ಮಕ್ಕಳು ಮತ್ತು ಹದಿಹರೆಯದವರಿಗಾಗಿ ವೈಎಸ್ಎಸ್ ಶಿಬಿರ — 2026

19 ಏಪ್ರಿಲ್, 2026

ಯುವ ಹೃದಯಗಳಲ್ಲಿ ದೈವೀ ಪ್ರೇಮವನ್ನು ಬೆಳೆಸುವುದು

ಶೂಲಿನಿ ಆವರಣದ ವಿಹಂಗಮ ನೋಟ

ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ (ವೈಎಸ್ಎಸ್) ಹಿಮಾಲಯದ ತಪ್ಪಲಿನಲ್ಲಿ ಮಕ್ಕಳು ಹಾಗೂ ಹದಿಹರೆಯದವರಿಗಾಗಿ ಹೊಸ ಅಖಿಲ ಭಾರತ ಬೇಸಿಗೆ ಶಿಬಿರವನ್ನು ಹರ್ಷದಿಂದ ಪ್ರಕಟಿಸುತ್ತಿದೆ.

ಸ್ಥಳ: ಶೂಲಿನಿ ವಿಶ್ವವಿದ್ಯಾಲಯ, ಸೋಲನ್, ಹಿಮಾಚಲ ಪ್ರದೇಶ

ದಿನಾಂಕ: ಮೇ 31 ರಿಂದ ಜೂನ್ 6, 2026 (ಭಾನುವಾರದಿಂದ ಶನಿವಾರದವರೆಗೆ).

12–17 ವಯೋಮಿತಿಯ ಬಾಲಕರು ಮತ್ತು ಬಾಲಕಿಯರು ಪಾಲ್ಗೊಳ್ಳಲು ಸ್ವಾಗತ.

