“ಶಿಷ್ಯತ್ವವನ್ನು ಗಾಢಗೊಳಿಸುವುದು” — ವಾಲಂಟರಿ ಲೀಗ್ ಆಫ್ ಡಿಸೈಪಲ್ಸ್‌ನ ಆರಂಭಿಕ ಬೆಳವಣಿಗೆ

13 ಜನವರಿ, 2024

ನನ್ನ ಗುರುವಿನೊಂದಿಗೆ ಹೆಚ್ಚಿನ ಆಳವಾದ ಸಂಬಂಧದ ಭರವಸೆಗಾಗಿ ನಾನು ವಿಎಲ್‌ಡಿಗೆ ಸೇರಿಕೊಂಡೆ. ನನ್ನ ಜೀವನವನ್ನು ದೇವರಿಗೆ ಸಮರ್ಪಿಸುವ, ದೇವರನ್ನು ಪ್ರೀತಿಸುವ ಮತ್ತು ದೇವರ ಸೇವೆ ಮಾಡಲು ಸಿಕ್ಕಿದ ನಿರಂತರ ಆಶೀರ್ವಾದದಿಂದ ನಾನು ರೋಮಾಂಚನಗೊಂಡೆ. ವಿಎಲ್‌ಡಿಯ ಚಟುವಟಿಕೆಗಳೆಲ್ಲವೂ ನನ್ನ ಸಾಧನೆಯ ಮೇಲೆ ಹೆಚ್ಚು ಗಮನ ಹರಿಸುವಂತೆ ಮಾಡಲು ಮತ್ತು ಹಿಂದೆಂದಿಗಿಂತಲೂ “ಆಧ್ಯಾತ್ಮಿಕ ಕರ್ತವ್ಯಗಳನ್ನು” [ವಿಎಲ್‌ಡಿ ಸದಸ್ಯರಿಗೆ ವಿವರಿಸಲಾದ] ಅನುಸರಿಸಲು ಹೆಚ್ಚಿನ ಪ್ರಯತ್ನ ಮಾಡಲು ಕೊಡುಗೆ ನೀಡಿವೆ. ಮತ್ತು ಉಳಿದುದೆಲ್ಲಾ ತಾನೇ ತಾನಾಗಿ ಅನುಸರಿಸುತ್ತವೆ ಎಂಬುದು ನನ್ನ ನಂಬಿಕೆ ಮತ್ತು ನಿರೀಕ್ಷೆ.

—ಎಚ್.ಕೆ., ಕೋಲ್ಕತಾ

ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ/ಸೆಲ್ಫ್-ರಿಯಲೈಸೇಶನ್ ಫೆಲೋಶಿಪ್ (ವೈಎಸ್‌ಎಸ್‌/ಎಸ್ಆರ್‌ಎಫ್) ನ ಅಧ್ಯಕ್ಷ ಮತ್ತು ಆಧ್ಯಾತ್ಮಿಕ ಮುಖ್ಯಸ್ಥರಾದ ಸ್ವಾಮಿ ಚಿದಾನಂದಜಿ ಅವರು ವಾಲಂಟರಿ ಲೀಗ್ ಆಫ್ ಡಿಸೈಪಲ್ಸ್ ಕೈಪಿಡಿಯನ್ನು ಓದಲು ಓದುಗರನ್ನು ಆಹ್ವಾನಿಸುತ್ತಾ ತಮ್ಮ ಸಂದೇಶದಲ್ಲಿ ತಿಳಿಸುವಂತೆ, “ಪರಮಹಂಸ ಯೋಗಾನಂದರು ತಮ್ಮ ಜೀವನದ ಕೊನೆಯ ವರ್ಷಗಳಲ್ಲಿ ವೈಎಸ್‌ಎಸ್‌ ಮತ್ತು ಎಸ್‌ಆರ್‌ಎಫ್‌ ನ ಕ್ರಿಯಾಬನ್ ಸದಸ್ಯರು ತಮ್ಮ ಕೆಲಸದ ಬೆಳವಣಿಗೆ ಮತ್ತು ಪ್ರಗತಿಯಲ್ಲಿ ಸಕ್ರಿಯವಾಗಿ ಭಾಗವಹಿಸಲು ಸಾಧನಾ ಮಾಧ್ಯಮ ಅಥವಾ ಸಂರಚನೆಯ ನಿರ್ಮಾಣಕ್ಕಾಗಿ ಹೆಚ್ಚಿನ ಸಮಯವನ್ನು ಮೀಸಲಿಟ್ಟರು. ಈಗ ವೈಎಸ್‌ಎಸ್‌ ಮತ್ತು ಎಸ್‌ಆರ್‌ಎಫ್‌ ವಾಲಂಟರಿ ಲೀಗ್ ಆಫ್ ಡಿಸೈಪಲ್ಸ್ ನ ಔಪಚಾರಿಕ ಉದ್ಘಾಟನೆಯೊಂದಿಗೆ ಆ ಕನಸು ನನಸಾಗಿದೆ.”

ಆ ಉದ್ಘಾಟನೆಯ ನಂತರ, 2021 ರ ಜೂನ್ ನಲ್ಲಿ, ಈ ಸಾಮಾನ್ಯ ಶಿಷ್ಯ ವ್ಯವಸ್ಥೆಯ ಸದಸ್ಯರಿಗೆ ಸೇವೆಯನ್ನು ಸಲ್ಲಿಸಲು ಅನೇಕ ರೋಮಾಂಚನಕಾರಿ ಹೊಸ ಅವಕಾಶಗಳಿವೆ — ಮತ್ತು ಈ ಹಾದಿಯಲ್ಲಿ ತಮ್ಮ ಶಿಷ್ಯತ್ವವನ್ನು ಆಳಗೊಳಿಸುವ ಬಗ್ಗೆ ಇನ್ನಷ್ಟು ತಿಳಿಯುವ ಅವಕಾಶವಿದೆ. ಈ ಪೋಸ್ಟ್ ನಲ್ಲಿ, ಇಲ್ಲಿ ನಡೆಯುತ್ತಿರುವ ಕೆಲವು ಬೆಳವಣಿಗೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ನಾವು ಸಂತೋಷಪಡುತ್ತೇವೆ.

