ಗುರುದೇವರ ಈ ಮಾತುಗಳಲ್ಲಿ ಅದೆಂತಹ ಮಹಾನ್ ಭರವಸೆಯಿದೆ: ‘ನಾನು ಈ ದೇಹವನ್ನು ತ್ಯಜಿಸಿದ ನಂತರವೂ, ಹಿಂದಿಗಿಂತಲೂ ಅತಿಹೆಚ್ಚು ಹತ್ತಿರದಲ್ಲಿರುತ್ತೇನೆ.’ ನಿಮ್ಮ ಜೀವನದ ಅತ್ಯಂತ ಕಷ್ಟಕರ ಅಥವಾ ಸವಾಲಿನ ಸಮಯಗಳಲ್ಲಿಯೂ ಗುರುಗಳು ನಿಮ್ಮೊಂದಿಗೆ ಇದ್ದಾರೆ, ಎಲ್ಲಾ ಕಷ್ಟಗಳನ್ನು ಪರಿಹರಿಸಬಹುದಾದ ಅಥವಾ ಸಹಿಸಿಕೊಳ್ಳಬಹುದಾದ ಉನ್ನತ ಪ್ರಜ್ಞೆಗೆ ನಿಮ್ಮನ್ನು ಮೇಲಕ್ಕೆತ್ತಲು ತಮ್ಮ ಎರಡೂ ಕೈಗಳನ್ನು ಚಾಚುತ್ತಾರೆ ಎಂಬುದನ್ನು ನೆನಪಿಡಿ.
— ಶ್ರೀಶ್ರೀ ದಯಾ ಮಾತಾ, ಮೂರನೇ ಅಧ್ಯಕ್ಷರು ಮತ್ತು ಸಂಘಮಾತಾ, ವೈಎಸ್ಎಸ್/ಎಸ್ಆರ್‌ಎಫ್

ಗುರು ಪೂರ್ಣಿಮೆಯಂದು ಒಂದು ವಿಶೇಷ ಅರ್ಪಣೆ ಮಾಡಿ
ನಮ್ಮ ಪ್ರೀತಿಯ ಗುರುದೇವರು, ಶ್ರೀ ಶ್ರೀಪರಮಹಂಸ ಯೋಗಾನಂದರು, ನಿಜವಾದ ಗುರುವು ತಮ್ಮ ದೈವೀ ದೃಷ್ಟಿಯ ಮೂಲಕ ಎಲ್ಲರಲ್ಲೂ ದೈವತ್ವವನ್ನು ಕಾಣುತ್ತಾರೆ ಮತ್ತು ಇತರರನ್ನು ಉನ್ನತೀಕರಿಸಲು ಆನಂದದಿಂದ ಸಮರ್ಪಿಸಿಕೊಳ್ಳುತ್ತಾರೆ ಎಂದು ನಮಗೆ ನೆನಪಿಸುತ್ತಾರೆ. ಗುರು ಪೂರ್ಣಿಮೆ ಎಂಬುದು ನಮ್ಮ ಗುರುಗಳನ್ನು – ಭಗವಂತನ ಪ್ರೀತಿ ಮತ್ತು ಬೆಳಕಿನ ದೈವೀ ಪ್ರತಿನಿಧಿಗಳನ್ನು – ಗೌರವಿಸುವ ಒಂದು ಪವಿತ್ರ ಸಂದರ್ಭವಾಗಿದೆ.
ನಮಗೆ, ಅವರ ಶಿಷ್ಯರಿಗೆ, ಈ ಘಟನೆಯು ಕೇವಲ ಒಂದು ಆಚರಣೆಗಿಂತ ಹೆಚ್ಚು. ಇದು ಆಳವಾದ ಕೃತಜ್ಞತೆಯಿಂದ ಅವರಿಗೆ ಅಂತರಂಗದಲ್ಲಿ ನಮಸ್ಕರಿಸುವ ಮತ್ತು ಅವರ ದೈವೀ ಉದ್ದೇಶವನ್ನು ಪೂರೈಸಲು ನಮ್ಮ ಬದ್ಧತೆಯನ್ನು ಪುನರುಚ್ಚರಿಸುವ ಕ್ಷಣವಾಗಿದೆ. ನಮ್ಮ ಗುರುಗಳಿಂದ ನಾವು ಪಡೆದ ಆಶೀರ್ವಾದಗಳ ಬಗ್ಗೆ ಮಾತ್ರವಲ್ಲದೆ, ನಾವು ಇತರರಿಗೆ ಅವರ ಬೆಳಕು ಮತ್ತು ಕರುಣೆಗೆ ಹೇಗೆ ಸಾಧನಗಳಾಗಬಹುದು ಎಂಬುದರ ಬಗ್ಗೆಯೂ ಚಿಂತಿಸುವ ಸಮಯವಾಗಿದೆ.
