
ನವೆಂಬರ್ 15, 2017 ರಂದು, ಪರಮಹಂಸ ಯೋಗಾನಂದರ “ಗಾಡ್ ಟಾಕ್ಸ್ ವಿತ್ ಅರ್ಜುನ: ದ ಭಗವದ್ಗೀತ”ದ ಹಿಂದಿ ಅನುವಾದದ ಬಿಡುಗಡೆಗಾಗಿ ಭಾರತದ ರಾಷ್ಟ್ರಪತಿ ಶ್ರೀ ರಾಮ್ ನಾಥ್ ಕೋವಿಂದ್ ಅವರು ಜಾರ್ಖಂಡ್ ರಾಜ್ಯದ ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗಳೊಂದಿಗೆ ವೈಎಸ್ಎಸ್‌ನ ಶರದ್ ಸಂಗಮದ ಸಮಯದಲ್ಲಿ ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ, ರಾಂಚಿ ಆಶ್ರಮಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ, ಶ್ರೀ ಸ್ವಾಮಿ ಚಿದಾನಂದ ಗಿರಿಯವರು ಯೋಗದ ಈ ಪವಿತ್ರ ಗ್ರಂಥದ ಕುರಿತು ಪರಮಹಂಸ ಯೋಗಾನಂದರ ವ್ಯಾಖ್ಯಾನದ ಉಗಮದ ಬಗ್ಗೆ ಮತ್ತು ನಿಜವಾದ ಸಾರ್ವತ್ರಿಕ ಗ್ರಂಥವನ್ನು ಪ್ರತ್ಯೇಕಿಸುವ ವಿಶಿಷ್ಟ ಗುಣಗಳ ಕುರಿತು ಮಾತನಾಡಿದರು.