ಆದರೆ ಮೊದಲನೆಯದಾಗಿ, ಯೋಗದ ಸತ್ಸಂಗ ಸೊಸೈಟಿ ಆಫ್ ಇಂಡಿಯಾದಲ್ಲಿ ಕ್ರಿಯಾ ಯೋಗಿಯಾಗಿದ್ದುಕೊಂಡು ವಾಲಂಟಿಯರ್ ಲೀಗ್ ಆಫ್ ಡಿಸೈಪಲ್ಸ್ ಸಂಘದ (ವಿಎಲ್‌ಡಿ) ಸದಸ್ಯರಾಗಲು ಯಾರಾದರೂ ಆಯ್ಕೆ ಮಾಡುತ್ತಾರೆಯೇ ಎಂಬ ಪ್ರಶ್ನೆಗೆ ಹೇಗೆ ಸಂಬಂಧಿಸಿದೆ ಎಂಬುದರ ಬಗ್ಗೆ ಕೆಲವು ಹಿನ್ನೆಲೆ ಇಲ್ಲಿದೆ:

ಈ ಆಧ್ಯಾತ್ಮಿಕ ಮಾರ್ಗದಲ್ಲಿ, ಒಬ್ಬನು ಕ್ರಿಯಾ ಯೋಗದ ತಂತ್ರಕ್ಕೆ ದೀಕ್ಷೆ ಪಡೆದನೆಂದರೆ ಅವನು ಅಥವಾ ಅವಳು ಪರಮಹಂಸ ಯೋಗಾನಂದರೊಂದಿಗೆ ಭಾರತದಲ್ಲಿ ಸಹಸ್ರಮಾನಗಳಿಂದ ನಡೆದುಬಂದಿರುವ ಪ್ರಾಮಾಣಿಕ ಆಧ್ಯಾತ್ಮಿಕ ಅನ್ವೇಷಣೆಯ ಅತ್ಯಂತ ಪೂಜ್ಯ ಸಂಪ್ರದಾಯವಾದ ಗುರು-ಶಿಷ್ಯ ಸಂಬಂಧಕ್ಕೆ ಪ್ರವೇಶಿಸುತ್ತಾರೆ ಮತ್ತು ವೈಎಸ್‌ಎಸ್‌ ಅಥವಾ ಎಸ್ಆರ್‌ಎಫ್‌ನ ಕ್ರಿಯಾಬನ್ ಸದಸ್ಯರಾಗುತ್ತಾರೆ.

ಪವಿತ್ರ ಕ್ರಿಯಾ ದೀಕ್ಷೆಯನ್ನು ಪಡೆಯುವ ಆ ಸಮಯದಲ್ಲಿ, ಕ್ರಿಯಾಬನ್ ಆದವರು ಶಿಷ್ಯತ್ವದ ಆಧ್ಯಾತ್ಮಿಕ ಪ್ರತಿಜ್ಞೆಯನ್ನು ತೆಗೆದುಕೊಳ್ಳುತ್ತಾರೆ. ಕನಿಷ್ಠ ಒಂದು ವರ್ಷ ಕ್ರಿಯಾಬನ್ ಆಗಿದ್ದ ನಂತರ, ಒಬ್ಬರು ಬಯಸಿದರೆ, ವಿಎಲ್‌ಡಿ ಗೆ ಸೇರುವ ನಿರ್ಧಾರ ಮಾಡಬಹುದು, ಇದರ ಮೂಲಕ ಪರಮಹಂಸ ಯೋಗಾನಂದರು ಒತ್ತಿಹೇಳಿದ ತತ್ವಗಳ ಪ್ರಕಾರ ಸ್ವಯಂ ಶಿಸ್ತುಬದ್ಧ ಜೀವನವನ್ನು ನಡೆಸಲು ಮತ್ತು ಗುರು ಭಕ್ತಿಯ ಅಭಿವ್ಯಕ್ತಿಯಾಗಿ ವೈಎಸ್‌ಎಸ್‌/ಎಸ್‌ಆರ್‌ಎಫ್‌ ಗೆ ನಿಯಮಿತ ಸೇವೆ (ಸೇವೆ) ಸಲ್ಲಿಸಬಹುದು ಮತ್ತು ಅವರ ಕೆಲಸಕ್ಕೆ ಸಹಾಯ ಮಾಡುವ ಬಯಕೆಯನ್ನು ವ್ಯಕ್ತಪಡಿಸುವ ಮೂಲಕ ಆಧ್ಯಾತ್ಮಿಕ ಬದ್ಧತೆಯ ಹೆಚ್ಚುವರಿ ಪ್ರತಿಜ್ಞೆಯನ್ನು ತೆಗೆದುಕೊಳ್ಳಬಹುದು.

ವಿಎಲ್‌ಡಿ ಪ್ರಾರಂಭವಾದಾಗಿನಿಂದ, ಎಲ್ಲಾ ಗಮನವೂ ವಿಎಲ್‌ಡಿ ಸದಸ್ಯರಿಗೆ ವಿಎಲ್‌ಡಿ ಪ್ರತಿಜ್ಞೆಯ ಪ್ರಕಾರ ತಮ್ಮ ಜೀವನವನ್ನು ರೂಪಿಸಿಕೊಳ್ಳಲು ಸಹಾಯ ಮಾಡುವುದು, ಸನ್ಯಾಸಿಗಳು ವಿಶೇಷವಾಗಿ ವಿನ್ಯಾಸಗೊಳಿಸಿದ ತರಗತಿಗಳ ಮೂಲಕ ಅವರ ಆಂತರಿಕ ಆಧ್ಯಾತ್ಮಿಕ ಜೀವನವನ್ನು ಬಲಪಡಿಸುವುದು ಮತ್ತು ಪರಸ್ಪರ ಸೌಹಾರ್ದದ ಮೂಲಕ ಬಲವಾದ ಆಧ್ಯಾತ್ಮಿಕ ಬಂಧಗಳನ್ನು ರಚಿಸುವುದು ಇವುಗಳ ಮೇಲೆಯೇ ಕೇಂದ್ರೀಕರಿಸಿದೆ.

