ಜಾರ್ಖಂಡ್‌ನ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಸಂತೋಷ್ ಕುಮಾರ್ ಗಂಗ್ವಾರ್ ಅವರು ಫೆಬ್ರವರಿ 5 ರಂದು ರಾಂಚಿಯ ಯೋಗದಾ ಸತ್ಸಂಗ ಶಾಖಾ ಆಶ್ರಮಕ್ಕೆ ಭೇಟಿ ನೀಡಿದರು. ಅವರು ಪರಮಹಂಸ ಯೋಗಾನಂದಜಿ ಅವರು ಮೊದಲು ಬಳಸಿದ್ದ ಕೊಠಡಿಯಲ್ಲಿ ಗೌರವ ಸಲ್ಲಿಸಿದರು ಮತ್ತು ಸ್ಮೃತಿ ಮಂದಿರದಲ್ಲಿ ಧ್ಯಾನ ಮಾಡಿ, ಆಳವಾದ ಆಂತರಿಕ ಶಾಂತಿಯನ್ನು ಅನುಭವಿಸಿದರು.
ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ (ವೈಎಸ್ಎಸ್)ದ ಹಿರಿಯ ಸಂನ್ಯಾಸಿ ಸ್ವಾಮಿ ಈಶ್ವರಾನಂದ ಗಿರಿ ಅವರು, ವೈಎಸ್ಎಸ್ ನ ಆಧ್ಯಾತ್ಮಿಕ ಮತ್ತು ಮಾನವೀಯ ಚಟುವಟಿಕೆಗಳು, ಪವಿತ್ರ ಗುರು-ಶಿಷ್ಯ ಪರಂಪರೆ, ಹಾಗೂ ಪರಮಹಂಸ ಯೋಗಾನಂದರ ಜೀವನ-ಪರಿವರ್ತಕ ಬೋಧನೆಗಳ ಕುರಿತು ರಾಜ್ಯಪಾಲರಿಗೆ ಸಂಕ್ಷಿಪ್ತವಾಗಿ ತಿಳಿಸಿದರು. ಸಮಾಜದ ಆಧ್ಯಾತ್ಮಿಕ ಉನ್ನತಿಗೆ ವೈಎಸ್ಎಸ್ ನ ಕೊಡುಗೆಯನ್ನು ರಾಜ್ಯಪಾಲರು ಶ್ಲಾಘಿಸಿದರು.
ಮಾನ್ಯ ರಾಜ್ಯಪಾಲರಿಗೆ, ಯೋಗಿಯ ಆತ್ಮಕಥೆ, ಗಾಡ್ ಟಾಕ್ಸ್ ವಿತ್ ಅರ್ಜುನ: ದ ಭಗವದ್ಗೀತ, ಜರ್ನಿ ಟು ಸೆಲ್ಫ್-ರಿಯಲೈಸೇಷನ್, ಮತ್ತು ವೈಎಸ್ಎಸ್ ಪ್ರಕಟಿಸಿದ ದಿನದರ್ಶಿಕೆ ಯನ್ನು ಅರ್ಪಿಸಲಾಯಿತು.;
ರಾಜ್ಯಪಾಲರು, ಆಶ್ರಮಕ್ಕೆ ಭೇಟಿ ನೀಡಬೇಕೆಂಬ ತಮ್ಮ ಬಹುಕಾಲದ ಹಂಬಲವನ್ನು ಹಂಚಿಕೊಂಡರು. ಅವರು ಸ್ವಾಮಿ ಈಶ್ವರಾನಂದರನ್ನು ರಾಜಭವನಕ್ಕೆ ಭೇಟಿ ನೀಡಲು ಆಹ್ವಾನಿಸಿದರು ಮತ್ತು ಇನ್ನೊಮ್ಮೆ ಆಶ್ರಮಕ್ಕೆ ಭೇಟಿ ನೀಡಿ ಅದರ ಪ್ರಶಾಂತ ವಾತಾವರಣದಲ್ಲಿ ಹೆಚ್ಚು ಸಮಯ ಕಳೆಯುವ ತಮ್ಮ ಆಸೆಯನ್ನು ವ್ಯಕ್ತಪಡಿಸಿದರು.
ಸ್ವಾಮಿ ಈಶ್ವರಾನಂದರು ಶ್ರೀ ಗಂಗ್ವಾರ್ರವರಿಗೆ ಯೋಗಿಯ ಆತ್ಮಕಥೆ ಮತ್ತು ಗಾಡ್ ಟಾಕ್ಸ್ ವಿತ್ ಅರ್ಜುನ: ದ ಭಗವದ್ಗೀತ ಕೃತಿಗಳನ್ನು ಸಮರ್ಪಿಸಿದರು…




















