ಯುವ ಸಾಧಕ ಶಿಬಿರಗಳು 2026

(ಬೆಂಗಳೂರು ಮತ್ತು ಚಂಡೀಗಢದಲ್ಲಿ ಮೂರು ದಿನಗಳ ಕಾರ್ಯಕ್ರಮಗಳು)

ಈ ಶಿಬಿರಗಳಿಗೆ ನೋಂದಣಿ ಪ್ರಾರಂಭವಾಗಿದೆ!

ಕಾರ್ಯಕ್ರಮಗಳ ಬಗ್ಗೆ

ನೀವು ಧ್ಯಾನ ಮಾಡುವಾಗ, ನಿಮ್ಮ ಇಡೀ ಮನಸ್ಸನ್ನು ದೇವರಲ್ಲಿ ಲೀನಗೊಳಿಸಿ ಮತ್ತು ನೀವು ಕರ್ತವ್ಯವನ್ನು ನಿರ್ವಹಿಸುವಾಗ, ಅದರಲ್ಲಿ ಹೃದಯಪೂರ್ವಕವಾಗಿ ಪೂರ್ಣವಾಗಿ ತೊಡಗಿಸಿಕೊಳ್ಳಿ. ಆದರೆ, ಕೆಲಸ ಮುಗಿದ ತಕ್ಷಣವೇ, ನಿಮ್ಮ ಮನಸ್ಸನ್ನು ಭಗವಂತನಲ್ಲಿ ನೆಲೆಗೊಳಿಸಿ. ನೀವು ಆತನನ್ನು ಸ್ಮರಿಸಲು ಸ್ವತಂತ್ರರಾಗಿರುವ ಪ್ರತಿ ಕ್ಷಣದಲ್ಲೂ ದೇವರ ಉಪಸ್ಥಿತಿಯನ್ನು ಅಭ್ಯಾಸ ಮಾಡಲು ಕಲಿತಾಗ, ಆಗ ಕೆಲಸದ ಮಧ್ಯದಲ್ಲೂ ಸಹ ನಿಮಗೆ ದಿವ್ಯ ಸಮ್ಮಿಲನದ ಅರಿವಾಗುತ್ತದೆ.

— ಶ್ರೀ ಶ್ರೀ ಪರಮಹಂಸ ಯೋಗಾನಂದರು

ಸೆಪ್ಟೆಂಬರ್ 2025 ರಲ್ಲಿ ವೈಎಸ್‌ಎಸ್‌ ರಾಂಚಿ ಆಶ್ರಮದಲ್ಲಿ ನಡೆದ ಪ್ರಥಮ ಯುವ ಸಾಧಕ ಸಂಗಮವು ಅತ್ಯಂತ ಯಶಸ್ವಿಯಾಯಿತು. ಇದರಿಂದ ದೇಶದ ಇತರ ಭಾಗಗಳಲ್ಲಿ ಇದೇ ರೀತಿಯ ಕಾರ್ಯಕ್ರಮಗಳನ್ನು ನಡೆಸಬೇಕೆಂಬ ಮನವಿಗಳು ಬಂದವು. ಈ ಅಗತ್ಯವನ್ನು ಪೂರೈಸುವ ಸಲುವಾಗಿ, ವೈಎಸ್‌ಎಸ್‌, ಫೆಬ್ರವರಿ 2026 ರಲ್ಲಿ ಬೆಂಗಳೂರು ಮತ್ತು ಚಂಡೀಗಢದಲ್ಲಿ ಯುವ ಸಾಧಕ ಶಿಬಿರಗಳನ್ನು ಘೋಷಿಸಲು ಸಂತಸಪಡುತ್ತದೆ. ಈ ಶಿಬಿರಗಳ ಘೋಷವಾಕ್ಯವು “ದಿವ್ಯ ಸಾನ್ನಿಧ್ಯದಲ್ಲಿ ಜೀವಿಸುವುದು” ಎಂಬುದಾಗಿದೆ.