ಗುರುದೇವರ ಕಾರ್ಯಕ್ಕಾಗಿ ಭಕ್ತಿಯಿಂದ ಸೇವೆ ಸಲ್ಲಿಸಲು ಒಂದು ಸದವಕಾಶ
ಈ ಪವಿತ್ರ ಸಂದರ್ಭದಲ್ಲಿ ನಾವು ನಮ್ಮ ಆಲೋಚನೆಗಳು ಮತ್ತು ಹೃದಯಗಳನ್ನು ನಮ್ಮ ಪ್ರೀತಿಯ ಗುರುಗಳ ಸುತ್ತ ಕೇಂದ್ರೀಕರಿಸಿದಾಗ, ಅನೇಕ ಭಕ್ತರು ಅಂತರಂಗದಲ್ಲಿ ಹೀಗೆ ಕೇಳಲು ಪ್ರೇರಿತರಾಗುತ್ತಾರೆ: “ನಾನು ಅವರಿಗೆ ಅರ್ಥಪೂರ್ಣವಾದ ಏನನ್ನು ಅರ್ಪಿಸಬಹುದು?”
ಈ ಗುರು ಪೂರ್ಣಿಮೆಯಂದು, ವೈಎಸ್‌ಎಸ್ ಇತಿಹಾಸದಲ್ಲಿ ಹೊಸ ಅಧ್ಯಾಯವನ್ನು ಬರೆಯುವಲ್ಲಿ ನಮ್ಮೊಂದಿಗೆ ಸೇರಿಕೊಳ್ಳಲು ನಾವು ನಿಮ್ಮನ್ನು ಆಹ್ವಾನಿಸುತ್ತೇವೆ – ದಕ್ಷಿಣ ಭಾರತದ ಚೆನ್ನೈನಲ್ಲಿ ಪ್ರಪ್ರಥಮ ವೈಎಸ್‌ಎಸ್ ಆಶ್ರಮವನ್ನು ಅಭಿವೃದ್ಧಿಪಡಿಸುವುದು, ಇದು ಎಲ್ಲಾ ಸತ್ಯಾನ್ವೇಷಿ ಆತ್ಮಗಳಿಗೆ ಶಾಂತಿಯುತ ಮತ್ತು ನೆಮ್ಮದಿಯ ಆಶ್ರಯವಾಗಲಿದೆ.
ಈ ಆಧ್ಯಾತ್ಮಿಕ ಆವರಣದ ಅಡಿಪಾಯದ ಕೆಲಸ ಮತ್ತು ನಿರ್ಮಾಣದ ಮೊದಲ ಹಂತಕ್ಕೆ ₹65 ಕೋಟಿ ಅಂದಾಜು ಮಾಡಲಾಗಿದೆ – ಇದು ದೇಶಾದ್ಯಂತ ಹರಡಿರುವ ಗುರುಗಳ ದೊಡ್ಡ ಆಧ್ಯಾತ್ಮಿಕ ಕುಟುಂಬದ ಸಾಮೂಹಿಕ ಭಕ್ತಿ ಮತ್ತು ಪ್ರೀತಿಯ ಬೆಂಬಲವನ್ನು ಅವಲಂಬಿಸಿರುವ ಒಂದು ಪವಿತ್ರ ಕಾರ್ಯವಾಗಿದೆ.
ಗುರುಗಳ ಪರಂಪರೆಯಲ್ಲಿ ಬೇರೂರಿರುವ ದೃಷ್ಟಿಕೋನ
ಪರಮಹಂಸ ಯೋಗಾನಂದಜಿಯವರು ವೈಎಸ್‌ಎಸ್/ಎಸ್‌ಆರ್‌ಎಫ್ ನ ಪ್ರಭಾವವು “ಒಂದು ಸೌಮ್ಯ ಮಾರುತದಂತೆ ಪ್ರಾರಂಭವಾಗಿ, ಕ್ರಮೇಣ ಶಕ್ತಿ ಮತ್ತು ಬಲದಲ್ಲಿ ಹೆಚ್ಚಾಗಿ, ಒಂದು ಪ್ರಬಲ ಗಾಳಿಯಂತೆ, ಭಗವಂತನ ಮಕ್ಕಳ ಜೀವನವನ್ನು ಆವರಿಸಿರುವ ಕತ್ತಲೆ ಮತ್ತು ಕಲ್ಮಷಗಳನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ” ಎಂದು ಮುಂದಾಲೋಚನೆ ಮಾಡಿದರು. ಅವರ ಆಶೀರ್ವಾದಗಳು ರಾಂಚಿ, ದಕ್ಷಿಣೇಶ್ವರ, ದ್ವಾರಾಹಟ್ ಮತ್ತು ನೋಯ್ಡಾದಲ್ಲಿರುವ ಆಶ್ರಮಗಳ ಮೂಲಕ ವೈಎಸ್‌ಎಸ್ ನ ಬೆಳವಣಿಗೆಯನ್ನು ನಿಧಾನವಾಗಿ ಪೋಷಿಸಿವೆ. ಆದರೆ, ದೀರ್ಘಕಾಲದಿಂದಲೂ, ಭಾರತದ ವಿಶಾಲವಾದ ದಕ್ಷಿಣ ಪ್ರದೇಶವು ಒಂದು ಸಮರ್ಪಿತ ಆಶ್ರಮದ ಕೊರತೆಯನ್ನು ಎದುರಿಸುತ್ತಿತ್ತು.
