1915ರ ಜುಲೈನಲ್ಲಿ, ಪರಮಹಂಸ ಯೋಗಾನಂದರು ಭಾರತದ ಪ್ರಾಚೀನ ಸನ್ಯಾಸಿ ಪಂಥದ ಸನ್ಯಾಸ (ಪ್ರಪಂಚವನ್ನು ತ್ಯಜಿಸುವುದು) ದೀಕ್ಷೆಯನ್ನು ಸಿರಾಂಪುರದಲ್ಲಿ ಅವರ ಗುರು ಸ್ವಾಮಿ ಯುಕ್ತೇಶ್ವರರಿಂದ ಪಡೆದರು. ಈ ಘಟನೆ ಇಪ್ಪತ್ತೆರಡು ವರ್ಷ ವಯಸ್ಸಿನ ಮುಕುಂದಲಾಲ್ ಘೋಷ್, ಯಾರು ಆ ದಿನ ಸ್ವಾಮಿ ಯೋಗಾನಂದ ಗಿರಿ ಎಂದು ಕರೆಯಲ್ಪಟ್ಟರೋ, ಅವರ ಜೀವನದಲ್ಲಿ ಒಂದು ಮಹತ್ವದ ತಿರುವನ್ನು ಮಾತ್ರ ಪಡೆದುದಲ್ಲದೆ 20ನೇ ಶತಮಾನದ ಜಾಗತಿಕ ಆಧ್ಯಾತ್ಮಿಕತೆಯ ಮೇಲೆ ತನ್ನ ಪ್ರಭಾವ ಬೀರಿತು. ಅವರು ಸ್ಥಾಪಿಸಿದ ಈ ಸನ್ಯಾಸ ಪಂಥವು ಮರೆಯಲಾಗದ ತನ್ನ ಪರಂಪರೆಯನ್ನು ಸ್ಥಾಪಿಸಿತು.
ಪರಮಹಂಸ ಯೋಗಾನಂದರು ಸೇರಿದ್ದ ಪ್ರಾಚೀನ ಸ್ವಾಮಿ ಪಂಥವು ಇಂದು ಜಗದಾದದ್ಯಂತ ಎಲ್ಲ ರಾಷ್ಟ್ರಗಳಲ್ಲಿಯೂ ಇರುವ ಸನ್ಯಾಸಿಗಳನ್ನು ಒಳಗೊಂಡಿರುವ ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ/ಸೆಲ್ಫ್-ರಿಯಲೈಝೇಷನ್ ಫೆಲೋಷಿಪ್‌ನ ಸನ್ಯಾಸಿಗಳ ಪಂಥದ ರೂಪದಲ್ಲಿ ವರ್ಧಿಸುತ್ತಿದೆ. ಈ ಸನ್ಯಾಸಿಗಳ ಪಂಥವು ವೈಎಸ್‌ಎಸ್/ಎಸ್‌ಆರ್‌ಎಫ್‌ನ ಜಾಗತಿಕ ಬೆಳವಣಿಗೆಯನ್ನು ನೋಡಿಕೊಳ್ಳುತ್ತದೆ ಮತ್ತು ಎಲ್ಲ ರಾಷ್ಟ್ರಗಳಲ್ಲೂ ಯೋಗದ ವ್ಯಾಪಕ ಪ್ರಚಾರಕ್ಕೆ ಸಹಾಯ ಮಾಡುತ್ತದೆ.
ಇತ್ತೀಚಿನ ಸನ್ಯಾಸ ಪ್ರತಿಜ್ಞೆಯ ಸಮಾರಂಭಗಳು
ಗುರುವಾರ, ಮಾರ್ಚ್ 21, 2024ರಂದು ಲಾಸ್ ಏಂಜಲೀಸ್‍ನ ಸೆಲ್ಫ-ರಿಯಲೈಝೇಷನ್ ಫೆಲೋಶಿಪ್‍ನ ಅಂತರಾಷ್ಟ್ರೀಯ ಪ್ರಧಾನ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಭಾರತೀಯ ಯೋಗದಾ ಸತ್ಸಂಗ ಸೊಸೈಟಿಯ ಇಬ್ಬರು ಸನ್ಯಾಸಿಗಳು ಮತ್ತು ಹನ್ನೊಂದು ಸೆಲ್ಫ್-ರಿಯಲೈಜೇಷನ್ ಫೆಲೋಶಿಪ್‍ನ ಸನ್ಯಾಸಿಗಳು ವೈಎಸ್‍ಎಸ್/ಎಸ್‍ಆರ್‍ಎಫ್‍ಅಧ್ಯಕ್ಷ ಮತ್ತು ಆಧ್ಯಾತ್ಮಿಕ ಮುಖ್ಯಸ್ಥರಾದ ಶ್ರೀ ಶ್ರೀ ಚಿದಾನಂದ ಗಿರಿಯವರಿಂದ ಸನ್ಯಾಸ ದೀಕ್ಷೆಯನ್ನು ಪಡೆದರು.