23–35 ವರ್ಷ ವಯಸ್ಸಿನ ವೈಎಸ್‌ಎಸ್‌ ಭಕ್ತರಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ, ಈ ವಾರಾಂತ್ಯದ ಸಮಾಗಮಗಳು ಯಶಸ್ವಿ ಮತ್ತು ಸಮತೋಲಿತ ಜೀವನವನ್ನು ನಡೆಸಲು ಪರಮಹಂಸಜಿಯವರ ಅನನ್ಯ ಜೀವನ ಕಲೆಯ ಬಗ್ಗೆ (ಬದುಕುವುದು ಹೇಗೆ) ತರಬೇತಿಯನ್ನು ನೀಡುತ್ತವೆ. ವೈಎಸ್‌ಎಸ್‌ ಸನ್ಯಾಸಿಗಳು ಸಮೂಹ ಧ್ಯಾನಗಳು ಮತ್ತು ಕೀರ್ತನೆ ಅವಧಿಗಳನ್ನು ಮುನ್ನಡೆಸುವುದರ ಜೊತೆಗೆ ವೈಯಕ್ತಿಕ ಆಧ್ಯಾತ್ಮಿಕ ಸಮಾಲೋಚನೆಯನ್ನು ನಡೆಸುವರು ಮತ್ತು ದಿವ್ಯ ಸಾನ್ನಿಧ್ಯದಲ್ಲಿ ಜೀವಿಸಲು ಪ್ರಾಯೋಗಿಕ ವಿಧಾನಗಳನ್ನು ಬೋಧಿಸುವ ಸಮೂಹ ಚರ್ಚೆಗಳೊಂದಿಗೆ ಕಾರ್ಯಾಗಾರಗಳನ್ನು ನಡೆಸುವರು.

ದಯವಿಟ್ಟು ಗಮನಿಸಿ:

  • ಕೇವಲ ವೈಎಸ್‌ಎಸ್‌/ಎಸ್‌ಆರ್‌ಎಫ್‌ ಭಕ್ತರು ಮಾತ್ರ ಶಿಬಿರಗಳಲ್ಲಿ ಭಾಗವಹಿಸಬಹುದು.
  • ಮೊದಲು ಬಂದವರಿಗೆ ಮೊದಲ ಆದ್ಯತೆಯ ಆಧಾರದ ಮೇಲೆ ನೋಂದಣಿ ಮಾಡಿಕೊಳ್ಳಲಾಗುತ್ತದೆ.
  • ಕಾರ್ಯಕ್ರಮದ ವೇಳಾಪಟ್ಟಿ ಬಿಡುವಿಲ್ಲದೆ ಇರುವುದರಿಂದ, ದುರ್ಬಲ ಆರೋಗ್ಯ ಅಥವಾ ವಿಶೇಷ ಅಗತ್ಯತೆಗಳುಳ್ಳ ಭಕ್ತರು ಅರ್ಜಿ ಸಲ್ಲಿಸದಿರಲು ಸೂಚಿಸಲಾಗಿದೆ.