ಈಗ, ಆ ಬಹುನಿರೀಕ್ಷಿತ ಕನಸು ಈಡೇರುತ್ತಿದೆ.
ಸಾಧನಾ ಕೇಂದ್ರದಿಂದ ಆಶ್ರಮದೆಡೆಗೆ
ಮೂರು ಕಡೆ ಮೀಸಲು ಅರಣ್ಯದಿಂದ ಮತ್ತು ನಾಲ್ಕನೇ ಕಡೆ ಶಾಂತ ಸರೋವರದಿಂದ ಆವೃತವಾಗಿರುವ ಯೋಗದಾ ಸತ್ಸಂಗ ಚೆನ್ನೈ ಸಾಧನಾ ಕೇಂದ್ರವು – ತಮಿಳುನಾಡಿನ ಶ್ರೀಪೆರಂಬದೂರಿನ ಬಳಿಯ ಮನ್ನೂರ್‌ನಲ್ಲಿ, ಚೆನ್ನೈನಿಂದ ಕೇವಲ 40 ಕಿ.ಮೀ. ದೂರದಲ್ಲಿ, 17 ಎಕರೆಗಳ ಪ್ರಶಾಂತ ಹಸಿರಿನ ನಡುವೆ ನೆಲೆಸಿದೆ – ಇದನ್ನು 2010 ರಲ್ಲಿ ಆಧ್ಯಾತ್ಮಿಕ ನವೀಕರಣಕ್ಕಾಗಿ ಒಂದು ಪವಿತ್ರ ಸ್ಥಳವಾಗಿ ಉದ್ಘಾಟಿಸಲಾಯಿತು.
2022 ರಲ್ಲಿ ಯೋಗದಾ ಸತ್ಸಂಗ ಪಾಠ ಮಾಲಿಕೆಯ ತಮಿಳು ಮತ್ತು ತೆಲುಗು ಅನುವಾದಗಳ ಪ್ರಾರಂಭದೊಂದಿಗೆ, ಆ ಪ್ರದೇಶದ ಹೆಚ್ಚು ಹೆಚ್ಚು ಸತ್ಯಾನ್ವೇಷಿ ಆತ್ಮಗಳು ಪರಮಹಂಸಜಿಯವರ ವಿಮೋಚನಕಾರಿ ಕ್ರಿಯಾ ಯೋಗದ ಬೋಧನೆಗಳತ್ತ ಆಕರ್ಷಿತರಾದರು.
ಈ ಹೆಚ್ಚುತ್ತಿರುವ ಆಸಕ್ತಿಗೆ ಪ್ರತಿಕ್ರಿಯೆಯಾಗಿ, 2024ರಲ್ಲಿ ಸಾಧನಾ ಕೇಂದ್ರದಲ್ಲಿ ನಿವಾಸಿ ಸನ್ಯಾಸಿ ಸಮುದಾಯವನ್ನು ಸ್ಥಾಪಿಸಲಾಯಿತು, ಇದು ಅಲ್ಲಿ ನೀಡಲಾಗುವ ಆಧ್ಯಾತ್ಮಿಕ ಕಾರ್ಯಕ್ರಮಗಳನ್ನು ಮಾರ್ಗದರ್ಶನ ಮಾಡಲು ಮತ್ತು ಕ್ರಮೇಣ ವಿಸ್ತರಿಸಲು ಸಹಾಯ ಮಾಡುತ್ತದೆ. ಶೀಘ್ರದಲ್ಲೇ, ಈ ಸಾಧನಾ ಕೇಂದ್ರವು ದೇಶಾದ್ಯಂತ, ಮತ್ತು ವಿಶೇಷವಾಗಿ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳ ಮತ್ತು ಕರ್ನಾಟಕದಂತಹ ದಕ್ಷಿಣ ರಾಜ್ಯಗಳಿಂದ ಹಾಗೂ ಪುದುಚೇರಿಯ ಕೇಂದ್ರಾಡಳಿತ ಪ್ರದೇಶದಿಂದ ಭಕ್ತರನ್ನು ಆಕರ್ಷಿಸಲು ಪ್ರಾರಂಭಿಸಿತು, ಇದು ಆಧ್ಯಾತ್ಮಿಕ ಚಟುವಟಿಕೆಯ ರೋಮಾಂಚಕ ಕೇಂದ್ರವಾಯಿತು.