ಸನ್ಯಾಸಿಗಳು ಸನ್ಯಾಸದ ಅಂತಿಮ ಪ್ರತಿಜ್ಞೆಗಳನ್ನು ಸ್ವೀಕರಿಸಿದಾಗ (ಹಲವು ವರ್ಷಗಳ ಸನ್ಯಾಸಿಗಳ ತರಬೇತಿ ಮತ್ತು ಸ್ವಯಂ-ಶಿಸ್ತಿನ ನಂತರ) ಒಂದು ನಿರ್ದಿಷ್ಟ ಆಧ್ಯಾತ್ಮಿಕ ಗುಣದ ಮುಖಾಂತರ ಭಗವಂತನೊಡನೆ, ಅನಂತ ಆನಂದದೊಡನೆ ಒಂದಾಗಲು ಅವರಿಗೆ ಒಂದು ನಿರ್ದಿಷ್ಟ ಹೊಸ ಹೆಸರನ್ನು ಕೊಡಲಾಗುತ್ತದೆ. ಇದನ್ನು ಪರಮಹಂಸ ಯೋಗಾನಂದರು ತಮ್ಮ ಯೋಗಿಯ ಆತ್ಮಕಥೆ ಯಲ್ಲಿ ವಿವರಿಸಿದ್ದಾರೆ.(“ಸನ್ಯಾಸಾಶ್ರಮ ಸ್ವೀಕರಿಸಿ ಸನ್ಯಾಸಿಯಾದೆ” ಅಧ್ಯಾಯದಲ್ಲಿ).
ಮಾರ್ಚ್ 21ರ ಪ್ರತಿಜ್ಞೆ ಸಮಾರಂಭ ಪೂರ್ಣಗೊಂಡ ಸ್ವಲ್ಪ ಸಮಯದ ನಂತರ ತೆಗೆದ ಹೊಸ ಸನ್ಯಾಸಿಗಳ ಭಾವಚಿತ್ರ ಕೆಳಗಡೆ ಇದೆ.

ಸನ್ಯಾಸಿಗಳ ಹೊಸ ಹೆಸರುಗಳ ಅರ್ಥಗಳು
ಸ್ವಾಮಿ ಅಸೀಮಾನಂದ: ಅನಂತದೊಂದಿಗಿನ ಏಕತೆಯ ಮೂಲಕ ಆನಂದ; ಸ್ವಾಮಿ ಗಣೇಶಾನಂದ: “ಅಡೆತಡೆಗಳನ್ನು ನಿವಾರಿಸುವ” ಬುದ್ಧಿವಂತಿಕೆ ಮತ್ತು ಯಶಸ್ಸಿನ ಭಗವಂತನಿಗೆ ಭಕ್ತಿಯ ಮೂಲಕ ಆನಂದ; ಸ್ವಾಮಿ ಬೋಧಾನಂದ: ಭಗವಂತನ ಜಾಗೃತ ಅರಿವಿನ ಮೂಲಕ ಆನಂದ; ಸ್ವಾಮಿ ಸಂಜಯಾನಂದ: ಅಧ್ಯಾತ್ಮಿಕ ಅವಲೋಕನದ ಒಳನೋಟದಿಂದ ತನ್ನ ಮೇಲೆ ಸಂಪೂರ್ಣ ವಿಜಯದಿಂದ ಸಾಧಿಸಿದ ಆನಂದ; ಸ್ವಾಮಿ ಶಾಂತಿಮೋಯ್: ದೈವಿಕ ಶಾಂತಿಯಿಂದ ವ್ಯಾಪಿಸಿರುವ (ಅಥವಾ ಆಗಬೇಕೆಂದು ಬಯಸುವ); ಸ್ವಾಮಿ ಪುಣ್ಯಾನಂದ: ಸದ್ಗುಣಗಳ ಮೂಲಕ ಆನಂದ; ಸ್ವಾಮಿ ಶಂಕರಾನಂದ: ಪರಮಾತ್ಮನ ಮೂಲಕ ಆನಂದ; ಸ್ವಾಮಿ ಶರಣಾನಂದ: ಪರಮಾತ್ಮನಲ್ಲಿ ಆಶ್ರಯ ಅಥವಾ ರಕ್ಷಣೆ ಪಡೆಯುವ ಮೂಲಕ ಆನಂದ; ಸ್ವಾಮಿ ಯೋಗೇಶಾನಂದ: ಯೋಗ ಪಾಂಡಿತ್ಯದ ಮೂಲಕ ಆನಂದ; ಸ್ವಾಮಿ ಸಖ್ಯಾನಂದ: ತನ್ನ ಆತ್ಮೀಯ ಸ್ನೇಹಿತನಾಗಿ ಭಗವಂತನನ್ನು ಪ್ರೀತಿಸುವ ಮೂಲಕ ಆನಂದ; ಸ್ವಾಮಿ ವಿದ್ಯಾನಂದ: ಆಧ್ಯಾತ್ಮಿಕ ಜ್ಞಾನ ಮತ್ತು ದೇವರ ಜ್ಞಾನದ ಮೂಲಕ ಆನಂದ; ಸ್ವಾಮಿ ಮೈತ್ರಿಮೊಯ್: ದಯೆಯ ಪ್ರೀತಿಯಿಂದ ವ್ಯಾಪಿಸಿದ; ಸ್ವಾಮಿ ನಿರ್ಮಲಾನಂದ: ಶುದ್ಧತೆಯ ಮೂಲಕ ಆನಂದ.
ಪರಮಹಂಸ ಯೋಗಾನಂದರ ಕೆಲಸವನ್ನು ಮುಂದುವರಿಸುವುದು
ತಮ್ಮ ದೈನಂದಿನ ಕ್ರಿಯಾಯೋಗ ಧ್ಯಾನದ ಸಾಧನೆಯ ಜೊತೆಗೆ, ಭಾರತದ ಯೋಗದಾ ಸತ್ಸಂಗ ಸೊಸೈಟಿಯ ಸನ್ಯಾಸಿಗಳು ಪರಮಹಂಸಜಿಯವರ ಕೆಲಸಗಳನ್ನು ವಿವಿಧ ರೀತಿಯಲ್ಲಿ ಸೇವೆ ಸಲ್ಲಿಸುವ ಮೂಲಕ ಮುಂದುವರೆಸುತ್ತಾರೆ. ಭಾರತ ಮತ್ತು ಸುತ್ತಮುತ್ತಲಿನ ದೇಶಗಳಲ್ಲಿ ಸಾರ್ವಜನಿಕ ಉಪನ್ಯಾಸ ಪ್ರವಾಸಗಳು ಮತ್ತು ತರಗತಿಗಳನ್ನು ನಡೆಸುವುದು ಸೇರಿದಂತೆ ಸಾಧನಾ ಸಂಗಮಗಳಲ್ಲಿ ಭಾಷಣಗಳನ್ನು ನೀಡುವುದು, ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸುವುದು,ಕಚೇರಿ ಕೆಲಸ ಮಾಡುವುದು, ಸಂಸ್ಥೆಯ ಆಶ್ರಮಗಳು, ಕೇಂದ್ರಗಳು ಮತ್ತು ಏಕಾಂತ ಧ್ಯಾನಸ್ಥಳಗಳನ್ನು ನಿರ್ವಹಿಸುವುದು, ವೈಎಸ್‍ಎಸ್ ಪುಸ್ತಕಗಳು ಮತ್ತು ಧ್ವನಿಮುದ್ರಣಗಳ ಪ್ರಕಟಣೆ ಮತ್ತು ವಿತರಣೆಯ ಮೇಲ್ವಿಚಾರಣೆ ಮತ್ತು ಆಧ್ಯಾತ್ಮಿಕ ವಿಷಯಗಳ ಕುರಿತು ಅನ್ವೇಷಕರಿಗೆ ಸಲಹೆ ನೀಡುವುದು.
ಪರಮಹಂಸ ಯೋಗಾನಂದರ ಆಶ್ರಮಗಳಲ್ಲಿ ಸನ್ಯಾಸಿಗಳ ಪ್ರಯಾಣದ ವಿವಿಧ ಹಂತಗಳ ಕುರಿತು ನಮ್ಮ ವೆಬ್‍ಸೈಟ್‍ನ “ಸನ್ಯಾಸಿ ಶ್ರೇಣಿ” ವಿಭಾಗದಲ್ಲಿ ನೀವು ಇನ್ನಷ್ಟು ತಿಳಿದುಕೊಳ್ಳಬಹುದು.