ಶಿಬಿರದ ಪ್ರಮುಖ ವೈಶಿಷ್ಟ್ಯಗಳು

  • ಸಮೂಹ ಧ್ಯಾನಗಳು — ವೈಎಸ್ಎಸ್ ಧ್ಯಾನ ತಂತ್ರಗಳ ಮಾರ್ಗದರ್ಶಿತ ಅಭ್ಯಾಸದೊಂದಿಗೆ
  • ಶ್ರವಣ — ಆತ್ಮಾವಲೋಕನದೊಂದಿಗೆ ವೈಎಸ್ಎಸ್ ಪಾಠಗಳ ಸಮೂಹ ಅಧ್ಯಯನ
  • ಸತ್ಸಂಗಗಳು — ಜೀವನದ ಸವಾಲುಗಳನ್ನು ಎದುರಿಸಲು ಪ್ರೇರಣೆ ಮತ್ತು ಪ್ರಾಯೋಗಿಕ ಜ್ಞಾನವನ್ನು ಒದಗಿಸುವುದು
  • ಕಾರ್ಯಾಗಾರಗಳು — ದಿವ್ಯ ಸನ್ನಿಧಿಯಲ್ಲಿ ಬದುಕಲು ಸಮೂಹ ಚರ್ಚೆಗಳು, ಸಲಹೆಗಳು ಮತ್ತು ತಂತ್ರಗಳು
  • ಕೀರ್ತನೆ — ಹೃದಯ, ಮನಸ್ಸು ಮತ್ತು ಆತ್ಮವನ್ನು ಉನ್ನತಗೊಳಿಸುವ ಭಕ್ತಿಪೂರ್ವಕ ಸಮೂಹ ಗಾಯನ
  • ಆಧ್ಯಾತ್ಮಿಕ ಮಾರ್ಗದರ್ಶನ — ವಿನಂತಿಯ ಮೇರೆಗೆ ಅನುಭವಿ ಸನ್ಯಾಸಿಗಳಿಂದ ವೈಯಕ್ತಿಕ ಮಾರ್ಗದರ್ಶನ
  • ಗುರು ಸೇವಾ — ಶಿಬಿರದ ವಿವಿಧ ವಿಭಾಗಗಳಲ್ಲಿ: ಸ್ವಾಗತ ಸೇವೆ, ಭೋಜನ ಸೇವೆ, ಅಲಂಕಾರಗಳು, ನೋಂದಣಿ ವಿಭಾಗ, ಪುಸ್ತಕ ವಿಭಾಗ ಇತ್ಯಾದಿಗಳಲ್ಲಿ
  • ವಿನೋದಾತ್ಮಕ ಸಮಯ — ಪ್ರತಿದಿನದ ಸಮೂಹ ವ್ಯಾಯಾಮಗಳು ಮತ್ತು ವಿನೋದಾತ್ಮಕ ಅವಧಿ
  • ಸತ್ಸಂಗ — ದೇಶದಾದ್ಯಂತದಿಂದ ಬಂದಿರುವ ಸಮಾನ ಮನಸ್ಕ ಯುವ ಸಾಧಕರೊಂದಿಗೆ
  • ವಿಹಾರ — ಸನ್ಯಾಸಿಗಳೊಂದಿಗಿನ ಪ್ರಕೃತಿ ವಿಹಾರ

ನಿಮ್ಮ ಆಧ್ಯಾತ್ಮಿಕ ಉತ್ಸಾಹವನ್ನು ಪುನಶ್ಚೇತನಗೊಳಿಸಿಕೊಳ್ಳಲು ಅಥವಾ ಆಧ್ಯಾತ್ಮಿಕ ಜೀವನಕ್ಕೆ ನಿಮ್ಮ ಬದ್ಧತೆಯನ್ನು ನವೀಕರಿಸಿಕೊಳ್ಳಲು ಮತ್ತು ಹೊಸ ಆಧ್ಯಾತ್ಮಿಕ ಮಿತ್ರರನ್ನು ಪಡೆದುಕೊಳ್ಳಲು ನೀವು ಬಯಸುವಿರಾದರೆ, ಈ ಶಿಬಿರಗಳಲ್ಲಿ ಭಾಗವಹಿಸಿ, ಆಧ್ಯಾತ್ಮಿಕವಾಗಿ ನವಚೈತನ್ಯ ಪಡೆದು ಮರಳಲು ನಾವು ನಿಮ್ಮನ್ನು ಪ್ರೀತಿಯಿಂದ ಸ್ವಾಗತಿಸುತ್ತೇವೆ.

ಶಿಬಿರದ ವೇಳಾಪಟ್ಟಿ

ಬೆಂಗಳೂರು

ದಿನಾಂಕ: ಫೆಬ್ರವರಿ 20-22, 2026 (ಶುಕ್ರವಾರ-ಭಾನುವಾರ)
ಭಾಷೆ: ಇಂಗ್ಲಿಷ್

ಶಿಬಿರದ ಸ್ಥಳ:
ಯೋಗದಾ ಸತ್ಸಂಗ ಧ್ಯಾನ ಕೇಂದ್ರ – ಬೆಂಗಳೂರು
ಪರಮಹಂಸ ಯೋಗಾನಂದ ರಸ್ತೆ,
3ನೇ ಎ ಕ್ರಾಸ್, ದೊಮ್ಮಲೂರು, 2ನೇ ಹಂತ,
ಉಡುಪಿ ಫುಡ್ ಹಬ್ ಬಳಿ – ದೊಮ್ಮಲೂರು,
ಬೆಂಗಳೂರು – 560071
ಕರ್ನಾಟಕ