ಇಲ್ಲಿ ನಡೆದ ವಾರಾಂತ್ಯದ ಸಾಧನಾ ಶಿಬಿರಗಳು, ಸಾಧನಾ ಸಂಗಮಗಳು ಮತ್ತು ಪ್ರವಚನಗಳು ಹೆಚ್ಚು ಹೆಚ್ಚು ಭಕ್ತರು ತಮ್ಮ ಸಾಧನೆಯನ್ನು ಮತ್ತು ದೇವರು ಹಾಗೂ ಗುರುಗಳೊಂದಿಗಿನ ಸಂಪರ್ಕವನ್ನು ಆಳವಾಗಿಸಲು ಸಾಧನಾ ಕೇಂದ್ರದ ಶಾಂತ ವಾತಾವರಣವನ್ನು ಅರಸಿದ್ದರಿಂದ, ಆಳವಾಗಿ ಮೆಚ್ಚುಗೆ ಪಡೆದವು. ಈ ಪ್ರದೇಶದ ಭಕ್ತರಿಗೆ ಹೆಚ್ಚಿನ ಆಧ್ಯಾತ್ಮಿಕ ಬೆಂಬಲವನ್ನು ನೀಡುವ ಅಗತ್ಯವನ್ನು ಗುರುತಿಸಿ, ನಮ್ಮ ಪೂಜ್ಯ ಅಧ್ಯಕ್ಷರು ಮತ್ತು ಆಧ್ಯಾತ್ಮಿಕ ಮುಖ್ಯಸ್ಥರಾದ ಸ್ವಾಮಿ ಚಿದಾನಂದ ಗಿರಿ ಅವರು ಸೆಪ್ಟೆಂಬರ್ 15, 2024 ರಂದು ಔಪಚಾರಿಕವಾಗಿ ಇದನ್ನು ಯೋಗದಾ ಸತ್ಸಂಗ ಶಾಖಾ ಆಶ್ರಮ ಎಂದು ಘೋಷಿಸಿದರು – ಇದು ಭಾರತದಲ್ಲಿ ಐದನೇ ವೈಎಸ್‌ಎಸ್ ಆಶ್ರಮವಾಗಿ ಸ್ಥಾಪಿಸಲ್ಪಟ್ಟಿತು.


ಈ ಹೆಚ್ಚುತ್ತಿರುವ ಆಸಕ್ತಿಗೆ ಪ್ರತಿಕ್ರಿಯೆಯಾಗಿ, ಆಶ್ರಮವು ವಿವಿಧ ಆಧ್ಯಾತ್ಮಿಕ ಕಾರ್ಯಕ್ರಮಗಳನ್ನು ನೀಡುತ್ತಿದೆ:
- ದೈನಂದಿನ ಗುಂಪು ಧ್ಯಾನಗಳು, ಭಾನುವಾರದ ಸತ್ಸಂಗಗಳು ಮತ್ತು ಸ್ಮರಣಾರ್ಥ ಕಾರ್ಯಕ್ರಮಗಳು
- ತಮಿಳು, ತೆಲುಗು, ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಸಾಧನಾ ಸಂಗಮಗಳು ಮತ್ತು ಸಾಧನಾ ಶಿಬಿರಗಳು. ಮಲಯಾಳಂನಲ್ಲಿಯೂ ಸಾಧನಾ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ
- ಮಕ್ಕಳ ಸತ್ಸಂಗಗಳು, ಯುವ ಕಾರ್ಯಕ್ರಮಗಳು ಮತ್ತು ಸ್ವಯಂಸೇವಕರ ಸಾಧನಾ ಶಿಬಿರಗಳು
- ಸನ್ಯಾಸಿಗಳ ಸಲಹೆ ಮತ್ತು ಹತ್ತಿರದ ಕೇಂದ್ರಗಳಿಗೆ ತಲುಪುವುದು
- ನೆರೆಹೊರೆಯಲ್ಲಿನ ಬಡವರಿಗೆ ಬೆಂಬಲ ನೀಡಲು ದತ್ತಿ ಸೇವೆಗಳು


ಭಕ್ತರು ತಮ್ಮ ಮನದಾಳದ ಅನುಭವಗಳನ್ನು ಹೀಗೆ ಹಂಚಿಕೊಂಡಿದ್ದಾರೆ:
“ಈ ಹೊಸ ಆಶ್ರಮವು ಗುರುಗಳ ದೈವಿಕ ಉಪಸ್ಥಿತಿ ಮತ್ತು ಆಶೀರ್ವಾದಗಳನ್ನು ಹೊರಸೂಸುತ್ತದೆ. ಇಲ್ಲಿ ಅತೀವ ಶಾಂತಿ ಮತ್ತು ಆನಂದದ ಭಾವನೆ ಮೂಡುತ್ತದೆ. ಸನ್ಯಾಸಿಗಳು ಮತ್ತು ಸೇವಕರು ಆತ್ಮೀಯತೆ ಮತ್ತು ದಯೆಯನ್ನು ನೀಡುತ್ತಾರೆ, ಇದು ಪ್ರತಿ ಭೇಟಿಯನ್ನು ಆಳವಾಗಿ ಉನ್ನತೀಕರಿಸುವ ಅನುಭವವನ್ನಾಗಿ ಮಾಡುತ್ತದೆ. ನಾನು ಮತ್ತೆ ಮತ್ತೆ ಇಲ್ಲಿಗೆ ಬರಲು ಎದುರು ನೋಡುತ್ತಿದ್ದೇನೆ!”