ಈ ಬರಹದಲ್ಲಿ, ವಾಲಂಟಿಯರ್ ಲೀಗ್ ನ ವೈಎಸ್‌ಎಸ್‌ ವಿಭಾಗವು ಕೈಗೊಂಡ ಕಾರ್ಯಕ್ರಮಗಳ ಬಗ್ಗೆ ನೀವು ಓದಬಹುದು — ವಿಶೇಷವಾಗಿ ವಿಎಲ್‌ಡಿ ಸದಸ್ಯರು ಭಾಗವಾಗಿರುವ ಮತ್ತು ಅವರ ಸಾಧನೆಯನ್ನು ಆಳಗೊಳಿಸುವ ಪ್ರಯತ್ನ ಮತ್ತು ಗುರು-ಸೇವೆಯಲ್ಲಿ ತಮ್ಮನ್ನು ತಾವು ಅರ್ಪಿಸಿಕೊಳ್ಳುವ ಪ್ರಯತ್ನಗಳಿಗೆ ಪ್ರಯೋಜನದಾಯಕವಾದ ಕಾರ್ಯಕ್ರಮಗಳ ಬಗ್ಗೆ ಓದಬಹುದು.

ವಿಎಲ್‌ಡಿ ತರಗತಿಗಳ ಅನನ್ಯ ಬೆಂಬಲ ಮತ್ತು ವಿಧಾನ

ಉದ್ಘಾಟನೆಯ ಸ್ವಲ್ಪ ಸಮಯದ ನಂತರ ವೈಎಸ್‌ಎಸ್‌/ಎಸ್ಆರ್ಎಫ್ ಕ್ರಿಯಾಬನ್ ಗಳಿಗಾಗಿ ನಡೆದ ಆನ್ಲೈನ್ ಸತ್ಸಂಗದಲ್ಲಿ, ಸ್ವಾಮಿ ಚಿದಾನಂದಜಿ ಅವರು “ವಾಲಂಟರಿ ಲೀಗ್ ಆಫ್ ಡಿಸೈಪಲ್ಸ್, ಮೊದಲು ಮತ್ತು ಪ್ರಮುಖವಾಗಿ, ಶಿಷ್ಯತ್ವದ ಬಗ್ಗೆ, ಮತ್ತು ನಂತರ ಆ ಪ್ರಜ್ಞೆಯೊಂದಿಗೆ ಕೆಲಸಕ್ಕೆ ಸೇವೆ ಸಲ್ಲಿಸುವ ಬಗ್ಗೆ — ಆ ಮನೋಭಾವದಿಂದ, ಗುರುವಿನೊಂದಿಗೆ ಆಂತರಿಕ ಹೊಂದಾಣಿಕೆ ಮತ್ತು ಸಮರ್ಪಣೆ….ಸಂಕ್ಷಿಪ್ತವಾಗಿ ವಾಲಂಟರಿ ಲೀಗ್ ಎಂದರೆ ಇದು: ವೈಎಸ್‌ಎಸ್‌ ಮತ್ತು ಎಸ್ಆರ್‌ಎಫ್‌ನ ಕ್ರಿಯಾಬನ್ ಶಿಷ್ಯರು, ಜೀವನವನ್ನು ನಡೆಸಲು ಮತ್ತು ಕೆಲಸಕ್ಕೆ ಸೇವೆ ಸಲ್ಲಿಸಲು ಬದ್ಧತೆಯನ್ನು ಹೊಂದಿದ್ದಾರೆ.”

ವೈಎಸ್‌ಎಸ್‌ ಮತ್ತು ಎಸ್‌ಆರ್‌ಎಫ್‌ ಸನ್ಯಾಸಿಗಳು ಮಾಸಿಕವಾಗಿ ನಡೆಸುವ ವಿಎಲ್‌ಡಿ ತರಗತಿಗಳು ಮತ್ತು ಕಾರ್ಯಾಗಾರಗಳು ವಿಎಲ್‌ಡಿ ಸದಸ್ಯರಿಗೆ ಸ್ಫೂರ್ತಿದಾಯಕ, ಒಳನೋಟದ ಮತ್ತು ಪ್ರಾಯೋಗಿಕ ಸಲಹೆಯನ್ನು ನೀಡುತ್ತವೆ. ಈ ಕಾರ್ಯಕ್ರಮಗಳನ್ನು ಸದಸ್ಯರು ಮಾಡಿದ ಪ್ರತಿಜ್ಞೆಯನ್ನು ಪೂರ್ಣಗೊಳಿಸುವಂತೆ ಬೆಂಬಲಿಸಲು ಮತ್ತು ಪರಮಹಂಸ ಅವರ ಬೋಧನೆಗಳ ತತ್ವಗಳನ್ನು ತಮ್ಮ ಪ್ರಜ್ಞೆಯಲ್ಲಿ ಹೆಚ್ಚು ಆಳವಾಗಿ ಹೀರಿಕೊಳ್ಳಲು ಸಹಾಯ ಮಾಡುವಂತೆ ವಿನ್ಯಾಸಗೊಳಿಸಲಾಗಿದೆ.

ಕಳೆದ ಎರಡು ವರ್ಷಗಳಲ್ಲಿ, ವೈಎಸ್‌ಎಸ್‌ ಸಂನ್ಯಾಸಿಗಳು ನೀಡುವ ವಿಎಲ್‌ಡಿ ಆನ್ಲೈನ್ ತರಗತಿಗಳು ಈ ಕೆಳಗಿನ ಪ್ರಮುಖ ವಿಷಯಗಳನ್ನು ಒಳಗೊಂಡಿದೆ:

  • ಆಧ್ಯಾತ್ಮಿಕ ದಿನಚರಿಯ ಮೂಲಕ ದೈವಿಕತೆಯೆಡೆಗೆ ನಮ್ಮ ಪ್ರಗತಿಯನ್ನು ತ್ವರಿತಗೊಳಿಸುವುದು
  • ಹಾಂಗ್-ಸಾ ತಂತ್ರದ ಅಭ್ಯಾಸದ ಒಳನೋಟಗಳು
  • ಕ್ರಿಯಾಬನ್ಸ್ ಗೆ ಸಮತೋಲಿತ ಜೀವನದ ಮಹತ್ವ
  • ಶ್ರೀ ದಯಾ ಮಾತಾ ಅವರ ಧ್ಯೇಯವಾಕ್ಯದ ಅವಲೋಕನಗಳು: ಪ್ರೀತಿ, ಸೇವೆ, ಧೈರ್ಯ, ನಂಬಿಕೆ

