ಸ್ವಾಮಿ ಚಿದಾನಂದ ಗಿರಿಯವರಿಂದ ಗುರು ಪೂರ್ಣಿಮೆಯ ಸಂದೇಶ 2021

17 ಜುಲೈ, 2021

“ಓ ಅಮರ ಗುರುದೇವ, ಮೌನಿ ಭಗವಂತನ ವಾಣಿಯಾಗಿರುವುದಕ್ಕೆ ನಿಮಗೆ ಶಿರಬಾಗಿ ನಮಿಸುತ್ತೇನೆ. ಮೋಕ್ಷ ದೇಗುಲದ ದಿವ್ಯ ದ್ವಾರದೆಡೆಗೆ ನಮ್ಮನ್ನು ಕರೆದದೊಯ್ಯುವ ನಿಮಗೆ ಶಿರಬಾಗಿ ನಮಿಸುತ್ತೇನೆ.”

—ಶ್ರೀ ಶ್ರೀ ಪರಮಹಂಸ ಯೋಗಾನಂದ

ಆತ್ಮೀಯರೇ,

ಗುರು ಪೂರ್ಣಿಮೆಯ ಈ ವಿಶೇಷ ದಿನದಂದು ನಿಮಗೆ ನನ್ನ ಹೃತ್ಪೂರ್ವಕ ಶುಭಾಶಯಗಳನ್ನು ಮತ್ತು ಪ್ರೀತಿಯ ಹಾರೈಕೆಗಳನ್ನು ಕಳುಹಿಸುತ್ತಿದ್ದೇನೆ.

ಈ ದಿನ, ಶತಶತಮಾನಗಳಿಂದಲೂ ಆಧ್ಯಾತ್ಮಿಕತೆಯ ಭದ್ರಕೋಟೆಯಂತಿರುವ ಭಾರತವನ್ನು ವಿಶೇಷವಾಗಿ ಅನುಗ್ರಹಿಸಿದ, ಹಿಂದಿನ ಮತ್ತು ಇಂದಿನ, ದೈವ ಸಾಕ್ಷಾತ್ಕಾರವನ್ನು ಪಡೆದ ಎಲ್ಲಾ ಗುರುಗಳಿಗೂ ನನ್ನ ಅಭಿನಂದನೆಗಳನ್ನು ತಿಳಿಸುತ್ತೇನೆ.

ಆ ಭಗವಂತನೇ ನಮಗೆ ಮೋಕ್ಷ ಸಾಧನೆಯ ದಾರಿಯನ್ನು ತೋರಿಸಲು ಸ್ವತಃ ಕಳುಹಿಸಿದ ದಿವ್ಯ ಬೋಧಕರೂ ಮತ್ತು ಮಾರ್ಗದರ್ಶಕರೂ ಆದ ನಮ್ಮ ಪ್ರೀತಿಯ ಗುರುದೇವರಾದ, ಶ್ರೀ ಶ್ರೀ ಪರಮಹಂಸ ಯೋಗಾನಂದರಿಗೆ ವಿಶೇಷವಾಗಿ ನಮ್ಮ ಪ್ರೀತಿಯ ವಂದನೆಗಳನ್ನು ಮತ್ತು ಆಳವಾದ ಕೃತಜ್ಞತೆಗಳನ್ನು ನಾವು ಅರ್ಪಿಸೋಣ.

ಅವರ ಇರುವಿಕೆಯ ದಿವ್ಯಪ್ರಭೆಯನ್ನು ಅನುಭವಿಸಿ. ನಿಮ್ಮ ಹೃದಯದ ದ್ವಾರಗಳನ್ನು ಅವರ ಅಪರಿಮಿತ ಪ್ರೀತಿ ಹಾಗೂ ಆಶೀರ್ವಾದಗಳಿಗೆ ತೆರೆಯಿರಿ – ಆನಂದದ ಉನ್ನತ ಪ್ರಜ್ಞೆಯು ನಿಮ್ಮ ಎಲ್ಲಾ ಪ್ರಯತ್ನಗಳಿಂದ ಮೇಲೆತ್ತಿ ಆ ಪರಮ ಧ್ಯೇಯದ ಕಡೆಗೆ: ನಾವು ಅಮರರೆಂಬ ಸತ್ಯದ ಅರಿವಿನೆಡೆಗೆ, ಭಗವಂತನೊಂದಿಗೆ ಐಕ್ಯವಾಗುವುದರೆಡೆಗೆ ನಮ್ಮನ್ನು ಸೆಳೆಯಲಿ.

ಗುರುದೇವರ ಪರಿವರ್ತನಾ ಸ್ಪರ್ಶದ ಅನುಭೂತಿಯು ನಿಮಗಾಗಲಿ ಮತ್ತು ನಿಮ್ಮ ಜೀವನವನ್ನು ಅನುಗ್ರಹಿಸಲಿ.

ದೈವೀ ಪ್ರೀತಿ ಮತ್ತು ಆಶೀರ್ವಾದಗಳೊಂದಿಗೆ,

ಸ್ವಾಮಿ ಚಿದಾನಂದಗಿರಿ

ಇದನ್ನು ಹಂಚಿಕೊಳ್ಳಿ