“ನಿಮ್ಮನ್ನು ನೀವು, ನೀವು ಅರಸುತ್ತಿರುವ ಬದಲಾವಣೆಯನ್ನು ಮಾಡಿಕೊಂಡಿರುವಂತೆ ನೋಡಿರಿ!” ಲಾರೆನ್ಸ್‌ ಮಾರ್ಟಿನ್‌ ಅವರಿಂದ

9 ಜೂನ್‌, 2023

ಈ ಕೆಳಗಿನದು ಏಪ್ರಿಲ್‌-ಜೂನ್‌-2004ರ ಯೋಗದಾ ಸತ್ಸಂಗ ನಿಯತಕಾಲಿಕೆಯಲ್ಲಿ ಪ್ರಕಟವಾದ “ನಿಮ್ಮ ಜೀವನವನ್ನು ಮರುಸೃಷ್ಟಿಸುವುದು: ಕಾರ್ಯೋಪಯೋಗಿ ಎಂಟು ಸ್ವ-ಬದಲಾವಣೆಯ ತಂತ್ರಗಳು,” ಲೇಖನದ ಆಯ್ದ ಭಾಗ. ದೀರ್ಘಕಾಲದಿಂದ ಎಸ್‌ಆರ್‌ಎಫ್‌ನ ಕ್ರಿಯಾಬಾನ್‌ ಹಾಗೂ ಭಕ್ತರಾಗಿರುವ ಲಾರೆನ್ಸ್‌ ಮಾರ್ಟಿನ್‌ ಸದರನ್‌ ಕ್ಯಾಲಿಫೋರ್ನಿಯಾದಲ್ಲಿ ನೆಲೆಸಿದ್ದಾರೆ.

ನಿಮ್ಮೊಳಗೆ ನೀವು ನಡೆಸುತ್ತಿರುವ ಆಂತರಿಕ ಸಂಭಾಷಣೆಯನ್ನು ಸ್ವಲ್ಪ ನಿಂತು ಗಮನಿಸಲು ಇದು ಸುಸಮಯವಾಗಿದೆ. ನಿಮ್ಮೊಡನೆ ನೀವು ಮಾತನಾಡಿದಾಗ ಏನೆಂದು ಹೇಳುತ್ತೀರಿ? ನೀವು ಮೆಚ್ಚುಗೆ ಸೂಸುವವರೇ? ನೀವು ಪ್ರೇರೇಪಿಸುವವರೇ?

ನಕಾರಾತ್ಮಕ ಸ್ವ-ಸಂಭಾಷಣೆ ನಾವು ಸಂದೇಹ ಪಡುವಂತೆ, ಅನಿಶ್ಚಿತರಾಗುವಂತೆ ಮತ್ತು ವಿಶ್ವಾಸವಿಲ್ಲದವರಂತೆ ಮಾಡುತ್ತದೆ. ಸಕಾರಾತ್ಮಕ ಸ್ವ-ಸಂಭಾಷಣೆ ನಾವು ದೀರ್ಘಕಾಲದ ಆತಂಕಗಳು ಮತ್ತು ಅಡೆತಡೆಗಳನ್ನು ಜಯಿಸುವುದಕ್ಕೆ, ಹೆಚ್ಚಿನ ವಿಶ್ವಾಸವುಳ್ಳವರಾಗುವುದಕ್ಕೆ, ಹಾಗೆಯೇ ದೃಷ್ಟಿ, ಕ್ರಿಯೆ, ಭಾವನೆಯಲ್ಲಿ ಹೆಚ್ಚು ಹತೋಟಿಯಲ್ಲಿರುವವರಾಗುವುದಕ್ಕೆ ಬೇಕಾದ ಶಕ್ತಿಯುತವಾದ ಹೊಸ ಸಂದೇಶಗಳನ್ನು ನೀಡುತ್ತದೆ.

