ಗುರು ಪೂರ್ಣಿಮೆಯ ಸಂದೇಶ – 2020

26 ಜೂನ್, 2020

Guru Purnima Message from Swami Chidananda Giri- 2020


“ಓ ಗುರುವೇ, ನೀವು ನನ್ನನ್ನು ದಿಗ್ಭ್ರಮೆಯ ಭೂಮಿಯಿಂದ ಶಾಂತಿಯ ಸ್ವರ್ಗಕ್ಕೆ ಎತ್ತಿದ್ದೀರಿ. ನನ್ನ ದುಃಖದ ನಿದ್ರಾವಸ್ಥೆಯು ಕೊನೆಗೊಂಡಿದೆ ಮತ್ತು ನಾನು ಆನಂದದಲ್ಲಿ ಎಚ್ಚರಗೊಂಡಿದ್ದೇನೆ.”

~ ಪರಮಹಂಸ ಯೋಗಾನಂದ

ಆತ್ಮೀಯರೇ,

ಹೃತ್ಪೂರ್ವಕ ಶುಭಾಶಯಗಳು ಮತ್ತು ಪ್ರಣಾಮಗಳು. ನಾನು ನಿಮಗೆ ಆನಂದ ಮತ್ತು ಆಶೀರ್ವಾದಗಳ ಗುರುಪೂರ್ಣಿಮೆಯ ಶುಭಾಶಯಗಳನ್ನು ಕೋರುತ್ತೇನೆ. ಈ ಮಂಗಳಕರ ದಿನದಂದು ನಾವು ಭಾರತದಲ್ಲಿ ಮತ್ತು ಪ್ರಪಂಚದಾದ್ಯಂತ ಲಕ್ಷಾಂತರ ಜನರೊಂದಿಗೆ ಮಾನವಕುಲದಲ್ಲಿ ಆಧ್ಯಾತ್ಮಿಕ ಕಿಡಿಯನ್ನು ಹೊತ್ತಿಸಿದ ಆ ದೈವಿಕ ಬೋಧಕರನ್ನು ಗೌರವಿಸಲು ಸೇರುತ್ತೇವೆ. ಅಂಥವರಲ್ಲಿ ಒಬ್ಬರು ನಮ್ಮ ಸಂಸ್ಥೆಯ ಸ್ಥಾಪಕರಾದ ಪರಮಹಂಸ ಯೋಗಾನಂದರು. ಒಬ್ಬ ಸದ್ಗುರುವಾಗಿ, ಭಗವಂತನ ಆಶೀರ್ವಾದ ಮತ್ತು ಮಾರ್ಗದರ್ಶನದ ಸರ್ವೋಚ್ಚ ವಾಹಿನಿಯಾಗಿ ಅವರು ತಮ್ಮ ಮಾರ್ಗದಲ್ಲಿ ಸಂಧಿಸಿದ ಪ್ರತಿಯೊಬ್ಬರ ಜೀವನವನ್ನೂ ಸ್ಪರ್ಶಿಸಿದರು. ಅಲ್ಲದೆ ಅವರ ಬೋಧನೆಗಳನ್ನು ಅಭ್ಯಾಸ ಮಾಡುವ ಮತ್ತು ಅವರ ಆಲೋಚನೆಗಳನ್ನು ಸಾಕಾರಗೊಳಿಸುವ ಸಾವಿರಾರು ಶಿಷ್ಯರಲ್ಲಿ ಅವರ ವಿಶೇಷ ಅನುಗ್ರಹ ಇಂದಿಗೂ ನೆಲಸಿದೆ.

ಈ ಪವಿತ್ರವಾದ ಸಂದರ್ಭದಲ್ಲಿ ನನ್ನ ಆಳವಾದ ಹೃತ್ಪೂರ್ವಕ ಶುಭಾಶಯಗಳನ್ನು ಸ್ವೀಕರಿಸಿ. ನಿಮ್ಮ ಪ್ರತಿ ದಿನವೂ ಶಾಂತಿ, ಪ್ರೀತಿ ಮತ್ತು ದೈವೀ ಆನಂದವನ್ನು ಪಸರಿಸುವ ಗುರುವಿನ ದಿನವಾಗಲಿ.

ದೇವರ ಆಶೀರ್ವಾದ ನಿಮ್ಮ ಮೇಲಿರಲಿ,

ಸ್ವಾಮಿ ಚಿದಾನಂದಗಿರಿ

ಇದನ್ನು ಹಂಚಿಕೊಳ್ಳಿ