ವೈಎಸ್‌ಎಸ್‌ ಸನ್ಯಾಸಿಗಳು ನೀಡಿದ ಈ ತರಗತಿಗಳನ್ನು ತಪ್ಪಿಸಿಕೊಂಡ ವಿಎಲ್‌ಡಿ ಸದಸ್ಯರು ಅಥವಾ ಅವುಗಳನ್ನು ಮತ್ತೆ ಪರಿಶೀಲಿಸಲು ಬಯಸುವವರು ವೈಎಸ್‌ಎಸ್‌ ವಿಎಲ್‌ಡಿ ವೆಬ್‌ಸೈಟ್‌ನ ವಿಷಯ ವಿಭಾಗದಲ್ಲಿ ಈ ವೀಡಿಯೋಗಳನ್ನು ವೀಕ್ಷಿಸಬಹುದು. ವಿಎಲ್‌ಡಿ ಸದಸ್ಯರು ತಮ್ಮ ಡಿವೋಟೀ ಪೋರ್ಟಲ್ ಲಾಗಿನ್ ಮತ್ತು ಪಾಸ್‌ವರ್ಡ್‌ ಬಳಸಿ ಲಾಗಿನ್ ಮಾಡುವ ಮೂಲಕ ಇದನ್ನು ಉಪಯೋಗಿಸಬಹುದು.

ಇಷ್ಟೇ ಅಲ್ಲದೆ, ವೈಎಸ್‌ಎಸ್‌ ವಿಎಲ್‌ಡಿ ಸದಸ್ಯರು ಸಹ ಎಸ್‌ಆರ್‌ಎಫ್‌ ಸನ್ಯಾಸಿಗಳ ಈ ಕೆಳಗಿನ ಆನ್ಲೈನ್ ವಿಎಲ್‌ಡಿ ತರಗತಿಗಳು ಮತ್ತು ಕಾರ್ಯಾಗಾರಗಳಲ್ಲಿ ಉತ್ಸಾಹದಿಂದ ಭಾಗವಹಿಸಿದರು ಮತ್ತು ಪ್ರಯೋಜನವನ್ನು ಪಡೆದರು:

  • ಶಿಷ್ಯತ್ವ: ದೈವಿಕ ಉದ್ದೇಶದ ಜೀವನ
  • ಆಧ್ಯಾತ್ಮಿಕ ಪ್ರತಿಜ್ಞೆಯ ಉದ್ದೇಶ
  • ಆತ್ಮಾವಲೋಕನ: ಸ್ವಯಂ ಪ್ರಭುತ್ವದ ಕೀಲಿಕೈ
  • ನಿಮ್ಮ ಶಿಷ್ಯತ್ವದ ಜೀವನವನ್ನು ಗಾಢಗೊಳಿಸುವುದು
  • ಭಗವಂತ ಬೇಕು ಎಂಬ ಬೇಗೆಯಲ್ಲಿ ಬೇಯಿರಿ
  • ಗುರು ಮತ್ತು ಶಿಷ್ಯರ ನಡುವಿನ ಸಂಬಂಧ
  • ನಮ್ಮ ಆಧ್ಯಾತ್ಮಿಕ ಪ್ರಯತ್ನವನ್ನು ತಾಜಾ ಮತ್ತು ಸದಾ ಹೊಸದಾಗಿರಿಸುವುದು

ಎಸ್‌ಆರ್‌ಎಫ್‌ ಸನ್ಯಾಸಿಗಳ ತರಗತಿಗಳನ್ನು ಎಸ್‌ಆರ್‌ಎಫ್‌ ವಿಎಲ್‌ಡಿ ಕಂಟೆಂಟ್ ಸೈಟ್ ನಲ್ಲಿ ಹಾಕಲಾಗಿದೆ. ವೈಎಸ್‌ಎಸ್‌ ವಿಎಲ್‌ಡಿ ವೆಬ್‌ಸೈಟ್‌ನ ಕಂಟೆಂಟ್ ವಿಭಾಗದ ಮೂಲಕ ವೈಎಸ್‌ಎಸ್‌ ವಿಎಲ್‌ಡಿ ಸದಸ್ಯರು ಅವುಗಳನ್ನು ಉಪಯೋಗಿಸಬಹುದು.

ವಿಎಲ್‌ಡಿ ತರಗತಿಗಳ ವಿಶಿಷ್ಟತೆ ಏನೆಂದರೆ ವೈಎಸ್‌ಎಸ್‌ ಮತ್ತು ಎಸ್‌ಆರ್‌ಎಫ್‌ ಸನ್ಯಾಸಿಗಳ ಜಂಟಿ ಸತ್ಸಂಗಗಳು, ಇದನ್ನು ವಿಶ್ವದಾದ್ಯಂತ ನೇರ ಪ್ರಸಾರ ಮಾಡಲಾಯಿತು. ಕ್ರಿಯಾಬಾನ್ ಸಹೋದರ ಸಹೋದರಿಯರು ಇರುವ ಜಾಗತಿಕ ಕುಟುಂಬದಲ್ಲಿ ಹೆಚ್ಚಿನ ಏಕತೆ ಮತ್ತು ಆಪ್ತತೆಯನ್ನು ಬೆಳೆಸಲು ಅವು ಸಹಾಯ ಮಾಡಿವೆ.

ಈ ಸತ್ಸಂಗಗಳ ವಿಷಯಗಳು ಹೀಗಿವೆ:

  • ಶ್ರೀ ಶ್ರೀ ಪರಮಹಂಸ ಯೋಗಾನಂದ: ಪೂರ್ವ ಮತ್ತು ಪಶ್ಚಿಮಕ್ಕಾಗಿ ದೇವರಿಂದ ನೇಮಿಸಲ್ಪಟ್ಟ ಗುರು
  • ವಿಎಲ್‌ಡಿ ಸದಸ್ಯರ ಪ್ರಶ್ನೆಗಳಿಗೆ ಉತ್ತರಗಳು
  • ನಿಮ್ಮ ದೈವಿಕ ಉದ್ದೇಶವನ್ನು ನೆರವೇರಿಸುವುದು

ಸನ್ಯಾಸಿಗಳು ತಮ್ಮ ಒಳನೋಟಗಳನ್ನು ನೀಡುತ್ತಿದ್ದಾಗ, ಸತ್ಸಂಗದ ಅನುಭವವು ನನ್ನೊಂದಿಗೆ ಆಧ್ಯಾತ್ಮಿಕ ಸ್ಫೂರ್ತಿಯನ್ನು ಉದಾರವಾಗಿ ಹಂಚಿಕೊಳ್ಳುತ್ತಿರುವ, ಮನೆಯಲ್ಲಿರುವ ಬುದ್ಧಿವಂತ ಹಿರಿಯರ ಸಾಂತ್ವನದ ಉಪಸ್ಥಿತಿಯಂತೆ ಭಾಸವಾಗುತ್ತಿತ್ತು.

