ಪ್ರತಿ ತಿಂಗಳು ಮೊದಲ ರವಿವಾರದ ಬೆಳಗ್ಗೆ ವೈಎಸ್‌ಎಸ್ ಸನ್ಯಾಸಿಗಳು ನಡೆಸಿಕೊಡುವ ಮೂರು-ಗಂಟೆಯ ಧ್ಯಾನ ಕಾರ್ಯಕ್ರಮದಲ್ಲಿ ನೀವು ಭಾಗಿಯಾಗಿ ಎಂದು ನಿಮ್ಮನ್ನು ಸ್ವಾಗತಿಸುತ್ತಿದ್ದೇವೆ. ಈ ಕಾರ್ಯಕ್ರಮವು ಈಗಾಗಲೇ ರೆಕಾರ್ಡ್ ಆದ ಚೈತನ್ಯದಾಯಕ ವ್ಯಾಯಾಮಗಳೊಂದಿಗೆ ಆರಂಭವಾಗುತ್ತದೆ, ನಂತರ ವೈಎಸ್‌ಎಸ್ ಸನ್ಯಾಸಿಯವರ ಮಾರ್ಗದರ್ಶಿತ ಧ್ಯಾನವಿರುತ್ತದೆ.
ಧ್ಯಾನದ ಅವಧಿಯು ಪ್ರಾರಂಭಿಕ ಪ್ರಾರ್ಥನೆಯೊಂದಿಗೆ ಆರಂಭವಾಗುತ್ತದೆ, ನಂತರ ಸ್ಫೂರ್ತಿದಾಯಕ ಓದು ಮತ್ತು ಭಜನೆಗಳ ಹಾಗೂ ಧ್ಯಾನಗಳ ಅವಧಿಗಳಿರುತ್ತವೆ. ಮೌನ ಧ್ಯಾನದ ಅವಧಿಗಳು ಬೇರೆ ಬೇರೆಯಾಗಿದ್ದರೂ, ಸರಿ ಸುಮಾರು 45 ನಿಮಿಷಗಳದ್ದಾಗಿರುತ್ತವೆ. ಪರಮಹಂಸ ಯೋಗಾನಂದಜೀಯವರ ಉಪಶಮನದಾಯಕ ತಂತ್ರ ಹಾಗೂ ಮುಕ್ತಾಯದ ಪ್ರಾರ್ಥನೆಯೊಂದಿಗೆ ಮುಗಿಯುತ್ತದೆ.
ಕಾರ್ಯಕ್ರಮದ ವಿವರ
ಪ್ರತಿ ತಿಂಗಳ ಮೊದಲ ರವಿವಾರದಂದು
ಇಂಗ್ಲೀಷ್
ಬೆಳಿಗ್ಗೆ 6.10ರಿಂದ 9.30 ರ ವರೆಗೆ
ಆನ್‌ಲೈನ್ ಧ್ಯಾನ ಕಾರ್ಯಕ್ರಮಗಳಲ್ಲಿ ಎಲ್ಲರೂ ಭಾಗವಹಿಸಬಹುದು. ಧ್ಯಾನದಲ್ಲಿ ಭಾಗಿಯಾಗಲು ದಯವಿಟ್ಟು ಕೆಳಗಿರುವ ಯು-ಟ್ಯೂಬ್ ಲಿಂಕ್ ಮೇಲೆ ಒತ್ತಿ.
ದಯವಿಟ್ಟು ಗಮನಿಸಿ:
- ಜೂನ್ 1, 2025 ಭಾನುವಾರದಂದು ಆಯೋಜಿಸಿರುವ ದೀರ್ಘಾವಧಿ ಧ್ಯಾನವನ್ನು ಕೇವಲ ಯು-ಟ್ಯೂಬ್ ನಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ.
- ಈ ಧ್ಯಾನಗಳ ಮುದ್ರಿತ ಕಾರ್ಯಕ್ರಮಗಳು ನೇರ ಪ್ರಸಾರವಾದ ನಂತರ ಮರುದಿನ (ಸೋಮವಾರ) ರಾತ್ರಿ 10.00 ಘಂಟೆಯವರೆಗೂ (ಭಾರತೀಯ ಕಾಲಮಾನ), ಯುಟ್ಯೂಬ್‌ನಲ್ಲಿ ಲಭ್ಯವಿರುತ್ತದೆ.
- ಸನ್ಯಾಸಿಗಳು ನಡೆಸಿಕೊಡುವ ವಿಶೇಷ ಕಾರ್ಯಕ್ರಮಗಳಿದ್ದಲ್ಲಿ, ಆ ದಿನಗಳಲ್ಲಿ ಈ ಆನ್‌ಲೈನ್ ಧ್ಯಾನದ ಕಾರ್ಯಕ್ರಮಗಳನ್ನು ನಡೆಸಲಾಗುವುದಿಲ್ಲ.

ನೀವು ಇವನ್ನು ಕೂಡ ಅನ್ವೇಷಿಸಲು ಬಯಸಬಹುದು: