ಶ್ರೀ ಶ್ರೀ ಪರಮಹಂಸ ಯೋಗಾನಂದರಿಂದ
ಘಂಟೆಗಳು ಹೊಸ ವರ್ಷದಲ್ಲಿ ಎಲ್ಲ ಭರವಸೆಯ ಆವರಣಗಳ ಪ್ರವೇಶದ್ವಾರಗಳಲ್ಲಿ ಘಂಟಾನಾದವನ್ನು ಮಾಡುತ್ತಿವೆ. ಸದಾ ಮುನ್ನಡೆಯುತ್ತಿರುವ ಸಮಯದ ಶವವಾಹಕರು ವಿಷಾದ, ಅನಾರೋಗ್ಯ ಮತ್ತು ನೊಂದ, ಬೆಂದ ಹಳೆಯ ಮೃತ ವರ್ಷವನ್ನು ವಿಸ್ಮರಣೆಯ ಸ್ಮಶಾನದಲ್ಲಿ ಹೂಳಲು ಸಂತೋಷದಿಂದ ತೆಗೆದುಕೊಂಡು ಹೋಗುತ್ತಿದ್ದಾರೆ. ನಿಮ್ಮ ಆತ್ಮದ ಶಕ್ತಿಯ ನೆಲದಲ್ಲಿ ಸದ್ದಿಲ್ಲದೆ ಪೇರಿಸಲು ಮತ್ತು ನಿಮ್ಮ ದೃಢನಿರ್ಧಾರ, ಉತ್ಸಾಹ ಮತ್ತು ದೃಢನಿಷ್ಠೆಯನ್ನು ದಿಗಿಲುಗೊಳಿಸಲು ಹಳೆಯ ವರ್ಷದ ಹಿಂಸಾತ್ಮಕ ಅನುಭವಗಳ ದೃಶ್ಯಾವಳಿಗಳನ್ನು ಮತ್ತೆ ಕಲ್ಪಿಸಿಕೊಳ್ಳಬೇಡಿ.
ಹೊಸ ವರ್ಷದ ದ್ವಾರಗಳ ಮೂಲಕ ಭವಿಷ್ಯದ ಸಾಧನೆಗಳ ದೂರದಲ್ಲಿ ಕಾಣುವ ವೈವಿಧ್ಯಮಯ ಚಿತ್ತಾರಗಳು ನಿಮ್ಮತ್ತ ಮಿನುಗುತ್ತಿರುವುದನ್ನು ಮತ್ತು ಅನ್ವೇಷಿಸು ಎಂದು ದಿಟ್ಟತನದಿಂದ ನಿಮ್ಮನ್ನು ಪ್ರಲೋಭನೆಗೊಳಿಸುತ್ತಿರುವುದನ್ನು ಅವಲೋಕಿಸಿ. ಸಾಧಿಸಬಲ್ಲೆ ಎಂಬ ನಿರೀಕ್ಷಣೆಯಿಂದ ಅವುಗಳನ್ನು ಸುಮ್ಮನೆ ನೋಡುವುದರಿಂದ ಏನೂ ಪ್ರಯೋಜನವಿಲ್ಲ. ಮಾನಸಿಕ ಹಾಗೂ ಶಾರೀರಿಕ ಜಡತ್ವ, ಸೃಜನಶೀಲ ಸಾಮರ್ಥ್ಯದ ಕೊರತೆ, ಸಂದೇಹ, ಭಯ, ನಿರಾಸೆ ಮತ್ತು ಅನುಚಿತ ಅಭ್ಯಾಸಗಳಂಥ ಸುಲಿಗೆಕಾರರ ವಿರುದ್ಧ ದಿವ್ಯ ನಿರ್ಧಾರದಿಂದ ಸಜ್ಜುಗೊಂಡು ದಾರಿಯಲ್ಲಿ ಅತಿ ಹೆಚ್ಚಿನ ಪವಾಡಗಳನ್ನು ಸೃಷ್ಟಿಸುತ್ತಾ ನೀವು ನಿಶ್ಯಬ್ಧವಾಗಿ ಅತ್ಯಂತ ತೀವ್ರ ಗತಿಯಲ್ಲಿ ಓಡಲು ಆರಂಭಿಸಬೇಕು.
ಮಾರ್ಗವು ಅವಕಾಶಗಳಿಂದ ಬೆಳಗುತ್ತಿರಬಹುದು ಅಥವಾ ಪರೀಕ್ಷೆಗಳಿಂದ ಕಳೆಗೆಟ್ಟಿರಬಹುದು; ಆದರೆ ನಿಮ್ಮ ಕೈ ಮೀರಿ ಪ್ರಯತ್ನಿಸುವುದನ್ನು ನೆನಪಿನಲ್ಲಿಡಿ, ಮತ್ತು ನಂತರ ನಿಮ್ಮ ಕೈಲಾದಷ್ಟನ್ನೂ ಮಾಡಿದ್ದೀರಿ ಇನ್ನು ಆಗುವುದಿಲ್ಲ ಎಂದು ನೀವು ಅಂದುಕೊಂಡಾಗ ಮತ್ತೆ, ಮತ್ತೆ ಪ್ರಯತ್ನಿಸುತ್ತಲೇ ಇರಿ. ಅಂತಹ ಒಂದು ಶ್ರಮವನ್ನು ಹಾಕಿದ ಮೇಲೆ, ನಿಗೂಢತೆಗಳ ಕತ್ತಲಿನಿಂದ ದಿವ್ಯ ಮಾರ್ಗದರ್ಶನದ ಸರ್ವ-ಪ್ರಕಾಶದ ಬೆಳಕು ನಿಮ್ಮ ಮಾರ್ಗವನ್ನು ಹೊಳೆಯುವಂತೆ ಮಾಡುತ್ತದೆ.