—ಆರ್. ಎಂ., ಪುಣೆ

ಅಧಿವೇಶನದಲ್ಲಿ ನನಗೆ ವೈಯಕ್ತಿಕವಾಗಿ ಬೇಕಾದ ಪ್ರಾಯೋಗಿಕ ವಿಷಯಗಳೆಂಬ ಮೌಲ್ಯಯುತವಾದ ಅನೇಕ ರತ್ನಗಳು ಇದ್ದವು. ಇವು ತಮ್ಮ ವೈಯಕ್ತಿಕ ಸಾಧನೆಯಲ್ಲಿ ಇದೇ ರೀತಿಯ ಅಡೆತಡೆಗಳನ್ನು ನಿವಾರಿಸಿಕೊಂಡು ಬೆಳೆದ ಸನ್ಯಾಸಿಗಳ ಒಳನೋಟಗಳಾಗಿವೆ. ಈ ಹಾದಿಯಲ್ಲಿರುವ ಅನುಭವಿ ಮತ್ತು ಹೊಸ ಶಿಷ್ಯರಿಗೆ ಇಬ್ಬರಿಗೂ ಬೇಕಾದ ಉಪಯುಕ್ತ ಸಲಹೆಗಳು ಇದ್ದವು.

—ಯು. ವಿ., ದೆಹಲಿ

ವಿಎಲ್‌ಡಿ ಸದಸ್ಯರ ಫೆಲೋಶಿಪ್ ಕಾರ್ಯಕ್ರಮಗಳು

ವೈಎಸ್‌ಎಸ್‌ ವಿಎಲ್‌ಡಿ ಸದಸ್ಯರು ಮಾರ್ಚ್, ಜುಲೈ ಮತ್ತು ಸೆಪ್ಟೆಂಬರ್ 2022 ರಲ್ಲಿ ವಿಎಲ್‌ಡಿ ಸದಸ್ಯ ಸ್ವಯಂಸೇವಕರು ನಡೆಸಿದ ಮೂರು ಆನ್ಲೈನ್ ಫೆಲೋಶಿಪ್ ಗಳ ಭಾಗವಾಗಿದ್ದರು.

ಮಾರ್ಚ್ 2022 ರಲ್ಲಿ ನಡೆದ ವೈಎಸ್‌ಎಸ್‌ ವಿಎಲ್‌ಡಿ ಸದಸ್ಯ ಫೆಲೋಶಿಪ್ ಸನ್ಯಾಸಿಗಳಿಂದ ನಡೆಸಲ್ಪಡುವ ಸತ್ಸಂಗವನ್ನು ಒಳಗೊಂಡಿತ್ತು ಮತ್ತು ವೈಎಸ್‌ಎಸ್‌ ಮತ್ತು ಎಸ್‌ಆರ್‌ಎಫ್‌ನ ನಾಲ್ಕು ದೀರ್ಘಕಾಲದ ವಿಎಲ್‌ಡಿ ಸದಸ್ಯರ ಸಮಿತಿಯು ಸಾಧನೆ ಮತ್ತು ಸೇವೆಯಲ್ಲಿ ಅವರ ವೈಯಕ್ತಿಕ ಅನುಭವಗಳನ್ನು ಹಂಚಿಕೊಳ್ಳುವುದನ್ನು ಒಳಗೊಂಡಿತ್ತು. ಇದರಲ್ಲಿ ಸನ್ಯಾಸಾಶ್ರಮದ ಸಂದೇಶ ಮತ್ತು ಪ್ಯಾನೆಲಿಸ್ಟ್ ಗಳು ಹಂಚಿಕೊಂಡ ಒಳನೋಟಗಳನ್ನು ಅವಲೋಕಿಸಲು ಭಾರತದಾದ್ಯಂತ ಇರುವ ವೈಎಸ್‌ಎಸ್‌ ವಿಎಲ್‌ಡಿ ಸದಸ್ಯರು ಜೂಮ್ ಬ್ರೇಕ್ಔಟ್ ಕೊಠಡಿಗಳಿಗೆ ಸೇರಿಕೊಂಡರು.

ವಿಶೇಷವಾಗಿ ಸಮಿತಿಯ ಸದಸ್ಯರು ಹಂಚಿಕೊಂಡ ವೈಯಕ್ತಿಕ ಕಥೆಗಳು ನನಗೆ ತುಂಬಾ ಇಷ್ಟವಾಯಿತು. ಇದು ಭಕ್ತರಿಂದ ಕೇಳಲು ಅಪರೂಪದ ಅನುಭವವಾಗಿದೆ; ಅವು ಗುರೂಜಿಯ ಸುಂದರ ಕುಟುಂಬಕ್ಕೆ ಅದ್ಭುತ ಉದಾಹರಣೆಗಳಾಗಿದ್ದವು. ನನಗೆ ಮುಖ್ಯಾಂಶಗಳು: ಸ್ವಾಮೀಜಿಯವರ ಭಾಷಣ, ಪ್ಯಾನಲ್ ಚರ್ಚೆ, ಬ್ರೇಕ್ ಔಟ್ ಕೊಠಡಿಗಳು! ಸಂಕ್ಷಿಪ್ತವಾಗಿ, ಕಾರ್ಯಕ್ರಮದ ಬಗ್ಗೆ ಎಲ್ಲವೂ!

—ಫೆಲೋಶಿಪ್ ನಲ್ಲಿ ಭಾಗವಹಿಸಿದ್ದ ಒಬ್ಬರಿಂದ.