“ನಗರದ ಗದ್ದಲದಿಂದ ಕೇವಲ ಒಂದು ಗಂಟೆಯ ದೂರದಲ್ಲಿ ಸುಲಭವಾಗಿ ತಲುಪಬಹುದಾದ ಆಶ್ರಮವನ್ನು ಹೊಂದಿರುವುದು ಗುರುಗಳಿಂದ ದೊರೆತ ಅಮೂಲ್ಯ ಆಶೀರ್ವಾದವಾಗಿದೆ. ಈ ಪ್ರಶಾಂತ ಆಶ್ರಯವು ನನ್ನ ಆಶ್ರಯ ತಾಣವಾಗಿದೆ, ಇಲ್ಲಿ ನಾನು ನನ್ನ ಸಾಧನೆಯನ್ನು ಆಳವಾಗಿಸಬಹುದು ಮತ್ತು ಆಂತರಿಕ ಸಮಾಧಾನವನ್ನು ಕಂಡುಕೊಳ್ಳಬಹುದು.”
ಚೆನ್ನೈ ಆಶ್ರಮಕ್ಕಾಗಿ ಒಂದು ದೃಷ್ಟಿಕೋನವನ್ನು ರೂಪಿಸುವುದು: ಸಮಗ್ರ ಯೋಜನೆ (ಮಾಸ್ಟರ್ ಪ್ಲಾನ್)
ಹೊಸದಾಗಿ ಸ್ಥಾಪಿಸಲಾದ ಆಶ್ರಮದಲ್ಲಿ ಕಾರ್ಯಕ್ರಮಗಳ ವಿಸ್ತರಣೆಯೊಂದಿಗೆ, ಮೂಲಸೌಕರ್ಯದ ಕೆಲವು ಮಿತಿಗಳು ಸ್ಪಷ್ಟವಾದವು. ಆರಂಭಿಕ ನಿರ್ಮಾಣವು ಸಾಧಾರಣವಾಗಿದ್ದು, ಭಕ್ತರು, ಸೇವಕರು ಮತ್ತು ಸನ್ಯಾಸಿಗಳಿಗೆ ಸೀಮಿತ ವಸತಿ ಮತ್ತು ಸೌಲಭ್ಯಗಳನ್ನು ಮಾತ್ರ ಒದಗಿಸುತ್ತಿತ್ತು. ಅಸ್ತಿತ್ವದಲ್ಲಿರುವ ಸಾಧನಾ ಕೇಂದ್ರದ ಕಟ್ಟಡಗಳನ್ನು ಈಗ ನಡೆಯುತ್ತಿರುವ ಹೆಚ್ಚುವರಿ ಚಟುವಟಿಕೆಗಳ ಪ್ರಮಾಣವನ್ನು ಸಹಕರಿಸಲಾಗುವಂತೆ ವಿನ್ಯಾಸಗೊಳಿಸಿರಲಿಲ್ಲ.
ಪ್ರಸ್ತುತ ಅಗತ್ಯಗಳನ್ನು ಪೂರೈಸಲು ಮತ್ತು ಭವಿಷ್ಯಕ್ಕಾಗಿ ಯೋಜನೆ ರೂಪಿಸಲು, ನಗರ ಯೋಜಕರು, ವಾಸ್ತುಶಿಲ್ಪಿಗಳು ಮತ್ತು ಇತರ ತಜ್ಞರೊಂದಿಗೆ ಸಮಾಲೋಚಿಸಿ ಒಂದು ಸಮಗ್ರ ಮಾಸ್ಟರ್ ಪ್ಲಾನ್ ಅನ್ನು ಚಿಂತನಶೀಲವಾಗಿ ಅಭಿವೃದ್ಧಿಪಡಿಸಲಾಗಿದೆ.
ಭಾರತ ಮತ್ತು ನೇಪಾಳಕ್ಕೆ ಅವರ ಇತ್ತೀಚಿನ ತಮ್ಮ ಪ್ರವಾಸದ ಭಾಗವಾಗಿ, ಸ್ವಾಮಿ ಚಿದಾನಂದಜಿಯವರು ಫೆಬ್ರವರಿ 2025 ರಲ್ಲಿ ವೈಎಸ್‌ಎಸ್ ಚೆನ್ನೈ ಆಶ್ರಮಕ್ಕೆ ತಮ್ಮ ಮೊಟ್ಟ ಮೊದಲ ಭೇಟಿ ನೀಡಿದರು. ಅವರ ಭೇಟಿಯ ಸಮಯದಲ್ಲಿ, ಅವರಿಗೆ ಆಶ್ರಮದ ಆವರಣದ ಪ್ರವಾಸವನ್ನು ನೀಡಲಾಯಿತು ಮತ್ತು ಪ್ರಸ್ತಾವಿತ ಮಾಸ್ಟರ್ ಪ್ಲಾನ್‌ನ ಅವಲೋಕನವನ್ನು ಪ್ರಸ್ತುತಪಡಿಸಲಾಯಿತು.

ಸ್ವಾಮೀಜಿಯವರ ಆಶೀರ್ವಾದದೊಂದಿಗೆ, ಶಾಂತಿ, ಏಕಾಂತ ಮತ್ತು ಸುಸ್ಥಿರತೆಯನ್ನು ಪ್ರತಿಬಿಂಬಿಸುವ ಒಂದು ಸಮಗ್ರ ಆಧ್ಯಾತ್ಮಿಕ ಆವರಣವನ್ನು ಅಭಿವೃದ್ಧಿಪಡಿಸಲು ಎರಡು ಹಂತದ ನಿರ್ಮಾಣ ಯೋಜನೆಯನ್ನು ಅಂತಿಮಗೊಳಿಸಲಾಗಿದೆ. ಯೋಜನೆಯ ಮೊದಲ ಹಂತವನ್ನು ಕೈಗೊಳ್ಳುವ ಮೊದಲು, ನಾವು ಕೆಲವು ಅಡಿಪಾಯದ ಕೆಲಸಗಳನ್ನು ಮಾಡಬೇಕಾಗಿದೆ, ಇದು ಕೆಲವು ಆರಂಭಿಕ ವೆಚ್ಚಗಳನ್ನು ಒಳಗೊಂಡಿರುತ್ತದೆ.
ಅಡಿಪಾಯದ ಕೆಲಸಗಳು (₹10 ಕೋಟಿ)
- ಭೂಮಿಯನ್ನು ಮಣ್ಣು ತುಂಬುವ ಮೂಲಕ ಸಮತಟ್ಟುಗೊಳಿಸುವುದು, ವಿಶೇಷವಾಗಿ ತಗ್ಗು ಪ್ರದೇಶದ ಈಶಾನ್ಯ ಭಾಗದಲ್ಲಿ.
- ಆವರಣದ ಸುತ್ತಮುತ್ತಲೂ ಕಾಂಕ್ರೀಟ್ ರಸ್ತೆಯನ್ನು ನಿರ್ಮಿಸುವುದು, ಮತ್ತು ಆಶ್ರಮದ ವಿವಿಧ ಭಾಗಗಳನ್ನು ಸಂಪರ್ಕಿಸುವ ಅನೇಕ ನಡೆದಾಡುವ ಮಾರ್ಗಗಳು.
- ಮಳೆನೀರು ಕಾಲುವೆಗಳು ಮತ್ತು ಕಂದಕಗಳನ್ನು ನಿರ್ಮಿಸುವುದು, ಮತ್ತು ಪರಿಧಿಯ ರಸ್ತೆಯ ಉದ್ದಕ್ಕೂ ವಿದ್ಯುತ್ ಮತ್ತು ಸಂಪರ್ಕ ಜಾಲದ ತಂತಿಗಳನ್ನು ಹಾಕಲು.


- ಧ್ಯಾನ ಮಂದಿರ (1,200 ಸಾಮರ್ಥ್ಯ)
- ಭಕ್ತರ ವಸತಿ ಬ್ಲಾಕ್ (100 ಸಾಮರ್ಥ್ಯ)
- ಸನ್ಯಾಸಿಗಳ ವಸತಿ (25 ಸನ್ಯಾಸಿಗಳಿಗಾಗಿ)
- ಅಡುಗೆ ಮನೆ ಮತ್ತು ಭೋಜನಾಲಯ (200 ಸಾಮರ್ಥ್ಯ)
- ಮಕ್ಕಳ ಸತ್ಸಂಗ ಸೌಲಭ್ಯಗಳು
- ಆಡಳಿತ ಕಟ್ಟಡ
- ವೈಎಸ್‌ಎಸ್ ಪ್ರಕಟಣೆಗಳ ಗೋದಾಮು
- ಒಳಚರಂಡಿ ಸಂಸ್ಕರಣಾ ಘಟಕ
- ಭೂದೃಶ್ಯವುಳ್ಳ ಉದ್ಯಾವನ




ಹಂತ II : ಭಕ್ತರ ಸೌಲಭ್ಯಗಳ ವಿಸ್ತರಣೆ ಮತ್ತು ಸುಸ್ಥಿರ ಮೂಲಸೌಕರ್ಯ (₹45 ಕೋಟಿ)
- ಸತ್ಸಂಗದ ಸಭಾಂಗಣ
- ಹೆಚ್ಚುವರಿ ಭಕ್ತರ ವಸತಿ ಸಮುಚ್ಚಯಗಳು (200 ಸಾಮರ್ಥ್ಯ)
- ಸೇವಕರಿಗೆ ವಸತಿ ಗೃಹಗಳು
- ಉಪಯುಕ್ತತೆಗಳು ಮತ್ತು ಲಾಂಡ್ರಿ ಸಮುಚ್ಚಯ
- ಸೌರ ಫಲಕಗಳು, ನೀರಿನ ಟ್ಯಾಂಕ್
ಮಾಸ್ಟರ್ ಪ್ಲಾನ್ ಅನ್ನು ರಚಿಸುವಾಗ, ನಾವು ಸಾಧ್ಯವಾದಷ್ಟು ಮೂಲ ಹಸಿರು ಹೊದಿಕೆಯನ್ನು – ವಿಶೇಷವಾಗಿ ಮಾವಿನ ಮತ್ತು ತೆಂಗಿನ ಮರಗಳನ್ನು – ಸಂರಕ್ಷಿಸಲು ಹೆಚ್ಚಿನ ಕಾಳಜಿ ವಹಿಸಿದ್ದೇವೆ. ಪ್ರತಿಯೊಂದು ಕಟ್ಟಡವನ್ನು ಕಾರ್ಯನಿರ್ವಹಣೆ ಮತ್ತು ಸೌಂದರ್ಯದ ಸಾಮರಸ್ಯದ ಮಿಶ್ರಣವನ್ನು ಪ್ರತಿಬಿಂಬಿಸುವಂತೆ ಚಿಂತನಶೀಲವಾಗಿ ವಿನ್ಯಾಸಗೊಳಿಸಲಾಗಿದೆ. ಈ ಸೌಲಭ್ಯಗಳು ಮುಂದಿನ ಪೀಳಿಗೆಗೆ – ಯುವಕರು ಮತ್ತು ವೃದ್ಧರು, ದೂರದ ಮತ್ತು ಹತ್ತಿರದ – ಸಾವಿರಾರು ಅನ್ವೇಷಕರಿಗೆ ಸೇವೆ ಸಲ್ಲಿಸಲಿವೆ.