ಮುಖ್ಯಾಂಶಗಳು

  1. ಪೋಷಕರು ಮೇಲ್ಕಂಡ ದಿನಾಂಕಗಳನ್ನು ತಮ್ಮ ದಿನದರ್ಶಿಕೆಗಳಲ್ಲಿ ಗುರುತಿಸಿಕೊಳ್ಳಲು ಕೋರಲಾಗಿದೆ. ಮಕ್ಕಳು ಹಾಗೂ ಹದಿಹರೆಯದವರು ಮೇ 30, ಶನಿವಾರದ ಮಧ್ಯಾಹ್ನದೊಳಗೆ ಶಿಬಿರದ ಸ್ಥಳಕ್ಕೆ ಆಗಮಿಸಬೇಕಾಗಿದ್ದು, ಜೂನ್ 6, ಶನಿವಾರದ ಸಂಜೆ ನಿರ್ಗಮಿಸಬಹುದು.
  2. ಎಲ್ಲಾ ತರಗತಿಗಳು ಮತ್ತು ಧ್ಯಾನಗಳು ಇಂಗ್ಲಿಷ್‌ನಲ್ಲಿ ನಡೆಯುತ್ತವೆ.
  3. ಶಿಬಿರದಲ್ಲಿ ಭಾಗವಹಿಸಲು ಅರ್ಜಿ ಸಲ್ಲಿಸಲು ಪೋಷಕರು ಮತ್ತು ಹದಿಹರೆಯದವರು ಭರ್ತಿ ಮಾಡಬೇಕಾದ ಅರ್ಜಿಯು ಈಗ ಲಭ್ಯವಿದೆ. ಭರ್ತಿ ಮಾಡುವ ಮೊದಲು ಅರ್ಜಿಯಲ್ಲಿ ನೀಡಿರುವ ಸೂಚನೆಗಳನ್ನು ದಯವಿಟ್ಟು ಓದಿ.
  4. ಅರ್ಜಿಯನ್ನು ಭರ್ತಿ ಮಾಡಲು ನಿಮಗೆ ಸಹಾಯ ಬೇಕಿದ್ದರೆ, ಶಿಬಿರದ ಅರ್ಜಿಯ ಬಗ್ಗೆ ಒಂದು ಅವಲೋಕನವನ್ನು ನೀಡುವ ಈ ವೀಡಿಯೊಗಳನ್ನು ನೀವು ವೀಕ್ಷಿಸಬಹುದು (ಇಂಗ್ಲಿಷ್ ಮತ್ತು ಹಿಂದಿಯಲ್ಲಿ). ಶಿಬಿರ ಅಥವಾ ಅರ್ಜಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಹೆಚ್ಚಿನ ಸಹಾಯ ಅಥವಾ ಪ್ರಶ್ನೆಗಳಿಗಾಗಿ, ದಯವಿಟ್ಟು ಪದೇ ಪದೇ ಕೇಳಲಾಗುವ ಪ್ರಶ್ನೆಗಳನ್ನು (ಎಫ್ಎಕ್ಯೂ) ನೋಡಿ, ಅಥವಾ ವೈಎಸ್ಎಸ್ ಸಹಾಯವಾಣಿಯನ್ನು ಸಂಪರ್ಕಿಸಿ: (0651) 6655 555 / ಇವರಿಗೆ ಬರೆಯಿರಿ: [email protected]
  5. ಅರ್ಜಿ ಅನುಮೋದನೆಯಾದಾಗ ₹5,000 ನೋಂದಣಿ ಶುಲ್ಕವನ್ನು ಪಾವತಿಸಬೇಕು. ಈ ಶುಲ್ಕವು ಒಂದು ವಾರ ಅವಧಿಯ ಶಿಬಿರದ ಸಮಯದಲ್ಲಿನ ವಸತಿ, ಊಟ ಮತ್ತು ಉಪಾಹಾರ, ಕಲೆ/ಕೈ ಕೆಲಸದ ಸಾಮಗ್ರಿಗಳು, ಕ್ರೀಡಾ ಉಪಕರಣಗಳು ಮತ್ತು ಇತರ ವ್ಯವಸ್ಥೆಗಳನ್ನು ಒಳಗೊಂಡಿರುತ್ತದೆ.
  6. ಪೋಷಕರಿಗಾಗಿ ಪ್ರಮುಖ ಮಾಹಿತಿಯನ್ನು ಒಳಗೊಂಡಿರುವ ದಾಖಲೆಯನ್ನು ನೋಡಲು ದಯವಿಟ್ಟು ಕೆಳಗಿನ ಈ ಕೊಂಡಿಯನ್ನು ಒತ್ತಿ:
    • ಶಿಬಿರದ ನೋಂದಣಿ ಶುಲ್ಕವನ್ನು ಭರಿಸಲು ಆರ್ಥಿಕ ನೆರವು
    • ವೈಎಸ್ಎಸ್ ನೋಯ್ಡಾ ಆಶ್ರಮ ಮತ್ತು ವೈಎಸ್ಎಸ್ ಚಂಡೀಗಢ ಕೇಂದ್ರದಿಂದ ಶೂಲಿನಿ ವಿಶ್ವವಿದ್ಯಾಲಯಕ್ಕೆ ಮಕ್ಕಳಿಗೆ ಉಚಿತ ಸಾರಿಗೆ ವ್ಯವಸ್ಥೆ
    • ಈ ಎರಡು ಸ್ಥಳಗಳಲ್ಲಿ ಕರೆದೊಯ್ಯುವ ಮತ್ತು ಕರೆತರುವ ದಿನಾಂಕಗಳು ಮತ್ತು ಸಮಯಗಳು
    • ಮಕ್ಕಳು ಶಿಬಿರದಲ್ಲಿರುವಾಗ ಪೋಷಕರು ಭಾಗವಹಿಸಬಹುದಾದ ಆಧ್ಯಾತ್ಮಿಕ ಶಿಬಿರಗಳ ಆಯ್ಕೆ

ಶಿಬಿರದ ಕುರಿತು

ಇದು ಶ್ರೀ ಶ್ರೀ ಪರಮಹಂಸ ಯೋಗಾನಂದರ ‘ಬದುಕುವುದು ಹೇಗೆ’ ಎಂಬ ಬೋಧನೆಗಳನ್ನು ಆಧರಿಸಿದೆ; ಅವು ಶರೀರ, ಮನಸ್ಸು ಹಾಗೂ ಆತ್ಮದ ಸಮತೋಲನಯುತ ವಿಕಾಸವನ್ನು ಉತ್ತೇಜಿಸುತ್ತವೆ.

ಇದು ವೈಎಸ್ಎಸ್ ಸನ್ಯಾಸಿಗಳ ಮಾರ್ಗದರ್ಶನದಲ್ಲಿ, ಅನುಭವಿ ಗೃಹಸ್ಥ ಶಿಷ್ಯರು ಹಾಗೂ ಸುಶಿಕ್ಷಿತ ಸ್ವಯಂಸೇವಕರ ಬೆಂಬಲದೊಂದಿಗೆ ಆಯೋಜಿಸಲಾಗಿದೆ.

