ಸ್ವಾಮಿ ಶ್ರೀ ಯುಕ್ತೇಶ್ವರ್ ಅವರ ಮಹಾಸಮಾಧಿ ದಿವಸ

ಸ್ಮರಣಾರ್ಥ ಧ್ಯಾನ

ರವಿವಾರ, ಮಾರ್ಚ್ 9, 2025

6:30 ಎ .ಎಂ.

– 8:00 ಎ. ಎಂ.

(ಅಧಿಕೃತ ಭಾರತೀಯ ಕಾಲಮಾನ)

ಕಾರ್ಯಕ್ರಮದ ಬಗ್ಗೆ

ಮನುಷ್ಯನು ದೈವಿಕತೆಯಲ್ಲಿ ಲಂಗರು ಹಾಕುವವರೆಗೂ ಮಾನವ ನಡತೆಯು ಎಂದಿಗೂ ವಿಶ್ವಾಸಾರ್ಹವಲ್ಲ. ನೀವು ಈಗ ಆಧ್ಯಾತ್ಮಿಕ ಪ್ರಯತ್ನವನ್ನು ಮಾಡುತ್ತಿದ್ದರೆ ಭವಿಷ್ಯದಲ್ಲಿ ಎಲ್ಲವೂ ಸುಧಾರಿಸುತ್ತದೆ.

— ಸ್ವಾಮಿ ಶ್ರೀ ಯುಕ್ತೇಶ್ವರ್

ಸ್ವಾಮಿ ಶ್ರೀ ಯುಕ್ತೇಶ್ವರ್ ಅವರು ವೈಎಸ್ಎಸ್/ಎಸ್ಆರ್‌ಎಫ್ ಮಾರ್ಗದ ಭಕ್ತರ ಪರಮಗುರುವಾಗಿದ್ದು, ಅವರನ್ನು ಜ್ಞಾನಾವತಾರ ಅಥವಾ “ಬುದ್ಧಿವಂತಿಕೆಯ ಅವತಾರ” ಎಂದು ಪೂಜಿಸಲಾಗುತ್ತದೆ. ಸ್ವಾಮಿ ಶ್ರೀ ಯುಕ್ತೇಶ್ವರ್ ಅವರ ಮಹಾಸಮಾಧಿಯ ಪವಿತ್ರ ಸಂದರ್ಭದಲ್ಲಿ, ವೈಎಸ್ಎಸ್ ಸನ್ಯಾಸಿಗಳ ನೇತೃತ್ವದಲ್ಲಿ ವಿಶೇಷ ಆನ್ಲೈನ್ ಸ್ಮರಣಾರ್ಥ ಧ್ಯಾನ ನಡೆಯಿತು. ಮಾರ್ಚ್ 9 ರ ಭಾನುವಾರದಂದು ನಿಗದಿಯಾಗಿದ್ದ ಈ ಆಧ್ಯಾತ್ಮಿಕವಾಗಿ ಉನ್ನತೀಕರಿಸುವ ಕಾರ್ಯಕ್ರಮವು ಪಠಣ, ಸ್ಪೂರ್ತಿದಾಯಕ ಓದುವಿಕೆ ಮತ್ತು ಧ್ಯಾನವನ್ನು ಒಳಗೊಂಡಿತ್ತು.

ಈ ಸಂದರ್ಭದಲ್ಲಿ ವಿವಿಧ ಆಶ್ರಮಗಳು, ಕೇಂದ್ರಗಳು ಮತ್ತು ಮಂಡಲಿಗಳು ವೈಯಕ್ತಿಕವಾಗಿ ಸ್ಮರಣಾರ್ಥ ಕಾರ್ಯಕ್ರಮಗಳನ್ನು ನಡೆಸಿದವು.

ಈ ವಿಶೇಷ ಸಂದರ್ಭದಲ್ಲಿ, ನೀವು ಗುರು-ಪ್ರಣಾಮಿ ಅಥವಾ ದೇಣಿಗೆ ನೀಡಲು ಬಯಸಿದಲ್ಲಿ, ಅದನ್ನು ಆನ್ ಲೈನ್ ಮೂಲಕ ನೀಡಬಹುದು. ನಿಮ್ಮ ಉದಾರ ಕೊಡುಗೆಯು ನಿಮಗೆ ಅಪಾರ ಆಶೀರ್ವಾದವನ್ನು ದಯಪಾಲಿಸುವುದಲ್ಲದೆ, ವೈಎಸ್ಎಸ್/ಎಸ್ಆರ್‌ಎಫ್ ಗುರುಗಳ ಕ್ರಿಯಾ ಯೋಗದ ಬೋಧನೆಗಳನ್ನು ಹರಡಲು ಸಹಾಯ ಮಾಡುತ್ತದೆ.

ಹೊಸ ಸಂದರ್ಶಕರು

ನೀವು ವೈಎಸ್ಎಸ್ ಮತ್ತು ಪರಮಹಂಸ ಯೋಗಾನಂದರ ಬೋಧನೆಗಳಿಗೆ ಹೊಸಬರಾಗಿದ್ದರೆ, ಕೆಳಗಿನ ಲಿಂಕ್‌ಗಳನ್ನು ಅನ್ವೇಷಿಸಲು ಇಚ್ಛಿಸಬಹುದು:

ಯೋಗಿಯ ಆತ್ಮಕಥೆ

ವಿಶ್ವಾದ್ಯಂತ ಆಧ್ಯಾತ್ಮಿಕ ಮೇರುಕೃತಿಯೆಂದು ಕೊಂಡಾಡಲ್ಪಟ್ಟಿರುವ, ಪರಮಹಂಸರು ಆಗಾಗ ಹೀಗೆ ನುಡಿಯುತ್ತಿದ್ದರು, “ನಾನು ದೇಹತ್ಯಾಗ ಮಾಡಿದ ನಂತರ, ಈ ಗ್ರಂಥವೇ ನನ್ನ ದೂತವಾಗುವುದು.”

ವೈಎಸ್ಎಸ್ ಪಾಠಗಳು

ನೀವು ಊಹಿಸಲೂ ಸಾಧ್ಯವಾಗದ ರೀತಿಯಲ್ಲಿ ನಿಮ್ಮ ಜೀವನವನ್ನು ಪರಿವರ್ತಿಸುವ ಮತ್ತು ಸಮತೋಲಿತವಾದ ಯಶಸ್ವೀ ಜೀವನವನ್ನು ನಡೆಸಲು ಸಹಾಯ ಮಾಡುವ, ಮನೆಯಿಂದಲೇ ಅಧ್ಯಯನ ಮಾಡಬಹುದಾದ ಪಾಠ ಕ್ರಮಗಳು.

ಇದನ್ನು ಹಂಚಿಕೊಳ್ಳಿ