ಯೋಜನೆಯ ಕಾಲಾವಧಿ:
ಚೆನ್ನೈ ಆಶ್ರಮ ಯೋಜನೆಯ ಅಭಿವೃದ್ಧಿ ವೇಳಾಪಟ್ಟಿಯ ಸ್ಪಷ್ಟ ಚಿತ್ರಣವನ್ನು ಒದಗಿಸಲು, ಕೆಳಗಿನ ಕಾಲಾವಧಿಯು ಪ್ರಮುಖ ಹಂತಗಳನ್ನು ವಿವರಿಸುತ್ತದೆ:
ಹಂತ | ಪ್ರಾರಂಭ | ನಿರೀಕ್ಷಿತ ಅವಧಿ |
---|---|---|
ಅಡಿಪಾಯದ ಕೆಲಸಗಳು | ಜೂನ್ 2025* | 6 ತಿಂಗಳುಗಳು |
ಹಂತ I | ಜನವರಿ 2026 | 3 ವರ್ಷಗಳು |
*ಸೂಚನೆ: ಅಡಿಪಾಯದ ಹಂತದ ಕೆಲಸವು ಇತ್ತೀಚೆಗೆ ಪ್ರಾರಂಭವಾಗಿದೆ.
ನಾವು ಅದನ್ನು ಒಟ್ಟಾಗಿ ನಿರ್ಮಿಸೋಣ
ಯೋಜನೆಯ ಅಡಿಪಾಯದ ಕೆಲಸಗಳು ಮತ್ತು ಮೊದಲ ಹಂತಕ್ಕೆ ಒಟ್ಟು ಆರ್ಥಿಕ ಅಗತ್ಯವು ₹65 ಕೋಟಿ ಆಗಿದೆ. ಈ ದೈವೀ ದೃಷ್ಟಿಯನ್ನು ಸಾಕಾರಗೊಳಿಸಲು ನಿಮ್ಮ ಸಹಾಯವನ್ನು ನಾವು ಆತ್ಮೀಯವಾಗಿ ಸ್ವಾಗತಿಸುತ್ತೇವೆ.
ಈ ಪವಿತ್ರ ಕಾರ್ಯವು ನಮ್ಮ ಪ್ರತಿಯೊಬ್ಬರೊಳಗಿನ ಗುರು-ಸೇವೆಯ ನಿಸ್ವಾರ್ಥ ಭಾವವನ್ನು ಆಹ್ವಾನಿಸುತ್ತದೆ. ಪ್ರತಿಯೊಂದು ಪ್ರಾರ್ಥನೆ, ಪ್ರತಿಯೊಂದು ಅರ್ಪಣೆ—ಮೊತ್ತ ಎಷ್ಟೇ ಇರಲಿ—ಸತ್ಯಾನ್ವೇಷಿ ಆತ್ಮಗಳಿಗಾಗಿ ನಿರ್ಮಿಸಲಾಗುತ್ತಿರುವ ಈ ಬೆಳಕಿನ ದೇವಾಲಯದಲ್ಲಿ ಒಂದು ಇಟ್ಟಿಗೆಯಾಗುತ್ತದೆ.