ಜುಲೈ ಮತ್ತು ಸೆಪ್ಟೆಂಬರ್ 2022 ಫೆಲೋಶಿಪ್ ಗಳು “ಲಿವಿಂಗ್ ದಿ ವಿಎಲ್‌ಡಿ ಪ್ಲೆಡ್ಜ್” ವಿಷಯದ ಮೇಲೆ ಕೇಂದ್ರೀಕರಿಸಲ್ಪಟ್ಟಿತ್ತು. ಇದು ವಿಎಲ್‌ಡಿ ತರಗತಿಗಳ ವೀಡಿಯೋ ತುಣುಕುಗಳು ಮತ್ತು ಎಲ್ಲಾ ವಿಎಲ್‌ಡಿ ಸದಸ್ಯರು ತೆಗೆದುಕೊಂಡ ಪ್ರತಿಜ್ಞೆಯ ಬಗ್ಗೆ ಭಾಗವಹಿಸುವವರು ಯೋಚಿಸಲು ಮತ್ತು ಅವಲೋಕಿಸಲು ಮನೆಕೆಲಸವಾಗಿ ಕೈಪಿಡಿಯ ಪೂರ್ವಸಿದ್ಧತಾ ಓದುವಿಕೆಯನ್ನು ಒಳಗೊಂಡಿತ್ತು. ಪ್ರತಿಜ್ಞೆಯ ಬಗ್ಗೆ ಮೌನ ಅವಲೋಕನದ ನಂತರ ಅನುಕೂಲಕರವಾದ ಬ್ರೇಕ್ ಔಟ್ ರೂಮ್ ನಡೆಯಿತು, ಇದರಲ್ಲಿ ಪ್ರತಿಯೊಬ್ಬರೂ ಪ್ರತಿಜ್ಞೆಯ ಬಗ್ಗೆ ತಮ್ಮ ತಿಳುವಳಿಕೆ ಮತ್ತು ಅವರು ಅದನ್ನು ಹೇಗೆ ಕಾರ್ಯರೂಪಕ್ಕೆ ತರುತ್ತಿದ್ದಾರೆ ಎಂಬುದನ್ನು ಹಂಚಿಕೊಂಡರು.

ಭಾಗವಹಿಸಿದ ಅನೇಕರು ಕಾರ್ಯಕ್ರಮದ ಬಗ್ಗೆ ಆಳವಾದ ಸ್ಫೂರ್ತಿದಾಯಕ ಮತ್ತು ಹೃದಯಸ್ಪರ್ಶಿ ಮಾತುಗಳು ಮತ್ತು ಅಭಿಪ್ರಾಯಗಳನ್ನು ಹಂಚಿಕೊಂಡರು. ವಿಎಲ್‌ಡಿಗೆ ಸೇರಲು ತುಂಬಾ ಉತ್ಸುಕನಾಗಿದ್ದೆ ಮತ್ತು “ಇದು ತನ್ನ ಜೀವನದ ಅತ್ಯುತ್ತಮ ವರ್ಷಗಳು” ಎಂದು ಒಬ್ಬ ಭಕ್ತರು ಹೇಳಿದರು. ಇನ್ನೊಬ್ಬರು ಹೇಳಿದರು: “ಗುರುದೇವರು ಹಾಕಿಕೊಟ್ಟಿರುವ ಹಾದಿಯಲ್ಲಿ ಸಮರ್ಪಣೆಯ ಜೀವನವನ್ನು ನಡೆಸುತ್ತಿರುವ ಸಹ ಭಕ್ತರ ಒಳನೋಟಗಳು ಸ್ಫೂರ್ತಿದಾಯಕ ಮತ್ತು ಪ್ರೇರಕವಾಗಿದ್ದವು. ಅವು ನನ್ನ ಶಕ್ತಿಯನ್ನು ಪುನಃ ಕೇಂದ್ರೀಕರಿಸಲು ನನಗೆ ಸಹಾಯ ಮಾಡಿದವು ಮತ್ತು ಗುರೂಜಿ “ಆಧ್ಯಾತ್ಮಿಕ ಸಹವಾಸ” ವನ್ನು ಇಟ್ಟುಕೊಳ್ಳಲು ಏಕೆ ಒತ್ತು ನೀಡುತ್ತಿದ್ದರು ಎಂಬುದರ ಬಗ್ಗೆ ನನಗೆ ಹೊಸ ದೃಷ್ಟಿಕೋನವನ್ನು ನೀಡಿದವು.

ನೋಯ್ಡಾದಲ್ಲಿ ವಿಎಲ್‌ಡಿ ರಿಟ್ರೀಟ್

ನೋಯ್ಡಾದಲ್ಲಿ ವಿಎಲ್‌ಡಿ ರಿಟ್ರೀಟ್ ನ ಸಮಯದಲ್ಲಿ ಸ್ವಾಮಿ ಸ್ಮರಣಾನಂದರು ತರಗತಿಯನ್ನು ಮುನ್ನಡೆಸುತ್ತಿರುವುದು

ವೈಎಸ್‌ಎಸ್‌ ನೋಯ್ಡಾ ಆಶ್ರಮದಲ್ಲಿ ವಾಲಂಟಿಯರ್ ಲೀಗ್ ಆಫ್ ಡಿಸೈಪಲ್ಸ್ ನ (ವಿಎಲ್‌ಡಿ) ಸದಸ್ಯರಿಗಾಗಿ ಪ್ರತ್ಯೇಕವಾಗಿ ವಿಶೇಷ ವೈಯಕ್ತಿಕ ವಾರಾಂತ್ಯದ ರಿಟ್ರೀಟ್ ನ್ನು ನಡೆಸಲಾಯಿತು ಮತ್ತು ಏಪ್ರಿಲ್ 14 – 16, 2023 ರ ನಡುವೆ ವೈಎಸ್‌ಎಸ್‌ ದಕ್ಷಿಣೇಶ್ವರ ಆಶ್ರಮ, ಇಗತ್ಪುರಿ, ಪುಣೆ, ಚೆನ್ನೈ ಮತ್ತು ಕೊಯಮತ್ತೂರು ರಿಟ್ರೀಟ್ ಕೇಂದ್ರಗಳಿಗೆ ನೇರ ಪ್ರಸಾರ ಮಾಡಲಾಯಿತು.

ಈ ರಿಟ್ರೀಟ್ ಸನ್ಯಾಸಿಗಳ ನೇತೃತ್ವದ ಧ್ಯಾನಗಳು ಮತ್ತು “ನಮ್ಮ ಸಾಧನೆಯಲ್ಲಿ ಸೇವೆಯ ಪಾತ್ರ” ಮತ್ತು “ನಮ್ಮ ಧ್ಯಾನವನ್ನು ಆಳವಾಗಿಸುವುದು ಮತ್ತು ಮಧುರವಾಗಿಸುವುದು” ಎಂಬ ವಿಷಯಗಳ ಮೇಲೆ ಸತ್ಸಂಗಗಳನ್ನು ಒಳಗೊಂಡಿತ್ತು.

