರಿಸ್ಮಸ್‌ ಸಂದೇಶ.

“ಈ ಪವಿತ್ರವಾದ ಕ್ರಿಸ್ಮಸ್‌ ಪರ್ವದಲ್ಲಿ ನಾನು ನಿಮಗೆಲ್ಲರಿಗೂ ನನ್ನ ಹೃದಯ ತುಂಬಿದ ಆಳವಾದ ಆನಂದಿಂದ ಶುಭಾಶಯಗಳನ್ನು ಕೋರುತ್ತೇನೆ. ಈ ಹಿಂದೆ ಮಾನವರಿಗೆ ಕ್ರಿಸ್ಮಸ್ಸಿನ ನಿಜವಾದ ಅರ್ಥವನ್ನು ಮನಗಾಣಲು ಅಗತ್ಯವಿದ್ದದ್ದು ವಿರಳ – ಯೇಸುವಿನ ಆಗಮನದಲ್ಲಿ ನಾವು ಆಚರಿಸುವ ಅವನ ಸರ್ವವ್ಯಾಪಿ ಪ್ರೇಮ, ಆನಂದ ಮತ್ತು ಕ್ರಿಸ್ತ ಪ್ರಜ್ಞೆಯ ಶಾಂತಿಯನ್ನು ಪ್ರಜ್ಞಾಪೂರ್ವಕವಾಗಿ ತಮ್ಮ ಹೃದಯಗಳಲ್ಲಿ ಸ್ವೀಕರಿಸಲು.

“ಮಹಾನ್‌ ಪುರುಷರು ಮತ್ತು ನಮ್ಮ ಗುರುಗಳಾದ ಪರಮಹಂಸ ಯೋಗಾನಂದರ ಆಶೀರ್ವಾದಗಳಿಂದ ಮತ್ತು ಅವರ ಸೆಲ್ಫ್‌-ರಿಯಲೈಝೇಷನ್‌ ಫೆಲೋಷಿಫ್‌ನ ಬೋಧನೆಗಳಿಂದ, ಈ ಪರ್ವದ ಆಂತರಿಕ ಆಧ್ಯಾತ್ಮಿಕ ಸೌಂದರ್ಯಕ್ಕೆ ನನ್ನ ಕಣ್ಣುಗಳು ತೆರೆದುಕೊಂಡವು; ಸರ್ವವ್ಯಾಪಿ ಕ್ರಿಸ್ತನ ಮಹತ್ತಾದ ಪ್ರೇಮದಿಂದ ನನ್ನ ಹೃದಯವು ತುಂಬಿಕೊಂಡಿತು.

“ಈ ದಿವ್ಯ ಪ್ರೇಮ ಮತ್ತು ಆನಂದವನ್ನು ನಿಮ್ಮೊಡನೆ ಹಂಚಿಕೊಳ್ಳುವುದು ನನ್ನ ವಿನಮ್ರ ಬಯಕೆಯಾಗಿದೆ. ನಮ್ಮೆಲ್ಲರ ಹೃದಯ ಮತ್ತು ಮನಸ್ಸುಗಳಲ್ಲಿ ನಾವೆಲ್ಲರೂ ಜಗತ್ತಿನ ಕ್ರಿಸ್ಮಸ್‌ ವೃಕ್ಷದ ಸುತ್ತ ಸೇರೋಣ ಹಾಗೂ ಯೇಸು ಕ್ರಿಸ್ತ ಮತ್ತು ನಮ್ಮೆಲ್ಲ ಗುರುಗಳೊಂದಿಗೆ, ಅವರ ಶಾಂತಿ, ಕ್ಷಮೆ ಮತ್ತು ಎಲ್ಲ ಮಾನವಕೋಟಿಯ ಮೇಲಿನ ಪ್ರೇಮದ ಸಂದೇಶವು ಗ್ರಹಣಾಕಾಂಕ್ಷಿ ಕಿವಿಗಳ ಮೇಲೆ ಬೀಳಲಿ ಎಂದು ಪ್ರಾರ್ಥಿಸೋಣ. ಎಲ್ಲ ಜನರೂ ಸತ್ಯ ಮತ್ತು ಅರಿವಿನ ಬೆಳಕಿನೆಡೆಗೆ ಎಚ್ಚರಗೊಳ್ಳಲಿ! ‘ಎಲ್ಲಕ್ಕಿಂತ ಮಹತ್ತಾಗಿ ಭಗವಂತನ ಮಹಿಮೆಯಿರಲಿ ಮತ್ತು ಭೂಮಿಯ ಮೇಲೆ ಶಾಂತಿಯಿರಲಿ ಮತ್ತು ಮಾನವರ ಮೇಲೆ ದಯೆಯಿರಲಿʼ ಎಂದು ಪ್ರತಿಯೊಂದು ಹೃದಯವು ದಿವ್ಯಕಂಠಗಳಿಂದ ಒಕ್ಕೊರಲಿನಿಂದ ಹಾಡಲಿ.’”