ನೀವು ಧ್ಯಾನ ಮಂದಿರಕ್ಕೆ ಕೊಡುಗೆ ನೀಡಲು, ಒಂದು ನಿರ್ದಿಷ್ಟ ಸೌಲಭ್ಯವನ್ನು ಬೆಂಬಲಿಸಲು, ಅಥವಾ ವಿಶಾಲವಾದ ದೃಷ್ಟಿಗಾಗಿ ಮಾಸಿಕ ಕೊಡುಗೆ ನೀಡಲು ಪ್ರೇರಿತರಾಗಿದ್ದರೂ ಸಹ – ನಿಮ್ಮ ಔದಾರ್ಯವು ಮುಂದಿನ ವರ್ಷಗಳಲ್ಲಿ ಪರಮಹಂಸಜಿಯವರ ಬೋಧನೆಗಳನ್ನು ಸಾವಿರಾರು ಜನರಿಗೆ ಕೊಂಡೊಯ್ಯುತ್ತದೆ ಮತ್ತು ಖಂಡಿತವಾಗಿಯೂ ಅವರ ದೈವಿಕ ಆಶೀರ್ವಾದಗಳನ್ನು ಆಕರ್ಷಿಸುತ್ತದೆ.
ಗುರುಜಿ ಹೇಳಿದರು: “ಭಕ್ತರ ನಿಸ್ವಾರ್ಥ ಸೇವೆಗೆ ಭಗವಂತನು ಪ್ರತಿಯಾಗಿ ನೀಡುತ್ತಾನೆ; ಪ್ರಕೃತಿಯ ಮೂಲಕ ಕಂಪಿಸುವ ಅವನ ಮೌನ ಆಜ್ಞೆಯು ಅವರ ಪ್ರತಿಯೊಂದು ಅಗತ್ಯದ ನೆರವೇರಿಕೆಯನ್ನು ತರುತ್ತದೆ, ಆಗಾಗ್ಗೆ ಬಹು ನಿಗೂಢ ರೀತಿಯಲ್ಲಿ.”

ನಿಮ್ಮ ಧನಸಹಾಯವನ್ನು ಮಾಡುವುದು ಹೇಗೆ
ಈ ಪವಿತ್ರ ಕಾರ್ಯವನ್ನು ಪ್ರೋತ್ಸಾಹಿಸಲು ನೀವು ಪ್ರೇರಿತರಾಗಿದ್ದರೆ, ನೀವು ಕೆಳಗಿನ ಆಯ್ಕೆಗಳಿಂದ ಆರಿಸಿಕೊಳ್ಳಬಹುದು:
ನೀವು ದೊಡ್ಡ ಕಾಣಿಕೆ ನೀಡಲು ಅಥವಾ ಈ ಆಶ್ರಮ ಯೋಜನೆಯ ಒಂದು ನಿರ್ದಿಷ್ಟ ಅಂಶವನ್ನು ಪೋಷಿಸಲು ಪ್ರೇರಿತರಾಗಿದ್ದರೆ, ನಿಮ್ಮೊಂದಿಗೆ ವೈಯಕ್ತಿಕವಾಗಿ ಮಾತನಾಡಲು ನಾವು ಸಂತೋಷಪಡುತ್ತೇವೆ. ದಯವಿಟ್ಟು ವೈಎಸ್‌ಎಸ್ ಸಹಾಯವಾಣಿಯನ್ನು (0651-6655 555, ಸೋಮವಾರ-ಶನಿವಾರ: ಬೆಳಿಗ್ಗೆ 9:30 ರಿಂದ ಸಂಜೆ 4:30 ರವರೆಗೆ) ಸಂಪರ್ಕಿಸಲು ಹಿಂಜರಿಯಬೇಡಿ.
ನಮ್ಮ ಹೃತ್ಪೂರ್ವಕ ಕೃತಜ್ಞತೆ
ನಿಮ್ಮ ಪ್ರೀತಿ ಮತ್ತು ಪ್ರಾರ್ಥನೆಗಳಿಗಾಗಿ, ಮತ್ತು ಗುರುದೇವರ ಕಾರ್ಯಕ್ಕೆ ನೀವು ಸೇವೆ ಸಲ್ಲಿಸುವ ಅನೇಕ ವಿಧಾನಗಳಿಗಾಗಿ ನಾವು ಆಳವಾಗಿ ಕೃತಜ್ಞರಾಗಿದ್ದೇವೆ. ನಿಮ್ಮ ಸಹಾಯದೊಂದಿಗೆ, ಇಲ್ಲಿ ಬರುವ ಎಲ್ಲರಿಗೂ ಯೋಗದಾ ಸತ್ಸಂಗ ಶಾಖಾ ಆಶ್ರಮ, ಚೆನ್ನೈ, ಖಂಡಿತವಾಗಿಯೂ ಗುರುದೇವರ ಬೆಳಕು, ಪ್ರೀತಿ ಮತ್ತು ಜ್ಞಾನವನ್ನು ಹೊರಸೂಸುವ ಒಂದು ಆಧ್ಯಾತ್ಮಿಕ ಅಭಯಾರಣ್ಯವಾಗಿ ಅರಳುತ್ತದೆ.
ನಮ್ಮ ಪ್ರೀತಿಯ ಗುರುದೇವರು, ಮತ್ತು ಮಹಾನ್ ಗುರುಗಳ ಆಶೀರ್ವಾದಗಳು ಯಾವಾಗಲೂ ನಿಮ್ಮೊಂದಿಗಿರಲಿ.
ದೈವಿಕ ಸ್ನೇಹದಲ್ಲಿ,
ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