ಚಂಡೀಗಢ

ದಿನಾಂಕ: ಫೆಬ್ರವರಿ 27 – ಮಾರ್ಚ್ 1, 2026 (ಶುಕ್ರವಾರ-ಭಾನುವಾರ)
ಭಾಷೆ: ಇಂಗ್ಲಿಷ್ ಮತ್ತು ಹಿಂದಿ

ಶಿಬಿರದ ಸ್ಥಳ:
ಯೋಗದಾ ಸತ್ಸಂಗ ಧ್ಯಾನ ಕೇಂದ್ರ – ಚಂಡೀಗಢ
ಸೆಕ್ಟರ್ 28-ಡಿ,
ಗುಜ್ಜರ್ ಭವನದ ಸಮೀಪ,
ಚಂಡೀಗಢ – 160002
ಚಂಡೀಗಢ

ಭಾಗವಹಿಸುವ ಅಭ್ಯರ್ಥಿಗಳು ಗುರುವಾರ ಮಧ್ಯಾಹ್ನದೊಳಗೆ ಕಾರ್ಯಕ್ರಮದ ಸ್ಥಳಕ್ಕೆ ಆಗಮಿಸಿ, ಅದೇ ದಿನ ಸಂಜೆ ಸನ್ಯಾಸಿಗಳ ನೇತೃತ್ವದಲ್ಲಿ ನಡೆಯಲಿರುವ ದೀರ್ಘ ಧ್ಯಾನದಲ್ಲಿ ಪಾಲ್ಗೊಳ್ಳಲು ಪ್ರೋತ್ಸಾಹಿಸಲಾಗುತ್ತದೆ. ಕಾರ್ಯಕ್ರಮವು ಭಾನುವಾರ ಮಧ್ಯಾಹ್ನದ ವೇಳೆಗೆ ಮುಕ್ತಾಯಗೊಳ್ಳುತ್ತದೆ.

ಹೆಚ್ಚಿನ ಮಾಹಿತಿಗಾಗಿ

ಕಾರ್ಯಕ್ರಮದ ಪಟ್ಟಿ

ಶಿಬಿರದ ತಾತ್ಕಾಲಿಕ ಕಾರ್ಯಕ್ರಮ ಪಟ್ಟಿ ಕಾರ್ಯಕ್ರಮದ ದಿನಾಂಕ ಸಮೀಪಿಸಿದಾಗ ಲಭ್ಯವಾಗಲಿದೆ.

ನೋಂದಣಿ

ಭಾಗವಹಿಸುವಿಕೆ:

  • ಕೇವಲ ವೈಎಸ್‌ಎಸ್‌/ಎಸ್‌ಆರ್‌ಎಫ್‌ ಭಕ್ತರು ಮಾತ್ರ ಈ ಶಿಬಿರಗಳಲ್ಲಿ ಭಾಗವಹಿಸಬಹುದು. ಒಬ್ಬ ಭಕ್ತರು ಕೇವಲ ಒಂದು ಶಿಬಿರದಲ್ಲಿ ಮಾತ್ರ ಭಾಗವಹಿಸಲು ಅನುಮತಿಸಲಾಗಿದೆ.
  • ಭಾಗವಹಿಸುವವರು ಗುರುವಾರ ಮಧ್ಯಾಹ್ನದೊಳಗೆ ಸ್ಥಳಕ್ಕೆ ಆಗಮಿಸಿ, ಅಂದೇ ಸಂಜೆ ಸನ್ಯಾಸಿಗಳ ನೇತೃತ್ವದಲ್ಲಿ ನಡೆಯಲಿರುವ ದೀರ್ಘ ಧ್ಯಾನದಲ್ಲಿ ಭಾಗವಹಿಸಲು ಪ್ರೋತ್ಸಾಹಿಸಲಾಗುತ್ತದೆ. ಕಾರ್ಯಕ್ರಮವು ಭಾನುವಾರ ಮಧ್ಯಾಹ್ನದ ವೇಳೆಗೆ ಮುಕ್ತಾಯಗೊಳ್ಳುತ್ತದೆ.
ವಯಸ್ಸಿನ ಮಾನದಂಡ:
  • ಈ ಶಿಬಿರಗಳು ಕೇವಲ 23 ರಿಂದ 35 ವರ್ಷ ವಯಸ್ಸಿನ ಸಾಧಕರಿಗೆ ಮಾತ್ರ ಆಯೋಜಿಸಲಾಗಿವೆ.
  • ನೀವು ಈ ನಿಗದಿಪಡಿಸಿದ ಸ್ಥಳದ ವ್ಯಾಪ್ತಿಯಿಂದ ಸ್ವಲ್ಪ ಹೊರಗಿದ್ದರೂ ಸಹ, ಈ ಶಿಬಿರಗಳಲ್ಲಿ ಭಾಗವಹಿಸಲು ಮತ್ತು ಪ್ರಯೋಜನ ಪಡೆಯಲು ಬಯಸಿದರೆ, ದಯವಿಟ್ಟು [email protected] ಈ ವಿಳಾಸಕ್ಕೆ ನಮಗೆ ಇಮೇಲ್ ಮಾಡಿ.

ಮೊದಲು ಬಂದವರಿಗೆ ಮೊದಲು ಆದ್ಯತೆಯ ಮೇರೆಗೆ:

  • ಸೌಲಭ್ಯಗಳ ಸೀಮಿತ ಲಭ್ಯತೆಯಿಂದಾಗಿ, ನೋಂದಣಿಗಳನ್ನು ಮೊದಲು ಬಂದವರಿಗೆ ಮೊದಲ ಆದ್ಯತೆ ಮೇರೆಗೆ ನೋಂದಾಯಿಸಿಕೊಳ್ಳಲಾಗುತ್ತದೆ.
  • ಒಂದು ನಿರ್ದಿಷ್ಟ ಸ್ಥಳದ ನೋಂದಣಿಗಾಗಿ ವಿನಂತಿಗಳು ಗರಿಷ್ಠ ಮಿತಿಯನ್ನು ತಲುಪಿದರೆ, ನೋಂದಣಿ ನಿಗದಿತ ಅವಧಿಗಿಂತ ಮೊದಲೇ ಮುಕ್ತಾಯಗೊಳ್ಳಬಹುದು.
  • ದಯವಿಟ್ಟು ಗಮನಿಸಿ, ನಿಮ್ಮ ನೋಂದಣಿ ದೃಢಪಟ್ಟಿದ್ದರೂ ಸಹ, ನೀವು ಹಾಜರಾಗಲು ಸಾಧ್ಯವಾಗದಿದ್ದರೆ, ನೋಂದಣಿ ಶುಲ್ಕವನ್ನು ಮರುಪಾವತಿ ಮಾಡಲಾಗುವುದಿಲ್ಲ ಅಥವಾ ಇನ್ನೊಬ್ಬ ವ್ಯಕ್ತಿಗೆ ವರ್ಗಾಯಿಸಲಾಗುವುದಿಲ್ಲ.

ಪಾವತಿಗಳು:

  • ನೋಂದಣಿ ಶುಲ್ಕ (ಊಟದ ಶುಲ್ಕಗಳನ್ನು ಒಳಗೊಂಡಿದೆ) = ₹2,500
  • ವಸತಿ ಶುಲ್ಕ (ವಸತಿಯನ್ನು ಆಯ್ಕೆ ಮಾಡಿದರೆ) = ₹2,250


ನೋಂದಣಿ ಶುಲ್ಕವನ್ನು ಪಾವತಿಸಲು ನಿಮಗೆ ಕಷ್ಟವಾಗುತ್ತಿದ್ದರೆ, ದಯವಿಟ್ಟು [email protected] ಗೆ ನಮಗೆ ಇಮೇಲ್ ಮಾಡಿ.