ಸ್ವ-ಸಂಭಾಷಣೆಯ ವಿಧಗಳೆಡೆಗೆ ಗಮನ ಕೊಡುವುದು

ವಾಟ್‌ ಟು ಸೆ ವೆನ್‌ ಯು ಟಾಕ್‌ ಟು ಯುವರ್‌ಸೆಲ್ಫ್‌ನಲ್ಲಿ ಮನೋಶಾಸ್ತ್ರಜ್ಞ ಶಾದ್‌ ಹೆಲ್ಮ್‌ಸ್ಟೆಟ್ಟರ್‌, ಪಿ.ಎಚ್‌ಡಿ, ನಾವು ನಮ್ಮ ಸುಪ್ತ-ಪ್ರಜ್ಞೆಯನ್ನು ಆದೇಶಿಸುವ ಸ್ವ-ಸಂಭಾಷಣೆಯ ವಿಭಿನ್ನ ಸ್ತರಗಳನ್ನು ವಿವರಿಸುತ್ತಾರೆ. ಅವರು ಸೂಚಿಸುತ್ತಾರೆ, ನೀವು ನಿಮ್ಮ ಮನಸ್ಸಿಗೆ ಊಡಿಸುವ ಇಂತಹ “ನಾನು” ಹೇಳಿಕೆಗಳ ಪ್ರಭೇದಗಳಿಗೆ ಗಮನ ಕೊಡಿ:

— “ನನ್ನಿಂದಾಗುವುದಿಲ್ಲ.” ಹೆಲ್ಮ್‌ಸ್ಟೆಟ್ಟರ್‌ ಇದು ನಾವು ಮನಸ್ಸಿಗೆ ಉಣಿಸುವ ಅತ್ಯಂತ ಕೆಟ್ಟದಾದದ್ದು ಎಂದು ಉದ್ಗರಿಸುತ್ತಾ, ದುರದೃಷ್ಟಕರವಾಗಿ, ಬಹಳ ಸಾಮಾನ್ಯವಾದ “ಅದೇಶಗಳಲ್ಲೊಂದು” ಎಂದು ಹೇಳುತ್ತಾರೆ. ಈ ಪದಗುಚ್ಛಕ್ಕೆ ಗಮನ ಕೊಡುವುದು ಕೇವಲ ನಿಮ್ಮ ನಕಾರಾತ್ಮಕ, ಸ್ವ-ಮಿತಿಯನ್ನು ಬೇರು ಸಹಿತ ಕಿತ್ತುಹಾಕುವದಷ್ಟೇ ಅಲ್ಲ, ಸಕಾರಾತ್ಮಕ ಉದ್ದೇಶಗಳಿಗೆ ಅವುಗಳನ್ನು ಬದಲಾಯಿಸುವುದಕ್ಕೆ ಸಹಾಯ ಮಾಡುತ್ತದೆ.

— “ನಾನು ಮಾಡಲೇಬೇಕು.” ಇದು ಉತ್ತಮವಾದದ್ದು, ಆದರೂ ಮೂಲಭೂತವಾಗಿ ನಕಾರಾತ್ಮಕವಾದದ್ದು. ಏಕೆಂದರೆ ನೀವು ಒಂದು ಸಮಸ್ಯೆಯನ್ನು ಗುರುತಿಸಿದ್ದೀರಿ, ಆದರೆ ಅದರ ಪರಿಹಾರದ ಬಗ್ಗೆ ಗಮನ ಕೊಡುತ್ತಿಲ್ಲ ಎಂದು ಹೆಲ್ಮ್‌ಸ್ಟೆಟ್ಟರ್‌ ಹೇಳುತ್ತಾರೆ.