ವೈಎಸ್‌ಎಸ್‌ ನೋಯ್ಡಾ ಆಶ್ರಮದಲ್ಲಿ ವಿಎಲ್‌ಡಿ ರಿಟ್ರೀಟ್ ಗೆ ಹಾಜರಾಗಿದ್ದುದು ಪರಿವರ್ತಕ ಅನುಭವವಾಗಿದ್ದು, ನನಗೆ ಆಂತರಿಕ ಭದ್ರತೆ ಮತ್ತು ಶಾಂತತೆಯ ಭಾವನೆಯನ್ನು ನೀಡಿತು. ನನ್ನ ಎಲ್ಲಾ ಲೌಕಿಕ ಕರ್ತವ್ಯಗಳ ಬಗ್ಗೆ, ಅವುಗಳ ಸ್ವಭಾವವನ್ನು ಲೆಕ್ಕಿಸದೆ — ಆಸಕ್ತಿದಾಯಕವಾಗಿರಲಿ ಅಥವಾ ಇಲ್ಲದಿರಲಿ, ಕಷ್ಟಕರವಾಗಿರಲಿ ಅಥವಾ ಸುಲಭವಾಗಿರಲಿ ನಾನು ಹೊಸ ಉತ್ಸಾಹವನ್ನು ಕಂಡುಕೊಂಡೆ. ಈ ಅನುಭವವು ನನ್ನ ಮನೋಭಾವವನ್ನು ಬದಲಾಯಿಸಿದೆ, ನನ್ನ ಕೆಲಸವನ್ನು ಸೇವಾ ಮನೋಭಾವದಿಂದ ಮಾಡಲು ನನಗೆ ಮಾರ್ಗದರ್ಶನ ನೀಡಿದೆ. ಅಲ್ಲದೆ, ನನ್ನ ಧ್ಯಾನಗಳು ಹೆಚ್ಚು ನಿಯಮಿತ, ಆಳ ಮತ್ತು ಮಧುರವಾಗಿದೆ.

— ಎಂ. ಎಂ., ಭುವನೇಶ್ವರ

ಸ್ವಾಮಿ ಸ್ಮರಣಾನಂದ ಮತ್ತು ಸ್ವಾಮಿ ಆದ್ಯಾನಂದರ ನೇತೃತ್ವದಲ್ಲಿ ನಡೆದ ತಜ್ಞರ ತಂಡದ ಚರ್ಚೆಯು ನೋಯ್ಡಾದಲ್ಲಿ ನಡೆದ ರಿಟ್ರೀಟ್ ನ ಮತ್ತೊಂದು ವೈಶಿಷ್ಟ್ಯವಾಗಿತ್ತು. ಸನ್ಯಾಸಿಗಳು ವಿಎಲ್‌ಡಿ ಮತ್ತು ಸಾಧನಾ ಬಗ್ಗೆ ವಿವಿಧ ಪ್ರಶ್ನೆಗಳಿಗೆ ಉತ್ತರಿಸಿದರೆ, ಹತ್ತು ವಿಎಲ್‌ಡಿ ಸದಸ್ಯರು — ಐವರು ಪುರುಷರು ಮತ್ತು ಐವರು ಮಹಿಳೆಯರು, ವಿಭಿನ್ನ ಹಿನ್ನೆಲೆಯಿಂದ ಬಂದವರು ಮತ್ತು ಜೀವನದ ವಿವಿಧ ಹಂತಗಳನ್ನು ಪ್ರತಿನಿಧಿಸುವವರು — ತಮ್ಮದೇ ಆದ ದೃಷ್ಟಿಕೋನಗಳು ಮತ್ತು ಅನುಭವಗಳಿಂದ ಒಳನೋಟಗಳನ್ನು ಹಂಚಿಕೊಳ್ಳುವ ಮೂಲಕ ತಮ್ಮ ಪ್ರಸ್ತುತಿಗಳಿಗೆ ಪರಿಪೂರ್ಣತೆಯನ್ನು ಒದಗಿಸಿದರು.

ಸಂಗಮಗಳಲ್ಲಿ ವಿಎಲ್‌ಡಿ ಮಾಹಿತಿ ಬೂತ್ ಮತ್ತು ಮಾಹಿತಿ ಡೆಸ್ಕ್

ವೈಎಸ್‌ಎಸ್‌-ವಿಎಲ್‌ಡಿ-ಮಾಹಿತಿ-ಕೇಂದ್ರ-ವೈಎಸ್‌ಎಸ್‌-ಸಂಗಮ-2023-ಹೈದರಾಬಾದ್-ಫೆಬ್ರವರಿಯಲ್ಲಿ (1)
ಫೆಬ್ರವರಿಯಲ್ಲಿ ಹೈದರಾಬಾದ್ ನ ವೈಎಸ್‌ಎಸ್‌ ಸಂಗಮ್ 2023 ನಲ್ಲಿ ವಿಎಲ್‌ಡಿ ಮಾಹಿತಿ ಡೆಸ್ಕ್

ಹೆಚ್ಚು ತಿಳಿದುಕೊಳ್ಳಲು ಆಸಕ್ತಿ ಹೊಂದಿರುವ ವೈಎಸ್‌ಎಸ್‌ ಭಕ್ತರು ಮತ್ತು ಕ್ರಿಯಾಬಾನ್ ಗಳೊಂದಿಗೆ ವಿಎಲ್‌ಡಿ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳುವ ಅವಕಾಶವನ್ನು ವಿಎಲ್‌ಡಿ ಸದಸ್ಯರು ಸ್ವೀಕರಿಸಿದರು.

ಹೈದರಾಬಾದ್ ನಲ್ಲಿ ನಡೆದ ವೈಎಸ್‌ಎಸ್‌ ಸಂಗಮ್ 2023 ರ ಸಂದರ್ಭದಲ್ಲಿ, ವಿವಿಧ ಕೇಂದ್ರಗಳು ಮತ್ತು ನಗರಗಳ ವಿಎಲ್‌ಡಿ ಸದಸ್ಯರು ವಿಎಲ್‌ಡಿ ಸದಸ್ಯತ್ವದ ಪ್ರಮುಖ ಅಂಶಗಳನ್ನು ಜೊತೆಯಾಗಿ ಅವಲೋಕಿಸಲು ಒಟ್ಟುಗೂಡಿದರು. ಆಸಕ್ತ ಕ್ರಿಯಾಬಾನ್ ಭಕ್ತರೊಂದಿಗೆ ಈ ಮಾಹಿತಿಯನ್ನು ಹಂಚಿಕೊಳ್ಳಲು ಅವರು ಮಳಿಗೆಯನ್ನು ಸಹ ಸ್ಥಾಪಿಸಿದರು. ಸುಮಾರು 500 ಗುರು-ಭಾಯಿಗಳು ಮತ್ತು ಗುರು-ಬೆಹೆನ್ ಗಳು ಮಳಿಗೆಗೆ ಭೇಟಿ ನೀಡಿದರು.

ಅಕ್ಟೋಬರ್ 2022 ರಲ್ಲಿ ನೋಯ್ಡಾ ಆಶ್ರಮದಲ್ಲಿ ವಿಎಲ್‌ಡಿ ಮಾಹಿತಿ ಡೆಸ್ಕ್
ರಾಂಚಿಯಲ್ಲಿ ನವೆಂಬರ್ ನಲ್ಲಿ ನಡೆದ ಸಂಗಮ್ ಸಂದರ್ಭದಲ್ಲಿ ವಿಎಲ್‌ಡಿ ಮಾಹಿತಿ ಡೆಸ್ಕ್

ವಾಲಂಟಿಯರ್ ಲೀಗ್ ಆಫ್ ಡಿಸೈಪಲ್ಸ್ ತನ್ನ ಮೂರನೇ ವರ್ಷಕ್ಕೆ ಕಾಲಿಡುತ್ತಿರುವ ಈ ಸಂದರ್ಭದಲ್ಲಿ, ಅನೇಕ ವೈಎಸ್‌ಎಸ್‌ ಭಕ್ತರ ಜೀವನದಲ್ಲಿ ಅದು ತಂದ ಅನುಗ್ರಹಗಳಿಗಾಗಿ ನಾವು ಅಗಾಧವಾದ ಕೃತಜ್ಞತಾ ಭಾವದಿಂದ ತುಂಬಿದ್ದೇವೆ. ಗೃಹಸ್ಥ ಶಿಷ್ಯರಿಗಾಗಿ ಇರುವ ಈ ಪಂಥಕ್ಕಾಗಿ ಪರಮಹಂಸ ಅವರ ದೃಷ್ಟಿಕೋನವು ಪ್ರಸ್ತುತ ವಿಎಲ್‌ಡಿ ಸದಸ್ಯರ ಮತ್ತು ಭವಿಷ್ಯದಲ್ಲಿ ಶಿಷ್ಯತ್ವ ಮತ್ತು ದೈವಿಕ ಸೇವೆಗಾಗಿ ಈ ಅವಕಾಶಕ್ಕೆ ಆಕರ್ಷಿತರಾಗುವವರ ಇವರಿಬ್ಬರ ಜೀವನದಲ್ಲೂ ಹೇಗೆ ಅರಳುತ್ತದೆ ಮತ್ತು ತೆರೆದುಕೊಳ್ಳುತ್ತದೆ ಎಂಬುದನ್ನು ನೋಡಲು ನಾವು ಎದುರು ನೋಡುತ್ತಿದ್ದೇವೆ.

ಇನ್ನಷ್ಟು ತಿಳಿಯಲು

ವಾಲಂಟಿಯರ್ ಲೀಗ್ ಆಫ್ ಡಿಸೈಪಲ್ಸ್ ಬಗ್ಗೆ ಇನ್ನಷ್ಟು ತಿಳಿಯಲು, ದಯವಿಟ್ಟು ವೈಎಸ್‌ಎಸ್‌ ವಿಎಲ್‌ಡಿ ವೆಬ್‌ಸೈಟ್‌ಗೆ ಭೇಟಿ ನೀಡಿ. ವೈಎಸ್‌ಎಸ್‌/ಎಸ್ಆರ್ಎಫ್ ನ ಅಧ್ಯಕ್ಷರು ಮತ್ತು ಆಧ್ಯಾತ್ಮಿಕ ಮುಖ್ಯಸ್ಥರಾಗಿರುವ ಶ್ರೀ ಶ್ರೀ ಸ್ವಾಮಿ ಚಿದಾನಂದ ಗಿರಿ ಅವರು ನೀಡಿದ ಭಾಷಣದ ಸಣ್ಣ ವೀಡಿಯೋ ತುಣುಕು ನಿಮಗೆ ಅಲ್ಲಿ ಕಂಡುಬರುವ ಉಪಯುಕ್ತ ವಿಷಯಗಳಲ್ಲಿ ಒಂದಾಗಿದೆ, ಇದರಲ್ಲಿ ಅವರು ವಿಎಲ್‌ಡಿ ಯ ಉದ್ದೇಶವನ್ನು ವಿವರಿಸುತ್ತಾರೆ.

ನೀವು ವೈಎಸ್‌ಎಸ್‌ ಭಕ್ತರ ಪೋರ್ಟಲ್ ಖಾತೆಯನ್ನು ಹೊಂದಿದ್ದರೆ, ವಾಲಂಟಿಯರ್ ಲೀಗ್ ಆಫ್ ಡಿಸೈಪಲ್ಸ್ ನ ಕೈಪಿಡಿಯನ್ನು ಪಡೆಯಲು ನೀವು ಅಲ್ಲಿಗೆ ಲಾಗ್ ಇನ್ ಮಾಡಬಹುದು, ಇದು ವಿಎಲ್‌ಡಿ ಯ ಪೂರ್ವಚರಿತ್ರೆ ಮತ್ತು ಅದರ ಉದ್ದೇಶದ ಸಮಗ್ರ ಪ್ರಸ್ತುತಿ ಮತ್ತು ವಿಎಲ್‌ಡಿ ಪ್ರತಿಜ್ಞೆಯನ್ನು ಒಳಗೊಂಡಿದೆ. ಈ ಕೈಪಿಡಿಯನ್ನು ಎಸ್‌ಆರ್‌ಎಫ್‌/ವೈಎಸ್‌ಎಸ್‌ ಅಪ್ಲಿಕೇಶನ್ ಮೂಲಕ ವೈಎಸ್‌ಎಸ್‌/ಎಸ್‌ಆರ್‌ಎಫ್‌ ಕ್ರಿಯಾಬಾನ್ಸ್ ಉಪಯೋಗಿಸಬಹುದಾಗಿದೆ.

para-ornament

ಇದನ್ನು ಹಂಚಿಕೊಳ್ಳಿ