ನೋಂದಣಿ ಮಾಹಿತಿ

ಈ ಶಿಬಿರಗಳಿಗೆ ನೋಂದಣಿ ಈಗ ಪ್ರಾರಂಭವಾಗಿದೆ!

ಡಿವೋಟಿ ಪೋರ್ಟಲ್ ಮೂಲಕ ಆನ್‌ಲೈನ್ ನೋಂದಣಿ:

ಶೀಘ್ರ ಮತ್ತು ಸುಲಭ ನೋಂದಣಿಗಾಗಿ, ಆನ್‌ಲೈನ್‌ನಲ್ಲಿ ನೋಂದಾಯಿಸಲು ದಯವಿಟ್ಟು ಇಲ್ಲಿ ಒತ್ತಿ.

ಸಹಾಯವಾಣಿಯನ್ನು ಸಂಪರ್ಕಿಸುವ ಮೂಲಕ ನೋಂದಣಿ:

ದಯವಿಟ್ಟು (0651) 6655 555 ಸಂಖ್ಯೆಗೆ ಕರೆ ಮಾಡಿ ಅಥವಾ ರಾಂಚಿ ಆಶ್ರಮ ಸಹಾಯವಾಣಿಗೆ ಇಮೇಲ್ ಮಾಡಿ ಮತ್ತು ಕೆಳಗಿನ ವಿವರಗಳನ್ನು ಒದಗಿಸಿ:

  • ನಿಮ್ಮ ಪೂರ್ಣ ಹೆಸರು
  • ವೈಎಸ್‌ಎಸ್‌ ಪಾಠಗಳ ನೋಂದಣಿ ಸಂಖ್ಯೆ
  • ವಯಸ್ಸು
  • ನಿಮ್ಮ ಪ್ರಸ್ತಾವಿತ ಆಗಮನ ಮತ್ತು ನಿರ್ಗಮನದ ದಿನಾಂಕಗಳು
  • ಇಮೇಲ್
  • ದೂರವಾಣಿ ಸಂಖ್ಯೆ
  • ವಿಳಾಸ

ನಿಮ್ಮ ಮೊಬೈಲ್ ಅಥವಾ ಇಮೇಲ್ ವಿಳಾಸಕ್ಕೆ ಕಳುಹಿಸಲಾಗುವ ಪಾವತಿ ಲಿಂಕ್ ಮೂಲಕ ನೀವು ಮೊತ್ತವನ್ನು ಪಾವತಿಸಬಹುದು. ನೋಂದಣಿ ಯಶಸ್ವಿಯಾದ ನಂತರ, ನಿಮಗೆ ಇಮೇಲ್, ವಾಟ್ಸಾಪ್‌ ಅಥವಾ ಎಸ್‌ಎಮ್‌ಎಸ್‌ ಮೂಲಕ ದೃಢೀಕರಣ ದೊರೆಯುತ್ತದೆ. ನಿಮಗೆ ಅಂತಹ ಅಧಿಸೂಚನೆ ದೊರೆಯದಿದ್ದರೆ, ದಯವಿಟ್ಟು ವೈಎಸ್‌ಎಸ್‌ ರಾಂಚಿ ಸಹಾಯವಾಣಿಯನ್ನು ದೂರವಾಣಿಯ ಮೂಲಕ (0651) 6655 555 ಅಥವಾ ಇಮೇಲ್ ಮೂಲಕ ([email protected]) ಸಂಪರ್ಕಿಸಿ.