— “ನಾನು ಎಂದಿಗೂ ಮಾಡಲ್ಲ.” ಅಥವಾ “ಇನ್ನು ಮುಂದೆ ಮಾಡಲ್ಲ.” ಈ ಸ್ತರದಲ್ಲಿ, ಸ್ವ-ಸಂಭಾಷಣೆ ನಿಮಗೆ ವಿರುದ್ಧವಾಗಿರುವ ಬದಲು ನಿಮಗೆ ಕೆಲಸ ಮಾಡಲು ಪ್ರಾರಂಭಿಸುತ್ತದೆ, ಎಂದು ಹೆಲ್ಮ್‌ಸ್ಟೆಟ್ಟರ್‌ ಹೇಳುತ್ತಾರೆ. ನೀವು ಬದಲಾವಣೆಯ ಅವಶ್ಯಕತೆಯನ್ನು ಗುರುತಿಸಿದ್ದೀರಿ ಮತ್ತು ಅದರ ಬಗ್ಗೆ ಏನಾದರೂ ಮಾಡಬೇಕೆಂದು ನಿರ್ಧಾರವನ್ನು ತೆಗೆದುಕೊಂಡಿದ್ದೀರಿ. ಬಹಳ ಮುಖ್ಯವಾದದ್ದೆಂದರೆ, ಈಗಾಗಲೇ ಬದಲಾಣೆ ಆಗಿ ಹೋಗಿದೆ ಎಂದು ನಿಮಗೆ ನೀವು ವ್ಯಕ್ತಪಡಿಸುತ್ತಿದ್ದೀರಿ. ಇದು ಸುಪ್ತ ಮನಸ್ಸನ್ನು ಮರುಆದೇಶಿಸಲು ಸಹಾಯ ಮಾಡುತ್ತದೆ.

— “ನಾನು.” ಇಲ್ಲಿ ನೀವು ನಿಮ್ಮ ಸುಪ್ತ ಮನಸ್ಸಿಗೆ ನಿಮ್ಮ ಒಂದು ಹೊಸ ರೂಪವನ್ನು ದೃಢೀಕರಿಸುತ್ತಿದ್ದೀರಿ, ನಿಮ್ಮ ಆದರ್ಶಗಳು ಮತ್ತು ಸ್ವ-ಬದಲಾವಣೆಯ ಗುರಿಗಳ ಫಲಸಾಧನೆ. ಇಂತಹ ಸ್ವ-ಸಂಭಾಷಣೆಯು “ನನ್ನಿಂದಾಗುವುದಿಲ್ಲ”ದ ವ್ಯತಿರಕ್ತವಾದುದು; ಇದು ನಿಮ್ಮನ್ನು ನಕಾರಾತ್ಮಕ ಮಾನಸಿಕ ಜಾಡಿನಲ್ಲಿ ಹಿಡಿದಿಡುವ ಬದಲು ನಿಮ್ಮ ಸುಪ್ತ ಮನಸ್ಸಿನ ಶಕ್ತಿಯನ್ನು ಸಜ್ಜುಗೊಳಿಸುತ್ತದೆ.