ಸ್ವಾಮಿ ಈಶ್ವರಾನಂದರು ಶೂಲಿನಿ ಶಿಬಿರ ತಂಡದ ಭಾಗವಾಗಿರುವ ಸನ್ಯಾಸಿಗಳು ಮತ್ತು ಭಕ್ತರೊಂದಿಗೆ

ಶಿಬಿರ ಮತ್ತು ಆವರಣದ ವೈಶಿಷ್ಟ್ಯಗಳು

  • ಶಿಬಿರವು ಹಿಮಾಚಲ ಪ್ರದೇಶದ ಸೋಲನ್ ನ, 25 ಎಕರೆ ವಿಸ್ತೀರ್ಣದ ಶೂಲಿನಿ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆಯಲಿದೆ.
  • ಶಿಬಿರವು ಭಾರತದಲ್ಲಿರುವ ಪ್ರಮುಖ ಸಂಶೋಧನಾ-ಕೇಂದ್ರಿತ ಖಾಸಗಿ ವಿಶ್ವವಿದ್ಯಾಲಯವಾದ ಶೂಲಿನಿ ವಿಶ್ವವಿದ್ಯಾಲಯದ ಸಂಪೂರ್ಣ ಬೆಂಬಲವನ್ನು ಹೊಂದಿದೆ.
  • ಅತ್ಯಾಧುನಿಕ ಆವರಣದ ಸೌಲಭ್ಯಗಳಾದ — ವಸತಿ ನಿಲಯದ ಕೊಠಡಿಗಳು, ತರಗತಿ ಕೊಠಡಿಗಳು, ಭೋಜನ ಸೌಲಭ್ಯಗಳು, ಕ್ರೀಡಾಂಗಣಗಳು ಮತ್ತು ಸಭಾಂಗಣಗಳನ್ನು ವೈಎಸ್‌ಎಸ್ ಶಿಬಿರಕ್ಕಾಗಿ ಒದಗಿಸಲಾಗಿದೆ.
  • ಬಾಲಕ-ಬಾಲಕಿಯರ ಶಿಬಿರಗಳನ್ನು ಪ್ರತ್ಯೇಕವಾಗಿ ಆದರೆ ಒಂದೇ ಆವರಣದಲ್ಲಿ ಹಾಗೂ ಒಂದೇ ವಾರದಲ್ಲಿ ನಡೆಸಲಾಗುವುದು. ಇದರಿಂದ ಗಂಡು ಮತ್ತು ಹೆಣ್ಣು ಮಕ್ಕಳನ್ನು ಹೊಂದಿರುವ ಕುಟುಂಬಗಳಿಗೆ ತಮ್ಮ ಮಕ್ಕಳನ್ನು ಏಕಕಾಲದಲ್ಲಿ ಶಿಬಿರಕ್ಕೆ ಕಳುಹಿಸಲು ಸಾಧ್ಯವಾಗುತ್ತದೆ.
  • ಶಿಬಿರದ ಅವಧಿಯಲ್ಲಿ, ಮಕ್ಕಳು ಮತ್ತು ಹದಿಹರೆಯದವರು, ಒಂದೇ ವಯೋಮಾನದ ಆಧ್ಯಾತ್ಮಿಕ ಮಿತ್ರರ ಸಮುದಾಯವಾಗಿ, ಕಾಳಜಿಯುಳ್ಳ ಹಿರಿಯರ ಮಾರ್ಗದರ್ಶನದಲ್ಲಿ ಒಟ್ಟಾಗಿ ಇರುವರು.
ಶಿಬಿರಾರ್ಥಿಗಳಿಗೆ, ಪ್ರಕೃತಿಯಿಂದ ಆವೃತವಾದ ಆರಾಮದಾಯಕ ವಾಸ್ತವ್ಯದ ಸ್ಥಳಗಳಲ್ಲಿ ಆತಿಥ್ಯ ನೀಡಲಾಗುವುದು. ಇದು ಒಳಾಂಗಣ ಮತ್ತು ಹೊರಾಂಗಣ ಚಟುವಟಿಕೆಗಳ ಸಮತೋಲನಕ್ಕೆ ಅನುಕೂಲ ಕಲ್ಪಿಸುತ್ತದೆ.

ದೈನಂದಿನ ಕಾರ್ಯಕ್ರಮ

ಶಿಬಿರದಲ್ಲಿನ ಒಂದು ಸಾಮಾನ್ಯ ದಿನವು ಮಕ್ಕಳು ಮತ್ತು ಹದಿಹರೆಯದವರನ್ನು ವಿನೋದಭರಿತ ರೀತಿಯಲ್ಲಿ ತೊಡಗಿಸಿಕೊಳ್ಳುತ್ತಾ, ಅವರಲ್ಲಿ ಶಿಸ್ತು ಮತ್ತು ಆತ್ಮಾವಲೋಕನವನ್ನು ಮೂಡಿಸುವ ಅನೇಕ ಚಟುವಟಿಕೆಗಳಿಂದ ತುಂಬಿರುತ್ತದೆ:

  • ದೈನಂದಿನ ಸಾಮೂಹಿಕ ಧ್ಯಾನಗಳು
  • ಇಚ್ಛಾಶಕ್ತಿ, ಸ್ನೇಹ ಮತ್ತು ನಿರ್ಭಯತೆ ಮುಂತಾದ ವಿಷಯಗಳ ಕುರಿತ ‘ಜೀವಿಸುವುದು ಹೇಗೆ’ ತರಗತಿಗಳು
  • ಸಂನ್ಯಾಸಿಗಳ ನೇತೃತ್ವದ ಸತ್ಸಂಗಗಳು ಮತ್ತು ಧ್ಯಾನ ವಿಧಾನಗಳ ಪುನರಾವಲೋಕನ ತರಗತಿಗಳು
  • ಕ್ರೀಡೆಗಳು ಮತ್ತು ಆಟಗಳು
  • ಗೀತಾ ಪಠಣ
  • ಕೀರ್ತನೆ
  • ಚಲನಚಿತ್ರ ರಾತ್ರಿ
  • ಕಲೆ ಮತ್ತು ಕರಕುಶಲ ಚಟುವಟಿಕೆಗಳು
  • ಪ್ರಕೃತಿಯಲ್ಲಿ ನಡಿಗೆ
  • ಆಧ್ಯಾತ್ಮಿಕ ಮೇಳ
  • ಸಾಂಸ್ಕೃತಿಕ ಸಂಜೆ
  • ಸಮೂಹ ಚರ್ಚೆಗಳು ಮತ್ತು ಪಾತ್ರಾಭಿನಯಗಳು

ಪೋಷಕರ ಅನಿಸಿಕೆಗಳು

ಹಿಂದಿನ ವೈಎಸ್ಎಸ್ ಮಕ್ಕಳ ಶಿಬಿರಗಳ ಕುರಿತು ಕೆಲವು ಪೋಷಕರ ಅನಿಸಿಕೆಗಳನ್ನು ಕೆಳಗೆ ನೀಡಲಾಗಿದೆ:

ಮುಂದಿನ ಹಂತಗಳು

  • ಸೂಚನೆಗಳನ್ನು ಓದಲು ಮತ್ತು ಅರ್ಜಿಯನ್ನು ಭರ್ತಿ ಮಾಡಲು ದಯವಿಟ್ಟು ಇಲ್ಲಿ ಒತ್ತಿ. ನೀವು ಅರ್ಜಿಯನ್ನು ಸಲ್ಲಿಸಿದ ನಂತರ, ಮುಂದಿನ ಹಂತಗಳು ಕಾಣಿಸುತ್ತವೆ ಮತ್ತು ಅವನ್ನು ಅರ್ಜಿಯಲ್ಲಿ ನೀಡಿರುವ ಇಮೇಲ್ ವಿಳಾಸಕ್ಕೂ ಕಳುಹಿಸಲಾಗುತ್ತದೆ.
  • ಕೆಲವು ಪೋಷಕರು ಶಿಬಿರದ ಅವಧಿಯಲ್ಲಿ ದೆಹಲಿ, ನೋಯ್ಡಾ, ಚಂಡೀಗಢ, ಶಿಮ್ಲಾ, ಸೋಲನ್ ಅಥವಾ ಸಮೀಪದ ಸ್ಥಳಗಳಲ್ಲಿ ವೈಯಕ್ತಿಕ ಏಕಾಂತವಾಸ, ತೀರ್ಥಯಾತ್ರೆ ಅಥವಾ ರಜೆಯನ್ನು ಯೋಜಿಸಲು ಬಯಸಬಹುದು.

ಯೋಗದಾ ಕುಟುಂಬಗಳ ಮಕ್ಕಳು ಹಾಗೂ ಹದಿಹರೆಯದವರು ವಿಶಿಷ್ಟ ಮತ್ತು ಸಮೃದ್ಧಗೊಳಿಸುವ ಮಕ್ಕಳು ಹಾಗೂ ಹದಿಹರೆಯದವರಿಗಾಗಿ ನಡೆಯುವ ವೈಎಸ್ಎಸ್ ಶಿಬಿರದಲ್ಲಿ ಭಾಗವಹಿಸಿ, ಆಧ್ಯಾತ್ಮಿಕ ಸ್ನೇಹಗಳು, ವಿನೋದಮಯ ಚಟುವಟಿಕೆಗಳು, ಆತ್ಮಸಂಯಮ, ತರಗತಿಗಳು ಹಾಗೂ ದೇವರೊಂದಿಗೆ ವೈಯಕ್ತಿಕ ಸಂಬಂಧದ ಪುನರ್ಜಾಗೃತಿಯಿಂದ ಪ್ರಯೋಜನ ಪಡೆಯುವುದನ್ನು ನಾವು ನಿರೀಕ್ಷಿಸುತ್ತಿದ್ದೇವೆ.

ಇದನ್ನು ಹಂಚಿಕೊಳ್ಳಿ