ಎಸ್‌ಆರ್‌ಎಫ್‌ ಭಕ್ತರಿಗಾಗಿ ನೋಂದಣಿ:


  • ಎಸ್‌ಆರ್‌ಎಫ್‌ ಭಕ್ತರು ಶಿಬಿರಗಳಲ್ಲಿ ಭಾಗವಹಿಸಲು ಮತ್ತು ಸ್ಥಳದಲ್ಲಿ ಊಟ ಮಾಡಲು ಹೃತ್ಪೂರ್ವಕವಾಗಿ ಸ್ವಾಗತ, ಆದರೆ ಅವರು ತಮ್ಮದೇ ಆದ ವಸತಿ ವ್ಯವಸ್ಥೆಗಳನ್ನು ಮಾಡಿಕೊಳ್ಳಲು ವಿನಂತಿಸಲಾಗಿದೆ.
  • ಆಸಕ್ತ ಎಸ್‌ಆರ್‌ಎಫ್‌ ಭಕ್ತರು ಇಮೇಲ್ ಮೂಲಕ ವೈಎಸ್‌ಎಸ್‌ ಸಹಾಯವಾಣಿಯನ್ನು ಸಂಪರ್ಕಿಸಿ, ಮೇಲೆ ತಿಳಿಸಿದಂತೆ ತಮ್ಮ ಎಲ್ಲಾ ವಿವರಗಳನ್ನು ಹಂಚಿಕೊಳ್ಳಬೇಕೆಂದು ನಾವು ವಿನಂತಿಸುತ್ತೇವೆ.
ವಸತಿ
  • ಬೆಂಗಳೂರು ಮತ್ತು ಚಂಡೀಗಢದಲ್ಲಿ ಹೊರ ಊರಿನ ಭಕ್ತರಿಗಾಗಿ ಪ್ರಥಮ ಆದ್ಯತೆಯ ಮೇರೆಗೆ ವಸತಿ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಇದು ಗುರುವಾರ ಸಂಜೆಯಿಂದ ಭಾನುವಾರ (ಬೆಳಗ್ಗೆ) ವರೆಗೆ ಲಭ್ಯವಿರುತ್ತದೆ.
  • ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕವಾ̧ಗಿ ಉಳಿಯುವ ವ್ಯವಸ್ಥೆ ಮಾಡಲಾಗಿದ್ದು, ವಸತಿಗಳನ್ನು ಹಂಚಿಕೆಯ ಆಧಾರದಲ್ಲಿ ಒದಗಿಸಲಾಗುವುದು. ಕುಟುಂಬ ಸದಸ್ಯರು ದಯವಿಟ್ಟು ಅದಕ್ಕನುಗುಣವಾಗಿ ಯೋಜನೆ ರೂಪಿಸಿ ಮತ್ತು ಸಾಮಾನುಗಳನ್ನು ಸಿದ್ಧಪಡಿಸಿಕೊಳ್ಳಬೇಕಾಗಿ ವಿನಂತಿ.
  • ವಸತಿ ಅಥವಾ ಆಹಾರಕ್ಕಾಗಿ ವಿಶೇಷ ಅಗತ್ಯಗಳಿರುವ ಭಕ್ತರು ದಯವಿಟ್ಟು ತಮ್ಮದೇ ಆದ ವ್ಯವಸ್ಥೆಗಳನ್ನು ಮಾಡಿಕೊಳ್ಳಬಹುದು.
ಸ್ವಯಂಸೇವಕರು

ಎಂದಿನಂತೆ, ನೋಂದಣಿ ವಿಭಾಗ, ವಸತಿ, ಶ್ರವಣ-ದೃಶ್ಯ, ಭೋಜನ, ನೈರ್ಮಲ್ಯ, ಮಾರ್ಗದರ್ಶನ ಮತ್ತು ಇತರ ವಿಭಾಗಗಳಂತಹ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಲು ಸ್ವಯಂಸೇವಕ-ಭಕ್ತರು ಅಗತ್ಯವಿರುತ್ತಾರೆ. ಈ ಕೆಲವು ಕ್ಷೇತ್ರಗಳಲ್ಲಿ, ಕಾರ್ಯಕ್ರಮ ಪ್ರಾರಂಭವಾಗುವ ಒಂದು ಅಥವಾ ಎರಡು ದಿನಗಳ ಮೊದಲು ಕೆಲ ಸ್ವಯಂಸೇವಕರು ಅಗತ್ಯವಿರುತ್ತಾರೆ. ನೀವು ಸ್ವಯಂಸೇವಕರಾಗಿ ಸೇವೆ ಸಲ್ಲಿಸಲು ಇಚ್ಛಿಸಿದರೆ, ದಯವಿಟ್ಟು ಅದನ್ನು ನೋಂದಣಿ ಅರ್ಜಿಯಲ್ಲಿ ನಮೂದಿಸಿ.