ಈಗಲೇ ಆರಂಭಿಸಿ, ಈಗಲೇ ಪ್ರಯತ್ನಿಸಿ — ಮತ್ತು ನಿಮ್ಮ ಬದುಕನ್ನು ಬದಲಾಯಿಸಿ

ನಿಮ್ಮ ಸ್ವ-ಸಂಭಾಷಣೆಯ ಬಗ್ಗೆ ಕಾರ್ಯನಿರತರಾಗಲು ತತ್‌ಕ್ಷಣ ಪ್ರವೃತ್ತರಾಗಿ. ನಿಮಗೆ ನೀವು ನೀಡುವ ಮುಂದಿನ ನಕಾರಾತ್ಮಕ ಸಂದೇಶವನ್ನು ಗಮನಿಸಿ; ಆ ಸಂದೇಶವನ್ನು ಯಾವುದಾದರೂ ಸಕಾರಾತ್ಮಕ ಸಂದೇಶವನ್ನಾಗಿ ಬೇರೆ ರೀತಿಯಲ್ಲಿ ನಿರೂಪಿಸಲು ಪ್ರಯತ್ನಿಸಿ. ಮತ್ತು ನಿಮ್ಮ ಬಿಡುವಿನ ವೇಳೆಯಲ್ಲಿ ದೃಶ್ಯೀಕರಣ ಮತ್ತು ದೃಢೀಕರಣವನ್ನು ಅಭ್ಯಾಸ ಮಾಡಿ — ನೀವು ಅರಸುತ್ತಿರುವ ಬದಲಾವಣೆಯನ್ನು ಮಾಡಿದ್ದೀರಿ ಎಂಬಂತೆ ನಿಮ್ಮನ್ನು ನೀವು ಕಾಣಿರಿ ಮತ್ತು ನಿಮಗೆ ನೀವು ಹೇಳಿಕೊಳ್ಳಿ. ಕಟ್ಟಕಡೆಗೆ ನಕಾರಾತ್ಮಕ ಸ್ವ-ಸಂಭಾಷಣೆಯನ್ನು ಮಾತಿನ ಮಧ್ಯದಲ್ಲೇ ನಿಲ್ಲಿಸಲು ನಿಮಗೆ ಸಾಧ್ಯವಾಗುತ್ತದೆ.

ಆಧ್ಯಾತ್ಮಿಕ ಮೇರು ಕೃತಿ ಯೋಗಿಯ ಆತ್ಮಕಥೆಯ ಲೇಖಕರಾದ ಪರಮಹಂಸ ಯೋಗಾನಂದರಿಂದ ಸೃಜಿಸಲ್ಲಪಟ್ಟ ಯೋಗದಾ ಸತ್ಸಂಗವು ಆತ್ಮವನ್ನು ಚೇತನದೊಡನೆ ಸಂಯೋಜಿಸುವ ಹಾಗೂ ಸಮರಸ ಮತ್ತು ಆರೋಗ್ಯಪೂರ್ಣ ಬದುಕನ್ನು ನಡೆಸುವ ಭಾರತದ ಪುರಾತನ ವಿಜ್ಞಾನವಾದ ಯೋಗದ ಕಾಲಾತೀತ ಸಾರ್ವತ್ರಿಕ ಸತ್ಯಗಳನ್ನು ಉನ್ನತ ಪ್ರಜ್ಞೆಯನ್ನು ಅನ್ವೇಷಿಸುವವರೆಲ್ಲರಿಗೂ ಪರಿಚಯಿಸುತ್ತಿದೆ. ಯೋಗದಾ ಸತ್ಸಂಗವು ಪ್ರಸ್ತುತದಲ್ಲಿ ಒಂದು ವಾರ್ಷಿಕ ಮುದ್ರಿತ ನಿಯತಕಾಲಿಕೆಯಾಗಿದೆ, ಇದರ ಚಂದಾದಾರರಿಗೆ, ಪರಮಹಂಸಜಿ, ಹಿಂದಿನ ಮತ್ತು ಪ್ರಸ್ತುತ ವೈಎಸ್‌ಎಸ್‌/ಎಸ್‌ಆರ್‌ಎಫ್‌ ಅಧ್ಯಕ್ಷರುಗಳು ಮತ್ತು ಎಸ್‌ಆರ್‌ಎಫ್‌ ಮತ್ತು ವೈಎಸ್‌ಎಸ್‌ನ ಅಚ್ಚುಮೆಚ್ಚಿನ ಲೇಖಕರ ಹಿಂದಿನ ಲೇಖನಗಳನ್ನು ನೀಡುವ ಒಂದು ವಿಸ್ತೃತ ಆನ್‌ಲೈನ್‌ ಲೈಬ್ರರಿಯನ್ನು ಒದಗಿಸುತ್ತದೆ.

ಇದನ್ನು ಹಂಚಿಕೊಳ್ಳಿ