“ಪರಿಪೂರ್ಣತೆಯ ಅನ್ವೇಷಣೆ” – ಒಂದು ಕಥೆ

10 ಜನವರಿ, 2023

ಇದು ಜಾಣ್ಮೆಯ ಹಾಗೂ ಅತ್ಯಂತ ಎಚ್ಚರಿಕೆಯ ಮಾರ್ಗದರ್ಶನದಲ್ಲಿ ಹಲವಾರು ಪುಟ್ಟ ಪುಟ್ಟ ಹೆಜ್ಜೆಗಳನ್ನು ಇಟ್ಟಾಗ ಮಾತ್ರ ಪರಿಪೂರ್ಣತೆಯನ್ನು ಕಾಣಬಹುದು ಎಂಬುದರ ಬಗ್ಗೆ ಒಂದು ಪಾರಂಪರಿಕ ಕಥೆಯನ್ನು ಮತ್ತೆ ಹೇಳುವುದಾಗಿದೆ.

ಒಬ್ಬ ಮಹಾನ್‌ ಶಿಲ್ಪಿಯು ತನ್ನ ಸುತ್ತಿಗೆ ಮತ್ತು ಉಳಿಯನ್ನು ಮನಸ್ಸಿಲ್ಲದ ಮನಸ್ಸಿನಿಂದ ಕೆಳಗಿಟ್ಟು ಯಾರು ಇಂತಹ ತಡರಾತ್ರಿಯಲ್ಲಿ ತನ್ನ ಕಾರ್ಯಗಾರಕ್ಕೆ ಬಂದಿದ್ದಾರೆ ಎಂದು ನೋಡಲು ಹೋದನು.

ಬಾಗಿಲು ತೆರೆದು ಒಬ್ಬ ಪರಿಚಯದವನು ಹುಣ್ಣಿಮೆಯ ಬೆಳಕಿನಲ್ಲಿ ನಿಂತಿದ್ದನ್ನು ಕಂಡು, ಕಲೆಗಾರನು ಏನೂ ಮಾತನಾಡದೆ ಅವನಿಗೆ ನಮಸ್ಕರಿಸಿ ತನ್ನ ಕೆಲಸಕ್ಕೆ ಹಿಂದಿರುಗಲು ತಿರುಗಿದನು. ಅವನ ಸ್ನೇಹಿತನು ಅವನ ಹಿಂದೆಯೇ ಹೋದನು. ಆ ಸ್ನೇಹಿತನು, “ನಿನ್ನನ್ನು ನೋಡಿ ಎಷ್ಟೊಂದು ದಿನಗಳಾದವು! ಖಂಡಿತವಾಗಿಯೂ ನೀನು ಆ ವಿಗ್ರಹದ ಕೆಲಸ ಇನ್ನೂ ಮಾಡುತ್ತಿಲ್ಲ ಎಂದುಕೊಳ್ಳುತ್ತೇನೆ?” ಎಂದು ಕೇಳಿದ.

ಇನ್ನೂ ಏನೂ ಮಾತನಾಡದೆ, ಕಲೆಗಾರನು ತನ್ನ ಸ್ನೇಹಿತನನ್ನು ತಾನು ಹಲವಾರು ತಿಂಗಳಿಂದ ಕಷ್ಟಪಟ್ಟು ಮಾಡುತ್ತಿರುವ ಮೇರುಕೃತಿಯೆಡೆಗೆ ಕರೆದೊಯ್ದ. ಅದನ್ನು ನೋಡಿ, ಆ ಮನುಷ್ಯನೂ ಕೂಡ ಮೂಕನಾದ. ಸ್ವಲ್ಪ ಹೊತ್ತು ಕಳೆದ ಮೇಲೆ ಅವನು ಸೌಮ್ಯವಾಗಿ ಹೇಳಿದ, “ಹಿಂದೆಂದೂ ನೀನು ಮಾನುಷ ಚೈತನ್ಯವನ್ನು ಇಷ್ಟು ಭವ್ಯವಾಗಿ ಪ್ರಕಟಿಸಲು ಆಗಿರಲಿಲ್ಲ. ಇದು ನಿನ್ನ ಸರ್ವೋತ್ಕೃಷ್ಟ ಕೃತಿ.”

“ಇದು ಪೂರ್ಣವಾದ ಮೇಲೆ, ಇದು ನಿಜ ಎಂದು ನನಗನಿಸುತ್ತೆ” ಎಂದು ಶಿಲ್ಪಿಯು ಉತ್ತರಿಸಿದ. “ಆದರೆ ನಾನು ಮಾಡಬೇಕಾದ ಕೆಲಸ ಇನ್ನೂ ಸಾಕಷ್ಟಿದೆ. ಉಡುಪು ಇನ್ನೂ ಸರಿಯಾಗಿಲ್ಲ. ಮತ್ತೆ ನೋಡು – ಈ ಸ್ನಾಯುವಿಗೆ ಸ್ಪಷ್ಟತೆಯ ಅವಶ್ಯಕತೆಯಿದೆ; ಮತ್ತು ಆ ಚಹರೆ ಇನ್ನೂ ಮೃದುವಾಗಬೇಕಾಗಿದೆ.”

“ಆದರೆ ಇವೆಲ್ಲಾ ಬಹಳ ಸಣ್ಣ ಕೆಲಸಗಳು!” ಎಂದು ಅವನ ಸ್ನೇಹಿತ ಪ್ರತಿಭಟಿಸಿದ.

“ಆಹ್‌, ಸಣ್ಣ ಕೆಲಸಗಳೇ ಪರಿಪೂರ್ಣತೆಯನ್ನು ನೀಡುತ್ತವೆ, ಮತ್ತು ಪರಿಪೂರ್ಣತೆಯು ಸಣ್ಣ ಕೆಲಸವಲ್ಲ.” ಎಂದು ಕಲಾ ಪಾರಂಗತ ತನ್ನ ಸ್ನೇಹಿತನತ್ತ ತಿರುಗಿ ಹೇಳಿದ.

ಇದನ್ನು ಹಂಚಿಕೊಳ್ಳಿ