ನೋಂದಣಿ ಮತ್ತು ವಿಚಾರಣೆಗಳಿಗಾಗಿ ಸಂಪರ್ಕ ವಿವರಗಳು

ಯೋಗದಾ ಸತ್ಸಂಗ ಶಾಖಾ ಮಠ — ರಾಂಚಿ
ಪರಮಹಂಸ ಯೋಗಾನಂದ ಮಾರ್ಗ
ರಾಂಚಿ – 834 001

ದೂರವಾಣಿ: (0651) 6655 555 (ಸೋಮವಾರದಿಂದ ಶನಿವಾರದವರೆಗೆ, ಬೆಳಿಗ್ಗೆ 9:00 ರಿಂದ ಸಂಜೆ 4:30 ರವರೆಗೆ)
ಇ-ಮೇಲ್: [email protected]

ಹಿಂದಿನ ಯುವ ಸಾಧಕ ಕಾರ್ಯಕ್ರಮಗಳು

ಯುವಜನರಿಗಾಗಿ ನಾವು ಆಯೋಜಿಸುವ ಕಾರ್ಯಕ್ರಮಗಳ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಅಥವಾ ಸ್ವಯಂಸೇವಕರಾಗಿ ಕಾರ್ಯನಿರ್ವಹಿಸಲು ನೀವು ಆಸಕ್ತಿ ಹೊಂದಿದ್ದರೆ, ದಯವಿಟ್ಟು [email protected] ಗೆ ಇಮೇಲ್ ಮಾಡಿ.

ಹೊಸ ಸಂದರ್ಶಕರು

ನೀವು ವೈಎಸ್ಎಸ್ ಮತ್ತು ಪರಮಹಂಸ ಯೋಗಾನಂದರ ಬೋಧನೆಗಳಿಗೆ ಹೊಸಬರಾಗಿದ್ದರೆ, ಕೆಳಗಿನ ಲಿಂಕ್‌ಗಳನ್ನು ಅನ್ವೇಷಿಸಲು ಇಚ್ಛಿಸಬಹುದು:

ಯೋಗಿಯ ಆತ್ಮಕಥೆ

ವಿಶ್ವಾದ್ಯಂತ ಆಧ್ಯಾತ್ಮಿಕ ಮೇರುಕೃತಿಯೆಂದು ಕೊಂಡಾಡಲ್ಪಟ್ಟಿರುವ, ಪರಮಹಂಸರು ಆಗಾಗ ಹೀಗೆ ನುಡಿಯುತ್ತಿದ್ದರು, “ನಾನು ದೇಹತ್ಯಾಗ ಮಾಡಿದ ನಂತರ, ಈ ಗ್ರಂಥವೇ ನನ್ನ ದೂತವಾಗುವುದು.”

ವೈಎಸ್ಎಸ್ ಪಾಠಗಳು

ನೀವು ಊಹಿಸಲೂ ಸಾಧ್ಯವಾಗದ ರೀತಿಯಲ್ಲಿ ನಿಮ್ಮ ಜೀವನವನ್ನು ಪರಿವರ್ತಿಸುವ ಮತ್ತು ಸಮತೋಲಿತವಾದ ಯಶಸ್ವೀ ಜೀವನವನ್ನು ನಡೆಸಲು ಸಹಾಯ ಮಾಡುವ, ಮನೆಯಿಂದಲೇ ಅಧ್ಯಯನ ಮಾಡಬಹುದಾದ ಪಾಠ ಕ್ರಮಗಳು.

ಇದನ್ನು ಹಂಚಿಕೊಳ್ಳಿ