ಅವನ ಪ್ರಕಾಶದ ಮುಂದೆ ಎಲ್ಲ ಕತ್ತಲೂ ಹಾರಿ ಹೋಗುತ್ತದೆ ಮತ್ತು ಪರಿಜ್ಞಾನದ ಅವನ ಸಂದೇಶವಾಹಕರು ನಿಮ್ಮ ಬಾಲ ನಿರ್ಧಾರದ ಕೈಯನ್ನು ಹಿಡಿದು ನಿಮ್ಮ ಪ್ರಜ್ಞಾಪೂರ್ವಕ ಶ್ರಮಗಳನ್ನು ತಪ್ಪಿಲ್ಲದೆಯೇ, ಭಯವಿಲ್ಲದೆಯೇ ನಿಮ್ಮ ದೃಢತೆಯನ್ನು ಪರೀಕ್ಷಿಸುವ ಪರೀಕ್ಷೆಗಳ ಮೂಲಕ ಸದಾ-ಸಂತುಷ್ಟ ಪೂರೈಕೆಯ ಗುರಿಯೆಡೆಗೆ ಮುನ್ನಡೆಸುತ್ತಾರೆ. ಭೌತಿಕ ಹಾಗೂ ಆಧ್ಯಾತ್ಮಿಕ ಯಶಸ್ಸಿಗಾಗಿ ನೀವು ಪ್ರಜ್ಞಾಪೂರ್ವಕವಾಗಿ ಆರಂಭಿಸಿದ, ಮುಂದುವರೆಸಿದ ಶ್ರಮಗಳ ದಿವ್ಯ ಮಾರ್ಗದರ್ಶನದಲ್ಲಿರುವ ನಂಬಿಕೆ ಮತ್ತು ವಿಶ್ವಾಸವು, ಈಗಾಗಲೇ ಹೊಸ ವರ್ಷದ ಹೆಬ್ಬಾಗಿಲಿನ ಮೂಲಕ ಮಸುಕು ಮಸುಕಾಗಿ ಕಾಣಿಸುತ್ತಿರುವ ನಿಮ್ಮ ಗುರಿಯೆಡೆಗೆ ನಿಮ್ಮನ್ನು ಶೀಘ್ರವಾಗಿ ಕರೆದೊಯ್ಯುತ್ತವೆ.
ಜಾಗೃತಗೊಂಡ ಚಿರವಾದ ಉತ್ಸಾಹ ಮತ್ತು ನಿರಂತರ ಶ್ರಮದೊಂದಿಗೆ ಓ ನನ್ನ ಸಹೋದರ ಆಲಸಿಗಳೇ, ಕೆಲಸಗಳ್ಳರೇ ಮತ್ತು ಉತ್ಸಾಹಿಗಳೇ ಎದ್ದು ಬಂದು, ಹೊಸ ವರ್ಷದ ಹೆಬ್ಬಾಗಿಲಲ್ಲಿ ಸ್ವಾಗತವನ್ನು ಬಯಸಲು ಸ್ಪಷ್ಟವಾಗಿ ಕಾಣುತ್ತಿರುವ ಸಾಧನೆಯ ಸುವರ್ಣ ಮಾರ್ಗವನ್ನು ಅನುಸರಿಸಿ.
ಹಲವಾರು ಜನ್ಮಗಳ ಪರೀಕ್ಷಣೆಗಳ ನಂತರ ನೀವು ಮನೆಗೆ ಹಿಂತಿರುಗಲು ಬಯಸುತ್ತಿರುವಾಗ, ಭಗವಂತನು ಅತ್ಯಂತ ತೀವ್ರ ಆಕಾಂಕ್ಷೆಯಿಂದ, ಪರಮಾತ್ಮನು ನೀಡಿದ ಮುಕ್ತ ಸಂಕಲ್ಪ ಶಕ್ತಿಯಿಂದ ನೀವು ಶೀಘ್ರದಲ್ಲೇ ಅತ್ತಿತ್ತ ಅಲೆದಾಡುವ ನಿಮ್ಮ ಹೆಜ್ಜೆಗಳನ್ನು ಸಂತೋಷಭರಿತರಾಗಿ ಭಗವಂತನ ಪರಂಧಾಮದಲ್ಲಿ ನೆಲೆಸಲು ಸಂಪೂರ್ಣ ಆಂತರಿಕ ಸಂತುಷ್ಟಿಯ ಮಂದಿರದೆಡೆಗೆ ನಡೆಸೇ ನಡೆಸುತ್ತೀರಿ ಎಂದು ತವಕದಿಂದ ಕಾಯುತ್ತಿದ್ದಾನೆ.