ಎಲ್ಲ ದಿನಗಳೂ ಕ್ರಿಸ್ಮಸ್‌ ಆಗಲಿ

ಶ್ರೀ ದಯಾ ಮಾತಾರವರಿಂದ

ಶ್ರೀ ದಯಾ ಮಾತಾ ವೈಎಸ್‌ಎಸ್/ಎಸ್‌ಆರ್‌ಎಫ್‌ನ ಮೂರನೇ ಅಧ್ಯಕ್ಷರಾಗಿದ್ದರು. 1955ರಿಂದ 2010ರಲ್ಲಿ ಅವರು ಸ್ವರ್ಗಸ್ಥರಾಗುವವರೆಗೂ ಆ ಪದವಿಯಲ್ಲಿ ಸೇವೆ ಸಲ್ಲಿಸಿದರು. ಇಲ್ಲಿ ಅವರು ಪರಮಹಂಸ ಯೋಗಾನಂದರ ಯೇಸು ಕ್ರಿಸ್ತ ಹಾಗೂ ಭಗವಾನ್‌ ಕೃಷ್ಣರ ಆಳವಾದ ಅರಿವು ಆಕೆಯ ಜೀವನದ ಮೇಲೆ ಹೇಗೆ ಪ್ರಭಾವ ಬೀರಿತು ಮತ್ತು ಎಸ್‌ಆರ್‌ಎಫ್‌ ಅಂತರರಾಷ್ಟ್ರೀಯ ಕೇಂದ್ರ ಕಾರ್ಯಾಲಯದಲ್ಲಿನ ತಮ್ಮ ಮೊದಲ ಕ್ರಿಸ್ಮಸ್‌ನ ಬಗ್ಗೆ ನೆನಪಿಸಿಕೊಳ್ಳುತ್ತಾರೆ.

ಕ್ರಿಸ್ಮಸ್‌ ಸಮಯದ ಮಾರ್ಗದರ್ಶಿತ ಧ್ಯಾನ

ಶ್ರೀ ಮೃಣಾಲಿನಿ ಮಾತಾರವರಿಂದ

2011ರಿಂದ 2017ರಲ್ಲಿ ಸ್ವರ್ಗಸ್ಥರಾಗುವವರೆಗೂ ವೈಎಸ್‌ಎಸ್‌/ಎಸ್‌ಆರ್‌ಎಫ್‌ನ ನಾಲ್ಕನೇ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಶ್ರೀ ಮೃಣಾಲಿನಿ ಮಾತಾರವರು ಡಿಸೆಂಬರ್‌ 23, 20೦2ರಲ್ಲಿ ಎಸ್‌ಆರ್‌ಎಫ್‌ ಅಂತರರಾಷ್ಟ್ರೀಯ ಕೇಂದ್ರಕಾರ್ಯಾಲಯದಲ್ಲಿ ನಡೆಸಿಕೊಟ್ಟ ಇಡೀ ದಿನದ ಕ್ರಿಸ್ಮಸ್‌ ಧ್ಯಾನದಿಂದ ಆಯ್ದ ಭಾಗಗಳು. (ಈ ಜ್ಞಾನ ಮತ್ತು ಸ್ಫೂರ್ತಿಯನ್ನು ಆಂತರ್ಯದಲ್ಲಿ ಆಳವಾಗಿ ಹೀರಿಕೊಳ್ಳುವುದಕ್ಕೆ ಸಹಾಯ ಮಾಡಲು ಇಡೀ ಧ್ಯಾನದ ಅವಧಿಯಲ್ಲಿ ಮಧ್ಯೆ ಮಧ್ಯೆ ಮೌನದ ಅವಧಿಯಿದೆ.)

ಲೈಟ್‌ಹೌಸ್‌-ಆಸ್ತಿ

ನಿಮ್ಮ ಧ್ಯಾನಗಳನ್ನು ಆಳವಾಗಿಸುವ ವಿಧಾನಗಳು

ಸ್ವಾಮಿ ಭಕ್ತಾನಂದ ಗಿರಿಯವರಿಂದ

ಸ್ವಾಮಿ ಭಕ್ತಾನಂದ ಗಿರಿಯವರು ಪರಮಹಂಸ ಯೋಗಾನಂದರ ನೇರ ಶಿಷ್ಯರಾಗಿದ್ದರು ಮತ್ತು 1971ರಿಂದ 2005ರಲ್ಲಿ ಅವರು ಸ್ವರ್ಗಸ್ಥರಾಗುವವರೆಗೂ ಕ್ಯಾಲಿಫೋರ್ನಿಯಾದ ಹಾಲಿವುಡ್ಡಿನ ಸೆಲ್ಫ್‌-ರಿಯಲೈಝೇಷನ್‌ ಫೆಲೋಷಿಫ್‌ನ ಮಂದಿರದಲ್ಲಿ ಹಿರಿಯ ಸನ್ಯಾಸಿಯಾಗಿ ಸೇವೆ ಸಲ್ಲಿಸಿದರು. ಅನೇಕ ವರ್ಷಗಳವರೆಗೆ ಎಸ್‌ಆರ್‌ಎಫ್‌ನ ಹಾಲಿವುಡ್ಡಿನ ಆಶ್ರಮ ಕೇಂದ್ರದ ಇಂಡಿಯಾ ಹಾಲಿನಲ್ಲಿ ಧ್ಯಾನದ ಬಗ್ಗೆ ವಾರ್ಷಿಕ ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದರು. ಅವರ ಪ್ರವಚನಗಳ ಒಂದು ಆಡಿಯೋ ತುಣುಕು ಇಲ್ಲಿದೆ.

ಆಡಿಯೋ ಅವಧಿ: 5 ನಿಮಿಷಗಳು

ಇದನ್ನು ಹಂಚಿಕೊಳ್ಳಿ